ಪಾಕಿಸ್ತಾನ ವಿಶ್ವದ ಏಕೈಕ ಮುಸ್ಲಿಂ ಪರಮಾಣು ರಾಷ್ಟ್ರವಾಗಿದ್ದು ಹೇಗೆ?

Date:

ಇರಾನ್ ವಿರುದ್ಧದ ಯುದ್ಧ ಆರಂಭವಾಗುವ ಕೆಲವು ತಿಂಗಳುಗಳ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು ಹೀಗೆ; “ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಬಾರದು. ಹೊಂದಲು ಬಿಡುವುದಿಲ್ಲ” ಈ ಮಾತನ್ನು ಶ್ವೇತಭವನದ ಮಾಹಿತಿ ಪ್ರಕಾರ, ಕಳೆದ 13 ವರ್ಷಗಳಲ್ಲಿ ಟ್ರಂಪ್ ಸುಮಾರು 72 ಬಾರಿ ಪದೇ-ಪದೇ ಹೇಳಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವು ಕೇವಲ ನಾಗರಿಕ ಇಂಧನಕ್ಕಾಗಿ ಎಂದು ಹೇಳುತ್ತಿದ್ದರೂ, ಅದು ಅಪಾಯಕಾರಿ ಶಸ್ತ್ರಾಸ್ತ್ರಗಳ ತಯಾರಿಕೆಯ ಹಾದಿಯಾಗಿದೆ ಎಂದು ಟ್ರಂಪ್ ವಾದಿಸುತ್ತಲೇ ಬಂದಿದ್ದಾರೆ. ಅಮೆರಿಕದ ತಾಳಕ್ಕೆ ಅದರ ಬಾಲಂಗೋಚಿ ಇಸ್ರೇಲ್ ತಂತಿ ಬಾರಿಸುತ್ತಿದೆ. ಇರಾನ್ ರಹಸ್ಯವಾಗಿ ಯುರೇನಿಯಂ ಅನ್ನು ಶಸ್ತ್ರಾಸ್ತ್ರವನ್ನು ಸಿದ್ದಪಡಿಸುತ್ತಿದೆ ಎಂದು ಆರೋಪಿಸುತ್ತಲೇ ಇವೆ.

ಇತ್ತೀಚೆಗೆ, ಇರಾನ್ ಪರಮಾಣು ಯೋಜನೆಯ ಕುರಿತು ತಿಂಗಳುಗಟ್ಟಲೆ ಮಾತುಕತೆಗಳು ನಡೆದವು. ಹಲವು ಸಂದರ್ಭದಲ್ಲಿ ಮಾತುಕತೆಗಳು ಮುರಿದುಬಿದ್ದರೂ, ಚರ್ಚೆಯನ್ನು ಚಾಲ್ತಿಯಲ್ಲಿದ್ದವು. ಆದರೂ, ಇದೇ ಸಮಯದಲ್ಲಿ, ಇರಾನ್‌ ಮೇಲೆ ದಾಳಿ ನಡೆಸಲು ಟ್ರಂಪ್‌ ಘೋಷಿಸಿದರು. ಈಗ, ಇರಾನ್ ಮತ್ತು ಅಮೆರಿಕ-ಇಸ್ರೇಲ್‌ ನಡುವೆ ಸಂಘರ್ಷ ನಡೆಯುತ್ತಿದೆ.

ಆದರೆ, ಗಮನಾರ್ಹ ವಿಷಯವೆಂದರೆ, ಪರಮಾಣು ಯೋಜನೆಗಳನ್ನು ಅನುಷ್ಠಾನಗೊಳಿಸುವ ಇರಾನ್‌ನ ಮಹತ್ವಾಕಾಂಕ್ಷೆಯನ್ನು ಇಷ್ಟೊಂದು ತೀವ್ರವಾಗಿ ವಿರೋಧಿಸುತ್ತಿರುವ ಅಮೆರಿಕ, ಪಾಕಿಸ್ತಾನವು ರಹಸ್ಯವಾಗಿ ಪರಮಾಣು ಬಾಂಬ್ ತಯಾರಿಸುತ್ತಿದ್ದಾಗ ತುಟಿಬಿಚ್ಚಲಿಲ್ಲ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಾಕಿಸ್ತಾನವು 1998ರಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಿ ವಿಶ್ವದ ಏಕೈಕ ಮುಸ್ಲಿಂ ಪರಮಾಣು ರಾಷ್ಟ್ರವಾಯಿತು. ಪಾಕಿಸ್ತಾನ ಪರಮಾಣು ಬಾಂಬ್ ತಯಾರಿಕೆಯಲ್ಲಿ ತೊಡಗಿದೆ ಎಂಬ ವಿಷಯ ಅಮೆರಿಕಗೆ ವರ್ಷಗಳ ಮೊದಲೇ ತಿಳಿದಿತ್ತು. ಆದರೂ ಅದು ಪಾಕಿಸ್ತಾನವನ್ನು ವಿರೋಧಿಸಿಲಿಲ್ಲ. ಪರಮಾಣು ಬಾಂಬ್‌ ತಯಾರಿಸದಂತೆ ತಾಕೀತು, ಎಚ್ಚರಿಕೆ, ಬೆದರಿಕೆ ಯಾವುದನ್ನೂ ಮಾಡಲಿಲ್ಲ!

