ಪಾಲ್ಘರ್‌ ಪಾದಯಾತ್ರೆ | ಕಿವಿಯಿಲ್ಲದ ಸರ್ಕಾರಕ್ಕೆ ಕಾಲ್ನಡಿಗೆಯ ಸವಾಲು!

Date:

ಎರಡು ದಿನಗಳಲ್ಲಿ 55 ಕಿಲೋಮೀಟರ್ ನಡೆದು ಜನವರಿ 21ರಂದು ಪಾಲ್ಘರ್ ಕಲೆಕ್ಟರ್ ಕಚೇರಿಯನ್ನು ತಲುಪಿದ್ದರು. ಅಲ್ಲಿ ಅನಿರ್ದಿಷ್ಟಕಾಲದ ಧರಣಿ ನಡೆಸಿದ್ದರು. ಪೊಲೀಸರು ಅವರನ್ನು ಕಚೇರಿ ಆವರಣಕ್ಕೆ ಬಿಡದಿದ್ದರಿಂದ ರಸ್ತೆಯನ್ನು ಬ್ಲಾಕ್ ಮಾಡಿ ಪ್ರತಿಭಟನೆ ಮಾಡಿದ್ದರು. ಜನವರಿ 21ರ ರಾತ್ರಿ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆದ ನಂತರ, ಕೆಲವು ಬೇಡಿಕೆಗಳನ್ನು ಒಪ್ಪಿಕೊಳ್ಳಲಾಯಿತು. ಜನವರಿ 22ರಂದು ಪ್ರತಿಭಟನೆಯನ್ನು ನಿಲ್ಲಿಸಲಾಯಿತು.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದೊಡ್ಡ ಪ್ರತಿಭಟನೆ, ಪಾದಯಾತ್ರೆಯ ಬಗ್ಗೆ ನೀವು ಕೇಳಿರಬಹುದು. ಸುಮಾರು 50,000ಕ್ಕೂ ಹೆಚ್ಚು ಬುಡಕಟ್ಟು ಜನರು, ರೈತರು ಮತ್ತು ಕೃಷಿ ಕೂಲಿಕಾರರು ಚಾರೋಟಿಯಿಂದ ಪಾಲ್ಘರ್ ಕಲೆಕ್ಟರ್ ಕಚೇರಿಗೆ ಸುಮಾರು 55 ಕಿಲೋಮೀಟರ್ ನಡೆದುಕೊಂಡು ಬಂದರು. ಇದನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಅಥವಾ ಸಿಪಿಐ(ಎಂ) ಸಂಘಟಿಸಿತ್ತು. ಈ ಯಾತ್ರೆ ಜನವರಿ 19, 2026ರಿಂದ ಪ್ರಾರಂಭವಾಗಿ, ಜನವರಿ 22ರಂದು ಕೊನೆಗೊಂಡಿತು.

