ಚಿನ್ನದ ಆಸೆಬಿಟ್ಟು ಬೆಳ್ಳಿಯ ಬೆನ್ನತ್ತಿದ ಆಭರಣಪ್ರಿಯರು

Date:

ಬಂಗಾರದ ಬೆಲೆಗೂ ಬೆಳ್ಳಿ ಬೆಲೆಗೂ ಅಜಗಜಾಂತರ. ಒಂದು ಚಿಕ್ಕದಾದ ಚಿನ್ನದ ಸರ ಕೊಳ್ಳುವ ಬೆಲೆಯಲ್ಲಿ ಕಿವಿಯೋಲೆ, ಉಂಗುರ, ಕಾಲು-ಕೊರಳು ಚೇನ್, ಆಕ್ಸಿಡೈಸ್ಡ್ ಸೆಟ್‌ ಸೇರಿದಂತೆ 10ಕ್ಕೂ ಹೆಚ್ಚು ಬೆಳ್ಳಿಯ ಆಭರಣಗಳನ್ನು ಕೊಳ್ಳಬಹುದು. ಇದು ಬೆಳ್ಳಿಯ ಆಯ್ಕೆಗೆ ಪ್ರಮುಖ ಕಾರಣ.

ಒಂದು ಕಾಲದಲ್ಲಿ ಮುಖ್ಯ ಆಭರಣ ಎನಿಸಿದ್ದ ಹಾಗೂ ಹೂಡಿಕೆಯ ವಸ್ತುವಾಗಿದ್ದ ಬಂಗಾರ ಈಗ ಮಧ್ಯಮ ವರ್ಗದ ಜನರಿಗೆ ಕೈಗೆಟುಕದ ಹುಳಿದ್ರಾಕ್ಷಿಯಾದರೆ, ಬಡವರಿಗಂತೂ ಗಗನ ಕುಸುಮವಾಗಿದೆ. ಈ ವರ್ಷದ ಆರಂಭದಿಂದಲೇ ಶುರುವಾದ ಬಂಗಾರದ ಬೆಲೆ ಏರಿಕೆಯ ನಾಗಾಲೋಟ ವರ್ಷಾಂತ್ಯಕ್ಕೂ ಮುಂದುವರೆದಿದ್ದು, ಭಾರತದ ಬಹುಸಂಖ್ಯಾತ ವರ್ಗದ ಚಿನ್ನ ಕೊಳ್ಳುವ ಕನಸಿಗೆ ನೀರೆರಚಿದೆ. ಈ ಮಧ್ಯೆ ಬಿಳಿ ಲೋಹ ಬೆಳ್ಳಿಯ ದರವೂ ಏರುತ್ತಿದೆ. ಆದರೆ, ಚಿನ್ನದ ದರ ಭರಿಸಲಾಗದ ಆಭರಣಪ್ರಿಯರು ಬೆಳ್ಳಿಯತ್ತ ಮುಖ ಮಾಡಿದ್ದಾರೆ. ಇದರಿಂದ ಚಿನ್ನದ ಪರ್ಯಾಯವಾಗಿ ಮುಖ್ಯ ಆಭರಣ ಎನಿಸುವತ್ತ ಬೆಳ್ಳಿ ಕ್ರಮೇಣ ಹೆಜ್ಜೆ ಹಾಕುತ್ತಿದೆ.

