ಅಂಬೇಡ್ಕರ್‌ಗೆ ಅವಮಾನ; ಮಂತ್ರಿ ವಿರುದ್ಧ ಸಿಡಿದೆದ್ದ ಮಹಿಳೆ ಮಾಧುರಿ ಜಾಧವ್!

Date:

ಭಾರತದ ಗಣರಾಜ್ಯೋತ್ಸವ ಎಂದರೆ ಸಂವಿಧಾನದ ಆಚರಣೆ. ಇದು ನಮ್ಮ ದೇಶದ ಅಡಿಪಾಯವನ್ನು ನಿರ್ಮಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಅವರ ಕನಸನ್ನು ನೆನಪಿಸುವ ದಿನ. ಅಂತಹ ದಿನದಂದು, ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಅಧಿಕೃತ ಸರ್ಕಾರಿ ಸಮಾರಂಭದಲ್ಲಿ, ಸಂವಿಧಾನದ ಶಿಲ್ಪಿಯನ್ನು ಸಂಪೂರ್ಣವಾಗಿ ಮರೆತುಬಿಡುವುದು ಸಾಮಾನ್ಯ ತಪ್ಪೇ? ಅಥವಾ ಅದು ಒಂದು ಮನಸ್ಥಿತಿಯ ಪ್ರತಿಬಿಂಬವೇ? ಈ ಪ್ರಶ್ನೆಯನ್ನೇ ವೇದಿಕೆಯಿಂದ ಕೇಳಿದವರು ಯಾವುದೇ ರಾಜಕೀಯ ನಾಯಕಿಯಲ್ಲ. ಯಾವುದೇ ಪಕ್ಷದ ಕಾರ್ಯಕರ್ತೆಯಲ್ಲ. ಅವರು ಅರಣ್ಯ ಇಲಾಖೆಯ ಸಾಮಾನ್ಯ ಮಹಿಳಾ ಉದ್ಯೋಗಿ – ಮಾಧುರಿ ಜಾಧವ್.

ಹೌದು, ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭ ಹಲವು ಪ್ರಶ್ನೆಗಳನ್ನ ಎತ್ತಿದೆ. ಅರಣ್ಯ ಇಲಾಖೆಯ ಮಹಿಳಾ ಉದ್ಯೋಗಿ ಮಾಧುರಿ ಜಾಧವ್ ಅವರು, ಸಚಿವ ಗಿರೀಶ್ ಮಹಾಜನ್ ಅವರ ಭಾಷಣದಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸದಿದ್ದಕ್ಕೆ ವೇದಿಕೆಯಲ್ಲೇ ಪ್ರತಿಭಟಿಸಿದರು. “ಜೈ ಅಂಬೇಡ್ಕರ್, ಜೈ ಭೀಮ್” ಎಂದು ಘೋಷಣೆ ಕೂಗಿ, ಸಮಾರಂಭದ ವಾತಾವರಣವನ್ನೇ ಬದಲಾಯಿಸಿದರು.  ಅಷ್ಟೇ. ಯಾವ ಹಲ್ಲೆ ಇಲ್ಲ. ಯಾವ ಅವಾಚ್ಯ ಮಾತು ಇಲ್ಲ. ಯಾವ ಗಲಾಟೆ ಇಲ್ಲ. ಆದ್ರೆ ಅಷ್ಟರಲ್ಲೇ ಇಡೀ ವ್ಯವಸ್ಥೆ ಗಾಬರಿಗೊಂಡಿತ್ತು. ಇದು ಕೇವಲ ಒಂದು ವೈಯಕ್ತಿಕ ಪ್ರತಿಭಟನೆಯಲ್ಲ, ಬದಲಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಮನೋಭಾವವನ್ನು ಬಯಲು ಮಾಡಿದ ಘಟನೆ.

