ಮುಗಿಯದ ಅಮೆರಿಕದ ‘ಸಾಮ್ರಾಜ್ಯಶಾಹಿ’ ಹಸಿವು: ವೆನೆಜುವೆಲಾ ನಂತರ ಗ್ರೀನ್‌ಲ್ಯಾಂಡ್‌ ಸರದಿ?

Date:

ಅಮೆರಿಕದ ಸಾಮ್ರಾಜ್ಯಶಾಹಿ ದಾಹ ದಕ್ಷಿಣ ಅಮೆರಿಕದ ತೈಲ ಸಂಪತ್ತಿನಿಂದ ಉತ್ತರ ಧ್ರುವದ ಮಂಜಿನಡಿ ಹುದುಗಿರುವ ಅಪರೂಪ ಖನಿಜಗಳತ್ತ ವಿಸ್ತರಿಸುತ್ತಿದೆಯೇ? ವೆನೆಜುವೆಲಾದ ರಾಜಕೀಯ ಅಸ್ಥಿರತೆಯ ಹಿಂದೆ ಅಮೆರಿಕದ ಕೈವಾಡ ಎಂಬ ಆರೋಪಗಳ ನಡುವೆಯೇ ಈಗ ಗ್ರೀನ್‌ಲ್ಯಾಂಡ್‌ ಮೇಲೆ ವಾಷಿಂಗ್ಟನ್‌ನ ಹದ್ದುಗಣ್ಣು ಬಿದ್ದಿದೆ. ಮೆಕ್ಸಿಕೋ, ಕ್ಯೂಬಾ, ಕೊಲಂಬಿಯಾ ಮೇಲಿನ ಶತಮಾನದ ದಬ್ಬಾಳಿಕೆಯೇ ಆರ್ಕ್ಟಿಕ್‌ಗೂ ತಲುಪುತ್ತಿದೆಯೇ ಎಂಬ ಪ್ರಶ್ನೆ ಜಾಗತಿಕ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ

ದಕ್ಷಿಣ ಅಮೆರಿಕದ ತೈಲ ಸಂಪದ್ಭರಿತ ವೆನಿಜುವೆಲಾದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಪಲ್ಲಟಗಳು ಮತ್ತು ಅಸ್ಥಿರತೆಯ ಹಿಂದೆ ಅಮೆರಿಕದ ‘ದೊಡ್ಡಣ್ಣ’ನ ಕೈವಾಡವಿದೆ ಎಂಬುದು ಜಗತ್ತಿನ ರಾಜಕೀಯ ವಲಯದಲ್ಲಿ ಬಹಿರಂಗ ಸತ್ಯ. ಆದರೆ, ಅಮೆರಿಕದ ಈ ವಿಸ್ತರಣಾವಾದಿ ಹಸಿವು ಕೇವಲ ದಕ್ಷಿಣದ ರಾಷ್ಟ್ರಗಳಿಗೆ ಸೀಮಿತವಾಗಿಲ್ಲ. ವೆನೆಜುವೆಲಾದ ಮೇಲಿನ ಹಿಡಿತದ ನಂತರ, ಈಗ ಅಮೆರಿಕದ ಹದ್ದುಗಣ್ಣು ಉತ್ತರ ಧ್ರುವದ ಅಂಚಿನಲ್ಲಿರುವ, ಮಂಜಿನಿಂದ ಆವೃತವಾದ “ಗ್ರೀನ್‌ಲ್ಯಾಂಡ್” ಮೇಲೆ ಬಿದ್ದಿದೆ. ಲ್ಯಾಟಿನ್ ಅಮೆರಿಕದ ರಾಷ್ಟ್ರಗಳಾದ ಕೊಲಂಬಿಯಾ, ಮೆಕ್ಸಿಕೋ ಮತ್ತು ಕ್ಯೂಬಾಗಳ ಮೇಲಿನ ದಬ್ಬಾಳಿಕೆಯ ತಂತ್ರಗಳನ್ನೇ ಈಗ ಆರ್ಕ್ಟಿಕ್‌ ವಲಯಕ್ಕೂ(ಉತ್ತರ ಧ್ರುವ ಪ್ರದೇಶ) ವಿಸ್ತರಿಸಲು ಅಮೆರಿಕ ಹವಣಿಸುತ್ತಿರುವಂತಿದೆ.

