2026–27ರಲ್ಲಿ ಸಾಲದ ಬಡ್ಡಿಯೇ ₹15 ಲಕ್ಷ ಕೋಟಿ! ಭಾವನಾತ್ಮಕ ಮಾತುಗಳಿಂದ ಮುಚ್ಚಿಡಲು ಸಾಧ್ಯವಿಲ್ಲದ ವಾಸ್ತವ

Date:

ಒಂದು ಹಂತದ ನಂತರ ಸಾಲವು ಅಭಿವೃದ್ಧಿಯ ಸಾಧನವಾಗದೆ, ವ್ಯವಸ್ಥೆಯ ಮೇಲೆ ಭಾರವಾಗಿ ತೂಗಿದಾಗ ಆರ್ಥಸ್ಥಿತಿ ಸದ್ದಿಲ್ಲದೆ ಕುಸಿಯತೊಡಗುತ್ತದೆ. ಅಂದ ಹಾಗೆ ಹೋಲಿಕೆ ಮಾಡಿ ಹೇಳುವುದೇ ಆದರೆ ಕೇಂದ್ರದ ಸಾಲದ ಬಡ್ಡಿಯ ಮೊತ್ತ ಮತ್ತು ದಕ್ಷಿಣದ ರಾಜ್ಯಗಳ ವಾರ್ಷಿಕ ಬಜೆಟ್ ಗಳ ಒಟ್ಟು ಗಾತ್ರ ಹೆಚ್ಚುಕಡಿಮೆ ಒಂದೇ ಆಗಿದೆ. ಕರ್ನಾಟಕ ತೆಲಂಗಾಣ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳ ಬಜೆಟ್ ಗಳ ಒಟ್ಟು ಗಾತ್ರ ಸುಮಾರು ₹17 ಲಕ್ಷ ಕೋಟಿ.

ಸಾಲ ಮಾಡುವುದು ಸರ್ಕಾರಗಳ ತಪ್ಪಲ್ಲ. ಸಾಲವಿಲ್ಲದೆ ಸರ್ಕಾರಗಳು ನಡೆಯುವುದಿಲ್ಲ. ಜನರ ಬದುಕು ಸುಧಾರಿಸಲು, ಉದ್ಯೋಗ ಸೃಷ್ಟಿಸಲು, ಮೂಲಭೂತ ಸೌಕರ್ಯ ನಿರ್ಮಿಸಲು ಬಳಸಿದ ಸಾಲ ಸಮಸ್ಯೆಯಲ್ಲ. ಆದರೆ ಒಂದು ಹಂತದ ನಂತರ ಆ ಸಾಲವೇ ಅಭಿವೃದ್ಧಿಯ ಸಾಧನವಾಗದೇ, ವ್ಯವಸ್ಥೆಯ ಮೇಲೆ ಭಾರವಾಗಿ ಕುಳಿತಾಗ ಆರ್ಥಿಕತೆ ಮೌನವಾಗಿ ಕುಸಿಯತೊಡಗುತ್ತದೆ.