ಮೊದಲು ಘಟನೆಯನ್ನು ನೋಡೋಣ. ಜನವರಿ 26, 2026ರಂದು ನಾಸಿಕ್‌ನ ಪೊಲೀಸ್ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿತ್ತು. ಗ್ರಾಮೀಣಾಭಿವೃದ್ಧಿ ಸಚಿವ ಗಿರೀಶ್ ಮಹಾಜನ್ ಅವರು ಭಾಷಣ ಮಾಡುತ್ತಿದ್ದರು. ಆದರೆ ಅವರ ಮಾತಿನಲ್ಲಿ ಸಂವಿಧಾನದ ಶಿಲ್ಪಿ ಡಾ. ಅಂಬೇಡ್ಕರ್ ಅವರ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಇದನ್ನು ಗಮನಿಸಿದ ಮಾಧುರಿ ಜಾಧವ್ ಅವರು ಸಹಿಸಲಾರದೆ, ವೇದಿಕೆಯಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು. “ಸಂವಿಧಾನ ನೀಡಿದ ವ್ಯಕ್ತಿಯ ಹೆಸರನ್ನು ಏಕೆ ಹೇಳಲಿಲ್ಲ? ಇದು ಗಂಭೀರ ತಪ್ಪು” ಎಂದು ಕೂಗಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಸುತ್ತಮುತ್ತಲಿನ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಆಶ್ಚರ್ಯಗೊಂಡರು, ಆದರೆ ಮಾಧುರಿ ಅವರು ತಮ್ಮ ನಿಲುವನ್ನು ಬದಲಾಯಿಸಲಿಲ್ಲ. ನಂತರ ಅವರು ಮಾಧ್ಯಮಗಳಿಗೆ ಹೇಳಿದ್ದು, “ನನ್ನನ್ನು ಅಮಾನತು ಮಾಡಬಹುದು, ಆದರೆ ನಾನು ಕ್ಷಮೆಯಾಚಿಸುವುದಿಲ್ಲ. ಬಾಬಾಸಾಹೇಬ್ ಅವರ ಇತಿಹಾಸವನ್ನು ಅಳಿಸಲು ಬಿಡುವುದಿಲ್ಲ.” ಅಂತ. ಇದು ಅಹಂಕಾರ ಅಲ್ಲ. ಇದು ಸ್ವಾಭಿಮಾನ. ಇದು ಸಂವಿಧಾನಪರ ಗಟ್ಟಿ ನಿಲುವು.  

photo 6330115477832666400 m

ಇವತ್ತು ಬಿಜೆಪಿ ನಾಯಕರು ವೇದಿಕೆಯಲ್ಲಿ ಅಂಬೇಡ್ಕರ್ ಫೋಟೋ ಇಡುತ್ತಾರೆ. ಮಾಲೆ ಹಾಕುತ್ತಾರೆ. ಆದ್ರೆ ಅಂಬೇಡ್ಕರ್ ವಿಚಾರಧಾರೆಗೆ ಗೌರವ ಕೊಡ್ತಾರಾ? ಅಂಬೇಡ್ಕರ್ ಎಂದರೆ ಸಮಾನತೆ, ಜಾತಿ ವಿರೋಧ, ವೈಜ್ಞಾನಿಕ ಚಿಂತನೆ, ಪ್ರಜಾಪ್ರಭುತ್ವದ ಮೌಲ್ಯಗಳು ಇವುಗಳೆಲ್ಲಾ ಆರ್‌ಎಸ್‌ಎಸ್ ಮನಸ್ಥಿತಿಗೆ ವಿರೋಧಿ. ಅಂಬೇಡ್ಕರ್‌ರ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ಕೊಡುತ್ತದೆ. ಶೂದ್ರ, ದಲಿತ, ಮಹಿಳೆ, ಅಲ್ಪಸಂಖ್ಯಾತರನ್ನು ರಕ್ಷಿಸುತ್ತದೆ.

ಆದ್ರೆ ಆರ್‌ಎಸ್‌ಎಸ್ ಕನಸು ಏನು? ಮನುಸ್ಮೃತಿಯ ಆಧಾರಿತ ಸಮಾಜ. “ಎಲ್ಲರೂ ಸಮಾನ ಅಲ್ಲ” ಅನ್ನೋ ಧೋರಣೆ. ಇದಕ್ಕೇ ಸಂವಿಧಾನ ಕೆಲವರಿಗೆ ಅಸಹ್ಯ. ಅಂಬೇಡ್ಕರ್ ಹೆಸರು ಕೆಲವರಿಗೆ ತಲೆನೋವು.  ಸಂವಿಧಾನ ರಚಿಸಿದ ಅಂಬೇಡ್ಕರ್ ಹೆಸರು ಹೇಳೋಕೆ ಕೆಲವರಿಗೆ ಗಂಟಲು ಕಟ್ಟುತ್ತದೆ.

