ವಂಟಮೂರಿ ತೀರ್ಪೊಂದು ಸಾಕೇ? ತೆರೆಮರೆಗೆ ಸರಿದ ಪ್ರಕರಣಗಳಿಗೆ ನ್ಯಾಯ ಯಾವಾಗ?

Date:

ಬೆಳಗಾವಿ ಜಿಲ್ಲೆ ವಂಟಮೂರಿ ಹಳ್ಳಿಯಲ್ಲಿ ಮಹಿಳೆಯನ್ನು ಎಲ್ಲರ ಮುಂದೆ ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹೊಡೆದು ಅಮಾನವೀಯತೆಯ ಕ್ರೂರತೆ ಪ್ರದರ್ಶಿಸಿದ ದುರಂತ ಪ್ರಕರಣದ 12 ಜನ ಅಪರಾಧಿಗಳಿಗೆ ಕೋರ್ಟ್ ನಿನ್ನೆ ಐದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಈ ತೀರ್ಪಿನ ವಿಚಾರ ದೇಶದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಒಬ್ಬ ಮಹಿಳೆ ಕುರಿತು ಮಾಡಿರುವ ಇಂಥ ಅಮಾನುಷ ಕೆಲಸಕ್ಕೆ ನ್ಯಾಯಾಲಯ ಇಂಥದ್ದೊಂದು ಗಟ್ಟಿ ತೀರ್ಪು ಕೊಟ್ಟಿರುವುದು ಬರಗಾಲದಲ್ಲಿ ಸಣ್ಣ ಮಳೆ ಸುರಿದಂತಾಗಿದೆ. ಆದರೆ ಈ ತೀರ್ಪೊಂದು ಸಾಕಾದೀತೇ? ಅಥವಾ ಭದ್ರವಾಗಿ ಗಂಟು ಕಟ್ಟಿ ತೆರೆಮರೆಗೆ ಎಸೆಯಲಾದ ಅದೆಷ್ಟೋ ದೌರ್ಜನ್ಯ ಪ್ರಕರಣಗಳಿಗೂ ನ್ಯಾಯಸಮ್ಮತ ಅಂತ್ಯ ಬೇಕಲ್ಲವೇ? ಎಂದು ಕೇಳುವ, ಆ ಬಗ್ಗೆ ಗಂಭೀರವಾಗಿ ಚಿಂತಿಸುವ ನಾಗರಿಕ ಜವಾಬ್ದಾರಿ ಈಗ ಅತ್ಯಂತ ಅವಶ್ಯವಾಗಿ ಬೇಕಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್.ಸಿ.ಆರ್.ಬಿ) ವರದಿಯ ಪ್ರಕಾರ, ಪ್ರತಿ ವರ್ಷ ದೇಶದಲ್ಲಿ 30,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಈ ಪ್ರಕರಣಗಳಲ್ಲಿ ಶಿಕ್ಷೆ ಸಿಗುತ್ತಿರುವುದು ಕೇವಲ 25-30% ಮಾತ್ರ. ಅಂದರೆ 100 ಪ್ರಕರಣಗಳಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗತ್ತಿಲ್ಲ. ಕರ್ನಾಟಕದಲ್ಲಿ ಪ್ರತಿವರ್ಷ ಸರಾಸರಿ 12,000ಕ್ಕೂ ಹೆಚ್ಚು ಮಹಿಳಾ ಸಂಬಂಧಿತ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ, ಗೃಹ ಹಿಂಸೆ, ವರದಕ್ಷಿಣೆ ಕಿರುಕುಳ ಪ್ರಕರಣಗಳು ಸೇರಿವೆ. ಆದರೆ ಈ ಪ್ರಕರಣಗಳಲ್ಲಿ ಶಿಕ್ಷೆ ಸಿಗುತ್ತಿರುವ ಪ್ರಮಾಣ 30%ಕ್ಕೂ ಕಡಿಮೆ ಎಂಬುದು ಆತಂಕಕಾರಿ ವಿಚಾರ. ಹೆಚ್ಚಿನ ಪ್ರಕರಣಗಳು ತನಿಖೆ ಅಥವಾ ನ್ಯಾಯಾಲಯ ಹಂತದಲ್ಲೇ ವರ್ಷಗಳ ಕಾಲ ಬಾಕಿ ಉಳಿಯುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೇಶದಲ್ಲಿ ಇದುವರೆಗೂ ತೀರ್ಪು ಪ್ರಕಟವಾಗದ ಹಾಗೂ ನ್ಯಾಯ ಸಿಗದ ಪ್ರಮುಖ ಪ್ರಕರಣಗಳು ಇಂತಿವೆ..

