ಶೇ.97.5 ಪ್ರಕರಣಗಳ ವಿಚಾರಣೆ ಬಾಕಿ: ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ಸಹಾನುಭೂತಿಯಲ್ಲ ನ್ಯಾಯ

Date:

ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು 'ಅಯ್ಯೋ ಪಾಪ' ಎಂಬ ಸಹಾನುಭೂತಿಯಲ್ಲ. ನಿಜವಾದ ಪರಿಹಾರ ಸಿಗಬೇಕೇ ಹೊರತು ಕೇವಲ ಮೌಖಿಕ ಸಾಂತ್ವನವಲ್ಲ. ಕಾನೂನು ಮತ್ತು ನ್ಯಾಯಾಲಯದ ಆದೇಶಗಳು ಸಂತ್ರಸ್ತರ ಪರವಾಗಿದ್ದರೂ ಅವುಗಳ ಅನುಷ್ಠಾನ ಮಾತ್ರ ಇಂದಿಗೂ ಸಮಸ್ಯೆಯಾಗಿಯೇ ಉಳಿದರೆ ಸಂತ್ರಸ್ತರಿಗೆ ನ್ಯಾಯ ಸಿಗುವುದು ಹೇಗೆ? 

2009ರಲ್ಲಿ 26 ವರ್ಷ ವಯಸ್ಸಿನ ಶಾಹೀನ್ ಮಲಿಕ್ ಅವರ ಮೇಲೆ ಹರಿಯಾಣದ ಪಾಣಿಪತ್‌ನಲ್ಲಿರುವ ಅವರ ಕಚೇರಿಯ ಹೊರಗೆ ಆ್ಯಸಿಡ್ ದಾಳಿಯಾಯಿತು. ವೃತ್ತಿಪರವಾಗಿ ಶಾಹೀನ್ ಮಾಡಿದ ಸಾಧನೆಯಿಂದ ಅಸೂಯೆಗೊಂಡ, ತನಗೆ ಲೈಂಗಿಕವಾಗಿ ಸಹಕರಿಸಿಲ್ಲ ಎಂಬ ಕಾರಣಕ್ಕೆ ಸಹೋದ್ಯೋಗಿಯಿಂದ ಈ ದಾಳಿ ನಡೆದಿತ್ತು. ಈ ಘಟನೆ ನಡೆದು ಈಗಾಗಲೇ 16 ವರ್ಷ ಕಳೆದಿದೆ. ಆದರೆ, ಇಂದಿಗೂ ವಿಚಾರಣೆ ಬಾಕಿ ಉಳಿದಿದೆ.

ಈ ದಾಳಿಯಿಂದ ಶಾಹೀನ್ ಮಲಿಕ್ ಅವರ ಮುಖದ ಶೇ. 90ರಷ್ಟು ಭಾಗ ಸುಟ್ಟುಹೋಗಿದ್ದು ಬಲಗಣ್ಣು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದೆ. 25ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಗೆ ಶಾಹೀನ್ ಒಳಗಾಗಿದ್ದಾರೆ. ದಾಳಿಯ ನಂತರ, 2013ರವರೆಗೆ ವಿಚಾರಣೆಯಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ. ಈ ವಿಳಂಬದ ಬಗ್ಗೆ ಶಾಹೀನ್ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದು, ವಿಚಾರಣೆಯ ವಿಳಂಬವನ್ನು ‘ಕಾನೂನು ವ್ಯವಸ್ಥೆಯ ಅಪಹಾಸ್ಯ’ ಎಂದು ಸುಪ್ರೀಂ ಕೋರ್ಟ್‌ ಬಣ್ಣಿಸಿದೆ. ಇದು ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯೊಬ್ಬರ ಕಥೆಯಾದರೆ, ಹೀಗೆ ಹಲವಾರು ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿರುವ ಆ್ಯಸಿಡ್ ದಾಳಿ ಸಂತ್ರಸ್ತರ ಅಳಲು ಕೇಳುವವರಿಲ್ಲ. ಇಂದಿಗೂ ಹಲವು ಮಂದಿ ನ್ಯಾಯಕ್ಕಾಗಿ ಕೋರ್ಟ್‌ ಅಳೆಯುತ್ತಿದ್ದಾರೆ.