photo 6330115477832666398 y

ಒಬ್ಬ ಸರ್ಕಾರಿ ಉದ್ಯೋಗಿ, ಅದೂ ಮಹಿಳೆಯಾಗಿ, ಸಚಿವರ ಮುಂದೆಯೇ ಪ್ರತಿಭಟಿಸುವುದು ಸುಲಭವಲ್ಲ. ಅವರು ತಮ್ಮ ಉದ್ಯೋಗಕ್ಕೆ ಬೆದರದೆ, ಸತ್ಯವನ್ನು ಹೇಳಿದರು. ಅವರ ಪ್ರತಿಭಟನೆಯ ನಂತರ ಸಚಿವರು ನಂತರ ಕ್ಷಮೆಯಾಚಿಸಿದ್ದಾರೆ, ಆದರೆ ಅದು ತಪ್ಪನ್ನು ಸರಿಪಡಿಸುವುದಿಲ್ಲ. ಇದು ಕೇವಲ ಒಂದು ಉದಾಹರಣೆ ಮಾತ್ರ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ದೀರ್ಘಕಾಲದ ಮನೋಭಾವವನ್ನು ತೋರಿಸುತ್ತದೆ.

ಬಿಜೆಪಿ ಮತ್ತು ಅದರ ಮಾತೃ  ಸಂಘಟನೆ ಅಂತ ಕರೆಸಿಕೊಳ್ಳುವ ಆರ್‌ಎಸ್‌ಎಸ್, ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಕೀಳಾಗಿ ಕಾಣುತ್ತದೆ ಎಂಬ ಆರೋಪಗಳು ಹೊಸದಲ್ಲ. ಆರ್‌ಎಸ್‌ಎಸ್ ನಾಯಕರು ಹಲವು ಬಾರಿ ಸಂವಿಧಾನದ ಕೆಲವು ಭಾಗಗಳನ್ನು ಬದಲಾಯಿಸುವಂತೆ ಹೇಳಿದ್ದಾರೆ. ಉದಾಹರಣೆಗೆ, 2025ರಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಳೆ ಅವರು ಸಂವಿಧಾನದ ಮುನ್ನುಡಿಯಲ್ಲಿ ‘ಸಮಾಜವಾದಿ’ ಮತ್ತು ‘ಧರ್ಮನಿರಪೇಕ್ಷ’ ಶಬ್ದಗಳನ್ನು ಪರಿಶೀಲಿಸುವಂತೆ ಹೇಳಿದ್ದರು. ಇದಕ್ಕೆ ವಿರೋಧಪಕ್ಷಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದವು, ಆರ್‌ಎಸ್‌ಎಸ್ ಅಂಬೇಡ್ಕರ್ ಅವರ ಸಂವಿಧಾನವನ್ನು ಸ್ವೀಕರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಆರ್‌ಎಸ್‌ಎಸ್‌ಗೆ ಮನುಸ್ಮೃತಿಯೇ ಸಂವಿಧಾನವಾಗಬೇಕು ಎಂಬ ಆಶಯವಿದೆ ಎಂಬುದು ಹಲವು ವಿಮರ್ಶಕರ ಅಭಿಪ್ರಾಯ. ಮನುಸ್ಮೃತಿ ಎಂದರೆ ಪ್ರಾಚೀನ ಹಿಂದೂ ಗ್ರಂಥ, ಅದರಲ್ಲಿ ವರ್ಣವ್ಯವಸ್ಥೆ ಮತ್ತು ಅಸಮಾನತೆಯನ್ನು ಬೆಂಬಲಿಸಲಾಗಿದೆ. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟು ಹಾಕಿ, ಸಮಾನತೆಯ ಸಂವಿಧಾನವನ್ನು ನೀಡಿದರು. ಆದರೆ ಆರ್‌ಎಸ್‌ಎಸ್ ನಾಯಕರು ಹಲವು ಬಾರಿ ಮನುಸ್ಮೃತಿಯನ್ನು ಹೊಗಳಿದ್ದಾರೆ ಮತ್ತು ಸಂವಿಧಾನವನ್ನು ಬದಲಾಯಿಸುವಂತೆ ಹೇಳಿದ್ದಾರೆ. ಉದಾಹರಣೆಗೆ, ಆರ್‌ಎಸ್‌ಎಸ್‌ನ ಹಳೆಯ ನಾಯಕರು ಸಂವಿಧಾನವನ್ನು ಮನುಸ್ಮೃತಿಯ ಆಧಾರದಲ್ಲಿ ಬರೆಯಬೇಕಿತ್ತು ಎಂದು ಹೇಳಿದ್ದರು.