ಅಮೆರಿಕವು ಭೂಪ್ರದೇಶಗಳನ್ನು ಸಾರ್ವಭೌಮ ರಾಷ್ಟ್ರಗಳಾಗಿ ನೋಡುವ ಬದಲು, ಕೇವಲ ಮಾರಾಟಕ್ಕಿರುವ ‘ರಿಯಲ್‌ ಎಸ್ಟೇಟ್‌’ ಆಸ್ತಿಗಳಂತೆ ಪರಿಗಣಿಸುವ ಮನಸ್ಥಿತಿಯನ್ನು ಹಿಂದಿನಿಂದಲೂ ಬೆಳೆಸಿಕೊಂಡು ಬಂದಿದೆ. ಇದಕ್ಕೆ ಸ್ಪಷ್ಟ ಐತಿಹಾಸಿಕ ಸಾಕ್ಷಿಯೆಂದರೆ 1867ರ ಘಟನೆ. ಅಂದು ರಷ್ಯಾದಿಂದ ಅಲಾಸ್ಕಾವನ್ನು ಅಮೆರಿಕ ಹಣ ಕೊಟ್ಟು ಖರೀದಿಸಿತ್ತು. ಇಂದು ಗ್ರೀನ್‌ಲ್ಯಾಂಡ್‌ ವಿಷಯದಲ್ಲೂ ಅಮೆರಿಕ ಅದೇ ಲೆಕ್ಕಾಚಾರ ಹಾಕುತ್ತಿದೆ. ಸಾರ್ವಭೌಮ ರಾಷ್ಟ್ರಗಳನ್ನು ಡಾಲರ್‌ ಮುಖಬೆಲೆಯಲ್ಲಿ ಅಳೆಯುವ ಈ ಸಾಮ್ರಾಜ್ಯಶಾಹಿ ಅಹಂಕಾರ, ಆಧುನಿಕ ಜಗತ್ತಿನ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದದ್ದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಶ್ವದ ಅತಿದೊಡ್ಡ ದ್ವೀಪದ ಮೇಲೆ ಕಣ್ಣು

ಗ್ರೀನ್‌ಲ್ಯಾಂಡ್ ವಿಶ್ವದ ಅತ್ಯಂತ ದೊಡ್ಡ ದ್ವೀಪವಾಗಿದ್ದರೂ, ಅಲ್ಲಿನ ಜನಸಂಖ್ಯೆ ಕೇವಲ 57,000. ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾಗಿರುವ ಈ ದ್ವೀಪವು ಭೌಗೋಳಿಕವಾಗಿ ಉತ್ತರ ಅಮೆರಿಕಕ್ಕೆ ಹತ್ತಿರವಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು, ಅಮೆರಿಕವು ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಗ್ರೀನ್‌ಲ್ಯಾಂಡ್‌ ಮೇಲಿನ ಅಮೆರಿಕದ ಪ್ರೇಮಕ್ಕೆ ಪ್ರಮುಖ ಕಾರಣ ‘ಪರಿಸರ ಪ್ರೇಮ’ವಂತೂ ಅಲ್ಲವೇ ಅಲ್ಲ.  ಜಾಗತಿಕ ತಾಪಮಾನ ಏರಿಕೆಯಿಂದಾಗಿ ಆರ್ಕ್ಟಿಟ್‌ ವಲಯದ ದಟ್ಟ ಮಂಜುಗಡ್ಡೆಯ ಹಾಳೆಗಳು ವೇಗವಾಗಿ ಕರಗುತ್ತಿವೆ. ಈ ನೈಸರ್ಗಿಕ ವಿಕೋಪ ಅಮೆರಿಕದ ಪಾಲಿಗೆ ಲಾಭದಾಯಕ ವ್ಯಾಪಾರವಾಗಿ ಕಾಣುತ್ತಿದೆ. ಮಂಜುಗೆಡ್ಡೆ ಸೇರಿದಂತೆ ಅದರ ಕೆಳಗೆ ಹುದುಗಿರುವ ನೈಸರ್ಗಿಕ ಸಂಪತ್ತು ಅಮೆರಿಕದ ಕಣ್ಣು ಕಕ್ಕುತ್ತಿದೆ. ಪರಿಸರ ನಾಶದ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಅಮೆರಿಕ, ಅಲ್ಲಿನ ಸಂಪತ್ತಿನ ಸಂಭಾವ್ಯತೆಯ ಬಗ್ಗೆ ಈಗಿನಿಂದಲೇ ದುರಾಸೆ ತೋರಿಸಲಾರಂಭಿಸಿದೆ.

