ಮೊಹಮ್ಮದ್ ದೀಪಕ್ – ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡಿದ್ದ ಹೆಸರು. ಒಬ್ಬರಿಗೆ ಸಮಸ್ಯೆ ಎದುರಾದಾಗ, ಧರ್ಮ, ಜಾತಿ, ಬಣ್ಣ ನೋಡಿ ಅಳೆಯುವವರ ನಡುವೆ, ದೀಪಕ್ ಎಂಬ ಹಿಂದು ಯುವಕ ಮೊಹಮ್ಮದ್ ದೀಪಕ್ ಆಗಿ ಜಗತ್ತಿಗೆ ಪರಿಚಿತನಾದರು. ಮನುಷ್ಯನಾಗಿ ನಿಂತು ವೃದ್ಧ ಮುಸ್ಲಿಂ ವ್ಯಕ್ತಿಗೆ ಸಹಾಯ ಮಾಡಿದರು. ನಿಜವಾದ ದೇಶಭಕ್ತನಾದರು. ಬಾಬಾ ಎಂಬ ಹೆಸರಿನಿಂದ ಆರಂಭವಾದ ಈ ಗಲಾಟೆ ಮೊಹಮ್ಮದ್ ದೀಪಕ್ ಆಗುವವರೆಗೂ ಬಂದು ನಿಂತಿತ್ತು. ಕಷ್ಟದಲ್ಲಿರುವ ವೃದ್ಧನಿಗೆ ದನಿಯಾಗಿ, ಕಿಡಿಗೇಡಿ ಬಜರಂಗದಳ ಕಾರ್ಯಕರ್ತರನ್ನು ಎದುರಿಸಿ ನಿಂತಿದ್ದಾರೆ.
ಹೌದು, ದೀಪಕ್ ಮತ್ತು ವಕೀಲ್ ಅಹ್ಮದ್ ಇಬ್ಬರು ಮೊದಲ ಬಾರಿಗೆ ಮುಖಾಮುಖಿಯಾದಾಗ ಜಗತ್ತಿಗೆ ಸಂದೇಶವನ್ನು ಸಾರಿದ್ದಾರೆ. ಅನ್ಯಾಯದ ವಿರುದ್ಧ ಹೋರಾಟ, ಎಲ್ಲರೂ ಒಂದೇ ಎಂಬ ನಿಲುವು, ಸಂವಿಧಾನದ ಆಶಯವನ್ನು ಎತ್ತಿ ಹಿಡಿದಿರುವ ಘಟನೆಯಾಗಿದೆ.
ಜನವರಿ 26ರಂದು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ 70 ವರ್ಷದ ಮುಸ್ಲಿಂ ವೃದ್ಧ ಅಂಗಡಿ ಮಾಲೀಕನಿಗೆ ಬಜರಂಗದಳ ಕಾರ್ಯಕರ್ತರ ಗುಂಪು ಕಿರುಕುಳ ನೀಡುತ್ತಿತ್ತು. ಆ ಮುಸ್ಲಿಂ ವೃದ್ಧ ತನ್ನ ಅಂಗಡಿಗೆ ಬಾಬಾ ಎಂಬ ಹೆಸರಿಟ್ಟಿದ್ದು, ಬಜರಂಗಿಗಳಿಗೆ ಸಹಿಸದಾಗಿ, ಗಲಾಟೆ ನಡೆಸಿದ್ದರು. ಬಾಬಾ ಎಂಬ ಹೆಸರನ್ನ ಕೈಬಿಡಲೇಬೇಕು ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಒಪ್ಪಿದ ವೃದ್ಧ ಮಾಲೀಕ ಅಂಗಡಿಯನ್ನ ಬೇರೆ ಕಡೆಗೆ ಸ್ಥಳಾಂತರ ಮಾಡುವುದಿದೆ ನಂತರ ಹೆಸರು ಬದಲು ಮಾಡುವುದಾಗಿ ತಿಳಿಸಿದ್ದರು. ಹಳೆಯ ಅಂಗಡಿಯಿದ್ದ ಸ್ಥಳದಿಂದ ಸುಮಾರಿ 4 ಮೀಟರ್ ದೂರದಲ್ಲಿ ಹೊಸದಾಗಿ ಅಂಗಡಿಯನ್ನ ಹಾಕಿದ್ದ ವೈದ್ಧ ಮುಸ್ಲಿಂ ಅಂಗಡಿ ಬದಲಾವಣೆ ಗಡಿಬಿಡಿಯಲ್ಲಿ ಹೆಸರು ಬದಲಾವಣೆ ಮಾಡುವುದನ್ನು ಮರೆತಿದ್ದರು.
