ವಿಶ್ವದ ಟಾಪ್ 100ರಲ್ಲಿ ಇಲ್ಲ ಭಾರತದ ವಿವಿಗಳು; IITಗೂ ಸ್ಥಾನವಿಲ್ಲ ಯಾಕೆ?

Date:

ಪ್ರತಿ ವರ್ಷವೂ, ‘ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು, ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕಗಳು ಹಾಗೂ ವಿಶ್ವ ವಿಶ್ವವಿದ್ಯಾಲಯಗಳ ಶಾಂಘೈ ಶೈಕ್ಷಣಿಕ ಶ್ರೇಯಾಂಕಗಳು’ ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪ್ರಕಟಿಸುತ್ತವೆ. ಈ ಬಾರಿಯು ಟಾಪ್‌ 100 ವಿಶ್ವವಿದ್ಯಾಲಯಗಳ ಪಟ್ಟಿಯು ಪ್ರಕಟಿಸಿವೆ. ಯಥಾಪ್ರಕಾರ, ಅಮೆರಿಕ, ಬ್ರಿಟಿಷ್, ಯುರೋಪಿಯನ್ ಹಾಗೂ ಪೂರ್ವ ಏಷ್ಯಾದ ವಿಶ್ವವಿದ್ಯಾಲಯಗಳು ಟಾಪ್ 100ರಲ್ಲಿ ಪ್ರಾಬಲ್ಯ ಸಾಧಿಸಿವೆ. ಆದರೆ, ಭಾರತವು ಪಟ್ಟಿಯಿಂದ ಹೊರಗುಳಿಸಿದೆ.

ಭಾರತದ ಶಿಕ್ಷಣ ಸಚಿವಾಲಯದ ‘ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜ್ಯುಕೇಶನ್’ (AISHE) ದತ್ತಾಂಶದ ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ. 53,133ಕ್ಕೂ ಹೆಚ್ಚು ಕಾಲೇಜುಗಳು ಮತ್ತು 1,391 ವಿಶ್ವವಿದ್ಯಾಲಯಗಳ ಜಾಲವು ನಗರಗಳು, ಪಟ್ಟಣಗಳು ​​ಹಾಗೂ ಸಣ್ಣ ಜಿಲ್ಲೆಗಳಲ್ಲಿ ಹರಡಿಕೊಂಡಿವೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿವೆ. ಆದರೆ, ಭಾರತೀಯ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ವದೇಶಿ ವಿಶ್ವವಿದ್ಯಾಲಯವನ್ನು ಹುಡುಕುವಾಗ ಮತ್ತು ವಿಶ್ವದ ರ್ಯಾಂಕಿಂಗ್‌ ಅನ್ನು ಪರಿಶೀಲಿಸಿದಾಗ ನಿರಾಶೆಗೊಳ್ಳುತ್ತಾರೆ. ಯಾಕೆಂದರೆ, ವಿಶ್ವದ ಟಾಪ್‌ 100 ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯವೂ ಸ್ಥಾನ ಪಡೆದಿಲ್ಲ. ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂದೇ ಖ್ಯಾತಿ ಪಡೆದಿರುವ ‘ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ (ಐಐಟಿ) ಕೂಡ ಪಟ್ಟಿಯಲ್ಲಿಲ್ಲ.

ಪ್ರತಿ ವರ್ಷವೂ, ‘ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು, ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕಗಳು ಹಾಗೂ ವಿಶ್ವ ವಿಶ್ವವಿದ್ಯಾಲಯಗಳ ಶಾಂಘೈ ಶೈಕ್ಷಣಿಕ ಶ್ರೇಯಾಂಕಗಳು’ ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪ್ರಕಟಿಸುತ್ತವೆ. ಈ ಬಾರಿಯು ಟಾಪ್‌ 100 ವಿಶ್ವವಿದ್ಯಾಲಯಗಳ ಪಟ್ಟಿಯು ಪ್ರಕಟಿಸಿವೆ. ಯಥಾಪ್ರಕಾರ, ಅಮೆರಿಕ, ಬ್ರಿಟಿಷ್, ಯುರೋಪಿಯನ್ ಹಾಗೂ ಪೂರ್ವ ಏಷ್ಯಾದ ವಿಶ್ವವಿದ್ಯಾಲಯಗಳು ಟಾಪ್ 100ರಲ್ಲಿ ಪ್ರಾಬಲ್ಯ ಸಾಧಿಸಿವೆ. ಆದರೆ, ಭಾರತವು ಪಟ್ಟಿಯಿಂದ ಹೊರಗುಳಿಸಿದೆ.

ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ವಿದೇಶಗಳಿಗೆ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ವಿದ್ಯಾರ್ಥಿಗಳನ್ನು ಕಳಿಸುವ ರಾಷ್ಟ್ರ ಭಾರತ. ಆದರೆ, ಭಾರತದ ವಿಶ್ವವಿದ್ಯಾಲಯಗಳು ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತವೆ ಎಂಬುದನ್ನು ರ್ಯಾಂಕಿಂಗ್‌ ಪಟ್ಟಿ ಸೂಚಿಸಿದೆ. ಈ ಪಟ್ಟಿಯು ಕೇವಲ ಅಂಕಿಅಂಶ ಮಾತ್ರವಲ್ಲ, ಕಳೆದ 70 ವ‍ರ್ಷಗಳಿಂದ ಶಿಕ್ಷಣ ಒದಗಿಸುತ್ತಿರುವ ಹಲವಾರು ವಿಶ್ವವಿದ್ಯಾಲಯಗಳು ಇನ್ನೂ, ವಿಶ್ವಖ್ಯಾತಿ ಪಡೆಯುವಲ್ಲಿ ಯಾಕೆ ಹಿಂದುಳಿದಿವೆ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದಾಗ್ಯೂ, 2000 ವರ್ಷಗಳ ಹಿಂದೆ, ಚೀನಾ, ಪರ್ಷಿಯಾ ಹಾಗೂ ಆಗ್ನೇಯ ಏಷ್ಯಾದಿಂದ ವಿದ್ಯಾರ್ಥಿಗಳು ನಳಂದ, ತಕ್ಷಶಿಲಾ ಮತ್ತು ವಲ್ಲಭಿಯಲ್ಲಿ ಅಧ್ಯಯನ ಭಾರತಕ್ಕೆ ಬರುತ್ತಿದ್ದರು. ಈ ವಿಶ್ವವಿದ್ಯಾಲಯಗಳು ಜತ್ತಿನ ಆದ್ಯತೆಯಾಗಿದ್ದವು. ಇವು, ಜಗತ್ತು ಶಿಕ್ಷಣದಲ್ಲಿ ತನ್ನ ಅಸ್ತಿತ್ವವನ್ನು ಕಾಣುವ ಮೊದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದವು ಎನ್ನಲಾಗಿದೆ. ಆದರೆ, ಜಗತ್ತು ವೇಗವಾಗಿ ಓಡುತ್ತಿರುವ ಈ ಸಮಯದಲ್ಲಿ ಭಾರತದ ವಿಶ್ವವಿದ್ಯಾಲಯಗಳಿಗೆ ಏನಾಗಿದೆ?

ಜಾಗತಿಕ ಶ್ರೇಯಾಂಕ ಪಟ್ಟಿಗಳನ್ನು ಸಿದ್ದಪಡಿಸಿಲು ಸಂಸ್ಥೆಗಳು ನಾನಾ ಕ್ಷೇತ್ರವನ್ನು ಪರಿಶೀಲಿಸುತ್ತವೆ. ಉದಾಹರಣೆಗೆ, ಶಾಂಘೈ ಶ್ರೇಯಾಂಕಗಳು – ಸಂಶೋಧನಾ ಶ್ರೇಷ್ಠತೆಯ ಮೇಲೆ ಮಾತ್ರ ಕೇಂದ್ರೀಕರಿಸುತ್ತವೆ. ನೊಬೆಲ್ ಪ್ರಶಸ್ತಿಗಳು, ಹೆಚ್ಚು ಉಲ್ಲೇಖಿತ ಸಂಶೋಧಕರು ಹಾಗೂ ಗಣ್ಯ ನಿಯತಕಾಲಿಕಗಳಲ್ಲಿ ಪ್ರಕಟವಾಗುವ ಪ್ರಬಂಧಗಳನ್ನು ಎಣಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಡಾಕ್ಟರೇಟ್ ಪದವಿಗಳನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ಪಟ್ಟಿ ಅತ್ಯಗತ್ಯ.

