ಹಾಸನ ಮಣ್ಣಿನ ಹೆಣ್ಣು ಬೇರುಗಳು | ಹಿರಿಯ ಲೇಖಕಿ, ಪತ್ರಕರ್ತೆ ಪಾರ್ವತಿ ಕೃ.ನ.ಮೂರ್ತಿ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...

ನಿತ್ಯ ಹರಿಧ್ವರ್ಣದ ಪರಿಸರದ ಹಸಿರು ಸಿರಿಯೊಂದಿಗೆ ಬಡವರ ಊಟಿ ಎಂದೇ ಖ್ಯಾತಿ ಹೊಂದಿ ಕಲೆ, ಸಾಹಿತ್ಯ ಸಂಸ್ಕೃತಿಗೆ ಹೆಸರಾದುದು ಹಾಸನ ಜಿಲ್ಲೆ. ಸಾಹಿತ್ಯ ಎಂದಾಕ್ಷಣ ಕಥೆ, ಕವನ, ಲಲಿತ ಪ್ರಬಂಧ, ನಾಟಕ, ಕಾದಂಬರಿ, ಚಿಂತನ ಮಂಥನ ಮೊದಲಾದ ಪ್ರಕಾರಗಳು ಪ್ರಮುಖವೆನಿಸುತ್ತದೆ. ಅದರಲ್ಲೂ ಕಥೆ, ಕಾದಂಬರಿ, ಅನುವಾದ, ಶಿಶು ಸಾಹಿತ್ಯ, ರೇಡಿಯೋ ನಾಟಕ, ಚಿಂತನಾ ಹೀಗೆ ಅನೇಕ ಪ್ರಾಕಾರಗಳಲ್ಲಿ ಅಸಮಾನ್ಯ ಸಾಧನೆ ಮಾಡಿರುವವರು ಹಿರಿಯ ಜೀವ ಪಾರ್ವತಿ ಕೃ.ನ.ಮೂರ್ತಿ ಎಂದರೆ ಅತಿಶಯೋಕ್ತಿಯಲ್ಲ.

ಕೆ.ಎನ್.ನಂಜಪ್ಪ ಮತ್ತು ಸಾವಿತ್ರಮ್ಮ ದಂಪತಿಗಳ ಸುಪುತ್ರಿಯಾಗಿ ತುಮಕೂರಿನಲ್ಲಿ 1934ರ ಜನವರಿ 20ರಂದು ಜನಿಸಿರುವ ಪಾರ್ವತಿಯವರಿಗೆ ಪ್ರಭಾಮಣಿ, ನಾಗರತ್ನ, ಜಗದಂಬಾ(ತಾರಾ) ಮತ್ತು ವಾಣಿ ಎಂಬ ನಾಲ್ವರು ಸಹೋದರಿಯರು. ಆ ಕಾಲದಲ್ಲೇ ಇಂಟರ್ ಮೀಡಿಯಟ್ ಉತ್ತೀರ್ಣಗೊಂಡಿದ್ದು, ಹಿಂದಿ ರಾಷ್ಟçಭಾಷಾದಲ್ಲಿ ಪದವಿ ಪಡೆದಿದ್ದು, ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಪ್ರಬುದ್ಧತೆ ಬೆಳೆಸಿಕೊಂಡವರು. ಇಂಟರ್ ಮಿಡಿಯಟ್ ಓದುವಾಗಲೇ ಸಹಪಾಠಿಯಾಗಿದ್ದ ಹಾಗೂ ಹಾಸನದಲ್ಲಿ ಜನಮಿತ್ರ ಪತ್ರಿಕೆ ಸಂಸ್ಥಾಪಕ ಸಂಪಾದಕರಾದ ಕೃ.ನ.ಮೂರ್ತಿಯವರೊಂದಿಗೆ ಸಪ್ತಪದಿ ತುಳಿದು ಬಾಳ ಸಂಗಾತಿಯಾದರು. ದಂಪತಿಗಳು ಸಾಹಿತ್ಯ ಸರಸ್ವತಿಗೆ ತಮ್ಮನ್ನೇ ಅರ್ಪಿಸಿಕೊಂಡರು. ಸಾಹಿತ್ಯದ ವಿವಿಧ ಮಜಲುಗಳಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಮಾಡುತ್ತಾ ಮನೆಮನೆಗೆ ಜೋಳಿಗೆಯಲ್ಲಿ ಪುಸ್ತಕಗಳನ್ನು ಹೊತ್ತು ಮಾರುವ ಕೈಂಕರ್ಯಕ್ಕೆ ಪತಿಯೊಂದಿಗೆ ಕೈಜೋಡಿಸಿದವರು ಪಾರ್ವತಿ.