ಬಂಗಾರದ ಬೆಲೆಗೂ ಬೆಳ್ಳಿ ಬೆಲೆಗೂ ಅಜಗಜಾಂತರ. ಉದಾಹರಣೆಗೆ, ಒಂದು ಚಿಕ್ಕದಾದ ಚಿನ್ನದ ಸರ ಕೊಳ್ಳುವ ಬೆಲೆಯಲ್ಲಿ ಕಿವಿಯೋಲೆ, ಉಂಗುರ, ಕಾಲು-ಕೊರಳು ಚೇನ್, ಆಕ್ಸಿಡೈಸ್ಡ್ ಸೆಟ್‌ ಸೇರಿದಂತೆ 10ಕ್ಕೂ ಹೆಚ್ಚು ಬೆಳ್ಳಿ ಆಭರಣಗಳನ್ನು ಕೊಳ್ಳಬಹುದು. ಇದು ಬೆಳ್ಳಿಯ ಆಯ್ಕೆಗೆ ಪ್ರಮುಖ ಕಾರಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆಳ್ಳಿಗೆ ವಿನ್ಯಾಸಗಳ ವೈವಿಧ್ಯ ಕೂಡ ಹೆಚ್ಚು: ಇಂದಿನ ಫ್ಯಾಷನ್‌ ಲೋಕದಲ್ಲಿ ದುಬಾರಿ ಚಿನ್ನಕ್ಕಿಂತ ಮೆಟಾಲಿಕ್‌ ಆರ್ನಮೆಂಟ್ಸ್‌ಗೆ ಬೇಡಿಕೆ ಹೆಚ್ಚು. ಅದರಲ್ಲೂ ಬೆಳ್ಳಿ. ಮಿನಿಮಲ್‌ ಲುಕ್‌, ವಿಶಿಷ್ಟ ವಿನ್ಯಾಸ, ಚಂಕಿ ಸೆಟ್‌ಗಳಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಡಿಸೈನ್‌ಗಳು ಎಲ್ಲವೂ ಬೆಳ್ಳಿಯಲ್ಲೇ ಸಿಗುತ್ತಿವೆ. ದೈನಂದಿನ ಬಳಕೆ, ಪಾರ್ಟಿ, ಕಚೇರಿ ಉಡುಪಿಗೆ ಎಲ್ಲಕ್ಕೂ ಬೆಳ್ಳಿ ಸರಿಯಾಗಿ ಹೊಂದುತ್ತದೆ. ಚಿನ್ನಕ್ಕಿಂದ ಸುಲಭವಾಗಿ ಧರಿಸಬಹುದಾದ ಹಾಗೂ ಬದಲಾಯಿಸಬಹುದಾದ ಆಭರಣ ಸ್ಥಾನದಲ್ಲಿ ಯುವ ಜನತೆ ಇದನ್ನು ನೋಡುತ್ತಿದೆ.

ಜಾಗತಿಕ ಕೈಗಾರಿಕೆಯಲ್ಲಿ ಬೆಳ್ಳಿಯ ಬಳಕೆ: ಬೆಳ್ಳಿ ಕೇವಲ ಆಭರಣಗಳಿಗೆ ಸೀಮಿತವಾಗಿಲ್ಲ. ಹಲವು ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲೂ ತನ್ನ ವ್ಯಾಪ್ತಿ ವಿಸ್ತರಿಸುತ್ತಿದೆ. ಸೌರ ಪ್ಯಾನಲ್‌, ಮೊಬೈಲ್‌, ಬ್ಯಾಟರಿ, ಎಲೆಕ್ಟ್ರಿಕ್‌ ವಾಹನ, ವೈದ್ಯಕೀಯ ಸಾಧನ, ಲ್ಯಾಬ್ ಟೂಲ್‌ಗಳಲ್ಲಿ ಬೆಳ್ಳಿಯನ್ನು ಸಾಕಷ್ಟಾಗಿ ಬಳಸಲಾಗುತ್ತದೆ. ಈ ಕೈಗಾರಿಕಾ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಪರಿಣಾಮ ಬೆಳ್ಳಿ ʼಮೌಲ್ಯ ಹೊಂದಿರುವ ಲೋಹʼ ಎಂಬ ಭಾವನೆ ಮತ್ತಷ್ಟು ಗಟ್ಟಿಯಾಗುತ್ತಿದೆ. ಅಲ್ಲದೆ, ಚಿಕ್ಕ-ಪುಟ್ಟ ಕಾರ್ಯಕ್ರಮಗಳಿಗೆ ಹೋದಾಗ ಬೆಳ್ಳಿ ವಸ್ತುಗಳನ್ನು ಉಡುಗೊರೆಯಾಗಿ ಕೊಡುವ ವಾಡಿಕೆ ಇದೆ. ವಾಹನಗಳ ಕ್ರೇಜ್‌ ಇರುವವರು ಬೆಳ್ಳಿ ಲೇಪಿತ ಸಣ್ಣ ಸಣ್ಣ ವಸ್ತುಗಳಿಂದ ತಮ್ಮ ಗಾಡಿಗಳನ್ನು ಅಲಂಕರಿಸುತ್ತಾರೆ. ಇದು ಮಧ್ಯಮವರ್ಗಕ್ಕೆ ಚಿನ್ನದಿಂದ ಸಾಧ್ಯವಿಲ್ಲ. ಕಳುವಾಗುವ ಆತಂಕದಿಂದಲೂ ಚಿನ್ನ ಹೆಚ್ಚಾಗಿ ಪೆಟಾರಿಯಲ್ಲೇ ಉಳಿದುಬಿಡುತ್ತದೆ. ಇದೂ ಕೂಡ ಬೆಳ್ಳಿಯ ಬಳಕೆಯನ್ನು ಹೆಚ್ಚಿಸುತ್ತದೆ.

