ಕೇರಳದಲ್ಲಿ ಬೇರಿಳಿಸುತ್ತಿದೆ ಬಿಜೆಪಿ: ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ

Date:

ಕಳೆದ ದಶಕದಲ್ಲಿ ಪರಸ್ಸಲ ರಾಜಕೀಯಕ್ಕೆ ಹೊಸ ಆಯಾಮವನ್ನು ಸೇರಿಸಿದೆ. ಇಲ್ಲಿ ಬಿಜೆಪಿ ಮೂರನೇ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಈ ಕ್ಷೇತ್ರವು ಒಮ್ಮೆ ಎಡ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ನೇರ ಹೋರಾಟವನ್ನು ಕಂಡಿದ್ದರೂ, ಸದ್ಯ ಬಿಜೆಪಿಯ ಮತ ಹಂಚಿಕೆಯು ಹೆಚ್ಚುತ್ತಿರುವುದು ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಹುಟ್ಟುವಂತೆ ಮಾಡಿದೆ.

ಕೇರಳದಲ್ಲಿ ಏಪ್ರಿಲ್ 9ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಸತತವಾಗಿ ಎರಡು ಬಾರಿ ಗದ್ದುಗೆಯನ್ನು ಪಡೆದಿರುವ ಸಿಪಿಐಎಂ ನೇತೃತ್ವದ ಎಲ್‌ಡಿಎಫ್ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವಾಗ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದ ಆಡಳಿತ ತನ್ನ ತೆಕ್ಕೆಗೆ ಪಡೆಯವ ಯತ್ನದಲ್ಲಿದೆ. ಆದರೆ ಈ ಬಾರಿ ಕೇರಳದಲ್ಲಿ ಸ್ಪರ್ಧೆ ಎಲ್‌ಡಿಎಫ್, ಯುಡಿಎಫ್ ನಡುವೆ ಮಾತ್ರವಲ್ಲ. ಈ ಸ್ಪರ್ಧೆಗೆ ಈಗಾಗಲೇ ಎನ್‌ಡಿಎ ಸೇರಿಕೊಂಡಿದೆ. ಕೇರಳದಲ್ಲಿ ಈಗಾಗಲೇ ಬಿಜೆಪಿ ಬೇರಿಳಿಸುತ್ತಿದೆ. ಅದರಿಂದಾಗಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಕೇರಳದಲ್ಲಿ ಸದ್ಯ ಇಡೀ ರಾಜ್ಯದ ಫಲಿತಾಂಶವನ್ನು ಪ್ರತಿಬಿಂಬಿಸುವ, ನಿರ್ಧರಿಸುವ ಬೆಲ್‌ವೆದರ್ (Bellwether) ಅಂದರೆ ನಿರ್ಣಾಯಕ ಕ್ಷೇತ್ರಗಳ ಮೇಲೆ ಎಲ್ಲಾ ಪಕ್ಷಗಳ ಗಮನವಿದೆ. ಇಡೀ ರಾಜ್ಯದಲ್ಲಿ ಮತದಾರರು ಯಾವ ಪಕ್ಷದೆಡೆ ಒಲವು ತೋರುತ್ತಿರಬಹುದು ಎಂಬುದನ್ನು ಈ ಕ್ಷೇತ್ರಗಳಲ್ಲಿ ಜನರಿಗಿರುವ ರಾಜಕೀಯ ದೃಷ್ಟಿಕೋನವೇ ನಿರ್ಧರಿಸುತ್ತದೆ ಎಂಬುದನ್ನು ಚುನಾವಣಾ ಪರಿಭಾಷೆಯಲ್ಲಿ ‘ಬೆಲ್‌ವೆದರ್’ ಎಂದು ಕರೆಯಲಾಗುತ್ತದೆ. ಅಂತಹ ಕ್ಷೇತ್ರಗಳಲ್ಲಿ ತ್ರಿಶೂರ್‌ನ ಒಲ್ಲೂರ್ ವಿಧಾನಸಭಾ ಕ್ಷೇತ್ರ ಪ್ರಮುಖವಾದುದ್ದು. 1982ರಿಂದ, ಒಲ್ಲೂರ್‌ನಲ್ಲಿ ಯಾವ ಪಕ್ಷ ಗೆಲುವು ಕಂಡಿದೆಯೋ ಅದೇ ಪಕ್ಷ ಸರ್ಕಾರವನ್ನು ರಚಿಸಿದೆ. ದಶಕಗಳಿಂದ ಈ ಕ್ಷೇತ್ರವನ್ನೇ ವಿಶ್ಲೇಷಕರು ಮತ್ತು ಹಲವು ಪಕ್ಷಗಳ ತಂತ್ರಜ್ಞರು ಚುನಾವಣಾ ಮಾಪಕವಾಗಿ ನೋಡುತ್ತಿದ್ದಾರೆ. ಆದರೆ ಒಲ್ಲೂರ್ ಮಾತ್ರವಲ್ಲ. ಇತರ ಕೆಲವು ಕ್ಷೇತ್ರಗಳು ಸಹ ಇದೇ ರೀತಿಯ ಪ್ರವೃತ್ತಿಯನ್ನು ಹೊಂದಿದೆ.

ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಉಚ್ಚಾಟಿತ ಸಿಪಿಐ ನಾಯಕ ಮುಕುಂದನ್ ಬಿಜೆಪಿಗೆ ಸೇರ್ಪಡೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಲ್ಲೂರು ಕ್ಷೇತ್ರವೆ ಕೇರಳ ಸರ್ಕಾರವನ್ನು ನಿರ್ಧರಿಸುತ್ತಾ?

ಕೇರಳದಲ್ಲಿ ಯಾವ ಸರ್ಕಾರ ರಚನೆಯಾಗಲಿದೆ ಎಂಬ ವಿಚಾರಕ್ಕೆ ಬಂದಾಗ ಹಲವು ದಶಕಗಳಿಂದ ರಾಜಕೀಯ ವೀಕ್ಷಕರ ಚಿತ್ತ ಒಲ್ಲೂರಿನತ್ತ ಹರಿದಿದೆ. ದಶಕಗಳಿಂದ, ಈ ಕ್ಷೇತ್ರದ ಫಲಿತಾಂಶವೇ ರಾಜ್ಯದ ಫಲಿತಾಂಶ ಎಂಬಂತಾಗಿದೆ. ಸಾಮಾನ್ಯವಾಗಿ 1982 ಅನ್ನು ಕೇರಳದ ಚುನಾವಣಾ ಪ್ರವೃತ್ತಿಗಳನ್ನು ವಿಶ್ಲೇಷಿಸಲು ಮೂಲ ವರ್ಷವೆಂದು ತೆಗೆದುಕೊಳ್ಳಲಾಗುತ್ತದೆ. ಯುಡಿಎಫ್ ಮತ್ತು ಎಲ್‌ಡಿಎಫ್ ಮೈತ್ರಿ ಶುರುವಾಗಿ ಕೇರಳ ರಾಜಕೀಯದಲ್ಲಿ ದ್ವಿಧ್ರುವಿ ರಾಜಕೀಯ ಸ್ಪರ್ಧೆ ಸೃಷ್ಟಿಯಾದ ವರ್ಷವಿದು.

