ಕೇವಲ 2 ಮತಗಳಿಂದ ನೆಹರೂ ಪ್ರಧಾನಿಯಾದರು ಎಂಬುದು ಸಂಪೂರ್ಣ ಸುಳ್ಳು

Date:

1946ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. 15 ಪ್ರಾಂತ್ಯಗಳ PCC ಅಧ್ಯಕ್ಷರ ಪೈಕಿ 12 ಮಂದಿ ಪಟೇಲ್ ಹೆಸರನ್ನು ಶಿಫಾರಸು ಮಾಡಿದರೆ, 3 ಮಂದಿ ಜೆ.ಬಿ. ಕೃಪಲಾನಿ ಅವರನ್ನು ಶಿಫಾರಸು ಮಾಡಿದರು. ಗಾಂಧೀಜಿ ತಮ್ಮ ಆಯ್ಕೆಯಾಗಿ ನೆಹರು ಅವರನ್ನು ಶಿಫಾರಸು ಮಾಡಿದರು. ವರ್ಕಿಂಗ್ ಕಮಿಟಿ ಸದಸ್ಯರು ಗಾಂಧೀಜಿಯವರ ಶಿಫಾರಸ್ಸನ್ನು ಅನುಮೋದಿಸಿದರು. ಪಟೇಲ್ ಮತ್ತು ಕೃಪಲಾನಿಯವರು  ಸ್ಪರ್ಧೆಯಿಂದ ಹಿಂದೆ ಸರಿದರು. ಅಲ್ಲಿ ಚುನಾವಣೆ ನಡೆಯಲಿಲ್ಲ, ನೆಹರು ಅವಿರೋಧ ಆಯ್ಕೆಯಾಗಿದ್ದರು. 

ಸಂಸತ್ತಿನಲ್ಲಿ ಚುನಾವಣಾ ಸುಧಾರಣೆಗಳ ಬಗ್ಗೆ ಮಾತನಾಡುತ್ತಿದ್ದಾಗ ಗೃಹ ಸಚಿವ ಅಮಿತ್ ಶಾ ರವರು ಮತ ಕಳ್ಳತನಕ್ಕೆ ಉದಾಹರಣೆಯಾಗಿ ತಮ್ಮ ಎಂದಿನ ರೀತಿಯಲ್ಲಿ ಮತ್ತೆ ನೆಹರು ಅವರನ್ನು ಎಳೆದು ತಂದು, ನೆಹರು ಮೊದಲ ಪ್ರಧಾನಿಯಾದದ್ದು ಮತ ಕಳ್ಳತನರಿಂದ ಎಂದು ಹೇಳಿ, 1946ರ ಒಂದು ಸನ್ನಿವೇಶವನ್ನು ಸಾಕ್ಷಿಯಾಗಿ ಹೇಳಿದರು. “ಆಗ ನೆಹರು ಪ್ರಧಾನಿಯಾಗಲು ಸಾಧ್ಯವಿರಲಿಲ್ಲ. ಏಕೆಂದರೆ ರಾಜ್ಯಗಳ ಮುಖ್ಯಸ್ಥರು ಪ್ರಧಾನಿ ಆಯ್ಕೆ ಮಾಡಬೇಕಿತ್ತು, ಅದರಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ 28 ಮತ ಪಡೆದಿದ್ದರು. ಆದರೆ ನೆಹರೂ ಕೇವಲ 2 ಮತ ಪಡೆದರೂ ಅವರೇ ಪ್ರಧಾನಿಯಾದರು. ಇದು ಮತ ಕಳ್ಳತನ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನು ಕೇಳುತ್ತಿದ್ದಂತೆಯೇ ಕಾಂಗ್ರೆಸ್‌ನ ಕೆಲ ಸದಸ್ಯರು ಗಾಂಧೀಜಿಯವರನ್ನು ಎಳೆದು ತಂದು, “ಆಗ ಗಾಂಧೀಜಿ ಮಾಡಿದ ಕಾರ್ಯ ತಪ್ಪು ಎಂದು ಹೇಳುತ್ತಿದ್ದೀರಾ?” ಎಂದು ಪ್ರಶ್ನಿಸಿದರು.

ಹಾಗಾದರೆ ನಿಜ ಏನು?

