ಆರೆಸ್ಸೆಸ್- ಬಿಜೆಪಿಯ ಮುಸ್ಲಿಮ್ ದ್ವೇಷದ ರೂಪಕ ‘ಬುಲ್ಡೋಜರ್ ಅನ್ಯಾಯ’ ಕರ್ನಾಟಕಕ್ಕೆ ಕಾಲಿಡುವುದೇ?

Date:

ನಮ್ಮ ಗೃಹಸಚಿವರದ್ದು ಆ ಕ್ಷಣದ ಭಾವೋದ್ವೇಗದ ಹೇಳಿಕೆಯಾಗಿರಬಹುದು. ಆದರೆ ಬುಲ್ಡೋಜರ್‌ ನ್ಯಾಯ ಎಂಬುದು ಉತ್ತರಪ್ರದೇಶದ ಯೋಗಿ ಸರ್ಕಾರ ಮುಸ್ಲಿಮರನ್ನು ದಮನ ಮಾಡಲು ಬಳಸಿದ ಅನ್ಯಾಯದ ಯಂತ್ರ ಎಂಬುದನ್ನು ಮರೆಯಬಾರದು

ದೇಶದಲ್ಲಿ ಬುಲ್ಡೋಜರ್‌ ಅನ್ಯಾಯದ ಸದ್ದು ಉತ್ತರ ಭಾರತದಲ್ಲಿ ಮಾತ್ರ ಹೆಚ್ಚಾಗಿ ಕೇಳಿಬರುತ್ತಿತ್ತು. ಆದರೆ ಈಗ ಮಾದಕ ವಸ್ತುಗಳ ಬೇಟೆಗೆ ತೋಳೇರಿಸಿರುವ ಕರ್ನಾಟಕ ಸರ್ಕಾರ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗೆ, ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ್ದ ಡಾ ಜಿ ಪರಮೇಶ್ವರ್, “ರಾಜ್ಯ ಸರ್ಕಾರವು ಮಾದಕವಸ್ತು ಮಾರಾಟಗಾರರ ವಿರುದ್ಧ ಪ್ರತಿದಿನ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಧಿಕಾರಿಗಳು ಅಪರಾಧಿಗಳನ್ನು ಪತ್ತೆಹಚ್ಚುತ್ತಿದ್ದಾರೆ. ಅವರಿಗೆ ಮನೆಗಳನ್ನು ಬಾಡಿಗೆಗೆ ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ಆರೋಪಿಗಳ ಮನೆಗಳನ್ನು ಕೆಡವಲು ಸಹ ಯೋಜಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಜನಸಾಮಾನ್ಯರು ಗೃಹ ಸಚಿವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. 

ಗೃಹಸಚಿವರದ್ದು ಆ ಕ್ಷಣದ ಭಾವೋದ್ವೇಗದ ಹೇಳಿಕೆಯಾಗಿರಬಹುದು. ಆದರೆ ಬುಲ್ಡೋಜರ್‌ ನ್ಯಾಯ ಎಂಬುದು ಉತ್ತರಪ್ರದೇಶದ ಯೋಗಿ ಸರ್ಕಾರ ಮುಸ್ಲಿಮರನ್ನು ದಮನ ಮಾಡಲು ಬಳಸಿದ ಅನ್ಯಾಯದ ಯಂತ್ರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಅಳವಡಿಸಿಕೊಂಡಿರುವ ‘ಬುಲ್ಡೋಜರ್ ಅನ್ಯಾಯ’ವನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ವಿರೋಧಿಸುತ್ತಿದೆ. ಹೀಗಿರುವಾಗ, ಕರ್ನಾಟಕದಂತಹ ಕಾಂಗ್ರೆಸ್ ಆಡಳಿತವಿರುವ ರಾಜ್ಯವು ಉತ್ತರ ಪ್ರದೇಶದ ಅಕ್ರಮ ಹಾದಿಯಲ್ಲಿ ಸಾಗೋದು ಎಷ್ಟು ಸರಿ? ಈ ರೀತಿಯ ಹೇಳಿಕೆಯನ್ನ ಕೊಡುವುದಕ್ಕೂ ಮೊದಲು ಗೃಹ ಸಚಿವರು ಯೋಚನೆ ಮಾಡಿಲ್ವಾ? ಆರೋಪಿಗಳ ಮನೆಗಳನ್ನು ಸರಿಯಾದ ಪ್ರಕ್ರಿಯೆಯಿಲ್ಲದೆ ಧ್ವಂಸಗೊಳಿಸುವುದು ಕಾನೂನುಬಾಹಿರ ಮತ್ತು ಆರೋಪಿಗಳ ಕುಟುಂಬ ಇತರ ಸದಸ್ಯರ ಆಶ್ರಯ ತಾಣದ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಉತ್ತರಪ್ರದೇಶದಲ್ಲಿ ಈ ಅನ್ಯಾಯವನ್ನೇ ನ್ಯಾಯಸಮ್ಮತವೆಂಬಂತೆ ತೋರ್ಪಡಿಸಲಾಗುತ್ತಿದೆ. ಅದನ್ನೇ ಕರ್ನಾಟಕ ಕೂಡ ಅನುಸರಿಸಿದ್ರೆ ರಾಜ್ಯದ ಗತಿ ಏನಾಗಬಹುದು? ಈ ಎಲ್ಲಾ ಪ್ರಶ್ನೆಗಳಿಗೆ ಗೃಹ ಸಚಿವರೇ ಉತ್ತರಿಸಬೇಕಿದೆ. 

