ಡಾಲರ್ ಮಾತ್ರವಲ್ಲ ಚೀನಾ ಕರೆನ್ಸಿ ಎದುರೂ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ!

Date:

2025ರಲ್ಲಿ ಭಾರತೀಯ ರೂಪಾಯಿ ಮೌಲ್ಯವು ಯುವಾನ್ ಎದುರು ನಿರಂತರವಾಗಿ ಕುಗ್ಗುತ್ತಿದ್ದು, ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು ಶೇ.6ರಷ್ಟು ಕುಸಿದಿದೆ. 2025ರಲ್ಲಿ ಒಟ್ಟಾಗಿ ಭಾರತೀಯ ರೂಪಾಯಿ ಎದುರು ಯುವಾನ್ ಶೇ.10.31ರಷ್ಟು ಬಲಗೊಂಡಿದೆ. 2026ರ ಹೊತ್ತಿಗೂ ಯುವಾನ್ ಬಲಗೊಳ್ಳುತ್ತಲೇ ಇದೆ. 

2025ರಲ್ಲಿ ಭಾರತೀಯ ರೂಪಾಯಿಯು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಕರೆನ್ಸಿಗಳಿಗಿಂತ ಕಳಪೆ ಪ್ರದರ್ಶನ ತೋರಿದೆ. ಅಷ್ಟು ಮಾತ್ರವಲ್ಲ ಏಷ್ಯಾದಲ್ಲಿಯೇ ಅತಿ ಕಳಪೆ ಪ್ರದರ್ಶನ ತೋರಿದ ಕರೆನ್ಸಿ ಎನಿಸಿಕೊಂಡಿದೆ. ಯುಎಸ್ ಡಾಲರ್ ಎದುರು ಸರಿಸುಮಾರು 31 ರೂಪಾಯಿಯಷ್ಟು ವಿನಿಮಯ ದರವನ್ನು ರೂಪಾಯಿ ಹೆಚ್ಚಿಸಿಕೊಂಡು ಮೌಲ್ಯ ಕಳೆದುಕೊಂಡಿದೆ. ಯುಎಸ್‌ ಡಾಲರ್ ಮಾತ್ರವಲ್ಲ ಚೀನಾ ಕರೆನ್ಸಿ ಎದುರೂ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇನ್ನೊಂದೆಡೆ ಚೀನಾ ಕರೆನ್ಸಿ ಯುವಾನ್ ಡಾಲರ್‌ ಎದುರು ಬಲಗೊಂಡಿದೆ.

2020ರಲ್ಲಿ ಗಲ್ವಾನ್ ಸಂಘರ್ಷದ ನಂತರ ದೇಶದಲ್ಲಿ ‘ಮೇಕ್‌ ಇನ್ ಇಂಡಿಯಾ’ ಎಂದು ಹೇಳುವ ಮೂಲಕ ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಪರೋಕ್ಷವಾಗಿ ಪ್ರಧಾನಿ ಮೋದಿ ಕರೆ ನೀಡಿದ್ದರು. ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೇ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಯೋಜನೆಗಳಿಗೆ ಅಧಿಕ ಒತ್ತು ನೀಡಲಾಗುತ್ತಿದೆ ಎಂದು ಮೋದಿ ಪ್ರತಿಪಾದಿಸಿದ್ದರು. 2026ರ ವೇಳೆಗೆ ಪೂರೈಕೆ ಸರಪಳಿಯಲ್ಲಿ ಭಾರತವು ವಿಶ್ವಕ್ಕೆ ಚೀನಾಕ್ಕಿಂತ ಉತ್ತಮ ಪರ್ಯಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಈ ಪೈಪೋಟಿಯ ನಡುವೆ ಯುವಾನ್ ಎದುರು ಭಾರತೀಯ ರೂಪಾಯಿ ಮಾತ್ರ ನಿರಂತರವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತಲೇ ಇದೆ.

