ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?

Date:

"ನಾವು ಇರಾನ್‌ನ ಇಡೀ ಕ್ಷಿಪಣಿ ವ್ಯವಸ್ಥೆಯನ್ನು (Missile Arsenal) ಧ್ವಂಸಗೊಳಿಸಿದ್ದೇವೆ. ಈಗ ಅವರ ಬಳಿ ಅಮೆರಿಕ ಅಥವಾ ಇಸ್ರೇಲ್ ಮೇಲೆ ದಾಳಿ ಮಾಡಲು ಒಂದು ಸಣ್ಣ ಪಟಾಕಿಯೂ ಬಾಕಿ ಉಳಿದಿಲ್ಲ" ಎಂದು ಟ್ರಂಪ್ ಹೇಳಿದ್ದರು. ಆದರೆ ವಾಸ್ತವದಲ್ಲಿ ಇರಾನ್ ಇನ್ನೂ ಕನಿಷ್ಠ 2,000 ರಿಂದ 3,000 ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಹೊಂದಿದೆ.

ಇರಾನ್ ಪರಮಾಣು ಅಸ್ತ್ರವನ್ನು ತಯಾರಿಸುವ ಹಂತಕ್ಕೆ ತಲುಪಿದೆ ಎಂದು ದೂರಿಕೊಂಡೇ ಅಮೆರಿಕ ಮೊದಲು ಇರಾನ್ ಜತೆ ಅಣು ಒಪ್ಪಂದಕ್ಕೆ ಮುಂದಾಯಿತು. ಆದರೆ ತೈಲದ ಮೇಲೆ ಕಣ್ಣಿಟ್ಟಿರುವ ಅಮೆರಿಕ ಅಣು ಒಪ್ಪಂದದ ಮಾತುಕತೆ ನಡೆಯುತ್ತಿರುವಾಗಲೇ ಇರಾನ್ ಮೇಲೆ ದಾಳಿ ನಡೆಸಿದೆ. ಓಮನ್ ವಿದೇಶಾಂಗ ಸಚಿವ ಬದ್ರ್ ಅಲ್-ಬುಸೈದಿ ಅವರೂ ಇದನ್ನು ಖಚಿತಪಡಿಸಿದ್ದಾರೆ ಮತ್ತು ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ದಾಳಿಗೆ ಈಗ ಇರಾನ್ ಕೂಡಾ ಪ್ರತಿರೋಧ ಒಡುತ್ತಿದೆ, ದಾಳಿ ಪ್ರತಿದಾಳಿ ಮುಂದುವರೆದಿದೆ. ಇವೆಲ್ಲವೂ ಇಡೀ ವಿಶ್ವದ ಆರ್ಥಿಕತೆಗೆ ಪ್ರಭಾವ ಬೀರುತ್ತಿದೆ.

ಸದ್ಯ ಯುದ್ಧದಲ್ಲಿ ಇರಾನ್ ಮೇಲಗೈ ಸಾಧಿಸುತ್ತಿದೆಯೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆಯುತ್ತಿದೆ. ಇದನ್ನು ತಿಳಿಯಬೇಕಾದರೆ ನಾವು ಮೊದಲು ಈ ಯುದ್ಧ ಆರಂಭವಾದಾಗಿನಿಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಹೇಳಿದ್ದಾರೆ ಮತ್ತು ಅವೆಲ್ಲವೂ ನಿಜವೇ? ವಾಸ್ತವೇನು ಎಂಬುದನ್ನು ತಿಳಿಯೋಣ.