ಜಿ ಪರಮೇಶ್ವರ ಹೇಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಟೀಕಿಸಿದ್ದಾರೆ. “ಇಂತಹ ಹೇಳಿಕೆಗಳಿಂದ ಗಾಬರಿಗೊಂಡಿದ್ದೇನೆ” ಎಂದು ಚಿದಂಬರಂ ಹೇಳಿದ್ದಾರೆ. ಅ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚಿದಂಬರಂ, “ವರದಿ ತಪ್ಪಾಗಿದೆ ಎಂದು ನಾನು ಭಾವಿಸುತ್ತೇನೆ. ಆರೋಪಿಗಳ ಮನೆಗಳನ್ನು ಸರಿಯಾದ ಪ್ರಕ್ರಿಯೆಯಿಲ್ಲದೆ ಧ್ವಂಸಗೊಳಿಸುವುದು ಕಾನೂನುಬಾಹಿರ ಮತ್ತು ಆರೋಪಿಗಳ ಕುಟುಂಬ ಇತರ ಸದಸ್ಯರ ಆಶ್ರಯ ತಾಣದ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಉಲ್ಲಂಘಿಸುತ್ತದೆ ಎಂಬುದಾಗಿ ಸುಪ್ರೀಂ ಕೋರ್ಟ್ ಕಾನೂನನ್ನು ಘೋಷಿಸಿದೆ” ಎಂದು ‘ಎಕ್ಸ್‌‘ನಲ್ಲಿ ಪೋಸ್ಟ್‌ ಹಾಕಿದ್ದಾರೆ. “ಉತ್ತರ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ಅಳವಡಿಸಿಕೊಂಡಿರುವ ‘ಬುಲ್ಡೋಜರ್ ನ್ಯಾಯ’ವನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ವಿರೋಧಿಸುತ್ತಿದೆ. ಹೀಗಿರುವಾಗ, ಕರ್ನಾಟಕದಂತಹ ಕಾಂಗ್ರೆಸ್ ಆಡಳಿತವಿರುವ ರಾಜ್ಯವು ಉತ್ತರ ಪ್ರದೇಶದ ಅಕ್ರಮ ಹಾದಿಯಲ್ಲಿ ಸಾಗಬಾರದು” ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಈದಿನ.ಕಾಮ್‌ ಜೊತೆ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್ ಅವರು ಮಾತನಾಡಿ, “ರಾಜ್ಯದ ಗೃಹ ಸಚಿವರು ಸದನದಲ್ಲಿ ಈ ರೀತಿ ಹೇಳಿಕೆ ಕೊಟ್ಟಿರುವುದು ನಿಜವಾಗಿಯೂ ಖಂಡನೀಯ.ಕಾನೂನಿನಲ್ಲಿ ಬುಲ್ಡೋಜ್‌ ಮಾಡುವುದಕ್ಕೆ ಅವಕಾಶ ಇಲ್ಲ ಎಂಬ ವಿಚಾರ ಅವರಿಗೂ ಗೊತ್ತಿದೆ. ಅಪರಾಧಿ ಆದರೂ ಕೂಡ ಆ ವ್ಯಕ್ತಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಬಹುದೇ ವಿನಃ ಆತನ ಮನೆಯನ್ನ ಕೆಡವುದಕ್ಕೆ ಅವಕಾಶ ಇಲ್ಲ. ಹೀಗಿದ್ದಾಗ ರಾಜ್ಯದ ಗೃಹ ಸಚಿವರು ಸದನದಲ್ಲಿ ಈ ರೀತಿ ಹೇಳಿಕೆಯನ್ನ ಕೊಟ್ಟಿರುವುದು ಆತಂಕಕ್ಕೆ ಹಾಗೂ ಆಶ್ಚರ್ಯಕ್ಕೆ ಕಾರಣ ಆಗಿದೆ. ಎಷ್ಟೋ ಘಟನೆಗಳಲ್ಲಿ ಡ್ರಗ್‌ ಪೆಡ್ಲರ್‌ಗಳ ಜೊತೆ ಪೊಲೀಸರೂ ಸಂಬಂಧ ಇಟ್ಕೊಂಡಿದ್ದ ಉದಾಹರಣೆಗಳಿದೆ. ಅದಕ್ಕೆಲ್ಲಾ ಯಾವ ರೀತಿ ಕ್ರಮವನ್ನ ಜರುಗಿಸುತ್ತಾರೆ? ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಿಲ್ಲ ಅಂದರೆ ಗೃಹ ಸಚಿವರು ರಾಜೀನಾಮೆ ಕೊಡಲಿ, ಅದರ ಬದಲು ಈ ರೀತಿ ಮನೆಗಳನ್ನ ಒಡೆಯುತ್ತೀವಿ ಅಂತ ಹೇಳೋದು ಸರಿ ಅಲ್ಲ. ಈ ಹಿಂದೆ ಬಿಜೆಪಿ ಸರ್ಕಾರದವಿರುವ ಕೆಲ ರಾಜ್ಯಗಳಲ್ಲಿ ಬುಲ್ಡೋಜರ್‌ ನೀತಿಯನ್ನ ಅನುಸರಿದ್ದಕ್ಕೆ ಕಾಂಗ್ರೆಸ್‌ ಅದನ್ನ ಖಂಡಿಸಿದ್ದರು.ಆದ್ರೆ ಈಗ ಅದೇ ಕಾಂಗ್ರೆಸ್‌ ಸರ್ಕಾರದಲ್ಲಿ ಈ ರೀತಿ ಹೇಳಿಕೆಗಳು ಬರುತ್ತಿರುವುದನ್ನ ಖಂಡಿಸುತ್ತೇವೆ” ಅಂತ ಆಗ್ರಹಿಸಿದ್ದಾರೆ.

