ಮಣಿಪುರ | ಮೋದಿಯವರ ಡಬಲ್‌ ಎಂಜಿನ್‌ ಸರ್ಕಾರದ ವೈಫಲ್ಯಕ್ಕೆ ಅತ್ಯಾಚಾರ ಸಂತ್ರಸ್ತೆ ಸಾವು!

Date:

ಮಣಿಪುರದಲ್ಲಿ ಎರಡೂವರೆ ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಯುವತಿ, ಘಟನೆಯ ಆಘಾತ ಮತ್ತು ದೈಹಿಕ ಗಾಯಗಳಿಂದ ಚೇತರಿಸಿಕೊಳ್ಳಲಾಗದೆ ಇತ್ತೀಚೆಗೆ ನಿಧನರಾಗಿದ್ದಾರೆ. ಕುಟುಂಬವು ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಮಗಳು ಜೀವಂತವಿದ್ದಾಗ ನ್ಯಾಯ ಸಿಗದಿರುವುದಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದೆ. ಈ ದುರಂತ ಮಣಿಪುರದ ಜನಾಂಗೀಯ ಸಂಘರ್ಷಗಳ ಭೀಕರ ಪರಿಣಾಮವನ್ನು ಎತ್ತಿ ತೋರಿಸುತ್ತದೆ. ಅವಳನ್ನು ಕೊಂದದ್ದು ಕತ್ತಿ ಅಲ್ಲ, ಬುಲೆಟ್ ಅಲ್ಲ. ಅವಳನ್ನು ಕೊಂದದ್ದು ಆಳವಾದ ಮಾನಸಿಕ ಆಘಾತ, ದೈಹಿಕ ಗಾಯಗಳು ಮತ್ತು ನ್ಯಾಯ ಕೊಡಿಸದ ಮೋದಿ ಅವರ ಡಬಲ್‌ ಎಂಜಿನ್ ಸರ್ಕಾರ. ಮಣಿಪುರದಲ್ಲಿ ಅವಳನ್ನು ಅತ್ಯಾಚಾರ ಮಾಡಿದವರು ವಿಕೃತಕಾಮಿ ದುರುಳರು. ಆದರೆ ಅವಳನ್ನು ಸಾಯಲು ಬಿಟ್ಟಿದ್ದು ಬಿಜೆಪಿ ಸರ್ಕಾರ.

ಮಣಿಪುರದ ರಕ್ತಸಿಕ್ತ ಭೂಮಿಯಲ್ಲಿ, ಎರಡುವರೆ ವರ್ಷಗಳ ಹಿಂದೆ ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಭುಗಿಲೆದ್ದ ಘರ್ಷಣೆಯ ಕರಿ ನೆರಳು ಇನ್ನೂ ಹರಡಿಕೊಂಡೇ ಇದೆ. 2023ರ ಮೇ ತಿಂಗಳಲ್ಲಿ, ಇಂಫಾಲ್ ನಗರದಲ್ಲಿ ಕುಕಿ ಬುಡಕಟ್ಟಿನ ಯುವತಿ ತನ್ನ ದೈನಂದಿನ ಕೆಲಸದಲ್ಲಿ ಮುಳುಗಿದ್ದಳು. ಅವಳು ತನ್ನ ಸಂಬಂಧಿಕರ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು, ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಿದ್ದಳು, ಖುಷಿಯಿಂದ ಜೀವನವನ್ನ ನಡೆಸುತ್ತಿದ್ದಳು. ಆದರೆ ಮೇ 15ರಂದು, ಎಟಿಎಂಗೆ ಹಣ ತೆಗೆಯಲು ಹೋದ ಅವಳನ್ನು ಒಂದು ಗುಂಪು ಅಪಹರಿಸಿತು. ಸಾಮೂಹಿಕ ಅತ್ಯಾಚಾರ ಮಾಡಿ, ದೈಹಿಕ ಹಿಂಸೆಕೊಟ್ಟರು.  ಅದು ಮಾನವೀಯತೆಯನ್ನೇ ಮರೆತ ಅತೀಕ್ರೂರ ಹಿಂಸೆಯಾಗಿತ್ತು. ಆ ದಿನದಿಂದ ಅವಳು ಪ್ರತಿದಿನ ಸತ್ತು ಬದುಕುತ್ತಿದ್ದಳು. 

