ರಾಷ್ಟ್ರೀಯ ಶ್ರೇಯಾಂಕ ಪಟ್ಟಿ 2025- ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾನಮಾನ

Date:

ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ರ‍್ಯಾಂಕಿಂಗ್ ಅನ್ನು ಕಾಪಾಡಿಕೊಂಡಿವೆ ಇಲ್ಲವೇ ಬಲಪಡಿಸಿಕೊಂಡಿವೆ. ಕರ್ನಾಟಕವು ಕೆಲವು ರಾಜ್ಯಗಳಿಗೆ ಹೋಲಿಸಿದರೆ ಕ್ರಮಿಸಬೇಕಾದ ಹಾದಿ ಇನ್ನೂ ಸಾಕಷ್ಟಿದೆ. ದೆಹಲಿ, ಕೇರಳ, ಹಿಮಾಚಲ ಪ್ರದೇಶ, ತಮಿಳುನಾಡು, ಉತ್ತರಾಖಂಡದಂತಹ ರಾಜ್ಯಗಳ ಸಾಧನೆಯು ನಮ್ಮ ರಾಜ್ಯಕ್ಕಿಂತ ಉತ್ತಮವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

‘ಒಂದು ತಲೆಮಾರಿಗೆ ಶಾಲಾ ಕೊಠಡಿಯಲ್ಲಿ ಕಲಿಸಿದ ದೃಷ್ಟಿಕೋನವು ಮುಂದಿನ ತಲೆಮಾರಿನ ಸರ್ಕಾರದ ದೃಷ್ಟಿಕೋನವಾಗುತ್ತದೆ’ ಎಂಬ ಅರ್ಥಪೂರ್ಣ ಮಾತುಗಳನ್ನಾಡಿದ್ದಾರೆ ಅಬ್ರಹಾಂ ಲಿಂಕನ್‍ರವರು. ಈ ಮಾತು ಶಿಕ್ಷಣ ಸಂಸ್ಥೆಯ ಶಿಕ್ಷಣದ ಗುಣಮಟ್ಟ ಹಾಗೂ ನೀತಿಯನ್ನು ಧ್ವನಿಸುತ್ತದೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಕೊಡಿಸಬೇಕೆಂದು ಹಂಬಲಿಸುತ್ತಾರೆ.

ಇಂಡಿಯಾ ಟುಡೆ, ಔಟ್‍ಲುಕ್, ದಿ ವೀಕ್ ಮುಂತಾದ ಪತ್ರಿಕೆಗಳು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕ್‌ ನೀಡುತ್ತಿವೆ. ಅಂತಹ ರ‍್ಯಾಂಕಿಂಗ್‌ಗಳು ವಿದ್ಯಾರ್ಥಿಗಳಿಗೆ ತಾವು ಪ್ರವೇಶ ಪಡೆಯಬಹುದಾದ ವಿದ್ಯಾಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಕೊಂಚಮಟ್ಟಿಗೆ ಸಹಕಾರಿಯಾಗಿವೆ. ಸರ್ಕಾರದ ವಿವಿಧ ಪರಿಷತ್ತು ಅಥವಾ ಆಯೋಗಗಳು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದ ರ‍್ಯಾಂಕಿಂಗ್‌ಬದಲು ನಿರ್ದಿಷ್ಟ ಮಾನದಂಡಗಳ ಮೂಲಕ ಏಕರೂಪದ ರ‍್ಯಾಂಕಿಂಗ್‌ ನೀಡುವ ವ್ಯವಸ್ಥೆಯು 2016ರಲ್ಲಿ ಜಾರಿಗೆ ಬಂದಿತು. ಅದನ್ನು ರಾಷ್ಟ್ರೀಯ ವಿದ್ಯಾಸಂಸ್ಥೆಗಳ ಶ್ರೇಯಾಂಕ ಚೌಕಟ್ಟು (National Institutional Ranking Framework : NIRF) ಎಂಬ ಹೆಸರಿನಿಂದ ಕರೆಯಲಾಗಿದೆ. ಇದೀಗ ಸೆಪ್ಟೆಂಬರ್ 4, 2025ರಂದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿದ 17 ವಿವಿಧ ಶೈಕ್ಷಣಿಕ ಶಿಸ್ತುಗಳ ರ‍್ಯಾಂಕಿಂಗ್‌ನಲ್ಲಿ ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸ್ಥಾನಮಾನಗಳೇನು ಎಂಬುದರತ್ತ ಒಂದು ನೋಟ ಈ ಲೇಖನ.