ಟೈಮ್ಸ್ ಹೈಯರ್ ಶ್ರೇಯಾಂಕವು – ವಿಶ್ವವಿದ್ಯಾಲಯಗಳಲ್ಲಿನ ಬೋಧನೆ, ಸಂಶೋಧನೆ, ಉಲ್ಲೇಖಗಳು ಹಾಗೂ ಅಂತರರಾಷ್ಟ್ರೀಯ ದೃಷ್ಟಿಕೋನಗಳ ಆಧಾರದ ಮೇಲೆ ಉನ್ನತ ವಿಶ್ವವಿದ್ಯಾಲಯಗಳನ್ನು ಶ್ರೇಣೀಕರಿಸುತ್ತದೆ. ಅಂತೆಯೇ, QS ವಿಶ್ವ ಶ್ರೇಯಾಂಕವು – ಶೈಕ್ಷಣಿಕ ಖ್ಯಾತಿ, ಉದ್ಯೋಗದಾತರ ಗ್ರಹಿಕೆ ಹಾಗೂ ಸಂಶೋಧನಾ ಪ್ರಭಾವವನ್ನು ಅಳೆಯುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ರ್ಯಾಂಕಿಂಗ್‌ ಅನ್ನು ಗಮನಿಸಿದರೆ, ಭಾರತೀಯ ವಿಶ್ವವಿದ್ಯಾನಿಲಯಗಳು ಪದವಿ ಮತ್ತು ಬೋಧನಾ ಪ್ರಮಾಣದಲ್ಲಿ ಬಲವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಸಂಶೋಧನಾ ಕ್ಷೇತ್ರ, ಉಲ್ಲೇಖದ ಪ್ರಭಾವ, ಡಾಕ್ಟರೇಟ್ ಪದವಿ ಹಾಗೂ ಅಂತರರಾಷ್ಟ್ರೀಯ ಸಹಯೋಗದಲ್ಲಿ ದುರ್ಬಲ ಕಾರ್ಯ ಕ್ಷಮತೆಯನ್ನು ತೋರಿಸುತ್ತವೆ ಎಂಬುದು ಸಾಬೀತಾಗಿದೆ.

‘ಸ್ಕೋಪಸ್ ಆ್ಯಂಡ್‌ ವೆಬ್ ಆಫ್ ಸೈನ್ಸ್’ ಅಂಕಿಅಂಶಗಳ ಪ್ರಕಾರ, ಭಾರತವು ಹೆಚ್ಚಿನ ಪ್ರಮಾಣದ ಶೈಕ್ಷಣಿಕ ಪ್ರಬಂಧಗಳನ್ನು (ಪಿಎಚ್‌ಡಿ ಪ್ರಬಂಧಗಳು) ರಚಿಸುತ್ತದೆ. ಆದರೆ, ಈ ಪ್ರಬಂಧಗಳ ಗುಣಮಟ್ಟ ಅಮೆರಿಕ, ಚೀನಾ, ಜರ್ಮನಿ ಹಾಗೂ ಯುಕೆ ವಿಶ್ವವಿದ್ಯಾಲಯಗಳಿಗಿಂತ ಕಡಿಮೆಯಾಗಿದೆ. ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳು ಕಡಿಮೆ ಪ್ರಬಂಧಗಳನ್ನು ಪ್ರಕಟಿಸುತ್ತವೆ. ಆದರೆ, ಹೆಚ್ಚಿನ ಜಾಗತಿಕ ಪ್ರಭಾವ ಗಳಿಸುತ್ತಿವೆ.

