ಇತಿಹಾಸ ಸೇರಿದ ಸ್ಲೋಚ್ ಕ್ಯಾಪ್- ಇನ್ನು ಮುಂದೆ ಬ್ಲೂ ಪೀಕ್ ಕ್ಯಾಪ್ ಧರಿಸಲಿರುವ ಕಾನ್‌ಸ್ಟೆಬಲ್‌ಗಳು

Date:

ಪೊಲೀಸರು ಧರಿಸುವ ಸಮವಸ್ತ್ರಗಳಿಗೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷ್ ಕಾಲದಲ್ಲಿ ಸಾಮಾನ್ಯವಾಗಿ ಪೀಕ್ ಕ್ಯಾಪ್ ಆಫೀಸರ್ ಗಳಿಗೆ ಮಾತ್ರ ಕೊಡಲಾಗಿತ್ತು. ಲಾ ಅಂಡ್ ಆರ್ಡರ್ ಸಂದರ್ಭದಲ್ಲಿ ಆಫೀಸರ್ ಗಳಿಗೆ ಉಲ್ಲನ್‌ನಲ್ಲಿ ತಯಾರಿಸಿದ ನೀಲಿ ಬಣ್ಣದ ಬೆರೆಟ್ ಟೋಪಿ ಗಳನ್ನು ಹಾಗೂ ಕಾನ್‌ಸ್ಟೆಬಲ್ ಗಳಿಗೆ ಖಾಕಿ ಬಣ್ಣದ ಬೆರೆಟ್ ಟೋಪಿಗಳನ್ನು ಕೊಡಲಾಗುತ್ತಿತ್ತು.

ರಾಜ್ಯದ ಪೊಲೀಸರು ಧರಿಸುತ್ತಿದ್ದ ಸ್ಲೋಚ್ ಹ್ಯಾಟ್ (ಟೋಪಿ) ಈಗ ಇತಿಹಾಸ ಸೇರಲಿದ್ದು, ಇನ್ನು ಮುಂದೆ ಹೊಸ ನೀಲಿ ಬಣ್ಣದ ಪೀಕ್ ಕ್ಯಾಪ್ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಗಳ ಶಿರ ಏರಲಿದೆ. ಐದು ದಶಕಗಳಿಂದ ಧರಿಸುತ್ತಿದ್ದ ಸ್ಲೋಚ್ ಕ್ಯಾಪ್‌ಗೆ ರಾಜ್ಯ ಸರ್ಕಾರ ವಿದಾಯ ಹೇಳಿ, ಹೊಸ ಮಾದರಿಯ ನೀಲಿ ಬಣ್ಣದ ಪೀಕ್ ಕ್ಯಾಪ್ (ಟೋಪಿ)ಗಳು ಇನ್ನು ಮುಂದೆ ರಾಜ್ಯದಲ್ಲಿರುವ 80 ಸಾವಿರಕ್ಕೂ ಹೆಚ್ಚು ಪೊಲೀಸರು ಧರಿಸಲಿದ್ದಾರೆ.

