ಶಬ್ದದೊಳಗೆ ನಿಶ್ಯಬ್ದವಾಯ್ತು, ಹಿಡ್ಮಾ ಎಂಬ ‘ಬಸ್ತರ್ ಭೂತ’

Date:

2001ರಿಂದ 2007ರವರೆಗೆ ತನ್ನ ಗುಂಪಿನಲ್ಲಿ ಸಾಮಾನ್ಯ ಯೋಧನಂತಿದ್ದ ಹಿಡ್ಮಾ, ಬಸ್ತರ್‌ ಭಾಗದ ʼಸಾಲ್ವಾ ಜುದುಂʼ ಚಳವಳಿಯ ನಂತರ ಹೆಚ್ಚು ಮುನ್ನೆಲೆಗೆ ಬಂದರು. ಸಂಗಾತಿಗಳ ಮೇಲಿನ ಹಿಂಸಾಚಾರವನ್ನು ಕಣ್ಣಾರೆ ಕಂಡಿದ್ದ ಅವರಿಗೆ ಪ್ರತೀಕಾರವೊಂದೇ ದಾರಿಯಾಗಿ ಕಂಡಿತು. ಈ ಎಳೆಯೇ ಅವರನ್ನು ಮಾವೋವಾದಿಗಳ ಒಬ್ಬ ನಿರ್ದಯಿ ನಾಯಕನಾಗಲು ಪ್ರೇರೇಪಿಸಿತು ಎನ್ನುತ್ತಾರೆ ಅವರೊಂದಿಗಿದ್ದ ಹಳೆಯ ಗೆಳೆಯರು.

ʼಮಾಡವಿ ಹಿಡ್ಮಾʼ- ದಶಕಗಳ ಕಾಲ ಛತ್ತೀಸಗಢದ ಬಸ್ತರ್‌ ನ ಅಡವಿಗಳು ಪಿಸುಗುಡುತ್ತಿದ್ದ ಹೆಸರು. ಭದ್ರತಾ ಪಡೆಗೆ ಹಿಡ್ಮಾ ಒಬ್ಬ ಮೋಸ್ಟ್‌ ವಾಂಟೆಡ್‌ ನಕ್ಸಲನಾದರೆ, ಮಾವೋವಾದಿಗಳ ಪಾಲಿಗೆ ಅವರೊಬ್ಬ ಧೀರೋದಾತ್ತ ನಾಯಕ. ಭಾರತದ ಹಲವು ಅತಿ ಉಗ್ರ ಮಾವೋವಾದಿ ದಾಳಿಗಳ ಹಿಂದಿನ ‘ಮಾಸ್ಟರ್‌ ಮೈಂಡ್‌’ ಎನ್ನಲಾಗಿದ್ದ ಹಿಡ್ಮಾ, ಇದೇ ನವೆಂಬರ್ 18ರಂದು ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ. 

ಆದಿವಾಸಿ ಹಿಡ್ಮಾ ಕಥೆ ಶುರುವಾಗುವುದೇ ಸುಕ್ಮಾದ ದಟ್ಟಾರಣ್ಯ ಪ್ರದೇಶದಲ್ಲಿ. ಗೊಂಡ್ ಬುಡಕಟ್ಟಿನ ಉಪಬುಡಕಟ್ಟು ಮುರಿಯಾ ಗೆ ಸೇರಿದ್ದವರು ಈ ಹಿಡ್ಮಾ. ಸುಕ್ಮಾ ಜಿಲ್ಲೆಯ ಪೂವರ್ತಿ ಗ್ರಾಮದವರು. ಮುಂದೆ ಬಸ್ತರ್‌ನ ಮಾವೋವಾದಿಗಳನ್ನು ಸಂಘಟಿಸುವ ನಾಯಕರಾಗಿ ಗುರುತಿಸಿಕೊಂಡರು. ಗೆರಿಲ್ಲಾ ಯುದ್ಧದ ನಿಸ್ಸೀಮ ತಂತ್ರಜ್ಞಾನಿ ಎನಿಸಿದರು. 1996–97ರಲ್ಲಿ ಹದಿನೇಳನೇ ವಯಸ್ಸಿನಲ್ಲಿ CPI (Maoist) ಸಂಘಟನೆಗೆ ಸೇರಿದರು. ಪಕ್ಷಕ್ಕೆ ಸೇರುವ ಮೊದಲು ಕೃಷಿಕನಾಗಿ ಜೀವನ ಸಾಗಿಸುತ್ತಿದ್ದ ಅವರು, ಹೆಚ್ಚು ಮಾತನಾಡದ, ಹೊಸ ವಿಷಯಗಳನ್ನು ಕಲಿಯಲು ಅಪಾರ ಆಸಕ್ತಿ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕ್ರಾಂತಿ ಗೀತೆಗಳು, ಸ್ಥಳೀಯ ವಾದ್ಯಗಳು, ಪ್ರಥಮೋಪಚಾರ, ಗಿಡಮೂಲಿಕೆ ಚಿಕಿತ್ಸೆ ಇವೆಲ್ಲವನ್ನೂ ಅವರು ಅರಣ್ಯದಲ್ಲೇ ಕಲಿತರು. ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಂಡುಕೊಳ್ಳುವ ತೀಕ್ಷ್ಣಮತಿ.