ಇದಕ್ಕೆ ಉತ್ತರ – ಶೀತಲ ಸಮರದ ಸಂಕೀರ್ಣ ಭೂರಾಜಕೀಯ, ಗೂಢಚರ್ಯೆಯ ನಿಗೂಢ ಜಗತ್ತು ಹಾಗೂ ಒಬ್ಬ ವಿಜ್ಞಾನಿಯಲ್ಲಿದೆ. ಆ ವಿಜ್ಞಾನಿಯ ಹೆಸರು ಪಾಕಿಸ್ತಾನದಲ್ಲಿ ದಂತಕಥೆಯಾಗಿದೆ. ಅವರೇ ಅಬ್ದುಲ್ ಖಾದರ್ ಖಾನ್ (AQ Khan).

Abdul Qadeer Khan

ಅಂದಹಾಗೆ, ಪಾಕಿಸ್ತಾನದ ರಹಸ್ಯ ಪರಮಾಣು ಪಯಣವು ವಾಸ್ತವವಾಗಿ ಭಾರತವು ರಾಜಸ್ಥಾನದ ಮರುಭೂಮಿಯಲ್ಲಿ ಪರಮಾಣು ಪರೀಕ್ಷೆ ನಡೆಸಿ, ಯಶಸ್ವಿಯಾದ ಬಳಿಕ ಆರಂಭವಾಯಿತು. 1974ರ ಮೇನಲ್ಲಿ, ಭಾರತವು ಪೋಖ್ರಾನ್‌ನಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿತು ಮತ್ತು ಅದನ್ನು ‘ಶಾಂತಿಯುತ ಪರಮಾಣು ಸ್ಫೋಟ’ ಎಂದು ಕರೆಯಿತು. ಆದರೆ, ಇದು ಪಾಕಿಸ್ತಾನಕ್ಕೆ ದೊಡ್ಡ ಆಘಾತವಾಗಿತ್ತು. ಈಗಾಗಲೇ 1971ರ ಯುದ್ಧದಲ್ಲಿ ಭಾರತದ ಎದುರು ಸೋತು ಪೂರ್ವ ಪಾಕಿಸ್ತಾನವನ್ನು (ಈಗಿನ ಬಾಂಗ್ಲಾದೇಶ) ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ ಇದು ಎರಡನೇ ಪೆಟ್ಟಾಗಿ ಎದುರಾಗಿತ್ತು.

ಭಾರತ ನಡೆಸಿದ ಪರಮಾಣು ಪರೀಕ್ಷೆಯು ಪಾಕಿಸ್ತಾನ ನಾಯಕರಲ್ಲಿ ಭೀತಿಯನ್ನು ಹುಟ್ಟಿಸಿತು. ಅಂದಿನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರು ಕಠುವಾಗಿ ಪ್ರತಿಕ್ರಿಯಿಸಿದರು. “ನಾವು ಹುಲ್ಲು ಅಥವಾ ಎಲೆಗಳನ್ನು ತಿನ್ನುತ್ತೇವೆ, ಉಪವಾಸ ಇರುತ್ತೇವೆ. ಆದರೆ ನಮಗಾಗಿಯೇ ಒಂದು ಪರಮಾಣು ಬಾಂಬ್ ಸಿದ್ದಪಡಿಸುತ್ತೇವೆ” ಎಂದು ಘೋಷಿಸಿದರು.

