ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತ- ಧೂಮಪರದೆಯ ಹಿಂದಿನ ಅಸಲು ಕಾರಣವೇನು? ಏರ್‌ಬಸ್ ತಂತ್ರಾಂಶ ದೋಷವೇ?

Date:

ಏರ್‌ಬಸ್‌ ವಿಮಾನಗಳಲ್ಲಿ ಉಂಟಾದ ಸಮಸ್ಯೆಯು ಜಾಗತಿಕವಾಗಿ ವಿಮಾನಯಾನ ಸಂಸ್ಥೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು. ಈ ಬೆಳವಣಿಗೆ ನಡೆದಿದ್ದು ಅಮೆರಿಕದ ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುವ ‘ಥಾಂಕ್ಸ್‌ ಗಿವಿಂಗ್’ ವೀಕೆಂಡ್ ವೇಳೆಯೇ. ಹಲವು ವಿಮಾನಗಳು ರದ್ದಾದ ಕಾರಣ ದಶಲಕ್ಷಕ್ಕೂ ಅಧಿಕ ಪ್ರಯಾಣಿಕರು ಪರದಾಡುವಂತಾಯಿತು.

ಸದ್ಯ ಎಲ್ಲೆಡೆ ಇಂಡಿಗೋ ವಿಮಾನ ರದ್ದಾದ ಬಗ್ಗೆ ಚರ್ಚೆ ಆಧಿಕ್ಯಗೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂಡಿಗೋ ವಿರುದ್ಧ ಆಕ್ರೋಶವೂ ಕಂಡುಬರುತ್ತಿದೆ. ಸಿಬ್ಬಂದಿಗೆ ಒಂದು ವಾರ ವಿಶ್ರಾಂತಿ ನೀಡುವುದನ್ನು ಕಡ್ಡಾಯಗೊಳಿಸುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿಯಮದಿಂದಾಗಿ ಸಿಬ್ಬಂದಿ ಕೊರತೆ ಉಂಟಾಗಿದೆ. ಇದರಿಂದಾಗಿ ಸುಮಾರು 500ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಇಂಡಿಗೋ ಹೇಳಿಕೊಂಡಿದೆ. ಇದಾದ ಬಳಿಕ ಡಿಜಿಸಿಎ ನಿಯಮವನ್ನು ಹಿಂಡಪಡೆದಿದೆ. ಆದರೆ ನೈಜವಾಗಿ ವಿಮಾನ ರದ್ದುಪಡಿಸಲು ಸಿಬ್ಬಂದಿ ಕೊರತೆ ಕಾರಣವೇ? ಅಥವಾ ಏರ್‌ಬಸ್ ತಂತ್ರಾಂಶ ದೋಷವೇ ಕಾರಣವೇ? ಎಂಬ ಗುಮಾನಿ ಸದ್ಯ ಹುಟ್ಟಿಕೊಂಡಿದೆ.

ಇತ್ತೀಚೆಗೆ ಏರ್‌ಬಸ್‌ A320 ಸಾಫ್ಟ್‌ವೇರ್‌ನಲ್ಲಿ ದೋಷ ಉಂಟಾಗಿತ್ತು. ಇದರಿಂದಾಗಿ ಸುಮಾರು 200ಕ್ಕೂ ಅಧಿಕ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತು. ಹಲವು ವಿಮಾನಗಳು ರದ್ದಾಗಿದ್ದವು ಮತ್ತು ಇನ್ನು ಕೆಲವು ವಿಳಂಬವಾಗಿದ್ದವು. ಇದಾದ ಮರುದಿನವೇ ಎಲ್ಲ ಏರ್‌ಬಸ್‌ A320 ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್ ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಹೇಳಿಕೊಂಡಿತ್ತು. ಆದರೆ ವಾಸ್ತವದಲ್ಲಿ ಎಲ್ಲ ತಾಂತ್ರಿಕ ಸಮಸ್ಯೆಗಳು ಬಗೆಹರಿಯದಿಲ್ಲ, ಆದರೆ ತಮ್ಮ ತಾಂತ್ರಿಕ ದೋಷಗಳನ್ನು ಮುಚ್ಚಿಡಲು ಇಂಡಿಗೋ ಒದ್ದಾಡುತ್ತಿರುವ ಬಗ್ಗೆಯೂ ಚರ್ಚೆಗಳಿವೆ. ಈ ತರ್ಕಕ್ಕೆ ಹಲವು ಕಾರಣಗಳೂ ಇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? A320 ಸಾಫ್ಟ್‌ವೇರ್‌ನಲ್ಲಿ ದೋಷ: 200ಕ್ಕೂ ಅಧಿಕ ಏರ್‌ ಇಂಡಿಯಾ, ಇಂಡಿಗೋ ವಿಮಾನಗಳ ವಿಳಂಬ- ರದ್ದತಿ ಸಾಧ್ಯತೆ

ಈ ತರ್ಕಕ್ಕೆ ಕಾರಣಗಳೇನು?