ಪಾಲ್ಘರ್ ಜಿಲ್ಲೆಯ ಕಾಡು ಬೆಟ್ಟಗಳಿಂದ ನೋವು, ಹಸಿವು, ಕೋಪ, ನಿರಾಶೆ ಎಲ್ಲವನ್ನೂ ಹೊತ್ತು ಜನರು ಹೊರಟಿದ್ದರು. ಬುಡಕಟ್ಟು ಜನರು, ಸಣ್ಣ ರೈತರು, ಕೃಷಿ ಕೂಲಿಕಾರರು, ಹೆಣ್ಣು ಮಕ್ಕಳು, ವೃದ್ಧರು, ಮಕ್ಕಳೂ ಸೇರಿ  ನೂರಾರು ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾರೆ. ಇದೇ ಯಾತ್ರೆ ಮತ್ತೆ ಮತ್ತೆ ಯಾಕೆ? ಇವರು ಯಾವಾಗಲೂ ನಡೆದು ಬರಬೇಕಾದ ಜನರೇ? ಅವರ ಬೇಡಿಕೆಗಳನ್ನು ಕೇಳುವವರೇ ಇಲ್ಲವೇ? ಎಂಬ ಪ್ರಶ್ನೆಗಳು ಜನಸಾಮಾನ್ಯರನ್ನ ಕಾಡುವುದು ಸಹಜ.ಪಾಲ್ಘರ್ ಪ್ರಕೃತಿಯಿಂದ ಶ್ರೀಮಂತ, ಆದರೆ ಜನರು ಬಡವರು. ಕಾಡಿದೆ, ಬೆಟ್ಟ ಇದೆ, ಮಳೆ ಇದೆ. ಆದರೆ  ಭೂಮಿ ಮಾತ್ರ ಅವರ ಹೆಸರಿಗಿಲ್ಲ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅರಣ್ಯ ಹಕ್ಕು ಕಾಯ್ದೆ ಇದೆ ಅಂತೆ. ಆದರೆ ಕಾನೂನು ಪುಸ್ತಕದಲ್ಲಿ ಮಾತ್ರ. ನೆಲದಲ್ಲಿನ ಪರಿಸ್ಥಿತಿ ಬೇರೆಯೇ ಇದೆ. ಅಲ್ಲಿ ಇನ್ನೂ ಕೇಸು, ಪೊಲೀಸ್ ಭೀತಿ, “ಅತಿಕ್ರಮಣದಾರ” ಅನ್ನೋ ಮುದ್ರೆಯನ್ನ ಒತ್ತಲಾಗಿದೆ. ಒಂದು ಸರ್ಕಾರ ತನ್ನದೇ ಜನರನ್ನ ಕಳ್ಳರಂತೆ ನೋಡಿದರೆ ಅದು ಆಡಳಿತವೇ? ಅಥವಾ ಅಧಿಕಾರದ ದರ್ಪವೇ?  ಒಂದು ಕ್ಷಣ ಯೋಚಿಸಿ. ನಾವು ಹುಟ್ಟಿದ ಮನೆಯಲ್ಲೇ ನಮಗೆ “ಇದು ನಿನ್ನದಲ್ಲ” ಅಂದರೆ ಹೇಗಿರುತ್ತೆ, ಆ ನೋವನ್ನೇ ಈ ಜನರು ದಿನವೂ ಬದುಕುತ್ತಿರುವುದು. 

ಜನವರಿ 19, 2026ರಂದು ಪಾಲ್ಘರ್ ಜಿಲ್ಲೆಯ ಚಾರೋಟಿ ನಾಕಾದಿಂದ ಈ ದೊಡ್ಡ ಪಾದಯಾತ್ರೆ ಪ್ರಾರಂಭವಾಯಿತು. ಸಿಪಿಐ(ಎಂ) ನಾಯಕರು ಹಾಗೂ ಅಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) ಸದಸ್ಯರು ಮುನ್ನಡೆಸಿದರು. ಈ ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಬುಡಕಟ್ಟು ಸಮುದಾಯದವರು, ರೈತರು, ಕೃಷಿ ಕೂಲಿಕಾರರು,  ಮಹಿಳೆಯರು ಯುವಕರು ಮತ್ತು ಮಕ್ಕಳು. ಅವರು ಎರಡು ದಿನಗಳಲ್ಲಿ 55 ಕಿಲೋಮೀಟರ್ ನಡೆದು ಜನವರಿ 21ರಂದು ಪಾಲ್ಘರ್ ಕಲೆಕ್ಟರ್ ಕಚೇರಿಯನ್ನು ತಲುಪಿದ್ದರು. ಅಲ್ಲಿ ಅನಿರ್ದಿಷ್ಟಕಾಲದ ಧರಣಿ ನಡೆಸಿದ್ದರು. ಪೊಲೀಸರು ಅವರನ್ನು ಕಚೇರಿ ಆವರಣಕ್ಕೆ ಬಿಡದಿದ್ದರಿಂದ ರಸ್ತೆಯನ್ನು ಬ್ಲಾಕ್ ಮಾಡಿ ಪ್ರತಿಭಟನೆ ಮಾಡಿದ್ದರು. ಜನವರಿ 21ರ ರಾತ್ರಿ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆದ ನಂತರ, ಕೆಲವು ಬೇಡಿಕೆಗಳನ್ನು ಒಪ್ಪಿಕೊಳ್ಳಲಾಯಿತು. ಜನವರಿ 22ರಂದು ಪ್ರತಿಭಟನೆಯನ್ನು ನಿಲ್ಲಿಸಲಾಯಿತು. ಈ ಯಾತ್ರೆಯಲ್ಲಿ ಕೆಂಪು ಬಾವುಟಗಳು, ಘೋಷಣೆಗಳು ಮತ್ತು ಸಾಮೂಹಿಕ ಹಾಡುಗಳು ಕೇಳಿ ಬಂದವು. ಸಿಪಿಐ(ಎಂ) ನಾಯಕ ಅಶೋಕ್ ಧವಳೆ ಹೇಳಿದಂತೆ, “ಇದು ನಮ್ಮ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ”. 

