Pink Tax : ಅಸಮಾನತೆಗೆ ಬಳಿದ ಬಣ್ಣದ ಲೇಪ

Date:

ಪಿಂಕ್‌ ಟ್ಯಾಕ್ಸ್‌ ಎಂಬ ಪರಿಕಲ್ಪನೆ ಹಲವರಿಗೆ ಹೊಸದು ಎನಿಸಬಹುದು. ಆದರೆ, ಈ ಸುಲಿಗೆ ಇಂದು ನಿನ್ನೆಯದಲ್ಲ.1994ರಲ್ಲಿ ಕ್ಯಾಲಿಫೋರ್ನಿಯಾದ ಸಂಶೋಧನೆ ಒಂದರಿಂದ ಬೆಳಕಿಗೆ ಬಂದ ಈ ಗುಲಾಬಿ ತೆರಿಗೆಯ ವರದಿ ಹೆಣ್ಣು ಬಳಸುವ ದೈನಂದಿನ ವಸ್ತುಗಳಿಗೆ, ಉಡುಗೆ-ತೊಡುಗೆಗಳಿಗೆ ಗಂಡಿಗಿಂತ ಹೆಚ್ಚು ಬೆಲೆ ತೆರುತ್ತಿದ್ದಾಳೆ ಎಂಬುದನ್ನು ತಿಳಿಯಪಡಿಸಿತು. ಬಹಳ ಹಿಂದಿನಿಂದಲೇ ಜಗತ್ತು ಲಿಂಗ ಆಧರಿಸಿ ಸುಂಕದಲ್ಲಿ ಅನುಸರಿಸಿಕೊಂಡು ಬಂದ ತಾರತಮ್ಯ ಈ ಅಧ್ಯಯನದಿಂದ ಸಾಬೀತಾಯಿತು.

ಬಣ್ಣಗಳಿಗೆ ಭೇದವಿಲ್ಲ ಅಂತಾರೆ. ನಿಜ, ಆದರೆ ಹೆಣ್ಣಿನ ಆಸಕ್ತಿಗಳನ್ನು ಗಂಡಿನ ಆಸಕ್ತಿಗಳನ್ನು ಬೇರೆ ಬೇರೆಯಾಗಿ ತೋರ್ಪಡಿಸಲು ಇಡೀ ಜಗತ್ತು ಎರಡು ಬಣ್ಣಗಳ ಆರಿಸಿಕೊಂಡಿದೆ. ಗಂಡಿಗೆ ನೀಲಿ, ಹೆಣ್ಣಿಗೆ ಗುಲಾಬಿ ಎಂಬ ಬಣ್ಣ ಕೊಡುವಿಕೆ ಪಾಶ್ಚ್ಯಾತ್ಯ ದೇಶಗಳಲ್ಲಿ ಜೆಂಡರ್‌ ರಿವೀಲಿಂಗ್‌ ಸೆರಮನಿಯಲ್ಲಿ ಇಂದಿಗೂ ಕಾಣಬಹುದು. ತೀರಾ ಪುಟ್ಟ ವಯಸ್ಸಿನಲ್ಲಿ ಮನೆಯಂಗಳದಿ ಕಲೆತು ಆಡುವಾಗ, ಗುಲಾಬಿ ಅಂಗಿ ತೊಟ್ಟ ಎಳೆಯ ಗೆಳೆಯನನ್ನು “ಹುಡ್ಗೀರ್‌ ಬಣ್ಣ ಯಾಕೆ ಹಾಕಿದ್ದಿ…!” ಅಂತ ರೇಗಿಸುವ ಗುಂಪು ಬಹುಷಃ ಎಲ್ಲರಿಗೂ ಇದ್ದಿರಬೇಕು.