ಫ್ರಾನ್ಸ್, ಜರ್ಮನಿ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಂತಹ ಹಲವು ಯುರೋಪಿಯನ್ ದೇಶಗಳ ಏರೋಸ್ಪೇಸ್ ಕಂಪನಿಗಳ ಒಕ್ಕೂಟವಾದ ಫ್ರೆಂಚ್ ಮೂಲದ ಏರ್‌ಬಸ್‌ ಸಂಸ್ಥೆ ತಯಾರಿಸಿದ ವಿಮಾನಗಳಲ್ಲಿ A320 ವಿಮಾನ ಕೂಡಾ ಒಂದಾಗಿದೆ. ಪ್ರಸ್ತುತ ವಿಶ್ವದಾದ್ಯಂತ ಹೆಚ್ಚಾಗಿ (11 ಸಾವಿರಕ್ಕೂ ಹೆಚ್ಚು) ಚಾಲ್ತಿಯಲ್ಲಿರುವ ವಿಮಾನ ಇದಾಗಿದೆ. ನವೆಂಬರ್‌ 28ರಿಂದಲೇ ಏರ್‌ಬಸ್‌ನಲ್ಲಿ ಜಾಗತಿಕವಾಗಿ ಬಿಕ್ಕಟ್ಟು ಶುರುವಾಗಿದೆ. A320 ಸಾಫ್ಟ್‌ವೇರ್‌ನಲ್ಲಿ ದೋಷ ಉಂಟಾದ ಕಾರಣ ಏರ್‌ಬಸ್ ಸುಮಾರು 6,000ಕ್ಕೂ ಹೆಚ್ಚು ವಿಮಾನಗಳನ್ನು ತಕ್ಷಣದಿಂದ ಆಕಾಶದಿಂದ ಕೆಳಗಿಳಿಸುವಂತೆ ಆದೇಶಿಸಿತು.

ಸಾಫ್ಟ್‌ವೇರ್ ಅಪ್‌ಡೇಟ್ ತುರ್ತಾಗಿ ನಡೆಯಬೇಕು ಎಂಬ ಆದೇಶ ಹೊರಡಿಸುವಾಗ ಸುಮಾರು ಒಂದು ಸಾವಿರಕ್ಕೂ ಅಧಿಕ ವಿಮಾನಗಳು ಗಗನದಲ್ಲಿ ಹಾರುತ್ತಿತ್ತು. ಇದು ಆತಂಕಕ್ಕೂ ಕಾರಣವಾಗಿತ್ತು. ಏರ್‌ಬಸ್ ಆದೇಶದ ಬೆನ್ನಲ್ಲೇ ಯುರೋಪಿಯನ್ ಯೂನಿಯನ್ ಅವಿಯೇಷನ್ ಸೇಫ್ಟಿ ಏಜೆನ್ಸಿ (EASA) ತಕ್ಷಣದಿಂದ ಮಾರ್ಗಸೂಚಿಯನ್ನು ಹೊರಡಿಸಿ, A320, A319, A321 ವಿಮಾನಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. (EASA ಮಾರ್ಗಸೂಚಿ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ)