ನೆಹರು ಮತ್ತು ಪಟೇಲರ ನಡುವೆ ಪ್ರಧಾನಿಯಾಗಲು ಪೈಪೋಟಿ ನಡೆದಿದೆಯೇ? ಎಂಬುದನ್ನು ಇತಿಹಾಸದ ಆಧಾರದ ಮೇಲೆ ನೋಡೋಣ. ಅದಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಯ ಹಿನ್ನೆಲೆಯನ್ನು ಗಮನಿಸೋಣ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸಾಮಾನ್ಯವಾಗಿ ತನ್ನ ಅಧ್ಯಕ್ಷರನ್ನು ಪ್ರತಿ ವರ್ಷ ಒಂದು ಅಧಿವೇಶನದಿಂದ ಮತ್ತೊಂದು ಅಧಿವೇಶನದವರೆಗೆ ಚುನಾವಣೆಗಳ ಮೂಲಕ ಆಯ್ಕೆ ಮಾಡುತ್ತಿತ್ತು (1930ರ ತನಕ). ಬ್ರಿಟಿಷರ ನಿರ್ಬಂಧಗಳಿಂದಾಗಿ 1930 ನಂತರ ಚುನಾವಣೆಗಳು ನಿಗದಿತ ವೇಳೆಗೆ ನಡೆಯದೆ ಇದ್ದರೂ, ಅಧ್ಯಕ್ಷರ ಅವಧಿ ಸಾಮಾನ್ಯವಾಗಿ ಒಂದು ವರ್ಷವೇ ಆಗಿತ್ತು.

14kripalani1 1
ಆಚಾರ್ಯ ಕೃಪಲಾನಿ ಮತ್ತು ಪಟೇಲ್‌

ಆಯ್ಕೆ ಪ್ರಕ್ರಿಯೆಯನ್ನು ಗಮನಿಸುವುದಾದರೆ ಅಧಿವೇಶನಕ್ಕೂ ಮುನ್ನ ಪ್ರಾಂತ್ಯ ಕಾಂಗ್ರೆಸ್ ಸಮಿತಿಗಳ (PCC) ಅಧ್ಯಕ್ಷರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರು ಒಟ್ಟಿಗೆ ಒಬ್ಬರ ಹೆಸರನ್ನು ಆಯ್ಕೆ ಮಾಡುತ್ತಿದ್ದರು. ಗಾಂಧೀಜಿಯವರ ಪ್ರಭಾವ ಹೆಚ್ಚಾದ ನಂತರ, ಅವರು ಸೂಚಿಸಿದವರೇ ಸಾಮಾನ್ಯವಾಗಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಉದಾಹರಣೆಗೆ 1934–35 ರಾಜೇಂದ್ರ ಪ್ರಸಾದ್, 1936–37 ಜವಾಹರಲಾಲ್ ನೆಹರು, 1938 ಸುಭಾಷ್ ಚಂದ್ರ ಬೋಸ್ ಮತ್ತು 1940 ರಿಂದ 1946ರವರೆಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್. 1939 ಹೊರತುಪಡಿಸಿ, ಗಾಂಧೀಜಿಯವರ ಶಿಫಾರಸಿನವರೇ ಅಧ್ಯಕ್ಷರಾಗುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಾಗಾದರೆ ಗಾಂಧೀಜಿಯವರು ಅಧ್ಯಕ್ಷರ ಹೆಸರನ್ನು ಸೂಚಿಸಲು ಪರಿಗಣಿಸುತಿದ್ದ ಮಾನದಂಡಗಳು ಏನು ಎಂಬುದನ್ನು ಗಮನಿಸಿದರೆ 1940ರ ಸ್ಥಿತಿ ನೆನಪಿಗೆ ಬರುತ್ತದೆ. 1939ರಲ್ಲಿ ಕಾಂಗ್ರೆಸ್ ತನ್ನ ಪ್ರಾಂತ್ಯ ಸರ್ಕಾರಗಳಿಂದ ರಾಜೀನಾಮೆ ನೀಡಿದ ನಂತರ ಇಂತಹದೇ ಸಂದರ್ಭಕ್ಕೆ ಕಾಯುತ್ತಿದ್ದ ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ ಸಿಂಧ್‌ನಲ್ಲಿ ಒಟ್ಟಾಗಿ ಸರ್ಕಾರ ರಚಿಸಿದವು. ಮತೀಯ ರಾಜಕೀಯ ಬಲವಾಗುತ್ತಿರುವುದನ್ನು ಗಾಂಧೀಜಿ ಗಮನಿಸಿದ್ದರು. ಅದಕ್ಕಾಗಿ ಎಲ್ಲರನ್ನೂ ಪ್ರತಿನಿಧಿಸುವ ಮುಖ ಬೇಕು ಎಂದು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರನ್ನು ಅಧ್ಯಕ್ಷರಾಗಿ ಶಿಫಾರಸು ಮಾಡಿದರು. ಆ ಮೂಲಕ ಕಾಂಗ್ರೆಸ್ ಪಕ್ಷವು ಸಮಗ್ರ ಭಾರತವನ್ನು ಪ್ರತಿನಿಧಿಸುವ ಪಕ್ಷ ಎಂದು ಸೂಚ್ಯವಾಗಿ ಹೇಳಿದರು.