ಈ ಬಣ್ಣಗಳ ಭೇದ ಧರಿಸುವ ಉಡುಗೆಯಲ್ಲಿ, ಮಕ್ಕಳು ಕೊಳ್ಳುವ ಆಟಿಕೆಯಲ್ಲಿ, ಮಹಿಳೆಯರಿಗೆ ನಿಗದಿಪಡಿಸಿದ ಸಾರ್ವಜನಿಕ ವಲಯದ ಸೇವೆಗಳ ಫ್ಲೆಕ್ಸ್‌, ಸೂಚನಾ ಫಲಕಗಳಲ್ಲಿ… ಹೀಗೆ ಹೆಣ್ಣಿಗೆ ಸಂಬಂಧಿಸಿದ ಎಲ್ಲವೂ ಗುಲಾಬಿಮಯ ಇರುವುದನ್ನು ನಾವೆಲ್ಲ ಕಂಡಿರುತ್ತೇವೆ. ಆದರೆ, ಈ ತರ್ಕ ಇಲ್ಲಿಗೆ ಮುಗಿಯದೆ, ತೆರಿಗೆಯ ತನಕ ಸವಾರಿ ಮಾಡಿದೆ ಎನ್ನುವುದು ಬಹುತೇಕರಿಗೆ ಗೊತ್ತಿರುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಿಂಕ್‌ ಟ್ಯಾಕ್ಸ್‌ (Pink tax) ಎಂಬ ಪರಿಕಲ್ಪನೆ ಹಲವರಿಗೆ ಹೊಸದು ಎನಿಸಬಹುದು. ಆದರೆ, ಈ ಸುಲಿಗೆ ಇಂದು ನಿನ್ನೆಯದಲ್ಲ.1994ರಲ್ಲಿ ಕ್ಯಾಲಿಫೋರ್ನಿಯಾದ ಸಂಶೋಧನೆ ಒಂದರಿಂದ ಬೆಳಕಿಗೆ ಬಂದ ಈ ಗುಲಾಬಿ ತೆರಿಗೆಯ ವರದಿ ಹೆಣ್ಣು ಬಳಸುವ ದೈನಂದಿನ ವಸ್ತುಗಳಿಗೆ, ಉಡುಗೆ-ತೊಡುಗೆಗಳಿಗೆ ಗಂಡಿಗಿಂತ ಹೆಚ್ಚು ಬೆಲೆ ತೆರುತ್ತಿದ್ದಾಳೆ ಎಂಬುದನ್ನು ತಿಳಿಯಪಡಿಸಿತು. ಬಹಳ ಹಿಂದಿನಿಂದಲೇ ಜಗತ್ತು ಲಿಂಗ ಆಧರಿಸಿ ಸುಂಕದಲ್ಲಿ ಅನುಸರಿಸಿಕೊಂಡು ಬಂದ ತಾರತಮ್ಯ ಈ ಅಧ್ಯಯನದಿಂದ ಸಾಬೀತಾಯಿತು.

ಭಾರತದಲ್ಲಿ ಇದೆಯೇ ಪಿಂಕ್‌ ಟ್ಯಾಕ್ಸ್‌?

ನಮ್ಮ ದೇಶವೂ ಈ ಗುಲಾಬಿ ತೆರಿಗೆಯ ಹೊರತಾಗಿಲ್ಲ. ಭಾರತದ ಕಾನೂನು ವ್ಯವಸ್ಥೆ ಈ ತಾರತಮ್ಯವನ್ನು ನಿಷೇಧಿಸಿಲ್ಲ. ಯಾವ ಸರ್ಕಾರಗಳೂ ಲಿಂಗ ಆಧಾರಿತ ತೆರಿಗೆಯ ಅನುಕರಣೆಯನ್ನು ಇಲ್ಲಿಯವರೆಗೆ ಪ್ರಶ್ನಿಸಿಲ್ಲ. ಭಾರತದಲ್ಲಿ ಗುಲಾಬಿ ತೆರಿಗೆಯ ಕುರಿತಾದ ಸಂಶೋಧನೆಗಳು ವಿರಳ. ಆದರೂ, ಮಹಿಳೆಯರು ಮತ್ತು ಪುರುಷರು ಖರೀದಿಸುವ ಉತ್ಪನ್ನಗಳ ತೆರಿಗೆಯಲ್ಲಿ ತಾರತಮ್ಯ ರೂಢಿಯಲ್ಲಿರುವುದು ಸಮೀಕ್ಷೆಗಳಿಂದ ತಿಳಿದು ಬಂದಿದೆ.