photo 6330115477832666399 y

ಬಿಜೆಪಿ ಸರ್ಕಾರದಲ್ಲಿ ಇದು ಪ್ರತಿಫಲಿಸುತ್ತದೆ. ಅಂಬೇಡ್ಕರ್ ಅವರನ್ನು ಉಲ್ಲೇಖಿಸದಿರುವುದು, ಸಂವಿಧಾನದ ಮೌಲ್ಯಗಳನ್ನು ದುರ್ಬಲಗೊಳಿಸುವ ನೀತಿಗಳು. 

ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಅಂಬೇಡ್ಕರ್ ಅವರನ್ನು ‘ಹೈಜಾಕ್’ ಮಾಡುವ ಪ್ರಯತ್ನ ನಡೆದಿದೆ. ಅಂಬೇಡ್ಕರ್‌ ಹೆಸರನ್ನು ಬಳಸಿ ರಾಜಕೀಯ ಮಾಡುತ್ತಾರೆ, ಆದರೆ ಅವರ ತತ್ವಗಳನ್ನು ಪಾಲಿಸುವುದಿಲ್ಲ. ನಾಸಿಕ್ ಘಟನೆಯಲ್ಲಿ ಸಚಿವರು ಅಂಬೇಡ್ಕರ್ ಹೆಸರನ್ನು ಮರೆತಿದ್ದು  ಇದಕ್ಕೆ ಉದಾಹರಣೆ. ಆರ್‌ಎಸ್‌ಎಸ್‌ನ ಇತಿಹಾಸ ನೋಡಿದರೆ, ಅವರು ಸಂವಿಧಾನದ ವಿರೋಧಿಗಳು. ಅವರಿಗೆ ವರ್ಣಾಶ್ರಮ ಧರ್ಮದ ಆಧಾರದ ಸಮಾಜ ಬೇಕು, ಸಮಾನತೆಯ ಸಂವಿಧಾನವಲ್ಲ. 

ಸಂವಿಧಾನದ ಮೌಲ್ಯಗಳು – ಸಮಾನತೆ, ನ್ಯಾಯ, ಸ್ವಾತಂತ್ರ್ಯ – ಅಪಾಯದಲ್ಲಿವೆ. ಗಣರಾಜ್ಯೋತ್ಸವದ ದಿನ ಅಂಬೇಡ್ಕರ್ ಹೆಸರು ಕೇಳಿದರೆ ಸಮಾರಂಭದ ವಾತಾವರಣ“ಬಿಸಿಯಾಗುತ್ತದೆ” ಅಂದ್ರೆ, ಸಮಸ್ಯೆ “ಜೈ ಭೀಮ್”ನಲ್ಲಿ ಇದೆಯಾ?
ಅಥವಾ ಸಮಸ್ಯೆ ಅಂಬೇಡ್ಕರ್ ವಿಚಾರಧಾರೆಯಲ್ಲೇ ಇದೆಯಾ? ಈ ದೇಶ ಉಳಿಯಬೇಕು ಅಂದ್ರೆ, ಸಂವಿಧಾನ ಉಳಿಯಬೇಕು. ಸಂವಿಧಾನ ಉಳಿಯಬೇಕು ಅಂದ್ರೆ, ಮಾಧುರಿ ಜಾಧವ್ ಅಂತಹವರ ಧೈರ್ಯ ಹೆಚ್ಚಬೇಕು.  ಬಿಜೆಪಿ-ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಆಶಯಗಳನ್ನು ಎದುರಿಸಿ, ಅಂಬೇಡ್ಕರ್ ಅವರ ಕನಸನ್ನು ಜೀವಂತವಾಗಿಡೋಣ. ಜೈ ಭೀಮ್! ಜೈ ಹಿಂದ್!

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...