ಈ ಹಿಂದುಳಿಯುವಿಕೆಗೆ ಪ್ರಮುಖ ಕಾರಣ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕೊರತೆ. ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಮೇಲಿನ ಭಾರತದ ಒಟ್ಟು ವೆಚ್ಚವು ಜಿಡಿಪಿಯ 0.8% ಕ್ಕಿಂತ ಕಡಿಮೆಯಿದೆ. ಆದರೆ, ಈ ಕ್ಷೇತ್ರದ ಮೇಲೆ ಚೀನಾ 2.5% ಕ್ಕಿಂತ ಹೆಚ್ಚು, ಅಮೆರಿಕ ಸುಮಾರು 3% ಹಾಗೂ ದಕ್ಷಿಣ ಕೊರಿಯಾ 4% ಕ್ಕಿಂತ ಹೆಚ್ಚು ಖರ್ಚು ಮಾಡುತ್ತದೆ. ಈ ಅನುದಾನದ ಅಂತರವು ಪ್ರಯೋಗಾಲಯ ಮೂಲಸೌಕರ್ಯ, ಸಂಶೋಧನಾ ಅನುದಾನಗಳು, ಪಿಎಚ್‌ಡಿ ನೇಮಕಾತಿ ಹಾಗೂ ದೀರ್ಘಾವಧಿಯ ಯೋಜನೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಉನ್ನತ ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ, ಸಂಶೋಧನಾ ತಂಡಗಳು ದೊಡ್ಡ ಡಾಕ್ಟರೇಟ್ ಮತ್ತು ಪೋಸ್ಟ್-ಡಾಕ್ಟರೇಟ್ ಪಡೆದವನ್ನು ಒಳಗೊಂಡಿರುತ್ತವೆ. ಆದರೆ, ಭಾರತದಲ್ಲಿ, ಅಧ್ಯಾಪಕರು ಸಾಮಾನ್ಯವಾಗಿ ಭಾರೀ ಬೋಧನಾ ಹೊರೆಗಳನ್ನು ಹೊರುತ್ತಾರೆ. ಪರಿಣಾಮ, ಸಂಶೋಧನಾರ್ಥಿಗಳಿಗೆ ಸೀಮಿತ ಸಮಯ ನೀಡಬೇಕಾಗುತ್ತದೆ.

ಹಾರ್ವರ್ಡ್, ಎಂಐಟಿ, ಸ್ಟ್ಯಾನ್‌ಫೋರ್ಡ್ ಅಥವಾ ಆಕ್ಸ್‌ಫರ್ಡ್‌ನಲ್ಲಿ, ಡಾಕ್ಟರಲ್ ಮತ್ತು ಪೋಸ್ಟ್-ಡಾಕ್ಟರಲ್ ಸಂಶೋಧಕರು ಸಂಶೋಧನಾ ಫಲಿತಾಂಶದ ಬೆನ್ನೆಲುಬಾಗಿದ್ದಾರೆ. ಆದರೆ, ಭಾರತೀಯ ವಿಶ್ವವಿದ್ಯಾಲಯಗಳ ಸಂದರ್ಭದಲ್ಲಿ, ಪಿಎಚ್‌ಡಿ ದಾಖಲಾತಿಯೇ ವಿರಳವಾಗಿದೆ. ಇದು ಸಂಶೋಧನೆಯ ಪ್ರಮಾಣ ಮತ್ತು ನಿರಂತರತೆಯನ್ನು ಮಿತಿಗೊಳಿಸುತ್ತದೆ.

ಶ್ರೇಯಾಂಕ ಗಳಿಸುವಲ್ಲಿ ಅಂತರರಾಷ್ಟ್ರೀಯ ಅಧ್ಯಾಪಕರು, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ ಗಡಿಯಾಚೆಗಿನ ಸಂಶೋಧನಾ ಸಹಯೋಗಗಳು ಹೆಚ್ಚು ಪ್ರಭಾವ ಬೀರುತ್ತವೆ. ಆದರೆ, ಭಾರತೀಯ ವಿಶ್ವವಿದ್ಯಾಲಯಗಳು ಆಡಳಿತಾತ್ಮಕ ಅಡೆತಡೆಗಳು, ವೇತನ ಮಿತಿಗಳು ಹಾಗೂ ವೀಸಾ ನಿಯಮಗಳಿಂದಾಗಿ ಜಾಗತಿಕ ನೇಮಕಾತಿಯನ್ನು ಸೀಮಿತಗೊಳಿಸಿವೆ. ಇದು ಕ್ಯಾಂಪಸ್‌ಗಳನ್ನು ಹೆಚ್ಚಾಗಿ ದೇಶೀಯ ಸ್ವರೂಪದಲ್ಲಿಯೇ ಇರಿಸುತ್ತದೆ. ಸಂಸ್ಥೆಗಳು ಅತಿಥಿ ಉಪನ್ಯಾಸಗಳಿಗಾಗಿ ವಿದೇಶಗಳಿಂದ ಅಧ್ಯಾಪಕರನ್ನು ಆಹ್ವಾನಿಸುತ್ತವೆಯಾದರೂ, ಅದು ಸೀಮಿತವಾಗಿದೆ. ಪರಿಣಾಮ, ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅಂತರರಾಷ್ಟ್ರೀಯ ದೃಷ್ಟಿಕೋನವು ಕಡಿಮೆಯಾಗುತ್ತಿದೆ.