ಇವತ್ತು ಭಾರತದ ಕೇಂದ್ರ ಸರ್ಕಾರದ ಒಟ್ಟು ಸಾಲ ಸುಮಾರು 155 ರಿಂದ 160 ಲಕ್ಷ ಕೋಟಿ ರೂಪಾಯಿ. ಇದನ್ನು ಅರ್ಥಮಾಡಿಕೊಳ್ಳಲು ಅರ್ಥಶಾಸ್ತ್ರದ ಪದವಿ ಬೇಕಿಲ್ಲ. ಅಂಕಿ ಗೊತ್ತಿಲ್ಲದವನಿಗೂ “ಇದು ದೊಡ್ಡದೇ” ಅನ್ನಿಸುವಷ್ಟು ಭಾರೀ ಸಂಖ್ಯೆ. ಈ ಭಾರ ಕಾಗದದ ಲೆಕ್ಕದಲ್ಲಿ ಮಾತ್ರ ಇಲ್ಲ. ಅದು ನಿಧಾನವಾಗಿ ಜನರ ಬದುಕಿನೊಳಗೂ ಇಳಿಯತೊಡಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಲ್ಲಿ ಒಂದು ಸಹಜ ಪ್ರಶ್ನೆ ಹುಟ್ಟುತ್ತದೆ. ಈ ಮೊದಲು ಎಷ್ಟು ಇತ್ತು, ಈ ಸಾಲ ಯಾವ ಹಂತದಲ್ಲಿ ಇಷ್ಟಾಗಿ ಬೆಳೆಯಿತು? ಈ ಪ್ರಶ್ನೆಗೆ ಉತ್ತರ ಇಲ್ಲದಿದ್ದರೆ ಇವತ್ತಿನ ಆತಂಕದ ಗಂಭೀರತೆ ಅರ್ಥವಾಗುವುದಿಲ್ಲ. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇಂದ್ರ ಸರ್ಕಾರದ ಒಟ್ಟು ಬಾಕಿ ಸುಮಾರು 55 ರಿಂದ 60 ಲಕ್ಷ ಕೋಟಿ ರೂಪಾಯಿ ಇತ್ತು. ಕಳೆದ ಹತ್ತು ವರ್ಷಗಳಲ್ಲಿ ಈ ಮೊತ್ತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇದು ರಾಜಕೀಯ ಆರೋಪವಲ್ಲ. ಸಂಖ್ಯೆಗಳೇ ಹೇಳುತ್ತಿರುವ ಸತ್ಯ.

ಇದಕ್ಕೆ ತಕ್ಷಣ ಒಂದು ಪ್ರತಿವಾದ ಕೇಳಿಸುತ್ತದೆ. ದೇಶವೂ ಬೆಳೆದಿದೆ ಅಲ್ವಾ ಎಂದು. ಹೌದು, ಆದರೆ ಅದಕ್ಕಾಗಿ ಆರ್ಥಿಕ ತಜ್ಞರು ಮತ್ತೊಂದು ಲೆಕ್ಕವನ್ನೂ ನೋಡುತ್ತಾರೆ. ಅದು ಸಾಲ ಮತ್ತು ಜಿಡಿಪಿಯ ನಡುವಿನ ಸಂಬಂಧ. 2014ರಲ್ಲಿ ಭಾರತದ ಸಾಲ ಜಿಡಿಪಿಯ ಸುಮಾರು 52 ಶೇಕಡಾ ಇತ್ತು. ಇವತ್ತು ಅದು 57 ರಿಂದ 58 ಶೇಕಡಾ ನಡುವಿನಲ್ಲಿದೆ. ಕೋವಿಡ್ ಸಮಯದಲ್ಲಿ ಅದು ಇನ್ನೂ ಏರಿತ್ತು. ನಂತರ ಸ್ವಲ್ಪ ಇಳಿದಿದೆ. ಆದರೆ 2014ರ ಮಟ್ಟಕ್ಕೆ ಮರಳಿಲ್ಲ. ಅಂದರೆ ದೇಶ ಬೆಳೆದಂತೆ ಹೊರೆ ಕಡಿಮೆಯಾಗಿಲ್ಲ.

ಒಂದು ವಿಷಯ ಸ್ಪಷ್ಟ. ಜನರನ್ನು ನಂಬಿಸಿದಂತೆ, ‘ವಾಟ್ಸಪ್ ಯುನಿವರ್ಸಿಟಿಯ ಪ್ರೊಫೆಸರ್‌ಗಳು’ ಹೇಳುವಂತೆ ಹಿಂದಿನ ಸರಕಾರದ ಸಾಲ ತೀರಿಸಿದ್ದಲ್ಲ. ಅದು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ವಾಸ್ತವವನ್ನು ಭಾವನಾತ್ಮಕ ವಿಚಾರಗಳಿಂದ ಮುಚ್ಚಿಡಲು ಸಾಧ್ಯವಿಲ್ಲ.

