ಕರ್ನಾಟಕದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಡೆಯುವದನ್ನು ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ತಮಿಳುನಾಡು ಮಾದರಿಯಲ್ಲಿ ಪೂರ್ವಾನುಮತಿ ಪಡೆಯುವ ನಿಯಮವನ್ನು ಜಾರಿಗೊಳಿಸಲು ಇಂದು ನಡೆದ ಸಂಪುಟ ಸಭೆ ನಿರ್ಧರಿಸಿದೆ. ಇದು ಎಲ್ಲಾ ಖಾಸಗಿ ಸಂಘಟನೆಗಳಿಗೂ ಅನ್ವಯವಾಗುತ್ತದೆ. ಈ ಬಗ್ಗೆ ಈಗಾಗಲೇ ಇರುವ ಕಾನೂನಾತ್ಮಕ ಕಟ್ಟಳೆಗಳೇನು ಎಂಬ ವಿವರ ಇಲ್ಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸರ್ಕಾರಿ ಸ್ಥಳವನ್ನು ಖಾಸಗಿಯವರು ಹೇಗೆ ಬೇಕೋ ಹಾಗೆ ಬಳಸದಂತೆ ಒಂದಿಷ್ಟು ಕಾನೂನುಗಳನ್ನು ಮಾಡಿದೆ. ಇದು ಕೇವಲ ಆರೆಸ್ಸೆಸ್ ನವರಿಗೆ ಮಾತ್ರ ಅನ್ವಯ ಆಗುವುದಿಲ್ಲ. ಯಾರೇ ಆಗಲಿ, ಅನಧಿಕೃತವಾಗಿ ಪ್ರವೇಶ ಮಾಡುವುದು, ಉಪಯೋಗ ಮಾಡುವುದು ಅಪರಾಧ. ಈ ಕಾನೂನುಗಳು ಕಾಂಗ್ರೆಸ್ ಸರ್ಕಾರ ಇರುವ ಕಡೆ ಮಾತ್ರ ಅಲ್ಲ. ಎಲ್ಲಾ ಸರ್ಕಾರದ ಆಡಳಿತದಲ್ಲೂ ಇತ್ತು ಹಾಗೂ ಇದೆ.
ಕೇಂದ್ರ ಸರಕಾರದ ಕಾನೂನುಗಳು
- Public Premises (Eviction of Unauthorised Occupants) Act, 1971
ಕೇಂದ್ರ ಸರ್ಕಾರದ ಕಚೇರಿ, ಪೋರ್ಟ್, ರೈಲು, ವಿಮಾನ ನಿಲ್ದಾಣ, ಕೇಂದ್ರ ಸಂಸ್ಥೆ (PSU) ಗಳ ಆವರಣಗಳಲ್ಲಿ ಅನಧಿಕೃತವಾಗಿ, ಪ್ರವೇಶಿಸಿಸುವ ವಾಸಿಸುವ ಅಥವಾ ಉಪಯೋಗಿಸುವವರನ್ನು ಹೊರಹಾಕಲು ಈ ಕಾನೂನು ಜಾರಿಯಲ್ಲಿದೆ.
Section 2(e):
“Public Premises” ಅಂದರೆ ಕೇಂದ್ರ ಸರ್ಕಾರಕ್ಕೆ ಸೇರಿದ ಅಥವಾ ಅದರ ನಿಯಂತ್ರಣದಲ್ಲಿರುವ ಯಾವುದೇ ಕಟ್ಟಡ, ಭೂಮಿ, ಕಚೇರಿ, ಅಥವಾ ಆವರಣ ಎಂಬ ಅರ್ಥ.
Section 5:
ಅನಧಿಕೃತವಾಗಿ ಆಸ್ತಿಯನ್ನು ಬಳಸುವವರನ್ನು Estate Officer ನೋಟಿಸ್ ನೀಡಬಹುದು, ಹಾಗೂ ಬಲವಂತದಿಂದ ತೆರವು ಮಾಡಬಹುದು.