ಸರ್ಕಾರಗಳೂ ಬದಲಾಗುತ್ತಿವೆ, ಅಧಿಕಾರದಲ್ಲಿರುವ ಪಕ್ಷಗಳೂ ಬದಲಾಗುತ್ತಿವೆ. ಆದರೆ ಪಾಲ್ಘರ್‌ನ ಬುಡಕಟ್ಟು ಜನರ ಬದುಕು ಮಾತ್ರ ಏಕೆ ಹಾಗೆಯೇ ಉಳಿದಿದೆ. ಪಾಲ್ಘರ್ ಜಿಲ್ಲೆ ಮುಂಬೈಗೆ ಹತ್ತಿರವೇ ಇದೆ. ಒಂದು ಕಡೆ ದೇಶದ ಆರ್ಥಿಕ ರಾಜಧಾನಿ, ಇನ್ನೊಂದು ಕಡೆ ಹಕ್ಕುಗಳಿಲ್ಲದ ಜನ. ಕಾಡು, ಬೆಟ್ಟ, ಮಳೆ, ಹಸಿರು ಎಲ್ಲವೂ ಇದೆ. ಆದರೆ ಭೂಮಿ ಅವರದ್ದಾಗಿಲ್ಲ. ತಲೆಮಾರುಗಳಿಂದ ಕೃಷಿ ಮಾಡಿದ ಜಮೀನುಗಳಿಗೂ ಸರಿಯಾದ ದಾಖಲೆಗಳಿಲ್ಲ.
 