ಈ ಲೇಖನ ಓದಿದ್ದೀರಾ?: ವೆನೆಜುವೆಲಾ ಬಿಕ್ಕಟ್ಟು | ಹಸಿದ ಹೊಟ್ಟೆ ಮತ್ತು ಬಲಾಢ್ಯರ ಜೂಜಾಟ

ಐಐಟಿಗಳು ಮತ್ತು ಹೆಚ್ಚಿನ ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಭಾರತದ ಪ್ರಮುಖ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಸಂಶೋಧನಾ ವಿಶ್ವವಿದ್ಯಾಲಯಗಳಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗಿಲ್ಲ. ಇವುಗಳನ್ನು ಎಂಜಿನಿಯರ್‌ಗಳು, ವಿಜ್ಞಾನಿಗಳು, ಆಡಳಿತಗಾರರು ಹಾಗೂ ಶಿಕ್ಷಕರಿಗೆ ತರಬೇತಿ ನೀಡಲು, ನಿರ್ದಿಷ್ಟ ರಾಷ್ಟ್ರೀಯ ಅಗತ್ಯಗಳನ್ನು ಪೂರೈಸಲು ಮಾತ್ರವೇ ರಚಿಸಲಾಗಿದೆ.

ಐಐಟಿ ವಿಶ್ವ ದರ್ಜೆಯ ಎಂಜಿನಿಯರ್‌ಗಳನ್ನು ರೂಪಿಸಬಹುದು. ಆದರೆ ಅದು ವೈದ್ಯಕೀಯ ಶಾಲೆ, ದೊಡ್ಡ ಜೀವಶಾಸ್ತ್ರ ಸಂಶೋಧನಾ ಆಸ್ಪತ್ರೆ ಅಥವಾ ಹೆಚ್ಚಿನ ಪ್ರಭಾವ ಬೀರುವ ಸಾಮಾಜಿಕ ವಿಜ್ಞಾನ ಸಂಶೋಧನೆಯನ್ನು ನಡೆಸುವುದಿಲ್ಲ.

ಜಾಗತಿಕ ಶ್ರೇಯಾಂಕಗಳು ತಾಂತ್ರಿಕ ಶ್ರೇಷ್ಠತೆಯನ್ನು ಮಾತ್ರವಲ್ಲದೆ ಎಲ್ಲ ವಿಭಾಗಗಳಲ್ಲಿ ಒಟ್ಟು ಸಂಶೋಧನಾ ಫಲಿತಾಂಶವನ್ನು ಅಳೆಯುವುದರಿಂದ ರ್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ವಿಶ್ವವಿದ್ಯಾಲಯಗಳು ಕಾಣೆಯಾಗುತ್ತಿವೆ. ವಿಶ್ವದ ಉನ್ನತ ವಿಶ್ವವಿದ್ಯಾಲಯಗಳು ಸಂಪೂರ್ಣ ಜ್ಞಾನ ಪರಿಸರ ವ್ಯವಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ. ಹಾರ್ವರ್ಡ್ ಅಥವಾ ಆಕ್ಸ್‌ಫರ್ಡ್‌ನಂತಹ ಕ್ಯಾಂಪಸ್‌ಗಳು ಔಷಧ, ಅರ್ಥಶಾಸ್ತ್ರ, ಇತಿಹಾಸ, ಹವಾಮಾನ ವಿಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳ ಮೇಲೆ ಏಕಕಾಲದಲ್ಲಿ ಆವಿಷ್ಕಾರಗಳನ್ನು ನಡೆಸುತ್ತವೆ.