ದೆಹಲಿ ನಿವಾಸಿ ಲೇಖಕಿ ರೇಣುಕಾ ನಿಡಗುಂದಿ ಪ್ರತಿಕ್ರಿಯಿಸಿ, “ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಬಾಬಾ ಎಂದೇ ಕುಖ್ಯಾತರಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥನ ದುಷ್ಟ ಭೂತ ಪರಮೇಶ್ವರರ ಮೈಹೊಕ್ಕಿದೆಯೆಂದು ಕಾಣುತ್ತದೆ. ಡ್ರಗ್ಸ್ ಮಾರಾಟವನ್ನು ನಿಯಂತ್ರಿಸುವಂತಹ ಬೇರೆ ಮಾರ್ಗಗಳನ್ನು ಯೋಚಿಸಿ. ತಡೆಗಟ್ಟುವಂತಹ ಕಠಿಣ ಕ್ರಮಗಳನ್ನು ರೂಪಿಸಿ. ಅದು ಬಿಟ್ಟು ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದವರು ವಾಸಿಸುತ್ತಿದ್ದ ಬಾಡಿಗೆ ಮನೆಗಳನ್ನು ಕೆಡವಲು “ಬುಲ್ಡೋಜರ್ ” ಮಾಡುತ್ತೇವೆ ಅನ್ನುವುದು ಖಂಡನೀಯ ಹೇಳಿಕೆ. ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿ ಮಾಡಬೇಕೆಂದಿದೆಯೇ ? ಬಾಡಿಗೆ ಪಡೆಯಲು ಬಂದವರು “ತಮ್ಮ ದಂಧೆಯ” ಬಗ್ಗೆ ಬೋರ್ಡ್ ತೂಗುಹಾಕಿಕೊಂಡು ಬಂದಿರುತ್ತಾರೆಯೇ? ಈಗಾಗ್ಲೇ ಸುಪ್ರೀಂ ಕೋರ್ಟ್‌ ಬುಲ್ಡೋಜರ್ ಅಕ್ರಮವನ್ನು ತಡೆಗಟ್ಟುವುದಕ್ಕಾಗಿಯೇ ಕಾನೂನಿನ ಪ್ರಕ್ರಿಯೆಯಿಲ್ಲದೇ ಮನೆಗಳನ್ನು ಕೆಡವಕೂಡದು” ಎಂದು ಹೇಳಿದೆ. ಅದನ್ನಾದರೂ ಓದಿಕೊಳ್ಳಿ ಮೊದಲು” ಎಂದು ಹೇಳಿದರು.