ಇದನ್ನು ಓದಿದ್ದೀರಾ? ಇರಾನ್‌ನ ಮಿತ್ರರು ಯಾರು? ರಷ್ಯಾ-ಚೀನಾ ನಿಲುವೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡಲೆಂದೇ ಈ ದಾಳಿ ಎಂಬುದನ್ನು ಟ್ರಂಪ್ ಬಹಿರಂಗವಾಗಿಯೇ ಹೇಳಿದ್ದರು. “ಇದು ಕೇವಲ ದಾಳಿಯಲ್ಲ, ಇದು ವಿಮೋಚನೆ” ಎಂದು ಹೇಳಿಕೊಂಡಿದ್ದರು. ಆದರೆ ವಾಸ್ತವದಲ್ಲಿ ನಡೆದಿದ್ದು ಬೇರೆಯೇ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತರಾದ ಸುದ್ದಿ ತಿಳಿಸುತ್ತಾ ಇಡೀ ಇರಾನ್ ಆಡಳಿತ ಕುಸಿದು ಬೀಳುತ್ತದೆ ಎಂದು ಹೇಳಿದ್ದರು. ಆದರೆ ವಾಸ್ತವದಲ್ಲಿ ನಡೆದಿದ್ದೇ ಬೇರೆ. ಇರಾನ್ ಸರ್ಕಾರ ಪತನವೇ ಆಗಿಲ್ಲ. ಅಲ್ಲಿ ಹೊಸ ಸರ್ಕಾರ ರಚನೆಯಾಯಿತು.

ಮಾರ್ಚ್ ಮೊದಲ ವಾರದಲ್ಲಿ ಟ್ರಂಪ್ ಅವರು ನಾವು ಇರಾನ್‌ನ 9 ಪ್ರಮುಖ ಹಡಗುಗಳನ್ನು ಸಮುದ್ರದ ತಳಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದ್ದರು. ಅದಾದ ಬಳಿಕ 46 ಹಡುಗಳನ್ನು ನಾಶಪಡಿಸಿದ್ದಾಗಿ ಹೇಳಿದರು. ಅಷ್ಟು ಮಾತ್ರವಲ್ಲದೆ “ನಾನು ಅಧಿಕಾರಿಗಳಿಗೆ ಕೇಳಿದೆ, ನಾವು ಆ ಹಡಗುಗಳನ್ನು ವಶಪಡಿಸಿಕೊಳ್ಳಬಹುದಿತ್ತಲ್ಲವೇ? ಅದಕ್ಕೆ ಅವರು ಹಡಗುಗಳನ್ನು ವಶಪಡಿಸಿಕೊಳ್ಳುವುದಕ್ಕಿಂತ ಅವುಗಳನ್ನು ಮುಳುಗಿಸುವುದೇ ಹೆಚ್ಚು ಮಜಾ ಕೊಡುತ್ತದೆ ಎಂದು ಹೇಳಿದ್ದರು” ಎಂಬ ಹೇಳಿಕೆಯನ್ನೂ ಟ್ರಂಪ್ ನೀಡಿದ್ದಾರೆ. ಈ ಬೋಟ್‌ಗಳಲ್ಲಿ ಭಾರತದ್ದು ಸೇರಿದೆ. ಆದರೆ ಇದರಿಂದ ಟ್ರಂಪ್‌ಗೆ ಆದ ಪ್ರಯೋಜನವೇನು?

ಅದಾದ ಬಳಿಕ “ನಾವು ಇರಾನ್‌ನ ಇಡೀ ಕ್ಷಿಪಣಿ ವ್ಯವಸ್ಥೆಯನ್ನು (Missile Arsenal) ಧ್ವಂಸಗೊಳಿಸಿದ್ದೇವೆ. ಈಗ ಅವರ ಬಳಿ ಅಮೆರಿಕ ಅಥವಾ ಇಸ್ರೇಲ್ ಮೇಲೆ ದಾಳಿ ಮಾಡಲು ಒಂದು ಸಣ್ಣ ಪಟಾಕಿಯೂ ಬಾಕಿ ಉಳಿದಿಲ್ಲ. ಅವರ ರೇಡಾರ್‌ಗಳು ಕುರುಡಾಗಿವೆ ಮತ್ತು ಉಡಾವಣಾ ಕೇಂದ್ರಗಳು ಬೂದಿಯಾಗಿವೆ” ಎಂದು ಟ್ರಂಪ್ ಹೇಳಿದ್ದರು. ಆದರೆ ವಾಸ್ತವದಲ್ಲಿ ಇರಾನ್ ಇನ್ನೂ ಕನಿಷ್ಠ 2,000 ರಿಂದ 3,000 ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಹೊಂದಿದೆ.

ಟ್ರಂಪ್ ಈ ಹೇಳಿಕೆ ನೀಡಿದ 48 ಗಂಟೆಗಳ ಒಳಗೇ, ಇರಾನ್ ಜೋರ್ಡಾನ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಸುಮಾರು 15 ‘ಫತ್ತೆಹ್’ (Fattah) ಹೈಪರ್ಸಾನಿಕ್ ಕ್ಷಿಪಣಿಗಳನ್ನು ಉಡಾಯಿಸಿತು. ಇದು ಟ್ರಂಪ್ ಅವರ “ಸಂಪೂರ್ಣ ನಾಶ” ಎಂಬ ಹೇಳಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿತು.

ಅಮೆರಿಕ ಇರಾನ್‌ನ 1700 ನಾಗರಿಕರನ್ನು ಕೊಂದಿದೆ. ವಸತಿ ಕಟ್ಟಡಗಳ ಮೇಲೆ, ತೈಲ ಸಂಗ್ರಹ ಕೇಂದ್ರಗಳ ಮೇಲೆ ದಾಳಿ ನಡೆಸಿದೆ. ಮಿನಾಬ್ ನಗರದಲ್ಲಿರುವ ಶಜರೆ ತಯ್ಯೆಬಾ (Shajareh Tayyebeh) ಎಂಬ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ದಾಳಿ ನಡೆಸಿ ಕನಿಷ್ಠ 170 ರಿಂದ 180 ಮಂದಿಯನ್ನು ಕೊಂದಿದೆ. ಇದರಲ್ಲಿ ಹೆಚ್ಚಿನವರು 7 ರಿಂದ 12 ವರ್ಷದೊಳಗಿನ ಶಾಲಾ ಬಾಲಕಿಯರು. ದಾಳಿಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಕೃತ್ಯಕ್ಕೆ ಇರಾನ್ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದರು. ಆದರೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಸ್ವತಂತ್ರ ತನಿಖಾ ಸಂಸ್ಥೆಗಳ ವರದಿಗಳು ಈ ದಾಳಿಯು ಅಮೆರಿಕದಿಂದ ನಡೆದಿದೆ ಎಂಬುದಕ್ಕೆ ಪುರಾವೆಗಳನ್ನು ನೀಡಿದೆ. ಹೀಗೆ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ತಮ್ಮದೇ ಜಯ ಎಂಬಂತೆ ಪ್ರಚಾರವನ್ನು ಟ್ರಂಪ್ ಮಾಡುತ್ತಲೇ ಇದ್ದಾರೆ. ಆದರೆ ವಾಸ್ತವವೇ ಬೇರೆಯಾಗಿದೆ.

ಇದನ್ನು ಓದಿದ್ದೀರಾ? ಇರಾನ್-ಇಸ್ರೇಲ್ ಸಂಘರ್ಷದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಪಾತ್ರವೇನು?

ಅಮೆರಿಕದ ದಾಳಿಗೆ ಪ್ರತಿರೋಧ ಒಡ್ಡಿದ ಇರಾನ್ ಮೊದಲು ಪ್ರತಿದಾಳಿ ನಡೆಸಿದ್ದು ಮಧ್ಯಪ್ರಾಚ್ಯದ ಅಮೆರಿಕದ ಸೇನಾ ನೆಲೆಗಳ ಮೇಲೆ. ಇರಾನ್‌ನ ದಾಳಿ ಎಷ್ಟು ಪ್ರಬಲವಾಗಿತ್ತೆಂದರೆ ಅಮೆರಿಕದ ಸೇನಾ ನೆಲೆಗಳು ಇನ್ನು ಕಾರ್ಯಾಚರಣೆ ಮಾಡಲಾಗದ ಸ್ಥಿತಿಗೆ ತಲುಪಿದೆ. ಹಾಗೆಯೇ ಇರಾನ್ ಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ತೈಲ ಸಾಗಣೆಯನ್ನು ಮಾರ್ಚ್ 2ರಿಂದ ನಿರ್ಬಂಧಿಸಿದೆ.