ನ್ಯೂಯಾರ್ಕ್‌ ಸ್ಟೇಟ್‌ ಡಿಪಾರ್ಟ್ಮೆಂಟ್‌ ಆಫ್‌ ಕನ್ಸ್ಯೂಮರ್‌ ಅಫೇರ್ಸ್‌ ನಡೆಸಿದ ಅಧ್ಯಯನದ ಪ್ರಕಾರ ಮಹಿಳೆಯರಿಗಾಗಿ ತಯಾರಿಸಲ್ಪಟ್ಟ ವಸ್ತುಗಳು ಪುರುಷ ಗ್ರಾಹಕರಿಗೆ ಮಾರಲಾಗುವ ವಸ್ತುಗಳಿಗಿಂತ 7% ಹೆಚ್ಚು ಪ್ರೈಸ್‌ ಟ್ಯಾಗ್‌ ಹೊಂದಿವೆ. ಮಹಿಳೆಯರ ವೈಯಕ್ತಿಕ ಆರೈಕೆಯ ಉತ್ಪನ್ನಗಳಿಗೆ 13% ಹೆಚ್ಚು ಬೆಲೆ ತೆರುತ್ತಿದ್ದಾರೆ.

pink tax

ಗುಲಾಬಿ ತೆರಿಗೆ ಯಾವ ಉತ್ಪನ್ನಗಳಿಗೆ ಎಷ್ಟು ಎಂದು ನಿರ್ಧರಿಸುವವರು ಯಾರು?

ಮಹಿಳೆಯರಿಗೆಂದು ಮಾರುಕಟ್ಟೆಯಲ್ಲಿ ತಯಾರಾಗುವ ಸರಕುಗಳು ಪುರುಷ ಗ್ರಾಹಕರಿಗೆ ಮಾರಲಾಗುವ ವಸ್ತುಗಳಿಗಿಂತ ದುಬಾರಿಯಾಗಿವೆ ಎಂದು ವಿಶ್ವ ಆರ್ಥಿಕ ವೇದಿಕೆ ಖಚಿತಪಡಿಸಿದೆ. ಸೌಂದರ್ಯ ವರ್ಧಕಗಳು, ಬೂಟುಗಳು, ಪಾದರಕ್ಷೆಗಳು ಇನ್ನಿತರೆ ವಸ್ತುಗಳನ್ನು ಮಹಿಳೆಯರಿಗೆಂದೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸುವಾಗ ಹೆಚ್ಚು ವೆಚ್ಚ ತಗುಲುತ್ತದೆ ಎಂಬ ಸಮಜಾಯಿಷಿಯು ಇದೆ.