ಇನ್ನು 1946ರ ಸ್ಥಿತಿ ನೋಡೋಣ, ಅಮಿತ್ ಶಾ ಉಲ್ಲೇಖಿಸಿದ ಘಟನೆಯ ಬಗ್ಗೆ ತಿಳಿಯಲು, 1946ರ ಪ್ರಾಂತ್ಯ ಚುನಾವಣೆಗಳಲ್ಲಿ 1939ರಲ್ಲಿ ಹಿಂದೂ ಮಹಾಸಭಾ ಜೊತೆಯಾಗಿ ಸರ್ಕಾರ ರಚಿಸಿದ್ದ ಫಲವಾಗಿ ಮುಸ್ಲಿಂ ಲೀಗ್ ಅಲ್ಪಸಂಖ್ಯಾತರಿಗೆ ಮೀಸಲಿದ್ದ ಹೆಚ್ಚಿನ ಸ್ಥಾನಗಳನ್ನು ಗೆದ್ದಿತು. ಮುಂದುವರೆದು 24–03–1946ರಂದು ಕ್ಯಾಬಿನೆಟ್ ಮಿಷನ್ ಸದಸ್ಯರು ಭಾರತಕ್ಕೆ ಬಂದು ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಎರಡು ಯೋಜನೆಗಳನ್ನು ನೀಡಿರುತ್ತಾರೆ 1. ದೀರ್ಘಾವಧಿ ಯೋಜನೆಯಾಗಿ ಸಂವಿಧಾನ ರಚನೆ 2. ಅಲ್ಪಾವಧಿ ಯೋಜನೆಯಾಗಿ ಕೇಂದ್ರ ಸರ್ಕಾರ ರಚನೆ (ಕೇವಲ: ರಕ್ಷಣಾ, ವಿದೇಶಾಂಗ, ಸಂವಹನ) ಈ ವರದಿಯನ್ನು 16–05–1946 ರಂದು ಘೋಷಿಸುತ್ತಾರೆ.

1308728 amithsha

ಈ ಎಲ್ಲಾ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್ಸಿನ ಸದಸ್ಯರಿಗೆ ಶೀಘ್ರದಲ್ಲಿ ನಮಗೆ ಸ್ವಾತಂತ್ರ್ಯ ಸಿಗಲಿದೆ ಎಂದು ಅನಿಸತೊಡಗುತ್ತದೆ. ಈ ಹಿನ್ನಲೆಯಲ್ಲಿ ಆರು ವರ್ಷಗಳ ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ಆಗ 15 ಪ್ರಾಂತ್ಯಗಳ PCC ಅಧ್ಯಕ್ಷರ ಪೈಕಿ 12 ಮಂದಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರನ್ನು ಶಿಫಾರಸು ಮಾಡಿದರೆ, 3 ಮಂದಿ ಆಚಾರ್ಯ ಜೆ.ಬಿ. ಕೃಪಲಾನಿ ಅವರನ್ನು ಶಿಫಾರಸು ಮಾಡಿದರು. ಗಾಂಧೀಜಿ ತಮ್ಮ ಆಯ್ಕೆಯಾಗಿ ನೆಹರುರವರನ್ನು ಶಿಫಾರಸು ಮಾಡಿದರು. ವರ್ಕಿಂಗ್ ಕಮಿಟಿ ಸದಸ್ಯರು ಗಾಂಧೀಜಿಯವರ ಶಿಫಾರಸ್ಸನ್ನು ಅನುಮೋದಿಸಿದರು. ಏಕೆಂದರೆ ನೆಹರು ಅಂತರರಾಷ್ಟ್ರೀಯ ಗೌರವ ಹೊಂದಿದ್ದರು, ಮುಸ್ಲಿಂ ಬೆಂಬಲ ಪಡೆದಿದ್ದರು, ಅವರ ಆಧುನಿಕ ಯೋಚನೆಗಳು ಹೊಸ ರಾಷ್ಟ್ರಕ್ಕೆ ಪೂರಕವಾಗಿದ್ದವು ಮತ್ತು ಬ್ರಿಟಿಷರ ಜೊತೆಗೆ ಮಾತುಕತೆಗೆ ನೆಹರೂ ಸೂಕ್ತ ಎಂದು ಗಾಂಧಿ ಭಾವಿಸಿದರು. ಪಟೇಲ್ ರವರು ಮತ್ತು ಕೃಪಲಾನಿಯವರು ಗಾಂಧೀಜಿಯವರ ಮಾತಿಗೆ ಮಣಿದು, ಸ್ಪರ್ಧೆಯಿಂದ ಹಿಂದೆ ಸರಿದರು. ಅಲ್ಲಿ ಚುನಾವಣೆ ನಡೆಯಲಿಲ್ಲ, ಯಾರೂ ಮತ ಹಾಕಲಿಲ್ಲ. ಬದಲಿಗೆ ಪಿಸಿಸಿಗಳಿಂದ ಶಿಫಾರಸ್ಸುಗೊಂಡಿದ್ದವರು ಹಿಂದೆ ಸರಿದಿದ್ದರಿಂದ 06–07–1946 ರಂದು ನೆಹರು ಅವಿರೋಧವಾಗಿ ಕಾಂಗ್ರೆಸ್ ಅಧ್ಯಕ್ಷರಾದರು.

