ಇರಾನ್ – ಇಸ್ರೇಲ್ ಯುದ್ಧ | ಭಾರತಕ್ಕೇನು ನಷ್ಟ?

Date:

ಇರಾನ್-ಇಸ್ರೇಲ್-ಅಮೆರಿಕ ನಡುವಿನ ಉದ್ವಿಗ್ನತೆ ಕೇವಲ ಮೂರು ದೇಶಗಳ ಸಮಸ್ಯೆಯಲ್ಲ. ಇದು ಜಾಗತಿಕ ಭದ್ರತೆ, ತೈಲ ಸರಬರಾಜು ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುವ ಪ್ರಮುಖ ಬೆಳವಣಿಗೆಯಾಗಿದೆ. ದೀರ್ಘಕಾಲದ ಇಸ್ರೇಲ್-ಇರಾನ್ ಸಂಘರ್ಷವು ಭಾರತದ ಸರಕು ಸಾಗಣೆ (ಆಮದು-ರಫ್ತು) ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ಜಗತ್ತಿನ ಹಲವು ದೇಶಗಳಿಗೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. 

ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಹಿನ್ನೆಲೆ, ಇರಾನ್ ಮೇಲೆ ಯುದ್ಧದಾಹಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸುತ್ತಿದ್ದು, ಟೆಹ್ರಾನ್ ಸೇರಿದಂತೆ ಇರಾನ್‌ನ ಹಲವಾರು ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದೆ. ಸದ್ಯ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆವರಿಸಿದೆ. ಇರಾನ್ ಮೇಲೆ ಗದಾಪ್ರಹಾರ ನಡೆಸುತ್ತಿರುವ ಅಮೆರಿಕ ವಿಶ್ವದ ಸರ್ವಾಧಿಕಾರಿ ಪಟ್ಟಕ್ಕೇರುವ ದುರಾಸೆಯಲ್ಲಿದೆ.

ಇರಾನಿನ 30ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ದೇಶದ ದಕ್ಷಿಣ ಭಾಗದ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯಲ್ಲಿ ದಾಳಿಗೆ ಕನಿಷ್ಠ 85 ಮಂದಿ ಸಾವನ್ನಪ್ಪಿದ್ದಾರೆ. ಇರಾನ್‌ನ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಹತ್ಯೆಯಾಗಿದ್ದಾರೆ. ಇರಾನ್ ಕೂಡ ಇಸ್ರೇಲ್ ರಾಜಧಾನಿ ಮತ್ತು ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ವಾಯನೆಲೆಗಳಿರುವ ಇರಾಕ್, ಇಸ್ರೇಲ್, ಕುವೈತ್, ಬಹ್ರೇನ್, ಕತಾರ್, ಯುಎಇಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ದಾಳಿ ನಡೆಸಿದೆ. ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್ ಮತ್ತು ಕುವೈತ್‌ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ.

ಯುದ್ಧದ ಭೀಕರತೆ ಹೆಚ್ಚಾಗಿರುತ್ತದೆ. ಇದರಿಂದ ಭಾರತ ದೇಶಕ್ಕೆ, ನಮ್ಮ ರೈತರಿಗೆ, ನಮಗೆ ಆಗುವ ಅನಾನುಕೂಲಗಳೇನು ಎಂಬುದರ ಅರಿವೇಯೇ ಇಲ್ಲದ ಭಾರತದ ಕೆಲವು ಜನರು ಸಂಭ್ರಮಿಸುತ್ತಿದ್ದಾರೆ. ನಾಲ್ಕೈದು ದಿನಗಳ ಈ ಯುದ್ಧ ದೇಶ – ದೇಶಗಳ ನಡುವೆ ನಡೆಯುವ ವ್ಯವಹಾರಗಳನ್ನ ಮುಂದಿನ ಎರಡು ಮೂರು ದಶಕಗಳ ಕಾಲ ಬಾದಿಸುತ್ತದೆ. ದಶಕಗಳಿಂದ ದೇಶ – ದೇಶಗಳು ಕಟ್ಟಿಕೊಂಡು ಬಂದಿರುವ ಆರ್ಥಿಕ ವ್ಯವಸ್ಥೆಯನ್ನು ನುಚ್ಚು ನೂರು ಮಾಡುತ್ತದೆ. ನಾಗರಿಕತೆಯನ್ನು ಅನಾಗರಿಕಗೊಳಿಸುತ್ತದೆ. ಇದಕ್ಕೆಲ್ಲ ಮೂಲ ಅಮೆರಿಕದ ಸಾಮ್ರಾಜ್ಯ ಶಾಹಿ ನಡವಳಿಕೆ. ಈ ಹೋರಾಟಗಳಲ್ಲಿ ನಾವು ಯಾವಾಗಲೂ ಸಾಮ್ರಾಜ್ಯಶಾಹಿ ತನದಿಂದ ತೊಂದರೆ ಅನುಭವಿಸುತ್ತಿರುವವ ಪರವಾಗಿ ನಿಲ್ಲಬೇಕು. ಈ ಸಾಮಾನ್ಯ ತಿಳುವಳಿಕೆ ನಮ್ಮಲ್ಲಿ ಇರಬೇಕು. ಈ ಸಂಘರ್ಷವು ಈಗಾಗಲೇ ಭಾರತದ ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರಲು ಆರಂಭಿಸಿದೆ ಎಂದು ವರದಿಗಳು ಹೇಳುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೌದು, ಈ ದಾಳಿಗಳು ಹತ್ತಿರದ ತೈಲ ಉತ್ಪಾದಕ ಗಲ್ಫ್ ಅರಬ್ ದೇಶಗಳನ್ನು ಆತಂಕಕ್ಕೆ ದೂಡಿದೆ. ದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ತೈಲ ಬೆಲೆಗಳು ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿವೆ. ದೇಶಗಳಲ್ಲಿ ಶಾಂತಿ ನೆಲೆಸಿದರೇ ಬೆಲೆಗಳು ಇಳಿಯಬಹುದು. ಇಲ್ಲವಾದರೇ ಬೆಲೆಗಳು ಹೆಚ್ಚಾಗಬಹುದು.

