ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

Date:

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಹಾಗೂ ಡಿಜಿಟಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಆದರೂ ಹೊಸ ವ್ಯವಸ್ಥೆಯಲ್ಲಿ ಹಲವು ಗೋಜಲುಗಳಿವೆ.

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತೆರಿಗೆ ವ್ಯವಸ್ಥೆಯು ಸದಾ ಕೇಂದ್ರಸ್ಥಾನದಲ್ಲಿದೆ. 1961ರ ಆದಾಯ ತೆರಿಗೆ ಕಾಯ್ದೆಯು 60 ವರ್ಷಗಳಿಗೂ ಹೆಚ್ಚು ಕಾಲ ನಡೆದು ಬಂದಿದ್ದು, ಸಾವಿರಾರು ತಿದ್ದುಪಡಿಗಳನ್ನು ಕಂಡಿದೆ. ಪ್ರತಿ ಬಾರಿಯ ಬದಲಾವಣೆಗಳಲ್ಲಿ ಸಂಕೀರ್ಣತೆಗಳು, ಗೊಂದಲಗಳು ಹಾಗೂ ಅನುಸರಣೆಯ ತೊಂದರೆಗಳು ಇರುತ್ತಲೇ ಇದೆ. ಪ್ರಸ್ತುತ ಕೇಂದ್ರ ಸರ್ಕಾರವು ಹೊಸ ಆದಾಯ ತೆರಿಗೆ ಮಸೂದೆ 2025ನ್ನು ಮಂಡಿಸಿ, ಲೋಕಸಭೆಯಲ್ಲಿ ಅಂಗೀಕರಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 11ರಂದು ಸಂಸದೀಯ ಆಯ್ಕೆ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಈ ಮಸೂದೆಯನ್ನು ಜಾರಿಗೊಳಿಸಿದ್ದಾರೆ. ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಹಾಗೂ ಡಿಜಿಟಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಆದರೂ ಹೊಸ ವ್ಯವಸ್ಥೆಯಲ್ಲಿ ಹಲವು ಗೋಜಲುಗಳಿವೆ.

ಫೆಬ್ರವರಿ 13, 2025ರಂದು ಮೊದಲ ಬಾರಿಗೆ ಮಂಡಿಸಲಾದ ಈ ಮಸೂದೆಯು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ತುತ್ತಾಗಿ ಆಗಸ್ಟ್ 8ರಂದು ಹಿಂಪಡೆಯಲ್ಪಟ್ಟಿತು. ಸಾರ್ವಜನಿಕರಿಂದ ಸುಮಾರು 6,500 ಸಲಹೆಗಳು ಬಂದವು, ಇವುಗಳಲ್ಲಿ ಭಾಷೆಯ ಸರಳೀಕರಣ, ಗೊಂದಲ ನಿವಾರಣೆ ಹಾಗೂ ಅನುಸರಣೆ ಸುಗಮಗೊಳಿಸುವಿಕೆ ಪ್ರಮುಖವಾಗಿವೆ. ಜಯಂತ್ ಪಾಂಡಾ ನೇತೃತ್ವದ 31 ಸದಸ್ಯರ ಸಮಿತಿಯು ಮಸೂದೆಯನ್ನು ಪರಿಶೀಲಿಸಿ, 4,584 ಪುಟಗಳ ವರದಿಯಲ್ಲಿ 285 ಶಿಫಾರಸುಗಳನ್ನು ನೀಡಿತು, ಹೆಚ್ಚಿನವುಗಳನ್ನು ಹೊಸ ಮಸೂದೆಯಲ್ಲಿ ಸೇರಿಸಲಾಗಿದೆ.