ಜನಮಿತ್ರ ಪ್ರಕಾಶನದ ಮೂಲಕ ಖ್ಯಾತ ಕಾದಂಬರಿಗಾರ ಎಸ್.ಎಲ್.ಭೈರಪ್ಪನವರ ಮೊದಲ ಕೃತಿ ಪ್ರಕಟಗೊಂಡಿದ್ದು, ಬೆಳಕು ಮೂಡಿತು ಇಲ್ಲಿಂದಲೇ. ಈ ಕೃತಿಯ ಮುದ್ರಣ ದೋಷ ಸರಿಪಡಿಸುವ ಕಾಯಕ ಪಾರ್ವತಿಯವರದು. ಪತಿಯ ಆಸರೆ, ಸಹಕಾರ ಪ್ರೋತ್ಸಾಹದಿಂದ ರಾಜ್ಯ ಮಟ್ಟದ ಹಲವು ಸಾಹಿತ್ಯ ದಿಗ್ಗಜರ ಪರಿಚಯ ನಿಕಟ ಸಂಪರ್ಕ, ಮಾರ್ಗದರ್ಶನದ ಜೊತೆಯಲ್ಲಿ ತಮ್ಮದೇ ಪ್ರಕಾಶನದಿಂದ ಪಾರ್ವತಿಯವರಲ್ಲಿದ್ದ ಪ್ರತಿಭೆ ಅನಾವರಣಗೊಂಡು ಸಾಹಿತ್ಯದ ಚಿಗುರು ಪಕ್ವಗೊಂಡಿತು.
ಸೆಳವಿನ ಸುಳಿ, ಬಿಡುಗಡೆಯ ಬಂಧನ- ಕಾದಂಬರಿ, ಭಾವನ- ಅಂಕಣ ಬರಹ, ಮೂವರ ಕೃತಿಗಳು- ಕಥಾ ಸಂಕಲನ, ಹ್ಯಾಮ್ಲೆಟ್-ಶಿಶು ಸಾಹಿತ್ಯ, ಹಿಂದಿ ಭಾಷೆಯ ಪ್ರಾವೀಣ್ಯತೆಯಿಂದಾಗಿ “ಗೃಹದೇವಿ” ಪ್ರೇಮಚಂದರ ಅನುವಾದಿತ ಕೃತಿ, ಅಲ್ಲದೆ ಬೆಂಗಳೂರು ಆಕಾಶವಾಣಿಯ ನಿಕಟ ಸಂಪರ್ಕದೊAದಿಗೆ ಸಾಹಿತ್ಯ ಮತ್ತು ಕಲೆಯಲ್ಲಿ ತಮ್ಮದೇ ಆದ ಪ್ರತಿಭೆಯನ್ನು ಸಾಕ್ಷೀಕರಿಸಿದವರು ಇವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪೂರ್ಣಿಮಾ ಸಾಹಿತ್ಯ ಮಂದಿರ, ಕಲಾ ವಾರ ಪತ್ರಿಕೆ, ನಗೆಹೊಗೆ ಹಾಸ್ಯ ಪತ್ರಿಕೆ, ಜನಮಿತ್ರ ಪ್ರಕಾಶನದ ಮೂಲಕ ಸಾಹಿತ್ಯ ದೇವಿಯ ಸೇವೆ ಸಲ್ಲಿಸುತ್ತ ಪ್ರಕಾಶನ, ಪತ್ರಿಕಾ ರಂಗ ಹಾಗೂ ಸಮಾಜ ಸೇವೆಯಲ್ಲಿ ಅವಿರತ ತೊಡಗಿಸಿಕೊಂಡಿದ್ದರು. ಹೀಗಾಗಿ ಬಹುಮುಖ ಪ್ರತಿಭಾವಂತರು ಪಾರ್ವತಿ ಕೃನ.ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಹಾಸನ ಮತ್ತು ಬೆಂಗಳೂರು ಆಕಾಶವಾಣಿಯಲ್ಲಿ ಇವರ ಹಲವಾರು ಚಿಂತನ, ನಾಟಕ, ರೂಪಕ, ಲೇಖನ ಮತ್ತು ಕಥೆಗಳು ಪ್ರಸಾರಗೊಂಡಿದ್ದು, ಜನ ಮನ್ನಣೆಗಳಿಸಿವೆ. ಇವರಿಗೆ ಐವರು ಮಕ್ಕಳಿದ್ದು, ಜನಮಿತ್ರ ಸಂಪಾದಕರಾಗಿ ಸೇವೆ ಸಲ್ಲಿಸಿರುವ ನಾಗೇಶ್ ಹಾಗೂ ಆನಂದ್ ಗಂಡು ಮಕ್ಕಳು. ದಿವಂಗತ ಪೂರ್ಣಿಮಾ, ಭಾಗ್ಯಶ್ರೀ, ವೀಣಾ ಹೆಣ್ಣುಮಕ್ಕಳು. ಆನಂದ್ ಚಲನಚಿತ್ರ ರಂಗದಲ್ಲಿ ಹೆಸರು ಮಾಡಿದ್ದಾರೆ. ವೀಣಾ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ರಾಷ್ಟಿçÃಯ ಕ್ರೀಡಾಪಟು ಆಗಿದ್ದು, ಸಾಕಷ್ಟು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ಲೇಟರ್ಸ್ ಹಾಲ್ ಬಳಿ ಮೀರಾ ಧರ್ಮಾನಂದರಾವ್, ಮೋಹನಾ ಚಕ್ರಪಾಣಿ, ಶಾಮಲಾ ಅಯ್ಯಂಗಾರ್, ಯತಿರಾಜಮ್ಮ ಸ್ವಾಮಿ, ಮತ್ತಿತರರ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ ಮಹಿಳಾ ಬಳಕೆದಾರರ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಪಾರ್ವತಿ ಒಬ್ಬರು. ಕೆಂಪುಚೆಲುವರಾಜಮ್ಮಣ್ಣಿ ಮಹಿಳಾ ಸಮಾಜದ ಪ್ರಥಮ ಕಾರ್ಯದರ್ಶಿ ನಂಜಮ್ಮನವರಿಗೆ, ಯಶೋಧರಮ್ಮ ದಾಸಪ್ಪ, ನಾರಾಯಣಿ ಕರೀಗೌಡ ಮೊದಲಾದವರಿಗೆ ಸಂಪೂರ್ಣ ಸಹಕಾರ ನೀಡಿದವರು ಪಾರ್ವತಿಯವರು. ಸ್ತ್ರೀಯರಿಗೆ ಸ್ಥಾನಮಾನ, ಅವಕಾಶಗಳೇ ಸಿಗದೇ ಎಲೆಮರೆಯ ಕಾಯಿಯಂತೆ ಬದುಕುವ ಸಾಮಾಜಿಕ ಸಂದರ್ಭದಲ್ಲಿ, ಪಾರ್ವತಿ ಕೃ.ನ.ಮೂರ್ತಿಯವರ ಸಾಧನೆ ಅವಿಸ್ಮರಣಿಯ. ಇವರ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದ ಅನುಪಮ ಸೇವೆಗಾಗಿ ಶ್ರೀ ಶರತ್ ಚಂದ್ರ ಶತಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ, ಹಲವಾರು ಸಾಹಿತ್ಯಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳು ಮತ್ತು ಹಾಸನ ಜಿಲ್ಲಾ ಲೇಖಕಿಯರ ಬಳಗದ ಪ್ರಶಸ್ತಿ, ಮತ್ತಿತರ ಪುರಸ್ಕಾರಗಳು ಸಂದಿವೆ.