ಅರಣ್ಯ ಹಕ್ಕು ಕಾಯ್ದೆ ಬಂದೂ ವರ್ಷಗಳಾದರೂ, “ಈ ಭೂಮಿ ನಮ್ಮದು” ಎಂಬ ಕಾಗದ ಇನ್ನೂ ಇವರ ಕೈಗೆ ಬಂದಿಲ್ಲ. ಹಾಗಂತ ಇದು ಮೊದಲ ಯಾತ್ರೆಯಲ್ಲ. 2018ರಲ್ಲಿ ನಡೆದ “ಕಿಸಾನ್ ಲಾಂಗ್ ಮಾರ್ಚ್” ನೆನಪಿರಬಹುದು. ಆಗಲೂ ಇದೇ ಪಾಲ್ಘರ್, ನಾಶಿಕ್ ಭಾಗದ ರೈತರು ಮುಂಬೈವರೆಗೆ ನಡೆದು ಬಂದಿದ್ದರು. ಇದು ಮಹಾರಾಷ್ಟ್ರದ ನಾಸಿಕ್‌ನಿಂದ ಮುಂಬೈಗೆ ನಡೆದ ದೊಡ್ಡ ಪಾದಯಾತ್ರೆಯಾಗಿತ್ತು. ಸಿಪಿಐ(ಎಂ) ಮತ್ತು ಅಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) ಸಂಘಟಿಸಿದ್ದ ಈ ಯಾತ್ರೆಯಲ್ಲಿ ಸುಮಾರು 25,000ರಿಂದ 70,000ಕ್ಕೂ ಹೆಚ್ಚು ರೈತರು, ಬುಡಕಟ್ಟು ಜನರು, ಕೃಷಿ ಕೂಲಿಕಾರರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಆಗ ಭರವಸೆಗಳು ಸಿಕ್ಕಿದ್ದವು. ಆದರೆ ಭರವಸೆಗಳು ಕಾಗದದಲ್ಲೇ ಉಳಿದವು. ಪ್ರತಿ ಬಾರಿ ಸರ್ಕಾರಗಳು ಹೇಳಿದ್ದು ಒಂದೇ. ಪರಿಶೀಲನೆ ಮಾಡುತ್ತೇವೆ, ಸಮಿತಿ ರಚಿಸುತ್ತೇವೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಸುತ್ತೇವೆ ಅಂತ. ಆದರೆ ನೆಲಮಟ್ಟದಲ್ಲಿ ಏನೂ ಬದಲಾಗಲಿಲ್ಲ. ಆದ್ದರಿಂದ ಈ ಜನರಿಗೆ ಗೊತ್ತಿರುವ ಒಂದು ಭಾಷೆ ಅಂದರೆ ಅದು ನಡಿಗೆಯ ಭಾಷೆ.

ಮುಖ್ಯ ಬೇಡಿಕೆಗಳು ಏನು?

ಇವರ ಬೇಡಿಕೆಗಳು ಅತಿರೇಕವಾದವು ಅಲ್ಲ. ಐಶಾರಾಮಿ ಬದುಕಿಗಾಗಿ ಕೇಳುವ ಬೇಡಿಕೆಗಳೂ ಅಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಹಕ್ಕು ಪತ್ರ ಮಾತ್ರ.

ಅರಣ್ಯ ಹಕ್ಕುಗಳ ಕಾಯ್ದೆ (FRA): ಬುಡಕಟ್ಟು ಜನರಿಗೆ ಕಾಡು ಭೂಮಿಯ ಹಕ್ಕುಗಳನ್ನು ನೀಡುವುದು. ತಲೆಮಾರುಗಳಿಂದ ಬೇಸಾಯ ಮಾಡುತ್ತಿರುವ ಜಮೀನಿಗೆ ಕಾನೂನು ಮಾನ್ಯತೆ. 

ಭೂಮಿ ಹಕ್ಕುಗಳು: ದೇವಾಲಯ, ಇನಾಮ್ ಮತ್ತು ಸರ್ಕಾರಿ ಭೂಮಿಯನ್ನು ನಿಜವಾದ ಬೆಳೆಗಾರರ ಹೆಸರಿಗೆ ಬದಲಾಯಿಸುವುದು.

MGNREGA: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪುನಃಸ್ಥಾಪಿಸಿ ಮತ್ತು ಬಲಪಡಿಸುವುದು. ಉದ್ಯೋಗ ದಿನಗಳನ್ನು ಹೆಚ್ಚಿಸುವುದು.

ಸ್ಮಾರ್ಟ್ ಮೀಟರ್ ಯೋಜನೆ: ವಿದ್ಯುತ್ ಸ್ಮಾರ್ಟ್ ಮೀಟರ್‌ಗಳನ್ನು ರದ್ದುಮಾಡುವುದು, ಏಕೆಂದರೆ ಅದು ರೈತರಿಗೆ ಹೊರೆಯಾಗುತ್ತದೆ.

ಕಾರ್ಮಿಕ ಕೋಡ್‌ಗಳು: ನಾಲ್ಕು ಹೊಸ ಕಾರ್ಮಿಕ ಕಾನೂನುಗಳನ್ನು ಹಿಂಪಡೆಯಿರಿ, ಅದು ಕೂಲಿಕಾರರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. 

