ಅಣು ವಿದ್ಯುತ್ ಕ್ಷೇತ್ರ ಖಾಸಗೀಕರಣ: ಅದಾನಿ ತೆಕ್ಕೆಗಿಡಲು ಮೋದಿ ಸರ್ಕಾರದ ಹುನ್ನಾರ?

Date:

ಮೋದಿ ಆಪ್ತಮಿತ್ರ ಅದಾನಿ ಅವರ 'ಅದಾನಿ ಗ್ರೂಪ್', ಪರಮಾಣು ವಿದ್ಯುತ್ ಕ್ಷೇತ್ರಕ್ಕೆ ಕಾಲಿಡುವ ಧಾವಂತದಲ್ಲಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ಅದಾನಿ ಗ್ರೂಪ್‌ಗಳ ಅಧಿಕಾರಿಗಳು 'ತಾರಾಪುರ್ ನ್ಯೂಕ್ಲಿಯರ್ ಪ್ಲಾಂಟ್'ಗೆ ಭೇಟಿ ನೀಡಿ, ಎನ್‌ಪಿಸಿಐ ಲಿಮಿಟೆಡ್‌ ಜೊತೆ ಚರ್ಚೆ ನಡೆಸಿದ್ದರು.

ಭಾರತದಲ್ಲಿ ಅಣು ವಿದ್ಯುತ್ ಕ್ಷೇತ್ರವು ದಶಕಗಳಿಂದ ಸರ್ಕಾರಿ ನಿಯಂತ್ರಣದಲ್ಲಿತ್ತು. ಆದರೆ, ಈಗ ಮೋದಿ ಸರ್ಕಾರ ಈ ಕ್ಷೇತ್ರದಲ್ಲಿಯೂ ಖಾಸಗಿ ಕಂಪನಿಗಳಿಗೆ ಬಾಗಿಲು ತೆರೆಯುತ್ತಿದೆ. ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಮಾಡಿಕೊಡಲು ಮುಂದಾಗಿದೆ. 2047ರ ವೇಳೆಗೆ 100 ಗಿಗಾವಾಟ್ ಅಣು ವಿದ್ಯುತ್ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಸಾಧಿಸಲು ಖಾಸಗೀ ಸಹಭಾಗಿತ್ವ ಅಗತ್ಯವೆಂದು ಸರ್ಕಾರ ನೆಪ ಹೇಳುತ್ತಿದೆ. ಆದರೆ, ಈ ನಿರ್ಧಾರವು ಮೋದಿ ಅವರು ತಮ್ಮ ಅತ್ಯಾಪ್ತ ಅದಾನಿಗೆ ಲಾಭ ಮಾಡಿಕೊಡುವ ಉದ್ದೇಶಹೊಂದಿದೆ ಎಂಬ ಆರೋಪವನ್ನು ಮುನ್ನೆಲೆಗೆ ತಂದಿದೆ. ಮಾತ್ರವಲ್ಲ, ಪರಿಸರ ಮತ್ತು ಸಾರ್ವಜನಿಕ ಸುರಕ್ಷತೆಯ ಕುರಿತು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.