2. Official Secrets Act, 1923. ಪ್ರಮುಖ ಉದ್ದೇಶ
ಪೋರ್ಟ್, ಡಿಫೆನ್ಸ್, ರೈಲು, ವಿದ್ಯುತ್ ಉತ್ಪಾದನಾ ಘಟಕಗಳು, ಸಂವಹನ ಕೇಂದ್ರಗಳು ಮುಂತಾದ ಸಂವೇದನಾಶೀಲ ಸ್ಥಳಗಳಲ್ಲಿ ಚಿತ್ರ, ದಾಖಲೆ ಅಥವಾ ಮಾಹಿತಿ ಸಂಗ್ರಹಿಸುವುದು, ರಾಷ್ಟ್ರದ ಭದ್ರತೆಗೆ ಅಪಾಯ ಉಂಟುಮಾಡುವಂತೆ ಇದ್ದರೆ, ಕಠಿಣ ಶಿಕ್ಷೆಗೆ ಒಳಪಡುವುದು.
Section 3 & 5: ಅನಧಿಕೃತ ಪ್ರವೇಶ, ಫೋಟೋ ತೆಗೆದುಹಿಡಿಯುವುದು ಅಥವಾ ಮಾಹಿತಿ ಹಂಚಿಕೊಳ್ಳುವುದು ರಾಷ್ಟ್ರದ್ರೋಹದ ಶ್ರೇಣಿಯ ಅಪರಾಧ.
3. Central Industrial Security Force (CISF) Act, 1968
ಕೇಂದ್ರ ಸರ್ಕಾರದ ಉದ್ಯಮಗಳು, ಪೋರ್ಟ್ (ಬಂದರು)ಗಳು, ವಿಮಾನ ನಿಲ್ದಾಣಗಳು ಮುಂತಾದ ಮಹತ್ವದ ಆಸ್ತಿಗಳಿಗೆ ಭದ್ರತೆ ಒದಗಿಸುವ ಕಾನೂನು. CISF ಸಿಬ್ಬಂದಿಗೆ ಆ ಸ್ಥಳಗಳಲ್ಲಿ search, seizure, arrest ಮಾಡುವ ಅಧಿಕಾರ ಇದೆ.
4. Public Property (Prevention of Damage) Act, 1984
ಸರ್ಕಾರಿ ಕಟ್ಟಡಗಳು, ರಸ್ತೆ, ಸೇತುವೆ, ಪೋರ್ಟ್, ರೈಲು ಮುಂತಾದ ಸರ್ಕಾರದ ಆಸ್ತಿಗೆ ಹಾನಿ ಮಾಡಿದರೆ ಶಿಕ್ಷೆ.
5. National Highways Act, 1956
ರಾಷ್ಟ್ರೀಯ ಹೆದ್ದಾರಿ (NH) ಪ್ರದೇಶಗಳಲ್ಲಿ ಅನಧಿಕೃತ ಅಡ್ಡಿ, ನಿರ್ಮಾಣ, ಅಥವಾ ಸಭೆ / ಪ್ರದರ್ಶನ ನಡೆಸುವುದು ಕಾನೂನುಬಾಹಿರ.
Section 26 & 27: ಸರ್ಕಾರ ಅಥವಾ NHAI ಅಧಿಕಾರಿಯ ಅನುಮತಿ ಇಲ್ಲದೆ ಯಾವುದೇ ನಿರ್ಮಾಣ ಅಥವಾ ಉಪಯೋಗ ನಿಷಿದ್ಧ.
6. Major Port Authorities Act, 2021
ಪೋರ್ಟ್ ಪ್ರದೇಶಗಳಲ್ಲಿ Port Authority ಗೆ ಎಲ್ಲಾ ಆಡಳಿತ ಮತ್ತು ಭದ್ರತಾ ಅಧಿಕಾರ ಇದೆ.
Section 42: Port areaನಲ್ಲಿ ಯಾವುದೇ ಖಾಸಗಿ ಚಟುವಟಿಕೆ, ವ್ಯಾಪಾರ, ಪ್ರದರ್ಶನ ನಡೆಸಲು Port Authorityಯ ಪೂರ್ವಾನುಮತಿ ಬೇಕು. ಉಲ್ಲಂಘನೆ ಮಾಡಿದರೆ ದಂಡ ಮತ್ತು ಪ್ರದೇಶದಿಂದ ತಕ್ಷಣ ತೆರವು.
7.The Cantonments Act, 2006
ಸೇನಾ ಪ್ರದೇಶಗಳ (Cantonments) ಒಳಗೆ ಅನಧಿಕೃತ ಪ್ರವೇಶ ಅಥವಾ ಕಾರ್ಯಕ್ರಮ ಮಾಡಿದರೆ security violation ಆಗುತ್ತದೆ.
ಭಾರತದಲ್ಲಿ ರಾಜ್ಯ ಸರ್ಕಾರದ ಆಸ್ತಿಗಳ (State Government Properties) ರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ಈ ರೀತಿ ಇದೆ.
Karnataka Public Premises (Eviction of Unauthorised Occupants) Act, 1974.
ರಾಜ್ಯ ಸರ್ಕಾರ, ವಿಶ್ವವಿದ್ಯಾಲಯ, ನಿಗಮ, ಮಂಡಳಿ, ಮಹಾನಗರಪಾಲಿಕೆ, ತಾಲೂಕು ಪಂಚಾಯಿತಿ, ಸರ್ಕಾರಿ ಕಚೇರಿ ಮುಂತಾದವುಗಳಿಗೆ ಸೇರಿದ ಆಸ್ತಿಗಳಲ್ಲಿ ಅನಧಿಕೃತವಾಗಿ ವಾಸಿಸುವ ಅಥವಾ ಉಪಯೋಗಿಸುವವರನ್ನು ಹೊರಹಾಕಲು ಈ ಕಾನೂನು ಜಾರಿಯಲ್ಲಿದೆ.
Section 2(e): “Public Premises” ಎಂದರೆ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಯಾವುದೇ ಕಟ್ಟಡ, ಭೂಮಿ, ಕಚೇರಿ ಅಥವಾ ಆವರಣ.
Section 4-6: Estate Officer ಅಥವಾ Tahsildar / Deputy Commissioner ಅನಧಿಕೃತ ವಾಸದ ವಿರುದ್ಧ ನೋಟಿಸ್ ನೀಡಿ ಬಲವಂತದಿಂದ ತೆರವು ಮಾಡಬಹುದು.
Section 9: ಆವರಣ ಖಾಲಿ ಮಾಡದಿದ್ದರೆ, ಅಧಿಕಾರಿಗಳು ಪೊಲೀಸ್ ಸಹಾಯದಿಂದ ತೆರವು ಮಾಡಬಹುದು ಮತ್ತು ಆಸ್ತಿಯ ಹಾನಿಗೆ ದಂಡ ವಿಧಿಸಬಹುದು.
ಯಾವುದೇ ಸರ್ಕಾರಿ ಕಟ್ಟಡ, ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ, ಬಸ್ ನಿಲ್ದಾಣ ಮುಂತಾದ ರಾಜ್ಯ ಆಸ್ತಿಗೆ ಹಾನಿ ಮಾಡಿದರೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ. ರಾಜ್ಯ ಪೊಲೀಸ್ ಇಲಾಖೆಯು ಈ ಕಾನೂನಿನಡಿ ನೇರವಾಗಿ FIR ದಾಖಲಿಸಬಹುದು.
8.Indian Penal Code (IPC) provisions
ರಾಜ್ಯ ಆಸ್ತಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಧಿಗಳು
Section 441 – Criminal Trespass: ಸರ್ಕಾರಿ ಕಚೇರಿ ಅಥವಾ ಆವರಣಕ್ಕೆ ಅನುಮತಿಯಿಲ್ಲದೆ ಪ್ರವೇಶ ಮಾಡಿದರೆ.
Section 427 – Mischief causing damage: ಸರ್ಕಾರದ ಆಸ್ತಿಗೆ ಹಾನಿ ಮಾಡಿದರೆ.
Section 188 – Disobedience to an order of public servant: ಅಧಿಕಾರಿಯ ಆದೇಶ ಉಲ್ಲಂಘಿಸಿದರೆ.
Section 283 – Obstruction in public way: ಸಾರ್ವಜನಿಕ ರಸ್ತೆ ಅಥವಾ ಆವರಣದಲ್ಲಿ ಅಡ್ಡಿ ಉಂಟು ಮಾಡಿದರೆ.
