ಇಂಗ್ಲಿಷ್‌- ಖಾಸಗಿ ಶಾಲೆಗಳ ಮೇಲೆ ಪೋಷಕರ ಒಲವು; ಸೋಲುತ್ತಿವೆ ಸರ್ಕಾರಿ ಶಾಲೆಗಳು: ಸಮೀಕ್ಷಾ ವರದಿ

Date:

ಮಕ್ಕಳಿಗೆ 14 ವರ್ಷ ತುಂಬುವವರೆಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವುದು ಸರ್ಕಾರಗಳ ಕರ್ತವ್ಯವೆಂದು ಸಂವಿಧಾನ ವಿಧಿಸಿದ್ದರೆ ಶಿಕ್ಷಣ ವ್ಯವಸ್ಥೆ ಹೇಗಿರುತ್ತಿತ್ತು?

ಬಹುಶಃ ಎಲ್ಲ ಮಕ್ಕಳು ಸರ್ಕಾರಿ ಶಾಲೆಗಳಿಗೇ ಹೋಗುತ್ತಿದ್ದರು. ಸರ್ಕಾರಿ ಶಾಲೆಗಳು ಸದೃಢವಾಗಿರುತ್ತಿದ್ದವು. ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದವು. ಆದರೆ, ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ. ಹೀಗಾಗಿ, ಪೋಷಕರು ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಧಾವಂತದಲ್ಲಿ, ಇಂಗ್ಲಿಷ್ ಮಾಧ್ಯಮ ಮತ್ತು ಖಾಸಗಿ ಶಾಲೆಗಳತ್ತ ಒಲುವು ತೋರುತ್ತಿದ್ದಾರೆ. ಲಕ್ಷಾಂತರ ರೂಪಾಯಿಯನ್ನು ಖಾಸಗಿ ಶಾಲೆಗಳ ಖಜಾನೆಗೆ ಸುರಿಯುತ್ತಿದ್ದಾರೆ.

ಸದ್ಯ, ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಮತ್ತು ನಾನಾ ಸವಲತ್ತುಗಳು ದೊರೆಯುತ್ತಿರುವುದರ ಹೊರತಾಗಿಯೂ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಮತ್ತು ಖಾಸಗಿ ಶಾಲೆಗಳಿಗೆ ಸೇರಿಸಲು ಅಗತ್ಯ, ಅನಿವಾರ್ಯಗಳ ಹೊರತಾಗಿಯೂ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ‘ಇಂಡಿಯನ್‌ ಲಿಟ್ರಸಿ ಪ್ರಾಜೆಕ್ಟ್‌‌’ನ (ಐಎಲ್‌ಪಿ) ಹೊಸ ಅಧ್ಯಯನವು ಬೊಟ್ಟುಮಾಡಿದೆ. ಕರ್ನಾಟಕದ 52% ರಷ್ಟು ಪೋಷಕರು ಖಾಸಗಿ ಶಾಲೆಗಳತ್ತ ಉತ್ಸಾಹ ಹೊಂದಿದ್ದಾರೆ. ಸರ್ಕಾರಿ ಶಾಲೆಗಳು ತಮ್ಮ ಇಮೇಜ್‌ ಅನ್ನು ಕಳೆದುಕೊಳ್ಳುತ್ತಿವೆ ಎಂದು ಅಧ್ಯಯನ ವಿವರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಶಾಲಾ ಶಿಕ್ಷಣದ ಆಯ್ಕೆಗಳು ಮತ್ತು ನಿರೀಕ್ಷೆಗಳನ್ನು ಅರ್ಥೈಸಿಕೊಳ್ಳುವುದು’ ಎಂಬ ಶೀರ್ಷಿಕೆಯಲ್ಲಿ ಐಎಲ್‌ಪಿ ವರದಿ ಬಿಡುಗಡೆ ಮಾಡಿದೆ. ಈ ಸಮೀಕ್ಷೆಯು ಸಂಶೋಧಕ ಪ್ರಮೋದ್ ಶ್ರೀಧರಮೂರ್ತಿ ಮತ್ತು ಎಚ್.ಎಸ್. ಸುಧೀರ ನೇತೃತ್ವದಲ್ಲಿ  2025ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆದಿದೆ. 34 ಶೈಕ್ಷಣಿಕ ಜಿಲ್ಲೆಗಳಲ್ಲಿ 14,149 ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿದೆ. ಪೋಷಕರು ತಮ್ಮ ಮಕ್ಕಳಿಗಾಗಿ ಶಾಲೆಗಳನ್ನು ಆಯ್ಕೆ ಮಾಡುವಾಗ ಅವರ ಮೇಲೆ ಪ್ರಭಾವ ಬೀರುವ ಅಂಶಗಳು, ವೆಚ್ಚ ಹಾಗೂ ಬೋಧನಾ ಗುಣಮಟ್ಟವನ್ನು ಹೇಗೆ ತೂಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅಧ್ಯಯನ ಪ್ರಯತ್ನಿಸಿದೆ.

