ಸೂಸೈಡ್ ಪಾಯಿಂಟ್ ಆಗುತ್ತಿದೆಯಾ ‘ನಮ್ಮ ಮೆಟ್ರೋ’?

Date:

ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ‘ನಮ್ಮ ಮೆಟ್ರೋ’ ಮದ್ದಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಸರ ಸ್ನೇಹಿಯಾಗಿರುವ ಈ ಮೆಟ್ರೋವನ್ನು ನಿತ್ಯ 7 ಲಕ್ಷಕ್ಕೂ ಅಧಿಕ ಜನ ನೆಚ್ಚಿಕೊಂಡಿದ್ದಾರೆ. ಟ್ರಾಫಿಕ್ ಕಿರಿಕಿರಿಗೆ ಬೇಸತ್ತಿರುವ ಜನರಿಗೆ ನಮ್ಮ ಮೆಟ್ರೋ ಸಹಾಯಕಾರಿಯಾಗಿದೆ. ಈಗಾಗಲೇ ನಗರದಲ್ಲಿ 74 ಕಿ.ಮೀ ಮಾರ್ಗದಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ. ಇದೀಗ, ಮೆಟ್ರೋ ಮಾರ್ಗ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆಯೂ ಇದೆ. ಈ ಸಂತಸದ ನಡುವೆ, ನಮ್ಮ ಮೆಟ್ರೋ ಜಿಗುಪ್ಸೆಗೊಂಡವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳವಾಗುತ್ತಿರುವುದು ಬೇಸರದ ಸಂಗತಿ. ಮೆಟ್ರೊ ನಿಲ್ದಾಣಕ್ಕೆ ಬಂದು ಹೈ ವೋಲ್ಟೇಜ್‌ ವಿದ್ಯುತ್‌ ಪ್ರವಹಿಸುತ್ತಿರುವ ಹಳಿಗೆ ಬಿದ್ದು ಯುವಜನರು ಪ್ರಾಣ ಬಿಡುತ್ತಿದ್ದಾರೆ. ಅದೀಗ, ಮೆಟ್ರೋ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಹೌದು, ನಮ್ಮ ಮೆಟ್ರೋ – ಇದು ನಮಗಾಗಿ, ನಮ್ಮ ಅನುಕೂಲಕ್ಕಾಗಿ ನಿರ್ಮಾಣವಾದ ಮೆಟ್ರೋ. ವೇಗ, ಭದ್ರತೆ ಮತ್ತು ಸುಲಭ ಪ್ರಯಾಣದ ಪರ್ಯಾಯವೆಂದು ಮೆಟ್ರೋ ಜನಮನ ಗೆದ್ದಿದೆ. ಆದರೆ, ಇದೇ ಮೆಟ್ರೋ ನಿಲ್ದಾಣಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆಗಳ ಹೆಸರಿನಲ್ಲಿ ಸುದ್ದಿಯ ಸಾಧನವಾಗುತ್ತಿರುವುದು ಆತಂಕಕಾರಿ ಮತ್ತು ಗಂಭೀರ ವಿಚಾರ.

ಕೆಂಗೇರಿ ನಿಲ್ದಾಣದಲ್ಲಿ ಕಳೆದ ಶುಕ್ರವಾರ ಬೆಳ್ಳಂಬೆಳಿಗ್ಗೆ ಆತಂಕಕಾರಿ ಘಟನೆಯೊಂದು ನಡೆದಿದೆ. ಯುವಕನೋರ್ವ ಹಳಿಗೆ ಜಿಗಿದು ರೈಲಿನಡಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ನೇರಳೆ ಮಾರ್ಗದಲ್ಲಿ ಮೇಟ್ರೋ ಸಂಚಾರ ವ್ಯತ್ಯಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

38 ವರ್ಷದ ಶಾಂತನಗೌಡ ಪೊಲೀಸ್‌ಪಾಟೀಲ ಮೃತ ವ್ಯಕ್ತಿ. ಇವರು ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯವರು ಎಂದು ಹೇಳಲಾಗುತ್ತಿದೆ. ಆದರೆ, ಆತ್ಮಹತ್ಯೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ಮೆಟ್ರೋ ಸುರಕ್ಷತಾ ಸಿಬ್ಬಂದಿ, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೆಟ್ರೋ ತಂಡ ಹಳಿಯಿಂದ ಶವವನ್ನು ಹೊರತೆಗೆದಿದೆ.