ಯೋಗಿ ಆದಿತ್ಯನಾಥರ ಅನ್ಯಾಯದ ಕತೆ

‘ಬುಲ್ಡೋಜರ್‌ ನ್ಯಾಯ’ ಎಂದು ಕರೆಯಲಾಗುತ್ತಿರುವ ಈ ಕಾರ್ಯಾಚರಣೆಯನ್ನು ಉತ್ತರ ಪ್ರದೇಶದ ಸರ್ಕಾರ 2017ರಲ್ಲಿ ಆರಂಭಿಸಿತ್ತು. ಯೋಗಿ ಆದಿತ್ಯನಾಥ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಗತ ಪಾತಕಿಗಳು, ಹಿಂಸಾಚಾರ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳ ಆರೋಪಿಗಳ ಆಸ್ತಿಗಳನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸುವ ಪ್ರವೃತ್ತಿ ಆರಂಭವಾಯಿತು. ಆದರೆ ಇದನ್ನು ಮುಸ್ಲಿಂ ಸಮುದಾಯದವರ ಮೇಲೆಯೆ ಬಹುತೇಕ ಬಳಸಿಕೊಳ್ಳಲಾಯಿತು. ನಂತರದಲ್ಲಿ ಬುಲ್ಡೋಜರ್ ಕಾರ್ಯಾಚರಣೆಯನ್ನು ಕೇಸರಿ ಪಕ್ಷದ ಇತರ ರಾಜ್ಯಗಳ ಸರ್ಕಾರಗಳು ಒಂದು ಅಸ್ತ್ರವನ್ನಾಗಿ ಮಾಡಿಕೊಂಡವು. ಸರ್ಕಾರೇತರ ಸಂಸ್ಥೆಗಳು ನೀಡಿರುವ ವರದಿಗಳ ಅನ್ವಯ ಬಿಜೆಪಿ ಆಡಳಿತದ ರಾಜ್ಯಗಳು ಕಳೆದ 8 ವರ್ಷಗಳಿಂದ ಬಹುತೇಕ ಮುಸ್ಲಿಮರಿಗೆ ಸೇರಿದ ನೂರಾರು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ನೆಲಸಮ ಕಾರ್ಯಾಚರಣೆಗಳಿಗೆ ಮುನ್ನ ಮುಸ್ಲಿಂ ಸಮುದಾಯದಿಂದ ಸರ್ಕಾರದ ವಿರುದ್ಧ ಪ್ರತಿಭಟನೆಗಳು, ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದವು. ಇದರ ವಿರುದ್ಧ ಸೇಡಿನ ಕ್ರಮವಾಗಿ ಅಮಾಯಕರ ಮನೆಗಳನ್ನು ಕಟ್ಟಡಗಳನ್ನು ಧ್ವಂಸಗೊಳಿಸಲಾಗಿತ್ತು. 

