ಕೊಪ್ಪಳ | ಅಜ್ಜನ ಜಾತ್ರೆಯ ದಾಸೋಹ ಪರಂಪರೆ

Date:

ಕೊಪ್ಪಳದ ಗವಿಮಠ ಅಂದ ತಕ್ಷಣ, ತೇರಿನ ಸುತ್ತ ಲಕ್ಷಾಂತರ ಜನರು ಸುತ್ತುವರಿದಿರುವ ವಿಹಂಗಮ ಚಿತ್ರ ಕಣ್ಣ ಮುಂದೆ ಹಾದುಹೋಗುತ್ತದೆ. ನಾಡಿನಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಎಷ್ಟು ಜನಪ್ರಿಯವೋ, ಇಲ್ಲಿನ ದಾಸೋಹ ಕೂಡಾ ಅಷ್ಟೇ ಪ್ರಸಿದ್ಧವಾಗಿದೆ.

12ನೇ ಶತಮಾನದಲ್ಲಿ ಬಸವಾದಿ ಶರಣರು ಕಾಯಕ ಮತ್ತು ದಾಸೋಹ ತತ್ವ ಹೇಳಿಕೊಟ್ಟರು. ಕಾಯಕತತ್ವವು ಜಾತಿಯ ಅಹಂಭಾವ ಮತ್ತು ವೃತ್ತಿಯ ಕೀಳರಿಮೆಗಳನ್ನು ಏಕಕಾಲಕ್ಕೆ ನಿವಾರಣೆ ಮಾಡಿದರೆ, ದಾಸೋಹ ತತ್ವವು ಸಹಪಂಕ್ತಿ-ಸಹಭೋಜನದಿಂದ ಸಮಾನತೆಯನ್ನು ತಂದುಕೊಟ್ಟಿತು. ಈ ದಾಸೋಹ ಪರಂಪರೆಯನ್ನು ಅಜ್ಜನ ಜಾತ್ರೆಯಲ್ಲಿ ಇಂದಿಗೂ ನೋಡಬಹುದು.

ಮಠದ ಅಧಿಕೃತ ಉತ್ಸವ ಕೇವಲ ಮೂರು ದಿನಗಳಾದರೂ, ತಿಂಗಳವರೆಗೂ ಇಲ್ಲಿನ ಜನರು ಜಾತ್ರೆ ಮುಂದುವರಿಸುತ್ತಾರೆ. ಅಷ್ಟು ಅವಧಿಯಲ್ಲಿ ಮಠಕ್ಕೆ ಬಂದ ಎಲ್ಲರಿಗೂ ಅನ್ನದಾಸೋಹ ಮಾಡಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜಾತ್ರೆ ಶುರವಾಗಲು ಒಂದು ತಿಂಗಳು ಇರುವಾಗಲೇ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಜೋಳದ ರೊಟ್ಟಿ ತಟ್ಟುವ ಸದ್ದು ಜೋರಾಗಿ ಕೇಳಿ ಬರತೊಡಗುತ್ತದೆ. ರಾಯಚೂರು, ಬಾಗಲಕೋಟೆ, ಬಳ್ಳಾರಿ, ವಿಜಯಪುರ, ವಿಜಯನಗರ, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸ್ವಯಂಪ್ರೇರಿತರಾಗಿ ಮಠಕ್ಕೆ ರೊಟ್ಟಿ, ದವಸ-ಧಾನ್ಯ, ಹೊಳಿಗೆ, ಖರ್ಚಿಖಾಯಿ, ಕಡಬು, ಲಾಡು, ತರಕಾರಿ, ಚಟ್ನಿ, ಜಿಲೇಬಿ, ಮಾದಲಿ, ಹೋಳಿಗೆ, ಕರದಂಟು, ಮೈಸೂರು ಪಾಕ್‌, ರವೆ ಉಂಡೆ, ಜಾಮೂನು ಸೇರಿದಂತೆ ಹಲವು ವಸ್ತುಗಳನ್ನು ತಂದು ಕೊಡುತ್ತಾರೆ.

ಭಕ್ತರು, ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸ್ವಸಹಾಯ ಮಹಿಳಾ ಸಂಘದವರು ತಂಡ ರಚಿಸಿಕೊಂಡು ಬಂದು ದಾಸೋಹದಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಯ ಅವಧಿಯಲ್ಲಿ ಕಟ್ಟಿಗೆಯ ಒಲೆ ನಿರಂತರವಾಗಿ ‘ಮಹಾದಾಸೋಹ ಜ್ಯೋತಿ’ಯಾಗಿ ಉರಿಯುತ್ತಲೇ ಇರುತ್ತದೆ. ಮಠದ ದಾಸೋಹ ವ್ಯವಸ್ಥೆ ಸಮಗ್ರ ಉಸ್ತುವಾರಿಯನ್ನು ಖುದ್ದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ನೋಡಿಕೊಳ್ಳುತ್ತಾರೆ. ಹೀಗಾಗಿ ಮಠಕ್ಕೆ ಬರುವ ಕೊನೆಯ ಭಕ್ತನ ಊಟವಾಗುವ ತನಕ ಕಾಯುವ ಪ್ರಸಾದದ ಕೌಂಟರ್‌ ಸದಾ ಅನ್ನಪೂರ್ಣೆಯಂತೆ ಕಾಣಿಸುತ್ತದೆ.

