ಮೋದಿ ಹಾದಿಯಲ್ಲಿ ನಿರ್ಮಲಾ ಸೀತಾರಾಮನ್ – ದರ್ಪದ ಮಾತು, ವಿಪಕ್ಷಗಳ ಗೇಲಿ ಮಾಡೋ ಚಾಳಿ

Date:

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, ಜಿಡಿಪಿ, ಆರ್ಥಿಕ ಬೆಳವಣಿಗೆ ದರ ಕುಸಿತ, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ, ಪ್ರತಿ ವರ್ಷ ಸಾಲಾಗಿ ನಿಲ್ಲುತ್ತಿರುವ ಲಕ್ಷಾಂತರ ನಿರುದ್ಯೋಗಿಗಳು, ಮಧ್ಯಮ ವರ್ಗ, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬದುಕು ದಿನದಿಂದ ದಿನಕ್ಕೆ ಹೈರಾಣಾಗುತ್ತಿದೆ. ದೇಶದಲ್ಲಿ ನೂರಾರು ಸಮಸ್ಯೆಗಳಿದ್ದರೂ ನಿರ್ಮಲಾ ಸೀತಾರಾಮನ್ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ವಿತಂಡವಾದ ಮಂಡಿಸುತ್ತಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶವು ಅವಸಾನದ ಅಂಚಿಗೆ ತಳ್ಳಲ್ಪಡುತ್ತದೆ ಎಂಬುದು ಆರ್ಥಿಕ ತಜ್ಞರ ಭೀತಿಯಾಗಿದೆ. ಆದರೆ, ನಿರ್ಮಲಾ ಸೀತಾರಾಮನ್ ಅವರು ಇದಕ್ಕೆ ಕ್ಯಾರೆ ಎನ್ನದೇ ದರ್ಪದಿಂದ ಮಾತಾಡುವುದು ಮುಂದುವರೆದಿದೆ.

2025ರಲ್ಲಿ ಸತತ ಎಂಟನೇ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ಇಷ್ಟು ಬಜೆಟ್ ಮಂಡಿಸಿದರೂ ಯಾವ ಬವಣೆಗಳೂ ಇನ್ನೂ ತೀರಿಲ್ಲ. ಜನರಿಗೆ ಅನುಕೂಲಕರ ಸೇವೆ ಒದಗಿಸುವತ್ತ ಗಮನ ಹರಿಸಬೇಕಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ನೊಬ್ಬರನ್ನು ಟೀಕೆ, ವ್ಯಂಗ್ಯ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಕೇಳಿದ ಪ್ರಶ್ನೆಗೆ ಉತ್ತರ ನೀಡದೇ, ತಾಳ್ಮೆ ಕಳೆದುಕೊಂಡುವರಂತೆ ನಡೆದುಕೊಳ್ಳುತ್ತಿದ್ದಾರೆ.

ಹೌದು, ಲೋಕಸಭೆಯಲ್ಲಿ ನಡೆದ ಚಳಿಗಾಲದ ಅಧೀವೇಶನದಲ್ಲಿ ತಮಿಳುನಾಡು ಸಂಸದ ಸಸಿಕಾಂತ್ ಸೆಂಥಿಲ್ ಅವರು ಬರೆದ ಪತ್ರಕ್ಕೆ ಉತ್ತರವನ್ನು ನೀಡುವ ವೇಳೆ, ನಿರ್ಮಲಾ ಸೀತಾರಾಮನ್ ಅವರು ಸಚಿವ ಸ್ಥಾನದ ಘನತೆಯನ್ನು ಮರೆತು ಉಡಾಫೆತನದಿಂದ ನಡೆದುಕೊಂಡಿದ್ದಾರೆ. ಉತ್ತರ ನೀಡಬೇಕಾದಾಗ ಅವರು ನಡೆದುಕೊಂಡು ರೀತಿ, ಅವರು ತೋರಿದ ಹಾವಭಾವ ಕೇಂದ್ರ ಸಚಿವ ಸ್ಥಾನಕ್ಕೆ ತಕ್ಕುದಾದುದಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜತೆಗೆ, ಲೋಕಸಭಾ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಓಂ ಬಿರ್ಲಾ ಅವರು ಸಸಿಕಾಂತ್ ಸೆಂಥಿಲ್ ಅವರ ತಮಿಳು ಭಾಷೆಯಲ್ಲಿಯೇ ಅವರಿಗೆ ಉತ್ತರ ನೀಡಿ, ಆಗ ಅವರಿಗೆ ಅರ್ಥವಾಗುತ್ತದೆ ಎಂದು ಕುಹುಕವಾಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಜಿಎಸ್‌ಟಿ ಕಡಿತ ಆಗಿರುವುದಕ್ಕೆ ರಾಜ್ಯ ಸರ್ಕಾರಗಳಿಗೆ ನಷ್ಟ ಆಗುತ್ತಿದೆ. ಅದನ್ನ ಸರಿದೂಗಿಸೋಕೆ ಸೆಸ್ ಸಂಗ್ರಹದಲ್ಲಿ 50% ಹಣವನ್ನ ರಾಜ್ಯಗಳಿಗೆ ಹಂಚಿ ಎನ್ನುವುದು ಕಾಂಗ್ರೆಸ್ ಮತ್ತು ಸಸಿಕಾಂತ್ ಸೆಂಥಿಲ್ ಅವರ ಆಗ್ರಹವಾಗಿದೆ. ಈ ಆಗ್ರಹಕ್ಕೆ ಕಿವಿಗೊಡದ ಅವರು ಅಸಡ್ಡೆಯಾಗಿ ನಡೆದುಕೊಂಡಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಈ ರೀತಿ ನಡೆದುಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ, ಅಂದರೆ 2024ರಲ್ಲಿ ನಡೆದ ಅಧಿವೇಶನಲ್ಲಿ ಮಾತನಾಡುವ ವೇಳೆ, “ನಾನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಂತೇಯೇ ಆಗಲು ಇಷ್ಟ ಪಡುವುದಿಲ್ಲ” ಎಂದಿದ್ದರು.