ಸಮಿತಿಯ ಶಿಫಾರಸುಗಳು ತೆರಿಗೆ ಆಡಳಿತವನ್ನು ಸರಳಗೊಳಿಸುವುದು, ಭಾಷೆ ಸ್ಪಷ್ಟಗೊಳಿಸುವುದು ಹಾಗೂ ತೆರಿಗೆದಾರರ ಹಿತರಕ್ಷಣೆಯನ್ನು ಒಳಗೊಂಡಿವೆ. ಉದಾಹರಣೆಗೆ, ವ್ಯಾಖ್ಯಾನಗಳ ಬಿಗಿಗೊಳಿಸುವಿಕೆ, ಮರುಪಾವತಿ ನಿಯಮಗಳ ಸರಳೀಕರಣ, ಕಾರ್ಪೊರೇಟ್ ಲಾಭಾಂಶ ಕಡಿತಗಳು, ಎನ್‌ಐಎಲ್‌ ಟಿಡಿಎಸ್ ಪ್ರಮಾಣಪತ್ರ, ಎಂಎಸ್‌ಎಂಇಗಳ ಬದಲಾವಣೆಗಳು, ಭವಿಷ್ಯ ನಿಧಿ ಶುಲ್ಕಗಳ ಸ್ಪಷ್ಟತೆ ಇತ್ಯಾದಿ. ಸಮಿತಿಯು ಆದಾಯ ತೆರಿಗೆ ರಿಟರ್ನ್ ಕೊನೆಯ ದಿನಾಂಕದ ನಂತರ ಸಲ್ಲಿಸಿದರೂ ಮರುಪಾವತಿಗೆ ಅರ್ಹತೆ ನೀಡುವಂತೆ ಶಿಫಾರಸು ಮಾಡಿದೆ. ಹಿಂದಿನ ಮಸೂದೆಯಲ್ಲಿ ಅವಧಿಯೊಳಗೆ ಮಾತ್ರ ಸಿಗುತ್ತಿತ್ತು. ಅಲ್ಲದೆ, ಸೆಕ್ಷನ್ 115ಬಿಎಎಯ ವಿಶೇಷ ರಿಯಾಯಿತಿಯನ್ನು ಬದಲಿಸಿ, ಸೆಕ್ಷನ್ 80ಎಂ ಕಡಿತಕ್ಕೆ ತಿದ್ದುಪಡಿ ತರಲು ಸಲಹೆ ನೀಡಲಾಗಿದೆ. ಹೊಸ ಮಸೂದೆಯು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ)ಗೆ ಹೆಚ್ಚಿನ ಅಧಿಕಾರ ನೀಡಿದ್ದು, ಹಿಂದೆ ಸಂಸತ್ತಿನ ಅನುಮೋದನೆ ಬೇಕಿದ್ದ ಕಾರ್ಯಗಳನ್ನು ಈಗ ಸಿಬಿಡಿಟಿ ಸ್ವತಂತ್ರವಾಗಿ ನಿರ್ವಹಿಸಬಹುದು. ನಿಯಮ 533ರ ಅಡಿಯಲ್ಲಿ ಅನುಸರಣಾ ಕ್ರಮಗಳು, ಹೊಸ ತೆರಿಗೆ ನಿಯಮ ರೂಪಿಸುವಿಕೆ ಹಾಗೂ ಡಿಜಿಟಲ್ ತೆರಿಗೆ ನಿರ್ವಹಣೆ ಸೇರಿವೆ. ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಇಲ್ಲ. 12 ಲಕ್ಷ ರೂಗಳವರೆಗೆ ತೆರಿಗೆ ಇಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೆಕ್ಷನ್‌ಗಳ ಸಂಖ್ಯೆಯನ್ನು 819 ರಿಂದ 536ಕ್ಕೆ ಕಡಿಮೆ ಮಾಡಿ, ಭಾಷೆ ಸರಳಗೊಳಿಸಲಾಗಿದೆ. ಗೊಂದಲಕಾರಿ ಪದಗಳನ್ನು ತೆಗೆದು, ಟೀಬಲ್‌ಗಳನ್ನು ಬಳಸಲಾಗಿದೆ. ತೆರಿಗೆದಾರರಿಗೆ NIL TDS ಪ್ರಮಾಣಪತ್ರ ಪಡೆಯಲು ಅವಕಾಶ, ಸಣ್ಣ TDS ತಡೆಗೆ ದಂಡ ಇಲ್ಲ, ಮನೆ ಆಸ್ತಿಯ ಮೇಲೆ ಶೇ. 30ರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿವೆ. MSMEಗಳಿಗೆ ಬದಲಾವಣೆಗಳು, ಭವಿಷ್ಯನಿಧಿ ಮುಂಗಡ ಶುಲ್ಕಗಳು, ಕಡಿಮೆ ತೆರಿಗೆ ಪ್ರಮಾಣಪತ್ರ ಹಾಗೂ ದಂಡ ವಿಧಿಸುವ ಸ್ಪಷ್ಟತೆ ನೀಡಲಾಗಿದೆ. ಫೇಸ್‌ಲೆಸ್ ಅಸೆಸ್ಮೆಂಟ್(ತೆರಿಗೆದಾರನ ಆದಾಯ ತೆರಿಗೆ ರಿಟರ್ನ್‌ಗಳನ್ನು ಪರಿಶೀಲಿಸುವಾಗ, ಯಾವುದೇ ಅಧಿಕಾರಿಯನ್ನು ಖುದ್ದಾಗಿ ಭೇಟಿಯಾಗುವ ಅಗತ್ಯವಿಲ್ಲ- ಎಲ್ಲ ಸಂವಹನ, ದಾಖಲೆ ಸಲ್ಲಿಕೆ, ಮತ್ತು ಪರಿಶೀಲನೆ ಆನ್‌ಲೈನ್‌ನಲ್ಲಿ ಇ-ಅಸೆಸ್ಮೆಂಟ್ ಪೋರ್ಟಲ್‌ ಮೂಲಕ ನಡೆಯುತ್ತದೆ) ಉತ್ತೇಜಿಸಿ, ಭ್ರಷ್ಟಾಚಾರ ಕಡಿಮೆ ಮಾಡುವ ಗುರಿ, ಪಿಂಚಣಿ ಸಂಬಂಧಿತವಾಗಿ ಏಕೀಕೃತ ಪಿಂಚಣಿ ಯೋಜನೆ ಚಂದಾದಾರರಿಗೆ ತೆರಿಗೆ ರಿಯಾಯಿತಿ, ಕ್ರಿಪ್ಟೋಕರೆನ್ಸಿ ಅನ್ನು ಅನ್‌ಡಿಸ್ಕ್ಲೋಸ್ಡ್ ಇನ್ಕಮ್‌ನಲ್ಲಿ(ಘೋಷಿಸದ ಆದಾಯ) ಸೇರಿಸಲಾಗಿದೆ. ಈ ಮಸೂದೆಯು ತೆರಿಗೆದಾರರಿಗೆ ಸರಳತೆ ತರುತ್ತದೆ. ಸಣ್ಣ ವ್ಯಾಪಾರಿಗಳು, MSMEಗಳು ಹಾಗೂ ವೈಯಕ್ತಿಕರಿಗೆ ಅನುಸರಣೆ ಸುಗಮವಾಗುತ್ತದೆ. ಡಿಜಿಟಲ್ ಆಡಳಿತದಿಂದ ಭ್ರಷ್ಟಾಚಾರ ಕಡಿಮೆ, ಪಾರದರ್ಶಕತೆ ಹೆಚ್ಚು. ಆದರೆ CBDTಗೆ ಹೆಚ್ಚಿನ ಅಧಿಕಾರದಿಂದ ಗೌಪ್ಯತೆ ಆತಂಕಗಳು ಉದ್ಭವಿಸಬಹುದು, ವಿಶೇಷವಾಗಿ ಡಿಜಿಟಲ್ ಸರ್ಚ್ ಅಧಿಕಾರದಿಂದ ತೊಂದರೆಯುಂಟಾಗುವ ಸಾಧ್ಯತೆಯಿದೆ.

ತೆರಿಗೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ; ವಿಪಕ್ಷಗಳ ಆತಂಕ

ಪ್ರತಿಪಕ್ಷಗಳು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿವೆ. ಅದನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು ಎಂದು ಆರೋಪಿಸಿವೆ. ಲೋಕಸಭೆಯಲ್ಲಿ ಬಿಹಾರದ ಚುನಾವಣಾ ಪಟ್ಟಿ ಸಂಬಂಧಿತ ಪ್ರತಿಭಟನೆಗಳ ನಡುವೆ ಮಸೂದೆಯನ್ನು ಕೇವಲ ಮೂರು ನಿಮಿಷಗಳಲ್ಲಿ ಅಂಗೀಕರಿಸಲಾಯಿತು, ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಟೀಕಿಸಿವೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರವು ವಿರೋಧಿಗಳನ್ನು ನಿಗದಿಪಡಿಸಿ ಮಸೂದೆಗಳನ್ನು ಜಾರಿಗೊಳಿಸಲಾಗಿದೆ. ಮಸೂದೆಯು ತೆರಿಗೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದರಿಂದ ತೆರಿಗೆದಾರರ ಕಿರುಕುಳ ಹೆಚ್ಚಬಹುದು. CBDTಯ ಸ್ವತಂತ್ರ ಅಧಿಕಾರಗಳು ದುರ್ಬಳಕೆಗೆ ಕಾರಣವಾಗಬಹುದು. ಮಧ್ಯಮ ವರ್ಗಕ್ಕೆ ತೆರಿಗೆ ದರಗಳಲ್ಲಿ ಯಾವುದೇ ರಿಯಾಯಿತಿ ಇಲ್ಲದಿರುವುದು ನಿರಾಸೆಯಾಗಿದೆ, ಸ್ಲಾಬ್‌ಗಳ ಬದಲಾವಣೆ ಇಲ್ಲದೆ ಮಧ್ಯಮ ವರ್ಗದ ಹೊರೆ ಹೆಚ್ಚುತ್ತದೆ. ಅಲ್ಲದೆ, ಮಸೂದೆಯು ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡುತ್ತದೆಯೇ ಹೊರತು ಸಾಮಾನ್ಯ ಜನರಿಗಲ್ಲ ಎಂದು ಆರೋಪಿಸಿವೆ. ಸಮಿತಿಯ ಶಿಫಾರಸುಗಳು ಅಪೂರ್ಣವಾಗಿವೆ, ಹೆಚ್ಚಿನ ಸಲಹೆಗಳನ್ನು ಅಳವಡಿಸಿಲ್ಲ, ಮಸೂದೆಯನ್ನು ಇನ್ನಷ್ಟು ಪರಿಶೀಲನೆಗೆ ಕಳುಹಿಸಬೇಕಿತ್ತು. ಡಿಜಿಟಲ್ ಸರ್ಚ್ ಅಧಿಕಾರಗಳು ಗೌಪ್ಯತೆ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದು, ತೆರಿಗೆ ವ್ಯಾಜ್ಯಗಳು ಕಡಿಮೆಯಾಗುವ ಬದಲು ಹೆಚ್ಚಬಹುದು ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಆದರೆ ವಿಪಕ್ಷಗಳ ಆರೋಪಕ್ಕೆ ಸರ್ಕಾರದ ವಾದ ಬೇರೆ ರೀತಿಯಿದೆ. ಈ ಮಸೂದೆಯು ಆಧುನಿಕ, ಸರಳ ಹಾಗೂ ಪಾರದರ್ಶಕ ತೆರಿಗೆ ವ್ಯವಸ್ಥೆ ನಿರ್ಮಾಣದ ಗುರಿ ಹೊಂದಿದೆ, ಸಮಿತಿಯ ಶಿಫಾರಸುಗಳು ಅದನ್ನು ಬಲಪಡಿಸಿವೆ. ಆದರೆ ಅನುಷ್ಠಾನದಲ್ಲಿ ಸವಾಲುಗಳು ಉಳಿದಿವೆ. ತೆರಿಗೆದಾರರಿಗೆ ಸ್ವಾಗತಾರ್ಹವಾದರೂ, ಮಧ್ಯಮ ವರ್ಗದ ನಿರೀಕ್ಷೆಗಳನ್ನು ಪೂರೈಸುವಲ್ಲಿ ಹೆಚ್ಚಿನ ಕೆಲಸ ಬೇಕು. ಈ ಮಸೂದೆಯು ಭಾರತದ ಆರ್ಥಿಕ ಸುಧಾರಣೆಗಳಲ್ಲಿ ಮೈಲುಗಲ್ಲಾಗಬಹುದು, ಆದರೆ ಯಶಸ್ಸು ಅನುಷ್ಠಾನದ ಮೇಲೆ ಅವಲಂಬಿತವಾಗಿದೆ ಎಂದು ಸರ್ಕಾರ ಹೇಳಿವೆ.