ಉತ್ತರ ಪ್ರದೇಶದ ಉನ್ನಾಂವ್ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದರೂ ಸಾಕ್ಷಿಗಳ ಸಾವು, ಒತ್ತಡ ಮತ್ತು ವಿಳಂಬವಾದ ತನಿಖೆ ನ್ಯಾಯಾಲಯದ ಪ್ರಕ್ರಿಯೆಯನ್ನು ವರ್ಷಗಳ ಕಾಲ ಎಳೆದೊಯ್ಯುವಂತೆ ಮಾಡಿತು.

ಹಾಥ್ರಸ್ ಪ್ರಕರಣ, ದೇಶವನ್ನೇ ಬೆಚ್ಚಿಬೀಳಿಸಿದ ಈ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬ ಇನ್ನೂ ನ್ಯಾಯ ಸಿಕ್ಕಿಲ್ಲ ಎಂಬ ನೋವಿನಲ್ಲಿ ಇದೆ.

ಕಥುವಾ ಬಾಲಕಿ ಅತ್ಯಾಚಾರ ಪ್ರಕರಣದ ತೀರ್ಪು ಬಂದರೂ ತನಿಖೆ ಮತ್ತು ನ್ಯಾಯ ಪ್ರಕ್ರಿಯೆಯ ವಿಳಂಬವು ದೇಶಾದ್ಯಂತ ಆಕ್ರೋಶವನ್ನು ಹುಟ್ಟಿಸಿತ್ತು.

ಅಯೋಧ್ಯಾ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಗೆ ಸಾಕ್ಷ್ಯ ಕೊರತೆಯಿಂದ ಖುಲಾಸೆ ದೊರೆತಿದ್ದು, ನ್ಯಾಯ ವ್ಯವಸ್ಥೆಯ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ಅರುಣಾ ಶಾನಭಾಗ್ ಅವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದವರು. 1973ರ ನವೆಂಬರ್ 27ರಂದು ಅವರು ಮುಂಬೈನಿನ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಸೊಹನ್ ಲಾಲ್‌ ಎಂಬಾತ ಆಕೆ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಹಲ್ಲೆಗೈದನು. ಈ ವೇಳೆ ಆರೋಪಿಯು ನಾಯಿಗೆ ಕಟ್ಟುವ ಚೇನ್ ಬಳಸಿ ಅರುಣಾ ಶಾನಭಾಗ್ ಅವರ ಕುತ್ತಿಗೆಯನ್ನು ಬಿಗಿಯಾಗಿ ಒತ್ತಿದ ಪರಿಣಾಮ ಅವರಿಗೆ ತೀವ್ರ ಮೆದುಳಿನ ಹಾನಿಯಾಯಿತು. ಹಲ್ಲೆಯ ನಂತರ ಅವರು ನರಹಾನಿಗೆ ಒಳಗಾಗಿ 42 ವರ್ಷಗಳ ಕಾಲ ನರಕಯಾತನೆ ಅನುಭವಿಸಿ ಕೊನೆಯುಸಿರೆಳೆಯುವಂತಾಯಿತು ಆದರೆ ಆರೋಪಿಗೆ ಶಿಕ್ಷೆ ಆಗಿದ್ದು 7 ವರ್ಷ ಮಾತ್ರ ಈ ಪ್ರಕರಣವು ಅತ್ಯಾಚಾರ ಕಾನೂನುಗಳ ದುರ್ಬಲತೆ ಹಾಗೂ ಮಹಿಳೆಯರ ಮೇಲೆ ನಡೆದ ಗಂಭೀರ ಅಪರಾಧಗಳಿಗೆ ತಕ್ಕ ಶಿಕ್ಷೆ ಸಿಗದಿರುವದನ್ನು ದೇಶದ ಮುಂದೆ ಬಹಿರಂಗಪಡಿಸಿದ ಪ್ರಮುಖ ಉದಾಹರಣೆಯಾಗಿ ಉಳಿಯಿತು.

2023ರಲ್ಲಿ ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಮಹಿಳಾ ದೌರ್ಜನ್ಯದ ಪ್ರಕರಣಗಳಲ್ಲಿ ಸಾಕ್ಷ್ಯ ಸಂಗ್ರಹದ ಕೊರತೆ, ಸಾಕ್ಷಿಗಳ ಮೇಲೆ ಒತ್ತಡ, ಮಹಿಳೆಯರಿಗೆ ಕಾನೂನು ಸಹಾಯದ ಹಾಗೂ ಕಾನೂನಿನ ಅರಿವಿನ ಕೊರತೆ, ರಾಜಕೀಯ ಒತ್ತಡ, ಸಾಮಾಜಿಕ ಪರಿಸ್ಥಿತಿಗಳು ಜಾತಿ ವ್ಯವಸ್ಥೆ ಇಂತಹ ಅನೇಕ ಅಂಶಗಳು ದೌರ್ಜನ್ಯಕ್ಕೆ ಈಡಾದ ಮಹಿಳೆಯರಿಗೆ ನ್ಯಾಯ ಸಿಗದಂತೆ ಮಾಡುತ್ತಿರುವುದು ವಿಪರ್ಯಾಸ.