ಜುಲೈ 2023ರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಹಿಳೆ, ಮೈಥೇಯಿ ಸಮುದಾಯದ ಕೆಲ ಪುರುಷರಿಂದ ತಾನು ಅನುಭವಿಸಿದ ಭೀಕರ ಯಾತನೆಯನ್ನು ವಿವರಿಸಿದ್ದರು. ಘಟನೆಯಲ್ಲಿ ಅವರು ತೀವ್ರ ಗಾಯಗಳೊಂದಿಗೆ ಪಾರಾಗಿದ್ದಳು. ಗಡಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದ ನಡುವೆ, ಲೈಂಗಿಕ ದೌರ್ಜನ್ಯದ ಎರಡು ತಿಂಗಳ ನಂತರ ಜುಲೈ 21 ರಂದು ಪೊಲೀಸರು ದೂರು ದಾಖಲಿಸಿಕೊಳ್ಳುತ್ತಾರೆ.  ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್), ತನ್ನನ್ನು ಕಪ್ಪು ಶಸ್ತ್ರಧಾರಿ ನಾಲ್ವರು ಶಸ್ತ್ರಧಾರಿ ಪುರುಷರು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದರು. ಅಲ್ಲಿ ಮೂವರು ಸರದಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಮಹಿಳೆ ಆರೋಪಿಸಿದ್ದರು. ಜನಾಂಗೀಯ ಹಿಂಸಾಚಾರದ ವೇಳೆ ಶಸ್ತ್ರಾಸ್ತ್ರ ಹಿಡಿದ ಮೈಥೇಯಿ ಗುಂಪಿನ ಸದಸ್ಯರಾದ ಅರಾಂಬೈ ಟೆಂಗೋಲ್ ಕಪ್ಪು ಶರ್ಟ್ ಧರಿಸಿದ್ದರು. ಮೀರಾ ಪೈಬಿಯ ಕೆಲವು ಸದಸ್ಯರು ಆಕೆಯನ್ನು ಮೈಥೇಯಿ ಪುರುಷರಿಗೆ ಹಸ್ತಾಂತರಿಸಿದ್ದಾರೆ ಎಂದು ಕುಕಿ ಸಂಘಟನೆಗಳು ಆರೋಪಿಸಿವೆ. ನಾಲ್ವರು ಪುರುಷರು ನನ್ನನ್ನು ಬಿಳಿ ಬೊಲೆರೊದಲ್ಲಿ ಕರೆದುಕೊಂಡು ಹೋದರು. ಅವರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾಗ, ಚಾಲಕನನ್ನು ಹೊರತುಪಡಿಸಿ ಮೂವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ನಂತರ ನನ್ನನ್ನು ಬೆಟ್ಟಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದರು ಎಂದು ಸಂತ್ರಸ್ತೆ ಜುಲೈ 2023 ರಲ್ಲಿ ಹೇಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
photo 6300778970005311539 w

