ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ : ಮೋದಿಯವರ ವೈಫಲ್ಯಕ್ಕೆ ಕನ್ನಡಿ ಹಿಡಿದ ಸಿಎಜಿ ವರದಿ

Date:

“111111111111”, “12345678” ಈ ರೀತಿಯ ಬ್ಯಾಂಕ್ ಖಾತೆಗಳ ಸಂಖ್ಯೆಗಳು, abcd@gmail.com, 123@gmail.com” ಈ ರೀತಿಯ ಇಮೇಲ್ ಐಡಿಗಳು, ಒಂದೇ ಭಾವಚಿತ್ರವಿರುವ ಫೋಟೊ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ, ಆಶೀಶ್ ಸೆನ್ವಾಲ್ ಎಂಬ ಪೊಲೀಸ್ ಅಧಿಕಾರಿ ಒಂದೇ ದಿನ ಆಂಧ್ರಪ್ರದೇಶ, ಗುಜಾರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ತನಿಖೆ ನಡೆಸಿದ್ದಾರೆ.

ಮೇಲಿನ ಎಲ್ಲವೂ ಸಹ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (PMKVY) ಯಲ್ಲಿ 2015-2022ರವರೆಗೆ ಮೂರು ಹಂತಗಳಲ್ಲಿ ಕೇಂದ್ರ ಸರ್ಕಾರ ಕೊಟ್ಟಿರುವ ಮಾಹಿತಿಯನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್(CAG) ಇತ್ತೀಚೆಗೆ ಸಲ್ಲಿಸಿದ ವರದಿಯಲ್ಲಿರುವ ಮಾಹಿತಿ.

ಗುರುವಾರ (ಡಿ.18) ಲೋಕಸಭೆಯಲ್ಲಿ CAG ಸಲ್ಲಿಸಿದ ಆಡಿಟ್ ವರದಿಯಲ್ಲಿ ಈ ಮೇಲಿನ ಅಂಶಗಳನ್ನು ಗುರುತಿಸಲಾಗಿದೆ. ಯುವಜನರಲ್ಲಿ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸಲು ಮತ್ತು ಉದ್ಯಮ ಸಂಬಂಧಿತ ಕೌಶಲ್ಯ ತರಬೇತಿ ನೀಡಲು ಕೇಂದ್ರ ಸರ್ಕಾರವು 2015ರಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (PMKVY) ಪರಿಚಯಿಸಿತು. ಈ ಯೋಜನೆಯು 2015 ರಿಂದ 2022 ರವೆರೆಗೆ ಮೂರು ಹಂತದಲ್ಲಿ ಉದ್ಯೋಗದ ವರದಿಯನ್ನು ಸಲ್ಲಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2015 ರಿಂದ 2022 ರವರೆಗೆ ಮೂರು ಹಂತಗಳಲ್ಲಿ ಸುಮಾರು 14,450 ಕೋಟಿಗಳನ್ನು ಈ ಯೋಜನೆಗೆ ಖರ್ಚು ಮಾಡಲಾಗಿದ್ದು, 1.32 ಕೋಟಿ ಅಭ್ಯರ್ಥಿಗಳಿಗೆ ಅಥವಾ ಯುವಕರಿಗೆ ಕೌಶಲ್ಯ ತರಬೇತಿ ನೀಡಿದೆ ಗುರಿ ಹಾಕಿಕೊಳ್ಳಲಾಗಿತ್ತು. ಮೊದಲು 2015-2016ರಲ್ಲಿ, ಎರಡನೇ ಹಂತ 2016-2020 ಮತ್ತು ಮೂರನೇ ಹಂತ 2021-22 ರ ಅವಧಿಯಲ್ಲಿ 1.1 ಕೋಟಿ ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ.

Screenshot 2025 12 29 at 12.37.21 PM

PMKVY ಎರಡನೇ ಮತ್ತು ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಬ್ಯಾಂಕ್ ಖಾತೆಯ ವಿವರಗಳು
ಶೂನ್ಯವಾಗಿವೆ. 95,90,801 ಅಭ್ಯರ್ಥಿಗಳಲ್ಲಿ 90,66,265 ಅಭ್ಯರ್ಥಿಗಳು ಅಂದರೆ ಶೇ.94.53 ಬ್ಯಾಂಕ್ ಖಾತೆಗಳು ಶೂನ್ಯದಲ್ಲಿವೆ ಅಥವಾ ಸಲ್ಲಿಸಿಯೇ ಇಲ್ಲ. ಬ್ಯಾಂಕ್ ಖಾತೆಗಳನ್ನು ಸಲ್ಲಿಸಿದ 5,24,537 ಅಭ್ಯರ್ಥಿಗಳಲ್ಲಿ, 52,381 ಫಲಾನುಭವಿ ಅಭ್ಯರ್ಥಿಗಳಲ್ಲಿ 12,000 ಬ್ಯಾಂಕ್ ಖಾತೆಗಳ ಸಂಖ್ಯೆಗಳು ಒಂದೇ ರೀತಿಯಲ್ಲಿವೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ.