crawford hall mysore university

ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ರ‍್ಯಾಂಕಿಂಗ್‌ ಅನ್ನು ಕಾಪಾಡಿಕೊಂಡಿವೆ ಇಲ್ಲವೇ ಬಲಪಡಿಸಿಕೊಂಡಿವೆ. ಕರ್ನಾಟಕವು ಕೆಲವು ರಾಜ್ಯಗಳಿಗೆ ಹೋಲಿಸಿದರೆ ಕ್ರಮಿಸಬೇಕಾದ ಹಾದಿಯು ಇನ್ನೂ ಸಾಕಷ್ಟಿದೆ. ದೆಹಲಿ, ಕೇರಳ, ಹಿಮಾಚಲ ಪ್ರದೇಶ, ತಮಿಳುನಾಡು, ಉತ್ತರಾಖಂಡದಂತಹ ರಾಜ್ಯಗಳ ಸಾಧನೆಯು ನಮ್ಮ ರಾಜ್ಯಕ್ಕಿಂತ ಉತ್ತಮವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ರ‍್ಯಾಂಕ್‌ ನೀಡಿಕೆಯ ಮಾನದಂಡಗಳು

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕ ಅಥವಾ ರ‍್ಯಾಂಕಿಂಗ್‌ನೀಡಲು ನಿರ್ದಿಷ್ಟ ಮಾನದಂಡಗಳಿವೆ. ಅವೆಂದರೆ: 1) ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು, 2) ಸಂಶೋಧನಾ ಉತ್ಪನ್ನ, ಪ್ರಭಾವ ಹಾಗೂ ಬೌದ್ಧಿಕ ಸನ್ನದು ಹಕ್ಕುಗಳು 3) ಪದವಿ ಫಲಿತಾಂಶ 4) ವಿಸ್ತರಣೆ ಮತ್ತು ಒಳಗೊಳ್ಳುವಿಕೆ ಮತ್ತು 5) ಸಮಾನ ಗ್ರಹಿಕೆ.

ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ನಾಲ್ವಡಿ ಮತ್ತು ನೆಹರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯಾನಂತರ ಸ್ಥಾಪಿಸಿದ ಹಲವಾರು ವಿಶ್ವವಿದ್ಯಾಲಯಗಳು 2025ರ ಶ್ರೇಯಾಂಕ ಪಟ್ಟಿಯಲ್ಲಿವೆ. ಮೈಸೂರು ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಅನುಗ್ರಹದಲ್ಲಿ ಸ್ಥಾಪನೆಯಾದ ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ಸಂಸ್ಥೆ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯ ಅಗ್ರ ಶ್ರೇಯಾಂಕದಲ್ಲಿವೆ.

ಭಾರತದ ಪ್ರಥಮ ಪ್ರಧಾನಿಯವರಾದ ಪಂಡಿತ್ ಜವಾಹರಲಾಲ್ ನೆಹರೂರವರ ಅವಧಿಯಲ್ಲಿ ದೇಶವನ್ನು ಬಲಿಷ್ಟವಾಗಿ ಕಟ್ಟಲು ಸ್ಥಾಪಿಸಲಾದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸಂಸ್ಥೆಗಳು ಇಂದಿಗೂ ಸಾಧನೆಯ ಅಗ್ರ ಶ್ರೇಣಿಯಲ್ಲಿವೆ.

ರಾಷ್ಟ್ರೀಯ ವಿದ್ಯಾಸಂಸ್ಥೆಗಳ ಶ್ರೇಯಾಂಕ ಚೌಕಟ್ಟು – 2025ರ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಖಾಸಗಿ ಅಥವಾ ಕೇಂದ್ರದ ಆಡಳಿತಕ್ಕೆ ಒಳಪಟ್ಟ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಸಾರ್ವಜನಿಕರ ಗಮನಕ್ಕಾಗಿ ಆಯ್ದು ಇಲ್ಲಿ ನೀಡಲಾಗಿದೆ.

ಓದುವ ಕ್ರಮ: ಸಂಸ್ಥೆಯ ಹೆಸರು(ಸ್ಥಾಪನೆಯ ವರ್ಷ): 2025ರ ಶ್ರೇಯಾಂಕ.

  1. ದೇಶದ ಅತ್ಯುತ್ತಮ 100 ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು

ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (1909)- 2, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಣಿಪಾಲ್ (1953)- 14, ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್, ಮೈಸೂರು (2008)- 38, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್ (1960): 54, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ಸಂಸ್ಥೆ, ಬೆಂಗಳೂರು (1925)- 60 ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು (2008) -96.