ಟಿಎಂಸಿಯ ಸೌಗತ ರಾಯ್ ಅವರ ಶಿಕ್ಷಣ ಮತ್ತು ದೇಶದಲ್ಲಿನ ಅಸಮಾನತೆಯ ಕುರಿತು ಮಾತನಾಡುವಾಗ “ಹಣಕಾಸು ಸಚಿವರು ಡಾ. ಮನಮೋಹನ್ ಸಿಂಗ್ ಅವರಂತೆ ಇರಬೇಕೆಂದು ನಾನು ಇಷ್ಟಪಡುವುದಿಲ್ಲ. ಅವರು ಆಕ್ಸ್ ಫರ್ಡ್‌ನಿಂದ ಪಿ ಎಚ್ ಡಿ ಪಡೆದಿಲ್ಲ. ಹಾರ್ವರ್ಡ್‌ನಿಂದ ನಿರ್ವಹಣಾ ಪದವಿ ಪಡೆದ ಚಿದಂಬರಂ ಅವರಂತೆಯೂ ಅಲ್ಲ. ಅವರು ನಮ್ಮದೇ ಜೆ ಎನ್ ಯುನಿಂದ ಬಂದವರು. ಆದರೆ, ಸಮಸ್ಯೆ ಏನೆಂದರೆ ಅವರಿಗೆ ಹೊಸ ವಿಚಾರಗಳು ತಿಳಿದಿಲ್ಲ” ಎಂದು ಹೇಳಿದ್ದರು. ಅದಕ್ಕೆ ಉತ್ತರಿಸುತ್ತಾ ತೀವ್ರ ವಾಗ್ದಾಳಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಖಂಡಿತ, ನಾನು ಮನಮೋಹನ್ ಸಿಂಗ್ ಅವರಂತೆ ಆಗಲು ಬಯಸುವುದಿಲ್ಲ” ಎಂದು ಹೇಳಿದ್ದರು.

ನಿಜಕ್ಕೂ ಮನಮೋಹನ್ ಸಿಂಗ್ ಅವರಂತೆ ನಿರ್ಮಲಾ ಅವರು ಆಗಲು ಸಾಧ್ಯವೇ ಇಲ್ಲ. ಯಾಕೆಂದರೆ, ಮನಮೋಹನ್ ಸಿಂಗ್ ಅವರು ಬಹಳ ತಾಳ್ಮೆ ಇರುವ ವ್ಯಕ್ತಿ. ಜನರಿಗಾಗಿ ದುಡಿದ ವ್ಯಕ್ತಿ. ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅನನ್ಯ. ಅವರ ಆರ್ಥಿಕ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪ್ರಧಾನಿಯಾಗಿದ್ದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆ ಸುಧಾರಣೆಯಾಗಿ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭಾರತ ಐದನೇ ಸ್ಥಾನದಲ್ಲಿತ್ತು. ಒಂದು ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರು ಅಮೆರಿಕಾ ಆರ್ಥಿಕ ಸುಧಾರಣೆಗೆ ‘ಸಿಂಗ್’ ಅವರ ಸಲಹೆ ಪಡೆಯುತ್ತಿದ್ದುದ್ದಾಗಿ ಒಬಾಮಾ ಅವರೇ ಹೇಳಿಕೊಂಡಿದ್ದಾರೆ.