ಹೊಸ ಮಸೂದೆ ತರಲು ಕಾರಣವೇನು?

ಫೆಬ್ರವರಿಯಲ್ಲಿ ಮಂಡನೆಯಾದ ಹೊಸ ಆದಾಯ ತೆರಿಗೆ ಮಸೂದೆ 1961ರ ಪ್ರಸ್ತುತ ಕಾನೂನಿಗೆ ಬದಲಾವಣೆ ತರುವ ಉದ್ದೇಶ ಹೊಂದಿತ್ತು. ಆದರೆ ಭಾಷೆಯ ಸಂಕೀರ್ಣತೆ, ಗೊಂದಲಕಾರಿ ನಿಯಮಗಳು ಮತ್ತು ಕೆಲವು ಸ್ಪಷ್ಟತೆ ಕೊರತೆಯ ಅಂಶಗಳು ಮಸೂದೆ ವಿರೋಧಕ್ಕೆ ಕಾರಣವಾಯಿತು. ಅಲ್ಲದೆ, ತೆರಿಗೆದಾರರ ಅನುಸರಣೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕೆಂಬ ಬೇಡಿಕೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ತಿದ್ದುಪಡಿ ತರಲು ನಿರ್ಧರಿಸಿತು.

ಸ್ಲಾಬ್‌ಗಳು: ₹0-4 ಲಕ್ಷ: ಶೇ. 0, ₹4-8 ಲಕ್ಷ.: ಶೇ. 5,  ₹8-12 ಲಕ್ಷ: ಶೇ. 10, ₹12-16 ಲಕ್ಷ: ಶೇ. 15, ₹16-20 ಲಕ್ಷ: ಶೇ. 20,  ₹20-24 ಲಕ್ಷ: ಶೇ. 25, ₹24 ಲಕ್ಷಕ್ಕಿಂತ ಹೆಚ್ಚು: ಶೇ. 30. ಕೆಲ ಮಾಧ್ಯಮಗಳು ಕಡಿಮೆ ಆದಾಯದವರಿಗೆ ರಿಯಾಯಿತಿ ಎಂದರೂ, ಸಮಿತಿ ಅಂತಹ ಶಿಫಾರಸು ಮಾಡಿಲ್ಲ.

