ಈ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ‘ಮುಖ್ಯ ಸಾಧನೆ’ ಎಂದರೆ, ಯುಪಿಎ ಸರ್ಕಾರದ ಸಮಯದಲ್ಲಿ ಜನಪರವಾಗಿ ಜಾರಿಗೊಳಿಸಿದ ಕಾಯ್ದೆಗಳು ಮತ್ತು ಯೋಜನೆಗಳ ಹೆಸರನ್ನು ಬದಲಾಯಿಸಿರುವುದು.
ಭಾರತದ ರಾಜಕೀಯ ಇತಿಹಾಸದಲ್ಲಿ ಕೆಲವು ಬದಲಾವಣೆಗಳು ಸಾಮಾನ್ಯ ಅಂತೂ ಅಲ್ಲವೇ ಅಲ್ಲ. ಅವುಗಳು ದೇಶದ ಭವಿಷ್ಯವನ್ನು ಬದಲಾಯಿಸುವಂತಹದ್ದು. 2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ (ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್) ಸರ್ಕಾರ, ಡಾ. ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ ಸೋಲು ಕಂಡಿತು. ಆಗ ಬಿಜೆಪಿ ನೇತೃತ್ವದ ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್) ಅಧಿಕಾರಕ್ಕೆ ಬಂದಿತು. ಪ್ರಧಾನಿ ಸ್ಥಾನದಲ್ಲಿ ಕುಳಿತವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ. ಅವರು ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ್ದು 2014 ರಲ್ಲಿ. ನಂತರ 2019ರಲ್ಲಿ ಎರಡನೇ ಬಾರಿ, ಮತ್ತು 2024 ರಲ್ಲಿ ಮೂರನೇ ಬಾರಿ ಪ್ರಧಾನಿಯಾಗಿ ದೇಶದ ಚುಕ್ಕಾಣಿಯನ್ನ ಹಿಡಿದಿದ್ದಾರೆ. ಇಂದು 2025 ರ ಡಿಸೆಂಬರ್‌ನಲ್ಲಿ ನಾವು ಇದ್ದೀವಿ, ಮೋದಿ ಆಡಳಿತಕ್ಕೆ ಬರೋಬ್ಬರಿ 11 ವರ್ಷಗಳು ಕಳೆದಿವೆ. ಈ 11 ವರ್ಷಗಳಲ್ಲಿ ದೇಶ ಹಲವು ಬದಲಾವಣೆಗಳನ್ನು ಎದುರಿಸಿದೆ, ಅದರಲ್ಲಿ ಮುಖ್ಯವಾದದ್ದು ಹೆಸರು ಬದಲಾವಣೆ.

ಈ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ‘ಮುಖ್ಯ ಸಾಧನೆ’ ಎಂದರೆ, ಯುಪಿಎ ಸರ್ಕಾರದ ಸಮಯದಲ್ಲಿ ಜನಪರವಾಗಿ ಜಾರಿಗೊಳಿಸಿದ ಕಾಯ್ದೆಗಳು ಮತ್ತು ಯೋಜನೆಗಳ ಹೆಸರನ್ನು ಬದಲಾಯಿಸಿರುವುದು. ಈ ಹೆಸರು ಬದಲಾಯಿಸುವುದರಲ್ಲಿ ಮೋದಿ ‘ಪಿಎಚ್‌ಡಿ’ ಯನ್ನೇ ಮಾಡಿದಂತಿದೆ. ಅಂದರೆ ಪರ್ಫೆಕ್ಟ್ ಡೀಲ್. ಯುಪಿಎ ಸರ್ಕಾರ 2004 ರಿಂದ 2014ರವರೆಗೆ ಅನೇಕ ಜನಸ್ನೇಹಿ ಯೋಜನೆಗಳನ್ನು ಜನರಿಗೆ ತಲುಪಿಸಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ, ಈ ಯೋಜನೆಗಳನ್ನು ಮುಂದುವರಿಸಿದರೂ, ಅವುಗಳ ಹೆಸರನ್ನು ಬದಲಾಯಿಸಿ ‘ಹೊಸದರಂತೆʼ ತೋರಿಸಿಕೊಂಡಿತು. ಬರೀ ಹೆಸರನ್ನ ಮಾತ್ರ ಬದಲಾಯಿಸಿದರೆ ಏನಾಯ್ತು ಅಂತ ಕೇಳೋರೂ ಇದ್ದಾರೆ. ಆದರೆ ರಾಜಕೀಯ ಪ್ರಚಾರದಲ್ಲಿ ಇದು ಒಂದು ದೊಡ್ಡ ‘ಸಾಧನೆ’ಯಂತೆ ಕಂಡುಬಂದಿತು. ಇದು ತಪ್ಪು ಅಲ್ಲ , ಇದು ದೇಶದ ರಾಜಕೀಯದಲ್ಲಿ ಒಂದು ವ್ಯಂಗ್ಯಾತ್ಮಕ ಸತ್ಯ.