ಅವರು ನನ್ನ ಮೇಲೆ ಏನೇನು ಹೀನಾಯ ಕೆಲಸಗಳನ್ನು ಮಾಡಬಹುದೋ ಅದನ್ನೆಲ್ಲಾ ಮಾಡಿದರು ಮತ್ತು ರಾತ್ರಿಯಿಡೀ ನನಗೆ ತಿನ್ನಲು ಏನೂ ಕೊಡಲಿಲ್ಲ. ಅವರು ನೀರನ್ನೂ ಕೊಡಲಿಲ್ಲ. ಬೆಳಗ್ಗೆ ಹೇಗೋ, ಶೌಚಾಲಯಕ್ಕೆ ಹೋಗುವ ನೆಪದಲ್ಲಿ ನಾನು ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆದು ಸುತ್ತಲೂ ಏನು ನಡೆಯುತ್ತಿದೆ ಎಂದು ನೋಡಲು ಪ್ರಯತ್ನಿಸಿದೆ. ನಂತರ ನಾನು ಬೆಟ್ಟದ ಕೆಳಗೆ ಓಡಿ ತಪ್ಪಿಸಿಕೊಂಡೆ ಎಂದು ಅವಳು ಹೇಳಿದ್ದಳು. ತರಕಾರಿಗಳ ರಾಶಿಯ ಕೆಳಗೆ ಅಡಗಿಕೊಂಡಿದ್ದ ಆಕೆಯನ್ನು ಆಟೋರಿಕ್ಷಾ ಚಾಲಕನೊಬ್ಬ ಸುರಕ್ಷಿತವಾಗಿ ಕರೆದುಕೊಂಡು ಹೋದನು. ಆಕೆ ಕಾಂಗ್ಪೋಕ್ಪಿ ತಲುಪುವಲ್ಲಿ ಯಶಸ್ವಿಯಾದಳು. ಅಲ್ಲಿ ಆಕೆಯನ್ನು ನೆರೆಯ ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡಿದ್ದ ಯುವತಿ ಮಾನಸಿಕವಾಗಿ ಕುಗ್ಗಿ ಜನವರಿ 10ರಂದು ಇಹಲೋಕ ತ್ಯಜಿಸಿದ್ದಾಳೆ. 

ಆ ಯುವತಿಯ ತಾಯಿ, ತನ್ನ ಮಗಳನ್ನು ನೆನಪಿಸಿಕೊಳ್ಳುತ್ತಾ ಕಣ್ಣೀರು ಸುರಿಸುತ್ತಾರೆ “ನನ್ನ ಮಗಳು ತುಂಬಾ ಮುಗ್ಧ ಮನಸ್ಸಿನ ಹುಡುಗಿಯಾಗಿದ್ದಳು. ಅವಳಿಗೆ ಸ್ನೇಹಿತರಿದ್ದರು, ಜೀವನವನ್ನು ಆನಂದಿಸುತ್ತಿದ್ದಳು. ಆದರೆ ಆ ದಿನದ ನಂತರ, ಅವಳು ಎಂದೂ ಹಿಂದಿರುಗಲಿಲ್ಲ. ಆಘಾತದಿಂದ ಉಸಿರಾಟದ ತೊಂದರೆ, ನಿದ್ರೆಯ ಸಮಸ್ಯೆ, ಮಾನಸಿಕ ಅಸ್ವಸ್ಥತೆ ಎಲ್ಲವೂ ಅವಳನ್ನು ಕಾಡಿತು.” ಅವಳು ಗುವಾಹಟಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು, ಆದರೆ ಜನವರಿ 10, ರಂದು, ಆ ಚಿಕ್ಕ ಹುಡುಗಿ ಶಾಶ್ವತವಾಗಿ ನಮ್ಮಿಂದ ದೂರವಾಗಿದ್ದಾಳೆ” ಎಂದು ತಮ್ಮ ನೋವನ್ನ ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.