image 81

ಸಾಮಾನ್ಯವಾಗಿ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದರೆ ಕೆಡವಲಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗೆ ಕೂಡ ಕಟ್ಟಡಗಳನ್ನು ಕೆಡವಬೇಕಾಗುತ್ತದೆ. ಆದರೆ ಧ್ವಂಸಗೊಳಿಸುವ ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ಕಾನೂನು ಪ್ರಕ್ರಿಯೆಗಳಿರುತ್ತವೆ. ಕಾರಣವಿಲ್ಲದೆ ಏಕಾಏಕಿ ನಾಶಗೊಳಿಸುವಂತಿಲ್ಲ. ಆದರೆ ಕೇಸರಿ ಪಕ್ಷ ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಂ ಸಮುದಾಯದ ಜನರು ಸರಕಾರದ ನೀತಿಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅವರನ್ನು ಅಪರಾಧಿಯನ್ನಾಗಿಸಿ ಅವರಿಗೆ ಸಂಬಂಧಿಸಿದ ಕಟ್ಟಡಗಳನ್ನು ಕೆಡಹುವ ಅನ್ಯಾಯದ ಕಾನೂನು ಜಾರಿಗೊಂಡಿದೆ. ಇಲ್ಲಿ ಸರ್ಕಾರವೇ ಆರೋಪಿಯ ಅಪರಾಧವನ್ನು ನಿರ್ಧರಿಸಿ ಶಿಕ್ಷೆಯನ್ನು ನೀಡುತ್ತಿದೆ. ವಿಪರ್ಯಾಸವೆಂದರೆ, ಒಬ್ಬ ಮಾಡಿದ ತಪ್ಪಿಗೆ ಆತನ ಅಮಾಯಕ ಕುಟುಂಬವೇ ಶಿಕ್ಷೆಯನ್ನು ಅನುಭವಿಸಬೇಕಿದೆ.

ಅಲ್ಪಸಂಖ್ಯಾತರಿಗೆ ಆಳುವ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುವ ಯಾವ ಅಧಿಕಾರವಿಲ್ಲ ಎನ್ನುವ ಸೂಚನೆಯನ್ನು ಬಲವಂತವಾಗಿ ನೀಡಲಾಗುತ್ತಿದೆ. ಒಂದು ಕುಟುಂಬದಲ್ಲಿ ಒಬ್ಬ ಅಪರಾಧ ನಡೆಸಿದರೆ ಆತನ ನಿವಾಸದ ಮೇಲೆ ಬುಲ್ಡೋಜರ್ ಮೂಲಕ ನಾಶ ಮಾಡಬಹುದು ಎಂದರೆ, ಹತ್ತಾರು ನೂರಾರು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ಆಸ್ತಿಪಾಸ್ತಿಗಳನ್ನು ಸರ್ಕಾರ ಏಕೆ ನಾಶ ಮಾಡುತ್ತಿಲ್ಲ. ಅಧಿಕಾರಸ್ಥರು ಅವರ ಮೇಲೆ ಏಕೆ ಪ್ರಯೋಗಿಸುತ್ತಿಲ್ಲ? ಧರ್ಮದ ಅಮಲನ್ನು ಮೆತ್ತಿಕೊಂಡಿರುವ ಆಳುವವರು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಒಂದು ಸಮುದಾಯದವರ ಆಸ್ತಿಗಳ ಮೇಲೆ ಮಾತ್ರ ಬುಲ್ಡೋಜರ್‌ಗಳನ್ನು ಹರಿಸಿ ಅವರ ಬದುಕನ್ನು ನಾಶಮಾಡುತ್ತಿದ್ದಾರೆ.

ಅಷ್ಟೇ ಅಲ್ಲ ಈ ಬುಲ್ಡೋಜರ್‌ ಅನ್ಯಾಯಕ್ಕೆ ನಿರಪರಾಧಿಗಳ ಮನೆಯೂ ಧ್ವಂಸವಾಗಿದೆ. 2021ರ ಮಾರ್ಚ್‌ನಲ್ಲಿ, ಮಧ್ಯಪ್ರದೇಶದ ರಾಜ್‌ಗಢದಲ್ಲಿ ಮಾಜಿ ಕೌನ್ಸಿಲರ್ ಶಫೀಕ್ ಅನ್ಸಾರಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾದ 10 ದಿನಗಳ ಬಳಿಕ, ಶಫೀಕ್ ಅನ್ಸಾರಿ ಅವರ ಮನೆಯನ್ನು ಸ್ಥಳೀಯ ಅಧಿಕಾರಿಗಳು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದ್ದರು. ಮನೆ ಕಳೆದುಕೊಂಡ ಶಫೀಕ್ ಕುಟುಂಬಕ್ಕೆ ಅವರ ಸಹೋದರ ಆಶ್ರಯ ನೀಡಿದ್ದರು. ಆಶ್ರಯ ನೀಡಿದ್ದಕ್ಕಾಗಿ ಸಹೋದರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.

