ನೆನಕೆ | ಏಕೀಕರಣದ ಏಕೈಕ ಹುತಾತ್ಮನಿಗೆ ಗೌರವ ಸಲ್ಲಿಸುವ ಸುಸಂದರ್ಭ

Date:

ರಂಜಾನ್ ಸಾಬ್ ರವರ ಕನ್ನಡದ ಕೆಲಸವನ್ನು ರಾಜ್ಯದ ಜನರಿಗೆ ತಲುಪಿಸಲು ಮತ್ತು ಅವರ ಬಲಿದಾನಕ್ಕೆ ನೈಜ ಗೌರವ ಸಲ್ಲಿಸಲು ಕನ್ನಡಿಗರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಂಜಾನ್ ಸಾಬ್ ರವರನ್ನು ಚಿರಸ್ಥಾಯಿಯಾಗಿಸುವ ಸುವರ್ಣಾವಕಾಶ

ಇವತ್ತು ಕರ್ನಾಟಕವೆಂದು ಕರೆಸಿಕೊಳ್ಳುತ್ತಿರುವ ಈ ಹಿಂದಿನ ವಿಶಾಲ ಮೈಸೂರು ರಾಜ್ಯವು ಕನ್ನಡ ಭಾಷಾ ಆಧಾರದಲ್ಲಿ ಕಟ್ಟಿದರ ಹಿಂದೆ ಅನೇಕ ಮಹನೀಯರ ಶ್ರಮವಿದೆ. ಆಲೂರು ವೆಂಕಟರಾಯರು, ಬೆನಗಲ್ ರಾಮರಾಯರು ಮತ್ತು ಸಿದ್ದಪ್ಪ ಕಂಬಳಿ ಇನ್ನಿತರರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಕ್ರಿಯಾ ಸಮಿತಿ ಮತ್ತಿತ್ತರ ವ್ಯಕ್ತಿ ಮತ್ತು ಸಂಘ-ಸಂಸ್ಥೆಗಳು ಇದಕ್ಕಾಗಿ ದುಡಿದವರಾಗಿದ್ದಾರೆ.

ಆದರೆ, ಇಡೀ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ತನ್ನ ಪ್ರಾಣವನ್ನು ಸಮರ್ಪಿ‌ಸಿ, ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದವರು ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬ್ ಅವರೊಬ್ಬರೇ, ಅವರ ತ್ಯಾಗದ ಇತಿಹಾಸವನ್ನು ನೆನೆಯದೆ ಹೋದರೆ ಕರ್ನಾಟಕ ರಾಜ್ಯೋತ್ಸವವು ಪೂರ್ಣಗೊಳ್ಳುವುದಿಲ್ಲ.

ಬಳ್ಳಾರಿಯೂ ಕರ್ನಾಟಕದ ಗಡಿನಾಡು ಜಿಲ್ಲೆ, ಇದೆ ಜಿಲ್ಲೆಯಲ್ಲಿ ಕನ್ನಡದ ಕಹಳೆ ಮೊಳಗಿತ್ತು, ಏಕೀಕರಣದ ಸಂದರ್ಭದ ಇಲ್ಲಿನ ಕನ್ನಡದ ಕ್ರಾಂತಿಕಾರಿ ಹೋರಾಟವನ್ನು ತಿಳಿಯಬೇಕಾದುದು ಅತ್ಯಗತ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಳ್ಳಾರಿ ಜಿಲ್ಲೆಯು ಐತಿಹಾಸಿಕವಾಗಿ ಕನ್ನಡಿಗರ ರಾಜಮನೆತನವಾದ ವಿಜಯನಗರದ ಸಾಮ್ರಾಜ್ಯದ ಹೆಗ್ಗುರುತು, ಇದರೊಂದಿಗೆ ಐತಿಹಾಸಿಕ ಕರ್ನಾಟಕ ಏಕೀಕರಣ ಹೋರಾಟದ ಮೊದಲ ವಿಜಯ ಪತಾಕೆ ಹಾರಿಸಿದ್ದು ಇದೇ ಬಳ್ಳಾರಿಯಲ್ಲಿ, 1953ರ ಅಕ್ಟೋಬರ್ 1ನೇ ತಾರೀಖಿನಂದು ಬಳ್ಳಾರಿಯು ಏಳು ತಾಲೂಕಿನೊಟ್ಟಿಗೆ ಮೈಸೂರು ರಾಜ್ಯದ ಭಾಗವಾಯಿತು, ಇದಕ್ಕಾಗಿ ಕನ್ನಡ ಕಟ್ಟಾಲು ಪೈಲ್ವಾನ್ ರಂಜಾನ್ ಸಾಬ್ ರವರು ಬಲಿದಾನವನ್ನು ಸಮರ್ಪಿಸಿದರು.