1998ರಲ್ಲಿ ರಾಮನಾಥಪುರದಲ್ಲಿ ನಡೆದ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಹಾಸನ ವಾಸಿಯಾಗಿದ್ದ ಪಾರ್ವತಿಯವರು- “ಇದು ನನ್ನ ತವರಿನ ಕಾಣಿಕೆ” ಎಂದು ನೆನಪಿಸಿಕೊಂಡಿದ್ದರು. ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿ ಮಗನ ಮನೆಯಲ್ಲಿ ನೆಲೆಸಿದ್ದು, ವಯೋಸಹಜ ಅರಳುಮರಳು ಮನಸ್ಥಿತಿಗೆ ತುತ್ತಾಗಿದ್ದರೂ ಹಳೆಯ ಮತ್ತು ತಮ್ಮ ಯೌವನ ಮತ್ತು ಸಾಹಿತ್ಯಕ ಘಟನೆಗಳ ನೆನಪು ಮನದಾಳದಲ್ಲಿ ಜೀವಂತವಾಗಿದ್ದುದು ಅವರ ಕ್ರಿಯಾಶೀಲತೆ ಮತ್ತು ಕತೃತ್ವ ಶಕ್ತಿಗೆ ಬೆರಗು ಮೂಡಿಸುತ್ತಿತ್ತು.

ತಮ್ಮ 91ನೆಯ ವರ್ಷದ ಇಳಿ ವಯಸ್ಸಿನಲ್ಲಿ ದೈವಾಧೀನರಾಗಿರುವ ಪಾರ್ವತಿ ಕೃ.ನ.ಮೂರ್ತಿಯವರ ಜೀವನೋತ್ಸಾಹ, ಸರಳತೆ, ಸಜ್ಜನಿಕೆ ಮತ್ತು ಸರ್ವರನ್ನು ಸಮಭಾವದಿಂದ ನೋಡುವ ಮತ್ತು ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮನಸ್ಥಿತಿ, ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅನನ್ಯ ಕೊಡುಗೆಯಾಗಿದೆ.

ಲೇಖಕರು: ಲೀಲಾವತಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...