ಆ ಚುನಾವಣೆಯಲ್ಲಿ, ಕೆ. ಕರುಣಾಕರನ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬಂದಿತ್ತು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಾಘವನ್ ಪುಳಕಡವಿಲ್ ಒಲ್ಲೂರಿನಲ್ಲಿ ಗೆದ್ದಿದ್ದರು. ನಂತರ ಇದೇ ರೀತಿ ಮುಂದುವರೆಯಿತು. 1987ರಲ್ಲಿ, ಇಕೆ ನಾಯನಾರ್ ನೇತೃತ್ವದ ಎಲ್‌ಡಿಎಫ್ ಅಧಿಕಾರ ವಹಿಸಿಕೊಂಡಾಗ, ಒಲ್ಲೂರಿನಲ್ಲಿ ಸಿಪಿಐ ಅಭ್ಯರ್ಥಿ ಎಎಂ ಪರಮನ್ ಅವರು ಜಯ ಕಂಡಿದ್ದರು. 1991ರಲ್ಲಿ ಪಿಪಿ ಜಾರ್ಜ್ (ಕಾಂಗ್ರೆಸ್), 1996ರಲ್ಲಿ ಸಿಎನ್ ಜಯದೇವನ್ (ಸಿಪಿಐ), 2001ರಲ್ಲಿ ಮತ್ತೆ ಜಾರ್ಜ್, 2006ರಲ್ಲಿ ರಾಜಾಜಿ ಮ್ಯಾಥ್ಯೂ ಥಾಮಸ್ (ಸಿಪಿಐ) ಮತ್ತು 2011ರಲ್ಲಿ ಎಂಪಿ ವಿನ್ಸೆಂಟ್ (ಕಾಂಗ್ರೆಸ್) – ಹೀಗೆ ನಂತರದ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಅಧಿಕಾರ ಪಡೆದ ಪಕ್ಷದ ಅಭ್ಯರ್ಥಿಯೇ ಆಯ್ಕೆಯಾಗಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿಯೂ ಈ ಪ್ರವೃತ್ತಿ ಮುಂದುವರೆದಿದೆ.

ಸಿಪಿಐನ ಕೆ ರಾಜನ್ 2016 ಮತ್ತು 2021ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ, ಎಲ್‌ಡಿಎಫ್ ಅಧಿಕಾರಕ್ಕೆ ಏರಿದೆ. ಮೊದಲ ಅವಧಿಯಲ್ಲಿ, ಸರ್ಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ ರಾಜನ್, ಎರಡನೇ ಅವಧಿಯಲ್ಲಿ ಕಂದಾಯ ಸಚಿವರಾದರು. ರಾಜನ್ ಈಗ ಕ್ಷೇತ್ರದಿಂದ ಸತತ ಮೂರನೇ ಅವಧಿಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ ಕುತೂಹಲಕಾರಿಯಾಗಿ, ಒಲ್ಲೂರ್ ಬಹಳ ಹಿಂದಿನಿಂದಲೂ ಮತ್ತೊಂದು ಚುನಾವಣಾ ವಿಚಿತ್ರತೆಗೆ ಹೆಸರುವಾಸಿಯಾಗಿದೆ. 1980ರಿಂದ, ಈ ಕ್ಷೇತ್ರದಲ್ಲಿ ಒಂದೇ ರಂಗ ಎಂದಿಗೂ ಸತತ ಗೆಲುವು ಕಂಡಿಲ್ಲ. ಆದರೆ ಇದು 2021ರಲ್ಲಿ ಬದಲಾಗಿದೆ. ಈ ಮೂಲಕ ಕೇರಳದಲ್ಲಿ ಎಲ್‌ಡಿಎಫ್ ಸತತ ಎರಡನೇ ಬಾರಿಗೆ ಐತಿಹಾಸಿಕ ಗೆಲುವು ಕಂಡಿದೆ.

ಇದನ್ನು ಓದಿದ್ದೀರಾ? ಮತದಾನ ಮಾಡಿ ಫಲಿತಾಂಶಕ್ಕಾಗಿ 25 ದಿನ ಕಾಯಬೇಕು ಕೇರಳ, ಅಸ್ಸಾಂ, ಪುದುಚೇರಿ ಜನತೆ!