9.Karnataka Land Revenue Act, 1964
ರಾಜ್ಯ ಸರ್ಕಾರದ ಭೂಮಿ ಅಥವಾ “Government Land” ಎಂದು ಗುರುತಿಸಲ್ಪಟ್ಟ ಪ್ರದೇಶದಲ್ಲಿ ಅನಧಿಕೃತ ಆಕ್ರಮಣ ಮಾಡಿದರೆ, Deputy Commissioner / Tahsildar ಅವರಿಗೆ ಅದನ್ನು ತೆರವು ಮಾಡಲು ಮತ್ತು Penalty ವಿಧಿಸಲು ಅಧಿಕಾರ ಇದೆ.
Section 94: ಸರ್ಕಾರಿ ಭೂಮಿ ಆಕ್ರಮಣೆ ಕಾನೂನುಬಾಹಿರ.
Section 192(A): ಆಕ್ರಮಣ ಮಾಡಿದರೆ ದಂಡ + ಬಂಧನ ಸಾಧ್ಯ.
10.The Karnataka Police Act, 1963
ರಾಜ್ಯದಲ್ಲಿನ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಟ್ಟಡಗಳು, ಕಾರ್ಯಕ್ರಮಗಳು, ರ‍್ಯಾಲಿಗಳು ಮುಂತಾದಲ್ಲಿ ಶಾಂತಿ ಹಾಗೂ ಭದ್ರತೆ ಕಾಪಾಡುವುದು ಪೊಲೀಸ್ ಇಲಾಖೆಯ ಕರ್ತವ್ಯ.
Section 31 & 32: ಯಾವುದೇ ಸಾರ್ವಜನಿಕ ಅಥವಾ ಸರ್ಕಾರಿ ಆವರಣದಲ್ಲಿ ಅಡ್ಡಿ, ಅನಧಿಕೃತ ಸಭೆ, ಅಥವಾ ಹಾನಿ ಮಾಡಿದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬಹುದು.
11.The Karnataka Transparency in Public Procurement Act, 1999
ರಾಜ್ಯ ಆಸ್ತಿಗಳ ಖರೀದಿ, ನಿರ್ವಹಣೆ, ಹರಾಜು, ಬಾಡಿಗೆ ಇತ್ಯಾದಿ ಎಲ್ಲಾ ವ್ಯವಹಾರಗಳಲ್ಲಿ ಅಕ್ರಮ / ಭ್ರಷ್ಟಾಚಾರ / ಖಾಸಗಿ ಉಪಯೋಗ ನಡೆದರೆ ಕ್ರಮ ಕೈಗೊಳ್ಳಲು ಈ ಕಾನೂನು.
12.Karnataka Municipalities Act, 1964 & BBMP Act, 2020
ನಗರ ಪ್ರದೇಶದ ಸರ್ಕಾರಿ ಆಸ್ತಿಗಳ (ಪಾರ್ಕ್, ಕಚೇರಿ, ಸಾರ್ವಜನಿಕ ಸ್ಥಳ) ದುರ್ಬಳಕೆ ಮಾಡಿದರೆ ಅಥವಾ ಹಾನಿ ಮಾಡಿದರೆ, ಪೌರಾಡಳಿತ (Municipality / Corporation) ನೇರವಾಗಿ ಕ್ರಮ ಕೈಗೊಳ್ಳಬಹುದು. ಸ್ಥಳೀಯ ಪೊಲೀಸ್ ಸಹಾಯದಿಂದ ತೆರವು ಸಾಧ್ಯ.
13.Forest (Conservation) Act, 1980 & Karnataka Forest Act, 1963
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ನಿರ್ಮಾಣ, ಕಟಾವು, ಅಥವಾ ಚಟುವಟಿಕೆ ನಡೆಸಿದರೆ ಕಠಿಣ ಶಿಕ್ಷೆ. ಈ ಪ್ರದೇಶಗಳು ಕೂಡ ರಾಜ್ಯ ಸರ್ಕಾರದ ಆಸ್ತಿಯೇ ಆಗಿವೆ. ಶಾಲೆ ಆವರಣದಲ್ಲಿ ಪಂಚಾಯತ್ ಭೂಮಿ ಎಂಬ ವಿಷಯಕ್ಕೆ ರಾಜ್ಯ ಸರ್ಕಾರದ ಹಲವು ಕಾನೂನುಗಳು ಇದೆ. ಭೂಮಿಯ ಸ್ವಾಮ್ಯ ಸ್ಪಷ್ಟಪಡಿಸಬೇಕು. ಆ ಭೂಮಿ ಯಾರ ಹೆಸರಿನಲ್ಲಿ ದಾಖಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.