photo 6300778970005311542 y

ಗುವಾಹಟಿಯ ಆಸ್ಪತ್ರೆಯ ಹಾಸಿಗೆಯಲ್ಲಿ ಅವಳು ಹೋರಾಡುತ್ತಿದ್ದಾಗ, ಮಣಿಪುರದ ರಸ್ತೆಗಳಲ್ಲಿ ಇನ್ನೂ ಸಾವಿರಾರು ನಿರಾಶ್ರಿತರು ಆಶ್ರಯಕ್ಕಾಗಿ ಅಲೆಯುತ್ತಿದ್ದರು. ಘರ್ಷಣೆಯಿಂದಾಗಿ ಹಾನಿಗೊಳಗಾದವರು ಶಿಬಿರಗಳಲ್ಲಿ ಕುಳಿತು ನ್ಯಾಯಕ್ಕಾಗಿ ಕಾಯುತ್ತಿದ್ದರು. ಆದರೆ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಮಣಿಪುರದ ಆಡಳಿತ ಸೂತ್ರ ಹಿಡಿದ ಮೋದಿ ಸರ್ಕಾರಕ್ಕೆ ಇದು ಯಾವ ಸಂದೇಶವನ್ನ ನೀಡಿತು? ರಾಷ್ಟ್ರಪತಿ ಆಡಳಿತದ ಹೆಸರಿನಲ್ಲಿ  ಮಣಿಪುರವನ್ನ ಕೇಂದ್ರವೇ ನೇರವಾಗಿ ನಿಯಂತ್ರಣದಲ್ಲಿಟ್ಟುಕೊಂಡಿದ್ದರೂ , ಘರ್ಷಣೆಗಳು ನಿಲ್ಲಲಿಲ್ಲ. ಸಾವಿರಾರು ಜನರು ಇನ್ನೂ ನಿರಾಶ್ರಿತ ಶಿಬಿರಗಳಲ್ಲಿ ಬದುಕುತ್ತಿದ್ದಾರೆ, ಅನೇಕ ಪ್ರಕರಣಗಳಲ್ಲಿ ನ್ಯಾಯ ಸಿಗದೇ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ಈ ಯುವತಿಯ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದರೂ, ಎರಡು ವರ್ಷಗಳ ನಂತರವೂ ಯಾವುದೇ ಬಂಧನವಾಗಿಲ್ಲ. ತನಿಖೆ ಸ್ಥಗಿತಗೊಂಡಿದೆ, ನ್ಯಾಯಾಲಯದ ಕದಗಳು ಸಂತ್ರಸ್ತೆಯ ಪಾಲಿಗೆ ಮುಚ್ಚಿವೆ.

WhatsApp Image 2026 01 19 at 1.51.50 PM

ಪ್ರಶ್ನೆ ಇಲ್ಲಿಯೇ ಶುರುವಾಗುತ್ತದೆ,  ಅವಳು ಬದುಕಿದ್ದಾಗ ನ್ಯಾಯ ಯಾಕೆ ಸಿಗಲಿಲ್ಲ ಅಪರಾಧಿಗಳು ಎಲ್ಲಿ? ಬಂಧನ ಯಾಕಾಗಿಲ್ಲ? ಚಾರ್ಜ್‌ಶೀಟ್‌ಗಳು ಎಲ್ಲಿ? ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು ಎಲ್ಲಿ?   ಸಾಮೂಹಿಕ ಅತ್ಯಾಚಾರ ನಡೆದ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಇದ್ದರೂ ಸುರಕ್ಷತೆ ಯಾಕಿಲ್ಲ? ಮೋದಿ ಸರ್ಕಾರದ ವೈಫಲ್ಯ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ರಾಷ್ಟ್ರಪತಿ ಆಡಳಿತದ ಹೆಸರಿನಲ್ಲಿ ಅಧಿಕಾರ ಹಿಡಿದ ಸರ್ಕಾರ, ಜನರ ಜೀವ ಉಳಿಸಲು ವಿಫಲವಾದರೆ,  ಅಂತಹ ಸರ್ಕಾರಕ್ಕೆ ಯಾವ ಹೆಸರು ಕೊಡಬೇಕು? ಮಣಿಪುರದ ಘರ್ಷಣೆಗಳು 2023ರಲ್ಲಿ ಆರಂಭವಾದಾಗಿನಿಂದ, ಕೇಂದ್ರವು ಶಾಂತಿ ಸ್ಥಾಪನೆಗೆ ಹಲವು ಭರವಸೆಗಳನ್ನು ನೀಡಿತು. ಆದರೆ ವಾಸ್ತವದಲ್ಲಿ, ಜನಾಂಗೀಯ ಹಿಂಸೆ ಮುಂದುವರಿದಿದೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಿದ್ದವು. ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್‌ ಹೇಳಿದಂತೆ, “ಈ ಸಾವು ದ್ವೇಷದ ರಾಜಕೀಯ ಮತ್ತು ನ್ಯಾಯದ ವೈಫಲ್ಯಕ್ಕೆ ಸಾಕ್ಷಿ.” ಕುಕಿ ಸಂಘಟನೆಗಳು ಪ್ರತ್ಯೇಕ ಆಡಳಿತಕ್ಕಾಗಿ ಕೂಗುತ್ತಿವೆ, ಏಕೆಂದರೆ ಕೇಂದ್ರದ ನಿಯಂತ್ರಣದಲ್ಲೂ ಅವರಿಗೆ ಸುರಕ್ಷತೆ ಸಿಗುತ್ತಿಲ್ಲ.