WhatsApp Image 2025 11 19 at 4.17.53 PM

2000ರ ಹೊತ್ತಿಗೆ ಹಿಡ್ಮಾರನ್ನು ಮಾವೋವಾದಿ ಪಡೆಗಳ ಆಯುಧ ತಯಾರಿಕಾ ತಂಡಕ್ಕೆ ನಿಯೋಜಿಸಲಾಯಿತು. ಇಲ್ಲಿ ಸ್ಥಳೀಯವಾಗಿ ತಯಾರಿಸುವ ಗ್ರೆನೇಡ್‌ ಗಳಿಂದ ಹಿಡಿದು ಲಾಂಚರ್‌ಗಳವರೆಗೆ ಪರಿಣಿತಿ ಪಡೆದರು ಎಂದು ವರದಿಯಾಗಿದೆ. ಬಳಿಕ 2001-02ರಲ್ಲಿ ದಕ್ಷಿಣ ಬಸ್ತರ್‌ ಪ್ರದೇಶದ ಪ್ಲಟೂನ್‌ ತಂಡದಲ್ಲಿ ಬೆಳೆಯುತ್ತಾ, ಪೀಪಲ್ಸ್‌ ಲಿಬರೇಷನ್‌ ಗೆರಿಲ್ಲಾ ಆರ್ಮಿ (PLGA)ಗೆ ಸೇರ್ಪಡೆಯಾಗುತ್ತಾರೆ. 2001ರಿಂದ 2007ರವರೆಗೆ ತನ್ನ ಗುಂಪಿನಲ್ಲಿ ಸಾಮಾನ್ಯ ಯೋಧನಂತಿದ್ದ ಹಿಡ್ಮಾ, ಬಸ್ತರ್‌ ಭಾಗದ ʼಸಾಲ್ವಾ ಜುದುಂʼ ಚಳವಳಿಯ ನಂತರ ಹೆಚ್ಚು ಮುನ್ನೆಲೆಗೆ ಬಂದರು. ತಮ್ಮವರ ಮೇಲಿನ ಹಿಂಸಾಚಾರವನ್ನು ಕಣ್ಣಾರೆ ಕಂಡಿದ್ದ ಅವರಿಗೆ ಪ್ರತೀಕಾರವೊಂದೇ ದಾರಿಯಾಗಿ ಕಂಡಿತು. ಈ ಎಳೆಯೇ ಅವರನ್ನು ಮಾವೋವಾದಿಗಳ ಒಬ್ಬ ನಿರ್ದಯಿ ನಾಯಕನಾಗಲು ಪ್ರೇರೇಪಿಸಿತು ಎಂದು ಅವರೊಂದಿಗಿದ್ದ ಹಳೆಯ ಗೆಳೆಯರು ಹೇಳುವುದಾಗಿ ಬಿಬಿಸಿ (ತೆಲುಗು) ವರದಿ ಮಾಡಿದೆ.