ಇಲ್ಲಿ ಗಮನಿಸಬೇಕಾದದ್ದು ಏನೆಂದರೆ ನೆಹರುರವರು ಅಧ್ಯಕ್ಷರಾಗಲು ಪ್ರಯತ್ನಿಸಿರಲಿಲ್ಲ. ಬಯಸದೆ ಬಂದ ಈ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ. ಪಟೇಲ್ ರವರು ನಾನೇ ಅಧ್ಯಕ್ಷನಾಗಬೇಕು ಎಂದು ಒತ್ತಾಯಿಸಿದ್ದರು ಎಂಬುದಕ್ಕೆ ದಾಖಲೆಗಳು ಸಿಗುವುದಿಲ್ಲ. ಬದಲಿಗೆ ಪಟೇಲ್ ಮತ್ತು ಗಾಂಧೀಜಿ, ನೆಹರೂರವರ ಸಂಬಂಧ ಚೆನ್ನಾಗಿಯೇ ಮುಂದುವರೆಯುತ್ತದೆ. ಹಾಗಾದರೆ ಗಾಂಧೀಜಿಯವರು ನೆಹರುರನ್ನು ಏಕೆ ಆಯ್ಕೆ ಮಾಡಿದರು? ಎನ್ನುವುದಕ್ಕೆ 2 ಕಾರಣಗಳನ್ನು ನೋಡಬಹುದು ಮೊದಲನೆಯದಾಗಿ ವಿದೇಶಾಂಗ ಅನುಭವ; ನೆಹರುರವರು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಅಂತರರಾಷ್ಟ್ರೀಯ ಕಾಂಗ್ರೆಸ್ ಎಂಬ ಸಂಘಟನೆ ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಈ ವೇದಿಕೆಯನ್ನು ಬಳಸಿಕೊಂಡು ಅವರು ಅಂತರಾಷ್ಟ್ರೀಯ ಸಂಪರ್ಕಗಳನ್ನು ಸ್ಥಾಪಿಸಿದರು ಮತ್ತು ಭಾರತದ ಸ್ವಾತಂತ್ರ್ಯದ ಹಾಗೂ ಜಾಗತಿಕ ವಸಾಹತುಶಾಹಿ ವಿರೋಧಿ ಉದ್ದೇಶವನ್ನು ಉತ್ತೇಜಿಸಿದ್ದರು. ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಜನತಾಂತ್ರಿಕ ಮೌಲ್ಯಗಳ ಪ್ರಚಾರವೂ ಮಾಡಿದ್ದು, ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದರು. ರಕ್ಷಣೆಯ ಅನುಭವ ಇಬ್ಬರಿಗೂ ಇರಲಿಲ್ಲ ಎಂದೇ ಹೇಳಬಹುದು.

patel nehru banner 102418060410

ಎರಡನೆಯ ಕಾರಣ ಎಂದರೆ ನೆಹರು ಎಲ್ಲರನ್ನು ಒಗ್ಗೂಡಿಸುವ ವ್ಯಕ್ತಿ; ಕ್ಯಾಬಿನೆಟ್ ಪ್ಲ್ಯಾನ್ ಪ್ರಕಾರ ಕೇಂದ್ರ ಸರ್ಕಾರದಲ್ಲಿ ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಅಗತ್ಯ ಎಂಬುದು ವರದಿಯಲ್ಲಿ ಇತ್ತು, ಪಟೀಲ್‌ರವರು ಒಳರಾಷ್ಟ್ರೀಯ ರಾಜಕೀಯದಲ್ಲಿ ಶಕ್ತಿಶಾಲಿ ಮತ್ತು ಕಠಿಣ ನಿಲುವಿನವರಾಗಿದ್ದರು. ನೆಹರು ಹೆಚ್ಚು ಸಮನ್ವಯಕಾರಿಯಾಗಿದ್ದರು. ಹೀಗೆ 1946ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ನೆಹರೂರವರು ಹೆಚ್ಚು ಸೂಕ್ತ ವ್ಯಕ್ತಿ ಎಂದು ಗಾಂಧೀಜಿಯವರು ನಿರ್ಧರಿಸುತ್ತಾರೆ. ಮುಂದುವರೆದು 02–09–1946 ತಾತ್ಕಾಲಿಕ ಸರ್ಕಾರ (ಕಾರ್ಯಕಾರಿ ಮಂಡಳಿ) ರಚನೆಯಾಯಿತು. ಈ ಕಾರ್ಯಕಾರಿ ಮಂಡಳಿಗೆ ನೆಹರುರವರು ಉಪಾಧ್ಯಕ್ಷರಾಗಿ ಹಾಗೂ ವಿದೇಶಾಂಗ ಸಚಿವರಾಗುತ್ತಾರೆ, ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಗೃಹ, ಮಾಹಿತಿ-ಪ್ರಸಾರ ಸಚಿವರಾಗುತ್ತಾರೆ. ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ

  1. 1946 ರಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡಿತ್ತು. ಸಹಜವಾಗಿಯೇ ಅದು ಮುಂದಿನ ಪ್ರಧಾನಿಗಳನ್ನು ನಿರ್ಧರಿಸುತ್ತಿತ್ತು.
  2. ಪಟೇಲ್ ಮತ್ತು ಆಚಾರ್ಯ ಕೃಪಲಾನಿಯವರು ಗಾಂಧಿಗೆ ಗೌರವ ಕೊಟ್ಟು ಅಧ್ಯಕ್ಷ ಹುದ್ದೆಯಿಂದ ಸ್ವಯಂಪ್ರೇರಿತವಾಗಿ ಹಿಂದೆ ಸರಿದಿದ್ದರು.

    ಹೀಗೆ ಇತಿಹಾಸದುದ್ದಕ್ಕೂ ಸುಳ್ಳನ್ನು ಹೇಳುತ್ತಾ ಬಂದಿರುವ ಆರ್ ಎಸ್ ಎಸ್ ಮತ್ತು ಬಿಜೆಪಿಯವರು ನೆಹರುರವರು ತಮ್ಮ ಯೋಗ್ಯತೆಯಿಂದ ಅಂದು ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾದರು ಹಾಗೂ ಅವರು ಬಯಸದೆ ಬಂದ ಕರ್ತವ್ಯವನ್ನು ನಿಭಾಯಿಸಿದರು ಎಂಬುದನ್ನು ಮರೆಮಾಚುತ್ತಾರೆ.

    ಇದನ್ನೂ ಓದಿ ವಂದೇ ಮಾತರಂ ಚರ್ಚೆ | ಬಿಜೆಪಿ, ಆರ್‌ಎಸ್‌ಎಸ್‌ “ದೇಶದ್ರೋಹ”ವನ್ನು ಇಂಚಿಂಚು ಬಿಚ್ಚಿಟ್ಟ ಸಂಜಯ್ ಸಿಂಗ್

ಹಾಗಾದರೆ ನೆಹರುರವರು ನಿಜವಾಗಿ ಪ್ರಧಾನಿಯಾದದ್ದು ಹೇಗೆ?