ಕೊನೆಗೆ, ಪ್ರಕರಣದ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡಿದ್ದ ರಾಜ್‌ಗಢ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಚಿತ್ರೇಂದ್ರ ಸಿಂಗ್ ಸೋಲಂಕಿ, “ದೂರುದಾರರ ಸಾಕ್ಷ್ಯಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಆರೋಪಿ ಶಫೀಕ್ ಅನ್ಸಾರಿ ಮನೆಯಲ್ಲಿ ಸಂತ್ರಸ್ತೆ ಇದ್ದರು ಎಂಬುದು ಅನುಮಾನಾಸ್ಪದವಾಗಿದೆ. ಆರೋಪಿಯು ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ವೈದ್ಯಕೀಯ ಅಥವಾ ವೈಜ್ಞಾನಿಕ ಪುರಾವೆಗಳಿಂದ ದೃಢಪಟ್ಟಿಲ್ಲ. ಘಟನೆ ಕುರಿತು ತನ್ನ ಪತಿಗೆ ತಿಳಿಸಲು ಮತ್ತು ಪ್ರಕರಣ ದಾಖಲಿಸುವಲ್ಲಿನ ವಿಳಂಬಕ್ಕೆ ಯಾವುದೇ ತೃಪ್ತಿದಾಯಕ ಕಾರಣವನ್ನೂ ನೀಡಿಲ್ಲ. ಮಹಿಳೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದುದ್ದರ ಬಗ್ಗೆ ಶಫೀಕ್ ದೂರು ನೀಡಿದ್ದ ಕಾರಣಕ್ಕಾಗಿ, ಸೇಡು ತೀರಿಸಿಕೊಳ್ಳಲು ಮಹಿಳೆ ಅತ್ಯಾಚಾರದ ಸುಳ್ಳು ಆರೋಪ ಮಾಡಿದ್ದಾರೆ” ಎಂದು ಹೇಳಿ, ಪ್ರಕರಣದಿಂದ ಶಫೀಕ್ ಅವರನ್ನು ಖುಲಾಸೆಗೊಳಿಸಿದ್ದರು. ಆ ನಿರಪರಾಧಿಯ ಇಡೀ ಕುಟುಂಬವನ್ನೇ ಮಧ್ಯಪ್ರದೇಶದ ಬಿಜೆಪಿ ಸರ್ಕಾರ  ಬೀದಿಗೆ ತಂದಿತ್ತು. 

ಅಷ್ಟೇ ಅಲ್ಲ, ಇದೇ ವರ್ಷದ ಮೇ ತಿಂಗಳಲ್ಲಿ ಗುಜರಾತ್‌ನ ಅಹಮದಾಬಾದ್‌ನ ನಗರದ ಚಂದೋಲಾ, ಸಿಯಾಸತ್‌ನಗರ ಮತ್ತು ಬಂಗಾಳಿ ವಾಸ್ ಪ್ರದೇಶಗಳಲ್ಲಿ ಸ್ಥಳೀಯ ಪಾಲಿಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ಕಾರ್ಯಾಚರಣೆಯ ಹೆಸರಿನಲ್ಲಿ 2,50,000 ಚದರ ಕಿ.ಮೀ.ಗಿಂತ ಹೆಚ್ಚಿನ ಪ್ರದೇಶದಲ್ಲಿದ್ದ 11 ಸಾವಿರಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಮನೆಗಳನ್ನು ನೆಲಸಮಗೊಳಿಸಿತ್ತು. ಪಾಲಿಕೆಯ ಈ ನಿರ್ಧಾರದಿಂದ ಸಾವಿರಾರು ಬಡವರು ಸೂರು ಕಳೆದುಕೊಂಡು ಬೀದಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಏಪ್ರಿಲ್‌ನಲ್ಲೂ ಕೂಡ ಗುಜರಾತ್‌ ಸರ್ಕಾರ ಬಾಂಗ್ಲಾ ವಲಸಿಗರ ವಿರುದ್ಧ ಅತಿ ದೊಡ್ಡ ಬುಲ್ಡೋಜರ್ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿಕೊಂಡು ನೂರಾರು ಮುಸ್ಲಿಮರ ಸಣ್ಣಪುಟ್ಟ ಮನೆಗಳು ಹಾಗೂ ಗುಡಿಸಲುಗಳನ್ನು ಕೆಡವಿತ್ತು. ವಾಸ್ತವ ಏನಂದರೆ ಬಾಧಿತ ಕುಟುಂಬಗಳಲ್ಲಿ ಹೆಚ್ಚಾಗಿ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಿಂದ ವಲಸೆ ಬಂದ ಕಾರ್ಮಿಕರು, ಚಿಂದಿ ಆಯುವವರು ಆಗಿದ್ದರು. 