ಇದನ್ನು ಓದಿದ್ದೀರಾ? ಯುಎಸ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ: 1947ರಿಂದ 2025ರವರೆಗೆ ನಡೆದಿದ್ದೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2025ರಲ್ಲಿ ಭಾರತೀಯ ರೂಪಾಯಿ ಮೌಲ್ಯವು ಯುವಾನ್ ಎದುರು ನಿರಂತರವಾಗಿ ಕುಗ್ಗುತ್ತಿದ್ದು, ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು ಶೇ.6ರಷ್ಟು ಕುಸಿದಿದೆ. 2025ರಲ್ಲಿ ಒಟ್ಟಾಗಿ ಭಾರತೀಯ ರೂಪಾಯಿ ಎದುರು ಯುವಾನ್ ಶೇ.10.31ರಷ್ಟು ಬಲಗೊಂಡಿದೆ. 2026ರ ಹೊತ್ತಿಗೂ ಯುವಾನ್ ಬಲಗೊಳ್ಳುತ್ತಲೇ ಇದೆ. ಈ ವರ್ಷಷ ಆರಂಭದಲ್ಲಿ ಒಂದು ಚೀನೀ ಯುವಾನ್ ಮೌಲ್ಯವು ಸುಮಾರು ₹12.92ಕ್ಕೆ ಏರಿಕೆಯಾಗಿದೆ. ರೂಪಾಯಿ ಮೌಲ್ಯವು ಪ್ರತಿ ಯುವಾನ್‌ಗೆ ಸರಿಸುಮಾರು 0.0774ಕ್ಕೆ ಕುಸಿದಿದ್ದು, ಇದು ಕಳೆದ ಆರು ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಇದರಿಂದಾಗಿ ಚೀನಾದಿಂದ ಭಾರತ ಮಾಡುವ ಆಮದು ದುಬಾರಿಯಾಗುತ್ತದೆ.

India china
ಸಂಜು ಎನ್‌ ಜೆ: ‘ಈ ದಿನ’ ಸಂಶೋಧನಾ ತಂಡ

‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಮೊದಲಾದವುಗಳನ್ನು ಬಿಜೆಪಿಗರು ಚೀನಾ ವಸ್ತುಗಳ ಬಹಿಷ್ಕಾರದ ಸೂಚಕವಾಗಿ ನಿರೂಪಿಸಿಕೊಂಡಿದ್ದಾರೆ. ಇದರ ಅರ್ಥದಲ್ಲಿ ಚೀನಾದಿಂದ ಭಾರತ ಮಾಡಿಕೊಳ್ಳುವ ಆಮದು ಕಡಿಮೆಯಾಗಬೇಕಿತ್ತು ಮತ್ತು ಕಡಿಮೆಯಾಗಿದೆಯೆ ಎಂದು ಹೇಳಿಕೊಳ್ಳುವ ಬಿಜೆಪಿ ಕಾರ್ಯಕರ್ತರೂ ಇದ್ದಾರೆ. ಆದರೆ ವಾಸ್ತವದಲ್ಲಿ ಚೀನಾದಿಂದ ಭಾರತ ಮಾಡಿಕೊಳ್ಳುವ ಆಮದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗಿದೆ.

ಇದನ್ನು ಓದಿದ್ದೀರಾ? ಬಾಂಗ್ಲಾದೇಶ, ಪಾಕಿಸ್ತಾನ ಕರೆನ್ಸಿಯಲ್ಲ ಏಷ್ಯಾದಲ್ಲಿಯೇ ಅತಿ ಕಳಪೆ ಪ್ರದರ್ಶನ ತೋರಿದ್ದು ಭಾರತದ ರೂಪಾಯಿ!