ಈ ವೇಳೆ, ಅಂಗಡಿಯ ಬಳಿ ಬಂದ ಬಜರಂಗದಳ ಕಾರ್ಯಕರ್ತರು ಹೆಸರು ಬದಲಾವಣೆ ಮಾಡಿದಿದ್ದಕ್ಕೆ ಗಲಾಟೆ ಶುರು ಮಾಡಿದ್ದಾರೆ. ವೈದ್ಧನ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಆಪ್ತ್ಭಾಂದವನಂತೆ ಸ್ಥಳಕ್ಕೆ ಬಂದ ಜಿಮ್ ಟ್ರೈನರ್ ದೀಪಕ್ ಕುಮಾರ್ ಬಜರಂಗದಳ ಕಾರ್ಯಕರ್ತರನ್ನು ಎದುರಿಸಿ ನಿಂತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಮೂರು ಎಫ್ಐ ಆರ್ಗಳನ್ನು ದಾಖಲಿಸಿದ್ದಾರೆ. – ಕಿರುಕುಳಕ್ಕೊಳಗಾದ ಅಂಗಡಿಯವ ವಕೀಲ್ ಅಹ್ಮದ್ ಅವರ ದೂರಿನ ಮೇರೆಗೆ ಒಂದು; ಒಂದು ಕೋಟ್ದ್ವಾರದ ನಿವಾಸಿಯೊಬ್ಬರು ದೀಪಕ್ ಮತ್ತು ಅವರ ಸ್ನೇಹಿತ ವಿಜಯ್ ರಾವತ್ ವಿರುದ್ಧ ದೂರು, ಮತ್ತೊಂದು ಗಲಾಟೆ ನಡೆಸಿದ ಬಜರಂಗದಳದ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು.
“ನನ್ನ ಹೆಸರು ಮೊಹಮ್ಮದ್ ದೀಪಕ್ ಎಂದು ಹೇಳಿದ್ದು ಸರಿಯಾದ ಕೆಲಸ. ನಾನು ದೇವರಿಗೆ ಮಾತ್ರ ಹೊಣೆಗಾರನಾಗಿದ್ದೇನೆ. ತನ್ನ ಧರ್ಮಕ್ಕಾಗಿ ದಾಳಿಗೊಳಗಾದ ವ್ಯಕ್ತಿಯ ಪರವಾಗಿ ನಿಲ್ಲುವುದು ಮಾನವೀಯ ವಿಷಯ. ಈ ಪ್ರತಿಭಟನೆಗಳಿಂದ ನಾನು ವಿಚಲಿತನಾಗಿಲ್ಲ” ಎಂದು ದೀಪಕ್ ಹೇಳಿದ್ದರು.
ದೀಪಕ್ ಸ್ನೇಹಿತ, ಯುವ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ರಾವತ್ (38), “ಒಂದು ಗುಂಪು ಖಾಸಗಿ ಆಸ್ತಿಗೆ ಪ್ರವೇಶಿಸಿ ಅಂಗಡಿಯ ಹೆಸರನ್ನು ಬದಲಾಯಿಸಬೇಕೆಂದು ಹೇಗೆ ಒತ್ತಾಯಿಸಬಹುದು?” ಅವರು ಪ್ರಶ್ನಿಸಿದ್ದರು.
ಘಟನೆಯಿಂದ ಕೋಪಗೊಂಡಿದ್ದ ಬಜರಂಗದಳದ ಗುಂಪು ದೀಪಕ್ಗೆ ಸರಿಯಾದ ಪಾಠ ಕಲಿಸಬೇಕು ಎಂಬ ಉದ್ದೇಶದಿಂದ ನೆಗೆಟಿವ್ ವೇನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನ ಹರಿಬಿಟ್ಟಿದ್ದರು. ದೀಪಕ್ಗೆ ಪಾಠ ಕಲಿಸಬೇಕು ಎಂದು ರೊಚ್ಚಿಗೆದ್ದು ಜಿಮ್ ಮುಂದೆ ಜಮಾಯಿಸಿದ್ದರು. ಪೊಲೀಸರು ಸ್ಥಳದಲ್ಲಿದ್ದರೂ ಕೂಡ ಬಜರಂಗದಳದ ಗುಂಪು ದೀಪಕ್ ಅವರ ಬಗ್ಗೆ ಅವರ ಕುಟುಂಬದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕೆಟ್ಟ ನಿಂದನೆ ಮಾತುಗಳನ್ನ ಸಹಿಸದೇ ದೀಪಕ್ ಪ್ರಶ್ನಿಸಲು ಹೋದಾಗ ಪೊಲೀಸರು ಹಿಂಸಾಚಾರವನ್ನು ತಪ್ಪಿಸಲು ಪೊಲೀಸ್ ಠಾಣೆಗೆ ಕರೆದೊಯ್ದರು. ಅವರ ವಿರುದ್ಧವೇ ಎಫ್ ಐ ಆರ್ ದಾಖಲಿಸಿದರು.