ಕಳೆದ ಒಂದು ವರ್ಷದಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವಿದೆ. ಅರ್ಥವೇನು? ರಾಜ್ಯ ಸರ್ಕಾರ ಇಲ್ಲ, ಮುಖ್ಯಮಂತ್ರಿ ಇಲ್ಲ ಪೊಲೀಸ್ ವ್ಯವಸ್ಥೆ ಕೇಂದ್ರದ ಕೈಯಲ್ಲಿದೆ,  ಕಾನೂನು ಕೇಂದ್ರದ ಕೈಯಲ್ಲಿದೆ, ಜವಾಬ್ದಾರಿ ಸಂಪೂರ್ಣವಾಗಿ ಮೋದಿ ಸರ್ಕಾರದ ಕೈಯಲ್ಲಿದೆ,  ಮಣಿಪುರದ ಜವಾಬ್ದಾರಿ ನೇರವಾಗಿ ಕೇಂದ್ರ ಸರ್ಕಾರ ಅಂದರೆ ಪ್ರಧಾನಿ ಮೋದಿ ಅವರ ಹೊಣೆಯಾಗಿದೆ.  ಹಾಗಿದ್ದರೆ ಕೇಳಲೇಬೇಕು, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗುವನ್ನಾದರೂ ಉಳಿಸಲಾರದೆ ಹೋದರೇ? ಆಕೆಗೆ ನ್ಯಾಯ ಕೊಡಿಸಲು ವಿಫಲರಾದರೇ? ಜನವರಿ 18ರಂದು, ಚುರಾಚಂದಪುರದಲ್ಲಿ ನಡೆದ ಮೇಣದಬತ್ತಿ ಜಾಗರಣೆಯಲ್ಲಿ ಸಾವಿರಾರು ಜನರು ಸೇರಿದರು. ಅವರ ಕಣ್ಣುಗಳಲ್ಲಿ ನೋವು, ಕೋಪ, ಮತ್ತು ನ್ಯಾಯದ ಬೇಡಿಕೆ ಎದ್ದು ಕಾಣುತ್ತಿತ್ತು. ಅನೇಕರು ಇನ್ನೂ ಹೋರಾಡುತ್ತಿದ್ದಾರೆ, ಆದರೆ ಸರ್ಕಾರದ ಮೌನವು ಅವರ ನೋವನ್ನು ಹೆಚ್ಚಿಸುತ್ತಿದೆ. ಈ ದುರಂತವು ಮಣಿಪುರದ ಸಾವಿರಾರು ಜೀವಗಳ ನೋವಿನ ಪ್ರತಿಬಿಂಬವಾಗಿದೆ. ಮೋದಿ ಸರ್ಕಾರಕ್ಕೆ  ಪ್ರಶ್ನೆ,  ನೀವು ನಿಜವಾಗಿಯೂ ರಕ್ಷಣೆ ನೀಡಲು ಸಾಧ್ಯವಿಲ್ಲವೇ? ಅಥವಾ ಈ ಘರ್ಷಣೆಗಳು ನಿಮ್ಮ ರಾಜಕೀಯಕ್ಕೆ ಅನುಕೂಲಕರವನ್ನ ಮಾಡಿಕೊಡುತ್ತಿದ್ದೆ ಅಂತ ಇಲ್ಲೂ ರಾಜಕೀಯವನ್ನೇ ಅಸ್ತ್ರ ಮಾಡಿಕೊಂಡಿದ್ದೀರಾ?