ಇತ್ತೀಚಿನ ದಿನಗಳಲ್ಲಿ ಮೆಟ್ರೋ ಆತ್ಮಹತ್ಯೆ ಘಟನೆಗಳು, ಆತ್ಮಹತ್ಯೆ ಪ್ರಯತ್ನ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ.

ಆಗಸ್ಟ್ 3-2024 ರಂದು ಸಾಯಂಕಾಲ ಸುಮಾರು 5-45ಕ್ಕೆ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಕುಮಾರಸ್ವಾಮಿ ಲೇಔಟ್ ನಿವಾಸಿ ನವೀನ್ ಕುಮಾರ್ ಅರೋರಾ ಎಂಬ 57 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅರೋರಾ ಅವರು ರೇಷ್ಮೆ ಸಂಸ್ಥೆ ಕಡೆಗೆ ಹೋಗುತ್ತಿದ್ದ ರೈಲು ಬರುತ್ತಿದ್ದಂತೆ ಹಳಿಗಳ ಮೇಲೆ ಹಾರಿ ಸ್ಥಳದಲ್ಲೇ ಸಾವನ್ನಪ್ಪಿದರು.

ಮಾರ್ಚ್ 21, 2024 ರಂದು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಮಧ್ಯಾಹ್ನ ಸುಮಾರು 2-10 ರ ಸುಮಾರಿಗೆ 19 ವರ್ಷದ ಕಾನೂನು ವಿದ್ಯಾರ್ಥಿ ಧ್ರುವ್ ಠಕ್ಕರ್ ಎಂಬುವವರು ಅತ್ತಿಗುಪ್ಪೆ ನಿಲ್ದಾಣದಲ್ಲಿ ಹಳಿಗಳ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರೈಲು ಚಾಲಕ ಎಮರ್ಜೆನ್ಸಿ ಬ್ರೇಕ್ ಹಾಕಿದರೂ ವೇಗವಾಗಿ ಬರುತ್ತಿದ್ದ ರೈಲು ಹರಿದು ವಿದ್ಯಾರ್ಥಿ ಮೃತಪಟ್ಟಿದ್ದರು.

Metro Suicide

ಜನವರಿ 5, 2024 ರಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಂಜೆ 7 ಗಂಟೆಯ ಸುಮಾರಿಗೆ ಕೇರಳ ಮೂಲದ 50 ವರ್ಷದ ವ್ಯಕ್ತಿಯೊಬ್ಬರು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

2024ರ ಸೆಪ್ಟೆಂಬರ್ 17 ರಂದು ಮಧ್ಯಾಹ್ನ 2.13 ಕ್ಕೆ ನೇರಳೆ ಮಾರ್ಗದ ಜ್ಞಾನಭಾರತಿ ನಿಲ್ದಾಣದದಲ್ಲಿ ಆತ್ಮಹತ್ಯೆ ಪ್ರಯತ್ನ ಘಟನೆಯೊಂದು ನಡೆದಿತ್ತು. ಬಿಹಾರದ 30 ವರ್ಷದ ಸಿದ್ಧಾರ್ಥ್ ಎಂಬಾತ ರೈಲಿನ ಹಳಿಗಳ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ. ಮಹಿಳಾ ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಿದ್ಧಾರ್ಥ್ ಅವರ ಜೀವ ಉಳಿದಿತ್ತು.

ವಿಧಾನಸೌಧದಲ್ಲಿ ಡಿ ಗ್ರೂಪ್ ನೌಕರನಾಗಿದ್ದ ವೀರೇಶ್ (35) ಎಂಬಾತ ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಮೆಜೆಸ್ಟಿಕ್ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಅಕ್ಟೋಬರ್ 4ರಂದು ನಡೆದಿತ್ತು. ಪ್ಲಾಟ್‌ಫಾರಂ 3ರಲ್ಲಿ ಮೆಟ್ರೋ ರೈಲಿನಡಿ ಸಿಲುಕಿದ್ದ ವೀರೇಶ್ ನನ್ನು ಮೆಟ್ರೋ ಅಧಿಕಾರಿಗಳು ರಕ್ಷಣೆ ಮಾಡಿದ್ದರು.