ನೆಹರು, ಇಂದಿರಾಗಾಂಧಿ ಅವರಂತೆ ಬಡಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದವರು ಮನಮೋಹನ್ ಸಿಂಗ್. ಪ್ರಧಾನಿ ಪಿ ವಿ ನರಸಿಂಹರಾವ್ ಅವಧಿಯಲ್ಲಿ ಹಣಕಾಸು ಸಚಿವರಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ, ಸದ್ಯ ಹಣಕಾಸು ಸಚಿವರ ಸ್ಥಾನದಲ್ಲಿರುವ ನಿರ್ಮಲಾ ಸೀತಾರಾಮನ್ ಅವರು ಕುಹಕವಾಡುವುದನ್ನು ಬಿಟ್ಟು ಇನ್ನೇನನ್ನೂ ಮಾಡಿಲ್ಲ. ಇವರಿಗೆ ಜನರ ಕಾಳಜಿಗಿಂತ ಅವರನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನದಲ್ಲಿರುತ್ತಾರೆ. ಜನರ ಮೇಲೆ ತೆರಿಗೆ ಮೇಲೆ ತೆರಿಗೆ ಹೇರಿ ಅವರನ್ನು ನಲುಗುವಂತೆ ಮಾಡುತ್ತಿದ್ದಾರೆ. ಇನ್ನೂ ಹೇಳಬೇಕೆಂದರೆ, ಇವರ ಆಡಳಿತದಲ್ಲಿ ಪಾನಿಪುರಿಗೂ ಕೂಡ ಜಿಎಸ್‌ಟಿ ಹಾಕಬಹುದು ಎಂಬ ಗಾಬರಿಯಲ್ಲೇ ಜನರು ಪಾನಿಪುರಿ ತಿನ್ನುವಂತಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?

ಕರ್ನಾಟಕಕ್ಕೆ ತೆರಿಗೆ ವಂಚನೆ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು, “ಭಾರತದ ತಲಾ ಆದಾಯವು 2,730 ಡಾಲರ್ಗಳಿದ್ದು, ಇದು ಮುಂದಿನ ಐದು ವರ್ಷಗಳಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ” ಎಂದು ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಈಗ ಡಾಲರ್ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡು 1 ಡಾಲರ್‌ಗೆ 90 ರೂಪಾಯಿ ಆಗಿದೆ. ಹೀಗಿದ್ದರೂ ಒಂದೇ ಒಂದು ಮಾತನಾಡದ ನಿರ್ಮಲಾ ಅವರು ಸುಮ್ಮನಿದ್ದಾರೆ.

2019ರಲ್ಲಿ ಮೊದಲ ಬಾರಿಗೆ ನಿರ್ಮಲಾ ಹಣಕಾಸು ಸಚಿವೆಯಾದಾಗ ಈರುಳ್ಳಿ ಬೆಲೆ ದೇಶಾದ್ಯಂತ ತೀವ್ರವಾಗಿ ಹೆಚ್ಚಳಗೊಂಡಿತ್ತು. ಸದನದಲ್ಲಿ ಪ್ರತಿಪಕ್ಷದ ಸದಸ್ಯರು ಈರುಳ್ಳಿ ದರ ಏರಿಕೆ ವಿಚಾರ ಪ್ರಶ್ನಿಸಿದಾಗ “ನಾನು ಈರುಳ್ಳಿ-ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುವುದಿಲ್ಲ, ಆದ್ದರಿಂದ ಚಿಂತಿಸಬೇಡಿ. ನಾನು ಈರುಳ್ಳಿಯೊಂದಿಗೆ ಹೆಚ್ಚು ಸಂಬಂಧವಿಲ್ಲದ ಕುಟುಂಬದಿಂದ ಬಂದಿದ್ದೇನೆ” ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದರು. ಹಾಗೆಯೇ, ಹಲವು ಬಾರಿ ತೈಲ ಬೆಲೆಗಳು, ಮತ್ತಿತ್ತರ ಪದಾರ್ಥಗಳು ಏರಿಕೆಯಾದಾಗ ತಮಗೂ ಹಾಗೂ ತಮ್ಮ ಖಾತೆಗೂ ಸಂಬಂಧವಿಲ್ಲದ ರೀತಿಯಲ್ಲಿ ಮಾತನಾಡಿದ್ದರು. ತೆರಿಗೆ ಪರಿಷ್ಕರಣೆ ವಿಚಾರಕ್ಕೆ ಯಾರಾದರೂ ಪ್ರಶ್ನೆ ಕೇಳಿದರೆ, ಯಾವ ಒತ್ತಡಕ್ಕೂ ಬಾಗುವ ಮಾತೇ ಇಲ್ಲ ಎಂಬ ರೀತಿ ಸಾರ್ವಜನಿಕವಾಗಿ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡುತ್ತಾರೆ.

