Epstein Files- ಗಂಡಾಳಿಕೆಯ ‘ಕಾಮ ಪರಾಕ್ರಮ’ವೇ ಎಲ್ಲ; ನೊಂದ ಹೆಣ್ಣು ಚಿತ್ಕಾರಗಳ ಕೇಳುವವರೇ ಇಲ್ಲ!

Date:

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣವು ಇದಕ್ಕೆ ಹೊರತಾಗಿಲ್ಲ. 2024ರ ಏಪ್ರಿಲ್‌ನಲ್ಲಿ ಪೆನ್‌ಡ್ರೈವ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸಂತ್ರಸ್ತೆಯರ ಗುರುತೂ ಬಹಿರಂಗವಾಗಿತ್ತು. ಅಧಿಕಾರ ಹೊಂದಿರುವವರ ದರ್ಪಕ್ಕೆ ಒಳಗಾಗಿ ತಮಗಾದ ದೌರ್ಜನ್ಯವನ್ನು ಎಲ್ಲೂ ಹೇಳಿಕೊಳ್ಳಲಾಗದೆ ಮಾನಸಿಕವಾಗಿ ನೊಂದು ದಿನದೂಡುತ್ತಿರುವ ಮಹಿಳೆಯರ ಮೇಲೆಯೇ ಆರೋಪಗಳನ್ನು ಮಾಡುವಷ್ಟು ಕೀಳುಮಟ್ಟಕ್ಕೆ ನಮ್ಮ ಸಮಾಜ ಇಳಿದಿತ್ತು.

ಸದ್ಯ ವಿಶ್ವದಾದ್ಯಂತ ‘ಎಪ್‌ಸ್ಟೀನ್ ಫೈಲ್ಸ್‌’ನದ್ದೇ ಕೋಲಾಹಲ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ, ಮಾನವ ಕಳ್ಳಸಾಗಣೆ ಮಾಡಿದ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಜಾಲದ ಸೂತ್ರದಾರನಾದ ಜೆಫ್ರಿ ಎಪ್‌ಸ್ಟೀನ್‌ ಸಂಬಂಧಿಸಿದ ಲಕ್ಷಾಂತರ ಪುಟಗಳ ದಾಖಲೆಯು ಬಿಡುಗಡೆಯಾಗಿದ್ದು ಸದ್ಯ ವಿಶ್ವದಲ್ಲಿ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉದ್ಯಮಿಗಳಾದ ಬಿಲ್ ಗೇಟ್ಸ್, ಎಲಾನ್ ಮಸ್ಕ್ ಹೆಸರುಗಳು ಈ ದಾಖಲೆಗಳಲ್ಲಿ ಇವೆ ಎಂಬುದು ಸದ್ಯ ಚರ್ಚೆಯ ವಿಚಾರವಾಗಿದೆ. ಪ್ರಭಾವಿತರ ದಾಖಲೆಗಳನ್ನು ಬಹಿರಂಗಪಡಿಸುವಾಗಲೇ ಸಂತ್ರಸ್ತ ಹೆಣ್ಣುಮಕ್ಕಳ ಗುರುತನ್ನೂ ಬಹಿರಂಗಪಡಿಸಲಾಗಿರುವುದು ಎಷ್ಟು ಸರಿ ಎಂಬ ಚರ್ಚೆಯೂ ನಡೆಯಬೇಕಾಗಿದೆ.

ದಶಕಗಳ ಕಾಲ ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ಮತ್ತು ಮಾನವ ಕಳ್ಳಸಾಗಣೆ ಜಾಲವನ್ನು ನಡೆಸುತ್ತಿದ್ದವ ಎಪ್‌ಸ್ಟೀನ್. ಎಪ್‌ಸ್ಟೀನ್‌ ಬಹುತೇಕವಾಗಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನೇ ಬಲವಂತವಾಗಿ ತನ್ನ ಈ ಅತ್ಯಾಚಾರಕ್ಕೆ ಜಾಲಕ್ಕೆ ದೂಡಿದ್ದಾನೆ. 2019ರಲ್ಲಿ ಆತ ಜೈಲಿನಲ್ಲಿ ಇದ್ದಾಗಲೇ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಇದೀಗ ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆಯು ‘ಎಪ್‌ಸ್ಟೀನ್ ಫೈಲ್ಸ್ ಪಾರದರ್ಶಕತೆ ಕಾಯಿದೆ (epstein files transparency act)’ ಅಡಿಯಲ್ಲಿ 30 ಲಕ್ಷ ಪುಟಗಳ ದಾಖಲೆಗಳು, 2,000 ವೀಡಿಯೊಗಳು ಮತ್ತು 1.8 ಲಕ್ಷ ಚಿತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಇವುಗಳಲ್ಲಿ ಎಪ್‌ಸ್ಟೀನ್‌ನ ವಿಮಾನ ಹಾರಾಟದ ದಾಖಲೆಗಳು, ಇಮೇಲ್‌ಗಳು, ಫೋಟೋಗಳು, ವಿಡಿಯೊಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿವೆ.