ಬಿಜೆಪಿಯು ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಂ ಸಮುದಾಯದ ಜನರು ಸರ್ಕಾರದ ನೀತಿಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅವರನ್ನು ಅಪರಾಧಿಯನ್ನಾಗಿಸಿ ಅವರಿಗೆ ಸಂಬಂಧಿಸಿದ ಕಟ್ಟಡಗಳನ್ನು ಧ್ವಂಸಗೊಳಿಸುವ ಸಂವಿಧಾನ ವಿರೋಧಿ ಕಾನೂನು ಜಾರಿಗೊಂಡಿದೆ. ಇಲ್ಲಿ ಸರ್ಕಾರವೇ ಆರೋಪಿಯ ಅಪರಾಧವನ್ನು ನಿರ್ಧರಿಸಿ ಶಿಕ್ಷೆಯನ್ನು ನೀಡುತ್ತಿದೆ. ಅಲ್ಪಸಂಖ್ಯಾತರಿಗೆ ಆಳುವ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುವ ಯಾವ ಅಧಿಕಾರವಿಲ್ಲ ಎನ್ನುವ ಸೂಚನೆಯನ್ನು ಬಲವಂತವಾಗಿ ನೀಡಲಾಗುತ್ತಿದೆ. ಮುಸ್ಲಿಂ ಸಮುದಾಯವನ್ನು ಮಾತ್ರ ಗುರಿ ಮಾಡಿರುವ ಬಿಜೆಪಿ ಸರ್ಕಾರಗಳು ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ಆಸ್ತಿಪಾಸ್ತಿಗಳನ್ನು ಮುಟ್ಟುತ್ತಿಲ್ಲ. ಧರ್ಮದ ಅಮಲನ್ನು ಮೈ-ಮನಗಳಿಗೇರಿಸಿಕೊಂಡು ಆಳುವವರು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಒಂದು ಸಮುದಾಯದವರ ಆಸ್ತಿಗಳ ಮೇಲೆ ಮಾತ್ರ ಬುಲ್ಡೋಜರ್‌ಗಳನ್ನು ಹರಿಸಿ ಅವರ ಬದುಕನ್ನು ಸರ್ವ ನಾಶಮಾಡುತ್ತಿದ್ದಾರೆ. ಇಂತಹ ಕೆಟ್ಟ ಇತಿಹಾಸ ಇರುವ ಬುಲ್ಡೋಜರ್‌ ಅನ್ಯಾಯವನ್ನು ಕರ್ನಾಟಕದಲ್ಲೂ ಬಳಸೋದಾಗಿ ಕಾಂಗ್ರೆಸ್‌ ಪಕ್ಷದ ಗೃಹ ಸಚಿವರು ಹೇಳಿಕೆ ಕೊಡೋದು ಅಕ್ಷಮ್ಯ ಅಪರಾಧ. ಇಂತಹ ಅನ್ಯಾಯದ ವಿರುದ್ಧ ಕೇಂದ್ರದಲ್ಲಿ ಪ್ರತಿಪಕ್ಷ ಹೋರಾಟ ಮಾಡ್ತಾ ಇದ್ರೆ, ಇತ್ತ ರಾಜ್ಯದಲ್ಲಿ ಇದೇ ಅನ್ಯಾಯಕ್ಕೆ ಸೊಪ್ಪು ಹಾಕೋ ಕೆಲಸ ಆಗ್ತಾ ಇದೆ. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...