ಹೂಡಿಕೆಯ ದೃಷ್ಟಿಯಿಂದ ಪರಿಗಣಿಸಬೇಕಾದ್ದು: ಹೂಡಿಕೆ ಮಾಡುವಾಗ ಸಾಮಾನ್ಯವಾಗಿ ಗಟ್ಟಿಗಳು, ನಾಣ್ಯಗಳ ಮೊರೆ ಹೋಗಲಾಗುತ್ತದೆ. ಚಿನ್ನದ್ದು ಬೇಕೆಂದಾಗ ದೊಡ್ಡ ಮೊತ್ತ ತೆರಬೇಕು. ಆದರೆ ಬೆಳ್ಳಿಯ ಬಾರ್‌ ಅಥವಾ ನಾಣ್ಯಗಳನ್ನು ಕಡಿಮೆ ಮೊತ್ತಕ್ಕೆ ಖರೀದಿಸಬಹುದು. ಅಂದರೆ, ಸಾಮಾನ್ಯ ಜನರೂ ಸುಲಭವಾಗಿ ಮೆಟಲ್‌ ಹೂಡಿಕೆ ಮಾಡಬಹುದು. ಕಳೆದು ಹೋದರೂ ದೊಡ್ಡ ನಷ್ಟವಾಗದು, ಜತೆಗೆ ಮನೆಯಲ್ಲೇ ಇಟ್ಟುಕೊಳ್ಳಲು ಅಥವಾ ಧರಿಸಿ ಆರಾಮಾಗಿ ಓಡಾಡಲು ಆತಂಕವಿಲ್ಲ. ಕಡಿಮೆ ಅಪಾಯದ ಆಯ್ಕೆಯೂ ಆಗಿರುವುದರಿಂದ ಬೆಳ್ಳಿ ಚಿನ್ನದ ಮುಂದೆ ಪರ್ಯಾಯವಾಗಬಲ್ಲದು.

ಜೀವನ ಶೈಲಿಯಲ್ಲಿ ಬದಲಾವಣೆ: ಆಧುನಿಕತೆಗೆ ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿರುವಂತೆ ಜೀವನಶೈಲಿಯೂ ಬದಲಾಗುತ್ತಿದೆ. ಯುವಜನತೆ ಭಾರೀ, ಅಲಂಕರಿತ ಚಿನ್ನಕ್ಕಿಂತ ಹಗುರ, ಸ್ಟೈಲಿಷ್‌ ಹಾಗೂ ಎಲ್ಲಾ ರೀತಿಯ ಉಡುಪಿಗೂ ಹೊಂದಿಕೊಳ್ಳುವ ಆಭರಣಗಳನ್ನು ಹೆಚ್ಚು ಪರಿಗಣಿಸುತ್ತದೆ. ಈ ಅಗತ್ಯಕ್ಕೆ ಬೆಳ್ಳಿ ಸರಿಯಾಗಿ ಹೊಂದಿಕೊಳ್ಳುತ್ತದೆ. ಎಷ್ಟೇ ಆಭರಣಗಳಿದ್ದರೂ ಚಿನ್ನದಂತೆ ಬ್ಯಾಂಕ್‌ ಲಾಕರ್‌ನಲ್ಲಿಟ್ಟುಕೊಳ್ಳಬೇಕಾಗಿಲ್ಲ. ದೈನಂದಿನ ಬಳಕೆಗೆ ಯಾವುದೇ ತೊಂದರೆ ಇಲ್ಲ. ಬಜೆಟ್‌ಗೂ ಹೊರೆಯಾಗುವುದಿಲ್ಲ. ಪ್ರಸ್ತುತ ಹೆಚ್ಚು ಚಾಲ್ತಿಯಲ್ಲಿರುವ ಜೆನ್-ಜೀ ವರ್ಗ ಬಯಸುವುದು ಇದನ್ನೇ. ಸಿಂಪಲ್‌ ಎನ್‌ ಎಲಿಗೆಂಟ್.‌ ಹಾಗಾಗಿ ದುಬಾರಿ ಆಭರಣಗಳಿಗಿಂತ ಬಜೆಟ್‌ ಫ್ರೆಂಡ್ಲಿ ಕಡೆ ವಾಲುವುದು ಸಹಜ.

ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿಯ ಸ್ಥಿತಿಗತಿ ಹೇಗಿದೆ?
ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ 2020ರ ಬಳಿಕ ಜಾಗತಿಕ ಬೆಳ್ಳಿ ಮಾರುಕಟ್ಟೆ ಗಮನಾರ್ಹ ಬದಲಾವಣೆ ಕಂಡಿದೆ. 2024-25ರಲ್ಲಿ ಬೆಳ್ಳಿ ದರ ನಿರಂತರವಾಗಿ ಏರುಗತಿಯಲ್ಲಿದೆ ಮತ್ತು ಬೇಡಿಕೆಯನ್ನೂ ಹೆಚ್ಚಿಸಿಕೊಂಡಿದೆ. ಮೈನಿಂಗ್‌, ಉತ್ಪಾದನೆ, ಮರುಪ್ರಕ್ರಿಯೆ (ರಿಸೈಕ್ಲಿಂಗ್)‌ ಕೂಡ ಸಮಗ್ರ ಬೇಡಿಕೆಯನ್ನು ಪೂರೈಸಲು ಸಾಕಾಗದಿರುವುದು ಬೆಳ್ಳಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ ಎನ್ನುತ್ತಾರೆ ತಜ್ಞರು.

“ಚಿನ್ನ ಅಥವಾ ಬೆಳ್ಳಿ; ಒಟ್ಟಿನಲ್ಲಿ ಆಭರಣ ಕೊಳ್ಳೋದು ಅಂದ್ರೆ ಹೆಣ್ಣುಮಕ್ಕಳಿಗೆ ಭಾರೀ ಸಂತೋಷ. ಕೆಲ ವರ್ಷಗಳ ಹಿಂದೆ ಯುಗಾದಿ, ದೀಪಾವಳಿ, ಅಕ್ಷಯ ತೃತೀಯ ಅಂತ ಚಿನ್ನ ಕೊಳ್ಳೋಕೊಂದು ನೆಪ ಬೇಕಿತ್ತು. ಆದರೆ, ಈಗ ಹಾಗಿಲ್ಲ. ಏನಾದರೊಂದು ಆಭರಣ ಕೊಳ್ಳಬೇಕು ಅಂದರೆ ಅಳೆದು ತೂಗಿ, ಹಣ ಹೊಂದಿಸಿ ಕೊಂಡುಕೊಳ್ಳಬೇಕು. ಬೆಲೆ ಕಡಿಮೆ ಆಗಬಹುದೇನೋ ಎಂದು ಕಾಯುವುದೂ ಸಾಮಾನ್ಯವಾಗಿದೆ. ಆದರೆ, ಚಿನ್ನದ ಬೆಲೆಯಂತೂ ಗಗನಕ್ಕೇರಿದೆ. ಕಡಿಮೆಯಾಗುವ ನಿರೀಕ್ಷೆಯೂ ಇಲ್ಲ. ಹಾಗಂತ ಆಭರಣ ಕೊಳ್ಳದೇ ಇರೋದಕ್ಕೂ ಆಗಲ್ಲ. ಕಡಿಮೆ ಹಣಕ್ಕೆ ಬೇಕಾದ ವಿನ್ಯಾಸದಲ್ಲಿ ಹೆಚ್ಚು ಆಭರಣ ಕೊಳ್ಳಬಹುದು ಎಂದರೆ ಅದು ಬೆಳ್ಳಿಯೊಂದೇ. ಡಿಸೈನ್‌ ಮಾತ್ರವಲ್ಲ, ಬೇಕೆಂದರೆ ಅದರ ಮೇಲೆ ಚಿನ್ನದ ಲೇಪನ ಕೂಡ ಮಾಡಿಸಲು ಅವಕಾಶವಿದೆ. ಇದು ಎಷ್ಟು ವರ್ಷಗಳಾದರೂ ಮಾಸುವುದಿಲ್ಲ. ಅಪ್ಪಟ ಚಿನ್ನದಂತೆಯೇ ಕಾಣುವಂತೆ ಬೆಳ್ಳಿ ಆಭರಣ ತಯಾರಿಸುವ ಟೆಕ್ನಾಲಜಿ ಇದೆ. ಬೆಲೆ ಹೆಚ್ಚಿರುವ ದಿನಗಳಲ್ಲಿ ಇದರ ಉಪಯೋಗ ಪಡೆಯಬಹುದು” ಎನ್ನುತ್ತಾರೆ ನಿಯಮಿತ ಆಭರಣ ಗ್ರಾಹಕಿ ಸುಜಾತ ನಟರಾಜ್.