ಇನ್ನು ದೇಶದ ಆರ್ಥಿಕ ವ್ಯವಸ್ಥೆಯ ಪ್ರಸ್ತುತ ಹಾಗೂ ಭವಿಷ್ಯತ್ತಿನ ಸಮಸ್ಯೆಗಳನ್ನು ಪರಿಹರಿಸಲು ಏನು ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಯಾರಾದರೂ ಕೇಳಿದರೆ ಸೀತಾರಾಮನ್ ಅವರು ಸಿಟ್ಟು ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಇದ್ದ ಸತ್ಯವನ್ನು ಹೇಳಿದರೆ, ನಿರ್ಮಲಾ ಸೀತಾರಾಮನ್ ಅವರ ಕೋಪ ನೆತ್ತಿಗೇರುತ್ತದೆ. ತಮ್ಮ ಮಾತಿನ ಶೈಲಿಯಲ್ಲಿಯೇ ಸತ್ಯ ಹೇಳುವವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ. ಅವರು ಎಷ್ಟೇ ಸುಳ್ಳುಗಳನ್ನು ಅಡಗಿಸಿದರೂ ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ವ್ಯವಸ್ಥೆ ಹಾಗೂ ಮಾರುಕಟ್ಟೆಯ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ.

ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳುವಂತೆ ದೇಶದ ಆರ್ಥಿಕತೆ ಬೆಳೆಯುತ್ತಿದೆ ಎನ್ನುವುದೇ ಹೌದಾದರೆ, ರೂಪಾಯಿ ಮೌಲ್ಯದಲ್ಲಿ ಏರಿಕೆ ಕಾಣಬೇಕಿತ್ತು. ಆದರೆ ಹಾಗೇ ಆಗುತ್ತಿಲ್ಲ. ಅವರು ಹೇಳಿಕೆ ನೀಡಿದ್ದ ವಿರುದ್ಧ ದಿಕ್ಕಿನಲ್ಲಿ ಈಗ ಆರ್ಥಿಕತೆ ಸಾಗುತ್ತಿದೆ. ಡಾಲರ್‌ಗೆ 90 ರೂಪಾಯಿ ಆಗಿದೆ. ಇದು ಕೂಡ ಇತಿಹಾಸದಲ್ಲೇ ದಾಖಲೆ ಕನಿಷ್ಠ ಮಟ್ಟ ರೂಪಾಯಿ ಮೌಲ್ಯ ಕುಸಿತ. ಇದನ್ನು ತಪ್ಪಿಸಲು ಆರ್ ಬಿ ಐ ಮತ್ತೆ ಮತ್ತೆ ಸಾಹಸ ಮಾಡುತ್ತಲೇ ಇದೆ. ಆದರೆ, ನಿರ್ಮಲಾ ಸೀತಾರಾಮನ್ ಪ್ರಕಾರ ಇದು ರೂಪಾಯಿಯ ಸಮಸ್ಯೆಯಲ್ಲ, ಡಾಲರ್ ಹೆಚ್ಚು ಪ್ರಬಲವಾಗುತ್ತಿರುವುದು!

ಚುನಾವಣಾ ಎದುರಿಸದೇ ಸುಲಭವಾಗಿ ಕರ್ನಾಟಕದಿಂದ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ಪ್ರಬಲ ಖಾತೆಯ ಸಚಿವೆಯಾಗಿರುವ ನಿರ್ಮಲಾ ಅವರದ್ದು ಕರ್ನಾಟಕಕ್ಕೆ ಮೋಸ ಮಾಡಿದ್ದೇ ಸಾಧನೆ. ಸಂಸತ್ತಿನಲ್ಲಿ ವಿಪಕ್ಷಗಳ ನಾಯಕರು ಬೇಡಿಕೆ ಇಟ್ಟರೆ, ಪ್ರಶ್ನೆ ಮಾಡಿದೆ ಅದಕ್ಕೆ ಸೌಜನ್ಯದಿಂದ ಉತ್ತರಿಸುವ, ಗೌರವದಿಂದ ತಿಳಿ ಹೇಳುವ ಕೆಲಸ ಮಾಡುವ ಬದಲು ಪ್ರಧಾನಿ ಮೋದಿಯವರಂತೆ ಉಡಾಫೆತನ ಪ್ರದರ್ಶಿಸುತ್ತಿದ್ದಾರೆ. ಈ ವಿಚಾರದಲ್ಲಿ ಮೋದಿಯೇ ಇವರಿಗೆ ಗುರು ಎನ್ನಬೇಕಷ್ಟೇ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...