ಕಳೆದ ತಿಂಗಳು (ನವೆಂಬರ್) ಮೋದಿ ಅವರು ಅಣು ವಿದ್ಯುತ್ ಕ್ಷೇತ್ರವನ್ನು ಖಾಸಗಿ ಹೂಡಿಕೆದಾರರಿಗೆ ತೆರೆಯುವುದಾಗಿ ಘೋಷಿಸಿದ್ದರು. ಈ ಬೆನ್ನಲ್ಲೇ, ಡಿಸೆಂಬರ್ 15 ರಂದು ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಸುಸ್ಥಿರ ಬಳಕೆ ಮತ್ತು ಪರಮಾಣು ಶಕ್ತಿಯ ಪ್ರಗತಿ ಮಸೂದೆ-2025’ (‘ಸಸ್ಟೈನಬಲ್ ಹಾರ್ನೆಸಿಂಗ್ ಅಂಡ್ ಅಡ್ವಾನ್ಸ್‌ಮೆಂಟ್ ಆಫ್ ನ್ಯೂಕ್ಲಿಯರ್ ಎನರ್ಜಿ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ’ ಬಿಲ್ – SHANTI) ಮಂಡಿಸಿದರು. ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದೆ. ಈ ಮಸೂದೆಯು ಅಣು ವಿದ್ಯುತ್ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಖಾಸಗಿ ಮತ್ತು ವಿದೇಶಿ ಹೂಡಿಕೆಗೆ ತಡೆಗೋಡೆಯಾಗಿರುವ ‘ಭಾರತದ ಪರಮಾಣು ಹೊಣೆಗಾರಿಕೆ ವ್ಯವಸ್ಥೆ’ಯನ್ನು ಬುಡಮೇಲು ಮಾಡುತ್ತದೆ. ಸರ್ಕಾರದ ಸಾರ್ವಭೌಮ ನಿಯಂತ್ರಣವನ್ನು ಅಳಿಸುತ್ತದೆ. ಆಟಮಿಕ್ ಎನರ್ಜಿ ಆಕ್ಟ್-1962 ಮತ್ತು ಸಿವಿಲ್ ಲಯಬಿಲಿಟಿ ಫಾರ್ ನ್ಯೂಕ್ಲಿಯರ್ ಡ್ಯಾಮೇಜ್ ಆಕ್ಟ್-2010ಅನ್ನು ತಿದ್ದುಪಡಿ (ರದ್ದು) ಮಾಡುತ್ತದೆ.

ಮಸೂದೆ ಮಂಡಿಸಿದ ನಿರ್ಮಲಾ ಸೀತಾರಾಮನ್, ”ದೇಶದಲ್ಲಿ ಇಂಧನ ವ್ಯವಸ್ಥೆಯನ್ನು ಶುದ್ಧ ಇಂಧನವಾಗಿ ಪರಿವರ್ತಿಸಲು ಪರಮಾಣು ಶಕ್ತಿಯನ್ನು ಹೆಚ್ಚಿಸುವ ಅತಿದೊಡ್ಡ ಪ್ರಯತ್ನದ ಭಾಗವಾಗಿ, ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಮತ್ತು ವಿದೇಶಿ ಹೂಡಿಕೆಯ ಅಗತ್ಯವಿದೆ” ಎಂದು ಹೇಳಿದ್ದಾರೆ. ಖಾಸಗಿ ಸಹಭಾಗಿತ್ವದಲ್ಲಿ ‘ಭಾರತ್ ಸ್ಮಾಲ್ ರಿಯಾಕ್ಟರ್‌ಗಳು’ ಮತ್ತು ‘ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌’ಗಳನ್ನು (SMRs) ಅಭಿವೃದ್ಧಿಪಡಿಸುವುದಾಗಿ ಘೋಷಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಸೂದೆಯು ಯಾವುದೇ ಕಂಪನಿ ಅಥವಾ ಜಂಟಿ ಉದ್ಯಮವು ದೇಶದೊಳಗೆ ಪರಮಾಣು ವಿದ್ಯುತ್ ಸ್ಥಾವರ ಅಥವಾ ರಿಯಾಕ್ಟರ್ ಅನ್ನು ನಿರ್ಮಿಸಲು, ಸ್ವಾಯತ್ತತೆ ಹೊಂದಲು, ನಿರ್ವಹಿಸಲು, ಆಮದು ಮತ್ತು ಸಾಗಣೆ ಉದ್ದೇಶಗಳಿಗಾಗಿಯೂ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಮಸೂದೆ ಹೇಳುತ್ತದೆ.

ಖಾಸಗೀ ಕಂಪನಿಗಳ ದರ್ಬಾರು

ಭಾರತವು ಪ್ರಸ್ತುತ 8.7 ಗಿಗಾವ್ಯಾಟ್ ಪರಮಾಣ ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ. 2047ರ ವೇಳೆಗೆ ಈ ಸಾಮರ್ಥ್ಯವನ್ನು 100 ಗಿಗಾವ್ಯಾಟ್‌ಗೆ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ, ಅತ್ಯಧಿಕ ಕಲ್ಲಿದ್ದಲು ಬಳಬೇಕಾಗುತ್ತದೆ. ಪರಿಣಾಮ, ಒಂದೆಡೆ – ಕಲ್ಲಿದ್ದಲು ಗಣಿಗಾರಿಕೆ, ಮತ್ತೊಂದೆಡೆ – ಶಾಖ ಮತ್ತು ಹಸಿರುಮನೆ ಅನಿಲದ ಹೊರಹೊಮ್ಮುವಿಕೆ ಹೆಚ್ಚಾಗುತ್ತದೆ. ಈ ಎರಡೂ ಮಾಲಿನ್ಯ ಮತ್ತು ತಾಪಮಾನ ಹೆಚ್ಚಳ ಕಾರಣವೂ ಅಗುತ್ತದೆ.