ಬಂದರು ಯೋಜನೆಗಳು: ವಧವನ್ ಮತ್ತು ಮುರ್ಬೆ ಬಂದರುಗಳನ್ನು ರದ್ದುಮಾಡಿ. ಅದು ಪರಿಸರಕ್ಕೆ ಹಾನಿ ಮಾಡಿ, ಮೀನುಗಾರರ ಜೀವನನ್ನ ನಾಶ ಮಾಡುತ್ತದೆ. 

ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ಕೊಡುವುದು.  ಕನಿಷ್ಠ ಬೆಂಬಲ ಬೆಲೆ ಕೇವಲ ಘೋಷಣೆಯಾಗದೇ ಜಾರಿಗೆ ಬರಬೇಕು. 

ಕುಡಿಯುವ ನೀರು, ನೀರಾವರಿ, ಶಿಕ್ಷಣ, ಉದ್ಯೋಗ, ರೇಷನ್, ಆರೋಗ್ಯ ಸೌಲಭ್ಯಗಳು. PESA ಕಾಯ್ದೆ (ಪಂಚಾಯತ್ ಎಕ್ಸ್‌ಟೆನ್ಷನ್ ಟು ಶೆಡ್ಯೂಲ್ಡ್ ಏರಿಯಾಸ್) ಅನುಷ್ಠಾನದಂತಹ ಮೂಲಭೂತ ಸೌಲಭ್ಯಗಳನ್ನ ಒದಗಿಸುವುದು. ಇವುಗಳಲ್ಲಿ ಒಂದನ್ನೂ ಸಂಪೂರ್ಣವಾಗಿ ಜಾರಿಗೊಳಿಸಿಲ್ಲ ಅನ್ನೋದೇ ಯಾತ್ರೆಗೆ ಮೂಲ ಕಾರಣವಾಗಿದೆ. ಈ ಬೇಡಿಕೆಗಳು ರೈತರ ದೈನಂದಿನ ಬದುಕಿನ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತವೆ. ಅವರು ಹೇಳುತ್ತಾರೆ, “ಸರ್ಕಾರ ದೊಡ್ಡ ಕಂಪನಿಗಳನ್ನು ಬೆಂಬಲಿಸುತ್ತದೆ, ನಮ್ಮನ್ನು ಮರೆತಿದೆ” ಅಂತ. ಅವರು ಕೇಳುತ್ತಿರುವುದು ಬದುಕುವ ಕನಿಷ್ಠ ಹಕ್ಕುಗಳನ್ನಇದನ್ನೂ ಕೊಡಲಾರದೆ ಇರುವ ಸರ್ಕಾರ ಯಾವ ನೈತಿಕ ಹಕ್ಕಿನಿಂದ “ವಿಕಸಿತ ಭಾರತ” ಅಂತ ಮಾತಾಡುತ್ತಿದೆ? 