ಪೊಲೀಸರು ಧರಿಸುವ ಸಮವಸ್ತ್ರಗಳಿಗೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷ್ ಕಾಲದಲ್ಲಿ ಸಾಮಾನ್ಯವಾಗಿ ಪೀಕ್ ಕ್ಯಾಪ್ ಆಫೀಸರ್ ಗಳಿಗೆ ಮಾತ್ರ ಕೊಡಲಾಗಿತ್ತು. ಲಾ ಅಂಡ್ ಆರ್ಡರ್ ಸಂದರ್ಭದಲ್ಲಿ ಆಫೀಸರ್‌ಗಳಿಗೆ ಉಲ್ಲನ್‌ನಲ್ಲಿ ತಯಾರಿಸಿದ ನೀಲಿ ಬಣ್ಣದ ಬೆರೆಟ್ ಟೋಪಿ ಗಳನ್ನು ಹಾಗೂ ಕಾನ್‌ಸ್ಟೆಬಲ್‌ಗಳಿಗೆ ಖಾಕಿ ಬಣ್ಣದ ಬೆರೆಟ್ ಟೋಪಿಗಳನ್ನು ಕೊಡಲಾಗುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1956 ರಿಂದ ಸುಮಾರು 70 ವರ್ಷಗಳಿಂದ ಇದ್ದ ಒಂದೇ ಮಾದರಿಯ ಸ್ಲೋಚ್ ಕ್ಯಾಪ್ ಅನ್ನು ಸರ್ಕಾರ ಬದಲಿಸಿ ಮಹತ್ವದ ತೀರ್ಮಾನ ಕೈಗೊಂಡಿದೆ. ಹಳೆಯ ಮಾದರಿಯ ಸ್ಲೋಚ್ ಕ್ಯಾಪ್ (ಟೋಪಿ) ಬದಲಿಸುವಂತೆ ಹಲವು ವರ್ಷಗಳಿಂದಲೂ ರಾಜ್ಯದ ಪೊಲೀಸ್ ಸಿಬ್ಬಂದಿ ಬೇಡಿಕೆಯಿಡುತ್ತಲೇ ಬಂದಿದ್ದರಾದರೂ ಬೇಡಿಕೆ ಈಡೇರಿರಲಿಲ್ಲ. ಸ್ಲೋಚ್ ಹ್ಯಾಟ್ ಬದಲಿಗೆ ಪೀಕ್ ಕ್ಯಾಪ್ ನೀಡುವುದರ ಕುರಿತು ರಚಿಸಲಾಗಿದ್ದ ಪೊಲೀಸ್ ಕಿಟ್ ನಿರ್ದಿಷ್ಟತಾ ಸಮಿತಿಯ ಸದಸ್ಯರು ಹಲವು ಬಾರಿ ಸಭೆ ಸೇರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇತ್ತೀಚಿಗೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆಯ ಬಳಿಕ ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್‌ಟೆಬಲ್‌ಗಳು ಬಳಸುತ್ತಿರುವ ಕ್ಯಾಪ್‌ಗಳನ್ನು ಗೃಹ ಸಚಿವ ಡಾ ಜಿ.ಪರಮೇಶ್ವರ್ ಅವರು ಪರಿಶೀಲನೆ ನಡೆಸಿದ್ದರು.

ಪೊಲೀಸ್ ಟೋಪಿಯ ಇತಿಹಾಸ

1. ಮೈಸೂರು ಮಹಾರಾಜರ ಕಾಲದಲ್ಲಿ ಪೊಲೀಸ್ ವ್ಯವಸ್ಥೆ ಸ್ಥಾಪನೆಯಾದಾಗ ಖಾಕಿ ಶರ್ಟ್, ಅರ್ಧ ಪ್ಯಾಂಟ್(ಖಾಕಿ ಚಡ್ಡಿ) ಮತ್ತು ಕೆಂಪು ಮತ್ತು ನೀಲಿ ಬಣ್ಣದ ಪೇಟಗಳನ್ನು ಧರಿಸುತ್ತಿದ್ದರು.

2. 1882ರಲ್ಲಿ ವಿ ಪಿ ಮಾಧವ್ ರಾವ್ ಅವರು ಇನ್ಸಪೆಕ್ಟರ್ ಜನರಲ್ ಆಗಿದ್ದಾಗ, ಕೆಲವು ವಿಶೇಷ ಸಂದರ್ಭಗಳಲ್ಲಿ ಕೋಟ್ ಗಳು, ಅರ್ಧ ಪ್ಯಾಂಟ್‌ಗಳು, ಪೇಟಗಳು ಮತ್ತು ಬೂಟುಗಳನ್ನು ಪರಿಚಯಿಸಲಾಯಿತು.

2 1 1

3. 1970ರ ದಶಕಕ್ಕೂ ಮೊದಲು ಕರ್ನಾಟಕವು ಮೈಸೂರು ರಾಜ್ಯವಾಗಿದ್ದಾಗ, ಕಾನ್‌ಸ್ಟೆಬಲ್‌ಗಳು ಮತ್ತು ಕಿರಿಯ ಅಧಿಕಾರಿಗಳು ಕೆಂಪು-ನೀಲಿ ಬಣ್ಣದ ಪಟ್ಟೆಯಿರುವ “ಪೇಟ” ಧರಿಸುತ್ತಿದ್ದರು, ಇದು ತಲೆಗೆ ಸುತ್ತುವ ದಪ್ಪನಾದ ಖಾಕಿ ಬಟ್ಟೆಯಾಗಿತ್ತು.

4. 1973ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ನಂತರ, ಹೊಸ ಸ್ಲೋಚ್ ಕ್ಯಾಪ್(ಟೋಪಿ) ಅನ್ನು ಬದಲಾಯಿಸಲಾಯಿತು. ಕೆಂಪು-ನೀಲಿದ ಪಟ್ಟೆಗಳು ಇರುವ ಪೇಟಗಳನ್ನು ವಿಶೇಷ ಸಂದರ್ಭಗಳಲ್ಲಿ ಬಳಸುವುದು ಮುಂದೆವರೆಸಲಾಯಿತು.

5. 1982ರಲ್ಲಿ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಸ್ಟೋಡಿಯನ್ ಹೆಲ್ಮೆಟ್ (ಬ್ರಿಟಿಷ್ ಬಾಬಿ ಶೈಲಿ) ಜೊತೆಗೆ ನೇವಿ ಬ್ಲೂ ಪ್ಯಾಂಟ್ ಮತ್ತು ಬಿಳಿ ಶರ್ಟ್‌ಗಳನ್ನು ನೀಡಲಾಯಿತು. ಇದು ಅಲ್ಪಕಾಲಿಕ ಪ್ರಯೋಗವಾಗಿತ್ತು. ಇದನ್ನು ಕೇವಲ ಬೆಂಗಳೂರು ಪೊಲೀಸರಿಗೆ ಮಾತ್ರ ಪರಿಚಯಿಸಲಾಗಿತ್ತು. ಖಾಕಿಯ ಬದಲಿಗೆ ಮಾಡಿದ ಈ ಉಡುಪು ಎಲ್ಲರ ಒಪ್ಪಿಗೆ ಇಲ್ಲದೆ, ಮತ್ತೆ 1986ರಲ್ಲಿ ಖಾಕಿ ಬಟ್ಟೆ ಮತ್ತು ಸ್ಲೋಚ್ ಕ್ಯಾಪ್‌ಗಳಿಗೆ ಮರಳಲಾಯಿತು.

6. ಬ್ರಿಟಿಷ್ ಯುಗದ ಸ್ಲೋಚ್ ಕ್ಯಾಪ್ (ಟೋಪಿ) ಗಳು ಹಳೆಯದಾಗಿವೆ. ಇದರಿಂದ ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿದ್ದರಿಂದ, ಹೊಸ ನೀಲಿ ಬಣ್ಣದ ಪೀಕ್ ಕ್ಯಾಪ್ಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಪರಿಚಯಿಸಿದೆ. ಈ ಬ್ಲೂ ಪೀಕ್ ಕ್ಯಾಪ್ ತೆಲಂಗಾಣ ಪೊಲೀಸ್ ಕ್ಯಾಪ್ ಮಾದರಿಯಾಗಿದೆ. ಮಹಾರಾಷ್ಟ್ರ, ದೆಹಲಿ, ಗೋವಾ ಮತ್ತು ತಮಿಳುನಾಡಿನಂತಹ ಇತರ ರಾಜ್ಯಗಳ ಕ್ಯಾಪ್ ಗಳ ಮಾದರಿಗಳನ್ನು ಪರಿಶೀಲಿಸಲಾಗಿದೆ.

6 3 1

ನಾನೇ ಈ ಕ್ಯಾಪ್ ಆಯ್ಕೆ ಮಾಡಿದ್ದು : ಸಿಎಂ ಸಿದ್ದರಾಮಯ್ಯ

“ಹಲವು ವರ್ಷಗಳಿಂದ ಕಾನ್‌ಸ್ಟೆಬಲ್ ಗಳು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಬದಲು ಪೀಕ್ ಕ್ಯಾಪ್ ಆಯ್ಕೆ ಮಾಡಿದ್ದು ನಾನೇ. 1956ರಿಂದ ಚಾಲ್ತಿಯಲ್ಲಿದ್ದ ಕ್ಯಾಪನ್ನು ಬದಲಾವಣೆ ಮಾಡಿದ್ದೇನೆ. ಕ್ಯಾಪ್ ಬದಲಾವಣೆಯಷ್ಟೇ ಅಲ್ಲದೆ, ವೃತ್ತಿಯಲ್ಲಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸುವ ರೀತಿಯಲ್ಲಿ ಬದಲಾವಣೆ‌ ಕಾಣಬೇಕು” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಹಮ್ಮಿಕೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಪಿ-ಕ್ಯಾಪ್ ಪರಿಚಯ ಹಾಗೂ ವಿತರಣೆ ಹಾಗೂ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ ಎನ್ನುವ ವರದಿ ರಾಜ್ಯದ ಘನತೆ ಹೆಚ್ಚಿಸಿದೆ ಎಂದರು.