ಇದನ್ನು ಓದಿದ್ದೀರಾ? ಎಪ್‌ಸ್ಟೀನ್ ಫೈಲ್ಸ್‌ | ಟ್ವೀಟ್ ಡಿಲೀಟ್‌ಗೆ ಖುದ್ದು ಪುರಿಯಿಂದ ಬೆದರಿಕೆ! ‘ಥಗ್ ಆರ್ಮಿಗೆ ಹೆದರಲ್ಲ’ ಎಂದ ಮೊಯಿತ್ರಾ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ದಾಖಲೆ ಬಿಡುಗಡೆ ಮಾಡಿದ್ದು, ಹಲವು ರಾಜಕಾರಣಿಗಳ ನೈಜ ಬಣ್ಣವನ್ನು ಬಯಲು ಮಾಡಿದೆ. ಆದರೆ ಸಂತ್ರಸ್ತ ಹೆಣ್ಣುಮಕ್ಕಳ ಗುರುತು ಬಹಿರಂಗಪಡಿಸಿರುವುದು ಎಷ್ಟು ಸರಿ? ಯಾವುದೇ ದುಷ್ಕೃತ್ಯ ನಡೆದರೂ ಅಲ್ಲಿ ಮೊದಲು ಬಲಿಯಾಗುವುದು ಹೆಣ್ಣುಮಕ್ಕಳು. ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣವು ಇದಕ್ಕೆ ಹೊರತಾಗಿಲ್ಲ. 2024ರ ಏಪ್ರಿಲ್‌ನಲ್ಲಿ ಪೆನ್‌ಡ್ರೈವ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸಂತ್ರಸ್ತೆಯರ ಗುರುತೂ ಬಹಿರಂಗವಾಗಿತ್ತು. ಅಧಿಕಾರ ಹೊಂದಿರುವವರ ದರ್ಪಕ್ಕೆ ಒಳಗಾಗಿ ತಮಗಾದ ದೌರ್ಜನ್ಯವನ್ನು ಎಲ್ಲೂ ಹೇಳಿಕೊಳ್ಳಲಾಗದೆ ಮಾನಸಿಕವಾಗಿ ನೊಂದು ದಿನದೂಡುತ್ತಿರುವ ಮಹಿಳೆಯರ ಮೇಲೆಯೇ ಆರೋಪಗಳನ್ನು ಮಾಡುವಷ್ಟು ಕೀಳುಮಟ್ಟಕ್ಕೆ ನಮ್ಮ ಸಮಾಜ ಇಳಿದಿತ್ತು. ಇದೀಗ ಎಪ್‌ಸ್ಟೀನ್ ಫೈಲ್ಸ್‌ ಬಿಡುಗಡೆ ವೇಳೆಯೂ ಮತ್ತೆ ಅನ್ಯಾಯವಾಗಿದ್ದು ಸಂತ್ರಸ್ತೆಯರಿಗೆ. ಈಗಾಗಲೇ ನೊಂದವರಿಗೆ ಇನ್ನಷ್ಟು ನೋವು ನೀಡುವಂತೆ ಚಿತ್ರಗಳನ್ನು ಬಹಿರಂಗಪಡಿಸಲಾಗಿದೆ. ಇವೆಲ್ಲವುದರ ನಡುವೆ ಕೆಲವು ಹೆಣ್ಣುಮಕ್ಕಳು ಬಹಿರಂಗವಾಗಿ ಈ ಚಿತ್ರ ತಮ್ಮದು ಎಂದು ಹೇಳಿಕೊಂಡಿದ್ದಾರೆ. ಏನೇ ಆದರೂ ಗುರುತು ಬಹಿರಂಗಪಡಿಸುವುದು ಅವರ ವೈಯಕ್ತಿಕ ಆಯ್ಕೆಯಾಗಿರಬೇಕು. ಆದರೆ ಹಲವು ಸಂತ್ರಸ್ತೆಯರ ಒಪ್ಪಿಗೆ ಇಲ್ಲದೆಯೇ ಗುರುತು ಬಹಿರಂಗಪಡಿಸಲಾಗಿದೆ.