260228 iran girls school mb 1251

ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಜಾಗತಿಕವಾಗಿ ತೈಲ ಆಮದುದಾರರಲ್ಲಿ ಒಂದಾಗಿರುವ ಭಾರತ ವಾರ್ಷಿಕವಾಗಿ ಸುಮಾರು 2 ಬಿಲಿಯನ್ ಬ್ಯಾರೆಲ್ ತೈಲವನ್ನ ಆಮದು ಮಾಡಿಕೊಳ್ಳುತ್ತದೆ. ಇದರಿಂದ ತೈಲ ಬೆಲೆಯಲ್ಲಿ ಪ್ರತಿ 1 ಡಾಲರ್ ಏರಿಕೆಯಿಂದ ಆಮದು ಬಿಲ್ ವರ್ಷಕ್ಕೆ 2 ಬಿಲಿಯನ್ ಡಾಲರ್ ಹೆಚ್ಚಾಗಬಹುದು. ಹೆಚ್ಚಿನ ತೈಲ ಬೆಲೆ ಭಾರತಕ್ಕೆ ಅನಾನೂಕೂಲಕರ. ಇಷ್ಟೇ ಅಲ್ಲ, ತೈಲ ಪೂರೈಕೆ ಅಸ್ತವ್ಯಸ್ತವಾಗುವ ಭಯವೂ ಇದೆ.

ವಿಶ್ವದಲ್ಲಿ ಬಳಸುವ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗವಾಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ಹರಿವನ್ನು ಅಡ್ಡಿಪಡಿಸುವ ಅಪಾಯವೂ ಇದೆ. ಇದು ದೀರ್ಘಕಾಲದವರೆಗೂ ಮುಂದುವರೆದರೆ ಇನ್ನೂ ಅನಾನೂಕೂಲವಾಗಲಿದೆ. ಯುದ್ಧದ ಭೀತಿ ಹೆಚ್ಚಿದಂತೆ, ತೈಲ ಬೆಲೆಗಳು ವಾರದಲ್ಲಿ ಪ್ರತಿ ಬ್ಯಾರೆಲ್‌ಗೆ 72 ಡಾಲರ್‌ಗಿಂತ ಹೆಚ್ಚು ಏರಿಕೆಯಾಗಿದೆ. ಜಾಗತಿಕ ಆರ್ಥಿಕತೆಗೆ ಭಾರಿ ಪರಿಣಾಮ ಉಂಟಾಗುತ್ತದೆ.

ಹೀಗಿರುವಾಗ, ವಿಶ್ವದಲ್ಲಿಯೇ ಭಾರತ ಮೂರನೇ ಅತಿದೊಡ್ಡ ತೈಲ ಬಳಕೆದಾರನಾಗಿರುವಾಗ ಭಾರತಕ್ಕೆ ಎಷ್ಟು ಸಂಕಷ್ಟ ಉಂಟಾಗಬಹುದು ಎಂದು ಯೋಚನೆ ಮಾಡಿ! 40%ಕ್ಕಿಂತ ಹೆಚ್ಚು ತೈಲ ಇಲ್ಲಿಂದಲೇ ಭಾರತ ಪಡೆಯುವಾಗ ಅಡ್ಡಿಯುಂಟಾದರೇ ಏನಾಗಬಹುದು?