ಬುಧವಾರ ನಡೆದ ರಥೋತ್ಸವದಲ್ಲಿ ಎಲ್ಲ ಜಾತಿ, ಧರ್ಮದವರು ಕಲೆತು ಅಜ್ಜನ ತೇರು ಎಳೆದರು. ರಥೋತ್ಸವದ ಹಿಂದಿನ ದಿನ ಈದಿನ.ಕಾಮ್ ಮಠಕ್ಕೆ ಭೇಟಿ ಕೊಟ್ಟಾಗ, ದಾಸೋಹ ಚಟುವಟಿಕೆಗಳು ಭರದಿಂದ ಸಾಗಿದ್ದವು. ಭಕ್ತರು ಅಷ್ಟೇ ಉತ್ಸಾಹದಿಂದ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು ಕಂಡುಬಂತು.

ರಾಜ್ಯದ ವಿವಿಧೆಡೆಯಿಂದ ಜಾತ್ರೆಗೆ 20 ಲಕ್ಷ ರೊಟ್ಟಿಗಳು ಬಂದಿವೆ. ಪ್ರತಿದಿನ ಸುಮಾರು 2 ಲಕ್ಷ ಜನರು ದಾಸೋಹ ಸ್ವೀಕರಿಸುತ್ತಾರೆ. ಸುಮಾರು 500 ಜನರು ಸ್ವಯಂಪ್ರೇರಿತರಾಗಿ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಪ್ರೊ. ಶರಣಬಸಪ್ಪ ಈದಿನ.ಕಾಂಗೆ ತಿಳಿಸಿದರು.

ಬೂದಿಹಾಳ ಗ್ರಾಮದಿಂದ 1 ಕ್ವಿಂಟಾಲ್ ಬೂಂದಿ, ಸಿಂಧನೂರಿನಿಂದ 11 ಕ್ವಿಂಟಾಲ್ ಖರ್ಚಿಕಾಯಿ, 15 ಕ್ವಿಂಟಾಲ್ ಮಾದ್ಲಿ, ಬಾಗಲಕೋಟೆ ಭಕ್ತಾದಿಗಳಿಂದ 9 ಸಾವಿರ ಹೋಳಿಗೆ ಸೇರಿದಂತೆ ಸುಮಾರು 50 ಕ್ವಿಂಟಾಲ್ ಸಿಹಿ ತಿನಿಸು ಬಂದಿದೆ ಎಂದು ಹೇಳಿ ಅಚ್ಚರಿ ಮೂಡಿಸಿದರು ಮಠದ ಸಿಬ್ಬಂದಿ ಪ್ರಭುಸ್ವಾಮಿ ಸಾಲಿಮಠ.

‘ನಮ್ಮ ಹಿರಿಯರ ಕಾಲದಿಂದಲೂ ಮಠಕ್ಕೆ ರೊಟ್ಟಿ ನೀಡುತ್ತಾ ಬರಲಾಗುತ್ತಿದೆ. ನಮ್ಮೂರಿನಿಂದ 15 ಸಾವಿರ ರೊಟ್ಟಿ ತಂದಿದ್ದೇವೆ’ ಎಂದು ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದ ಜನರು ಹೆಮ್ಮೆಯಿಂದ ಹೇಳಿಕೊಂಡರು.

ಒಂದು ವಾರದಿಂದ ದಾಸೋಹದಲ್ಲಿ ತೊಡಗಿಸಿಕೊಂಡಿದ್ದೇವೆ. ಸುಮಾರು ಹಳ್ಳಿಗಳಿಂದ ಭಕ್ತಾದಿಗಳು ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ತಂದು ಕೊಡುತ್ತಿದ್ದಾರೆ. ಕೊಡಬೇಕು ಎಂದು ಅವರಿಗೆ ಯಾರೂ ಹೇಳುವುದಿಲ್ಲ. ಅವರೇ ಸ್ವಯಂಪ್ರೇರಿತರಾಗಿ ಟ್ರ್ಯಾಕ್ಟರ್, ಚಕ್ಕಡಿ ಮೂಲಕ ತಂದುಕೊಡುತ್ತಾರೆ ಎಂದು ವಿದ್ಯಾರ್ಥಿ ವೀರೇಶ್ ಹಿರೇಮಠ ಹೇಳಿದರು.

ನಮ್ಮದೂ ಒಂದಷ್ಟು ಸೇವೆ ಇರಲಿ ಎನ್ನುವ ಭಕ್ತಿಯೇ ಯುವಕರ, ಮಹಿಳೆಯರ, ಹಿರಿಯರನ್ನು ‘ಮಹಾದಾಸೋಹ’ದ ಮನೆಯಲ್ಲಿ ಒಂದುಗೂಡಿಸುವುದು ಅಜ್ಜನ ಜಾತ್ರೆಯ ವಿಶೇಷತೆಯೂ ಆಗಿದೆ.

ಪೂರಕ ಮಾಹಿತಿ: ಕೇಶವ್ ಕಟ್ಟಿಮನಿ, ಗೀತಾ ಹೊಸಮನಿ

WhatsApp Image 2025 01 01 at 15.46.25
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...