“ಆಭರಣಗಳ ದರ ಏರಿಳಿತ ಇಂದು ನಿನ್ನೆಯದಲ್ಲ. ಅದು ನಿರಂತರ ಪ್ರಕ್ರಿಯೆ. ಆದರೆ, ಜಾಗತಿಕ ಮಾರುಕಟ್ಟೆ, ಆರ್ಥಿಕ ಪರಿಸ್ಥಿತಿಗಳು, ಡಾಲರ್‌ ಮೌಲ್ಯ, ಹಣದುಬ್ಬರಗಳ ಮೇಲೆ ಆ ದರ ನಿಗದಿಯಾಗುತ್ತದಷ್ಟೆ. ರಷ್ಯಾ-ಉಕ್ರೇನ್ ಸೇರಿ ಇತರ ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಗಳಂತಹ ಜಾಗತಿಕ ಮಟ್ಟದ ರಾಜಕೀಯ ಗೊಂದಲಗಳು ಹೆಚ್ಚಿದಾಗ, ಹೂಡಿಕೆದಾರರು ಸುರಕ್ಷಿತ ಹೂಡಿಕೆಗಾಗಿ ಚಿನ್ನದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇದು ಸಹಜ ಪ್ರಕ್ರಿಯೆ. ಭಾರತದಂತಹ ದೇಶಗಳಲ್ಲಿ ಬಹುಸಂಖ್ಯಾತ ಮಧ್ಯಮ ವರ್ಗಕ್ಕೆ ಚಿನ್ನ ಖರೀದಿ 2020ರಿಂದೀಚೆಗೆ ದುಬಾರಿಯಾತ್ತಿದೆ. ಇದರಿಂದ ಬೆಳ್ಳಿ ಕೊಳ್ಳುವ ಬಡವರು, ಮಧ್ಯಮವರ್ಗದವರ ಸಂಖ್ಯೆ ಹೆಚ್ಚಾಗಿ, ಬೇಡಿಕೆಯೂ ಹೆಚ್ಚಾಗಿದೆ. ಆದರೆ ಚಿನ್ನ ಕೊಳ್ಳುವವರ ಸಂಖ್ಯೆಯೇನೂ ಪೂರ್ತಿ ಕಡಿಮೆಯಾಗಿಲ್ಲ. ಚಿನ್ನ ಎಂದಿಗೂ ಚಿನ್ನವೇ, ಬೆಳ್ಳಿ ಎಂದಿಗೂ ಬೆಳ್ಳಿಯೇ. ಕೆಲವೊಂದು ಆಭರಣಗಳಿಗೆ ಚಿನ್ನವೇ ಸೂಕ್ತ, ಕೆಲವೊಂದಕ್ಕೆ ಬೆಳ್ಳಿ ಚೆಂದ. ಗೃಹಪ್ರವೇಶ, ನಾಮಕರಣಗಳಂತಹ ಕಾರ್ಯಕ್ರಮಗಳಿಗೆ ಇಂದಿಗೂ ಬೆಳ್ಳಿಯನ್ನೇ ಉಡುಗೊರೆಯಾಗಿ ಕೊಡಲಾಗುತ್ತದೆ. ಹಾಗಾಗಿ ಬೆಳ್ಳಿ ಬೆಲೆ ಬೆಳ್ಳಿಗೆ, ಚಿನ್ನದ್ದು ಚಿನ್ನಕ್ಕೆ. ನಮ್ಮ ಗ್ರಾಹಕರು ಚಿನ್ನದ ಬೆಲೆ ಕಡಿಮೆಯಾಗಬಹುದಾ ಎಂದು ನಿತ್ಯ ಕೇಳುತ್ತಲೇ ಇರುತ್ತಾರೆ. ಹೆಚ್ಚೆಂದರೆ 10 ಗ್ರಾಂಗೆ ಒಂದೆರಡು ಸಾವಿರ ಕಡಿಮೆಯಾಗಬಹುದು ಅಷ್ಟೆ. ಗಣನೀಯ ಇಳಿಕೆ ಕಾಣುಬಹುದು ಎಂದು ಹೇಳುವುದು ಕಷ್ಟ” ಎನ್ನುತ್ತಾರೆ ತುಮಕೂರಿನ ಆರ್‌ಜೆಡಿ ಬ್ಯಾಂಕರ್ಸ್‌ ಮಾಲಿಕ ಚಂದ್ರಪ್ರಕಾಶ್‌ ರಜಪೂತ್.