Prajwal 4
ಮಾಜಿ ಸಂಸದ ಪ್ರಜ್ವಲ್ ರೇವಣ್ಣ

ನ್ಯಾಯಾಂಗ ಇಲಾಖೆಯು ಜೆಫ್ರಿ ಎಪ್‌ಸ್ಟೀನ್‌ನ ದಾಖಲೆಗಳನ್ನು ಬಿಡುಗಡೆ ಮಾಡುವ ಹಲವು ಸಂತ್ರಸ್ತೆಯರ ಹೆಸರು, ಗುರುತು ಬಹಿರಂಗಪಡಿಸಿದೆ. ಈ ಪೈಕಿ ಹಲವು ಮಂದಿ ಕುಖ್ಯಾತ ಲೈಂಗಿಕ ಅಪರಾಧಿಯಿಂದ ದೌರ್ಜನ್ಯಕ್ಕೊಳಗಾದಾಗ ಅಪ್ರಾಪ್ತರಾಗಿದ್ದವರು. ವಾಲ್ ಸ್ಟ್ರೀಟ್ ಜರ್ನಲ್ ವಿಶ್ಲೇಷಣೆಯ ಪ್ರಕಾರ 47 ಸಂತ್ರಸ್ತೆಯರ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ. ಗುರುತು, ವಿವರಗಳನ್ನು ಸರಿಯಾಗಿ ಮರೆಮಾಡಲಾಗಿಲ್ಲ. ಹಲವು ಮಹಿಳೆಯರ ಪೂರ್ಣ ಹೆಸರುಗಳು ಫೈಲ್‌ಗಳಲ್ಲಿ 100ಕ್ಕೂ ಹೆಚ್ಚು ಬಾರಿ ಕಾಣಿಸಿಕೊಂಡಿದೆ! ಅಂದರೆ ಇಲ್ಲಿ ಆರೋಪಿಗಳನ್ನು ಸರ್ಕಾರ ಬಹಿರಂಗಪಡಿಸುವುದೇ ಅಥವಾ ಸಂತ್ರಸ್ತರು ಯಾರೆಂದು ಹೇಳುವುದೇ? ಅದೂ ಅವರ ಒಪ್ಪಿಗೆ ಇಲ್ಲದೆಯೇ ಗುರುತು ಬಹಿರಂಗ ಅಸಮರ್ಥನೀಯ.

ಸಂತ್ರಸ್ತೆಯರ ಹೆಸರು ಬಹಿರಂಗವಾದ ಬೆನ್ನಲ್ಲೇ ಸಂತ್ರಸ್ತೆಯರ ಪರವಾಗಿ ವಕೀಲರು ಸರ್ಕಾರಕ್ಕೆ ತೆಗೆದುಹಾಕಬೇಕಾದ ಹೆಸರುಗಳ ಪಟ್ಟಿಯನ್ನು ನೀಡಿದ್ದಾರೆ. ಈ ಎಲ್ಲಾ ಕಾರ್ಯಕ್ಕೆ ಒಂದು ವಾರಕ್ಕೂ ಅಧಿಕ ಸಮಯ ಬೇಕಾಗುತ್ತದೆ ಎಂದು ಹೇಳಿ ಇದೀಗ ಪಟ್ಟಿಯನ್ನೇ ತೆಗೆದುಹಾಕಲಾಗಿದೆ. ಎಲ್ಲಾ ಸಂತ್ರಸ್ತೆಯರ ಹೆಸರು ದಾಖಲೆಯಿಂದ ಅಳಿಸಿದ ಬಳಿಕವೇ ಮತ್ತೆ ದಾಖಲೆಯನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೊಂಡಿದೆ.

ಇದನ್ನು ಓದಿದ್ದೀರಾ? ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್ ಮತ್ತು ಅಮೆರಿಕ: ಏನದು ಎಪ್‌ಸ್ಟೀನ್ ಫೈಲ್ಸ್?