ಇದು ಕೇವಲ ಖಾಲಿ ಮಾತಾಗಿರಲಿಲ್ಲ; ಅದು ಅವರ ದೇಶದ ಅಸ್ತಿತ್ವದ ಪ್ರಶ್ನೆಯಾಗಿತ್ತು. ಅಮೆರಿಕದ ಗುಪ್ತ ಮಾಹಿತಿಯ ಪ್ರಕಾರ, ಭಾರತದ ಪರೀಕ್ಷೆಯ ನಂತರ ಭುಟ್ಟೊ ಅವರು ‘ಪ್ರಾಜೆಕ್ಟ್-706’ ಎಂಬ ರಹಸ್ಯ ಹೆಸರಿನಲ್ಲಿ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಅವರ ಈ ಯೋಜನೆಗೆ ಬೆನ್ನೆಲುಬಾಗಿ ಬಂದದ್ದು ವಿಜ್ಞಾನಿ ಅಬ್ದುಲ್ ಖಾದರ್ ಖಾನ್.

ಈ ಲೇಖನ ಓದಿದ್ದೀರಾ?: ಅಮೆರಿಕದ ಇಬ್ಬಗೆ ಅಣ್ವಸ್ತ್ರ ರಾಜಕಾರಣ: ಇರಾನ್ ಬಗ್ಗೆ ಆತಂಕ, ಪಾಕಿಸ್ತಾನದ ಕುರಿತು ಮೌನ!

ಎ.ಕ್ಯೂ ಖಾನ್‌ ಅವರು 1970ರ ದಶಕದ ಆರಂಭದಲ್ಲಿ ನೆದರ್ಲ್ಯಾಂಡ್ಸ್‌ನಲ್ಲಿ ಲೋಹಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಅಮೆರಿಕದ ದಾಖಲೆಗಳ ಪ್ರಕಾರ, ಖಾನ್ ಅವರು ಯುರೇನಿಯಂ ಪುಷ್ಟೀಕರಣ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯುರೋಪಿಯನ್ ಒಕ್ಕೂಟವಾದ ‘URENCO’ಗೆ ಸಂಬಂಧಿಸಿದ ಗುತ್ತಿಗೆದಾರರೊಬ್ಬರ ಬಳಿ ಕೆಲಸ ಮಾಡುತ್ತಿದ್ದರು. ಪರಮಾಣು ಇಂಧನ ತಯಾರಿಕೆಯಲ್ಲಿ ಯುರೇನಿಯಂ ಪುಷ್ಟೀಕರಣವು ಪ್ರಮುಖ ಹಂತವಾಗಿದೆ. ಇದರಲ್ಲಿ ಎ.ಕ್ಯೂ ಖಾನ್ ಪರಿಣತಿ ಹೊಂದಿದ್ದರು.

ನೆದರ್ಲ್ಯಾಂಡ್ಸ್‌ನಲ್ಲಿ ಕೆಲಸ ಮಾಡುವಾಗ, ಖಾನ್ ಅತ್ಯಂತ ಸೂಕ್ಷ್ಮವಾದ ‘ಸೆಂಟ್ರಿಫ್ಯೂಜ್’ ವಿನ್ಯಾಸಗಳ ಕುರಿತು ಮಾಹಿತಿ ಪಡೆದಿದ್ದರು. ಡಚ್ ತನಿಖೆಗಳ ಪ್ರಕಾರ, ಖಾನ್ ರಹಸ್ಯವಾಗಿ ವರ್ಗೀಕೃತ ನೀಲನಕ್ಷೆಗಳು ಮತ್ತು ಪೂರೈಕೆದಾರರ ಪಟ್ಟಿಗಳನ್ನು ನಕಲು ಮಾಡಿಕೊಂಡಿದ್ದರು.

ನಂತರ, 1975ರಲ್ಲಿ, ಖಾನ್ ಯುರೋಪ್ ಬಿಟ್ಟು ಪಾಕಿಸ್ತಾನಕ್ಕೆ ಮರಳಿದರು. ಆಗ, ಅವರು ಬರಿಗೈಯಲ್ಲಿ ಬರಲಿಲ್ಲ; ಅವರು ತಮ್ಮ ಉದ್ಯೋಗದ ಸ್ಥಳದಲ್ಲಿ ಪಡೆದಿದ್ದ ಎಲ್ಲ ರೀತಿಯ ಮಾಹಿತಿ ಮತ್ತು ತಾಂತ್ರಿಕ ಜ್ಞಾನವನ್ನು ಹೊತ್ತು ಬಂದಿದ್ದರು. ಪಾಕ್ ಸರ್ಕಾರವು ಇಸ್ಲಾಮಾಬಾದ್ ಸಮೀಪದ ಕಹುಟಾದಲ್ಲಿ ಯುರೇನಿಯಂ ಪುಷ್ಟೀಕರಣ ಘಟಕವನ್ನು ಸ್ಥಾಪಿಸಲು ಅವರು ಸಹಾಯ ಮಾಡಿದರು. ನಂತರ ಈ ಪ್ರಯೋಗಾಲಯಕ್ಕೆ ಅವರ ಹೆಸರನ್ನೇ ಇಡಲಾಯಿತು.

ಆದಾಗ್ಯೂ, ಪರಮಾಣು ಬಾಂಕ್‌ ತಯಾರಿಸಲು ಬೇಕಿದ್ದ ವಿಶೇಷ ತಂತ್ರಜ್ಞಾನ ಪಾಕಿಸ್ತಾನದ ಬಳಿ ಇರಲಿಲ್ಲ. ಅದನ್ನು ಇತರ ರಾಷ್ಟ್ರಗಳಿಂದ ಖರೀದಿಸಲು ಪಾಕ್ ಮುಂದಾಯಿತು. ಮಧ್ಯವರ್ತಿಗಳು ಮತ್ತು ನಕಲಿ ಕಂಪನಿಗಳನ್ನು ಬಳಸಿಕೊಂಡು ಯುರೋಪ್, ಮಧ್ಯಪ್ರಾಚ್ಯ ಹಾಗೂ ಏಷ್ಯಾದಾದ್ಯಂತ ಖರೀದಿ ಜಾಲವನ್ನು ರಚಿಸಿಕೊಂಡಿತು. ಈ ಬಗ್ಗೆ, ಶೀಘ್ರದಲ್ಲೇ ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳಿಗೆ ವಿಷಯ ತಿಳಿಯಿತು. 1979ರ ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ದಾಖಲೆಯು ‘ಪಾಕಿಸ್ತಾನವು ನಾವು ಅಂದಾಜಿಸಿದ್ದಕ್ಕಿಂತ ವೇಗವಾಗಿ ಪರಮಾಣು ಸಾಮರ್ಥ್ಯದತ್ತ ಸಾಗುತ್ತಿದೆ’ ಎಂದು ಎಚ್ಚರಿಸಿತ್ತು. ಆದರೂ, ಪಾಕ್ ಪರಮಾಣು ವಿಚಾರವನ್ನು ಅಮೆರಿಕ ನಿರ್ಲಕ್ಷಿಸಿತು.

ಅಮೆರಿಕದ ಈ ನಿರ್ಲಕ್ಷ್ಯಕ್ಕೆ ಕಾರಣವೇನೆಂಬುದು 1979ರ ಡಿಸೆಂಬರ್‌ನಲ್ಲಿ ಬಹಿರಂಗವಾಯಿತು. ಆ ಸಮಯದಲ್ಲಿ, ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿತು. ಆಗ, ಸೋವಿಯತ್ ವಿರುದ್ಧ ಹೋರಾಡಲು ಅಫ್ಘಾನ್‌ನ ಮುಜಾಹಿದ್ದೀನ್‌ಗೆ ಬೆಂಬಲ ನೀಡಲು ಅಮೆರಿಕಗೆ ಪಾಕಿಸ್ತಾನದ ಅಗತ್ಯವಿತ್ತು. ಪಾಕಿಸ್ತಾನವನ್ನು ಅಮೆರಿಕ ಮಿತ್ರನೆಂದು ಕರೆದು, ಕೋಟ್ಯಂತರ ಡಾಲರ್‌ ನೆರವನ್ನು ಪಾಕಿಸ್ತಾನಕ್ಕೆ ಅಮೆರಿಕ ಹರಿಸಿತು. ಪಾಕಿಸ್ತಾನದ ಪರಮಾಣು ಯೋಜನೆಯನ್ನು ತಡೆಯುವುದಕ್ಕಿಂತ, ಸೋವಿಯತ್ ಒಕ್ಕೂಟವನ್ನು ಸೋಲಿಸುವುದು ಅಮೆರಿಕಕ್ಕೆ ಆದ್ಯತೆಯಾಯಿತು.

ಈ ಲೇಖನ ಓದಿದ್ದೀರಾ?: ಇರಾನ್ ವಿರುದ್ಧ ಅಮೆರಿಕದ ವಿನಾಶಕಾರಿ ಕುತಂತ್ರ; ತನ್ನ ಬೇಳೆ ಬೇಯಿಸಿಕೊಳ್ಳಲು ಕುರ್ಡಿಶ್ ಉಗ್ರರ ಕೈಗೆ ಅಸ್ತ್ರ!