ಆದರೆ, ಇಲ್ಲಿ ಮಾಲಿನ್ಯದ ವಿಚಾರವನ್ನು ಬದಿಗಿಟ್ಟರೂ, ಇನ್ನೂ ನಾನಾ ಸಮಸ್ಯೆಗಳಿವೆ. ಅದರಲ್ಲಿ ಪ್ರಮುಖವಾದ್ದು, ಸರ್ಕಾರಿ ಉದ್ದಿಮೆಯ ಖಾಸಗೀಕರಣ. ಮೋದಿ ಅವರ ಅತ್ಯಾಪ್ತ ಅದಾನಿ ಅವರ ಅದಾನಿ ಗ್ರೂಪ್, ಲಾರ್ಸೆನ್ & ಟೂಬ್ರೊ (ಎಲ್ & ಟಿ), ಹಾಗೂ ಟಾಟಾ ಪವರ್ ಲಿಮಿಟೆಡ್ ಸೇರಿದಂತೆ ಹಲವಾರು ಖಾಸಗಿ ಕಂಪನಿಗಳು ಅಣು ವಿದ್ಯುತ್ ಕ್ಷೇತ್ರವನ್ನು ಆವರಿಸಿ, ಆಕ್ರಮಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ. ಈ ಕ್ಷೇತ್ರ ಪ್ರವೇಶಿಸುವ ತಮ್ಮ ಯೊಜನೆಗಳನ್ನೂ ಘೋಷಿಸಿವೆ.

ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದಕ ಸರ್ಕಾರಿ ಸಂಸ್ಥೆ ‘ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ (ಎನ್‌ಟಿಪಿಸಿ) ಲಿಮಿಟೆಡ್’ ಕೂಡ ಈ ಕ್ಷೇತ್ರದಲ್ಲಿ ತನ್ನ ಕಾರ್ಯ ಆರಂಭಿಸಿದೆ. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಜೊತೆ ಜಂಟಿ ಉದ್ಯಮ ಆರಂಭಿಸಿದೆ. ಪರಿಸರ ಸಮಸ್ಯೆಗಳನ್ನು ಬದಿಗಿಟ್ಟು ನೋಡಿದರೆ, ಸರ್ಕಾರಿ ಸಂಸ್ಥೆಗಳೇ ಅಣು ವಿದ್ಯುತ್ ಕ್ಷೇತ್ರವನ್ನು ಉತ್ತಮವಾಗಿ ನಿರ್ವಹಿಸುತ್ತಿವೆ. ಹೀಗಿರುವಾಗ, ಕ್ಷೇತ್ರದ ಖಾಸಗೀಕರಣವು ಒಟ್ಟಾರೆ ಪರಿಸರ ಮತ್ತು ಶಕ್ತಿ ವ್ಯವಸ್ಥೆಯ ಮೇಲೆ ಗಂಭೀರ ಮತ್ತು ಗಣನೀಯ ಪರಿಣಾಮ ಬೀರುತ್ತದೆ.

ಈಗಾಗಲೇ, ಭಾರತದಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಭಾರತ-ಅಮೆರಿಕ ನಡುವೆ 123 ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹಲವಾರು ಅಮೆರಿಕ ಕಂಪನಿಗಳು ದೇಶದಲ್ಲಿ ಅಣು ವಿದ್ಯುತ್ ಸ್ಥಾವರ ಆರಂಭಿಸಲು ಸಿದ್ದವಾಗಿವೆ.