ವಿಷಯ ಇನ್ನಷ್ಟು ಗಂಭೀರವಾಗೋದು ಅದರ ಬಡ್ಡಿ ಕಟ್ಟುವಾಗ. 2024–25ರಲ್ಲಿ ಕೇಂದ್ರ ಸರ್ಕಾರ ಸಾಲದ ಬಡ್ಡಿ ಪಾವತಿಗೆ ಮಾತ್ರ 14.04 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಮೊತ್ತ ಹೊಸ ಶಾಲೆಗೆ ಹೋಗುವುದಿಲ್ಲ. ಹೊಸ ಆಸ್ಪತ್ರೆ ನಿರ್ಮಾಣಕ್ಕೂ ಬಳಕೆಯಾಗುವುದಿಲ್ಲ. ಹೊಸ ಉದ್ಯೋಗ ಸೃಷ್ಟಿಗೂ ಉಪಯೋಗವಾಗುವುದಿಲ್ಲ. ಸಂಪೂರ್ಣವಾಗಿ ಹಿಂದಿನ ಸಾಲದ ಬಡ್ಡಿಗೆ ಮಾತ್ರ ಹರಿಯುವ ಹಣ ಇದು. ದೇಶ ಇಂದು ದುಡಿಯುವ ದೊಡ್ಡ ಮೊತ್ತದ ಸಂಪತ್ತು, ನಾಳೆಯ ಅಭಿವೃದ್ಧಿಗೆ ಅಲ್ಲ, ನಿನ್ನೆ ಮಾಡಿಕೊಂಡ ಬಾಕಿಯ ಬೆಲೆಯನ್ನು ತೀರಿಸಲು ಹೋಗುತ್ತಿದೆ!

ಮುಂದೆ ಏನು?

2026–27ರ ನಿಖರ ಅಂಕಿಅಂಶಗಳು ಇನ್ನೂ ಪ್ರಕಟವಾಗಿಲ್ಲ. ಸರ್ಕಾರವೂ ಅದನ್ನು ಈಗಲೇ ಹೇಳುವುದಿಲ್ಲ. ಆದರೆ 2024–25ರ ಈ ಅಂಕಿಯನ್ನು ನೋಡಿದರೆ ಮುಂದಿನ ದಿಕ್ಕು ಅರ್ಥವಾಗುತ್ತದೆ. ಬಾಕಿ ಕಡಿಮೆಯಾಗದ ಸ್ಥಿತಿಯಲ್ಲಿ ಬಡ್ಡಿ ಪಾವತಿ ಪ್ರತೀ ವರ್ಷ ಹೆಚ್ಚಾಗುವುದು ಸಹಜ. ಇದೇ ರೀತಿ ಮುಂದುವರಿದರೆ 2026–27ರಲ್ಲಿ ಸಾಲದ ಬಡ್ಡಿ ಪಾವತಿ 15 ಲಕ್ಷ ಕೋಟಿ ರೂಪಾಯಿಗೂ ಮೀರಬಹುದು ಅನ್ನುವ ಅಂದಾಜನ್ನು ಆರ್ಥಿಕ ತಜ್ಞರು ತಳ್ಳಿಹಾಕುತ್ತಿಲ್ಲ.

ಈ ಹಂತದಲ್ಲಿ ಸಾಲ ಅಭಿವೃದ್ಧಿಯ ಸಾಧನವಾಗಿರುವುದಿಲ್ಲ. ಅದು ವ್ಯವಸ್ಥೆಯ ಮೇಲೆ ಮೌನವಾಗಿ ಕುಳಿತ ಭಾರವಾಗುತ್ತದೆ. ಬಡ್ಡಿಗೆ ಹೋಗುವ ಹಣ ಹೆಚ್ಚಾದಂತೆ ಶಿಕ್ಷಣ, ಆರೋಗ್ಯ, ಪೋಷಣೆ, ಉದ್ಯೋಗ ಸೃಷ್ಟಿಯಂತಹ ಕ್ಷೇತ್ರಗಳಿಗೆ ಲಭ್ಯವಾಗುವ ಸಂಪನ್ಮೂಲಗಳು ಕುಗ್ಗುತ್ತವೆ. ಇದರ ಪರಿಣಾಮ ತಕ್ಷಣ ಬೀದಿಯಲ್ಲಿ, ನಗರಗಳಲ್ಲಿ ಕಾಣಿಸುವುದಿಲ್ಲ. ಆದರೆ ಕೆಲ ವರ್ಷಗಳ ನಂತರ ಅದು ಸಮಾಜದ ತಳಹದಿಯನ್ನು ದುರ್ಬಲಗೊಳಿಸುತ್ತದೆ.

ಇದನ್ನೂ ಓದಿ ʼಈ ದಿನʼ ಸಮೀಕ್ಷೆ | ‘ಗ್ಯಾರಂಟಿ ಯೋಜನೆ’ಗಳಿಗೆ ಜೈ; ವಿಪಕ್ಷವಾಗಿ ಬಿಜೆಪಿ ವಿಫಲ ಎಂದ ಜನ!

ವಿಷಯದ ಗಂಭೀರತೆ ಇಷ್ಟಿದ್ದರೂ, ಆರ್ಥಿಕ ಪ್ರಶ್ನೆಗಳಿಗೆ ಉತ್ತರ ನೀಡುವ ಹಾಗೂ ಪರಿಹಾರ ಹುಡುಕುವ ಬದಲು, ಗಮನವನ್ನು ಬೇರೆ ದಿಕ್ಕಿಗೆ ತಿರುಗಿಸುವ ಪ್ರಯತ್ನ ನಡೆಯುತ್ತಿದೆ. ದೇಶದೊಳಗಿನ ಒಂದು ಸಮುದಾಯದ ವಿರುದ್ಧ ಸುಳ್ಳುಗಳನ್ನು ಸೃಷ್ಟಿಸುವುದು, ಶೋಷಿತ ಜಾತಿ ಸಮುದಾಯಗಳ ವಿರುದ್ಧ ಅಸಹನೆ ಬೆಳೆಸುವುದು, ಭಾವನಾತ್ಮಕ ಸಂಘರ್ಷಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವುದು ಕಾಣುತ್ತಿದೆ. ಇಂಥ ತಂತ್ರಗಳಿಂದ ಕೆಲ ಕಾಲ ಆಡಳಿತ ನಡೆಸಬಹುದು. ಆದರೆ ದೇಶವನ್ನು ದೀರ್ಘಕಾಲ ನಿಭಾಯಿಸಲು ಸಾಧ್ಯವಿಲ್ಲ. ಏಕೆಂದರೆ ಅಂಕಿಅಂಶಗಳನ್ನು ಎಷ್ಟು ಮರೆಮಾಚಿದರೂ, ಬದುಕು ಒಂದಲ್ಲೊಂದು ದಿನ ಅವುಗಳನ್ನು ಎದುರಿಗೇ ತಂದು ನಿಲ್ಲಿಸುತ್ತದೆ.

WhatsApp Image 2026 02 03 at 2.27.16 PM
ಪಿಎಂ ಇಕ್ಬಾಲ್, ಕೈರಂಗಳ
+ posts

ಹವ್ಯಾಸಿ ಲೇಖಕರು, ಪತ್ರಕರ್ತರು, ಮಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಪಿಎಂ ಇಕ್ಬಾಲ್, ಕೈರಂಗಳ
ಪಿಎಂ ಇಕ್ಬಾಲ್, ಕೈರಂಗಳ
ಹವ್ಯಾಸಿ ಲೇಖಕರು, ಪತ್ರಕರ್ತರು, ಮಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...