ಇದನ್ನು ಓದಿದ್ದೀರಾ? ‘ನಾಚಿಕೆಗೇಡು’: ಆ್ಯಸಿಡ್ ದಾಳಿ ಪ್ರಕರಣಗಳ ವಿಚಾರಣೆ ವಿಳಂಬಕ್ಕೆ ಸುಪ್ರೀಂ ಕಿಡಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆ್ಯಸಿಡ್ ದಾಳಿಗೆ ಒಳಗಾದ ಬಳಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಿರುವ, ಇತರೆ ಸಂತ್ರಸ್ತರಿಗೆ ಬೆಂಬಲವಾಗಿ ನಿಂತಿರುವವರು ಶಾಹೀನ್. ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಸಹಾಯ ಮಾಡುವ ‘ಬ್ರೇವ್ ಸೋಲ್ಸ್ ಫೌಂಡೇಶನ್’ ಎಂಬ ಎನ್‌ಜಿಒ ಸ್ಥಾಪಿಸಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ಶಾಹೀನ್ ದೇಶದ ಎಲ್ಲ ಮಹಿಳೆಯರಿಗೂ ಪ್ರೇರಕಶಕ್ತಿ. ನ್ಯಾಯ ಎಂಬುದು ಕೈಗೆಟುಕದ ಆಕಾಶವಾಗಿರುವಾಗುತ್ತಿರುವಾಗಲೂ ಛಲ ಬಿಡದೆ, ತಮಗಾಗಿ ತಮ್ಮಂತೆ ದಾಳಿಗೆ ಒಳಗಾದವರಿಗಾಗಿ ನಿರಂತರ ಹೋರಾಟವನ್ನು ನಡೆಸುತ್ತಿದ್ದಾರೆ. ಆದರೆ ಇವರ ಹೋರಾಟಕ್ಕೆ ನಮ್ಮ ನ್ಯಾಯ ವ್ಯವಸ್ಥೆ ನೀಡಿದ ಬೆಲೆಯೇನು?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶದ ಪ್ರಕಾರ ದೇಶದಲ್ಲಿ ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಶೇ.97.5ರಷ್ಟು ಪ್ರಕರಣಗಳ ವಿಚಾರಣೆ ಬಾಕಿ ಉಳಿದಿವೆ. ಬರೀ ಶೇ.2.5ರಷ್ಟು ಪ್ರಕರಣಗಳಲ್ಲಿ ವಿಚಾರಣೆ ನಡೆದಿದೆ. ವಿಚಾರಣೆಗೆ ಒಳಗಾದ ಪ್ರಕರಣಗಳಲ್ಲಿಯೂ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಅತಿ ಕಡಿಮೆಯಾಗಿದೆ. ಅಂದರೆ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ನ್ಯಾಯವೇ ಮರೀಚಿಕೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಎನ್‌ಸಿಆರ್‌ಬಿಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದ ವಿವಿಧ ನ್ಯಾಯಾಲಯಗಳಲ್ಲಿ 844 ಆ್ಯಸಿಡ್ ದಾಳಿ ಪ್ರಕರಣಗಳು ವಿಚಾರಣೆಗೆ ಬಾಕಿಯಾಗಿವೆ. 2023ರ ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ ದೇಶಾದ್ಯಂತ 207 ಆ್ಯಸಿಡ್ ದಾಳಿ ಪ್ರಕರಣಗಳು ವರದಿಯಾಗಿವೆ. ಆದರೆ ಒಟ್ಟಾರೆ ಶೇ.88ರಷ್ಟು ಆ್ಯಸಿಡ್ ದಾಳಿ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ.