ಜೊತೆಗೆ, ಭಾರತೀಯ ಬಾಸ್ಮತಿ ಅಕ್ಕಿಗೆ ಅತಿದೊಡ್ಡ ಮಾರುಕಟ್ಟೆಯಾಗಿರುವ ಇರಾನ್‌ನಲ್ಲಿ ಅಂತಾರಾಷ್ಟ್ರೀಯ ವಹಿವಾಟುಗಳು ಸ್ಥಗಿತಗೊಳ್ಳುತ್ತಿರುವ ಹಿನ್ನೆಲೆ, ಭಾರತದ ಅಕ್ಕಿ ರಫ್ತಿನ ಮೇಲೂ ನೇರ ಪರಿಣಾಮ ಬೀಳುತ್ತಿದೆ. ಭಾರತದ ಒಟ್ಟು ಬಾಸ್ಮತಿ ಅಕ್ಕಿ ರಫ್ತಿನಲ್ಲಿ ನಾಲ್ಕನೇ ಒಂದು ಭಾಗ ಅಂದರೆ 25% ಇರಾನ್‌ಗೆ ಹೋಗುತ್ತದೆ. 20% ಅಕ್ಕಿ ಇರಾಕ್‌ಗೆ ರಫ್ತಾಗಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಹೇಳುತ್ತದೆ.

Crude oil prices rise in the international market4

ಈ ರಫ್ತುಗಳು 20 ಲಕ್ಷ ಟನ್‌ಗಳಿಗಿಂತ ಹೆಚ್ಚು ಬಾಸ್ಮತಿ ಅಕ್ಕಿಯನ್ನು ಹೊಂದಿವೆ. ಇದರ ಒಟ್ಟು ಮೌಲ್ಯವು 1.09 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿದೆ. ಇರಾನ್‌ನಲ್ಲಿನ ಸಂಘರ್ಷವು ಇರಾಕ್‌ಗೆ ಹೋಗಬೇಕಾದ ಅಕ್ಕಿ ರಫ್ತಿನ ಮೇಲೂ ಪರಿಣಾಮ ಬೀರಲಿದೆ. ಈಗ, ಈ 1.09 ಲಕ್ಷ ಕೋಟಿ ರೂ. ಮೌಲ್ಯದ ವಹಿವಾಟು ಆತಂಕಕ್ಕೆ ಸಿಲುಕಿದೆ. ಈಗ ಯುದ್ಧ ಪ್ರಾರಂಭವಾಗಿದ ಹಿನ್ನೆಲೆ, ಭಾರತೀಯ ಬಾಸ್ಮತಿ ಅಕ್ಕಿ ರಫ್ತುಗಳು ವಾಸ್ತವಿಕವಾಗಿ ಸ್ಥಗಿತಗೊಂಡಿವೆ. ಭಾರತದ ಅಕ್ಕಿ ರಫ್ತಾಗದೆ, ಭಾರತೀಯ ಮಾರುಕಟ್ಟೆಯಲ್ಲಿ ಅಕ್ಕಿ ದಾಸ್ತಾನು ಹೆಚ್ಚುವ ಮತ್ತು ಬೆಲೆ ಕುಸಿಯುವ ಆತಂಕವೂ ಇದೆ. ಇದು, ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಹುಟ್ಟುಹಾಕಿದೆ.

ಇನ್ನು ಈ ಇರಾನ್ ಸಂಘರ್ಷದ ಪ್ರಭಾವ ಭಾರತದ ಮೇಲೆ ಕೇವಲ ಅಕ್ಕಿ ರಫ್ತಿನಲ್ಲಿ ಮಾತ್ರವಲ್ಲ, ಚಹಾ ರಫ್ತಿನ ಮೇಲೂ ಬೀರಲಿದೆ. 2024-25ರಲ್ಲಿ, ಭಾರತದಿಂದ ಇರಾನ್‌ಗೆ ಸುಮಾರು 7,000 ಕೋಟಿ ರೂ. ಮೌಲ್ಯದ ಚಹಾವನ್ನು ರಫ್ತು ಮಾಡಿತ್ತು.