RTC (Record of Rights), Survey Record, Mutation Register Extract, Tippani
ಇವುಗಳಲ್ಲಿ ಭೂಮಿ “ಪಂಚಾಯತ್” ಅಥವಾ “Education Department / School” ಎಂದು ದಾಖಲಾಗಿದ್ದರೆ ಅಥವಾ ಸರ್ಕಾರದ ಯಾವುದೇ ಇಲಾಖೆಯ ಹೆಸರಲ್ಲಿ ಇದ್ದರೆ ಅಲ್ಲಿ ಅನಧಿಕೃತ ಬಳಕೆ ಮಾಡಲಾಗದು. ಶಾಲೆ ಕಟ್ಟಿರುವ ಭೂಮಿ ಗ್ರಾಮ ಪಂಚಾಯತ್ ಸ್ವಾಮ್ಯದಲ್ಲಿದ್ದರೆ, ಅದು ಸರ್ಕಾರದ “Grama Panchayat Property vested under Panchayat Raj Act” ಆಗಿರುತ್ತದೆ. ಅದನ್ನು ಯಾರೂ ಖಾಸಗಿ ಉದ್ದೇಶಕ್ಕೆ ಅಥವಾ ರಾಜಕೀಯ / ವ್ಯಾಪಾರ ಚಟುವಟಿಕೆಗಳಿಗೆ ಬಳಸಲು ಸಾಧ್ಯವಿಲ್ಲ.
14. Karnataka Panchayat Raj Act, 1993
Section 62(1)(f) : ಪಂಚಾಯತ್‌ನ ಆಸ್ತಿಗಳನ್ನು ಸಂರಕ್ಷಿಸುವ ಜವಾಬ್ದಾರಿ ಪಂಚಾಯತ್‌ನದ್ದೇ.
Section 232 & 233 : ಪಂಚಾಯತ್ ಆಸ್ತಿಯನ್ನು ಹಾನಿ ಮಾಡಿದರೆ ಅಥವಾ ಅನಧಿಕೃತವಾಗಿ ಉಪಯೋಗಿಸಿದರೆ ದಂಡ ವಿಧಿಸಬಹುದು.
Section 237 : ಪಂಚಾಯತ್ ಆಸ್ತಿಯನ್ನು ಬೇರೆ ಇಲಾಖೆಗೆ ಅಥವಾ ಖಾಸಗಿ ವ್ಯಕ್ತಿಗೆ ನೀಡಲು Taluk Panchayat / Zilla Panchayat ಅನುಮತಿ ಅಗತ್ಯ. ಅಂದರೆ, ಶಾಲೆ ಆವರಣದಲ್ಲಿ ಪಂಚಾಯತ್‌ನ ಭೂಮಿ ಇದ್ದರೆ — ಅದು ಶಾಲೆಯ ಶೈಕ್ಷಣಿಕ / ಸಾರ್ವಜನಿಕ ಉಪಯೋಗಕ್ಕೆ ಮಾತ್ರ ಬಳಸಬೇಕು. ಬೇರೆ ಖಾಸಗಿ ಅಥವಾ ರಾಜಕೀಯ ಕಾರ್ಯಕ್ರಮಕ್ಕೆ ನೀಡುವುದು ಕಾನೂನುಬಾಹಿರ.
15.Karnataka Education Act, 1983 Section 111 & 112
ಶಾಲೆ ಆವರಣ, ಮೈದಾನ, ಕಟ್ಟಡಗಳು ಇವು ಶಿಕ್ಷಣ ಉದ್ದೇಶಕ್ಕಾಗಿ ಮಾತ್ರ ಬಳಸಬೇಕೆಂಬ ಕಾನೂನು ಬದ್ಧ ನಿಯಮ ಇದೆ. ಶಾಲಾ ಆವರಣದಲ್ಲಿ ಯಾವುದೇ ಧಾರ್ಮಿಕ, ರಾಜಕೀಯ, ಅಥವಾ ವ್ಯಾಪಾರ ಚಟುವಟಿಕೆ ನಡೆದರೆ Block Education Officer (BEO) ಕ್ರಮ ಕೈಗೊಳ್ಳಬಹುದು.