ಶಾಹೀನ್ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣದ ವಿಚಾರಣೆ ಬಾಕಿ ಪ್ರಶ್ನಿಸಿ ಸಲ್ಲಿಸಿದ ಪಿಐಎಲ್‌ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, “ವಿಚಾರಣೆಯಲ್ಲಿ ವಿಳಂಬವು ನ್ಯಾಯಾಂಗ ವ್ಯವಸ್ಥೆಯ ಅಪಹಾಸ್ಯ. ರಾಷ್ಟ್ರವೇ ತಲೆತಗ್ಗಿಸುವ ವಿಚಾರ. ಇದು ನಾಚಿಕೆಗೇಡಿನದು” ಎಂದು ಹೇಳಿದ್ದಾರೆ. ಹಾಗೆಯೇ ದೇಶದಲ್ಲಿ ಬಾಕಿ ಇರುವ ಇಂತಹ ಪ್ರಕರಣಗಳ ಕುರಿತ ವಿವರಗಳನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಹೈಕೋರ್ಟ್‌ಗಳಿಗೆ ಸೂಚಿಸಿದ್ದಾರೆ. ಪ್ರಕರಣಗಳ ವಿಚಾರಣೆ ವೇಗಗೊಳಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದೂ ಹೇಳಿದ್ದು ಕೇಂದ್ರ ಸರ್ಕಾರ ಮತ್ತು ಅಂಗವಿಕಲರ ಸಬಲೀಕರಣ ಇಲಾಖೆಗೆ ನೋಟಿಸ್ ಜಾರಿ ಮಾಡಲಾಗಿದೆ.

ಈ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿದ ಮಹಿಳಾಪರ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, “ಆ್ಯಸಿಡ್ ದಾಳಿಗೆ ಒಳಗಾದಂತಹ ಮಹಿಳೆಯರ ಪ್ರಕರಣಗಳಿಂದ ಕಲಿಯಬೇಕಾದ ಎರಡು ಪಾಠಗಳಿದೆ. ಮೊದಲನೆಯದಾಗಿ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರ ಬದುಕು ಮತ್ತು ಅವರ ಅಸ್ತಿತ್ವವನ್ನು ಅವರ ಮುಖ ಮತ್ತು ರೂಪಕ್ಕೆ ಸೀಮಿತಗೊಳಿಸಿ ನೋಡುವ ದೃಷ್ಟಿಕೋನವನ್ನು ಸಮಾಜ ಹೊಂದಿದೆ. ಈ ದೃಷ್ಟಿಕೋನವನ್ನು ಬದಲಾಯಿಸಲು ಬೇಕಾದ ಯಾವ ಕೆಲಸಗಳೂ ಇಷ್ಟು ದೀರ್ಘಕಾಲದಲ್ಲಿ, ಗಂಭೀರವಾದ ರೀತಿಯಲ್ಲಿ ನಮ್ಮ ಸಮಾಜದಲ್ಲಿ ನಡೆದಿಲ್ಲ ಅನ್ನುವಂತದ್ದು. ಮಹಿಳೆಯರ ಮೇಲೆ ಯಾವುದೇ ದೌರ್ಜನ್ಯ ನಡೆದರೂ ಬಹಳಷ್ಟು ಸಂದರ್ಭದಲ್ಲಿ ಸಹಾನುಭೂಮಿ ಇರುವುದಿಲ್ಲ. ಆಕೆಯದ್ದೇ ತಪ್ಪು ಎಂದು ಊಹಿಸಲಾಗುತ್ತದೆ” ಎಂದರು.

“ನಿರ್ದಿಷ್ಟವಾಗಿ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಅದಕ್ಕೆ ತಗಲುವಂತಹ ಚಿಕಿತ್ಸೆಯ ಖರ್ಚು ನಿರ್ವಹಿಸುವುದು ಒಂದು ದೊಡ್ಡ ಸಮಸ್ಯೆ. ಇನ್ನಿತರ ದೌರ್ಜನ್ಯದಂತೆಯೂ ಆ್ಯಸಿಡ್ ದಾಳಿ ಪ್ರಕರಣದಲ್ಲಿಯೂ ಮಹಿಳೆಯರಿಗೆ ಮಾನಸಿಕ ಆಘಾತ ಇರುತ್ತದೆ. ಅದರ ಜತೆಗೆ ಬಹಳ ದೊಡ್ಡ ಪ್ರಮಾಣದ ಚಿಕಿತ್ಸೆಯ ವೆಚ್ಚ ತಗುಲುತ್ತದೆ ಎಂಬುದನ್ನು ಹಲವು ಮಂದಿ ಪರಿಗಣಿಸುವುದೇ ಇಲ್ಲ. ಇದರ ಬಗ್ಗೆ ನಮ್ಮ ಸಮಾಜ, ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಇಂದಿಗೂ ಗಂಭೀರವಾಗಿ ಆಲೋಚನೆ ಮಾಡಿಲ್ಲ” ಎಂದು ಅಭಿಪ್ರಾಯಿಸಿದರು.