ಮುಖ್ಯವಾಗಿ, ಮೋದಿ ಆಪ್ತಮಿತ್ರ ಅದಾನಿ ಅವರ ‘ಅದಾನಿ ಗ್ರೂಪ್’, ಪರಮಾಣು ವಿದ್ಯುತ್ ಕ್ಷೇತ್ರಕ್ಕೆ ಕಾಲಿಡುವ ಧಾವಂತದಲ್ಲಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ಅದಾನಿ ಗ್ರೂಪ್‌ಗಳ ಅಧಿಕಾರಿಗಳು ‘ತಾರಾಪುರ್ ನ್ಯೂಕ್ಲಿಯರ್ ಪ್ಲಾಂಟ್’ಗೆ ಭೇಟಿ ನೀಡಿ, ಎನ್‌ಪಿಸಿಐ ಲಿಮಿಟೆಡ್‌ ಜೊತೆ ಚರ್ಚೆ ನಡೆಸಿದ್ದರು.

ಅಲ್ಲದೆ, ನವೆಂಬರ್‌ ತಿಂಗಳಿನಲ್ಲಿ ಅದಾನಿ ಗ್ರೂಪ್‌ ನ್ಯೂಕ್ಲಿಯರ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿತು. ಅದೇ ಸಂದರ್ಭದಲ್ಲಿ, ಮೋದಿ ಅವರೂ ಅಣು ವಿದ್ಯುತ್ ಕ್ಷೇತ್ರವನ್ನು ಖಾಸಗಿ ಹೂಡಿಕೆಗೆ ತೆರೆಯುವುದಾಗಿ ಘೋಷಿಸಿದರು. ಇದೀಗ, ಮಸೂದೆ ಮಂಡನೆಯಾಗಿದೆ. ಇದೆಲ್ಲವೂ ಅದಾನಿಗಾಗಿಯೇ ಮಾಡಲಾಗುತ್ತಿರುವ ಹುನ್ನಾರವೆಂದು ವಿಪಕ್ಷಗಳು ಆರೋಪಿಸಿವೆ.

ದುರಂತ ಸಮಯದಲ್ಲಿ ಉದ್ಯಮ ಮತ್ತು ನಿರ್ವಾಹರಿಗೆ ಹೊಣೆಗಾರಿಕೆಯಿಂದ ವಿನಾಯತಿ

ಮಸೂದೆಯ ಅಧ್ಯಾಯ-3, ಯಾವುದೇ ಪರಮಾಣು ದುರಂತಗಳು ಸಂಭವಿಸಿದರೆ, ಉಂಟಾಗುವ ಹಾನಿಯ ಸಂದರ್ಭದಲ್ಲಿ ಸಣ್ಣ ಪ್ರಮಾಣದ ದುರಂತಗಳಿಗೆ ಪರಮಾಣು ಸ್ಥಾಪನೆಯ ನಿರ್ವಾಹಕರು ಹೊಣೆಗಾರರಾಗಿರುತ್ತಾರೆ. ಆದಾಗ್ಯೂ, ಅಸಾಧಾರಣ ದುರಂತಗಳ ಸಂದರ್ಭದಲ್ಲಿ ಹೊಣೆಗಾರಿಕೆಗಳಿಂದ ನಿರ್ವಾಹಕರಿಗೆ ವಿನಾಯಿತಿ ದೊರೆಯುತ್ತದೆ. ಸರ್ಕಾರವೇ ಪರಿಹಾರ ಒದಗಿಸಬೇಕೆಂದು ಮಸೂದೆ ಪ್ರಸ್ತಾಪಿಸುತ್ತದೆ.