16.Karnataka Land Revenue Act, 1964
Section 67 & 94: ರಾಜ್ಯ ಅಥವಾ ಪಂಚಾಯತ್‌ನ ಭೂಮಿಯ ಮೇಲೆ ಯಾವುದೇ ಅನಧಿಕೃತ ಕಟ್ಟಡ / ಕಾರ್ಯಕ್ರಮ / ಖಾಸಗಿ ಉಪಯೋಗ ನಿಷೇಧ. ಅನಧಿಕೃತ ಉಪಯೋಗ ಕಂಡುಬಂದರೆ Tahsildar ಅಥವಾ Deputy Commissioner Eviction Order ನೀಡಬಹುದು.
17.School Development & Monitoring Committee (SDMC) ಪಾತ್ರ: ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿಯೂ SDMC ರಚನೆಯಾಗಿದೆ. ಶಾಲಾ ಆವರಣದಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಬಳಕೆ ಮಾಡಲು SDMCಯ ಲಿಖಿತ ಅನುಮತಿ ಅಗತ್ಯ. ಅನುಮತಿಯಿಲ್ಲದೆ ಯಾರಾದರೂ ಆವರಣ ಉಪಯೋಗಿಸಿದರೆ, SDMC ಅಥವಾ BEO ವರದಿ ಮಾಡಿ ಪೊಲೀಸ್ ಕ್ರಮ ಕೈಗೊಳ್ಳಬಹುದು.
Rss ನವರಿಗೆ ಅನಧಿಕೃತವಾಗಿ ಸರ್ಕಾರಿ ಸ್ಥಳ ಉಪಯೋಗ ಮಾಡಲು ಬಿಡಬೇಕು ಅನ್ನುವುದಾದರೆ, ಕೇಂದ್ರ ಸರ್ಕಾರದ ಆಧೀನದಲ್ಲಿರುವ ಪೋರ್ಟ್, ಪೋಸ್ಟ್ ಆಫೀಸ್, ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಪಕ್ಷ ಅಥವಾ ಸಂಘಟನೆಗಳ ಅನಧಿಕೃತ ಕಾರ್ಯಕ್ರಮ ಮಾಡಲು ಆರೆಸ್ಸೆಸ್‌ನ ಕೇಂದ್ರ ಸರ್ಕಾರ ಒಪ್ಪುವುದೇ?
ಬಿಜಿಪಿ ಆರೆಸ್ಸೆಸ್ ಆಡಳಿತವಿರುವ ಗುಜರಾತ್ ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ ಇದೆ ಕಾನೂನುಗಳ ಬಗ್ಗೆ ಆರೆಸ್ಸೆಸ್ ನ ಉತ್ತರ ಏನು?
ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದು ಈ ಮೇಲಿನ ಕಾನೂನಿನ ಆಶಯಗಳನ್ನೆ ಆಗಿದೆ. ಆದರೆ rss ಈ ಕಾನೂನುಗಳು ತನಗೆ ಅನ್ವಯ ಆಗುವುದಿಲ್ಲ ಎಂದೆ ವಾದಿಸುತ್ತದೆ. ಅದು ಆರಾಜಕತೆಯನ್ನು ಬಯಸುತ್ತದೆ. ಸಂವಿಧಾನವನ್ನು ತಿರಸ್ಕಾರ ಮಾಡುತ್ತದೆ. ಅದುವೇ ಅದರ ಗುಣ ನಡತೆಯಾಗಿದೆ.
ಸರ್ಕಾರದ ಆಸ್ತಿಯನ್ನು ಪರವಾನಿಗೆ ಇಲ್ಲದೆ ಖಾಸಗಿ ಕಾರ್ಯಕ್ರಮಕ್ಕೆ ಬಳಸುವುದು ಅಪರಾಧ. ಈ ನಿಷೇಧ ಕೇವಲ ಆರೆಸ್ಸೆಸ್‌ಗೆ ಮಾತ್ರ ಅಲ್ಲ. ಎಲ್ಲರಿಗೂ, ಎಲ್ಲಾ ಕಾಲಕ್ಕೂ, ಎಲ್ಲಾ ಸರ್ಕಾರ ಇದ್ದಾಗಲೂ. ಅದು ನೆಲದ ಕಾನೂನು. ಅದನ್ನು ಒಪ್ಪದವ ದೇಶದ್ರೋಹಿ.

ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ




