ವಿಶ್ವ ʼಮಾನವ ಹಕ್ಕುಗಳ ದಿನʼ | ನಾಗರಿಕ ಸಮಾಜ ಮಾಡಬೇಕಿರುವುದೇನು?

Date:

ಈ ವರ್ಷದ ಮಾನವ ಹಕ್ಕುಗಳ ದಿನದ ಥೀಮ್‌ “ಮಾನವ ಹಕ್ಕುಗಳು: ನಮ್ಮ ದೈನಂದಿನ ಅಗತ್ಯತೆಗಳು”. ಅಂದರೆ, ಜಾಗತಿಕವಾಗಿ ಹೆಚ್ಚುತ್ತಿರುವ ಅಸ್ಥಿರತೆ, ಭಯ, ಅನಿಶ್ಚಿತತೆಯ ನಡುವೆ ಮಾನವ ಹಕ್ಕುಗಳ ದಿನದ ಈ ವರ್ಷದ ಸಂದೇಶವು, ನಮ್ಮ ಪ್ರತಿದಿನದ ಬದುಕನ್ನು ನಡೆಸುವ ಸುರಕ್ಷತೆ, ಗೌರವ, ಸ್ವಾತಂತ್ರ್ಯ, ಸಮಾನತೆ ಮೊದಲಾದ ಮೂಲಭೂತ ಅಗತ್ಯತೆಗಳೇ ಎಂಬುದನ್ನು ತೋರಿಸುತ್ತದೆ.

ಮಾನವನ ಇತಿಹಾಸದ ಹಾದಿಯಲ್ಲಿ ʼಹಕ್ಕುಗಳುʼ ಎಂಬ ಪರಿಕಲ್ಪನೆ ಹಲವು ಹಂತಗಳಲ್ಲಿ ರೂಪುಗೊಂಡಿದ್ದರೂ, ಅದಕ್ಕೆ ಅಧಿಕೃತ ಮುದ್ರೆ ಬಿದ್ದದ್ದು 1948ರ ಡಿಸೆಂಬರ್‌ 10ರಂದು. ಮಾನವನಾಗಿ ಉದಯಿಸಿರುವ ಹಿನ್ನೆಲೆ ಅವನಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳನ್ನು ವಿಶ್ವಕ್ಕೆ ಪರಿಚಯಿಸಿದ ಮಹತ್ತರ ದಿನವಿದು. ಜಾಗತಿಕವಾಗಿ ನಾಗರಿಕತೆಗಳು ಬೆಳೆದು ಮಾನವೀಯ ಮೌಲ್ಯಗಳು ಹಾಗೂ ಹಕ್ಕುಗಳ ಪರಿಕಲ್ಪನೆಗಳು ಮೂಲೆಗುಂಪಾಗುತ್ತಿರುವ ಈ ಹೊತ್ತಿನಲ್ಲಿ ಆ ಮೌಲ್ಯಗಳನ್ನು ರಕ್ಷಿಸಿಕೊಳ್ಳಲು ಅಧಿಕೃತವಾಗಿ ಹಕ್ಕು ನೀಡಿದ ಈ ದಿನದ ಕುರಿತು ನಮಗೆಷ್ಟು ತಿಳಿದಿದೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು (Universal Declaration of Human Rights- UDHR) ಅಂಗೀಕರಿಸಿತು. ಈ ಮೂಲಕ ಮೊದಲ ಬಾರಿಗೆ ಮಾನವೀಯ ಗೌರವ, ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ವಿಶ್ವ ಮಟ್ಟದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿ, ಅದರ ರಕ್ಷಣೆಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳ ಸಂಯುಕ್ತ ಹೊಣೆಗಾರಿಕೆಯಾಗಿ ಘೋಷಿಸಿತು. ಅಲ್ಲಿಂದ ಮುಂದೆ ಪ್ರತಿ ವರ್ಷ ಡಿ.10 ಅನ್ನು ವಿಶ್ವ ಮಾನವ ಹಕ್ಕುಗಳ ದಿನವೆಂದು ಆಚರಿಸಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

UDHR ರಚನೆಗೆ ನಾಂದಿ ಹಾಡಿದ್ದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು 1946ರಲ್ಲಿ ರೂಪುಗೊಂಡಿತು. ಆಯೋಗದ ಮೊದಲ ಅಧ್ಯಕ್ಷರಾಗಿದ್ದ ಅಮೆರಿಕದ ಎಲೀನರ್‌ ರೂಸ್‌ವೆಲ್ಟ್‌ ಈ ಮಹಾದಾಖಲೆಯನ್ನು ಅಂತಿಮ ರೂಪಕ್ಕೆ ತರುವಲ್ಲಿ ಶ್ರಮಿಸಿದವರಲ್ಲಿ ಅಗ್ರಗಣ್ಯರು. ದ್ವಿತೀಯ ಮಹಾಯುದ್ಧದ ಕ್ರೂರ ಅನುಭವ, ಹೋಲೋಕಾಸ್ಟ್‌ (ಜರ್ಮನ್‌ ನಾಜಿ ಆಳ್ವಿಕೆಯಡಿ ಸುಮಾರು 6 ಮಿಲಿಯನ್‌ ಯಹೂದಿಗಳ ಸಮೂಹ ಹತ್ಯೆ) ದಿಗಿಲು, ವಸಾಹತುಶಾಹಿಯ ಶೋಷಣಾ ಇತಿಹಾಸ ಇವೆಲ್ಲವೂ ಸೇರಿ ಆಧುನಿಕ ಜಗತ್ತಿನಲ್ಲೊಂದು ನೈತಿಕ ಸಂಹಿತೆಯನ್ನು ರೂಪಿಸಲು ಒತ್ತಾಯಿಸಿದವು. ಇದೇ ಸ್ಪೂರ್ತಿಯಿಂದ ಅನುಷ್ಠಾನಗೊಂಡ ʼಮಾನವ ಹಕ್ಕುಗಳʼ ಪರಿಕಲ್ಪನೆ ಅಂದಿಗೆ ಸಮಾಜದಲ್ಲಿದ್ದ ಅಸ್ವಸ್ಥತೆಗೆ, ಮಾಯದ ಗಾಯಗಳಿಗೆ ಮುಲಾಮಾಗಿ ಪರಿಣಮಿಸಿತು. ಒಟ್ಟು 30 ಲೇಖನಗಳನ್ನೊಳಗೊಂಡ UDHR, ಜೀವನದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ನ್ಯಾಯ ಸಮ್ಮತ ವಿಚಾರಣೆ, ಹಿಂಸೆಯಿಂದ ಮುಕ್ತ ಜೀವನ, ಸಂಘಟನೆ, ಸಾಮಾಜಿಕ ಭದ್ರತೆ, ಆಹಾರ, ಶಿಕ್ಷಣ ಸೇರಿದಂತೆ ಮಾನವ ಜೀವನಕ್ಕೆ ಅಗತ್ಯವಿರುವ ಹಕ್ಕುಗಳನ್ನು ಪ್ರತಿಯೊಬ್ಬರೂ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿತು.

image 86

ಆದರೆ, ಮೊದಲಿಗೆ UDHR ಒಂದು ನೈತಿಕ ಘೋಷಣೆಯಾಗಿತ್ತಷ್ಟೆ. ಕಾನೂನಾತ್ಮಕ ಬಾಧ್ಯತೆಯನ್ನು ವಿಧಿಸುವ ಒಪ್ಪಂದವಾಗಿರಲಿಲ್ಲ. ಇದನ್ನು ಬಲಗೊಳಿಸಲೆಂದೇ 1966ರಲ್ಲಿ ವಿಶ್ವಸಂಸ್ಥೆಯು ಎರಡು ಮಹತ್ವದ ಒಪ್ಪಂದಗಳನ್ನು ರೂಪಿಸುತು. ಒಂದು, ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದ (ICCPR). ಇನ್ನೊಂದು, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದ (ICESCR). 1966ರಲ್ಲಿ ಒಪ್ಪಂದಗಳಾದರೂ ಜಾರಿಗೆ ಬಂದದ್ದು 1976ರಲ್ಲಿ. ಈ ಒಪ್ಪಂದಗಳು UDHRನ ತತ್ವಗಳನ್ನು ಕಾನೂನಾತ್ಮಕ ಜವಾಬ್ದಾರಿಗಳನ್ನಾಗಿ ಪರಿವರ್ತಿಸಿದವು. ಯುರೋಪಿನ ದೇಶಗಳು 1950ರಲ್ಲಿ ಯೂರೋಪಿಯನ್‌ ಮಾನವ ಹಕ್ಕುಗಳ ಒಪ್ಪಂದವನ್ನು ಅಂಗೀಕರಿಸಿ, 1953ರಿಂದ ಜಾರಿಗೆ ತಂದವು. ಆಫ್ರಿಕಾ ಹಾಗೂ ಅಮೆರಿಕ ಖಂಡಗಳೂ ತಮ್ಮದೇ ಮಾನವ ಹಕ್ಕುಗಳ ವ್ಯವಸ್ಥೆಯನ್ನು ರೂಪಿಸಿಕೊಂಡವು.

ಯಾವುದೇ ಧರ್ಮ, ಜಾತಿ, ಲಿಂಗ, ಜನಾಂಗ, ಬಣ್ಣ, ಭಾಷೆ, ರಾಜಕೀಯ ಅಥವಾ ಇತರೆ ಅಭಿಪ್ರಾಯಗಳು, ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಮಾನವರು ಸಮಾನರು. ಎಲ್ಲರೂ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುವುದೇ ಮಾನವ ಹಕ್ಕುಗಳ ಮೂಲ ಉದ್ದೇಶ. ಮಾನವ ಹಕ್ಕುಗಳು ಜಾರಿಗೆ ಬಂದಂತೆ, ಎಲ್ಲಾ ದೇಶಗಳು ತಮ್ಮ ಸಂವಿಧಾನ, ಸಂಸ್ಥೆ ಹಾಗೂ ನ್ಯಾಯ ನಿರ್ವಹಣಾ ವ್ಯವಸ್ಥೆಗಳಲ್ಲಿ ಈ ತತ್ವಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದವು. ಉದಾಹರಣೆಗೆ, 1950ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನವು UDHR ನಿಂದ ಪ್ರೇರಿತವಾಗಿದ್ದು, ತನ್ನ ದೇಶವಾಸಿಗಳಿಗೆ ಮೂಲಭೂತ ಹಕ್ಕುಗಳನ್ನು ಕಾನೂನಾತ್ಮಕವಾಗಿ ಗಟ್ಟಿಗೊಳಿಸಿದೆ. ಹೀಗೆ ಅನೇಕ ರಾಷ್ಟ್ರಗಳು ತಮ್ಮ ಪ್ರದೇಶದ ವೈಶಿಷ್ಠ್ಯಕ್ಕೆನುಗುಣವಾಗಿ ಮಾನವ ಹಕ್ಕುಗಳ ರಕ್ಷಣೆಗೆ ಬೇರೆ ಬೇರೆ ಆಯೋಗಗಳನ್ನು, ನ್ಯಾಯಮಂಡಳಿಗಳನ್ನು ಮತ್ತು ತಜ್ಞ ಸಮಿತಿಗಳನ್ನು ರಚಿಸಿಕೊಂಡಿವೆ.

human rights

ಹಾಗೆ ನೋಡಿದರೆ, UDHR ಬರೆಯಲಾದ ಕಾಲಕ್ಕಿಂತ ಇಂದಿನ ಪ್ರಪಂಚ ಸಂಪೂರ್ಣ ಬದಲಾಗಿದೆ. ಇತ್ತೀಚಿನ ದಶಕಗಳಲ್ಲಿ ಮಾನವ ಹಕ್ಕುಗಳ ಸಮಸ್ಯೆಗಳು ಹೆಚ್ಚು ಸಂಕೀರ್ಣಗೊಳ್ಳುತ್ತಿವೆ. ಡಿಜಿಟಲ್‌ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ವೇಗದ ಬೆಳವಣಿಗೆಯಿಂದಾಗಿ ವ್ಯಕ್ತಿಗತ ಮಾಹಿತಿಯ ಸುರಕ್ಷತೆ, ಗೌಪ್ಯತೆ, ಆನ್‌ಲೈನ್‌ ಹಿಂಸೆ-ಮೋಸಗಳು ಮಾನವ ಹಕ್ಕುಗಳ ರಕ್ಷಣೆಯ ಕುರಿತು ಚಿಂತಿಸುವಂತೆ ಮಾಡಿವೆ. ಹವಾಮಾನ ಬದಲಾವಣೆ, ಯುದ್ಧ, ಆರ್ಥಿಕ ಏರಿಳಿತ, ದೇಶಗಳ ಆಂತರಿಕ ಬಿಕ್ಕಟ್ಟು, ಬಲವಂತದ ವಲಸೆ ಇವೆಲ್ಲವೂ ಜನರನ್ನು ಹೈರಾಣಾಗುವಂತೆ ಮಾಡಿವೆ. ಇಂತಹ ದುರ್ಭರ ಪರಿಸ್ಥಿತಿಯಲ್ಲಿ ಮಾನವ ಹಕ್ಕುಗಳನ್ನು ಕಾಪಾಡುವುದು ಜಾಗತಿಕ ಸವಾಲಾಗಿ ಪರಿಣಮಿಸಿದೆ. ಜತೆಗೆ ಆರ್ಥಿಕ ಅಸಮಾನತೆ, ಕಾರ್ಮಿಕ ಶೋಷಣೆ, ಸಮಾನ ಶಿಕ್ಷಣದ ಕೊರತೆ, ಮೂಲಸೌಕರ್ಯಗಳ ಅಲಭ್ಯತೆ, ಕನಿಷ್ಠ ಆರೋಗ್ಯ ಸೇವೆ ಪಡೆಯುವುದಕ್ಕೂ ಅವಕಾಶ ಇಲ್ಲದಿರುವ ಪರಿಸ್ಥಿತಿಗಳು ಮಾನವ ಹಕ್ಕುಗಳ ಪ್ರಶ್ನೆಗಳನ್ನು ಇನ್ನಷ್ಟು ಗಂಭೀರವಾಗಿಸಿವೆ.

ಇನ್ನು ಈ ವರ್ಷದ ಮಾನವ ಹಕ್ಕುಗಳ ದಿನದ ಥೀಮ್‌ ಹೀಗಿದೆ… “Human rights: Our Everyday Essentials” “ಮಾನವ ಹಕ್ಕುಗಳು: ನಮ್ಮ ದೈನಂದಿನ ಅಗತ್ಯತೆಗಳು”. ಅಂದರೆ, ಜಾಗತಿಕವಾಗಿ ಹೆಚ್ಚುತ್ತಿರುವ ಅಸ್ಥಿರತೆ, ಭಯ, ಅನಿಶ್ಚಿತತೆಯ ನಡುವೆ ಮಾನವ ಹಕ್ಕುಗಳ ದಿನದ ಈ ವರ್ಷದ ಸಂದೇಶವು, ನಮ್ಮ ಪ್ರತಿದಿನದ ಬದುಕನ್ನು ನಡೆಸುವ ಸುರಕ್ಷತೆ, ಗೌರವ, ಸ್ವಾತಂತ್ರ್ಯ, ಸಮಾನತೆ ಮೊದಲಾದ ಮೂಲಭೂತ ಅಗತ್ಯತೆಗಳೇ ಎಂಬುದನ್ನು ತೋರಿಸುತ್ತದೆ. ಮಾನವ ಹಕ್ಕುಗಳ ತತ್ವಗಳನ್ನು ದೈನಂದಿನ ಜೀವನದ ಹತ್ತಿರಕ್ಕೆ ತಂದು ಜನರಲ್ಲಿ ಜಾಗೃತಿ ಮೂಡಿಸುವುದು, ವಿಶ್ವಾಸ ಹೆಚ್ಚಿಸುವುದು ಮತ್ತು ಒಟ್ಟಾಗಿ ನಿಂತು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ.

hr

ಮಾನವ ಹಕ್ಕುಗಳು, ಅವುಗಳ ರಕ್ಷಣೆ ಎನ್ನುವುದು ಒಂದು ದಿನದ ಆಚರಣೆಯಲ್ಲ, ಅದು ನಿರಂತರ ಕ್ರಿಯಾಶೀಲ ಪ್ರಕ್ರಿಯೆ ಎಂಬುದನ್ನು ನಾವು ಎಷ್ಟರಮಟ್ಟಿಗೆ ಒಪ್ಪಿಕೊಳ್ಳಬಹುದು? ನಿಜಕ್ಕೂ ಈ ಸಮಾಜದಲ್ಲಿ ಮಾನವ ಹಕ್ಕುಗಳು ರಕ್ಷಿಸಲ್ಪಡುತ್ತಿವೆಯೇ? ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದೇವೆಯೇ? ಪರರ ಹಕ್ಕುಗಳನ್ನು ಗೌರವಿಸುತ್ತಿದ್ದೇವೆಯೇ? ಲಿಂಗ, ವರ್ಣ, ಧರ್ಮಗಳ ಬೇಧವಿಲ್ಲದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆಯೇ? ಎಂಬ ಪ್ರಶ್ನೆಗಳಿಗೆ ನಮಗೆ ನಾವೇ ಉತ್ತರ ಕೊಟ್ಟುಕೊಳ್ಳಬಲ್ಲೆವೇ? ಇಂದಿಗೂ ಮಹಿಳೆಯ ಮೇಲಿನ ದೌರ್ಜನ್ಯ ನಿಂತಿಲ್ಲ. ಆಧುನಿಕತೆ ಹೆಸರಿನಲ್ಲಿ ಜೀವನದ ನಿಜ ಮೌಲ್ಯಗಳು ಮರೆಗೆ ಸರಿದಿವೆ. ಬಾಜು ಕುಳಿತಿರುವ ಅನ್ಯರನ್ನು ನಮ್ಮ ಶತೃಗಳಂತೆಯೇ ಭಾವಿಸುತ್ತಿರುವ ವಾತಾವರಣ ಸೃಷ್ಠಿಯಾಗಿದೆ. ಈ ಕಾಲಕ್ಕೂ ನಮ್ಮ ನಡುವೆ ಅಸ್ಪೃಷ್ಯ ಸಮಾಜಗಳಿವೆ. ʼಮೇಲಿʼನವರು ಮೇಲೆಯೇ, ʼಕೆಳಗಿʼನವರು ಕೆಳಗೆಯೇ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ವರ್ಗಗಳು, ಸಮಾಜಗಳ ನಡುವೆ ದೊಡ್ಡ ಕಂದಗಕಳೇ ಸೃಷ್ಠಿಯಾಗಿ ಸಾಮಾಜಿಕ ಸಮಾನತೆಯಂತೂ ಇಲ್ಲವೇ ಇಲ್ಲ. ಇದಕ್ಕೆ ಈ ಸಮಾಜದ ಪ್ರತಿಯೊಬ್ಬರೂ ಹೊಣೆಗಾರರೇ ಆಗಿದ್ದೇವೆ.

ಇದನ್ನೂ ಓದಿ: ಚಿನ್ನದ ಆಸೆಬಿಟ್ಟು ಬೆಳ್ಳಿಯ ಬೆನ್ನತ್ತಿದ ಆಭರಣಪ್ರಿಯರು

ಈ ಕಂದಕವನ್ನು ಮುಚ್ಚಲು ನಾವು ಮಾಡಬೇಕಿರುವುದು ಸಾಕಷ್ಟಿದೆ. ಮಾನವ ಹಕ್ಕುಗಳ ದಿನವನ್ನು ಆಚರಿಸಿ, ಓದಿ ಮುಗಿಸಿ ಕೈತೊಳೆದುಕೊಳ್ಳುವ ಬದಲಿಗೆ, ನಮ್ಮೊಂದಿಗೆ ಪರರ ಹಕ್ಕುಗಳನ್ನೂ ರಕ್ಷಿಸುವ ಹೊಣೆಗಾರಿಕೆ ನಮ್ಮದೇ ಆಗಿರುತ್ತದೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕಿದೆ. ದೌರ್ಜನ್ಯ, ದಬ್ಬಾಳಿಕೆಗಳಿಂದ ನಲುಗುತ್ತಿರುವ ಮಹಿಳಾ ಸಮಾಜವನ್ನು ಮೇಲೆತ್ತಲು ಸತತ ಪ್ರಯತ್ನ ಮಾಡಬೇಕಿದೆ. ಅಂಚಿಗೆ ತಳ್ಳಲ್ಪಟ್ಟಿರುವ ಆದಿವಾಸಿ, ಅಲೆಮಾರಿ, ಬುಡಕಟ್ಟು ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹೋರಾಡಬೇಕಿದೆ. ಆಳುವ ವರ್ಗವನ್ನು ನ್ಯಾಯೋಚಿತ ಸಂದರ್ಭಗಳಲ್ಲಾದರೂ ಪ್ರಶ್ನಿಸುವ ಜಾಯಮಾನ ರೂಢಿಸಿಕೊಳ್ಳಬೇಕಿದೆ. ಘನತೆಯಿಂದ ಬದುಕುವುದು ನಮ್ಮ ಹಕ್ಕು, ನಾವು ಹಾಗೇ ಬದುಕಬೇಕಿದೆ. ಹಾಗೆ ಬದುಕುವಲ್ಲಿ ಎದುರಾಗುವ ತೊಡರುಗಳನ್ನು ನಾವೇ ನಿವಾರಿಸಿಕೊಳ್ಳಬೇಕಿದೆ. ಸಂವಿಧಾನದ ಆಶಯಗಳೂ ಅವೇ ಆಗಿರುವಾಗ ಬದಲಾವಣೆ ನಮ್ಮಿಂದಲೇ ಶುರುವಾಗಲಿ. ಆಗ ಮಾತ್ರ ಮಾನವ ಹಕ್ಕುಗಳ ನಿಜ ಉದ್ದೇಶ ಈಡೇರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...