ಪ್ರಮುಖ ಶಿಫಾರಸುಗಳು ಮತ್ತು ಬದಲಾವಣೆಗಳು

CBDTಗೆ ಹೆಚ್ಚುವರಿ ಅಧಿಕಾರ

  • 533ನೇ ನಿಯಮದಡಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT)ಗೆ ಅನುಸರಣಾ ಕ್ರಮ ಪರಿಚಯಿಸುವುದು, ತೆರಿಗೆ ಆಡಳಿತ ನಿಯಮಗಳನ್ನು ರೂಪಿಸುವುದು ಮತ್ತು ಡಿಜಿಟಲ್‌ ತೆರಿಗೆ ನಿರ್ವಹಣೆಯನ್ನು ಸ್ವತಂತ್ರವಾಗಿ ನಡೆಸುವ ಅಧಿಕಾರ.
  • ಇದುವರೆಗೆ ಇಂತಹ ಬದಲಾವಣೆಗಳಿಗೆ ಸಂಸತ್ತಿನ ಅನುಮತಿ ಅಗತ್ಯವಿತ್ತು.

ಮರುಪಾವತಿ ನಿಯಮದ ಸಡಿಲಿಕೆ

  • ಹಿಂದೆ, ಆದಾಯ ತೆರಿಗೆ ಮರುಪಾವತಿ ಪಡೆಯಲು ಅವಧಿಯೊಳಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯ.
  • ಹೊಸ ಶಿಫಾರಸಿನ ಪ್ರಕಾರ, ಕೊನೆ ದಿನದ ನಂತರ ಸಲ್ಲಿಸಿದರೂ, ಕೆಲವು ಶರತ್ತುಗಳನ್ನು ಪೂರೈಸಿದರೆ ಮರುಪಾವತಿ ಪಡೆಯಲು ಅವಕಾಶ.

ಸೆಕ್ಷನ್‌ 80ಎಂ ತಿದ್ದುಪಡಿ

  • ಸೆಕ್ಷನ್‌ 115ಬಿಎಎ ಅಡಿಯಲ್ಲಿ ಸಿಗುತ್ತಿದ್ದ ಕಾರ್ಪೊರೇಟ್‌ ಲಾಭಾಂಶ ರಿಯಾಯಿತಿಯನ್ನು ಬದಲಿಸಲು ಅನುಕೂಲವಾಗುವಂತೆ, 148ನೇ ನಿಯಮದಲ್ಲಿ ತಿದ್ದುಪಡಿ.

NIL ಟಿಡಿಎಸ್ಪ್ರಮಾಣಪತ್ರ

  • ತೆರಿಗೆದಾರರಿಗೆ NIL TDS ಪ್ರಮಾಣಪತ್ರ ಪಡೆಯಲು ಅವಕಾಶ. ಇದರಿಂದ ಅನಾವಶ್ಯಕ ಕಡಿತ ಮಾಡುವಿಕೆಯನ್ನು ತಪ್ಪಿಸಬಹುದು.

ತೆರಿಗೆ ಸ್ಲಾಬ್ಬದಲಾವಣೆ ಇಲ್ಲ

  • ಮಾಧ್ಯಮ ವರದಿಗಳಲ್ಲಿ ಬದಲಾವಣೆ ಬಗ್ಗೆ ಉಲ್ಲೇಖವಿದ್ದರೂ, ಸಮಿತಿಯು ಯಾವುದೇ ಸ್ಲಾಬ್‌ ಪರಿಷ್ಕರಣೆ ಶಿಫಾರಸು ಮಾಡಿಲ್ಲ.

MSME ಕಾಯ್ದೆ ಪರಿಷ್ಕರಣೆ

  • ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ಅನುಕೂಲವಾಗುವಂತೆ ಕೆಲವು ಬದಲಾವಣೆಗಳ ಶಿಫಾರಸು.