ನೀವೇ ಯೋಚನೆ ಮಾಡಿ, ಯುಪಿಎ ಸರ್ಕಾರದ ಸಮಯದಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ನೀಡಿದ್ದು ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ ಆಕ್ಟ್ (ಎಂಜಿಎನ್‌ಆರ್‌ಇಜಿಎ). ಇದು 2005 ರಲ್ಲಿ ಜಾರಿಗೆ ಬಂದಿತು. ಇದರಿಂದ ಲಕ್ಷಾಂತರ ಗ್ರಾಮೀಣರಿಗೆ 100 ದಿನಗಳ ಉದ್ಯೋಗ ಸುರಕ್ಷತೆಯನ್ನ ಕೊಟ್ಟಿತ್ತು. ಆದರೆ ಮೋದಿ ಸರ್ಕಾರದಲ್ಲಿ ಇದನ್ನು ‘ವಿಕಸಿತ್ ಭಾರತ್ ಗ್ಯಾರಂಟಿ ರೂರಲ್ ಅಂಪ್ಲಾಯ್‌ಮೆಂಟ್ ಮಿಷನ್, ವಿಬಿ-ಜಿ ರಾಮ್ ಜಿ’ ಎಂದು ಮರುನಾಮಕರಣ ಮಾಡಲಾಯ್ತು. ಇದು ಕೇವಲ ಒಂದು ಉದಾಹರಣೆ. ಇಂತಹ ಹೆಸರು ಬದಲಾವಣೆಗಳು ಹಲವಾರಿದೆ.
“ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ರೋಜ್ಗಾರ್ ಯೋಜನೆ” ಅಂತ ಇರೋದನ್ನ ಈಗ “ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನೆ” ಅಂತ ಬದಲಾಯಿಸಿದ್ದಾರೆ.
“ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಫಾರ್” LPG (DBTL) ಇದ್ದಿದ್ದನ್ನ, ಈಗ “ಪ್ರತ್ಯಕ್ಷ್ ಹನ್‌ಸ್ಟಾಂಟಿಟ್ ಲ್ಯಾಬ್” (PAHAL) ಅಂತ ಬದಲಾಯಿಸಿದ್ದಾರೆ.
“ಬೇಸಿಕ್ ಸೇವಿಂಗ್ ಬ್ಯಾಂಕ್ ಡಿಪಾಸಿಟ್ ಅಕೌಂಟ್” ಅನ್ನ ಈಗ “ಜನ್ ಧನ್ ಖಾತಾ” ಅಂತ ಬದಲಾಯಿಸಿದ್ದಾರೆ.
“ನಿರ್ಮಲ್ ಭಾರತ್ ಅಭಿಯಾನ” ವನ್ನ ಈಗ “ಸ್ವಚ್ಛ ಭಾರತ ಮಿಶನ್ ” ಅಂತ ಬದಲಾಯಿಸಿದ್ದಾರೆ.
“ರಾಷ್ಟ್ರೀಯ ಶಹರಿ ಆಜೀವಿಕ್ ಮಿಶನ್ -NULM” ಅಂತ ಇದ್ದಿದ್ದನ್ನ “ದೀನದಯಾಳ್ ಅಂತ್ಯೋದಯ ಯೋಜನೆ” ಅಂತ ಬದಲಾಯಿಸಿದ್ದಾರೆ.