ಕೇವಲ ಉತ್ಪನ್ನಗಳಿಗೆ ಮಾತ್ರ ಸೀಮಿತವಲ್ಲ, ಗುಲಾಬಿ ತೆರಿಗೆ ಮಹಿಳೆಯರು ಬಳಸಿಕೊಳ್ಳುವ ಸೇವೆಗಳಲ್ಲೂ ತಳುಕು ಹಾಕಿಕೊಂಡಿದೆ. ಮಹಿಳೆಯರ ಕೇಶ ವಿನ್ಯಾಸಕ್ಕೆ ಪುರುಷರಿಗಿಂತ 60% ಹೆಚ್ಚು ವೆಚ್ಚ ತಗುಲುತ್ತದೆ. ಮಹಿಳೆಯರ ಕೂದಲು ಉದ್ದವಾಗಿರುತ್ತದೆ, ಅವರ ಕೂದಲಿಗೆ ಬಳಸುವ ಉತ್ಪನ್ನಗಳ ಬೆಲೆ ದುಬಾರಿ ಹಾಗು ಹೆಚ್ಚು ಉತ್ಪನ್ನ ಮತ್ತು ಸಮಯವನ್ನು ವಿನಿಯೋಗಿಸಬೇಕು ಎಂಬ ಹತ್ತು ಹಲವು ಕಾರಣಗಳ ಮುಂದಿಟ್ಟು ಈ ಅಸಮಾನತೆಯನ್ನು ಪಾಲಿಸುತ್ತಾ ಬಂದಿವೆ ಬ್ಯೂಟಿ ಆಂಡ್ ಫ್ಯಾಶನ್‌ ಇಂಡಸ್ಟ್ರಿ.

ಒಂದೇ ರೀತಿಯ ಒಂದೇ ಗುಣಮಟ್ಟದ ವಸ್ತುಗಳಿಗೆ ಪುರುಷ ಬೇರೆ, ಸ್ತ್ರೀ ಬೇರೆ ಬೆಲೆ ತೆರುವುದು ಸ್ತ್ರೀ ಎಂಬ ಕಾರಣಕ್ಕೆ ಆಗುತ್ತಿರುವ ಅಸಮಾನತೆಗಳಲ್ಲಿ ಒಂದಲ್ಲದೆ ಇನ್ನೇನು? ಕುತೂಹಲದ ವಿಷಯವೆಂದರೆ, ಇದು ಸರ್ಕಾರ ವಿಧಿಸಿರುವ ಔಪಚಾರಿಕ ತೆರಿಗೆಯಲ್ಲ. ಬದಲಿಗೆ ಇಂಡಸ್ಟ್ರಿ ತಮ್ಮ ಇಚ್ಚೆಯ ಅನುಸಾರ ಅಂಟಿಸಿರುವ ಬೆಲೆ ಚೀಟಿ.

ಗುಲಾಬಿ ತೆರಿಗೆ ಪರಿಣಾಮಗಳೇನು?

ಗುಲಾಬಿ ತೆರಿಗೆ ವಿಶ್ವಾದ್ಯಂತ ಮಹಿಳೆಯರ ಮೇಲೆ ಆರ್ಥಿಕ ಹೊರೆ ಹೊರಿಸುತ್ತಲೇ ಬಂದಿದ್ದು, ಭಾರತದಂತಹ ರಾಷ್ಟ್ರದಲ್ಲಿ ಲಿಂಗ ಕಾರಣಕ್ಕಾಗಿ ಕಡಿಮೆ ವೇತನ ಪಡೆಯುತ್ತಿರುವ ಮಹಿಳೆ ಆರ್ಥಿಕ ಒತ್ತಡಕ್ಕೆ ಸಿಲುಕಿರುವುದು ಸ್ಪಷ್ಟವಾಗಿದೆ. 2022ರ ವರದಿಯ ಪ್ರಕಾರ ಪುರುಷ ಹಾಗೂ ಮಹಿಳೆಯರ ನಡುವೆ ಸಮಾನ ಕೆಲಸಕ್ಕೂ ಸಹ 19% ವೇತನ ಅಸಮಾನತೆಯಿದೆ. ಕೃಷಿಯಿಂದ ಹಿಡಿದು ಐಟಿ ಕ್ಷೇತ್ರದವರೆಗೂ ಈ ಅಂತರವನ್ನು ಕಾಣಬಹುದು.