  1. ದೇಶದ ಅತ್ಯುತ್ತಮ 100 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು

ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (1909)- 1, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಣಿಪಾಲ್ (1953) – 3, ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರೀಸರ್ಚ್, ಮೈಸೂರು (2008) – 21, ಜೈನ್ ವಿಶ್ವವಿದ್ಯಾಲಯ, ಬೆಂಗಳೂರು (1990) – 62, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು (2008) – 63, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು (1964) -65, ಮೈಸೂರು ವಿಶ್ವವಿದ್ಯಾಲಯ, ಮೈಸೂರು (1916) – 71, ನಿಟ್ಟೆ ವಿಶ್ವವಿದ್ಯಾಲಯ, ಮಂಗಳೂರು (2008) – 80 ಮತ್ತು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು (1965) – 95.

  1. ರಾಷ್ಟ್ರಮಟ್ಟದ ಅತ್ಯುನ್ನತ 100 ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ನಮ್ಮ ರಾಜ್ಯದ ಕಾಲೇಜುಗಳು

ಕ್ರಿಸ್ಟು ಜಯಂತಿ ಕಾಲೇಜ್, ಬೆಂಗಳೂರು (1999)- 34, ಎಂ. ಎಸ್. ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್‌, ಸೈನ್ಸ್ ಅಂಡ್ ಕಾಮರ್ಸ್, ಬೆಂಗಳೂರು (1994) – 67, ಸೆಂಟ್ ಅಲೋಶಿಯಸ್ ಕಾಲೇಜ್, ಮಂಗಳೂರು (1880) – 73 ಮತ್ತು ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ (1882) – 98.

  1. ದೇಶದ ಸಂಶೋಧನಾ ಸಂಸ್ಥೆಗಳ 50ರ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದ ನಮ್ಮ ರಾಜ್ಯದಲ್ಲಿರುವ ಸಂಸ್ಥೆಗಳು

ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (1909)-1, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಡುಕೇಷನ್, ಮಣಿಪಾಲ್ (1953)-19 ಮತ್ತು ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್, ಬೆಂಗಳೂರು (1989)- 44.

  1. ಅತ್ಯುತ್ತಮ 100 ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ನಮ್ಮ ರಾಜ್ಯದಲ್ಲಿರುವ ಸಂಸ್ಥೆಗಳು

ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್ (1960)- 17, ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ್ (1957) -59, ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇನ್‍ಫರ್ಮೇಷನ್ ಟೆಕ್ನಾಲಜಿ, ಬೆಂಗಳೂರು (1998)- 69, ಎಂ. ಎಸ್. ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು (1962)- 75, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು (2008)- 76, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಧಾರವಾಡ (2016)- 77 ಮತ್ತು ಜೈನ್ ವಿಶ್ವವಿದ್ಯಾಲಯ, ಬೆಂಗಳೂರು (1990)- 84.

  1. ಅತ್ಯುತ್ತಮ 100 ಮ್ಯಾನೇಜ್‍ಮೆಂಟ್ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳು

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ಬೆಂಗಳೂರು (1973)- 2, ಟಿ. ಎ. ಪೈ ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್, ಮಣಿಪಾಲ್ (1980)- 39, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು (2008)- 57, ಅಲಯನ್ಸ್ ವಿಶ್ವವಿದ್ಯಾಲಯ, ಬೆಂಗಳೂರು (2010)- 71 ಮತ್ತು ಜೈನ್ ವಿಶ್ವವಿದ್ಯಾಲಯ, ಬೆಂಗಳೂರು (1990)- 73.

  1. ಅತ್ಯುತ್ತಮ 100 ಫಾರ್ಮಸಿ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಂಸ್ಥೆಗಳು

ಜೆ. ಎಸ್. ಎಸ್. ಕಾಲೇಜ್ ಆಫ್ ಫಾರ್ಮಸಿ, ಮೈಸೂರು (1973): 7, ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಾಸೂಟಿಕಲ್ ಸೈನ್ಸಸ್, ಮಣಿಪಾಲ್ (1963)- 8, ಕೆ. ಎಲ್. ಇ. ಕಾಲೇಜ್ ಆಫ್ ಫಾರ್ಮಸಿ, ಬೆಳಗಾವಿ (1968)- 50, ಎನ್. ಜಿ. ಎಸ್. ಎಂ. ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಾಸೂಟಿಕಲ್ ಸೈನ್ಸಸ್, ಮಂಗಳೂರು (1983)- 51, ಎಂ. ಎಸ್. ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಬೆಂಗಳೂರು (2013)- 56, ಶ್ರೀ ಆದಿಚುಂಚನಗಿರಿ ಕಾಲೇಜ್ ಆಫ್ ಫಾರ್ಮಸಿ, ಬಿ.ಜಿ. ನಗರ (1981)- 80, ಆಚಾರ್ಯ ಅಂಡ್ ಬಿ. ಎಂ. ರೆಡ್ಡಿ ಕಾಲೇಜ್ ಆಫ್ ಫಾರ್ಮಸಿ, ಬೆಂಗಳೂರು (1992)- 82 ಮತ್ತು ಕೃಪಾನಿಧಿ ಕಾಲೇಜ್ ಆಫ್ ಫಾರ್ಮಸಿ, ಬೆಂಗಳೂರು (1985)-91.