2007ರ ಮಾರ್ಚ್‌ನಲ್ಲಿ ಉರ್ಪಲ್‌ಮೆಟ್ಟ ಪ್ರದೇಶದಲ್ಲಿ ನಡೆದ ದಾಳಿ-ಪ್ರತಿದಾಳಿಯಲ್ಲಿ ಸುಮಾರು 24 ಮಂದಿ CRPF ಸಿಬ್ಬಂದಿಗಳು ಹುತಾತ್ಮರಾದರು. ದಾಳಿಯ ಹಿಂದಿದ್ದದ್ದು ಇದೇ ಹಿಡ್ಮಾ ಎನ್ನುವುದು ಭದ್ರತಾ ಪಡೆಗಳ ವಾದ. ಈ ಘಟನೆ ಹಿಡ್ಮಾ ಜೀವನದ ಮತ್ತೊಂದು ತಿರುವಾಗಿ ಪರಿಣಮಿಸಿತು. ಹಿಡ್ಮಾ ರೂಪಿಸುತ್ತಿದ್ದ ಕಾರ್ಯತಂತ್ರಗಳು ಪಕ್ಷದ ಹಿರಿಯರನ್ನೂ ಚಕಿತಗೊಳಿಸುತ್ತಿದ್ದವು. ಇದರಿಂದ 2008-09ರಲ್ಲಿ ರಚಿಸಿದ ಕಮ್ಯುನಿಸ್ಟ್‌ ಫರ್ಸ್ಟ್‌ ಬೆಟಾಲಿಯನ್‌ನ ಕಮಾಂಡರ್‌ ಆಗಿ ನೇಮಕ ಮಾಡಲಾಯಿತು. 2011ರಲ್ಲಿ ದಂಡಕಾರಣ್ಯ ವಿಶೇಷ ವಲಯ ಸಮಿತಿಗೆ ನೇಮಿಸಲಾಯಿತು. ಪಕ್ಷದ ಮುಖ್ಯ ಕಾರ್ಯತಂತ್ರಗಳನ್ನು ರೂಪಿಸುವ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ನೀಡಲಾಯಿತು. ಅತ್ಯಂತ ಕಿರಿಯ ಸದಸ್ಯರಾಗಿ ಪಕ್ಷದ ಕೇಂದ್ರ ಸಮಿತಿಯಲ್ಲಿ ಬಡ್ತಿಯನ್ನೂ ಪಡೆದರು. ತಾಡಿಮೆಟ್ಲ ದಾಳಿ (2010)ಯಲ್ಲಿ 76 ಮಂದಿ ಪೊಲೀಸರು ಮೃತಪಟ್ಟ ಘಟನೆ ಹಾಗೂ 2017ರ ಮಾರ್ಚ್‌ನಲ್ಲಿ 12 ಮಂದಿ CRPF ಸಿಬ್ಬಂದಿ ಹತ್ಯೆಯಾದ ದಾಳಿಗಳಿಂದಾಗಿ ಹಿಡ್ಮಾ ಪೊಲೀಸರು-ಭದ್ರತಾ ಪಡೆಗಳ ‘ಮೋಸ್ಟ್‌ ವಾಂಟೆಡ್‌’ ಪಟ್ಟಿಗೆ ಸೇರಿದ್ದರು.

ಮಿತವಾದ ಮಾತು, ಮಾತಿನಲ್ಲಿ ಸೌಮ್ಯತೆ, ಯಾರು ಏನೇ ಹೇಳಿದರೂ ಅದನ್ನು ಗಮನಿಸಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ವಿಶಿಷ್ಟ ಅಭ್ಯಾಸ. ಈ ಗುಣಗಳು ಸ್ಥಳೀಯ ಯುವಕರಲ್ಲಿ ಕ್ರೇಜ್‌ ಹುಟ್ಟಿಸುತ್ತಿದ್ದವು ಎಂದು ಬಲ್ಲವರು ಹೇಳುತ್ತಾರೆಂದು ಬಿಬಿಸಿ ವರದಿ ಹೇಳುತ್ತದೆ.

ಔಪಚಾರಿಕವಾಗಿ ಅಷ್ಟೇನೂ ಕಲಿತಿಲ್ಲದ ಹಿಡ್ಮಾ ನಿಖರ ತಂತ್ರಜ್ಞಾನವನ್ನು ಸರಿಯಾಗಿ ಗ್ರಹಿಸಬಲ್ಲ ಕೌಶಲ್ಯ ಹೊಂದಿದ್ದರು. ವಿಚಿತ್ರ ಎಂದರೆ, ಹಲವು ಮುಖಾಮುಖಿ ದಾಳಿಗಳ ಸಂದರ್ಭದಲ್ಲೂ ಅವರು ಸಿಕ್ಕಿಹಾಕಿಕೊಂಡಿರುವುದು ಕಡಿಮೆ. ಸುಮಾರು 6 ಬಾರಿ ಭದ್ರತಾ ಪಡೆಗಳಿಂದ ಸುತ್ತುವರೆದಿದ್ದರೂ ಕಾಡಿನ ಮಧ್ಯೆ ಮರೆಯಾಗಿಬಿಡುತ್ತಿದ್ದರು. 2012ರವರೆಗೂ ಅವರಿಗೆ ಒಂದೇ ಒಂದು ಗಂಭೀರ ಗಾಯವೂ ಆಗಿರಲಿಲ್ಲ. ಹೆಚ್ಚಾಗಿ ಓದಿಲ್ಲದಿದ್ದರೂ ಟ್ಯಾಬ್ಲೆಟ್, ಮೊಬೈಲ್, ಕ್ಯಾಮೆರಾ, ಲ್ಯಾಪ್ಟಾಪ್‌ಗಳು ಅವರ ಬಳಿಯೇ ಇರುತ್ತಿದ್ದವು. ಪ್ರತಿಯೊಂದು ದಾಳಿಯನ್ನೂ ರೆಕಾರ್ಡ್ ಮಾಡಿ, ಯಾವ ಯೋಧ ಯಾವ ಸ್ಥಾನದಲ್ಲಿ ಇದ್ದ, ಯಾವ ತಪ್ಪು ಸಂಭವಿಸಿತು ಎನ್ನುವುದನ್ನೂ ಅಧ್ಯಯನ ಮಾಡಿ, ಶಿಬಿರವನ್ನು ಯುದ್ಧ ವಿದ್ಯೆಗಾಗಿ ತರಗತಿಯನ್ನಾಗಿ ಮಾಡುತ್ತಿದ್ದರೆಂದು ತಂಡದ ಹಳೆಯ ಸದಸ್ಯರು ಹೇಳುವುದಾಗಿ ವರದಿಯಾಗಿದೆ.