ಏರ್‌ಬಸ್‌ ವಿಮಾನಗಳಲ್ಲಿ ಉಂಟಾದ ಸಮಸ್ಯೆಯು ಜಾಗತಿಕವಾಗಿ ವಿಮಾನಯಾನ ಸಂಸ್ಥೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು. ಅಮೆರಿಕವೂ ಇದೇ ರೀತಿಯ ಕ್ರಮವನ್ನು ಕೈಗೊಂಡಿತು. ಆದರೆ ಈ ಬೆಳವಣಿಗೆ ನಡೆದಿದ್ದು ಅಮೆರಿಕದ ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುವ ಥಾಂಕ್ಸ್‌ಗಿವಿಂಗ್ ವೀಕೆಂಡ್ ವೇಳೆಯೇ ಹಲವು ವಿಮಾನಗಳು ರದ್ದಾದ ಕಾರಣ ದಶಲಕ್ಷಕ್ಕೂ ಅಧಿಕ ಪ್ರಯಾಣಿಕರು ಪರದಾಡುವಂತಾಯಿತು. ಅಮೆರಿಕದಲ್ಲಿ ಥ್ಯಾಂಕ್ಸ್‌ಗಿವಿಂಗ್ ವೇಳೆಯಲ್ಲಿ ಜೆಟ್‌ಬ್ಲೂ, ಅಮೆರಿಕನ್ ಏರ್‌ಲೈನ್ಸ್, ಡೆಲ್ಟಾ, ಯುನೈಟೆಡ್, ಫ್ರಂಟಿಯರ್ ಮತ್ತು ಸ್ಪಿರಿಟ್‌ನಂತಹ ಕಂಪನಿಗಳು ಸುಮಾರು 1,600 A320 ವಿಮಾನಗಳನ್ನು ಕೆಳಗಿಳಿಸಬೇಕಾಗಿತ್ತು.

ಭಾರತದಲ್ಲಿಯೂ ಇಂಡಿಗೋ, ಏರ್‌ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಂತಹ ಕಂಪನಿಗಳ ಹಲವು ವಿಮಾನಗಳು ರದ್ದಾದವು. ಇದರಿಂದಾಗಿ ದೆಹಲಿ, ಬೆಂಗಳೂರು, ಮುಂಬೈಯಂತಹ ನಿಲ್ದಾಣಗಳಲ್ಲಿ ದಟ್ಟಣೆ ಉಂಟಾಯಿತು. ಇಂಡಿಗೋ ಸುಮಾರು ಶೇ.40ರಷ್ಟು ವಿಮಾನಗಳನ್ನು ಅಪ್‌ಡೇಟ್ ಮಾಡಿತು. ಜಪಾನ್‌ನ ‘ANA 65’, ಫ್ರಾನ್ಸ್‌ನ ಏರ್ ‘ಫ್ರಾನ್ಸ್ 35’ ವಿಮಾನಗಳನ್ನು ರದ್ದುಗೊಳಿಸಿತು. ಕೊಲಂಬಿಯಾದ ಅವಿಯಾಂಕಾ, ನ್ಯೂಜಿಲೆಂಡ್‌ನ ಏರ್ ನ್ಯೂಜಿಲೆಂಡ್, ಸೌದಿ ಫ್ಲೈನಾಸ್ ಮತ್ತು ಇತರ ಏರ್‌ಲೈನ್‌ಗಳು ಡಿಸೆಂಬರ್ 8ರವರೆಗೆ ಬುಕಿಂಗ್‌ಗಳನ್ನು ನಿಲ್ಲಿಸಿವೆ.

ಇದನ್ನು ಓದಿದ್ದೀರಾ? ಇಂಡಿಗೋ ರದ್ದು ಎಫೆಕ್ಟ್: ಹುಬ್ಬಳ್ಳಿಯಲ್ಲಿ ನಡೆದ ತಮ್ಮದೇ ಆರತಕ್ಷತೆಗೆ ‘ಆನ್‌ಲೈನ್‌’ನಲ್ಲಿ ಹಾಜರಾದ ನವದಂಪತಿ

ಈ ಎಲ್ಲ ಬೆಳವಣಿಗೆ ನಡುವೆ ವಿಶ್ವದಾದ್ಯಂತ 24 ಗಂಟೆಗಳಲ್ಲಿ ಎಂಜಿನಿಯರ್‌ಗಳು ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿದ್ದರು. ಅದಾಗುತ್ತಿದ್ದಂತೆ ಇನ್ನೂ ಕೆಲವು ತಂತ್ರಾಂಶಗಳ ಸಮಸ್ಯೆಗಳು, ಗುಣಮಟ್ಟದ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಏರ್‌ಬಸ್ ಘೋಷಿಸಿತು. ಇವೆಲ್ಲವೂ ನೇರವಾಗಿ ಏರ್‌ಬಸ್ ಷೇರು ಮಾರುಕಟ್ಟೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಿತು. ಏರ್‌ಬಸ್ ಷೇರು ಶೇ.6ರಷ್ಟು ಕುಸಿತ ಕಂಡಿತು. ಕಂಪನಿಯ ಮಾರುಕಟ್ಟೆ ಮೌಲ್ಯ ₹10,000 ಕೋಟಿಗೂ ಹೆಚ್ಚು ಕುಸಿಯಿತು. ಇದೀಗ ಇಂತಹ ಅಪಾಯದಿಂದ ತಪ್ಪಿಸಿಕೊಳ್ಳುವ ಯತ್ನವನ್ನು ಇಂಡಿಗೋ ಮಾಡುತ್ತಿದೆಯ?