ಕ್ಯಾಂಡಲ್‌ ಹಚ್ಚಿ ಶೋಕಾಚರಣೆ 2

ಈ ದೇಶದಲ್ಲಿ  ಬೇಟಿ ಬಚಾವೋ ಬಗ್ಗೆ ದೊಡ್ಡ ದೊಡ್ಡ  ಮಾತಾಡುತ್ತಾರೆ, ಮಹಿಳಾ ಸುರಕ್ಷತೆ ಬಗ್ಗೆ ಅಬ್ಬರಿಸಿ ಘೋಷಣೆಗಳನ್ನ ಕೂಗುತ್ತಾರೆ,  ಆದರೆ ಮಣಿಪುರದ ಕುಕಿ ಯುವತಿಯ ಸಾವಿನ ಬಗ್ಗೆ  ಪ್ರಧಾನಿ ತುಟಿಗಳಿಗೆ ಹೊಲಿಗೆ ಹಾಕಿದಂತೆ ಮೌನವಾಗಿದ್ದಾರೆ. ಸರ್ಕಾರ ಮೌನವಾಗಿದೆ,  ನ್ಯಾಯವೂ ಮೌನವಾಗಿದೆ. ಅವಳು ಒಬ್ಬಳಲ್ಲ. ಅವಳು ಸಾವಿರಾರು ನಿರಾಶ್ರಿತರ ಪ್ರತಿನಿಧಿಯಾಗಿದ್ದಾಳೆ. ಸರ್ಕಾರದ ವೈಫಲ್ಯದಿಂದ ಒಬ್ಬ ಮಹಿಳೆ ನಿಧಾನವಾಗಿ ಸತ್ತರೆ, ಅದಕ್ಕೆ ಯಾರು ಹೊಣೆ? ಅಪರಾಧಿಗಳೇ ಅಥವಾ ಅವರನ್ನು ರಕ್ಷಿಸದ ವ್ಯವಸ್ಥೆಯೇ?

ಸಾಮೂಹಿಕ ಅತ್ಯಾಚಾರ ಪೀಡಿತ ಯುವತಿ ನಿಧಾನವಾಗಿ ಸಾಯುತ್ತಿದ್ದಾಗ, ನ್ಯಾಯ ಸಿಗದೆ ಕಣ್ಣುಮುಚ್ಚಿದಾಗ, ಸಾವಿರಾರು ಜನ ಶಿಬಿರಗಳಲ್ಲಿ ಕೊಳೆಯುತ್ತಿದ್ದಾಗ, ಈ ಸರ್ಕಾರದ ಯಶಸ್ಸುಗಳು ಯಾವ ನೈತಿಕ ನೆಲೆಯಲ್ಲಿ ನಿಂತಿವೆ? ಅವಳು ಬದುಕುಳಿಯಬಹುದಿತ್ತು, ಆದರೆ ಸರ್ಕಾರ ಅವಳನ್ನು ಉಳಿಸಲಿಲ್ಲ. ಇದು ಕೇಲವ ಒಂದು ಮಣಿಪುರದ ಕಥೆಯಲ್ಲ. ಇದು ಮೋದಿ ಸರ್ಕಾರದ ವೈಫಲ್ಯಕ್ಕೆ ಸಿಕ್ಕ ಇನ್ನೊಂದು ದಾಖಲೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...