ನುಡಿನಮನ: ನಮ್ಮನ್ನು ಪೊರೆದ, ಪ್ರಭಾವಿಸಿದ ಕುಸುಮಾ ಅಮ್ಮ

Date:

ಪ್ರೀತಿಯ ಕುಸುಮಾ ಶಾನಭಾಗ ಅಮ್ಮ ನಮ್ಮನ್ನು ಅಗಲಿದ್ದಾರೆ. ಇಷ್ಟು ದಿನಗಳ ಕಾಲ ನಮ್ಮನ್ನು ಮಕ್ಕಳ ರೀತಿ ಪೊರೆದಿದ್ದ ಅವರು ಇಂದು ನಮಗೆ ಹೇಳದೇ ಎದ್ದು ಹೋಗಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದ ಅವರನ್ನು ಅದೇ ಕ್ಯಾನ್ಸರ್ ಕೊನೆಗೂ ಕರೆದುಕೊಂಡಿದೆ.. ಹೋಗಿ ಬನ್ನಿ ಅಮ್ಮ…

2017ರಲ್ಲಿ ನಾವು ಉದ್ಯೋಗಕ್ಕಾಗಿ ಯುವಜನರು ಹೋರಾಟ ಆರಂಭಿಸಿದಾಗ ಅಮ್ಮನ ಪರಿಚಯವಾಯ್ತು. ಅಲ್ಲಿಂದ ಅವರು ತಮ್ಮ ಸರಳ ವ್ಯಕ್ತಿತ್ವದ ಮೂಲಕ ನಮ್ಮನ್ನು ಆವರಿಸಿಕೊಂಡರು. ಪ್ರಜಾವಾಣಿ ಪತ್ರಿಕೆಯಲ್ಲಿ ನಮ್ಮ ಹೋರಾಟದ ವರದಿ, ನಮ್ಮ ಸಂದರ್ಶನ ಬರುವಂತೆ ಅಮ್ಮ ಶ್ರಮ ವಹಿಸಿದ್ದರು. ಅದೆಷ್ಟು ಬಾರಿ ನಮ್ಮನ್ನು ಮನೆಗೆ ಕರೆದು ಪ್ರೀತಿಯಿಂದ ನೋಡಿಕೊಂಡರು ಎಂಬುದಕ್ಕೆ ಲೆಕ್ಕವಿಲ್ಲ. ತಾನು ಮಾಂಸ ತಿನ್ನದಿದ್ದರೂ ನಮಗೆಲ್ಲ ನೀವು ಮಾಡಿಕೊಳ್ಳಿ ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಅವರ ಜೀವದ ಭಾಗವೆಂಬಂತೆ ಇದ್ದ ಪ್ರೀತಿಯ ನಾಯಿ ‘ಪುಟ್ಟು’ಗೆ ಮೊಟ್ಟೆ ಎಲ್ಲಾ ಕೊಡುತ್ತಿದ್ದರು..

ಇದನ್ನು ಓದಿದ್ದೀರಾ? ಹಿರಿಯ ಪತ್ರಕರ್ತೆ ಕುಸುಮಾ ಶಾನಭಾಗ ಇನ್ನಿಲ್ಲ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಂದಿನಿ ಲೇ ಔಟ್‌ನಲ್ಲಿದ್ದ ಅವರ ಮನೆಯಿಂದ ಹಿಡಿದು, ಹೆಬ್ಬಾಳ ಆನಂತರ ಕೆಂಗೇರಿ ಉಪನಗರದವರೆಗೂ ಅಮ್ಮ ಮತ್ತು ನಮ್ಮ ಒಡನಾಟ ಮರೆಯಲಾಗದು. ಪುಟ್ಟುವಿನ ಆಸ್ಪತ್ರೆಗೆ ತೋರಿಸಲು ಅಮ್ಮ ತೋರಿದ ಸಂಯಮ ಹೇಳತೀರದು. ಊರಿಗೆ ಹೋಗಬೇಕಾದರೆ ಅದನ್ನು ನೋಡಿಕೊಳ್ಳಲು ಬಹಳ ಕಾಳಜಿ ವಹಿಸಿ, ಹೆಚ್ಚು ಊರಿಗೆ ಹೋಗುತ್ತಿರಲಿಲ್ಲ. ಆನಂತರ ಪುಟ್ಟು ತೀರಿಕೊಂಡಾಗ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಿದ್ದರು. ಆದರೆ ಒಂದು ವರ್ಷದ ಹಿಂದೆ ಅದು ತೀರಿಕೊಂಡ ನಂತರ ಅಮ್ಮನಲ್ಲಿ ಬದುಕುವ ಆಸೆಯೇ ತೀರಿಹೋಯ್ತು ಎಂಬಂತೆ ಇದ್ದರು.

ಕುಸುಮಾ 3
ಅಮ್ಮನ ನಂದಿನಿ ಲೇ ಔಟ್ ಮನೆಯಲ್ಲಿ ಟಿವಿ ನೋಡುತ್ತಿರುವುದು. “ಮುತ್ತು ಬೈಬೇಡಿ ನನಗೆ ಬಿಗ್ ಬಾಸ್ ನೋಡೊದು ಇಷ್ಟ ಅಂತ ಅಮ್ಮ ಹೇಳ್ತಿದ್ರು.”

ಕಳೆದ ಆರು ತಿಂಗಳಿಂದ ಅಮ್ಮನ ಆರೋಗ್ಯ ಕ್ಷೀಣಿಸುತ್ತಿತ್ತು. ಊಟ ಸೇರುತ್ತಿರಲಿಲ್ಲ, ತೂಕ ಕಡಿಮೆಯಾಗುತ್ತಲೇ ಇತ್ತು. ಕಳೆದ ತಿಂಗಳು ಹೋದಾಗ ಡಾಕ್ಟರ್ ದಪ್ಪ ಆಗಲು ಹೇಳಿದ್ದಾರೆ. ಆದರೆ ಆಪರೇಷನ್ ಮಾಡಬಹುದು ಎಂದಿದ್ದಾರೆ ಎಂದು ಹೇಳಿದ್ದರು. ನಾವು ಅದೇ ಅಶಯದಲ್ಲಿದ್ದವು. ವಾರದ ಹಿಂದೆ ಫೋನ್ ಮಾಡಿದಾಗಲೂ ಅದನ್ನೇ ಕೇಳುತ್ತಿದ್ದೆವು. ಆದರೆ ಇಂದು ಅಮ್ಮ ಸಾಕು ಈ ನೋವು ಅನಿಸಿ ತೆರಳಿದ್ದಾರೆ.

ಅಮ್ಮ ನೀವು ನಮ್ಮ ಮನಸ್ಸಿನಾಳದಲ್ಲಿದ್ದೀರಿ.. ನಿಮ್ಮ ನೆನಪು ಎದೆಯಾಳದಲ್ಲಿರುತ್ತದೆ.. ನಿಮಗೆ ಪ್ರೀತಿಯ ವಿದಾಯಗಳು.

ಮುತ್ತುರಾಜು
ಮುತ್ತುರಾಜು
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಮುತ್ತುರಾಜು
ಮುತ್ತುರಾಜು
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...