ಮೈಸೂರು ಜಿಲ್ಲೆಯಾದ್ಯಂತ 18 ಸಾವಿರಕ್ಕೂ ಅಧಿಕ BPL ಕಾರ್ಡ್ ರದ್ದು; ಅನರ್ಹತೆಗೆ ಕಾರಣಗಳೇನು?

Date:

ಮೈಸೂರು ಜಿಲ್ಲೆಯಾದ್ಯಂತ ಸುಮಾರು 18,300 BPL ಪಡಿತರ ಚೀಟಿಗಳನ್ನು ರದ್ದುಪಡಿಸಿ, APL ವರ್ಗಕ್ಕೆ ವರ್ಗಾಯಿಸಲು ಕ್ರಮ ಕೈಗೊಂಡಿದ್ದಾರೆ. ಸರ್ಕಾರದ ಸಮೀಕ್ಷೆಯ ಅನುಸಾರ ಅಂದಾಜು 69 ಸಾವಿರ ಬಿಪಿಎಲ್ ಪಡಿತರರು ನಿಗದಿತ ಆದಾಯ ಮಿತಿಗಿಂತ, ಅಂದರೆ ₹1.2 ಲಕ್ಷ ರೂಪಾಯಿಗೂ ಹೆಚ್ಚಿನ ಆದಾಯ ಹೊಂದಿರುವುದರ ಬಗ್ಗೆ ದತ್ತಾಂಶಗಳಿಂದ ತಿಳಿದುಬಂದಿರುತ್ತದೆ.

‘ಅನ್ನಭಾಗ್ಯ’ ಕರ್ನಾಟಕ ಸರ್ಕಾರದ ಪ್ರಮುಖ ಆಹಾರ ಭದ್ರತಾ ಯೋಜನೆ. 2013ರಲ್ಲಿ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಜಾರಿಗೆ ತಂದಂತಹ ಮಹತ್ವದ ಯೋಜನೆ. ಯೋಜನೆಯಡಿ ಕೇಂದ್ರ ಸರ್ಕಾರ ತಲಾ ಐದು ಕೆಜಿ ಅಕ್ಕಿ ಕೊಟ್ಟರೆ, ರಾಜ್ಯ ಸರ್ಕಾರ ತಲಾ ಐದು ಕೆಜಿ ಸೇರಿಸಿ 10ಕೆಜಿ ಅಕ್ಕಿ ನೀಡುತ್ತವೆ. ಆದರೀಗ, ಐದು ಕೆಜಿ ಅಕ್ಕಿಯ ಬದಲು ಪೌಷ್ಠಿಕಾಂಶ ಭರಿತ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಸೇರಿದ ‘ಇಂದಿರಾ ಕಿಟ್’ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ.

ಇದರ ಮೂಲ ಉದ್ದೇಶ ಹಸಿವಿನ ಜೊತೆಗೆ ಪೌಷ್ಠಿಕಾಂಶದ ಕೊರತೆಯನ್ನೂ ನೀಗಿಸುವುದೇ ಆಗಿದೆ. ಸಮಾಜವಾದಿ ಹಿನ್ನಲೆಯ ಸಿದ್ದರಾಮಯ್ಯನವರು ಬಡ ಕುಟುಂಬಗಳಿಗೆ ಆಹಾರ ಭದ್ರತೆ ನೀಡುವ ಉದ್ದೇಶದಿಂದ, ಉತ್ತಮವಾದ ಪೌಷ್ಠಿಕಾಂಶವುಳ್ಳ ಆಹಾರ ನೀಡುವ ಸಲುವಾಗಿ ಈ ಯೋಜನೆ ತಂದಿದ್ದಾರೆ. ಅನ್ನಭಾಗ್ಯದ ಯೋಜನೆಯ ಅಕ್ಕಿಯನ್ನು ದುರುಪಯೋಗ ಮಾಡಿಕೊಂಡದ್ದೂ ಸೇರಿದಂತೆ, ಜನರನ್ನ ಸೋಮಾರಿಯನ್ನಾಗಿಸುವ ಬಿಟ್ಟಿ ಭಾಗ್ಯ ಎಂತೆಲ್ಲಾ ಆರೋಪಗಳು ಕೇಳಿಬಂದವು. ವಾಸ್ತವ ಗಮನಿಸಿದಾಗ ಬಡ ವರ್ಗದ ಜನರಿಗೆ ಈ ಯೋಜನೆ ಜೀವನ ಭದ್ರತೆ ಒದಗಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದರಿಂದಾಗಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅನರ್ಹರನ್ನ ಗುರುತಿಸಿ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿ, ಎಪಿಎಲ್ ವರ್ಗಕ್ಕೆ ವರ್ಗಾಯಿಸುವುದಕ್ಕೆ ಮುಂದಾಗಿದೆ. ಆ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಾದ್ಯಂತ ಸುಮಾರು 18,900ಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿಗಳು ಅಮಾನ್ಯವಾಗಿವೆ.