ಜೊತೆಗೆ, ‘ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ’ಯ (CLND ಕಾಯ್ದೆ) ಸೆಕ್ಷನ್ 46 ಅನ್ನು ತೆಗೆದುಹಾಕುವುದು ಮಸೂದೆಯ ಪ್ರಮುಖ ಪ್ರಸ್ತಾಪಗಳಲ್ಲಿ ಒಂದಾಗಿದೆ. 2015ರಲ್ಲಿಯೇ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ‘ಪರಮಾಣು ಅಪಘಾತದ ಸಂತ್ರಸ್ತರು ಪರಮಾಣು ಪೂರೈಕೆದಾರರ ವಿರುದ್ಧ ನಾಗರಿಕ ಕಾನೂನು ಹಕ್ಕುಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲು ಸೆಕ್ಷನ್ 46 ಅನುಮತಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿತ್ತು. ಆದಾಗ್ಯೂ, ಜಾಗತಿಕ ಪೂರೈಕೆದಾರರು ಈ ಸೆಕ್ಷನ್‌ಅನ್ನು ಅನ್ವಯಿಸುವಿಕೆ ಬಗ್ಗೆ ಇನ್ನೂ ಕಳವಳ ವ್ಯಕ್ತಪಡಿಸುತ್ತಿದ್ದರು. ಇದೀಗ, ಆ ಸೆಕ್ಷನ್‌ಅನ್ನೇ ತೆಗೆದುಹಾಕಲು ಸರ್ಕಾರ ಮುಂದಾಗಿದೆ.

ಈ ಲೇಖನ ಓದಿದ್ದೀರಾ?: ‘ವಿಕಾಸ್ ಭಾರತ್ ಶಿಕ್ಷಾ ಅಧಿಷ್ಠಾನ’ ಮಸೂದೆ: ಕೇಂದ್ರದಿಂದ ಉನ್ನತ ಶಿಕ್ಷಣದ ಅತಿಕ್ರಮಣ; ಮಸೂದೆ ಹೇಳುವುದೇನು?

ಸೆಕ್ಷನ್‌ ರದ್ದತಿಯನ್ನು ಲೋಕಸಭೆಯಲ್ಲಿ ವಿರೋಧಿಸಿ ಕಾಂಗ್ರೆಸ್‌ ನಾಯಕ, ಚಂಡೀಗಢ ಸಂಸದ ಮನೀಶ್ ತಿವಾರಿ ಅವರು, ”ದೋಷಯುಕ್ತ ಪರಮಾಣ ಪೂರೈಕೆಯ ಸಂದರ್ಭದಲ್ಲಿ ಪೂರೈಕೆದಾರರ ವಿರುದ್ಧದ ಯಾವುದೇ ಕ್ರಮಕ್ಕೆ ಆಸ್ಪದವಿಲ್ಲದಂತೆ ಸೆಕ್ಷನ್‌ಅನ್ನು ತೆಗೆದುಹಾಕುವುದು ಅಪಾಯಕಾರಿ” ಎಂದು ವಾದಿಸಿದ್ದಾರೆ.

ಹಾಲಿ ಅಣು ವಿದ್ಯುತ್ ಸ್ಥಾವರಗಳು ಮತ್ತು ಅಪಾಯಗಳು

ಪ್ರಸ್ತುತ, ಸರ್ಕಾರಿ ನಿಯಂತ್ರಣದಲ್ಲಿಯೇ ಅಣು ವಿದ್ಯುತ್‌ ಕ್ಷೇತ್ರವು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಸುರಕ್ಷತಾ ಸಮಸ್ಯೆಗಳಿಂದ ಜನರು ತತ್ತರಿಸಿದ್ದಾರೆ. ಬಲಿಯಾಗುತ್ತಿದ್ದಾರೆ. ಜಾರ್ಖಂಡ್‌ನ ಜಾದುಗಡದಲ್ಲಿರುವ ಯುರೇನಿಯಂ ಗಣಿಗಳ ಸುತ್ತಲಿನ ಪ್ರದೇಶಗಳ ಜನರು ಕ್ಯಾನ್ಸರ್, ಅಂಗವೈಕಲ್ಯ, ಶ್ವಾಸಕೋಶ ಸಂಬಂಧಿತ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಈ ಪ್ರದೇಶದಲ್ಲಿ ಮಾಲಿನ್ಯ ವಿಪರೀತ ಹೆಚ್ಚಾಗಿದೆ. ಟೈಲಿಂಗ್ಸ್ ಪಾಂಡ್‌ಗಳಿಂದ (ತ್ಯಾಜ್ಯ ವಸ್ತು) ಸೋರಿಕೆಯಾಗಿ ನೀರು ಮತ್ತು ಮಣ್ಣು ಮಾಲಿನ್ಯಗೊಂಡಿವೆ.