4,72,156 ವಿಭಿನ್ನ ಖಾತೆಗಳ ಸಂಖ್ಯೆಗಳು ‘11111111111…’, ‘123456…’, ಅಥವಾ ಒಂದೇ ಹೆಸರು, ವಿಳಾಸ, ವಿಶೇಷ ಸಂಖ್ಯೆಗಳನ್ನು ಬಳಸಿ ತಪ್ಪು ಮಾಹಿತಿಯನ್ನು ಕೊಡಲಾಗಿದೆ ಎಂದು ವರದಿ ಹೇಳುತ್ತದೆ.

Screenshot 2025 12 29 at 12.42.43 PM

ಸ್ಕಿಲ್ ಇಂಡಿಯಾ ಪೋರ್ಟಲ್ (SIP) ನಲ್ಲಿ ದಾಖಲಾಗಿರುವ ಬ್ಯಾಂಕ್ ಖಾತೆ ಸಂಖ್ಯೆಗಳಲ್ಲಿನ ವೈಪರೀತ್ಯಗಳು, ಅಭ್ಯರ್ಥಿಗಳ ಎಲೆಕ್ಟ್ರಾನಿಕ್ ಗುರುತುಗಳು ಮತ್ತು ಸಂಪರ್ಕ ವಿವರಗಳ ಸಿಎಜಿ ಲೆಕ್ಕಪರಿಶೋಧನೆಯ ಸಮಯದಲ್ಲಿ ತಪ್ಪು ಮಾಹಿತಿ ಕೊಟ್ಟಿರುವುದು ಕಂಡುಬಂದಿವೆ.

ಆರಂಭದಲ್ಲಿ ಬ್ಯಾಂಕ್ ಖಾತೆ ವಿವರಗಳು ಸ್ಕಿಲ್ ಇಂಡಿಯಾ ಪೋರ್ಟಲ್ ನಲ್ಲಿ (SIP) ಕಡ್ಡಾಯಗೊಳಿಸಲಾಗಿತ್ತು, ಆದರೆ 2023ರ ಮೇ ತಿಂಗಳಿನಲ್ಲಿ ಕಡ್ಡಾಯದಿಂದ ತೆರವುಗೊಳಿಸಲಾಯಿತು.

ಸಚಿವಾಲಯವು ಅಭ್ಯರ್ಥಿಗಳಿಗೆ ಆಧಾರ್ ಲಿಂಕ್ ಮಾಡಲಾದ ಖಾತೆಗಳಿಗೆ ನೇರ ಲಾಭ ವರ್ಗಾವಣೆ (DBT) ಮೂಲಕ ಪಾವತಿಸಲಾಗಿದೆ. PMKVY ಎರಡನೇ ಮತ್ತು ಮೂರನೇ ಹಂತದಲ್ಲಿ 24.53 ಲಕ್ಷ (ಶೇ. 25.58) ಮತ್ತು 17.69 ಲಕ್ಷ ಅಭ್ಯರ್ಥಿಗಳಿಗೆ (ಶೇ. 18.44) DBT ಮೂಲಕ ಹಣ ಪಾವತಿಸಲಾಗಿದೆ. ಜೊತೆಗೆ ಅಕ್ಟೋಬರ್ 2024ರಲ್ಲಿ 95.91 ಲಕ್ಷ ಅಭ್ಯರ್ಥಿಗಳಲ್ಲಿ 61.14 ಲಕ್ಷ (ಶೇ. 63.75) ಜನರಿಗೆ DBT ಮೂಲಕ ಪಾವತಿಸಲಾಗಿದೆ ಎಂದು CAG ವರದಿ ತಿಳಿಸಿದೆ.