ಬಿಪಿಎಲ್ ರದ್ದತಿಗೆ ಆದಾಯ ತೆರಿಗೆ ಪಾವತಿದಾರರಾಗಿರುವುದು, ಕುಟುಂಬದ ವಾರ್ಷಿಕ ಆದಾಯ ₹1.20 ರೂಪಾಯಿಗಿಂತ ಹೆಚ್ಚಿರುವುದು, ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರಾಗಿರುವುದು, ನಾಲ್ಕು ಚಕ್ರದ ವಾಹನ (ಸ್ವಂತ ಬಳಕೆಗೆ) ಹೊಂದಿರುವುದು, ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಯುಳ್ಳ ಮನೆ ಹೊಂದಿರುವುದು, 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವುದು ಹಾಗೂ 6 ರಿಂದ 12 ತಿಂಗಳವರೆಗೆ ಪಡಿತರ ಪಡೆಯದೆ ಇರುವುದನ್ನು ಅನರ್ಹತೆಗೆ ಮಾನದಂಡಗಳಾಗಿ ಪರಿಗಣಿಸಲಾಗಿದೆ.

2024ರಲ್ಲಿ ರದ್ದಾದ ಪಡಿತರ ಚೀಟಿಗಳ ದತ್ತಾಂಶ:

  • ಮೈಸೂರು: ಜನವರಿ-18, ಫೆಬ್ರವರಿ-99, ಮಾರ್ಚ್-37, ಏಪ್ರಿಲ್-2, ಮೇ-58, ಜೂನ್-24, ಜುಲೈ-15, ಆಗಸ್ಟ್-423, ಸೆಪ್ಟೆಂಬರ್-65, ಅಕ್ಟೋಬರ್-19, ನವೆಂಬರ್-2, ಡಿಸೆಂಬರ್-18, ಒಟ್ಟು-780.
  • ಹೆಗ್ಗಡದೇವನ ಕೋಟೆ: ಫೆಬ್ರವರಿ-42, ಜುಲೈ-8, ಆಗಸ್ಟ್-131, ಸೆಪ್ಟೆಂಬರ್-9, ಅಕ್ಟೋಬರ್-4, ಡಿಸೆಂಬರ್-1 ಒಟ್ಟು-195.
  • ಹುಣಸೂರು: ಜನವರಿ-2, ಫೆಬ್ರವರಿ-103, ಮಾರ್ಚ್-1, ಮೇ-11, ಜೂನ್-15, ಜುಲೈ-2, ಆಗಸ್ಟ್-149, ಸೆಪ್ಟೆಂಬರ್-45, ಅಕ್ಟೋಬರ್-4, ನವೆಂಬರ್-1, ಡಿಸೆಂಬರ್-4, ಒಟ್ಟು-337.
  • ಕೃಷ್ಣರಾಜನಗರ: ಜನವರಿ-1, ಫೆಬ್ರವರಿ-57, ಮಾರ್ಚ್-5, ಮೇ-17, ಜೂನ್-4, ಜುಲೈ-1, ಆಗಸ್ಟ್-79, ಸೆಪ್ಟೆಂಬರ್-19, ಅಕ್ಟೋಬರ್-3, ಒಟ್ಟು-186.
  • ನಂಜನಗೂಡು: ಜನವರಿ-2, ಫೆಬ್ರವರಿ-5, ಮಾರ್ಚ್-153, ಏಪ್ರಿಲ್-17, ಮೇ-72, ಜೂನ್-56, ಜುಲೈ-6, ಆಗಸ್ಟ್-197, ಸೆಪ್ಟೆಂಬರ್-67, ಅಕ್ಟೋಬರ್-7, ಡಿಸೆಂಬರ್-07, ಒಟ್ಟು-589.
  • ಪಿರಿಯಾಪಟ್ಟಣ: ಫೆಬ್ರವರಿ-66, ಮೇ-67, ಜುಲೈ-3, ಆಗಸ್ಟ್-100, ಸೆಪ್ಟೆಂಬರ್-54, ಅಕ್ಟೋಬರ್-12, ಡಿಸೆಂಬರ್-2, ಒಟ್ಟು-304.
  • ಟಿ ನರಸೀಪುರ: ಫೆಬ್ರವರಿ-2, ಮಾರ್ಚ್-2, ಮೇ-4, ಜೂನ್-5, ಜುಲೈ-2, ಆಗಸ್ಟ್-135, ಸೆಪ್ಟೆಂಬರ್-21, ಅಕ್ಟೋಬರ್-08, ಡಿಸೆಂಬರ್-11, ಒಟ್ಟು-190.
  • ಸರಗೂರು: ಫೆಬ್ರವರಿ-13, ಜೂನ್-8, ಜುಲೈ-2, ಆಗಸ್ಟ್-67, ಸೆಪ್ಟೆಂಬರ್-19, ಡಿಸೆಂಬರ್-2, ಒಟ್ಟು-111.
  • ಸಾಲಿಗ್ರಾಮ: ಜನವರಿ-8, ಫೆಬ್ರವರಿ-54, ಏಪ್ರಿಲ್-3, ಮೇ-13, ಜೂನ್-12, ಜುಲೈ-3, ಆಗಸ್ಟ್-50, ಸೆಪ್ಟೆಂಬರ್-23, ಅಕ್ಟೋಬರ್-1, ಡಿಸೆಂಬರ್-3, ಒಟ್ಟು-170.
image 2026 01 21T183945.495 1