ಆಂಧ್ರಪ್ರದೇಶದ ಕಡಪದಲ್ಲಿರುವ ತಿರುಮಲಪಲ್ಲೆ ಯುರೇನಿಯಂ ಗಣಿಗಳು ಹೊರಸೂಸುವ ವಿಷಾನಿಲ ಮತ್ತು ತ್ಯಾಜ್ಯಗಳಿಂದ ನೀರು ಮಾಲಿನ್ಯಗೊಂಡು ಬೆಳೆಗಳು ನಾಶವಾಗಿವೆ. ಚರ್ಮ ರೋಗಗಳು ಹೆಚ್ಚಿವೆ. ಅಂತರ್ಜಲವೂ ಮಾಲಿನ್ಯಗೊಂಡಿದೆ.

ಬಿಹಾರದಲ್ಲಿಯೂ ಯುರೇನಿಯಂ ಗಣಿಗಾರಿಕೆ ಹೆಗ್ಗಿಲ್ಲದೆ ನಡೆಯುತ್ತಿದ್ದು, 2025ರ ಅಧ್ಯಯನದ ಪ್ರಕಾರ, ಬಿಹಾರದ ಆರು ಜಿಲ್ಲೆಗಳ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆಯಾಗಿದೆ. ಶಿಶುಗಳ ಆರೋಗ್ಯ ಅಪಾಯದಲ್ಲಿದೆ ಎಂದು ವರದಿಯಾಗಿದೆ.

ಅಲ್ಲದೆ, ತರುಪುರ್, ನರೋರಾ, ಕಲ್ಪಾಕ್ಕಂನಲ್ಲಿ ಹೆವಿ ವಾಟರ್ ಮತ್ತು ರೇಡಿಯೋಆಕ್ಟಿವ್ (ಅಣು) ಸೋರಿಕೆಗಳ ಘಟನೆಗಳು ಸಂಭವಿಸಿದ್ದು, ತೀವ್ರ ಹಾನಿ ಉಂಟುಮಾಡಿವೆ. ಸರ್ಕಾರವೇ ಅಣು ವಿದ್ಯುತ್ ಸ್ಥಾವರಗಳನ್ನು ನಿರ್ವಹಿಸುವಾಗಲೇ ಹತ್ತಾರು ಸಮಸ್ಯೆಗಳು ತಲೆದೂರಿರುವಾಗ, ಲಾಭವೇ ಏಕಮೇವ ಗುರಿಯೆಂದು ಓಡುತ್ತಿರುವ ಖಾಸಗಿ ಕಂಪನಿಗಳು ಈ ಕ್ಷೇತ್ರವನ್ನು ಪ್ರವೇಶಿಸಿದರೆ, ಪರಿಣಾಮ ಏನಾಗಲಿದೆ?

ಖಾಸಗೀಕರಣ ಮತ್ತು ಭವಿಷ್ಯದ ಅಪಾಯಗಳು

ನಾನಾ ರೀತಿಯ ವಿನಾಯತಿಗಳನ್ನು ಪಡೆಯುವ ಲಾಭ-ಕೇಂದ್ರಿತ ಕಂಪನಿಗಳಲ್ಲಿ ಅಣು ದುರಂತಗಳು (ಚೆರ್ನೊಬಿಲ್, ಫುಕುಷಿಮಾ) ಹೆಚ್ಚು ಸಂಭವಿಸುವ ಸಾಧ್ಯತೆಗಳಿವೆ. ಹೆಚ್ಚು ಉತ್ಪಾದನೆ ಮತ್ತು ಅಧಿಕ ಲಾಭದ ಬೆನ್ನತ್ತುವ ಕಂಪನಿಗಳು ಸುರಕ್ಷತಾ ಮಾನದಂಡಗಳನ್ನು ಮೀರಿ, ಅದರಲ್ಲು ವಿನಾಯತಿಗಳಿರುವಾಗ ಹೆಗ್ಗಿಲ್ಲದೆ ಕಾರ್ಯಾಚರಣೆ ನಡೆಸಲು ಮುಂದಾಗುತ್ತವೆ. ಇದು, ಗಂಭೀರ ಅಪಾಯಗಳಿವೆ ಎಡೆ ಮಾಡಿಕೊಡುತ್ತದೆ.