ಅಮೆರಿಕ ತನ್ನ ಹಡಗುಗಳ ಮೇಲೆ ದಾಳಿ ನಡೆಸಿದ ಕಾರಣದಿಂದಾಗಿ ಇರಾನ್ ತೆಗೆದುಕೊಂಡ ಈ ಅನಿವಾರ್ಯ ನಿರ್ಧಾರವು ಇಡೀ ವಿಶ್ವದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದೆ. ಭಾರತದ 37 ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ. ಇತರೆ ಹಲವು ದೇಶಗಳ ಹಡಗೂ ಸಿಲುಕಿವೆ. ಇದರಿಂದಾಗಿ ಅಂತಾರಾಷ್ಟ್ರೀಯ ಜತೆಗೆ ತೈಲ ದರವೂ ಹೆಚ್ಚಾಗಿದೆ. ಬ್ರೆಂಟ್ ಕಚ್ಚಾ ತೈಲ ದರವು ಬ್ಯಾರೆಲ್‌ಗೆ ಸುಮಾರು $100 – $102 ಆಸುಪಾಸಿನಲ್ಲಿದೆ. ದೇಶದಲ್ಲಿ ಎಲ್‌ಪಿಜಿ ದರ ಏರಿಕೆಯಾಗಿದೆ.

ಇವೆಲ್ಲವುದರ ನಡುವೆ ಇರಾನ್ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಸಾಕಷ್ಟು ನಷ್ಟವಾಗಿದೆ, ಹಲವು ಸೈನಿಕರು ಸಾವನ್ನಪ್ಪಿದ್ದಾರೆ. ಆದರೆ ಇಲ್ಲಿ ಇರಾನ್ ಮುಂದೆ ತನ್ನ ಬಲ ಕ್ಷೀಣಿಸಿದಂತೆ ಕಾಣುತ್ತದೆ ಎಂಬ ಕಾರಣಕ್ಕೆ ಇಸ್ರೇಲ್‌ನಲ್ಲಿ ವರದಿ ಮಾಡುವುದನ್ನೇ ನಿರ್ಬಂಧಿಸಲಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕದ ಪ್ರಭಾವವೂ ಕುಸಿಯುತ್ತಿದೆ. ಆದರೆ ಇರಾನ್ ಮಾತ್ರ ಇನ್ನೂ ಆರು ತಿಂಗಳುಗಳ ಕಾಲ ಯುದ್ಧ ಮಾಡಲು ಸಿದ್ದವಾಗಿರುವುದಾಗಿ ಹೇಳಿದೆ. ದಾಳಿಯನ್ನು ಮುಂದುವರೆಸಿದೆ.

ಒಟ್ಟಿನಲ್ಲಿ ಉಕ್ರೇನ್ ಮತ್ತು ಇತರೆ ದೇಶಗಳಂತೆ ಕುಸಿದು ಹೋಗುವ ದೇಶ ಇರಾನ್ ಅಲ್ಲ. ಸರ್ವೋಚ್ಛ ನಾಯಕನ ಹತ್ಯೆಯಾದರೂ ಒಂದು ದೇಶ ಹೇಗೆ ಸದೃಢವಾಗಿ ನಿಲ್ಲಬಹುದು ಎಂಬುದನ್ನು ಇರಾನ್ ಸಾಬೀತುಪಡಿಸಿದೆ. ತೈಲ ಸರಬರಾಜಿಗೆ ಅವಕಾಶ ಮಾಡಿಕೊಡಿ ಎಂದು ಚೀನಾ, ಭಾರತ ಮೊದಲಾದ ದೇಶಗಳು ಇರಾನ್ ಮುಂದೆ ಬೇಡಿಕೊಳ್ಳಬೇಕಾದ ಸ್ಥಿತಿ ಸದ್ಯ ಅಮೆರಿಕದ ಯುದ್ಧಕೋರತನದಿಂದಾಗಿ ನಿರ್ಮಾಣವಾಗಿದೆ. ಹಿಂದೆದ್ದು ಅಮೆರಿಕಕ್ಕೆ ಈ ರೀತಿಯಾಗಿ ಯಾವುದೇ ದೇಶ ಪ್ರತಿರೋಧ ತೋರಿಲ್ಲ ಎಂಬುದು ನಿಜ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...