ಇದನ್ನೂ ಓದಿ: ಜಾಗತಿಕ ಆರ್ಥಿಕ ಬಿಕ್ಕಟ್ಟು; ಭದ್ರ ನೆಲೆ ಕಂಡುಕೊಂಡ ಬಂಗಾರ, ಬಡವರ ಕನಸು ಭಗ್ನ

ಚಿನ್ನದ ದರ ಗಗನಕ್ಕೇರಿರುವ ಇಂದಿನ ದಿನಗಳಲ್ಲಿ ಪರ್ಯಾಯವಾಗಿ ಬೆಳ್ಳಿ ಸ್ಥಾನವನ್ನು ಪುನಃ ಗಟ್ಟಿಗೊಳಿಸಿಕೊಳ್ಳುತ್ತಿದೆ. ಫ್ಯಾಷನ್‌, ಬಳಕೆ, ಹೂಡಿಕೆ ಎಲ್ಲದರಲ್ಲೂ ಬೆಳ್ಳಿಯ ಬೇಡಿಕೆ ಹೆಚ್ಚಾಗಿರುವುದು ಸ್ಪಷ್ಟವಾಗಿದೆ. ಹೆಚ್ಚು ಪ್ರಾಯೋಗಿಕ, ಸ್ಟೈಲ್‌, ಬಜೆಟ್‌ ಫ್ರೆಂಡ್ಲಿ ಆಯ್ಕೆಯಾಗಿ ಮುನ್ನುಗ್ಗುತ್ತಿದೆ. ಚಿನ್ನಕ್ಕೆ ಪ್ರತಿಸ್ಪರ್ಧಿಯಾಗಲು ಆಗದಿದ್ದರೂ ಮೌಲ್ಯಯುತ ಲೋಹ ಎನಿಸಿದೆ. ಭಾರತದಲ್ಲಿ ಇಂದು ಬೆಳ್ಳಿ ಬೆಲೆ ಗ್ರಾಂಗೆ ರೂ187 ಮತ್ತು ಕೆಜಿಗೆ 1,87,000 ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಮೇಲೆ ಈ ಬೆಲೆ ಹೆಚ್ಚು ಕಡಿಮೆ ಆಗುತ್ತದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...