ಈ ಎಲ್ಲ ಬೆಳವಣಿಗೆಗಳನ್ನು ಭಾರತದ ನೆರೆಯ ರಾಷ್ಟ್ರ ಚೀನಾ ಕೂಡ ಗಮನಿಸುತ್ತಿತ್ತು. 1962ರ ಯುದ್ಧದ ನಂತರ ಚೀನಾ ಭಾರತವನ್ನು ತನ್ನ ಪ್ರತಿಸ್ಪರ್ಧಿ ಎಂದು ಭಾವಿಸಿತ್ತು. ಭಾರತವನ್ನು ಪರೋಕ್ಷವಾಗಿ ಎದುರಿಸಲು ಪಾಕಿಸ್ತಾನಕ್ಕೆ ಚೀನಾ ತಾಂತ್ರಿಕ ನೆರವು ಮತ್ತು ವಿನ್ಯಾಸಗಳನ್ನು ಒದಗಿಸಿತ್ತು ಎಂದು ವಿಶ್ಲೇಷಕರು ಹೇಳುತ್ತಾರೆ.

ಇಷ್ಟೆಲ್ಲ ಬೆಳವಣಿಗೆಗಳು ನಡೆದು, 1990ರಲ್ಲಿ ಸೋವಿಯತ್ ಪಡೆಗಳು ಅಫ್ಘಾನಿಸ್ತಾನದಿಂದ ನಿರ್ಗಮಿಸಿದ ನಂತರ, ಅಮೆರಿಕವು ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಲು ನಿರ್ಧರಿಸಿತು. ಆದರೆ, ಆ ವೇಳೆಗಾಗಲೇ ಬಹಳ ತಡವಾಗಿತ್ತು. ಅದಾಗಲೇ, ಪಾಕಿಸ್ತಾನವು ಪರಮಾಣು ತಂತ್ರಜ್ಞಾನದಲ್ಲಿ ಪರಿಣತಿ ಸಾಧಿಸಿತ್ತು. 1998ರ ಮೇ ತಿಂಗಳಲ್ಲಿ ಚಾಗೈ ಬೆಟ್ಟಗಳಲ್ಲಿ ಪಾಕಿಸ್ತಾನವು ಪರಮಾಣು ಪರೀಕ್ಷೆಗಳನ್ನು ನಡೆಸುವ ಮೂಲಕ ಅಧಿಕೃತವಾಗಿ ಪರಮಾಣು ರಾಷ್ಟ್ರವಾಗಿ ಹೊರಹೊಮ್ಮಿತು.

ಪಾಕಿಸ್ತಾನದ ಯಶಸ್ವಿ ಪರೀಕ್ಷೆಗಳ ನಂತರ, 2003ರಲ್ಲಿ ಮತ್ತೊಂದು ಆಘಾತಕಾರಿ ವಿಷಯ ಬಯಲಿಗೆ ಬಂತು. ಅದೇನೆಂದರೆ, ಎ.ಕ್ಯೂ. ಖಾನ್ ಅವರ ನೇತೃತ್ವದಲ್ಲಿ ಜಾಗತಿಕ ಕಪ್ಪು ಮಾರುಕಟ್ಟೆ ಜಾಲವು ಇರಾನ್, ಉತ್ತರ ಕೊರಿಯಾ ಹಾಗೂ ಲಿಬಿಯಾದಂತಹ ದೇಶಗಳಿಗೆ ಪರಮಾಣು ತಂತ್ರಜ್ಞಾನವನ್ನು ರಹಸ್ಯವಾಗಿ ಮಾರಾಟ ಮಾಡಿತ್ತು. ಖಾನ್ ಬಹಿರಂಗವಾಗಿ ತಪ್ಪೊಪ್ಪಿಕೊಂಡರು. ಪಾಕಿಸ್ತಾನ ಸರ್ಕಾರ ಅವರಿಗೆ ಕ್ಷಮಾದಾನ ನೀಡಿತು.

ಅಮೆರಿಕದ ಸೋವಿಯತ್ ವಿರೋಧಿ ಧೋರಣೆ, ಸ್ವಾರ್ಥ ಹಾಗೂ ನಿರ್ಲಕ್ಷ್ಯದಿಂದಾಗಿ ಇಂದು ಪಾಕಿಸ್ತಾನವು ವಿಶ್ವದ ಒಂಬತ್ತು ಪರಮಾಣು ಶಸ್ತ್ರಸಜ್ಜಿತ ದೇಶಗಳಲ್ಲಿ ಒಂದಾಗಿದೆ ಬೆಳೆದಿದೆ.

ಮಾಹಿತಿ ಮೂಲ: ಎನ್‌ಡಿಟಿವಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...