“Campaign and Struggle Against Acid Attacks on Women (CSAAAW) ಎಂಬ ಮಹಿಳೆಯರ ಮೇಲಿನ ಆ್ಯಸಿಡ್ ದಾಳಿ ವಿರೋಧಿ ಪ್ರಚಾರಾಂದೋಲನ ಮತ್ತು ಹೋರಾಟವನ್ನು ಸುಮಾರು 2000ರಿಂದ 2010ರವರೆಗೆ ಕರ್ನಾಟಕದಲ್ಲಿ ನಡೆಸಿದ ಒಕ್ಕೂಟದ ಭಾಗವಾಗಿ ನಾನೂ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ಈ ಪ್ರಕರಣಗಳನ್ನು ಬಹಳ ಹತ್ತಿರದಿಂದ ನೋಡಿದ್ದು, ಆಘಾತವಾಗಿತ್ತು. ಇಂತದ್ದನ್ನು ಎದುರಿಸಿ ಹೋರಾಟ ಮಾಡುವ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಈ ಹೆಣ್ಣು ಮಕ್ಕಳು ನಿಜವಾಗಿಯೂ ಒಂದು ಬದಲಾವಣೆ ತರುವುದರಲ್ಲಿ ಯಶಸ್ವಿಯಾಗುತ್ತಾರೆ ಎಂಬ ಎರಡನೇ ಪಾಠವನ್ನು ನಾವು ಕಲಿತೆವು” ಎಂದು ತಿಳಿಸಿದ್ದಾರೆ.

“ಈ ಮಹಿಳೆಯರು ಜತೆಯಾಗಿ ವೇದಿಕೆ ರೂಪಿಸಿಕೊಂಡು ಅವರೇ ಹೋರಾಟವನ್ನು ಮುಂದುವರಿಸಲು ಆರಂಭಿಸುವಷ್ಟು ಸಬಲರಾದರು. ಸರ್ಕಾರ ಒತ್ತಡಕ್ಕೆ ಒಳಗಾಗಿ ಸುರಕ್ಷಾ ಎಂಬ ಯೋಜನೆಯನ್ನು ರೂಪಿಸಿತು. ಈ ಯೋಜನೆಯಲ್ಲಿ ಇನ್ನೂ ಅನೇಕ ಕೊರತೆಗಳು ಇದೆ. ಆದರೆ ಅಂತಹ ಒಂದು ಯೋಜನೆಯನ್ನು ಸರ್ಕಾರ ರೂಪಿಸುವ ಮಟ್ಟಿಗೆ ಒತ್ತಡ ಹೇರಲು ಸಾಧ್ಯವಾಗಿದ್ದು ಈ ಮಹಿಳೆಯರು ನಡೆಸಿದ್ದಂತಹ ಗಟ್ಟಿಯಾದಂತಹ ಹೋರಾಟದಿಂದಾಗಿ. ಸದ್ಯ ಆ್ಯಸಿಡ್ ದಾಳಿ ಮಹಿಳೆಯರಿಗೆ ಬೇಕಾಗಿರುವುದು ಅನುಕಂಪ ಅಲ್ಲ, ಜೀವನ ಮುನ್ನಡೆಸಿಕೊಂಡು ಹೋಗಲು ಎಲ್ಲ ಬಗೆಯ ನೆರವು ಮತ್ತು ಬೆಂಬಲ” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಕಡಬ | ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ; ಕಿಡಗೇಡಿ ಬಂಧನ