Greenland

ಗ್ರೀನ್‌ಲ್ಯಾಂಡ್‌ನ ಮಂಜಿನ ಪದರಗಳ ಅಡಿಯಲ್ಲಿ ತೈಲ, ಅನಿಲ, ಯುರೇನಿಯಂ ಮತ್ತು ಇಂದಿನ ಎಲೆಕ್ಟ್ರಾನಿಕ್ ಜಗತ್ತಿಗೆ ಅತ್ಯಗತ್ಯವಾಗಿರುವ’ರೇರ್‌ ಅರ್ಥ್‌ ಮಿನರಲ್ಸ್’(ಅಪರೂಪದ ಖನಿಜಗಳು) ಹೇರಳವಾಗಿದೆ ಎಂದು ಅಂದಾಜಿಸಲಾಗಿದೆ. ಚೀನಾಕ್ಕೆ ಪೈಪೋಟಿ ನೀಡಲು ಮತ್ತು ಭವಿಷ್ಯದಲ್ಲಿ ತನಗೆ ಬೇಕಾದ ಕಚ್ಚಾ ಸಂಪನ್ಮೂಲಗಳನ್ನು ಭದ್ರಪಡಿಸಿಕೊಳ್ಳಲು ಅಮೆರಿಕ ಈ ದ್ವೀಪದ ಮೇಲೆ ಹಿಡಿತ ಸಾಧಿಸಲು ಸಂಚು ರೂಪಿಸುತ್ತಿದೆ. ಅಲ್ಲಿನ ಪರಿಸರ ಸೂಕ್ಷ್ಮತೆಯನ್ನು ಕಡೆಗಣಿಸಿ, ಕೇವಲ ಲಾಭದ ಆಸೆಗೆ ಗಣಿಗಾರಿಕೆ ನಡೆಸುವ ಅಮೆರಿಕದ ಕಾರ್ಪೊರೇಟ್ ಹಿತಾಸಕ್ತಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮುಂದೆ ಓದಿದ್ದೀರಾ? ವೆನೆಜುವೆಲಾ ಸಾರ್ವಭೌಮತೆಯ ಮೇಲೆ ಅಮೆರಿಕದ ‘ದರೋಡೆಕೋರ’ ದಾಳಿ: ಪ್ರಜಾಪ್ರಭುತ್ವದ ಮುಖವಾಡದಲ್ಲಿ ಸಂಪನ್ಮೂಲಗಳ ಲೂಟಿ