ಒಲ್ಲೂರ್ ಕ್ಷೇತ್ರದ ಬಗ್ಗೆ ತಿಳಿಯಿರಿ

ತ್ರಿಶೂರ್ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳಲ್ಲಿ ಒಲ್ಲೂರ್ ಒಂದಾಗಿದೆ ಮತ್ತು ತ್ರಿಶೂರ್ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಈ ಕ್ಷೇತ್ರವು 1957ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ಕ್ಷೇತ್ರವು ತ್ರಿಶೂರ್ ಕಾರ್ಪೊರೇಷನ್‌ನ 13, 14, 23 ರಿಂದ 33 ಮತ್ತು 42 ರಿಂದ 45 ವಿಭಾಗಗಳು, 17 ಮತ್ತು 24 ವಿಭಾಗಗಳ ಕೆಲವು ಭಾಗಗಳು ಮತ್ತು ಮಡಕ್ಕಥರ, ವಟ್ಟರ, ಪಣಂಚೇರಿ ಮತ್ತು ಪುತ್ತೂರು ಪಂಚಾಯತ್‌ಗಳನ್ನು ಒಳಗೊಂಡಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ, ರಾಜನ್ ಕಾಂಗ್ರೆಸ್ ಅಭ್ಯರ್ಥಿ ಜೋಸ್ ವಲ್ಲೂರ್ ಅವರನ್ನು 21,506 ಮತಗಳ ಅಂತರದಿಂದ ಸೋಲಿಸಿದರು. 2016ರಲ್ಲಿ, ರಾಜನ್ 13,248 ಮತಗಳ ಅಂತರದಲ್ಲಿ ಗೆದ್ದಿದ್ದರು. 2021ರಲ್ಲಿ ಬಿಜೆಪಿ ನೇರವಾಗಿ ಇಲ್ಲಿ ಸ್ಪರ್ಧೆಗೆ ಇಳಿಯಿತು. ಕೊನೆಯ ಕ್ಷಣದಲ್ಲಿ ಅನಿರೀಕ್ಷಿತವಾಗಿ ಆಗಿನ ರಾಜ್ಯ ವಕ್ತಾರ ಬಿ. ಗೋಪಾಲಕೃಷ್ಣನ್ ಅವರನ್ನು ಕಣಕ್ಕಿಳಿಸಿತ್ತು. ಆದರೆ ಅವರು ಪರಾಭವಗೊಂಡರು.

ಗಡಿ ಕ್ಷೇತ್ರಗಳೂ ಮುಖ್ಯ

ತಮಿಳುನಾಡಿನ ಗಡಿಯಲ್ಲಿರುವ ತಿರುವನಂತಪುರಂ ಜಿಲ್ಲೆಯ ದಕ್ಷಿಣದ ವಿಧಾನಸಭಾ ಕ್ಷೇತ್ರವಾದ ಪರಸ್ಸಲ ಊಹಿಸಿದ ಫಲಿತಾಂಶಕ್ಕಿಂತ ವಿಭಿನ್ನ ಫಲಿತಾಂಶ ನೀಡಿದ ಖ್ಯಾತಿಯನ್ನು ಹೊಂದಿದೆ. ಸಾಮಾನ್ಯವಾಗಿ ಈ ಕ್ಷೇತ್ರವನ್ನೂ ಬೆಲ್‌ವೆದರ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ಕ್ಷೇತ್ರದ ಜನರು ಪಕ್ಷ ನೋಡದೆ ವ್ಯಕ್ತಿಯನ್ನು ನೋಡಿ ಮತ ಹಾಕಿರುವುದೂ ಇದೆ. ಕ್ಷೇತ್ರದ ಚುನಾವಣಾ ಇತಿಹಾಸವು ಎಲ್‌ಡಿಎಫ್ ಮತ್ತು ಯುಡಿಎಫ್ ಎರಡನ್ನೂ ಪರೀಕ್ಷೆಗೆ ತಳ್ಳುತ್ತಾ ಬಂದಿದೆ.

1982ರಲ್ಲಿ ಕೆ. ಕರುಣಾಕರನ್ ಕೇರಳದಲ್ಲಿ ಸರ್ಕಾರವನ್ನು ಮುನ್ನಡೆಸಿದಾಗ ಕಾಂಗ್ರೆಸ್ ನಾಯಕ ಎನ್ ಸುಂದರನ್ ನಾಡರ್ ಈ ಸ್ಥಾನವನ್ನು ಗೆದ್ದಿದ್ದಾರೆ. 2001ರಲ್ಲಿ ಎಕೆ ಆಂಟನಿ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬಂದಾಗಲೂ ಎನ್ ಸುಂದರನ್ ನಾಡರ್ ಗೆಲುವು ಕಂಡಿದ್ದಾರೆ. ನಾಡರ್ 1996ರಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆ ವರ್ಷ ಎಲ್‌ಡಿಎಫ್ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು, ನಾಡರ್ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ದಶಕಗಳಲ್ಲಿ, ಈ ಸ್ಥಾನವು ಎರಡು ರಂಗಗಳ ನಡುವೆ ಪರ್ಯಾಯವಾಗಿಯೇ ಕಾಣಿಸಿಕೊಂಡಿದೆ. 1987ರಲ್ಲಿ ಸಿಪಿಐ(ಎಂ) ನ ಎನ್ ಸತ್ಯನೇಸನ್ ಗೆದ್ದರು. ಈ ವೇಳೆ ಎಲ್‌ಡಿಎಫ್ ನೇತೃತ್ವದ ನಯನಾರ್ ಸರ್ಕಾರ ರಚಿಸಿದರು. 1991ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂಆರ್ ರಘುಚಂದ್ರಬಾಲ್ ಗೆಲುವು ಕಂಡಾಗ ಕೆ ಕರುಣಾಕರನ್ ನೇತೃತ್ವದ ಯುಡಿಎಫ್ ಸರ್ಕಾರ ರಚನೆಯಾಯಿತು.