“ಪ್ರೈಂ ಮಿನಿಸ್ಟರ್ ರಿಸರ್ಚ್ ಫೆಲೋಶಿಪ್ ಸ್ಕೀಂ” ಅಂತ ಇರೋದನ್ನ ಈಗ “ಪ್ರೈಂ ಮಿನಿಸ್ಟರ್ ಫೆಲೋಶಿಪ್ ಸ್ಕೀಂ” ಅಂತ ಬದಲಾಯಿಸಿದ್ದಾರೆ.
“ನ್ಯಾಷನಲ್ ಆಪ್ಟಿಕ್ ಫೈಬರ್ ನೆಟ್ವರ್ಕ್” ಅಂತ ಇದ್ದಿದ್ದನ್ನ ಈಗ “ಭಾರತ್ ನೆಟ್” ಅಂತ ಬದಲಾಯಿಸಿದ್ದಾರೆ.
“ನ್ಯಾಷನಲ್ ಮ್ಯಾನ್ಯುಫ್ಯಾಕ್ಚರಿಂಗ್ ಪಾಲಿಸಿ” ಅಂತ ಇದ್ದಿದ್ದನ್ನ ಈಗ “ಮೇಕ್ ಇನ್ ಇಂಡಿಯಾ” ಅಂತ ಮಾಡಿದ್ದಾರೆ.
“ಇಂದಿರಾ ಗಾಂಧಿ ಮಾತೃತ್ವ ಸಹಯೋಗ್ ಯೋಜನಾ” ಅಂತ ಇರೋದನ್ನ ಈಗ “ಪ್ರಧಾನಮಂತ್ರಿ ಮಾತೃತ್ವ ವಂದನ್ ಯೋಜನಾ” ಅಂತ ಬದಲಾಯಿಸಿದ್ದಾರೆ.
“ಇಂದಿರಾ ಆವಾಸ್ ಯೋಜನೆ” ಈಗ “ಪ್ರಧಾನ್ ಮಂತ್ರಿ ಆವಾಸ್ ಯೋಜನೆ” ಅಂತ ಬದಲಾಯಿಸಿದ್ದಾರೆ.
“ಸ್ವಾವಲಂಬನ್ ಯೋಜನೆ” ಅಂತ ಇರೋದನ್ನ ಈಗ “ಅಟಲ್ ಪೆನ್ಷನ್ ಯೋಜನೆ” ಅಂತ ಮಾಡಿದ್ದಾರೆ.
“ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಪ್ರೋಗ್ರಾಂ” ಅಂತ ಇರೋದನ್ನ ಈಗ “ಸ್ಕಿಲ್ ಇಂಡಿಯಾ” ಅಂತ ಬದಲಾಯಿಸಿದ್ದಾರೆ.
“ಗರೀಬ್ ಪರಿವಾರೋಂ ಕೋ ಮುಫ್ತ್ ಗ್ಯಾಸ್ ಕನೆಕ್ಷನ್” ಈಗ “ಪ್ರಧಾನಮಂತ್ರಿ ಉಜ್ವಲಾ ಯೋಜನಾ” ಅಂತ ಬದಲಾಯಿಸಿದ್ದಾರೆ.
“ಸಂಶೋಧನ್ ರಾಷ್ಟ್ರೀಯ ಕೃಷಿ ವಿಮಾ ಯೋಜನೆ (MNAIS)” ಅಂತ ಇದ್ದಿದ್ದನ್ನ ಈಗ “ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ” ಅಂತ ಬದಲಾಯಿಸಿದ್ದಾರೆ.
“ರಾಜೀವ್ ಆವಾಸ್ ಯೋಜನಾ” ಅಂತ ಇದ್ದಿದ್ದನ್ನ ಈಗ “ಸರ್ದಾರ್ ಪಟೇಲ್ ನ್ಯಾಷನಲ್ ಮಿಶನ್ ಫಾರ್ ಅರ್ಬನ್ ಹೌಸಿಂಗ್” ಅಂತ ಬದಲಾಯಿಸಿದ್ದಾರೆ.