2024-25ರ ಆರ್ಥಿಕ ವರ್ಷದಲ್ಲಿ ಚೀನಾದಿಂದ ಭಾರತದ ಆಮದು ಸುಮಾರು 113.5 ಬಿಲಿಯನ್ ಡಾಲರ್‌ಗಳಿಗೆ(11,350 ಕೋಟಿ ರೂಪಾಯಿ) ಏರಿಕೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದ್ದು, 2025ರಲ್ಲಿ ಈ ಪ್ರಮಾಣವು 123.5 ಬಿಲಿಯನ್ ಡಾಲರ್‌(12,350 ಕೋಟಿ ರೂಪಾಯಿ) ತಲುಪುವ ನಿರೀಕ್ಷೆಯಿದೆ. ಭಾರತವು ಚೀನಾಕ್ಕೆ ರಫ್ತು ಮಾಡಿಕೊಳ್ಳುವುದಕ್ಕಿಂತ ಆಮದು ಮಾಡಿಕೊಳ್ಳುವ ಪ್ರಮಾಣವೇ ಅಧಿಕವಾಗಿದೆ. ಇದರಿಂದಾಗಿ ವ್ಯಾಪಾರ ಕೊರತೆಯು ದಾಖಲೆ ಮಟ್ಟಕ್ಕೆ ಅಂದರೆ 99.2 ಬಿಲಿಯನ್ ಡಾಲರ್‌(9920 ಕೋಟಿ ರೂಪಾಯಿ)ಗೆ ತಲುಪಿದೆ.

india china1
ಸಂಜು ಎನ್‌ ಜೆ: ‘ಈ ದಿನ’ ಸಂಶೋಧನಾ ತಂಡ

ಒಂದೆಡೆ ವಿಶ್ವದ ದೊಡ್ಡಣ್ಣ ಎಂದು ತನ್ನನ್ನು ತಾನು ಕರೆಸಿಕೊಳ್ಳುವ ಅಮೆರಿಕ ಇತರೆ ದೇಶಗಳ ಮೇಲೆ ಸುಂಕದ ಹೊರೆಯನ್ನು ಹೇರುತ್ತಿದೆ. ಭಾರತದ ಮೇಲೆ ಅಮೆರಿಕ ಶೇ.50ರಷ್ಟು ಸುಂಕವನ್ನು ಹೇರಿದೆ. ಇನ್ನೊಂದೆಡೆ ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆಯೂ ಅಧಿಕವಾಗುತ್ತಿದೆ. ಇವೆಲ್ಲವೂ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ ಬಲಗೊಳ್ಳಲು, ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗುತ್ತಿದೆ.

ಇವೆಲ್ಲವುದರ ನಡುವೆ 2025ರಲ್ಲಿ ಚೀನಾ ಕರೆನ್ಸಿಯಾದ ಯುವಾನ್ ಯುಎಸ್‌ ಡಾಲರ್ ಎದುರು ಬಲಗೊಂಡಿದೆ. 2025ರ ಆರಂಭದಲ್ಲಿ 1 ಡಾಲರ್‌ಗೆ ಸುಮಾರು 7.30 ಯುವಾನ್ ಇದ್ದ ಮೌಲ್ಯವು, ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು 6.99ಕ್ಕೆ ಸುಧಾರಿಸಿದೆ. ಯುವಾನ್ ಮೌಲ್ಯವು 2025ರಲ್ಲಿ ಡಾಲರ್ ಎದುರು ಸುಮಾರು ಶೇ.5ರಷ್ಟು ವೃದ್ಧಿಯಾಗಿದೆ. ಚೀನಾದ ಉತ್ಪಾದನಾ ವಲಯದಲ್ಲಿನ ಸುಧಾರಣೆಯಿಂದಾಗಿ, ಹೂಡಿಕೆದಾರರ ನಂಬಿಕೆ ಹೆಚ್ಚುತ್ತಿರುವುದರಿಂದಾಗಿ ಕರೆನ್ಸಿ ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಭಾರತೀಯ ರೂಪಾಯಿ ಮಾತ್ರ ನಿರಂತರವಾಗಿ ಮೌಲ್ಯ ಕಳೆದುಕೊಳ್ಳುತ್ತಿದ್ದು ಮುಂದೊಂದು ದಿನ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದ ಸ್ಥಿತಿ ಭಾರತಕ್ಕೆ ಬರುವ ಆತಂಕ ಎದುರಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...