ದಿನಕಳೆದಂತೆ ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದು ನಗರ ಜೀವನದ ಒತ್ತಡ, ಮನೋವೈಜ್ಞಾನಿಕ ಸಮಸ್ಯೆಗಳನ್ನು ತೋರಿಸುತ್ತದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಮನಸಿಕ ಆರೋಗ್ಯ ತಜ್ಞ ಆದರ್ಶ ಅವರು, “ ಬೆಂಗಳೂರು ಬಿಟ್ಟು ಬೇರೆ ಯಾವುದೇ ಊರಿಗೆ ಹೋದರು ಎಲ್ಲವೂ ನಿಮಗೆ ನಿಧಾನ ಎಂದೆನ್ನಿಸುತ್ತದೆ. ಯಾಕೆಂದರೆ, ಬೆಂಗಳೂರಿನಲ್ಲಿ ಓಟವಿದೆ. ಈ ಓಟ ಬೆಂಗಳೂರಿನಲ್ಲಿ ಕೆಲಸ ಮಾಡುವವರಿಗೆ ಅಷ್ಟೇ ಅಲ್ಲ, ಕಾಲೇಜು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ, ಗೃಹಿಣಿಯರಿಗೆ ಎಲ್ಲರಿಗೂ ಇದೆ. ಒತ್ತಡವಿದೆ. ಒಂದು ಕಡೆ ಬೆಂಗಳೂರು ಎನ್ನುವುದೇ ಒತ್ತಡ. ದಿನನಿತ್ಯ ಕೆಲಸದ ಒತ್ತಡ, ಹಣಕಾಸಿನ ಸಮಸ್ಯೆ, ಸರ್ಕಾರದ ಹೊಸ ಹೊಸ ನೀತಿಗಳು, ಗುತ್ತಿಗೆದಾರರನ್ನು ಕೆಲಸದಿಂದ ತೆಗೆಯುವುದು, ಖಾಸಗಿಯಲ್ಲಂತೂ ಇವತ್ತು ಕೆಲಸ ಇದ್ದರೇ ನಾಳೆ ಇರುವುದಿಲ್ಲ. ಕೆಲಸದಲ್ಲಿ ಯಾವುದೇ ತರಹದ ಭದ್ರತೆಯಿಲ್ಲ” ಎಂದು ವಿವರಿಸಿದರು.

ಮುಂದುವರೆದು, “ಮಾನವ ತನ್ನ ಜೀವನದುದ್ದಕ್ಕೂ ಬಡೆದಾಡೋದು, ಹೊಡೆದಾಡೋದು ಒಂದು ಭದ್ರತೆ ಮತ್ತು ಸ್ಥಿರತೆಗೋಸ್ಕರ. ಈ ಭದ್ರತೆ ಮತ್ತು ಸ್ಥಿರತೆ ಯಾವಾಗಲೂ ಅಂಕುಡೊಂಕಾಗಿ ಇರೋವಾಗ ಇದು ಒತ್ತಡವನ್ನು ಹುಟ್ಟುಹಾಕುತ್ತದೆ. ಆಗ ಜೀವನವೇ ಬೇಡ ಎನ್ನುವ ಖಿನ್ನತೆ ಶುರುವಾಗುತ್ತದೆ. ಹೀಗಾದಾಗ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು. ಅಥವಾ 14416 ಸಂಖ್ಯೆಗೆ ಕರೆ ಮಾಡಬಹುದು. ಇದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಡೆಸುತ್ತಿರುವ ಟೆಲಿ ಮನಸ್ ಎಂಬ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿಯಾಗಿದೆ” ಎಂದು ಮಾಹಿತಿ ನೀಡಿದರು.