ಸ್ಪಷ್ಟತೆ ಅಗತ್ಯವಿರುವ ಅಂಶಗಳು

  • ಭವಿಷ್ಯ ನಿಧಿಯ ಮುಂಗಡ ಆಡಳಿತ ಶುಲ್ಕಗಳು
  • ಕಡಿಮೆ ತೆರಿಗೆ ಪ್ರಮಾಣಪತ್ರ
  • ದಂಡ ವಿಧಿಸುವ ಅಧಿಕಾರ
    – ಇವುಗಳಿಗೆ ಸಂಬಂಧಿಸಿದ ನಿಯಮಗಳನ್ನು ಹೆಚ್ಚು ಸ್ಪಷ್ಟಗೊಳಿಸಲು ಸಲಹೆ

ಮಸೂದೆಯ ತಾಂತ್ರಿಕ ಬದಲಾವಣೆಗಳು

ಹೊಸ ಕರಡು ಕಾನೂನಿನಲ್ಲಿ ತೆರಿಗೆ ಪ್ರಕ್ರಿಯೆಗಳನ್ನು ಡಿಜಿಟಲ್ ಮಾದರಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ನಿರ್ವಹಿಸುವ ವ್ಯವಸ್ಥೆ ಇದೆ. ತಾಂತ್ರಿಕ ನಿರ್ವಹಣೆ, ದತ್ತಾಂಶ ವಿನಿಮಯ, ಹಾಗೂ ಕಾನೂನು ಅನುಸರಣೆ ಪ್ರಕ್ರಿಯೆಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗಿದೆ. ಇದು ತೆರಿಗೆದಾರರಿಗೆ ವೇಗವಾಗಿ, ಕಡಿಮೆ ಸಮಯದಲ್ಲಿ ಪ್ರಕ್ರಿಯೆ ಮುಗಿಸಲು ಸಹಾಯ ಮಾಡಲಿದೆ.

ಹೊಸ ಮಸೂದೆಯಿಂದಾಗುವ ಅನಾನುಕೂಲಗಳು

– ಮಸೂದೆಯು ತೆರಿಗೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದರಿಂದ ತೆರಿಗೆದಾರರ ಕಿರುಕುಳ ಹೆಚ್ಚಬಹುದು.

– CBDTಯ ಸ್ವತಂತ್ರ ಅಧಿಕಾರಗಳು ದುರ್ಬಳಕೆಗೆ ಕಾರಣವಾಗಬಹುದು ಎಂದು ಹೇಳುತ್ತವೆ.

– ಮಧ್ಯಮ ವರ್ಗಕ್ಕೆ ತೆರಿಗೆ ದರಗಳಲ್ಲಿ ಯಾವುದೇ ರಿಯಾಯಿತಿ ಇಲ್ಲದಿರುವುದು ನಿರಾಸೆಯಾಗಿದೆ, ಸ್ಲಾಬ್‌ಗಳ ಬದಲಾವಣೆ ಇಲ್ಲದೆ ಮಧ್ಯಮ ವರ್ಗದ ಹೊರೆ ಹೆಚ್ಚುತ್ತದೆ.

– ಮಸೂದೆಯ ಪ್ರಮುಖ ಅಂಶಗಳು ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡುತ್ತದೆಯೇ ಹೊರತು ಸಾಮಾನ್ಯ ಜನರಿಗೆ ಉಪಯೋಗವಿಲ್ಲ.

– ಸಮಿತಿಯ ಶಿಫಾರಸುಗಳು ಅಪೂರ್ಣವಾಗಿವೆ, ಹೆಚ್ಚಿನ ಸಲಹೆಗಳನ್ನು ಅಳವಡಿಸಿಲ್ಲ, ಮಸೂದೆಯನ್ನು ಇನ್ನಷ್ಟು ಪರಿಶೀಲನೆಗೆ ಕಳುಹಿಸಬೇಕಿತ್ತು.

– ಡಿಜಿಟಲ್ ಸರ್ಚ್ ಅಧಿಕಾರಗಳು ಗೌಪ್ಯತೆ ಉಲ್ಲಂಘನೆಗೆ ಕಾರಣವಾಗಬಹುದು.

– ನೂತನ ಮಸೂದೆಯಿಂದ ತೆರಿಗೆ ವ್ಯಾಜ್ಯಗಳು ಕಡಿಮೆಯಾಗುವ ಬದಲು ಹೆಚ್ಚಬಹುದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...