2025ರಲ್ಲಿ ರದ್ದಾದ ಪಡಿತರ ಚೀಟಿ ದತ್ತಾಂಶ:

  • ಮೈಸೂರು: ಜನವರಿ-95, ಫೆಬ್ರವರಿ-195, ಮಾರ್ಚ್-184, ಏಪ್ರಿಲ್-95, ಮೇ-145, ಜೂನ್-195, ಜುಲೈ-54, ಆಗಸ್ಟ್-225, ಸೆಪ್ಟೆಂಬರ್-600, ಅಕ್ಟೋಬರ್-326, ನವೆಂಬರ್-16, ಡಿಸೆಂಬರ್-24, ಒಟ್ಟು-2154.
  • ಹೆಗ್ಗಡದೇವನಕೋಟೆ: ಜನವರಿ-102, ಫೆಬ್ರವರಿ-36, ಮಾರ್ಚ್-1, ಏಪ್ರಿಲ್-5, ಮೇ-66, ಜೂನ್-88, ಜುಲೈ-2, ಆಗಸ್ಟ್-7, ಸೆಪ್ಟೆಂಬರ್-434, ಅಕ್ಟೋಬರ್-10, ನವೆಂಬರ್-12, ಡಿಸೆಂಬರ್-10, ಒಟ್ಟು-773.
  • ಹುಣಸೂರು: ಜನವರಿ-33, ಫೆಬ್ರವರಿ-5, ಮಾರ್ಚ್-18, ಏಪ್ರಿಲ್-104, ಮೇ-66, ಜೂನ್-149, ಜುಲೈ-7, ಆಗಸ್ಟ್-65, ಸೆಪ್ಟೆಂಬರ್-446, ಅಕ್ಟೋಬರ್-224, ನವೆಂಬರ್-43, ಡಿಸೆಂಬರ್-24, ಒಟ್ಟು-1184.
  • ಕೃಷ್ಣರಾಜನಗರ: ಜನವರಿ-71, ಫೆಬ್ರವರಿ-3, ಮಾರ್ಚ್-9, ಏಪ್ರಿಲ್-1, ಮೇ-51, ಜೂನ್-28, ಜುಲೈ-1, ಆಗಸ್ಟ್-5, ಸೆಪ್ಟೆಂಬರ್-43, ಅಕ್ಟೋಬರ್-2, ನವೆಂಬರ್-2, ಡಿಸೆಂಬರ್-2, ಒಟ್ಟು-218.
  • ನಂಜನಗೂಡು: ಜನವರಿ-133, ಫೆಬ್ರವರಿ-98, ಮಾರ್ಚ್-40, ಏಪ್ರಿಲ್-25, ಮೇ-184, ಜೂನ್-333, ಜುಲೈ-56, ಆಗಸ್ಟ್-85, ಸೆಪ್ಟೆಂಬರ್-211,ಅಕ್ಟೋಬರ್-139, ನವೆಂಬರ್-32, ಡಿಸೆಂಬರ್-33, ಒಟ್ಟು-1369.