  1. ಅತ್ಯುತ್ತಮ 50 ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಂಸ್ಥೆಗಳು

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ಸಂಸ್ಥೆ, ಬೆಂಗಳೂರು (1925)- 7, ಕಸ್ತೂರಬಾ ಮೆಡಿಕಲ್ ಕಾಲೇಜ್, ಮಣಿಪಾಲ್ (1953)- 10, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜ್, ಬೆಂಗಳೂರು (1963)- 30, ಕಸ್ತೂರಬಾ ಮೆಡಿಕಲ್ ಕಾಲೇಜ್, ಮಂಗಳೂರು (1953)- 35, ಜೆ. ಎಸ್. ಎಸ್. ಮೆಡಿಕಲ್ ಕಾಲೇಜ್, ಮೈಸೂರು (1984)- 37, ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜ್, ಬೆಳಗಾವಿ (1963)- 46 ಮತ್ತು ಎಂ. ಎಸ್. ರಾಮಯ್ಯ ಮೆಡಿಕಲ್ ಕಾಲೇಜ್, ಬೆಂಗಳೂರು (1979)- 50.

  1. ಅತ್ಯುತ್ತಮ 40 ದಂತವೈದ್ಯಕೀಯ ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಂಸ್ಥೆಗಳು

ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಣಿಪಾಲ್ (1965)- 5, ಎ. ಬಿ. ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು (1985)- 6, ಜೆ. ಎಸ್. ಎಸ್. ಡೆಂಟಲ್ ಕಾಲೇಜ್, ಮೈಸೂರು (1986)- 10, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು (1987)-11, ಎಂ. ಎಸ್. ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಬೆಂಗಳೂರು (2013)-22, ಎಸ್. ಡಿ. ಎಂ. ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಅಂಡ್ ಹಾಸ್ಪಿಟಲ್, ಧಾರವಾಡ (1986)- 25, ಕೆ. ಎಲ್. ಇ. ವಿಶ್ವನಾಥ ಕತ್ತಿ ಇನ್‍ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಬೆಳಗಾವಿ (1985)- 29, ಯೆನಪೊಯ ಡೆಂಟಲ್ ಕಾಲೇಜ್, ಮಂಗಳೂರು (1992)- 31, ಸರ್ಕಾರಿ ದಂತವೈದ್ಯ ಕಾಲೇಜು, ಬೆಂಗಳೂರು (1958)-34 ಮತ್ತು ಕೆ. ಎಲ್. ಇ. ವಿಶ್ವನಾಥ ಕತ್ತಿ ಇನ್‍ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಬೆಂಗಳೂರು (1992)- 40.

  1. ಅತ್ಯುತ್ತಮ 40 ಕಾನೂನು ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಂಸ್ಥೆಗಳು

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು (1986)-1, ಅಲಯನ್ಸ್ ವಿಶ್ವವಿದ್ಯಾಲಯ, ಬೆಂಗಳೂರು (2010)- 20 ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು (2008) -24.

  1. ಅತ್ಯುತ್ತಮ 40 ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಂಸ್ಥೆಗಳು

ಬಿ. ಎಂ. ಎಸ್. ಕಾಲೇಜ್ ಆಫ್ ಆರ್ಕಿಟೆಕ್ಚರ್, ಬೆಂಗಳೂರು (2016)- 20, ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್, ಉಡುಪಿ (1978)-27, ಎಂ. ಎಸ್. ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು (1962)- 31, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು (2008)- 34 ಮತ್ತು ಬಿ. ಎಂ. ಎಸ್. ಸ್ಕೂಲ್ ಆಫ್ ಆರ್ಕಿಟೆಕ್ಚರ್, ಯಲಹಂಕ, ಬೆಂಗಳೂರು (2010)- 37

  1. ಅತ್ಯುತ್ತಮ 40 ಕೃಷಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಂಸ್ಥೆಗಳು

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು (1965)- 11 ಮತ್ತು ಕೃಷಿ ವಿಶ್ವವಿದ್ಯಾಲಯ, ಧಾರವಾಡ (1986)-35.