ಈ ಎಲ್ಲ ಅಂಕಿ ಅಂಶಗಳ ನಡುವೆಯೇ ವಂಟಮೂರಿ ಪ್ರಕರಣದ ತೀರ್ಪು ಮಹಿಳಾ ಹಕ್ಕುಗಳ ಹೋರಾಟಕ್ಕೆ ಸಿಕ್ಕ ಸಣ್ಣ ಜಯವಾಗಿದೆ. ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸುವುದು ಗಂಭೀರ ಅಪರಾಧ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಕುರಿತು ಮಹಿಳಾ ಪರ ಹೋರಾಟಗಾರರಾದ ಶಿವಲೀಲಾ ಮಿಸಾಳೆ ಅವರು ಈ ದಿನ.ಕಾಮ್ ಜೊತೆ ಮಾತನಾಡಿದರು. “ವಂಟಮೂರಿ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಆರೋಪಿಗಳಿಗೆ ಮಾತ್ರವಲ್ಲದೆ ಮಹಿಳಾ ಪೀಡಕರಿಗೂ ಭಯ ಹುಟ್ಟಿಸುವಂತದ್ದು. ಆದರೆ, ದೇಶದಲ್ಲಿ ಇನ್ನೂ ಅನೇಕ ಮಹಿಳಾ ದೌರ್ಜನ್ಯ ಪ್ರಕರಣಗಳು ಬಾಕಿ ಇವೆ. ಆ ಎಲ್ಲ ಪ್ರಕರಣಗಳಿಗೂ ಬೇಗ ನ್ಯಾಯ ಸಿಗುವಂತೆ ಸರಕಾರ ಸೂಕ್ತ ವ್ಯವಸ್ಥೆ ಮಾಡಬೇಕು” ಎಂದು ಹೇಳಿದರು.

WhatsApp Image 2026 02 05 at 1.41.48 PM
ಶಿವಲೀಲಾ ಮಿಸಾಳೆ

ವಂಟಮೂರಿ ಪ್ರಕರಣದಲ್ಲಿ ನ್ಯಾಯಾಲಯ ಕೊಟ್ಟ ತೀರ್ಪು ಒಂದು ಒಳ್ಳೆಯ ಹೆಜ್ಜೆ. ಮಹಿಳೆಗೆ ಸಾರ್ವಜನಿಕವಾಗಿ ಮಾಡಿದ ಅವಮಾನ ಸಣ್ಣ ತಪ್ಪಲ್ಲ, ಅದು ದೊಡ್ಡ ಅಪರಾಧ ಅಂತ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಇದರಿಂದ ಮಹಿಳೆಯರಿಗೆ ಸ್ವಲ್ಪ ಧೈರ್ಯ ಬಂದಿದೆ ಅನ್ನೋದರಲ್ಲಿ ಸಂಶಯ ಇಲ್ಲ.

ಆದ್ರೆ ಸತ್ಯ ಏನಂದ್ರೆ ಹಳ್ಳಿಗಳಲ್ಲಿ, ಬಡ ಕುಟುಂಬಗಳಲ್ಲಿ ಇನ್ನೂ ಹಲವಾರು ಮಹಿಳೆಯರಿಗೆ ನ್ಯಾಯ ಸಿಗದೇ ಹಾಗೇ ಉಳಿದಿದೆ.
ಪೊಲೀಸ್ ಸ್ಟೇಷನ್, ಕೋರ್ಟ್ ಅಂತ ಓಡಾಡೋಕೆ ಧೈರ್ಯ ಇಲ್ಲ, ಹಣ ಇಲ್ಲ. ಸಾಕ್ಷಿಗೆ ಬೆದರಿಕೆ, ದೊಡ್ಡವರ ಒತ್ತಡ, ನಮ್ಮ ಮನೆಯ ಗೌರವ ಅನ್ನೋ ಮಾತು ಎಲ್ಲ ಸೇರಿ ಅನ್ಯಾಯ ಮಾಡಿದವರಿಗೆ ತಪ್ಪಿಸಿಕೊಳ್ಳಲು ಸಂತ್ರಸ್ತರೇ ದಾರಿ ಮಾಡಿಕೊಡುವಂತಾಗಿದೆ.