ಜೊತೆಗೆ, ಜಾಗತಿಕ ವಿಶ್ವವಿದ್ಯಾನಿಲಯಗಳು ಆರ್ಥಿಕ ಮತ್ತು ಶೈಕ್ಷಣಿಕ ಸ್ವಾಯತ್ತತೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಸಂಶೋಧನಾ ಅವಕಾಶಗಳು ಮತ್ತು ಜಾಗತಿಕ ಪಾಲುದಾರಿಕೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. ಆದರೆ, ಭಾರತೀಯ ವಿಶ್ವವಿದ್ಯಾಲಯಗಳು ರಾಜಕೀಯ ಪ್ರಭಾವವನ್ನು ಹೊರುತ್ತಿವೆ. ಯುಜಿಸಿ, ರಾಜ್ಯ ಸರ್ಕಾರಗಳು, ವೃತ್ತಿಪರ ಮಂಡಳಿಗಳು ಮತ್ತು ಸಚಿವಾಲಯಗಳು ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುತ್ತಿವೆ. ಇದು ನೇಮಕಾತಿ, ಶುಲ್ಕಗಳು, ಸಹಯೋಗಗಳು ಮತ್ತು ಪಠ್ಯಕ್ರಮದ ಮೇಲೆ ಪ್ರಭಾವ ಬೀರುತ್ತದೆ.

ಇತ್ತೀಚಿನ ವರ್ಷಗಳಲ್ಲಿ, ಭಾರತದ ಖಾಸಗಿ ವಿಶ್ವವಿದ್ಯಾಲಯಗಳು ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನಪಡೆಯಲು ಯತ್ನಿಸುತ್ತಿವೆ. ಅಶೋಕ ವಿಶ್ವವಿದ್ಯಾಲಯ, ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯ ಹಾಗೂ ಅಮೃತ ವಿಶ್ವ ವಿದ್ಯಾಪೀಠದಂತಹ ಸಂಸ್ಥೆಗಳು ಅಂತರರಾಷ್ಟ್ರೀಯ ದೃಷ್ಟಿಕೋನ, ಅಧ್ಯಾಪಕರ ವೈವಿಧ್ಯತೆ ಹಾಗೂ ಸಾಮಾಜಿಕ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿ ಬಲವಾದ ಕಾರ್ಯಕ್ಷಮತೆಯನ್ನು ತೋರುತ್ತಿವೆ. QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು ಮತ್ತು ಟೈಮ್ಸ್ ಉನ್ನತ ಶಿಕ್ಷಣ (THE) ಪಟ್ಟಿಗಳಲ್ಲಿ ಸ್ಥಾನ ಪಡೆಯಲು ಪ್ರಾರಂಭಿಸಿವೆ.

ಇಂತಹ ಖಾಸಗಿ ವಿಶ್ವವಿದ್ಯಾಲಯಗಳು ಪ್ರಸ್ತುತ ಟಾಪ್ 200ರ ಪಟ್ಟಿಯಿಂದ ಹೊರಗಿದ್ದರೂ, ಪಟ್ಟಿಯಲ್ಲಿ ಅವುಗಳ ಏರಿಕೆ ಗಮನಾರ್ಹವಾಗಿದೆ. ಅವುಗಳು ತ್ವರಿತ ನೇಮಕಾತಿ, ವಿದೇಶಿ ಅಧ್ಯಾಪಕರ ನೇಮಕಾತಿ, ಪಠ್ಯಕ್ರಮ ನವೀಕರಣಗಳು ಹಾಗೂ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆಗಳನ್ನು ಪಡೆಯುತ್ತಿವೆ. ಆದರೆ, ಕೇಂದ್ರ ಸರ್ಕಾರವು ಹೊರ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂಲಕ ವಿಶ್ವವಿದ್ಯಾಲಯಗಳ ಮೇಲೆ ತನ್ನ ನಿಯಂತ್ರಣವನ್ನು ಮತ್ತಷ್ಟು ಬಿಗಿ ಮಾಡಿಕೊಳ್ಳಲು ಯತ್ನಿಸುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...