ಕನ್ನಡಿಗರಿದ್ದ ಪ್ರದೇಶವನ್ನು ಯಾವುದೇ ಕಾರಣಕ್ಕೂ ಪಕ್ಕದ ಆಂಧ್ರಕ್ಕೆ ಸೇರಲಾರದಂತೆ ಕನ್ನಡಿಗರನ್ನು ಒಗ್ಗೂಡಿಸಿ, ಜನರಿಂದ ಸಹಿ ಸಂಗ್ರಹಿಸಿ ಜನಾಭಿಪ್ರಾಯ ಮೂಡಿಸಿ ಅಂದಿನ ಸಂಸದರಾದ ಅಳವಂಡಿ ಶಿವಮೂರ್ತಿ ಸ್ವಾಮೀಜಿಗಳ ಮೂಲಕ ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿ, 1953ರ ಅಕ್ಟೋಬರ್ 2ರಂದು ನಡೆಯುತ್ತಿದ್ದ ವಿಜಯೋತ್ಸವ ಕಾರ್ಯಕ್ರಮದ ಸಭಾ ಮಂಟಪಕ್ಕೆ ಕಾವಲಾಗಿದ್ದು, ಕನ್ನಡದ ವಿರೋಧಿಗಳಿಂದ ಬೆಂಕಿಗೆ ಆಹುತಿ ಆಗುತ್ತಿದ್ದ ಸಭಾ ಮಂಟಪವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಕನ್ನಡಿಗರ ಹೆಮ್ಮೆಯ ರಂಜಾನ್ ಸಾಬ್ ರಿಗೆ ಇಲ್ಲಿಯವರೆಗೂ ನಿಜ ಅರ್ಥದಲ್ಲಿ ಗೌರವ ಸಲ್ಲಿಸುವಲ್ಲಿ ಕರ್ನಾಟಕ ಸರ್ಕಾರ ಮತ್ತು ಕನ್ನಡದ ಪ್ರಾತಿನಿಧಿಕ ಸಂಸ್ಥೆಗಳು ವಿಫಲವಾಗಿದೆ.

ಈ ಲೇಖನ ಓದಿದ್ದೀರಾ?: ಕನ್ನಡ ಭಾಷಿಕರನ್ನು ಒಂದೆಡೆ ತರುವ ‘ಕರ್ನಾಟಕ ಏಕೀಕರಣ’ ಹೋರಾಟಗಳತ್ತ ಒಂದು ನೋಟ