unblurimageai image 39 1
ಹಿಡ್ಮಾ ಎನ್‌ಕೌಂಟರ್‌ ಬಳಿಕ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು

ಇದನ್ನೂ ಓದಿ: ಈ ದಿನ ಸಂಪಾದಕೀಯ | ಮುಸ್ಲಿಂ ಸಮುದಾಯದ ಮೇಲಿನ ಪೂರ್ವಗ್ರಹಕ್ಕೆ ಮದ್ದಿಲ್ಲವೇ?

ಮಂಗಳವಾರ ಬೆಳಗ್ಗೆ ಮಾರೆಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದ ಜಂಟಿ ಕಾರ್ಯಾಚರಣೆ ಈ ಹಿಡ್ಮಾ ಅಧ್ಯಾಯಕ್ಕೆ ತೆರೆ ಎಳೆದಿದೆ. ಗುಂಡಿನ ಚಕಮಕಿಯಲ್ಲಿ ಹಿಡ್ಮಾ, ಅವರ ಪತ್ನಿ ಹಾಗೂ ನಾಲ್ವರು ಮಾವೋ ಸಹಚರರು ಸಾವನ್ನಪ್ಪಿದ್ದಾರೆ. ವರ್ಷಗಳ ಕಾಲ ಹಿಡ್ಮಾರನ್ನು ಬೆನ್ನಟ್ಟಿದ್ದ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು “ಬಸ್ತರ್ ರಕ್ತಪಾತದ ಅತ್ಯಂತ ಗಂಭೀರ ಅಧ್ಯಾಯದ ಅಂತ್ಯ” ಎಂದು ಬಣ್ಣಿಸಿದ್ದಾರೆ. ಹಿಡ್ಮಾ ಸತ್ತಿರುವುದಾಗಿ ಈ ಮೊದಲು ಅನೇಕ ಬಾರಿ ಸುದ್ದಿಯಾಗಿತ್ತು. ಆದರೆ ಅಧಿಕೃತ ಪುರಾವೆಗಳಿರಲಿಲ್ಲ. ಈ ಬಾರಿ ಸ್ಥಳದ ಚಿತ್ರಗಳು, ವಶಪಡಿಸಿಕೊಂಡ ವಸ್ತುಗಳು, ಗುರುತಿನ ವಿವರಗಳು ಯಾವುದೇ ಸಂಶಯಕ್ಕೆ ಅವಕಾಶವಿಲ್ಲದಂತೆ ಹಿಡ್ಮಾರ ಸಾವನ್ನು ದೃಢಪಡಿಸಿವೆ. ಹಿರಿಯ ಅಧಿಕಾರಿಯೊಬ್ಬರು “ಬಸ್ತರ್ ಭೂತ ಕೊನೆಗೂ ನಿಶ್ಶಬ್ದವಾಯಿತು” ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ ಶೇಖ್ ಹಸೀನಾಗೆ ಮರಣದಂಡನೆ; ʼಮಾನವೀಯತೆಯ ವಿರುದ್ಧದ ಅಪರಾಧʼ- ನ್ಯಾಯಮಂಡಳಿ