ಷೇರು ಕುಸಿತದಿಂದ ತಪ್ಪಿಸಿಕೊಳ್ಳಲು ಧೂಮಪರದೆಯೇ?

ಸತ್ಯವನ್ನು ಮರೆಮಾಚಲು ಹಲವು ಸಂಸ್ಥೆಗಳು ಇತರೆ ಕಾರಣಗಳನ್ನು ಮುನ್ನೆಲೆಗೆ ತಂದಿಡುತ್ತದೆ. ಇಂತಹ ಧೂಮಪರದೆ(ಸತ್ಯವನ್ನು ಮರೆಮಾಚಲು ವಿಷಯ ಪಲ್ಲಟ ಮಾಡುವುದು) ಸಾಮಾನ್ಯವಾಗಿಯೇ ವಿಶ್ವದಲ್ಲಿ ನಡೆಯುತ್ತಾ ಬಂದಿರುವಂತದ್ದು. ಸದ್ಯದ ಬೆಳವಣಿಗೆ ಇಂಡಿಗೋ ಸಂಸ್ಥೆಯ ಮೇಲೆಯೂ ಇದೇ ಅನುಮಾನ ಹುಟ್ಟುಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ಸಿಬ್ಬಂದಿ ಕೊರತೆ ಎಂದು ಇಂಡಿಗೋ ಹೇಳುತ್ತಿರುವುದು ನಿಜವೇ?

ಇಂಡಿಗೋ ಒಟ್ಟಾಗಿ 410ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದ್ದು, ಇದರಲ್ಲಿ ಸುಮಾರು 397 ಏರ್‌ಬಸ್ ವಿಮಾನಗಳಾಗಿವೆ. ಅಂದರೆ ಮುಕ್ಕಾಲು ಭಾಗಕ್ಕೂ ಅಧಿಕ ಏರ್‌ಬಸ್ ವಿಮಾನಗಳನ್ನೇ ಇಂಡಿಗೋ ಹೊಂದಿರುವಂತದ್ದು. ಇದೀಗ ತಂತ್ರಾಂಶ ಸಮಸ್ಯೆ ಕಂಡು ಬಂದಿರುವುದೂ ಏರ್‌ಬಸ್‌ನಲ್ಲಿ ಆಗಿರುವುದರಿಂದ ಇಂಡಿಗೋ ಹೇಳುವ ಸಿಬ್ಬಂದಿ ಕೊರತೆ ಸಬೂಬು ತಾಳೆಯಾಗುತ್ತಿಲ್ಲ. ಬಹುತೇಕ ಏರ್‌ಬಸ್‌ ವಿಮಾನಗಳನ್ನೇ ಹೊಂದಿರುವ ಇಂಡಿಗೋ ಏರ್‌ಬಸ್ ತಂತ್ರಾಂಶ ಸಮಸ್ಯೆ ಮರೆಮಾಚುವ ಯತ್ನ ಮಾಡುತ್ತಿದೆಯೇ? ಏರ್‌ಬಸ್ ತಂತ್ರಾಂಶ ದೋಷವೇ ವಿಮಾನಗಳನ್ನು ರದ್ದುಪಡಿಸಲು ಕಾರಣವೇ? ಹೀಗೆ ಹಲವು ಪ್ರಶ್ನೆಗಳು ಕಾಡುತ್ತಿವೆ. ತಂತ್ರಾಂಶ ಸಮಸ್ಯೆ ಇರುವ ವಿಮಾನಗಳನ್ನು ಇಂಡಿಗೋ ಹಾರಲು ಬಿಟ್ಟರೆ ಪ್ರಯಾಣಿಕರ ರಕ್ಷಣೆಗೆ ಯಾರು ಹೊಣೆ? ಹೀಗೆ ಹಲವು ಪ್ರಶ್ನೆಗಳಿವೆ. ಒಟ್ಟಿನಲ್ಲಿ ಇಂಡಿಗೋ ನೀಡಿರುವ ಕಾರಣವು ‘ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ’ ಕಾಣುತ್ತಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...