ನಮ್ಮ ನಾಡಿಗೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷ ಪೂರೈಸಿದ ಸಂಭ್ರಮದ ಸಂದರ್ಭದಲ್ಲಿಯೂ ಏಕೀಕರಣಕ್ಕಾಗಿ ದುಡಿದ ರಂಜಾನ್ ಸಾಬ್ ರನ್ನು ವ್ಯವಸ್ಥಿತವಾಗಿ ನಾಡಿಗೆ ಪರಿಚಯಿಸಲಿಲ್ಲ, ಕರ್ನಾಟಕದ ಹೆಸರನ್ನು ಇತಿಹಾಸದಲ್ಲಿ ಅಜರಾಮರವಾಗಿರಲು ಅಂದು ಶ್ರಮಿಸಿದ ರಂಜಾನ್ ಸಾಬರ ಬಗ್ಗೆ ಇಂದು ಕನ್ನಡಿಗರಿಗೆ ಪರಿಚಯಿಸುವ ಕೆಲಸ ಆಗದೆ ಇರುವುದು ದುರಂತ, ಕರ್ನಾಟಕ ಏಕೀಕರಣ ಹೋರಾಟಕ್ಕೆ ಮೊದಲ ವಿಜಯ ಪತಾಕೆಗೆ ಸಾಕ್ಷಿಯಾಗಿದ್ದ ಬಳ್ಳಾರಿಯಲ್ಲಿಯೇ ಈ ಬಾರಿಯ ಸಾಹಿತ್ಯ ಸಮ್ಮೇಳನವನ್ನು 2025ರ ಡಿಸೆಂಬರ್ ನಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುತ್ತಿದೆ, ಸಮ್ಮೇಳನದ ವೇದಿಕೆಗೆ ಏಕೀಕರಣದ ಏಕೈಕ ಹುತಾತ್ಮ ಬಳ್ಳಾರಿಯ ಪೈಲ್ವಾನ್ “ರಂಜಾನ್ ಸಾಬ್” ರವರ ಹೆಸರಿಡುವ ಹಾಗೂ ಅವರ ಏಕೀಕರಣದ ಹೋರಾಟ ಮತ್ತು ಕೆಚ್ಚೆದೆಯ ಕನ್ನಡ ಪ್ರೇಮದ ಬಗ್ಗೆ ಒಂದು “ವಿಚಾರ ಗೋಷ್ಠಿ”ಯನ್ನು ಸಹ ನಡೆಸುವ ಮೂಲಕ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಸಮರ್ಪಿಸಿದ ಬಲಿದಾನವನ್ನು ಸ್ಮರಿಸಬೇಕಾಗಿದೆ.

ಇದರೊಂದಿಗೆ ರಂಜಾನ್ ಸಾಬ್ ರವರ ಕನ್ನಡದ ಕೆಲಸವನ್ನು ರಾಜ್ಯದ ಜನರಿಗೆ ತಲುಪಿಸಲು ಮತ್ತು ಅವರ ಬಲಿದಾನಕ್ಕೆ ನೈಜ ಗೌರವ ಸಲ್ಲಿಸಲು ಕನ್ನಡಿಗರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಂಜಾನ್ ಸಾಬ್ ರವರನ್ನು ಚಿರಸ್ಥಾಯಿಯಾಗಿಸುವ ಸುವರ್ಣಾವಕಾಶ ಸರ್ಕಾರಕ್ಕೆ ಒದಗಿ ಬಂದಿರುವುದು ವಿಶೇಷ.

ರಂಜಾನ್ ಸಾಬ್ ಬಗೆಗಿನ ಕನ್ನಡಿಗರ ಬಹುದಿನಗಳ ಬೇಡಿಕೆಗಳು ಇಂತಿವೆ;

  • ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಥವಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಂಜಾನ್ ಸಾಬ್ ರವರ ಬಗ್ಗೆ ಅಧಿಕೃತ ಪುಸ್ತಕ ಪ್ರಕಟನೆಗೊಳಿಸಬೇಕು, ರಂಜಾನ್ ಸಾಬ್ ರನ್ನು ಕನ್ನಡಿಗರಿಗೆ ಪರಿಚಯಿಸಲು ಅಧ್ಯಯನ ಕೃತಿಯನ್ನು ಸಂಶೋಧಕರಿಂದ ರಚಿಸಿ, ಹೊಸ ತಲೆಮಾರಿನ ಕನ್ನಡಿಗರಿಗೆ ಪರಿಚಯಿಸುವ ಕೆಲಸವಾಗಬೇಕು.
  • ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪೈಲ್ವಾನ್ ಪಿಂಜಾರ ರಂಜಾನ್ ಸಾಬ್ ರವರ ಅಧ್ಯಯನ ಪೀಠವನ್ನು ರಚಿಸಿ, ಕನ್ನಡ ನಾಡು-ನುಡಿ, ನೆಲ-ಜಲಕ್ಕಾಗಿ ಮತ್ತು ಕನ್ನಡಿಗರಿಗಾಗಿ ಹೋರಾಡಿದ ಮಹನೀಯರ ಕುರಿತು ಅಧ್ಯಯನ ಹಾಗೂ ಸಂಶೋಧನಾ ಕೆಲಸಗಳನ್ನು ನಡೆಸಬೇಕು.
  • ಕನ್ನಡಿಗರ ಪ್ರಜಾಪ್ರಭುತ್ವದ ಪ್ರಾತಿನಿಧಿಕ ಕಟ್ಟಡವಾದ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಪೈಲ್ವಾನ್ ಪಿಂಜಾರ ರಂಜಾನ್ ಸಾಬ್ ರವರ ಪುತ್ಥಳಿ ನಿರ್ಮಾಣ ಮಾಡಬೇಕು.
  • ಕರ್ನಾಟಕ ರಾಜ್ಯದ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕಗಳಲ್ಲಿ ರಂಜಾನ್ ಸಾಬ್ ರವರನ್ನು ಪರಿಚಯಿಸುವ ಪಾಠ/ಅಧ್ಯಾಯವನ್ನು ಸೇರಿಸುವ ಮೂಲಕ ಅವರ ನಾಡಪ್ರೇಮ ಮತ್ತು ತ್ಯಾಗದ ಇತಿಹಾಸವನ್ನು ವಿದ್ಯಾರ್ಥಿ-ಯುವಜನರಿಗೆ ತಲುಪಿಸಬೇಕು.
  • ಅಕ್ಟೋಬರ್ ಎರಡನೇ ತಾರೀಖಿನಂದು ಹುತಾತ್ಮರಾದ ರಂಜಾನ್ ರವರ “ಸ್ಮರಣಾರ್ಥ ಉಪನ್ಯಾಸ” ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯಾದ್ಯಂತ ನಡೆಸಬೇಕು.
  • ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ದಿನದಂದು ಕನ್ನಡ ನಾಡು-ನುಡಿ, ನೆಲ-ಜಲ ಮತ್ತು ಕನ್ನಡಿಗರಿಗಾಗಿ ಹೋರಾಡಿದ ವಿವಿಧ ಸಾಧಕರಿಗೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ರಂಜಾನ್ ಸಾಬ್ ರವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು.

ಕೆಚ್ಚೆದೆಯ ಕನ್ನಡಿಗ ಏಕೀಕರಣದ ಏಕೈಕ ಹುತಾತ್ಮ ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬ್ ರವರನ್ನು ನಾಡಿಗೆ ವ್ಯವಸ್ಥಿತವಾಗಿ ಪರಿಚಯಿಸುವ ಕೆಲಸವಾಗಬೇಕು, ಕನ್ನಡಿಗರ ಬಹುದಿನಗಳ ನ್ಯಾಯಬದ್ಧ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು, ಇದು ಕನ್ನಡ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಕಟ್ಟಲು ಶ್ರಮಿಸಿದ ಮಹಾನ್ ಚೇತನಕ್ಕೆ ಈ ನಾಡು ಸಲ್ಲಿಸಬೇಕಾದ ಗೌರವವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಮಹಮ್ಮದ್ ಪೀರ್ ಲಟಗೇರಿ
ಮಹಮ್ಮದ್ ಪೀರ್ ಲಟಗೇರಿ
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ನಿವಾಸಿಯಾಗಿದ್ದು, ಬಿ.ಇಡಿ ಪದವಿ ಮುಗಿಸಿ, ಎಂ.ಎಸ್ಸಿ ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿ -ಯುವಜನ ಮುಖಂಡರಾಗಿ ಗುರುತಿಸಿಕೊಂಡಿರುವ ಇವರು ರಾಜ್ಯ ಮಟ್ಟದ ಅನೇಕ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...