2006ರಲ್ಲಿ ವಿಎಸ್ ಅಚ್ಯುತಾನಂದನ್ ಸರ್ಕಾರಕ್ಕಿಂತ ಮುಂಚಿತವಾಗಿ, ಸಿಪಿಐ(ಎಂ) ನ ಆರ್ ಸೆಲ್ವರಾಜ್ ಕ್ಷೇತ್ರವನ್ನು ವಶಪಡಿಸಿಕೊಂಡರು. 2011ರಲ್ಲಿ, ಕಾಂಗ್ರೆಸ್‌ನ ಎಟಿ ಜಾರ್ಜ್ ಸಿಪಿಐ(ಎಂ) ನ ಅನವೂರ್ ನಾಗಪ್ಪನ್ ಅವರನ್ನು 505 ಮತಗಳ ಅಂತರದಿಂದ ಸೋಲಿಸಿ, ಉಮ್ಮನ್ ಚಾಂಡಿ ನೇತೃತ್ವದ ಸರ್ಕಾರದ ಭಾಗವಾದರು. 2016ರಲ್ಲಿ ಜಾರ್ಜ್ ಅವರನ್ನು ಸಿಪಿಐ(ಎಂ) ನ ಸಿಕೆ ಹರೀಂದ್ರನ್ 18,566 ಮತಗಳಿಂದ ಸೋಲಿಸಿ, ಎಲ್‌ಡಿಎಫ್‌ಗೆ ಸ್ಥಾನವನ್ನು ಮರಳಿ ನೀಡಿದರು. 2021ರಲ್ಲಿ ಹರೀಂದ್ರನ್ ಕ್ಷೇತ್ರವನ್ನು ಉಳಿಸಿಕೊಂಡರು. ಯುಡಿಎಫ್ ಅಭ್ಯರ್ಥಿ ಅನ್ಸಾಜಿತಾ ರಸೆಲ್ ಅವರನ್ನು ಸೋಲಿಸಿದರು. ಎರಡೂ ಸಂದರ್ಭಗಳಲ್ಲಿಯೂ, ಎಲ್‌ಡಿಎಫ್ ಅಧಿಕಾರಕ್ಕೆ ಬಂದಿತು.