ಈ ಪ್ರಶ್ನೆಗೆ ಉತ್ತರ ಎಂದರೆ, 20–02–1947 ರಂದು ಬ್ರಿಟಿಷರು 1948ರೊಳಗೆ ಸ್ವಾತಂತ್ರ್ಯ ನೀಡುವುದಾಗಿ ಘೋಷಣೆ ಮಾಡುತ್ತಾರೆ. ಆಗ ಕಾಂಗ್ರೆಸ್ ಅಧ್ಯಕ್ಷರಾಗಿ ಜೆ.ಬಿ. ಕೃಪಲಾನಿಯವರು ಇರುತ್ತಾರೆ. 18–07–1947ರಂದು ಭಾರತೀಯ ಸ್ವಾತಂತ್ರ್ಯ ಕಾಯ್ದೆ ಅಂಗೀಕಾರ ವಾಗುತ್ತದೆ ಮತ್ತು 15–08–1947ರಂದು ಭಾರತ ಸ್ವತಂತ್ರವಾಗುತ್ತದೆ. ವೈಸರಾಯರು ಕಾರ್ಯಾಂಗದ ಉಪಾಧ್ಯಕ್ಷರಾಗಿದ್ದ ನೆಹರುರವರಿಗೆ ಅಧಿಕಾರ ಹಸ್ತಾಂತರಿಸುತ್ತಾರೆ. ಇದರಿಂದ ನೆಹರು ಮೊದಲ ತಾತ್ಕಾಲಿಕ ಪ್ರಧಾನಿಯಾಗಿ ನೇಮಕವಾಗುತ್ತಾರೆ. ಇದು ಪೂರ್ಣ ಸತ್ಯ. ಆದರೆ ಈ ಬೆಳವಣಿಗೆಗಳನ್ನು ಅಪೂರ್ಣವಾಗಿ ಪ್ರತಿಯೊಬ್ಬರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಸುಳ್ಳಲ್ಲ. ಎರಡು ವೋಟ್‌ನಿಂದ ನೆಹರೂ ಪ್ರಧಾನಿಯಾದರು ಎಂಬುದು ಅತಿ ದೊಡ್ಡ ಸುಳ್ಳು. ಹಾಗಾಗಿ ಗೃಹ ಸಚಿವರು ವೋಟ್ ಚೋರಿ ಬಗ್ಗೆ ಹೇಳಬೇಕಾದರೆ ನೆಹರುರವರನ್ನು ಎಳೆದು ತಂದದ್ದು ಅಕ್ಷಮ್ಯ ಹಾಗೂ ರಾಜಕೀಯ ಪ್ರೇರಿತ. ಸುಳ್ಳುಗಳನ್ನು ಪದೇಪದೇ ಹೇಳಿ ಸುಳ್ಳನ್ನು ಸತ್ಯವನ್ನಾಗಿಸುವ ಹುನ್ನಾರ ಅಷ್ಟೇ. ಈ ಘಟನಾವಳಿಗಳ ಬಗ್ಗೆ ಕಾಂಗ್ರೆಸ್ಸಿನ ಎಲ್ಲಾ ನಾಯಕರಲ್ಲಿ ಸ್ಪಷ್ಟ ಚಿತ್ರಣ ಇಲ್ಲದಿರುವುದು ಕೂಡ ಬಿಜೆಪಿಯವರಿಗೆ ವರದಾನವಾಗಿದೆ.

ಆದಂ ಖಾನ್‌
ಆದಂ ಖಾನ್
+ posts

ತುಮಕೂರು ಜಿಲ್ಲೆಯ ಮಧುಗಿರಿಯವರಾದ ಆದಂ ಖಾನ್ ಯುವ ಹೋರಾಟಗಾರರು. ಜಾಗೃತ ಕರ್ನಾಟಕ ಸಂಘಟನೆಯ ರಾಜ್ಯ ಸಮಿತಿ ಸದಸ್ಯರು.

ಪೋಸ್ಟ್ ಹಂಚಿಕೊಳ್ಳಿ:

ಆದಂ ಖಾನ್
ಆದಂ ಖಾನ್
ತುಮಕೂರು ಜಿಲ್ಲೆಯ ಮಧುಗಿರಿಯವರಾದ ಆದಂ ಖಾನ್ ಯುವ ಹೋರಾಟಗಾರರು. ಜಾಗೃತ ಕರ್ನಾಟಕ ಸಂಘಟನೆಯ ರಾಜ್ಯ ಸಮಿತಿ ಸದಸ್ಯರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...