  1. ಅತ್ಯುತ್ತಮ 10 ನಾವೀನ್ಯತೆಯ ಸಂಸ್ಥೆಗಳ ಸ್ಥಾನ ಪಡೆದ ವಿದ್ಯಾಸಂಸ್ಥೆ

ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (1909)- 3

  1. ಅತ್ಯುತ್ತಮ 3 ಮುಕ್ತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಮುಕ್ತ ವಿಶ್ವವಿದ್ಯಾಲಯ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು (1996)- 2

  1. ಕೌಶಲ್ಯಾಭಿವೃದ್ಧಿಯ ಪ್ರಥಮ ಮೂರು ಸಂಸ್ಥೆಗಳ ಪಟ್ಟಿಯಲ್ಲಿ ಯಾವುದೇ ಸ್ಥಾನಮಾನ ಇಲ್ಲ.
  2. ರಾಜ್ಯ ಸರ್ಕಾರಗಳು ನಡೆಸುತ್ತಿರುವ ವಿಶ್ವವಿದ್ಯಾಲಯಗಳ ಅತ್ಯುತ್ತಮ 50ರ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕ ಸರ್ಕಾರದ ವಿಶ್ವವಿದ್ಯಾಲಯಗಳು

ಮೈಸೂರು ವಿಶ್ವವಿದ್ಯಾಲಯ, ಮೈಸೂರು (1916)- 20, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು (1964)- 26, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು (1965)-37 ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ (1998)- 50.

  1. ಸುಸ್ಥಿರ ಅಭಿವೃದ್ಧಿಯ ಗುರಿ ಹೊಂದಿದ 10 ಸಂಸ್ಥೆಗಳಲ್ಲಿ ಸ್ಥಾನಮಾನ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಣಿಪಾಲ್ (1953)- 5.

ಕೊನೆಯ ಮಾತು: ರಾಷ್ಟ್ರಮಟ್ಟದಲ್ಲಿ ಸರ್ಕಾರಿ ಸಂಸ್ಥೆಯಿಂದ ನೀಡಲಾಗುವ ಈ ರ‍್ಯಾಂಕಿಂಗ್‌ಗಳು ಸಾರ್ವಜನಿಕರ ಗಮನವನ್ನು ಅಷ್ಟಾಗಿ ಸೆಳೆಯುತ್ತಿಲ್ಲ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಒಟ್ಟು 76 ರ‍್ಯಾಂಕ್‌ ಪಡೆದಿವೆ. ಇದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮೇಲುಗೈ ಪಡೆದಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಮೂರು ವಿಭಾಗಗಳಲ್ಲಿ ಶ್ರೇಯಾಂಕ ಪಡೆದರೆ, ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯವು ಎರಡು ವಿಭಾಗಗಳಲ್ಲಿ ಶ್ರೇಯಾಂಕ ಪಡೆದಿರುವುದು ಮೆಚ್ಚತಕ್ಕ ವಿಷಯ. ಭ್ರಷ್ಟಾಚಾರ, ಜಾತೀಯತೆ, ಸಿಬ್ಬಂದಿ ಕೊರತೆ, ಅನುದಾನದ ಕೊರತೆ, ಅನಗತ್ಯ ವರ್ಗಾವಣೆ, ರಾಜಕಾರಣದ ಕಪಿಮುಷ್ಟಿ ಮತ್ತಿತರ ಅಂಶಗಳು ಸರ್ಕಾರದ ಶಿಕ್ಷಣ ಸಂಸ್ಥೆಗಳು ಸೊರಗಲು ಕಾರಣವೇ? ಸರ್ಕಾರದ ಶಿಕ್ಷಣ ಸಂಸ್ಥೆಗಳು ಉತ್ತಮ ಸಾಧನೆಗೈಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಲ್ಲವೇ? ಎಲ್ಲರೂ ಆ ದಿಕ್ಕಿನಲ್ಲಿ ಯೋಚಿಸುವಂತಾಗಲಿ. ಕರ್ನಾಟಕವು ದೇಶದ ಶಿಕ್ಷಣದ ಭೂಪಟದಲ್ಲಿ ಇನ್ನಷ್ಟು ಉತ್ತಮ ಸ್ಥಾನ ಪಡೆಯುವಂತಾಗಲಿ.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...