ವರದಿಯ ಪ್ರಕಾರ, ಸಿಎಜಿ ಆನ್ಲೈನ್ ಮೂಲಕ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಇಮೇಲ್ ಗಳನ್ನು ಗಮನಿಸಿದಾಗ, ಶೇ 36.51 ರಷ್ಟು (1,581 ಖಾತೆಯ) ಇಮೇಲ್‌ಗಳ ಮಾಹಿತಿಯೇ ತಲುಪಿಲ್ಲ. ಅದರಲ್ಲಿ ಕೇವಲ ಶೇ 3.95 ರಷ್ಟು ಇಮೇಲ್ ಗಳು (171 ಖಾತೆ) ಮಾತ್ರ ಪ್ರತಿಕ್ರಿಯೆ ನೀಡಲಾಗಿದೆ. ಸ್ವೀಕರಿಸಿದ 171 ಇಮೇಲ್ ಪ್ರತಿಕ್ರಿಯೆಗಳಲ್ಲಿ 131 ಪ್ರತಿಕ್ರಿಯೆಗಳು ಒಂದೇ ಇಮೇಲ್ ಐಡಿಗೆ ಸೇರಿವೆ ಎಂದು ಗುರುತಿಸಲಾಗಿದೆ.

Screenshot 2025 12 29 at 12.42.20 PM

ಇಮೇಲ್ ವಿಳಾಸಗಳು ಮತ್ತು ಮೊಬೈಲ್ ಸಂಖ್ಯೆಗಳಲ್ಲಿ ವ್ಯಾಪಕ ಪುನರಾವರ್ತನೆ ಕಂಡುಬಂದಿದೆ. ಅನೇಕ ಅಭ್ಯರ್ಥಿಗಳು ತಪ್ಪುತಪ್ಪಾದ ಅಥವಾ ಅಪೂರ್ಣ ಇಮೇಲ್ ಸಂಖ್ಯೆಯನ್ನು ಒದಗಿಸಲಾಗಿದೆ. ಉದಾಹರಣೆಗೆ “@gmail.com”, “abc@gmail.com”, ಅಥವಾ “123@gmail.com”.

ಪ್ರಧಾನ ಮಂತ್ರಿ ಕೌಶಲ್ಯ ಯೋಜನೆಗೆ ಮೀಸಲಾಗಿದ್ದ ಹಲವಾರು ತರಬೇತಿ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ನೀಲಿಮ ಮೂವಿಂಗ್ ಪಿಚ್ಚರ್ಸ್ ಎಂಬ ಕಂಪನಿ ಒಂದೇ ಫೋಟೊವನ್ನು ಬಿಹಾರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ತರಬೇತಿ ನೀಡಲಾಗಿದೆ ಎಂದು ಮಾಹಿತಿ ಕೊಟ್ಟಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಮತ್ತು ರಾಜಸ್ಥಾನದಲ್ಲಿಯೂ ಒಬ್ಬರೆ ಅಭ್ಯರ್ಥಿ ತರಬೇತಿ ಪಡೆಯಲಾಗಿದೆ ಎಂದು ವರದಿಯಲ್ಲಿದೆ.

Screenshot 2025 12 29 at 12.37.01 PM 1

ಸಿಎಜಿಯ ಲೆಕ್ಕಪರಿಶೋಧನೆಯು ಯೋಜನೆಯ ಹಲವಾರು ತರಬೇತಿ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಕಂಡುಹಿಡಿದಿದೆ. ಉದ್ಯೋಗಕ್ಕೆ ಅರ್ಹರಲ್ಲದ ಅಭ್ಯರ್ಥಿಗಳಿಂದ ಕೌಶಲ್ಯ ಪ್ರಮಾಣೀಕರಣದ ಪತ್ರಗಳನ್ನು ಪಡೆಯಲಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದೆ.

ಯೋಜನೆಯ ಹಲವಾರು ಲೋಪಗಳನ್ನು ಸಿಎಜಿ ಗುರುತಿಸಿದೆ. ಪ್ರಧಾನಿ ನರೇಂದ್ರ ಮೋದಿ, 2015ರಲ್ಲಿ ಯುವಕರಿಗೆ ಉದ್ಯೋಗಕ್ಕಾಗಿ ಮತ್ತು ಯುವ ಉದ್ಯಮಗಳಿಗೆ ಸ್ಥಾಪಿಸಿದ ಪಿಎಂಕೆವಿವೈ ಯೋಜನೆಯಲ್ಲಿನ ಹಲವಾರು ಲೋಪಗಳು ಈ ಜಗಜ್ಜಾಹೀರಾಗಿದೆ. ಉದ್ಯೋಗ ಕೊಡಿಸುವ ಅಥವಾ ಉದ್ಯಮಿಗಳು ತಯಾರಿಸುವ ಸಂಸ್ಥೆಯು ತಪ್ಪು ಮಾಹಿತಿಗಳನ್ನು ಕೊಟ್ಟಿರುವುದು ಸಿಎಜಿ ಬಹಿರಂಗಪಡಿಸಿದೆ.

ನೀವು ಸಹ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ವರದಿಯನ್ನು ಗಮನಿಸಬಹುದು.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...