ಈ ಪಾದಯಾತ್ರೆಯ ಪರಿಣಾಮಗಳು ಸ್ಥಳೀಯ ಮತ್ತು ರಾಜ್ಯ ಮಟ್ಟದಲ್ಲಿ ಕಾಣುತ್ತವೆ. ಮೊದಲನೆಯದಾಗಿ, ಸರ್ಕಾರ ಕೆಲವು ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಪಾಲ್ಘರ್ ಜಿಲ್ಲಾ ಕಲೆಕ್ಟರ್ ʼಇಂದು ರಾಣಿ ಜಾಖರ್ʼ ಅವರು FRA ಕ್ಲೈಮ್‌ಗಳನ್ನು ಏಪ್ರಿಲ್ 30, 2026ರೊಳಗೆ ಪರಿಹರಿಲಾಗುವುದು, ಜಲ್ ಜೀವನ್ ಮಿಷನ್ ಕೆಲಸಗಳನ್ನು ಪುನರಾರಂಭಿಸುವುದು, ಭ್ರಷ್ಟಾಚಾರದ ವಿರುದ್ಧ ಕ್ರಮ, PESA ಅನುಷ್ಠಾನ ಮತ್ತು ಖಾಲಿ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಂಯುಕ್ತ ಸಮಿತಿ ರಚಿಸಿ ಭೂಮಿ ನೋಂದಣಿಯನ್ನು ಮಾಡಿಕೊಡುವುದಾಗಿ ಹೇಳಿದ್ದಾರೆ. ಆದರೆ ರಾಜ್ಯ ಮಟ್ಟದ ಬೇಡಿಕೆಗಳು ಉದಾ: ಕಾರ್ಮಿಕ ಕೋಡ್‌ಗಳು, ಬಂದರುಗಳು ಇನ್ನೂ ಹಾಗೆಯೇ ಇದೆ. ಸಿಪಿಐ(ಎಂ) ಹೇಳಿದಂತೆ, ಹೋರಾಟ ಮುಂದುವರಿಯುತ್ತದೆ.

ಸರ್ಕಾರಗಳು ಯಾಕೆ ಕಿವಿಗೊಡುತ್ತಿಲ್ಲ?

ಒಂದು ಕಹಿ ಸತ್ಯ ಇಲ್ಲಿದೆ. ಬುಡಕಟ್ಟು ಜನರು ದೊಡ್ಡ ಮತಬ್ಯಾಂಕ್ ಅಲ್ಲ. ಅವರ ಬಳಿ ದೊಡ್ಡ ಹಣ ಇಲ್ಲ. ಟಿವಿ ಸ್ಟುಡಿಯೋಗಳಲ್ಲಿ ಕೂಗಿ ಮಾತನಾಡುವ ಶಕ್ತಿ ಇಲ್ಲ. ಅವರ ಸಮಸ್ಯೆಗಳು TRP ಕೊಡಲ್ಲ, ಹೆಡ್ಲೈನ್ ಆಗಲ್ಲ. ನಗರಗಳ ರಾಜಕೀಯ, ಕಾರ್ಪೊರೇಟ್ ಹೂಡಿಕೆ, ಎಕ್ಸ್‌ಪ್ರೆಸ್‌ವೇ, ಬುಲೆಟ್ ಟ್ರೈನ್ ಇವೆಲ್ಲದರ ನಡುವೆ ಈ ಜನರ ಸಮಸ್ಯೆಗಳು “ಅಪ್ರಿಯ ವಿಷಯ” ಆಗುತ್ತಿವೆ. ಚುನಾವಣೆ ಬಂದಾಗ ಮಾತ್ರ ನೆನಪಾಗುವ ಜನರು ಇವರು.