ಆ್ಯಸಿಡ್ ದಾಳಿ ಸಂತ್ರಸ್ತರ ಸವಾಲು ಒಂದೆರಡಲ್ಲ

ಒಂದೆಡೆ ಆ್ಯಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯಲು ಸಂತ್ರಸ್ತರು ಆರ್ಥಿಕವಾಗಿ ಕಷ್ಟಪಡುತ್ತಿದ್ದಾರೆ. ಇನ್ನೊಂದೆಡೆ ಸಂತ್ರಸ್ತರು ಜೀವನಪೂರ್ತಿ ಕಾಡುವ ದೈಹಿಕ, ಮಾನಸಿಕ ಸಮಸ್ಯೆಗಳನ್ನೂ ನಿಬಾಯಿಸಿಕೊಳ್ಳುತ್ತಾ ಸಾಗಬೇಕಾಗಿದೆ. ಸಂತ್ರಸ್ತರಿಗೆ ಕನಿಷ್ಠ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದ್ದರೂ, ಅದನ್ನು ಪಡೆಯುವಲ್ಲಿ ವಿಳಂಬವಾಗುತ್ತಿದೆ. ಹಲವು ತಾಂತ್ರಿಕ ಸಮಸ್ಯೆಗಳು ಆ್ಯಸಿಡ್ ದಾಳಿ ಸಂತ್ರಸ್ತರು ಅನುಭವಿಸಬೇಕಾಗಿದೆ.

ಸಂತ್ರಸ್ತರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಕಾನೂನು ನೆರವು ಪಡೆಯುವ ಹಕ್ಕಿದೆ. ಆದರೆ ಅದು ಬರೀ ಕಾಗದದ ಮೇಲಿದೆ. ಈ ಹಕ್ಕಿನ ಅನುಷ್ಠಾನ ಮಾತ್ರ ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿದೆ. ದೆಹಲಿ ಹೈಕೋರ್ಟ್ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಚಿಕಿತ್ಸೆ ನಿರಾಕರಿಸುವುದು ಕ್ರಿಮಿನಲ್ ಅಪರಾಧ ಎಂದು ಹೇಳಿದೆ. ಇನ್ನೂ ಕೆಲವು ಸಂತ್ರಸ್ತರಿಗೆ ತಮ್ಮ ಹಕ್ಕಿನ ಬಗ್ಗೆ ಅರಿವೂ ಇಲ್ಲ. ಇಂತಹ ಸಂತ್ರಸ್ತರಿಗೆ ಸಹಾಯ ಮಾಡಲೆಂದೇ ಆ್ಯಸಿಡ್ ದಾಳಿ ಸಂತ್ರಸ್ತೆ ಶಾಹೀನ್ ‘ಬ್ರೇವ್ ಸೋಲ್ಸ್ ಫೌಂಡೇಶನ್’ ಎಂಬ ಎನ್‌ಜಿಒ ಸ್ಥಾಪಿಸಿರುವುದು.

ಸದ್ಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ ಹೇಳಿಕೆಗಳು ಸದ್ಯ ತೀವ್ರ ಚರ್ಚೆಗೂ ಗ್ರಾಸವಾಗುತ್ತಿದೆ. ಇಲ್ಲಿ ‘ಗಾಣಿಗ ಅಣ್ಣ ಅಯ್ಯೋ ಎಂದಾಕ್ಷಣ ನೆತ್ತಿ ತಂಪಾಗುವುದಿಲ್ಲ’ ಎಂಬ ವಿಚಾರವೂ ಮುನ್ನೆಲೆಗೆ ಬರುತ್ತಿದೆ. ಇಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ‘ಅಯ್ಯೋ ಪಾಪ’ ಎಂಬ ಸಹಾನುಭೂತಿಯಲ್ಲ. ನಿಜವಾದ ಪರಿಹಾರ ಸಿಗಬೇಕೇ ಹೊರತು ಕೇವಲ ಮೌಖಿಕ ಸಾಂತ್ವನವಲ್ಲ. ಕಾನೂನು ಮತ್ತು ನ್ಯಾಯಾಲಯದ ಆದೇಶಗಳು ಸಂತ್ರಸ್ತರ ಪರವಾಗಿದ್ದರೂ ಅವುಗಳ ಅನುಷ್ಠಾನ ಮಾತ್ರ ಇಂದಿಗೂ ಸಮಸ್ಯೆಯಾಗಿಯೇ ಉಳಿದರೆ ಸಂತ್ರಸ್ತರಿಗೆ ನ್ಯಾಯ ಸಿಗುವುದು ಹೇಗೆ? ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸುವುದು ಅತ್ಯಗತ್ಯ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...