ಕಳೆದ ದಶಕದಲ್ಲಿ ಪರಸ್ಸಲ ರಾಜಕೀಯಕ್ಕೆ ಹೊಸ ಆಯಾಮವನ್ನು ಸೇರಿಸಿದೆ. ಇಲ್ಲಿ ಬಿಜೆಪಿ ಮೂರನೇ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಈ ಕ್ಷೇತ್ರವು ಒಮ್ಮೆ ಎಡ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ನೇರ ಹೋರಾಟವನ್ನು ಕಂಡಿದ್ದರೂ, ಸದ್ಯ ಬಿಜೆಪಿಯ ಮತ ಹಂಚಿಕೆಯು ಹೆಚ್ಚುತ್ತಿರುವುದು ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಹುಟ್ಟುವಂತೆ ಮಾಡಿದೆ. 2011ರಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಸುರೇಶ್ 10,310 ಮತಗಳನ್ನು ಗಳಿಸಿದ್ದಾರೆ. 2016ರಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕರಮಣ ಜಯನ್ 33,028 ಮತಗಳನ್ನು ಪಡೆದಿದ್ದಾರೆ. ಅಂದರೆ ಈ ಹಿಂದಿನ ಮತ ಪ್ರಮಾಣಕ್ಕಿಂತ ಮೂರು ಪಟ್ಟು ಅಧಿಕ ಮತ ಗಳಿಸಿದ್ದಾರೆ. 2021ರ ಬಿಜೆಪಿಯ ಮತ ಪ್ರಮಾಣ 29,850ಕ್ಕೆ ಇಳಿದಿದ್ದರು. ಗಮನಾರ್ಹ ಇಳಿಕೆಯೇನಲ್ಲ. 2024ರ ಲೋಕಸಭಾ ಚುನಾವಣೆಯಲ್ಲೂ ಈ ಪ್ರವೃತ್ತಿ ಕಂಡುಬಂದಿದೆ. ಪರಸ್ಸಲ ವಿಧಾನಸಭೆ ಕ್ಷೇತ್ರದಲ್ಲಿ ಯುಡಿಎಫ್ 59,026 ಮತಗಳನ್ನು, ಎಲ್‌ಡಿಎಫ್ 46,654 ಮತ್ತು ಬಿಜೆಪಿ 45,957 ಮತಗಳನ್ನು ಗಳಿಸಿದೆ. ಇದು ಈ ಕ್ಷೇತ್ರದಲ್ಲಿ ಬಿಗಿಯಾಗಿರುವ ತ್ರಿಕೋನ ಸ್ಪರ್ಧೆಯನ್ನು ಎತ್ತಿ ತೋರಿಸುತ್ತದೆ.

1957ರಲ್ಲಿ ರಚನೆಯಾದ ಪರಸ್ಸಲ ವಿಧಾನಸಭಾ ಕ್ಷೇತ್ರವು ನೆಯ್ಯಟ್ಟಿಂಕರ ತಾಲ್ಲೂಕಿನ ಅಂಬೂರಿ, ಆರ್ಯನ್‌ಕೋಡ್, ಕಲ್ಲಿಕ್ಕಾಡ್, ಕೊಲ್ಲಯಿಲ್, ಕುನ್ನತುಕಲ್, ಒಟ್ಟಶೇಖರಮಂಗಲಂ, ಪರಸ್ಸಲ, ಪೆರುಂಕಡವಿಲಾ ಮತ್ತು ವೆಲ್ಲರಡ ಪಂಚಾಯತ್‌ಗಳನ್ನು ಒಳಗೊಂಡಿದೆ. ಕಳೆದ ಎರಡು ಚುನಾವಣೆಗಳಲ್ಲಿ ಎಲ್‌ಡಿಎಫ್ ಸತತ ಗೆಲುವು ಸಾಧಿಸಿದ್ದರೂ, ಕ್ಷೇತ್ರವು ರಾಜಕೀಯ ಏಕಸ್ವಾಮ್ಯವನ್ನು ವಿರೋಧಿಸುತ್ತಲೇ ಬಂದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಕ್ಷೇತ್ರದ ಜನತೆ ಯುಡಿಎಫ್ ಭರವಸೆಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಆದರೆ ಬಿಜೆಪಿ 2016ರಲ್ಲಿ ಪಡೆದ ಬೆಂಬಲವನ್ನು ಮತ್ತೆ ಪಡೆದಿದೆ. ಬದಲಾಗುತ್ತಿರುವ ರಾಜಕೀಯ ಸಮೀಕರಣಗಳು, ಉದಯೋನ್ಮುಖ ತ್ರಿಕೋನ ಸ್ಪರ್ಧೆಗಳು ಸೇರಿದಂತೆ ಸ್ಥಳೀಯ ಅಂಶಗಳು ಪರಸ್ಸಲ ಮತ್ತೆ ಕೇರಳ ಸರ್ಕಾರವನ್ನು ನಿರ್ಧರಿಸುವುದೇ ಎಂಬ ದೊಡ್ಡ ಪ್ರಶ್ನೆಯನ್ನು ಹುಟ್ಟಿಸಿದೆ.

ಮಾಹಿತಿ: ಸೌತ್‌ಫಸ್ಟ್

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...