  • ಪಿರಿಯಾಪಟ್ಟಣ: ಜನವರಿ-118, ಫೆಬ್ರವರಿ-28, ಮಾರ್ಚ್-24, ಏಪ್ರಿಲ್-21, ಮೇ-113, ಜೂನ್-109, ಜುಲೈ-30, ಆಗಸ್ಟ್-48, ಸೆಪ್ಟೆಂಬರ್-687, ಅಕ್ಟೋಬರ್-15, ನವೆಂಬರ್-10, ಡಿಸೆಂಬರ್-3, ಒಟ್ಟು-1206.
  • ಟಿ ನರಸೀಪುರ: ಜನವರಿ-43, ಫೆಬ್ರವರಿ-29, ಮಾರ್ಚ್-168, ಏಪ್ರಿಲ್-11, ಮೇ-155, ಜೂನ್-65, ಜುಲೈ-41, ಆಗಸ್ಟ್-49, ಸೆಪ್ಟೆಂಬರ್-651, ಅಕ್ಟೋಬರ್-87, ನವೆಂಬರ್-12, ಡಿಸೆಂಬರ್-7, ಒಟ್ಟು-1318.
  • ಸರಗೂರು: ಜನವರಿ-19, ಫೆಬ್ರವರಿ-4, ಮಾರ್ಚ್-43, ಏಪ್ರಿಲ್-2, ಮೇ-52, ಜೂನ್-78, ಆಗಸ್ಟ್-1, ಸೆಪ್ಟೆಂಬರ್-168, ಅಕ್ಟೋಬರ್-23, ನವೆಂಬರ್-1, ಡಿಸೆಂಬರ್-2, ಒಟ್ಟು-374.
  • ಸಾಲಿಗ್ರಾಮ: ಜನವರಿ-53, ಫೆಬ್ರವರಿ-12, ಮಾರ್ಚ್-13, ಏಪ್ರಿಲ್-3, ಮೇ-40, ಜೂನ್-63, ಜುಲೈ-7, ಆಗಸ್ಟ್-10, ಸೆಪ್ಟೆಂಬರ್-31, ಅಕ್ಟೋಬರ್-2, ನವೆಂಬರ್-4, ಡಿಸೆಂಬರ್-3, ಒಟ್ಟು-241.

2026ನೇ ಸಾಲಿನ ಜನವರಿ 15ರವರೆಗೆ ರದ್ದಾದ ಪಡಿತರ ಚೀಟಿ ದತ್ತಾಂಶ:

ಮೈಸೂರು-20, ಹುಣಸೂರು-04, ಕೃಷ್ಣರಾಜನಗರ-05, ನಂಜನಗೂಡು-11, ಪಿರಿಯಾಪಟ್ಟಣ-03, ಟಿ ನರಸೀಪುರ-09, ಸರಗೂರು-01, ಸಾಲಿಗ್ರಾಮ-17, ಒಟ್ಟು-73..