“ನ್ಯಾಷನಲ್ ಗರ್ಲ್ ಚೈಲ್ಡ್ ಡೇ ಪ್ರೋಗ್ರಾಂ” ಅಂತ ಇರೋದನ್ನ ಈಗ “ಬೇಟಿ ಬಚಾವೋ ಬೇಟಿ ಪಡಾವೋ” ಅಂತ ಮಾಡಿದ್ದಾರೆ.
ರಾಷ್ಟ್ರೀಯ ಮೃದಾ ಸ್ವಾಸ್ಥ್ಯ ಏವಂ ಉರ್ವರತಾ ಪ್ರಬಂಧನ್ ಪರಿಯೋಜನಾ” (NPMSF) ಅಂತ ಇರೋದನ್ನ ಈಗ “ಸಾಯ್ಲ್ ಹೆಲ್ತ್ ಕಾರ್ಡ್” ಅಂತ ಮಾಡಿದ್ದಾರೆ.
“ಜನೌಷಧಿ ಯೋಜನಾ” ಅಂತ ಇರೋದನ್ನ ಈಗ “ಪ್ರಧಾನ ಮಂತ್ರಿ ಜನೌಷಧಿ ಯೋಜನಾ” ಅಂತ ಬದಲಾಯಿಸಿದ್ದಾರೆ.
“ರಾಷ್ಟ್ರೀಯ ಕೃಷಿ ವಿಕಾಸ ಯೋಜನಾ ಏವಂ ಅನ್ಯ ಕಾರ್ಯಕ್ರಮ” ಈಗ “ಪರಂಪರಾಗತ್ ಕೃಷಿ ವಿಕಾಸ್ ಯೋಜನಾ” “ತ್ವರಿತ ಸಿಂಚಾಯಿ ಲಾಭ್ ಕಾರ್ಯಕ್ರಮ” (AIBP) ಈಗ “ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನಾ”
“ಆಮ್ ಆದ್ಮಿ ವಿಮಾ ಯೋಜನೆ” ಈಗ “ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ”
“ನ್ಯಾಷನಲ್ ಇ ಗವರ್ನೆನ್ಸ್ ಪ್ಲಾನ್” ಈಗ “ಡಿಜಿಟಲ್ ಇಂಡಿಯಾ”
“ನ್ಯಾಷನಲ್ ಮೆರಿಟೈಮ್ ಡೆವಲಪ್ಮೆಂಟ್ ಪ್ರೋಗ್ರಾಂ” ಈಗ “ಸಾಗರ್‌ಮಾಲಾ”
“ನ್ಯಾಷನಲ್ ರೂರಲ್ ಲೈವ್ಲಿಹುಡ್ ಪ್ರೋಗ್ರಾಮ್” ಈಗ “ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಯೋಜನಾ”
“ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ” ಈಗ “ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ”
“ಜವಾಹರಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನ್ಯೂವಲ್ ಮಿಷನ್” ಈಗ “ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸ್‌ಫರ್ಮೇಷನ್” ( AMRUT)
“ವಿರಾಸತ್ ಕ್ಷೇತ್ರೋಂ ಕಾ ವಿಕಾಸ್”(Sub-Mission under JNNURM) ಈಗ ಹೆರಿಟೇಜ್ ಸಿಟಿ ಡೆವಲಪ್‌ಮೆಂಟ್ ಮತ್ತು ಆಗ್ಮೆಂಟೇಶನ್ ಯೋಜನೆ ( HRIDAY)