ಸಂಪನ್ಮೂಲಗಳ ಜೊತೆಗೆ, ‘ರಾಷ್ಟ್ರೀಯ ಭದ್ರತೆ’ ಎಂಬುದು ಅಮೆರಿಕ ಸದಾ ಬಳಸುವ ದಾಳ. ಗ್ರೀನ್‌ಲ್ಯಾಂಡ್‌ನಲ್ಲಿರುವ ‘ತೂಲೆ ವಾಯುನೆಲೆ’ ಈಗಾಗಲೇ ಅಮೆರಿಕದ ಪಾಲಿಗೆ ನಿರ್ಣಾಯಕವಾಗಿದೆ. ರಷ್ಯಾ ಮತ್ತು ಚೀನಾಗಳನ್ನು ಎದುರಿಸಲು ಆರ್ಕ್ಟಿಕ್‌ ವಲಯದಲ್ಲಿ ತನ್ನ ಸೈನ್ಯ ಬಲವನ್ನು ಹೆಚ್ಚಿಸಿಕೊಳ್ಳುವುದು ಅಮೆರಿಕದ ಗುರಿ. ಶಾಂತಿಯುತವಾಗಿದ್ದ ಧ್ರುವ ಪ್ರದೇಶವನ್ನು ಒಂದು ಯುದ್ಧ ವಲಯವನ್ನಾಗಿ ಪರಿವರ್ತಿಸುವ ಅಪಾಯಕಾರಿ ಯೋಜನೆಯನ್ನು ಅಮೆರಿಕ ಹಂತಹಂತವಾಗಿ ಜಾರಿಗೆ ತರುತ್ತಿದೆ.

ಲ್ಯಾಟಿನ್ ಅಮೆರಿಕ ನಂತರದ ಗುರಿ?

ಉತ್ತರದಲ್ಲಿ ಗ್ರೀನ್‌ಲ್ಯಾಂಡ್ ಒಂದು ಕತೆಯಾದರೆ, ದಕ್ಷಿಣದಲ್ಲಿ ತನ್ನ ನೆರೆಹೊರೆಯ ರಾಷ್ಟ್ರಗಳಾದ ಮೆಕ್ಸಿಕೋ, ಕೊಲಂಬಿಯಾ ಮತ್ತು ಕ್ಯೂಬಾಗಳನ್ನು ಅಮೆರಿಕ ನಡೆಸಿಕೊಳ್ಳುವ ರೀತಿ ಅಮಾನವೀಯವಾಗಿದೆ.1823ರ ಮನ್ರೋ ಸಿದ್ಧಾಂತದ ಪ್ರಕಾರ, ಇಡೀ ಲ್ಯಾಟಿನ್‌ ಅಮೆರಿಕ ತನ್ನ ‘ಹಿತ್ತಲ ತೋಟ’ ಎಂದು ಅಮೆರಿಕ ಭಾವಿಸಿದೆ. ಇಲ್ಲಿ ಯಾವುದೇ ಸರ್ಕಾರಗಳು ಅಮೆರಿಕದ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡರೆ, ಅಲ್ಲಿ ಆರ್ಥಿಕ ನಿರ್ಬಂಧ ಅಥವಾ ಕ್ಷಿಪ್ರ ಕ್ರಾಂತಿಗಳ ಮೂಲಕ ಅಸ್ಥಿರತೆ ಉಂಟು ಮಾಡುವುದು ಅಮೆರಿಕದ ಚಾಳಿ.

Greenland Colombia

ನೆರೆಯ ಮೆಕ್ಸಿಕೋದ ಮೇಲೆ ವಲಸಿಗರ ನಿಯಂತ್ರಣದ ನೆಪದಲ್ಲಿ ತೀವ್ರ ಒತ್ತಡ ಹೇರುವುದು, ಗಡಿಗೋಡೆ ಕಟ್ಟುವುದು ಮತ್ತು ಆರ್ಥಿಕವಾಗಿ ಬೆದರಿಸುವುದು ಅಮೆರಿಕದ ‘ದೊಡ್ಡಣ್ಣ’ನ ವರ್ತನೆಗೆ ಸಾಕ್ಷಿ. ಇತ್ತ ಕೊಲಂಬಿಯಾದಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ತಡೆಯುವ ನೆಪದಲ್ಲಿ ಅಲ್ಲಿನ ಆಂತರಿಕ ವಿಷಯಗಳಲ್ಲಿ ಮತ್ತು ಸೇನಾ ಚಟುವಟಿಕೆಗಳಲ್ಲಿ ಅಮೆರಿಕ ಮೂಗು ತೂರಿಸುತ್ತಲೇ ಇರುತ್ತದೆ. ಈ ದೇಶಗಳು ಸ್ವತಂತ್ರವಾಗಿ ಬೆಳೆಯದಂತೆ ನೋಡಿಕೊಳ್ಳುವುದು ಅಮೆರಿಕದ ವಿದೇಶಾಂಗ ನೀತಿಯ ಗುಪ್ತ ಅಜೆಂಡಾವಾಗಿದೆ.