ಈ ಸುದ್ದಿ ಓದಿದ್ದೀರಾ? ಮೈಸೂರು-ಕುಶಾಲನಗರ ರೈಲು ಯೋಜನೆ ರದ್ದು; ಬಹುದಿನದ ಕನಸು ಭಗ್ನ

ಕಳೆದ 2025ನೇ ಸಾಲಿನಲ್ಲೊಂದರಲ್ಲೇ ಬರೋಬ್ಬರಿ 8837 ಪಡಿತರ ಚೀಟಿಗಳು ಅನರ್ಹಗೊಂಡಿವೆ. ಇದರ ಜೊತೆಗೆ ಅಂತ್ಯೋದಯ ಅನ್ನ ಯೋಜನೆ(ಎಎವೈ)ಯ 1147 ಪಡಿತರ ಚೀಟಿಗಳು ಸೇರಿವೆ. ಮೈಸೂರು ನಗರ ಹಾಗೂ ಗ್ರಾಮಾಂತರ ತಾಲ್ಲೂಕು ಅನರ್ಹಗೊಂಡ ಪಡಿತರ ಚೀಟಿಗಳಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕೃಷ್ಣರಾಜನಗರ ಅತಿ ಕಡಿಮೆ ಹೊಂದಿದೆ.

ಒಂದು ವೇಳೆ ಅರ್ಹತೆ ಹೊಂದಿದ್ದು, ಕಣ್ತಪ್ಪಿನಿಂದ ಪಡಿತರ ರದ್ದಾಗಿದ್ದರೆ ಸೂಕ್ತ ದಾಖಲೆಗಳೊಂದಿಗೆ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಬಹುದು. ಆಹಾರ ಇಲಾಖೆ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಾಮರ್ಶಿಸಿ, ಬಿಪಿಎಲ್ ಚೀಟಿ ಮರು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.

ಈ ವಿಶೇಷ ಸುದ್ದಿ ಓದಿದ್ದೀರಾ?‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ಪ್ರಸ್ತಾವಿತ ಯೋಜನೆಯ ಸಾಧಕ-ಬಾಧಕಗಳೇನು?

ಅನ್ನಭಾಗ್ಯ ಯೋಜನೆ ಬಡವರ ಆಹಾರ ಭದ್ರತೆಗೆ ಬೆನ್ನೆಲುಬಾಗಿರುವ ಮಹತ್ವದ ಯೋಜನೆಯಾಗಿದ್ದು, ಅದರ ಲಾಭ ನಿಜವಾದ ಅರ್ಹರಿಗೆ ಮಾತ್ರ ತಲುಪಬೇಕು ಎಂಬುದು ಸರ್ಕಾರದ ಉದ್ದೇಶ. ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವ ಕ್ರಮವು ಸಂಪನ್ಮೂಲಗಳ ಸದುಪಯೋಗದ ದೃಷ್ಟಿಯಿಂದ ಅನಿವಾರ್ಯವಾಗಿದೆ. ಇದರಿಂದಾಗಿ ನಿಜವಾದ ಬಡ ಕುಟುಂಬಗಳಿಗೆ ಹೆಚ್ಚಿನ ನ್ಯಾಯ ಸಿಗುವ ಸಾಧ್ಯತೆ ಇದೆ. ಆದರೆ ಅರ್ಹರು ಕಣ್ತಪ್ಪಿನಿಂದ ವಂಚಿತರಾಗದಂತೆ ಸೂಕ್ತ ಪರಿಶೀಲನೆ ಮತ್ತು ಪಾರದರ್ಶಕ ಪ್ರಕ್ರಿಯೆಯೂ ಅತ್ಯಗತ್ಯ.

ಆಹಾರ ಭದ್ರತೆ ಕೇವಲ ಅಕ್ಕಿಗೆ ಸೀಮಿತವಾಗದೆ ಪೌಷ್ಠಿಕಾಂಶದತ್ತ ವಿಸ್ತರಿಸುತ್ತಿರುವುದು ಸ್ವಾಗತಾರ್ಹ ಹೆಜ್ಜೆ.
ಇಂದಿರಾ ಕಿಟ್‌ ಮೂಲಕ ಹಸಿವಿನ ಜೊತೆಗೆ ಪೌಷ್ಠಿಕ ಕೊರತೆಯನ್ನೂ ನೀಗಿಸುವ ಉದ್ದೇಶ ಸಮಾಜಮುಖಿಯಾಗಿದೆ.
ಯೋಜನೆಗಳ ಮೇಲೆ ರಾಜಕೀಯ ಆರೋಪಗಳಿಗಿಂತ ವಾಸ್ತವ ಪರಿಣಾಮಗಳೇ ಮುಖ್ಯವಾಗಬೇಕು.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...