“ನೀಮ್ ಕೋಟೆಡ್ ಯೂರಿಯಾ” ಈಗ “ಪಿಎಂ ಪ್ರಣಾಮ್”
“ನ್ಯೂ ಡೀಲ್ ಫಾರ್ ರೂರಲ್ ಇಂಡಿಯಾ” ಈಗ “ಗ್ರಾಮ ಉದಯ್ ಸೇ ಭಾರತ್ ಉದಯ್”
“ಭಾರತ್ ಕಾ ಸಾರ್ವಭೌಮಿಕ್ ಟೀಕಾಕರಣ್ ಕಾರ್ಮಕ್ರಮ್” (UIP) ಈಗ “ಮಿಷನ್ ಇಂದ್ರಧನುಷ್”
“ಇಂದಿರಾ ಆವಾಸ್ ಯೋಜನಾ” ಈಗ “ಪ್ರಧಾನಮಂತ್ರಿ ಗ್ರಾಮೀಣ ಆವಾಸ ಯೋಜನೆ”
“ಏಕೀಕೃತ ರಾಷ್ಟ್ರೀಯ ಬಾಲ್ ವಿಕಾಸ್ ಸೇವಾ (ICDS) ಯೋಜನಾ” ಈಗ “ರಾಷ್ಟ್ರೀಯ ಪೋಷಣ್ ಅಭಿಯಾನ್”
ಹೀಗೆ UPA ಅಧಿಕಾರಾವದಿಯಲ್ಲಿ ರೂಪಿಸಲ್ಪಟ್ಟ ಸರಿಸುಮಾರು 35 ಕ್ಕೂ ಹೆಚ್ಚು ಯೋಜನೆಗಳ ಹೆಸರನ್ನು ಬದಲಾಯಿಸಿ ತನ್ನ ಸರಕಾರದ ಸಾಧನೆಗಳು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಅಸಲಿಗೆ ಮೋದಿಯದ್ದು ಸಾಧನೆಯೂ ಇಲ್ಲ. ಎಲ್ಲ ಹಿಂದಿನ ಪ್ರಧಾನಿಗಳ ಯೋಜನೆಗಳನ್ನೇ ಹೆಸರು ಬದಲಾಯಿಸಿ ಅದಕ್ಕೊಂದಿಷ್ಟು ಟಚಪ್ ಕೊಟ್ಟು ತನ್ನದು ಎಂದು ಬಿಲ್ಡಪ್ ತಗೋತಾರೆ ಅಷ್ಟೇ. ಇದನ್ನು ಸರಳವಾಗಿ ಹೇಳೋದಾದರೆ, ಮೋದಿ ಸರ್ಕಾರ ಯುಪಿಎಯ ಯೋಜನೆಗಳನ್ನು ‘ರೀಬ್ರ್ಯಾಂಡ್’ ಮಾಡುವಲ್ಲಿ ತಜ್ಞರಾಗಿದೆ. ಇದರಿಂದ ಜನರಿಗೆ ಯೋಜನೆಗಳು ಮುಂದುವರೆದರೂ, ಕೃತಜ್ಞತೆ ಬಿಜೆಪಿಗೆ ಸಿಗುತ್ತದೆ. ಇದು ರಾಜಕೀಯ ಕಪಟತೆಯೇ? ಅಥವಾ ಸ್ಮಾರ್ಟ್ ಮಾರ್ಕೆಟಿಂಗ್? ಎಲ್ಲರೂ ಚರ್ಚಿಸುತ್ತಿದ್ದಾರೆ.
ಈ ಹೆಸರು ಬದಲಾವಣೆಗಳ ಹಿಂದಿನ ಕಾರಣಗಳು ಏನಿರಬಹುದು. ಯುಪಿಎಯ ನಾಯಕರ ಹೆಸರುಗಳು ಇಂದಿರಾ, ರಾಜೀವ್, ಜವಾಹರ್‌ಲಾಲ್, ಗಾಂಧಿ ಅಂತ ಇರಬಾರದು ಅನ್ನೋದೇ ಪ್ರಧಾನಿ ನರೇಂದ್ರ ಮೋದಿಯವರ ದುರುದ್ದೇಶ. ಬದಲಿಗೆ ಸರ್ದಾರ್ ಪಟೇಲ್, ಅಟಲ್ ಬಿಹಾರಿ ವಾಜ್‌ಪೇಯಿ ಅಥವಾ ಮೋದಿ ಅವರ ಹೆಸರನ್ನು ಇಟ್ಟುಕೊಳ್ಳೊದರಿಂದ ಬಿಜೆಪಿಯ ಜನರ ಮನಸ್ಸಿನಲ್ಲಿ ಬೇರೂರಲು ಸಹಾಯವಾಗುತ್ತದೆ ಅನ್ನೋದು ಬಿಜೆಪಿಯ ಕಪಟತನ.