ಸಿಪಿಐ(ಎಂ) ಈ ಯಾತ್ರೆಯನ್ನು ಸಂಘಟಿಸುವುದು ಕೇವಲ ರಾಜಕೀಯ ಲಾಭಕ್ಕಾಗಿ ಅನ್ನೋ ಆರೋಪಗಳು ಕೇಳಿಬರುತ್ತವೆ. ಆದರೆ ಒಂದು ಪ್ರಶ್ನೆ ಇದೆ. ಸರ್ಕಾರಗಳು ಕೆಲಸ ಮಾಡಿದ್ದರೆ, ಯಾತ್ರೆಯ ಅವಶ್ಯಕತೆಯೇ ಬೀಳುತ್ತಿರಲಿಲ್ಲ. ಯಾತ್ರೆ ರಾಜಕೀಯವಾಗಬಹುದು. ಆದರೆ ಸಮಸ್ಯೆ ರಾಜಕೀಯವಲ್ಲ ಅಲ್ಲವೇ? ಅದು ಅವರ ಬದುಕಿನ ಪ್ರಶ್ನೆ. ಅಲ್ಲಿನ ಜನರು ತಮ್ಮ ಕೆಲಸ ಕಾರ್ಯಗಳನ್ನ ಬಿಟ್ಟು, ಹೊಟ್ಟೆ ಖಾಲಿ ಇಟ್ಟುಕೊಂಡು, ಮಕ್ಕಳನ್ನು ಜೊತೆ ಕರೆದುಕೊಂಡು ನಡೆದು ಬಂದಿದ್ದಾರೆ ಅಂದರೆ, ಅದು ಅವರ “ಆಯ್ಕೆ” ಅಲ್ಲ. ಅದು ಅವರ ಅಸಹಾಯಕತೆ. ಈ ಯಾತ್ರೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದೇ ಹೋದರೆ ಪರಿಣಾಮಗಳು ಗಂಭೀರವಾಗಬಹುದು. ಗ್ರಾಮೀಣ ಅಸಮಾಧಾನ ಹೆಚ್ಚಾಗಬಹುದು.  ಬುಡಕಟ್ಟು ಯುವಜನರಲ್ಲಿ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಹೋಗಬಹುದು. ಶಾಂತ ಹೋರಾಟಗಳು ಕಠಿಣ ರೂಪ ಪಡೆಯುವ ಅಪಾಯ ಇದೆ. ನಗರ–ಗ್ರಾಮಗಳ ಅಂತರ ಇನ್ನೂ ಹೆಚ್ಚಾಗಬಹುದು.

ಇದು ಕೇವಲ ಪಾಲ್ಘರ್ ಸಮಸ್ಯೆ ಅಲ್ಲ. ಇದು ದೇಶದ ಅನೇಕ ಅರಣ್ಯ, ಬುಡಕಟ್ಟು ಪ್ರದೇಶಗಳ ಕಥೆ. ಪ್ರತಿ ಬಾರಿ ಈ ಜನರು ನಡೆದು ಬರಬೇಕು ಅಂದರೆ, ಸಮಸ್ಯೆ ಅವರಲ್ಲ. ಪ್ರಜಾಪ್ರಭುತ್ವದಲ್ಲಿ ಜನರು ರಸ್ತೆ ಹಿಡಿಯಬೇಕಾದ ಸ್ಥಿತಿ ಬರುತ್ತಿದ್ರೆ, ಅದು ವ್ಯವಸ್ಥೆಯ ವೈಫಲ್ಯ. ಪಾಲ್ಘರ್‌ನ ಈ ಪಾದಯಾತ್ರೆ ಒಂದು ಎಚ್ಚರಿಕೆ. ಇದು ಕೇಳಿಸಿಕೊಳ್ಳದ ಧ್ವನಿಗಳ ಕೂಗು. ಈ ಕೂಗಿಗೆ ಕಿವಿಗೊಡದೇ ಹೋದರೆ, ಮುಂದಿನ ದಿನಗಳಲ್ಲಿ ಆ ಧ್ವನಿಗಳು ಇನ್ನೂ ಗಟ್ಟಿಯಾಗಬಹುದು. ಸರ್ಕಾರಗಳು ಈ ಬಾರಿ ಆದರೂ ಅವರ ಸಮಸ್ಯೆಗಳನ್ನ ಕೇಳುತ್ತವೆಯೇ? ಅಥವಾ ಮುಂದಿನ ವರ್ಷ ಮತ್ತೆ ಇದೇ ಜನರು, ಇದೇ ರಸ್ತೆಯಲ್ಲಿ, ಮತ್ತೆ ನಡೆಯಬೇಕಾಗುತ್ತದೆಯೇ? ಮುಂದಿನ ಬಾರಿ ಈ ಜನರು ಮಾತ್ರ ಅಲ್ಲ,  ಪ್ರಜಾಪ್ರಭುತ್ವವೂ ರಸ್ತೆ ಹಿಡಿಯಬೇಕಾಗುತ್ತದೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...