ಜೊತೆಗೆ, SHANTI ಮಸೂದೆಯು ಪರಮಾಣು ದುರಂತಗಳಲ್ಲಿ ಪೂರೈಕೆದಾರರನ್ನು ಹೊಣೆಗಾರಿಕೆಯಿಂದ ಹೊರಗಿಡುವುದರಿಂದ, ಅವರು ದೋಷಯುಕ್ತ ಸಾಮಗ್ರಿಗಳನ್ನು ಪೂರೈಕೆ ಮಾಡುವ ಸಾಧ್ಯತೆಗಳಿರುತ್ತವೆ. ಇದರಿಂದ, ತೀವ್ರ ದುರಂತಗಳು-ಅಪಾಯಗಳು ಸಂಭವಿಸುವುದರಲ್ಲಿ ಯಾವುದೇ ಅನುಮಾನವಿರದು.

ಎಲ್ಲಕ್ಕಿಂತ ಮುಖ್ಯವಾಗಿ, ಪರಿಸರ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಖಾಸಗಿ ಕಂಪನಿಗಳು ವೆಚ್ಚ ಕಡಿತಗೊಳಿಸಿ ಸುರಕ್ಷತೆಯನ್ನು ನಿರ್ಲಕ್ಷಿಸುತ್ತವೆ. ಯುರೇನಿಯಂ (ಕಲ್ಲಿದ್ದಲು) ಗಣಿಗಾರಿಕೆಯು ಹೆಗ್ಗಿಲ್ಲದೆ ನಡೆಯುತ್ತದೆ. ಪರಿಣಾಮ, ಹಲವಾರು ಭೂಪ್ರದೇಶ, ಮುಖ್ಯವಾಗಿ ಅರಣ್ಯ ಪ್ರದೇಶವು ತೀವ್ರವಾಗಿ ನಾಶವಾಗುತ್ತದೆ. ಜೊತೆಗೆ, ಆ ಪ್ರದೇಶ ಜನರು ಸೇರಿದಂತೆ ಪ್ರಾಣಿ ಸಂಕುಲದ ಮೇಲೆ ಅಪಾರ ಅಪಾಯವಾಗುತ್ತದೆ. ಮುಂದುವರೆದು, ಅಣು ವಿದ್ಯುತ್‌ ಸ್ಥಾವರಗಳ ವಿಚಾರದಲ್ಲಿಯೂ ಇದೇ ಆಗುತ್ತದೆ. ಅಂತಹ ದುರ್ಘಟನೆಗೆ ಭೋಪಾಲ್ ಅನಿಲ ದುರಂತ ನಮ್ಮ ಕಣ್ಣೆದುರೇ ಇದೆ.

ಗಮನಾರ್ಹವಾಗಿ, 2021ರ ಸೆಪ್ಟೆಂಬರ್‌ನಲ್ಲಿ ಅದಾನಿ ಪೋರ್ಟ್ಸ್ ನಿರ್ವಹಿಸುವ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ‘ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್’ (DRI) ಸುಮಾರು 21,000 ಕೋಟಿ ರೂ. ಮೌಲ್ಯದ 2,988 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡಿತು. ಇದು ಭಾರತದಲ್ಲಿ ಇಲ್ಲಿಯವರೆಗೆ ಜಪ್ತಿ ಮಾಡಲಾದ ಬೃಹತ್ ಪ್ರಮಾಣದ ಮಾದಕ ವಸ್ತು. ಈ ಹೆರಾಯಿನ್‌ಅನ್ನು ಅಫ್ಘಾನಿಸ್ತಾನದಿಂದ ಇರಾನ್‌ನ ಅಬ್ಬಾಸ್‌ ಬಂದರು ಮೂಲಕ ಭಾರತಕ್ಕೆ ‘ಸೆಮಿ-ಪ್ರಾಸೆಸ್ಡ್‌ ಟಾಲ್ಕ್‌ ಸ್ಟೋನ್’ ಎಂದು ಹೇಳಿಕೊಂಡು ತರಲಾಗಿತ್ತು. ಈ ಹೆರಾಯಿನ್‌ ಮಾರಾಟದಿಂದ ಬರುವ ಹಣವನ್ನು ಲಷ್ಕರ್-ಎ-ತೊಯ್ಬಾ  ಸಂಘಟನೆಗೆ ಒದಗಿಸುವ ಉದ್ದೇಶ ಹೊಂದಿತ್ತು ಎಂದು ಹೇಳಲಾಗಿದೆ. ಇದನ್ನು ಡ್ರಗ್ ಸ್ಮಗ್ಲಿಂಗ್ ಮಾತ್ರವಲ್ಲ, ನಾರ್ಕೋ-ಟೆರರಿಸಂ ಎಂದೂ ಬಣ್ಣಿಸಲಾಗಿದೆ. ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದ್ದರೂ, ಬಂದರನ್ನು ನಿರ್ವಹಿಸುತ್ತಿದ್ದ ‘ಅದಾನಿ ಪೋರ್ಟ್‌’ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. NDPS ನ್ಯಾಯಾಲಯವು ಹೆರಾಯಿನ್ ಸಾಗಾಟದಿಂದ ಅದಾನಿ ಪೋರ್ಟ್ ಲಾಭ ಪಡೆದಿರಬಹುದೇ ಎಂಬುದನ್ನು ತನಿಖೆ ನಡೆಸಲು ಡಿಆರ್‌ಐಗೆ ಸೂಚಿಸಿತ್ತು. ಆದಾಗ್ಯೂ, ಈವರೆಗೆ ಯಾವುದೇ ಕ್ರಮ-ತನಿಖಾ ವರದಿಯ ಮಾಹಿತಿ ಹೊರಬಂದಿಲ್ಲ.