“ಸುವರ್ಣ ಅಕ್ಷರದಲ್ಲಿ ಬರೆಯುವಂತಹ ದಿನವಿದು. ಲಂಡನ್, ಆಸ್ಟ್ರೇಲಿಯದಲ್ಲಿ ಈ ರೀತಿಯ ಸ್ಲೋಚ್ ಕ್ಯಾಪ್ ಧರಿಸುತ್ತಿದ್ದರು. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ರೀತಿಯ ಸ್ಲೋಚ್ ಕ್ಯಾಪ್ ಪರಿಚಯಿಸಿದ್ದು. ಅಲ್ಲಿಂದ ಇಲ್ಲಿಯ ತನಕ ಯಾವುದೇ ಬದಲಾವಣೆ ಇಲ್ಲದೆ ಪೊಲೀಸ್ ಕಾನ್ಸ್ಟೆಬಲ್ ಗಳು ಧರಿಸುತ್ತ ಬಂದಿದ್ದಾರೆ. ಅನೇಕ ಸಂದರ್ಭದಲ್ಲಿ ಬದಲಾವಣೆ ಮಾಡಲು ಮನವಿ ಸಲ್ಲಿಸಿದ್ದರು” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.

“ಎಲ್ಲರಲ್ಲೂ ಖುಷಿ ಹಾಗೂ ಮನೋಸ್ಥೈರ್ಯ ಹೆಚ್ಚಾಗಿದೆ. ಕರ್ತವ್ಯದಲ್ಲಿ ನಾವೆಲ್ಲರೂ ಸಮಾನರೂ ಎಂಬ ಭಾವನೆ ಮೂಡುತ್ತಿದ್ದೆ. ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳು” ಎಂದು ಕ್ಯಾಪ್ ಸ್ವೀಕರಿಸಿದ ಪೊಲೀಸ್ ಕಾನ್‌ಸ್ಟೆಬಲ್ ಮಾಧ್ಯಮದ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

“ಇದುವರೆಗೂ ಪೊಲೀಸ್ ಆಫೀಸರ್‌ಗಳು ಮಾತ್ರ ಧರಿಸುತ್ತಿದ್ದ ಪೀಕ್ ಕ್ಯಾಪ್, ಈಗ ಪೊಲೀಸ್ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳಾದ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಗಳು ಸಹ ಧರಿಸುವುದರಿಂದ ಅವರಿಗೂ ಹೆಮ್ಮೆ ಅನ್ನಿಸಬಹುದು” ಎಂದು ನಿವೃತ್ತ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಈ ದಿನ ಡಾಟ್ ಕಾಮ್ ಜೊತೆ ಮಾತನಾಡುತ್ತ ಹೇಳಿದರು.

ಇದನ್ನೂ ಓದಿ ಇಂದಿರಾ ಸ್ಮರಣೆ | ಮಿತ್ರ ಮಾತ್ರ, ಮಾಲೀಕನಲ್ಲ! ಅಮೆರಿಕಕ್ಕೆ ಸೆಡ್ಡು ಹೊಡೆದಿದ್ದ ಉಕ್ಕಿನ ಮಹಿಳೆ

“ಹಲವು ವರ್ಷಗಳಿಂದ ಪೊಲೀಸ್ ಸಿಬ್ಬಂದಿಯವರು ಕ್ಯಾಪ್ ಬದಲಾವಣೆಗೆ ಬೇಡಿಕೆ ಇಟ್ಟಿದ್ದರು. ಇತ್ತೀಚಿನ ದಿನಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿದರ ಯುವಕರು ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಸೇರುತ್ತಿರುವುದರಿಂದ ಅವರ ಮನೋಸ್ಥೈರ್ಯ ಹೆಚ್ಚಿಸಲಿಕ್ಕಾಗಿ ಸ್ಲೋಚ್ ಕ್ಯಾಟ್ ಬದಲಿ, ನೀಲಿ ಬಣ್ಣದ ಪೀಕ್ ಕ್ಯಾಪ್ ಅನ್ನು ವಿತರಿಸುತ್ತಿರುವುದು, ಐತಿಹಾಸಿಕ ಹೆಜ್ಜೆ” ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ.ಎಂ.ಎ.ಸಲೀಂ ಅವರು ಹೇಳಿದರು.

ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ 600 ಕಾನ್‌ಸ್ಟೆಬಲ್ ಗಳಿಗೆ ಮಾತ್ರ ಈ ಬ್ಲೂ ಪೀಕ್ ಕ್ಯಾಪ್ ನೀಡಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ 83,000ಕ್ಕೂ ಹೆಚ್ಚು ರಾಜ್ಯದ ಎಲ್ಲಾ ಪೊಲೀಸ್ ಕಾನ್‌ಸ್ಟೆಬಲ್ ಗಳಿಗೂ ದೊರೆಯಲಿದೆ. ಜೊತೆಗೆ ಸರ್ಕಾರವು 8,500 ಹೊಸ ಕಾನ್‌ಸ್ಟೆಬಲ್ ಹುದ್ದೆಗಳನ್ನು ನೇಮಕ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...