ಕ್ಯಾಲಿಫೋರ್ನಿಯಾದಲ್ಲಿ 2020ರಲ್ಲಿ ನ್ಯಾಯಾಂಗ ಮತ್ತು ಮಹಿಳೆಯರ ಕೆಲಸ, ಅಸಮಾನತೆಯ ಕುರಿತ ಅಧ್ಯಯನದ ವರದಿಯೊಂದು, ʼಮಹಿಳೆಯರು ಪುರುಷರಿಗೆ ಸಮವಾಗಿ ಖರೀದಿ ಮಾಡುವ ವಸ್ತುಗಳಿಗೆ ಪುರುಷರಿಗಿಂತ 2,381 ಡಾಲರ್‌ ಹೆಚ್ಚು ಪಾವತಿಸುತ್ತಾರೆʼ ಎಂದು ಬಹಿರಂಗಪಡಿಸಿದೆ. ಈ ಸಮೀಕ್ಷೆಗೆ ಒಳಪಟ್ಟ 146 ದೇಶಗಳಲ್ಲಿ ಕೇವಲ ಐದು ದೇಶಗಳು 0.80ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿವೆ ಎಂಬುದು ತಿಳಿದು ಬಂದಿದೆ.

Pink Tax

ವಿಶ್ವಸಂಸ್ಥೆಯ ವರದಿಯ ಪ್ರಕಾರ ಜಾಗತಿಕವಾಗಿ ಪುರುಷರು ಗಳಿಸುವ ಪ್ರತಿ ಡಾಲರ್‌ಗೆ ಮಹಿಳೆಯರು ಕೇವಲ 77% ಗಳಿಸುತ್ತಾರೆ ಎಂಬ ಸತ್ಯ ತಿಳಿದಿದ್ದು, ದಶಕಗಳಿಂದ ಜಾರಿಯಲ್ಲಿರುವ ಈ ತಾರತಮ್ಯದ ಬಗ್ಗೆ ಯಾರಿಗೂ ಕಾಳಜಿಯೇ ಇಲ್ಲವೆಂಬಂತೆ ಸಾಗುತ್ತಿರುವ ಜಗತ್ತು. ಅವಳ ಖರೀದಿ ಸಾಮರ್ಥ್ಯವನ್ನು ಕಸಿಯುತ್ತಿದೆ, ಇದೊಂದು ವ್ಯವಸ್ಥಿತ ಅಸಮಾನತೆ.

ಹೆಣ್ಣು ದುಡಿಮೆಗೆ ಇಳಿದಾಗ ಅವಳ ಬೆವರಿಗೆ ತೆರುವ ಕೂಲಿಯಲ್ಲಿಯೂ ಇಂತಹದ್ದೇ ಭೇದವನ್ನು ದಶಕಗಳಿಂದ ಅನುಸರಿಕೊಂಡು ಬಂದಿದೆ. ಪುರುಷರಿಗಿಂತ ಕಡಿಮೆ ಸಂಬಳಕ್ಕೆ ದುಡಿಯುವ ಮಹಿಳೆ ಕೊಳ್ಳುವಾಗ ಪುರುಷರಿಗಿಂತ ಹೆಚ್ಚು ಹಣ ಪಾವತಿಸಬೇಕಾಗಿರುವುದು ಮತ್ತೆ ಮತ್ತೆ ಅವಳನ್ನು ಧಮನಿಸುವ ಹುನ್ನಾರದಂತೆ ಕಾಣುತ್ತದೆ. ಈ ಕುರಿತು ಆರೋಗ್ಯಕರ ಚರ್ಚೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸದ್ದಿಲ್ಲದೆ, ನಡೆವ ಈ ಆರ್ಥಿಕ ಅಸಮಾನತೆಯ ವಿರುದ್ಧ ಜಾಗೃತಿ ಮೂಡಿಸಿದರೆ ಮುಂದೆ ಅವನಿಗೂ- ಅವಳಿಗೂ ಬಣ್ಣಗಳ ಹೆಸರಿನಿಂದ ತಂದ ತರತಮವನ್ನು ತೊಡೆಯಲು ಸಾಧ್ಯವಾದೀತು.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...