ಮೈಸೂರು ರಸ್ತೆ

“ಈ ಹಿಂದೆ ರಾಮನಗರ ಕಡೆಗೆ ಇರುವವರು ರಾಮಬೆಟ್ಟದ ಕಡೆಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು ನಂದಿ ಹಿಲ್ಸ್‌ ಗೆ… ಹೀಗೆ ಇನ್ನು ಕೆಲವರು ಇನ್ನೊಂದು ಯಾವುದೋ ಪಾಯಿಂಟ್‌ಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ಮೆಟ್ರೋ ಈಗ ಸಲುಭವಾಗಿ ಸಿಗುವ ಸ್ಥಳವಾಗಿದೆ. ಪ್ರತಿ ಎರಡು ಕಿ.ಮೀಗೂ ಸಿಗುತ್ತದೆ. ಈತರಹದ ಘಟನೆಗಳು ನಡೆದಾಗ ಗೋದಿ ಮಾಧ್ಯಮಗಳು ಉತ್ಪ್ರೇಕ್ಷೆಯಿಂದ ಹೇಳುವುದು ಇತರಹದ ಆತ್ಮಹತ್ಯೆಗಳಿಗೆ ಪ್ರೇರಣೆಯಾಗಬಹುದು. ‘ಏಕ್ ದುಜೇ ಕೇ ಲಿಯೇ’ ಎಂಬ ಹಿಂದಿ ಸಿನಿಮಾದಲ್ಲಿ ಬೆಟ್ಟದ ಮೇಲಿನಿಂದ ಲವರ್‍ಸ್‌ ಬೀಳುತ್ತಾರೆ. ಈ ಚಿತ್ರ ಬಂದ ತಕ್ಷಣ ಪ್ರೇಮಿಗಳು ಈ ರೀತಿ ಜಂಪ್ ಮಾಡಿ ಸೂಸೈಡ್ ಮಾಡಿಕೊಳ್ಳುವುದು ವಿಪರೀತ ಹೆಚ್ಚಳವಾಗಿತ್ತು” ಎಂದು ಹೇಳಿದರು.

ಈ ಸರಣಿ ಘಟನೆಗಳ ನಂತರ, ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸುವ ಕುರಿತು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

ದೆಹಲಿ ಮೆಟ್ರೋದ ಮಾದರಿಯಲ್ಲಿ ಬೆಂಗಳೂರಿನ ಎಲ್ಲ ನಿಲ್ದಾಣಗಳಲ್ಲೂ ‘ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ಸ್’ (Platform Screen Doors – PSD) ಅಂದರೆ ರೈಲು ಬಂದಾಗ ಮಾತ್ರ ತೆರೆಯುವ ಗಾಜಿನ ಬಾಗಿಲುಗಳನ್ನು ಅಳವಡಿಸಬೇಕೆಂಬ ಒತ್ತಾಯ ಜೋರಾಗಿ ಕೇಳಿಬರುತ್ತಿದೆ.

ಈ ಸುದ್ದಿ ಓದಿದ್ದೀರಾ? ಪರಮೇಶ್ವರ್ ಸಿಎಂ ಆಗಬೇಕು; ರಕ್ತದಲ್ಲಿ ಪತ್ರ ಬರೆದ ಯುವಕರು

ಬಹು ದೊಡ್ಡ ನಗರಗಳಾದ ಸಿಂಗಾಪೂರ್, ಹಾಂಗ್ ಕಾಂಗ್, ದೆಹಲಿ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಈ ಆತ್ಮಹತ್ಯೆ ಸೇರಿದಂತೆ ಇನ್ನಿತರ ಅವಘಡಗಳನ್ನು ತಡೆಯಲು ಸ್ಕ್ರೀನ್ ಡೋರ್ಗಳು ಇವೆ. ಆದರೆ, ಬೆಂಗಳೂರು ಮೆಟ್ರೋದಲ್ಲಿ ಅವು ಇಲ್ಲದಿರುವುದು ಆತ್ಮಹತ್ಯೆ ತಡೆಯಲು ಒಂದು ದೊಡ್ಡ ಕೊರತೆಯಾಗಿದೆ.

ದಿನವೂ ಲಕ್ಷಾಂತರ ಜನರನ್ನು ತಮ್ಮ ಗುರಿಯತ್ತ ಸೇರಿಸುವ ಮೆಟ್ರೋ ನಗರಕ್ಕೆ ವೇಗ, ಅನುಕೂಲತೆ ಮತ್ತು ಶಿಸ್ತು ತಂದಿದೆ. ಆದರೆ, ಇದೇ ಶಿಸ್ತಿನ ಜಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆಗಳ ಹೆಸರಲ್ಲಿ ದುಃಖದ ಸುದ್ದಿಗಳಿಗೆ ಕಾರಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಕೂಡಲೇ ಈ ಆತ್ಮಹತ್ಯೆಗಳ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನತ್ತ ಕಾರ್ಯೋನ್ಮುಖರಾಗಬೇಕಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...