ಆದರೆ ಈ ಒಂದೇ ತೀರ್ಪು ದೇಶದ ಮಹಿಳಾ ನ್ಯಾಯ ವ್ಯವಸ್ಥೆಯ ಮೇಲೆ ಬಿದ್ದಿರುವ ದೊಡ್ಡ ಪರದೆ ಸರಿಸಿ ಬೆಳಕು ತರಲಾರದು. ಅಂಕಿ-ಅಂಶಗಳೇ ಹೇಳುವಂತೆ, ಸಾವಿರಾರು ಮಹಿಳಾ ದೌರ್ಜನ್ಯ ಪ್ರಕರಣಗಳು ವರ್ಷಗಳಿಂದ ತನಿಖೆ, ವಿಚಾರಣೆ ಮತ್ತು ತೀರ್ಪಿನ ಮಧ್ಯೆ ಸಿಲುಕಿ ನ್ಯಾಯವಿಲ್ಲದೆ ಉಳಿದಿವೆ. ಸಾಕ್ಷ್ಯಗಳ ಕೊರತೆ, ಸಾಕ್ಷಿಗಳ ಮೇಲೆ ಒತ್ತಡ, ರಾಜಕೀಯ ಹಸ್ತಕ್ಷೇಪ, ಜಾತಿ ವ್ಯವಸ್ಥೆ, ಬಡತನ ಮತ್ತು ಕಾನೂನು ಅರಿವಿನ ಕೊರತೆ ಇವೆಲ್ಲವೂ ಅನ್ಯಾಯ ಮಾಡಿದವರನ್ನು ರಕ್ಷಿಸುವಂತೆ ಮಾಡುತ್ತಿರುವುದು ಕಠೋರ ಸತ್ಯ.

ಇದನ್ನೂ ಓದಿ: ಬೆಳಗಾವಿ | 400 ಕೋಟಿ ರೂ. ದರೋಡೆ ಪ್ರಕರಣ; ಬಿಲ್ಡರ್​ ಕಿಶೋರ್ ಬಂಧನ

ವಂಟಮೂರಿ ಪ್ರಕರಣದ ತೀರ್ಪು ಮಹಿಳೆಯರಿಗೆ ಧೈರ್ಯ ನೀಡಿದರೂ, ಹಳ್ಳಿಗಳಲ್ಲಿ, ಬಡ ಕುಟುಂಬಗಳಲ್ಲಿ ಬದುಕುತ್ತಿರುವ ಅನೇಕ ಮಹಿಳೆಯರಿಗೆ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳು ಇನ್ನೂ ಭಯದ ಸ್ಥಳಗಳಾಗಿಯೇ ಉಳಿದಿವೆ. ‘ಗೌರವ’, ‘ಸಮಾಜ’, ‘ಹಣ’ ಎಂಬ ಕಾರಣಗಳು ಅನ್ಯಾಯವನ್ನು ಮೌನವಾಗಿ ಸಹಿಸಿಕೊಳ್ಳುವಂತೆ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಒಂದು–ಎರಡು ಗಟ್ಟಿ ತೀರ್ಪುಗಳು ಸಾಕಾಗುವುದಿಲ್ಲ. ಮಹಿಳೆಯರಿಗೆ ತ್ವರಿತ, ಸುಲಭ ಮತ್ತು ಭದ್ರ ನ್ಯಾಯ ದೊರಕುವ ವ್ಯವಸ್ಥೆಯನ್ನು ನಿರ್ಮಿಸುವುದೇ ನಿಜವಾದ ನ್ಯಾಯ.

ವಂಟಮೂರಿ ತೀರ್ಪು ಒಂದು ದಾರಿ ತೋರಿಸಿದೆ. ಆದರೆ ಆ ದಾರಿಯಲ್ಲಿ ನಡೆಯಬೇಕಾದ ಹೊಣೆಗಾರಿಕೆ ಇನ್ನೂ ಸರ್ಕಾರ, ನ್ಯಾಯ ವ್ಯವಸ್ಥೆ ಮತ್ತು ಸಮಾಜದ ಮೇಲೇ ಉಳಿದಿದೆ. ಮಹಿಳೆಗೆ ನ್ಯಾಯ ಅಪರೂಪವಾಗದೆ, ಸಹಜವಾಗುವ ದಿನ ಬಂದಾಗ ಮಾತ್ರ ಇಂತಹ ತೀರ್ಪುಗಳ ಅರ್ಥ ಪೂರ್ಣವಾಗುತ್ತದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...