ಸಮೀಕ್ಷೆಗೆ ಒಳಪಟ್ಟವರಲ್ಲಿ, 52% ಮಂದಿ ತಮ್ಮ ಮಕ್ಕಳು ಖಾಸಗಿ ಶಾಲೆ, 43% ಜನರು ಸರ್ಕಾರಿ ಶಾಲೆ ಹಾಗೂ 4% (477 ಪೋಷಕರು) ಎರಡೂ ರೀತಿಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅವರೆಲ್ಲರ ಕುಟುಂಬದ ಸರಾಸರಿ ಮಾಸಿಕ ಆದಾಯವು ಸುಮಾರು 24,117 ರೂ. ಗಳಾಗಿದೆ. ಇದು ವೈವಿಧ್ಯಮಯ ಸಾಮಾಜಿಕ-ಆರ್ಥಿಕ ಮಿಶ್ರಣವನ್ನು ಪ್ರತಿಬಿಂಬಿಸಿದರೂ, ಹಲವರು ಆರ್ಥಿಕ ಹೊರೆಯನ್ನು ಎದುರಿಸುತ್ತಿದ್ದಾರೆ.

ನೆರೆಹೊರೆ, ಉಚಿತ ಶಿಕ್ಷಣ, ಮಧ್ಯಾಹ್ನ ಊಟ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿ ಹಲವು ರೀತಿಯ ಸೌಲಭ್ಯಗಳಿವೆ ಎಂಬುದನ್ನು ಪೋಷಕರು ಒಪ್ಪಿಕೊಂಡಿದ್ದಾರೆ. ಆದರೂ, ಈ ಸವಲತ್ತುಗಳು ಬೋಧನಾ ಗುಣಮಟ್ಟದ ವಿಶ್ವಾಸವನ್ನು ಖಾತ್ರಿಪಡಿಸುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವು ಉತ್ತಮವಾಗಿಲ್ಲ ಎಂದೂ ಹೇಳಿಕೊಂಡಿದ್ದಾರೆ.

ತಾವು ಖಾಸಗಿ ಶಾಲೆಗಳತ್ತ ಮುಖ ಮಾಡಲು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಕೊರತೆಯೇ ಮುಖ್ಯಕಾರಣವೆಂದು ಸುಮಾರು ಸುಮಾರು 80% ಪೋಷಕರು ಉಲ್ಲೇಖಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತು ಶಾಲಾ ಮೂಲಸೌಕರ್ಯದ ಸ್ಥಿತಿಯ ಬಗ್ಗೆ ಅನೇಕ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗಳು ಸುಲಭದಲ್ಲಿ ಶಾಲಾ ಶಿಕ್ಷಣದ ಪ್ರವೇಶ ಮತ್ತು ಶೂನ್ಯ ಶುಲ್ಕವನ್ನು ಹೊಂದಿದ್ದರೂ, ಇಂಗ್ಲಿಷ್ ಮಾಧ್ಯಮದ ಬೋಧನೆಯು ಉತ್ತಮ ಭವಿಷ್ಯದ ನಿರೀಕ್ಷೆಗಳನ್ನು ಪೂರೈಸುತ್ತದೆ ಎಂದು ಹಲವು ಪೋಷಕರು ನಂಬಿಸಿದ್ದಾರೆ. ಮಕ್ಕಳು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕೆಂಬ ಆಶಯದೊಂದಿಗೆ ಖಾಸಗಿ ಶಾಲೆಗಳನ್ನು ಅವರು ಆರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸಮೀಕ್ಷೆ ಗಮನಿಸಿದೆ.

ಆದಾಗ್ಯೂ, ಖಾಸಗಿ ಶಾಲೆಗಳಲ್ಲಿನ ಹೆಚ್ಚಿನ ಶುಲ್ಕಗಳು ಶಾಲೆಗಳ ಶಿಕ್ಷಣ ಗುಣಮಟ್ಟದ ಸೂಚಕವಾಗಿ ಕಾಣುತ್ತಿವೆ. ಹೆಚ್ಚು ಶುಲ್ಕವಿರುವ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಣ ಸಿಗುತ್ತದೆಂದು ಪೋಷಕರು ಭಾವಿಸುತ್ತಿದ್ದಾರೆ ಎಂದು ಅಧ್ಯಯನ ಕಂಡುಕೊಂಡಿದೆ.

ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯ ಆಯ್ಕೆಯಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಲಿಂಗ ವ್ಯತ್ಯಾಸವನ್ನೂ ಸಮೀಕ್ಷೆ ಗುರುತಿಸಿದೆ. ವೆಚ್ಚ ಮತ್ತು ಸವಲತ್ತುಗಳನ್ನು ಪರಿಗಣಿಸಿ ಅಪ್ಪಂದಿರು ಸರ್ಕಾರಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ. ಆದರೆ, ತಾಯಂದಿರು ಇಂಗ್ಲಿಷ್-ಮಾಧ್ಯಮದಲ್ಲಿ ಬೋಧಿಸುವ ಶಾಲೆಗಳನ್ನು (ಖಾಸಗಿ) ಆಯ್ಕೆ ಮಾಡುವುದಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದಾಗ್ಯೂ, ತಂದೆಯರಲ್ಲಿ ಉನ್ನತ ಗುಣಮಟ್ಟದ ಶಿಕ್ಷಣದ ಆಧ್ಯತೆಯು ಖಾಸಗಿ ಶಾಲೆಗಳ ಆಯ್ಕೆಯನ್ನು ಹೆಚ್ಚಿಸಿದೆ.

ಈ ಲೇಖನ ಓದಿದ್ದೀರಾ?: ಲಾಭಕ್ಕಾಗಿ ನಿಯಮಗಳ ಗಾಳಿಗೆ ತೂರಿದ ಇಂಡಿಗೋ: ಈ ಭಂಡಧೈರ್ಯ ಎಲ್ಲಿಂದ ಬಂತು?

ಖಾಸಗಿ ಶಾಲೆಗಳು ತಾವು ಬೆಳೆಸಿಕೊಂಡಿರುವ ಇಮೇಜ್‌ನಿಂದ ಲಾಭ ಪಡೆಯುತ್ತವೆ. ಆದರೆ, ಸರ್ಕಾರಿ ಶಾಲೆಗಳು ಗುರುತಿಸಲಾದ ಸೌಲಭ್ಯಗಳ ಹೊರತಾಗಿಯೂ ಇಮೇಜ್ ಕೊರತೆಯಿಂದ ಬಳಲುತ್ತವೆ. ಸರ್ಕಾರಿ ಶಾಲೆಗಳಿಗೆ ಸಂಘಟಿತ ಬ್ರ್ಯಾಂಡಿಂಗ್ ಮತ್ತು ವಿಶ್ವಾಸ ಗಳಿಕೆಗೆ ಪ್ರಯತ್ನಿಸಬೇಕಾದ ಅಗತ್ಯವಿದೆ. ಮೂಲಸೌಕರ್ಯಗಳ ಹೊತೆಗೆ ಇಮೇಜ್‌ ಕಟ್ಟಿಕೊಳ್ಳುವುದೂ ಕೂಡ ಪೋಷಕರನ್ನು ಸೆಳೆಯಲು ನಿರ್ಣಾಯಕವಾಗಿದೆ ಎಂದು ಅಧ್ಯಕ್ಷಯವು ವಿವರಿಸಿದೆ.

“ಸರ್ಕಾರಿ ಶಾಲೆಗಳ ಸಾಮರ್ಥ್ಯಗಳಾಗಿರುವ ಶೈಕ್ಷಣಿಕ ಪ್ರವೇಶ, ಉಚಿತ ಶಿಕ್ಷಣ, ಊಟ, ಕ್ರೀಡೆ ಹಾಗೂ ಪಠ್ಯಕ್ರಮ ಪೂರ್ಣಗೊಳಿಸುವಿಕೆಯನ್ನು ಕೇವಲ ಕಲ್ಯಾಣ ಕ್ರಮವಾಗಿ ನೋಡದೆ, ವಿಶ್ವಾಸಾರ್ಹ ಶಿಕ್ಷಣ ವ್ಯವಸ್ಥೆಯ ಅಗತ್ಯ ಅಂಶಗಳಾಗಿ ರೂಪಿಸಬೇಕು. ಇದು ಸರ್ಕಾರಿ ಶಾಲೆಗಳ ವಿಚಾರದಲ್ಲಿ ಸಾರ್ವಜನಿಕ ಗ್ರಹಿಕೆಯನ್ನು ಬದಲಿಸಲು ನೆರವಾಗುತ್ತದೆ” ಎಂದು ಪ್ರಮೋದ್ ಒತ್ತಿ ಹೇಳಿದ್ದಾರೆ.