ಭಾರತೀಯನಾದ ದೀಪಕ್ಗೆ ಭಾರಯದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂಬುದನ್ನ ಮನಗಂಡವರು. ಈ ತತ್ವ ಅನುಸರಿನೇಯಿಂದಲೇ ಅವರು ಇದೀಗ ನಿಜವಾದ ಹೀರೋ ಆಗಿ ನಮ್ಮೇದುರು ನಿಂತಿದ್ದಾರೆ.
ವೈದ್ಧ ಅಂಗಡಿ ಮಾಲೀಕ ವಕೀಲ್ ಅವರು ದೀಪಕ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಕ್ಕಳ ಲೈಂಗಿಕ ಅಪರಾಧಿ Epstein ಜೊತೆಗೆ ರಾಜಮನೆತನಗಳ ಸಂಬಂಧವೇನು ?
“ದೀಪಕ್ ಜಿ ನಮಗೆ ತೋರಿಸಿದ ಸಹಾಯ, ಅದು ನಿಜವಾದ ಧರ್ಮ, ನಿಜವಾದ ನಂಬಿಕೆ. ಅವರನ್ನು ನೋಡಿದಾಗ ನನಗೆ ಸಮಾಧಾನವಾಯಿತು. ಏಕೆಂದರೆ ಅಷ್ಟು ದೊಡ್ಡ ಜನಸಂದಣಿಯಲ್ಲಿ ಯಾರೂ ಮಾತನಾಡಲಿಲ್ಲ; ದೀಪಕ್ ಭಾಯ್ ಮಾತ್ರ ಮುಂದೆ ಬಂದರು. ಅವರು ನನ್ನನ್ನು ಕಾಯುತ್ತಿದ್ದರು, ಬಹುಶಃ ನನ್ನನ್ನು ತಂದೆಯೆಂದು ಪರಿಗಣಿಸಿ, ಪರಿಸ್ಥಿತಿ ಏನೇ ಇರಲಿ, ಎಂದು ಅವರು ಮುಂದೆ ಬಂದರು” ಎಂದು ಹೇಳಿದ್ದಾರೆ.

ಧರ್ಮ, ಹೆಸರು, ಗುರುತುಗಳ ನಡುವೆ ಮನುಷ್ಯತ್ವ ಮರೆತುಹೋಗುತ್ತಿರುವ ಕಾಲದಲ್ಲಿ, ದೀಪಕ್ ಎಂಬ ಯುವಕ “ಮೊದಲು ಮನುಷ್ಯ” ಎಂಬ ಸಂವಿಧಾನಾತ್ಮಕ ಮೌಲ್ಯವನ್ನು ಜೀವಂತವಾಗಿ ತೋರಿಸಿದ್ದಾರೆ. ಅನ್ಯಾಯದ ಮುಂದೆ ಮೌನವೇ ಸಾಮಾನ್ಯವಾಗಿರುವ ಸಂದರ್ಭದಲ್ಲಿ, ಒಬ್ಬ ವೃದ್ಧನಿಗೆ ದನಿಯಾಗಿ ನಿಂತ ಧೈರ್ಯವೇ ಅವರನ್ನು ನಿಜವಾದ ಹೀರೋ ಮಾಡಿದೆ.
ದೇಶಭಕ್ತಿ ಘೋಷಣೆಯಲ್ಲಿ ಅಲ್ಲ, ಕೃತ್ಯದಲ್ಲಿ ಇದೆ; ಧರ್ಮದ ರಕ್ಷಣೆಯಲ್ಲ, ಮನುಷ್ಯನ ರಕ್ಷಣೆಯಲ್ಲೇ ನಿಜವಾದ ಧರ್ಮ ಇದೆ. ದೀಪಕ್ ಮತ್ತು ವಕೀಲ್ ಅಹ್ಮದ್ ಅವರ ಭೇಟಿಯು ವಿಭಜನೆಯ ರಾಜಕಾರಣಕ್ಕೆ ಸವಾಲು ಹಾಕಿ, ಸಹಬಾಳ್ವೆ ಮತ್ತು ಸಹಾನುಭೂತಿಯ ದಾರಿಯೇ ಭಾರತಕ್ಕೆ ಸರಿಯಾದ ದಾರಿ ಎಂದು ಮತ್ತೆ ಸಾಬೀತುಪಡಿಸಿದೆ. ಅಂತಿಮವಾಗಿ, ದ್ವೇಷ ಸೋಲುತ್ತದೆ; ಮನುಷ್ಯತ್ವ ಮಾತ್ರ ಉಳಿಯುತ್ತದೆ.