ಈಗಾಗಲೇ ಸಂತ್ರಸ್ತೆಯರ ಪರ ವಕೀಲರಾದ ಬ್ರಾಡ್ ಎಡ್ವರ್ಡ್ಸ್ ಮತ್ತು ಬ್ರಿಟಾನಿ ಹೆಂಡರ್ಸನ್, ನ್ಯಾಯ ಇಲಾಖೆಗೆ 350ಕ್ಕೂ ಅಧಿಕ ಸಂತ್ರಸ್ತೆಯರ ಹೆಸರನ್ನು ಪಟ್ಟಿ ಮಾಡಿ ನೀಡಿದ್ದಾರೆ. ಇದರಿಂದಾಗಿ ಮತ್ತೆ ದಾಖಲೆ ಬಿಡುಗಡೆ ಮಾಡುವುದಕ್ಕೂ ಮುನ್ನ ಈ ಹೆಸರುಗಳನ್ನು ಮರೆಮಾಡಬಹುದು ಎಂಬುದು ಈ ವಕೀಲದ ನಂಬಿಕೆ. ಕೆಲವು ಹೆಸರುಗಳನ್ನು ಪತ್ತೆಹಚ್ಚಲು 100ಕ್ಕೂ ಹೆಚ್ಚು ಲಿಂಕ್‌ಗಳನ್ನು ವಕೀಲರೇ ಹುಡುಕಿ ನೀಡಿದ್ದಾರೆ! ಈ ಎಲ್ಲಾ ಬೆಳವಣಿಗೆ ನಡುವೆ ಎಪ್‌ಸ್ಟೀನ್‌ನ ಆಸ್ತಿಯಿಂದ ಸಂತ್ರಸ್ತರಿಗೆ ಈವರೆಗೆ ಸುಮಾರು $125 ಮಿಲಿಯನ್ (ಅಂದಾಜು ₹1,000 ಕೋಟಿಗೂ ಹೆಚ್ಚು) ಪರಿಹಾರ ನೀಡಲಾಗಿದೆ.

ಈಗಾಗಲೇ ಹಲವು ಮಂದಿ ವೆಬ್‌ಸೈಟ್‌ನಲ್ಲಿ ನೇರವಾಗಿ ಈ ಸಂತ್ರಸ್ತರ ಪೂರ್ಣ ಹೆಸರನ್ನೇ ಹುಡುಕಿರುವುದು ತಿಳಿದುಬಂದಿದೆ. ಕೆಲವೆಡೆ ಆರೋಪಿಗಳ ಇಮೇಲ್ ಮರೆಮಾಡಲಾಗಿದೆ, ಆದರೆ ಸಂತ್ರಸ್ತೆಯರ ಇಮೇಲ್ ಬಹಿರಂಗಪಡಿಸಲಾಗಿದೆ. ಈ ದಾಖಲೆಯಲ್ಲಿ ಸಂತ್ರಸ್ತರ ಹೆಸರು, ಚಿತ್ರ ಮಾತ್ರವಲ್ಲದೆ, ಮನೆ ವಿಳಾಸವೂ ಇತ್ತು! ಸಂತ್ರಸ್ತೆಯರ ಎಲ್ಲಾ ದಾಖಲೆಗಳು ಬಹಿರಂಗವಾದಾಗ ಸುರಕ್ಷತೆ ಎಲ್ಲಿಂದ ಎಂಬ ಪ್ರಶ್ನೆ ಸದ್ಯ ಹುಟ್ಟಿದೆ. ಗಂಭೀರ ತಪ್ಪಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದ್ದರೂ, ಆ ತಪ್ಪನ್ನು ತಕ್ಷಣವೇ ಸರಿಪಡಿಸುವಲ್ಲಿ ವಿಫಲವಾಗಿರುವುದು ಕ್ಷಮಿಸಲಾಗದು. ಇಡೀ ವಿಶ್ವವೇ ಈ ಆರೋಪಿಗಳ ಬಗ್ಗೆ ಮಾತನಾಡುತ್ತಿದೆ. ಅದು ಸ್ವಾಗತಾರ್ಹ. ಆದರೆ ಸಂತ್ರಸ್ತೆಯರು ಮತ್ತೆ ಸಾಗಿ ಹೋಗಲಿರುವ ನೋವಿನ ದಾರಿಯ ಬಗ್ಗೆ ಚಿಂತಿಸುವವರಿಲ್ಲ. ಈ ಪ್ರಬಲರ ಎದುರು ಸಂತ್ರಸ್ತೆಯ ಪರವಾಗಿ ನಿಲ್ಲುವವರು ಇದ್ದಾರೆಯೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...