ಗಮನಾರ್ಹವಾಗಿ, ಎರಡೂ ಶಾಲಾ ವ್ಯವಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವವರು ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗೂ, ಗಂಡು ಮಕ್ಕಳನ್ನು ಖಾಸಗಿ ಶಾಲೆಗಳಿಗೂ ದಾಖಲಿಸುತ್ತಾರೆ ಎಂಬ ಸಾಮಾನ್ಯ ಗ್ರಹಿಕೆ ಇದೆ. ಆದರೆ, ಎರಡೂ ಶಾಲೆಗಳನ್ನು ಆಯ್ಕೆ ಮಾಡಿಕೊಂಡ 4% ಪೋಷಕರಲ್ಲಿ ಹೆಚ್ಚಿನವರು ಈ ಸಾಮಾನ್ಯ ಗ್ರಹಿಕೆ ವಿರುದ್ಧವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಬಹುತೇಕರು ಹೆಣ್ಣು ಮಕ್ಕಳನ್ನು ಖಾಸಗಿ ಶಾಲೆಗೂ,  ಗಂಡು ಮಕ್ಕಳನ್ನು ಸರ್ಕಾರಿ ಶಾಲೆಗೂ ಸೇರಿಸಿದ್ದಾರೆ ಎಂಬುದನ್ನು ಸಮೀಕ್ಷೆ ಎತ್ತಿ ತೋರಿದೆ.

ಸರ್ಕಾರಕ್ಕೆ ಅಧ್ಯಯನದ ಶಿಫಾರಸುಗಳು:

  • ಇಂಗ್ಲಿಷ್ ಮಾಧ್ಯಮ ಬೋಧನೆಗೆ ಆದ್ಯತೆ ನೀಡುವುದು ಮತ್ತು ವಿಸ್ತರಿಸುವುದು
  • ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು
  • ಎಲ್ಲ ಖಾಲಿ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸಕ್ರಿಯ ನೇಮಕಾತಿ. ಆರಂಭದಲ್ಲಿ, ಅತಿಥಿ ಶಿಕ್ಷಕರ ನೇಮಕದೊಂದಿಗೆ ಕೊರತೆಯನ್ನು ನೀಗಿಸುವುದು. ಬಳಿಕ, ಖಾಯಂ ಶಿಕ್ಷಕರ ನೇಮಕಾತಿ ನಡೆಸುವುದು. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ TET/CET ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಆಧ್ಯತೆ ನೀಡುವುದು.
  • ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗಣನೀಯ ಹೂಡಿಕೆ ಮಾಡುವುದು
  • ಶಾಲಾ ಅಭಿವೃದ್ಧಿ ನಿರ್ವಹಣಾ ಸಮಿತಿಗಳನ್ನು (ಎಸ್‌ಡಿಎಂಸಿ) ಸಬಲೀಕರಣಗೊಳಿಸಿ ಮತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು
  • ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಬಲಪಡಿಸುವುದು

ಖಾಸಗಿ ಶಾಲೆಗಳ ಆಯ್ಕೆಯಲ್ಲಿ ಪೋಷಕರ ಮೇಲೆ ಪರಿಣಾಮ ಬೀರುವ ಅಂಶಗಳು:

  • ಗುಣಮಟ್ಟದ ಬೋಧನೆ – 49.8%
  • ಇಂಗ್ಲಿಷ್ ಮಾಧ್ಯಮ – 49.2%
  • ಜನಪ್ರಿಯತೆ – 37%
  • ಶಿಕ್ಷಕರ ಲಭ್ಯತೆ – 37%
  • ಮೂಲಸೌಕರ್ಯ – 36.6%
  • ಲಭ್ಯತೆ – 29.7%
  • ಪಠ್ಯೇತರ ಚಟುವಟಿಕೆ – 28.5%
  • ಕ್ರೀಡೆ – 23.3%
  • ಶಾಲಾ ವ್ಯಾನ್ – 23.1%
  • ಇತರ ಮಂಡಳಿಗಳು – 20.4%
  • ಶುಲ್ಕಗಳು – 19.6%

ಸರ್ಕಾರಿ ಶಾಲೆಗಳ ಆಯ್ಕೆಯಲ್ಲಿ ಆಧ್ಯತೆಯ ಅಂಶಗಳು

  • ಉಚಿತ ಶಿಕ್ಷಣ – 43.4%
  • ಲಭ್ಯತೆ – 34.3%
  • ಗುಣಮಟ್ಟದ ಬೋಧನೆ – 28.5%
  • ಮೂಲಸೌಕರ್ಯ – 26.8%
  • ಶಿಕ್ಷಕರ ಲಭ್ಯತೆ – 23.3%
  • ಕ್ರೀಡೆ – 23.1%
  • ಪಠ್ಯೇತರ ಚಟುವಟಿಕೆ – 20.4%
  • ಜನಪ್ರಿಯತೆ – 19.7%
  • ಹತ್ತಿರದಲ್ಲಿ ಯಾವುದೇ ಖಾಸಗಿ ಶಾಲೆಗಳಿಲ್ಲ ಎಂಬುದು – 13%
  • ಇಂಗ್ಲಿಷ್ ಮಾಧ್ಯಮ – 12.3%
  • ಬಸ್/ವ್ಯಾನ್ – 5.2%

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...