ಹಿಡ್ಮಾ ಸಾವಿನಿಂದ ದಶಕಗಳ ಕಾಲ ಬಸ್ತರ್‌ ಅರಣ್ಯದಲ್ಲಿದ್ದ ಭಯದ ಅಧ್ಯಾಯಕ್ಕೆ ತೆರೆ ಬಿದ್ದಿರಬಹುದು. ಆದರೆ, ಬುಡಕಟ್ಟು ಜನರ ಹಕ್ಕುಗಳಿಗೆ ನ್ಯಾಯ ಕಲ್ಪಿಸದ ಹೊರತು ಅವರಿಗೆ ಸುರಕ್ಷಿತ ಭವಿಷ್ಯ ಕೊಡಲಾಗದು. ಹಿಡ್ಮಾ ಮರಣವು ಮಾವೋ ಚಳವಳಿಗೆ ದೊಡ್ಡ ಹೊಡೆತವಾದರೂ, ಅಭಿವೃದ್ಧಿ ಮತ್ತು ವಿಶ್ವಾಸದ ಮರುನಿರ್ಮಾಣದ ದಿನ ಬಂದಾಗ ಮಾತ್ರ ಬಸ್ತಾರ್‌ ಜನರ ನಿಜ ಗೆಲುವು ಸಾಧ್ಯ. ಬುಡಕಟ್ಟು ಪ್ರದೇಶಗಳಲ್ಲಿ ದಶಕಗಳಿಂದ ಬೇರೂರಿರುವ ಅಸಮಾಧಾನ, ಆಳುವವರ ಮೇಲಿನ ಅಪನಂಬಿಕೆ ಮತ್ತು ಅಭಿವೃದ್ಧಿಯ ಅಸಮಾನತೆಗಳಿಗೆ ಪರಿಹಾರ ಕಂಡುಹಿಡಿಯದೆ ಮಾವೋವಾದ ಸಂಪೂರ್ಣವಾಗಿ ನಿರ್ಮೂಲವಾಗುವುದಿಲ್ಲ. ಮಟ್ಟ ಹಾಕಿಬಿಟ್ಟೆವು ಎಂದು ಕ್ರೆಡಿಟ್ ತೆಗೆದುಕೊಳ್ಳುವ ಸರ್ಕಾರಗಳು ಇಲ್ಲದವರ ಪರವಾಗಿ ಕೆಲಸ ಮಾಡುವುದನ್ನು ಮರೆಯಕೂಡದು ಎನ್ನುತ್ತಾರೆ ಸಮಾಜಶಾಸ್ತ್ರಜ್ಞರು.

ಹೋರಾಟದ ಆಶಯದಷ್ಟೇ ಹೋರಾಟದ ಹಾದಿಯೂ ಮುಖ್ಯ. ಇದನ್ನು ಬಂದೂಕು ಹಿಡಿವ ಮಾವೋವಾದಿಗಳೂ ಅರಿತುಕೊಳ್ಳಬೇಕಿದೆ. ಹಿಂಸಾತ್ಮಕ ದಾರಿಯು ಎಂದಿಗೂ ಹಿಂಸಾತ್ಮಕವಾಗಿಯೇ ಮುಗಿದು ಹೋಗುತ್ತದೆ ಎಂಬ ಎಚ್ಚರಿಕೆಯೂ ಇರಬೇಕಾಗುತ್ತದೆ. ಇದೇ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮವನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಇನ್ಯಾವುದೇ ರಾಜ್ಯ ಸರ್ಕಾರ ಅನುಸರಿಸಬೇಕಾದ ತುರ್ತು ಇದೆ. ಬಂದೂಕು ಹಿಡಿದವರು ಶರಣಾಗತರಾಗಿ, ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸರ್ಕಾರವನ್ನು ಪ್ರಶ್ನಿಸುವಂತಹ ಸಾಂವಿಧಾನಿಕ ಅವಕಾಶವನ್ನೂ ಸರ್ಕಾರ ನೀಡಬೇಕಾಗುತ್ತದೆ. ಅಂತಹ ವಿಶ್ವಾಸವನ್ನೂ ಆಡಳಿತವರ್ಗ ತುಂಬಬೇಕಾಗುತ್ತದೆ. ಹಿಂಸಾತ್ಮಕ ಹೋರಾಟವು ಭಾರತದಂತಹ ನೆಲದಲ್ಲಿ ಫಸಲು ನೀಡುವುದಿಲ್ಲ ಎಂಬ ಪ್ರಜ್ಞೆಯೂ ಮಾವೋವಾದಿಗಳಿಗೆ ಮೂಡಬೇಕಿದೆ. ಬಂದೂಕು ತೊರೆದು ಮುಖ್ಯವಾಹಿನಿ ಹೋರಾಟದ ಸತ್ವವನ್ನು ಅರಿತುಕೊಳ್ಳಬೇಕಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...