ಅಮೆರಿಕ-ಇಸ್ರೇಲ್ ಮತ್ತು ಇರಾನ್‌ ನಡುವಿನ ಕಾಳಗದಿಂದ ಇರಾಕ್, ಜೋರ್ಡಾನ್, ಲೆಬನಾನ್, ಸಿರಿಯಾ, ಯೆಮೆನ್ ಸೇರಿ ಹಲವು ರಾಷ್ಟ್ರಗಳಿಗೆ ಸರಕುಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಹತ್ತಾರು ದೇಶಗಳಿಗೆ ಉತ್ಪನ್ನಗಳ ಸಾಗಣೆಗೆ ಈಗಾಗಲೇ ತಡೆಹಿಡಿಯಲಾಗಿದೆ. ಇದು ಭಾರತಕ್ಕೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ. ಈಗ, ಇಂಧನ ಬೆಲೆ ಹೆಚ್ಚಾದರೆ ಸಾರಿಗೆ ವೆಚ್ಚ ಹೆಚ್ಚುತ್ತದೆ ಇದರಿಂದ, ಆಹಾರ ಸೇರಿದಂತೆ ದೈನಂದಿನ ವಸ್ತುಗಳ ಬೆಲೆಯೂ ಏರಬಹುದು.

ಇನ್ನು ಇರಾನ್‌ನಲ್ಲಿ ಸುಮಾರು 10,000 ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಹಾಗೂ ಇಸ್ರೇಲ್‌ನಲ್ಲಿ ಸುಮಾರು 25,000 ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಇದ್ದಾರೆ. ಬೃಹತ್ ಸಂಖ್ಯೆಯ ಭಾರತೀಯರು ಉಭಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಸಿಲುಕಿದ್ದಾರೆ. ಯುದ್ಧ ವಿಸ್ತಾರವಾದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಲಕ್ಷಾಂತರ ಭಾರತೀಯರ ಉದ್ಯೋಗದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.

ಇನ್ನು, ‘ಇಂಡಿಯಾ ಮಿಡಲ್ ಈಸ್ಟ್ ಯೂರೋಪ್ ಎಕನಾಮಿಕ್ ಕಾರಿಡಾರ್’ ಯೋಜನೆಗೆ ಈಗಾಗಲೇ ಅಡ್ಡಿಯುಂಟಾಗಿದೆ. ಏಕೆಂದರೆ, ಈ ಕಾರಿಡಾರ್‌ಗೆ ಅರಬ್ ರಾಷ್ಟ್ರಗಳು ಮತ್ತು ಇಸ್ರೇಲ್‌ನ ಹೈಫಾ ಬಂದರಿನ ಮೂಲಕ ಸಂಪರ್ಕ ಬೇಕಾಗಿದೆ. ಪ್ರಸ್ತುತ ಸಂಘರ್ಷವು ಛಾಬಹಾರ್ ಬಂದರು ಯೋಜನೆ, ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಯುರೇಷಿಯಾದ ವ್ಯಾಪಾರ ಸಂಪರ್ಕದ ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಮೇಲಿನ ಭಾರತದ ಹೂಡಿಕೆಯ ಮೇಲೆ ಪರಿಣಾಮ ಬೀರಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಇರುವ ಉತ್ತಮ ಮಾರ್ಗ ಸಂಘರ್ಷವನ್ನು ಕೊನೆಗೊಳಿಸಲು, ಕದನ ವಿರಾಮಕ್ಕಾಗಿ ಅಂತಾರಾಷ್ಟ್ರೀಯ ಕರೆ ಕೊಡುವುದು. ಆದರೆ, ಅದನ್ನು ಮಾಡುವ ಧೈರ್ಯ ಮೋದಿಗಿಲ್ಲ!

HCPBSYjbAAA9fhm

ಒಟ್ಟಾರೆ, ಇರಾನ್-ಇಸ್ರೇಲ್-ಅಮೆರಿಕ ನಡುವಿನ ಉದ್ವಿಗ್ನತೆ ಕೇವಲ ಮೂರು ದೇಶಗಳ ಸಮಸ್ಯೆಯಲ್ಲ. ಇದು ಜಾಗತಿಕ ಭದ್ರತೆ, ತೈಲ ಸರಬರಾಜು ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುವ ಪ್ರಮುಖ ಬೆಳವಣಿಗೆಯಾಗಿದೆ. ದೀರ್ಘಕಾಲದ ಇಸ್ರೇಲ್-ಇರಾನ್ ಸಂಘರ್ಷವು ಭಾರತದ ಸರಕು ಸಾಗಣೆ (ಆಮದು-ರಫ್ತು) ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ಜಗತ್ತಿನ ಹಲವು ದೇಶಗಳಿಗೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸದ್ಯಕ್ಕೆ ತೈಲ ಆಮದು ಮಾಡಿಕೊಂಡು ಪರಿಸ್ಥಿತಿ ನಿಭಾಯಿಸುತ್ತಿದ್ದರೂ, ಈ ಯುದ್ಧ ಮುಂದುವರೆದರೆ ಭಾರತದ ಆರ್ಥಿಕತೆಯ ಸ್ಥಿರತೆಗೆ ದೊಡ್ಡ ಸವಾಲು ಎದುರಾಗಲಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...