ಬಂದರು ನಿರ್ವಹಣೆಯನ್ನು ಖಾಸಗಿಯವರಿಗೆ (ಅದಾನಿ) ನೀಡಿದ್ದರಿಂದ, ಇಂತಹ ಅಕ್ರಮ ಮಾದಕ ಜಾಲದ ಕಾರ್ಯಾಚರಣೆಗಳು ನಡೆದಿವೆ. ಇನ್ನು, ಅಣು ವಿದ್ಯುತ್ ಸ್ಥಾವರಗಳನ್ನು ತೆರೆಯಲು ಅದಾನಿಗೆ ಅವಕಾಶ ದೊರೆತರೆ ಏನೆಲ್ಲ ಸಮಸ್ಯೆ/ದುರಂತಗಳು ಎದುರಾಗಬಹುದು?

ಮುಂದ್ರಾ ಪ್ರಕರಣದಲ್ಲಿ ವ್ಯವಸ್ಥೆಯ ‘ಲೂಪ್‌ಹೋಲ್ಸ್’ ಬಳಸಿಕೊಂಡು ಡ್ರಗ್ ಸ್ಮಗ್ಲಿಂಗ್ ನಡೆದಿದ್ದಂತೆ, ಅಣು ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ದುರ್ಬಲ ಸುರಕ್ಷತಾ ವ್ಯವಸ್ಥೆಗಳಿಂದಾಗಿ ಭಯಾನಕ ದುರಂತಗಳು ನಡೆಯಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

ಈ ಎಲ್ಲ ಕಾರಣಗಳಿಂದಾಗಿಯೇ, ವಿಪಕ್ಷಗಳು ಹೊಸ ಮಸೂದೆಯನ್ನು ಬಲವಾಗಿ ವಿರೋಧಿಸಿವೆ. ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರು, ಹೊಸ ಮಸೂದೆಯು ರಾಷ್ಟ್ರೀಯ ಸುರಕ್ಷತೆಗೆ ಅಪಾಯವೊಡ್ಡುತ್ತದೆ. ತೆರಿಗೆದಾರರ ಮೇಲೆ ಹೊರೆ ಹಾಕುತ್ತದೆ. ದುರಂತದಲ್ಲಿ ಸಂತ್ರಸ್ತರು ನ್ಯಾಯಾಲಯಕ್ಕೆ ಹೋಗಲು ಅವಕಾಶ ಇಲ್ಲದಿರುವುದು ಅನ್ಯಾಯ ಎಸಗುತ್ತದೆ ಎಂದಿದ್ದಾರೆ. ಪರಿಸರವಾದಿಗಳು ಮತ್ತು ಸ್ಥಳೀಯರು ವಿರೋಧಿಸುತ್ತಿದ್ದಾರೆ.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...