ಹಾಗೆಯೇ​ ಪುಟ್ಟ ದ್ವೀಪ ರಾಷ್ಟ್ರ ಕ್ಯೂಬಾದ ಮೇಲಿನ ಅಮೆರಿಕದ ದ್ವೇಷಕ್ಕೆ ದಶಕಗಳ ಇತಿಹಾಸವಿದೆ. ಕೇವಲ ತನ್ನ ಸಿದ್ಧಾಂತವನ್ನು ಒಪ್ಪುವುದಿಲ್ಲ ಎಂಬ ಒಂದೇ ಕಾರಣಕ್ಕೆ ಕ್ಯೂಬಾದ ಮೇಲೆ ದಶಕಗಟ್ಟಲೆ ಆರ್ಥಿಕ ದಿಗ್ಬಂಧನ ಹೇರುವ ಮೂಲಕ, ಅಲ್ಲಿನ ಜನಸಾಮಾನ್ಯರನ್ನು ಉಸಿರುಗಟ್ಟಿಸುವ ಕೆಲಸವನ್ನು ಅಮೆರಿಕ ಮಾಡುತ್ತಿದೆ. ಮಾನವ ಹಕ್ಕುಗಳ ಬಗ್ಗೆ ಜಗತ್ತಿಗೆ ಪಾಠ ಹೇಳುವ ಅಮೆರಿಕ, ಕ್ಯೂಬಾದ ವಿಷಯದಲ್ಲಿ ಮಾತ್ರ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದು ಅದರ ಇಬ್ಬಗೆಯ ನೀತಿಗೆ ಕನ್ನಡಿ ಹಿಡಿದಿದೆ.

​ಜಗತ್ತಿಗೆ ಎಚ್ಚರಿಕೆಯ ಗಂಟೆ

ಒಟ್ಟಾರೆಯಾಗಿ, ವೆನೆಜುವೆಲಾದಿಂದ ಗ್ರೀನ್‌ಲ್ಯಾಂಡ್‌ವರೆಗಿನ ಅಮೆರಿಕದ ನಡೆಗಳು ಒಂದು ಸ್ಪಷ್ಟ ಸಂದೇಶವನ್ನು ರವಾನಿಸುತ್ತಿವೆ. ಅದೆಂದರೆ, ಅಮೆರಿಕಕ್ಕೆ ಪ್ರಜಾಪ್ರಭುತ್ವ ಅಥವಾ ಸಾರ್ವಭೌಮತೆಗಿಂತ, ತನ್ನ ಸಾಮ್ರಾಜ್ಯಶಾಹಿ ವಿಸ್ತರಣೆ ಮತ್ತು ಸಂಪನ್ಮೂಲಗಳ ಲೂಟಿಯೇ ಮುಖ್ಯವಾಗಿದೆ. ಗ್ರೀನ್‌ಲ್ಯಾಂಡ್‌ನ ಬಿಳಿಯ ಮಂಜಿನ ಮೇಲೆ ಅಮೆರಿಕದ ರಾಜಕೀಯದ ಕಪ್ಪು ನೆರಳು ಆವರಿಸುತ್ತಿರುವುದು ಜಾಗತಿಕ ಶಾಂತಿಗೆ ಮತ್ತು ಪರಿಸರಕ್ಕೆ ಮಾರಕ. “ಜಗತ್ತಿನ ರಕ್ಷಕ” ಎಂಬ ಮುಖವಾಡದ ಹಿಂದೆ ಅಡಗಿರುವ ಈ ಆಕ್ರಮಣಕಾರಿ ಮುಖವನ್ನು ಜಗತ್ತು ಅರ್ಥಮಾಡಿಕೊಳ್ಳಬೇಕಿದೆ.

Greenland Cuba
blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...