ABVP ಕುಮ್ಮಕ್ಕು | ಮಣಿದ BJP ಸರ್ಕಾರ, ರಾಜ್ಯಪಾಲರು; ಐದು ವಿವಿಗಳ ಉಪಕುಲಪತಿಗಳಿಗೆ ಗೇಟ್‌ಪಾಸ್‌!

Date:

ಬಿಜೆಪಿ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಎಬಿವಿಪಿ (ಬಿಜೆಪಿಯ ವಿದ್ಯಾರ್ಥಿ ಘಟಕ) ಉಪಟಳ ಹೆಚ್ಚಾದಂತೆ ತೋರುತ್ತಿದೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಎಬಿವಿಪಿ ದಾಂಧಲೆಗಳು ಹೆಚ್ಚಾಗಿವೆ. ಈಗ, ಎಬಿವಿಪಿಯ ತಂತ್ರಗಳು ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನೇ ಅಮಾನತು/ವಜಾಗೊಳಿಸುವ ಹಂತಕ್ಕೆ ಬೆಳೆಯುತ್ತಿವೆ ಎಂಬ ಮಾತುಗಳಿವೆ. ಅದಕ್ಕೆ ಪೂರಕವೆಂಬಂತೆ ಜೈಪುರದ ಜಾಬ್ನರ್‌ನಲ್ಲಿರುವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಬಲರಾಜ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ. ಅವರ ಅಮಾನತನ್ನು ಎಬಿವಿಪಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಜಾಬ್ನರ್ ವಿಶ್ವವಿದ್ಯಾಲಯದ ಉಪಕುಲಪತಿ ವಿರುದ್ಧ ಎಬಿವಿಪಿ ಅಕ್ರಮಗಳ ಆರೋಪ ಮಾಡಿತ್ತು. ಪ್ರತಿಭಟನೆಗಳನ್ನು ನಡೆಸಿತ್ತು. ಈ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲ ಹರಿಭಾವು ಬಗಾಡೆ ಆದೇಶಿಸಿದ್ದಾರೆ.

ರಾಜಸ್ಥಾನದಲ್ಲಿ ಉಪಕುಲಪತಿಗಳ ಅಮಾನತು/ವಜಾ ಇದೇ ಮೊದಲಲ್ಲ. 2025ರ ಜನವರಿಯಿಂದ ಇಲ್ಲಿಯವರೆಗೆ ನಾಲ್ಕು ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ರಾಜಪಾಲರು ಹೊರಹಾಕಿದ್ದಾರೆ. ಮತ್ತೊಬ್ಬರು ಒತ್ತಡದ ಮೇರೆಗೆ ರಾಜೀನಾಮೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೇ ವರ್ಷದ ಆಗಸ್ಟ್‌ನಲ್ಲಿ, ಬಿಕಾನೇರ್‌ನ ಸ್ವಾಮಿ ಕೇಶವಾನಂದ ರಾಜಸ್ಥಾನ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಜೋಧಪುರದ ಕೃಷಿ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿಯೂ ಆಗಿದ್ದ ಡಾ. ಅರುಣ್ ಕುಮಾರ್ ಅವರನ್ನು ರಾಜ್ಯಪಾಲರು ಅಮಾನತು ಮಾಡಿದರು. ಇದಾದ ನಂತರ, ಅಕ್ಟೋಬರ್ 7 ರಂದು, ಜೈಪುರದ ಜಾಬ್ನರ್‌ನ ಶ್ರೀ ಕರಣ್ ನರೇಂದ್ರ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಬಲರಾಜ್ ಸಿಂಗ್ ಅವರನ್ನು, ಜೋಧಪುರದ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಕೆ.ಎಲ್ ಶ್ರೀವಾಸ್ತವ ಅವರನ್ನು ಫೆಬ್ರವರಿ 10 ರಂದು, ನವೆಂಬರ್ 11 ರಂದು, ಭರತ್‌ಪುರದ ಮಹಾರಾಜ ಸೂರಜ್‌ಮಲ್ ಬ್ರಿಜ್ ವಿಶ್ವವಿದ್ಯಾಲಯದ ಉಪಕುಲಪತಿ ರಮೇಶ್ ಚಂದ್ರ ಅವರನ್ನು ರಾಜ್ಯಪಾಲರು ಅಮಾನತು ಮಾಡಿದರು.

ಈ ಎಲ್ಲರ ಅಮಾನತಿಗೂ ರಾಜ್ಯಪಾಲರ ಕಚೇರಿ ನೀಡಿದ್ದ ವಿವರಣೆ ಬಹುತೇಕ ಒಂದೇ ಆಗಿತ್ತು; “ವಿಶ್ವವಿದ್ಯಾಲಯಗಳಿರುವ ಪ್ರದೇಶಗಳ ವಿಭಾಗೀಯ ಆಯುಕ್ತರ ತನಿಖಾ ವರದಿಯ ಆಧಾರದ ಮೇಲೆ ಅಮಾನತು ಮಾಡಲಾಗಿದೆ. ಅಧಿಕಾರ ದುರುಪಯೋಗ, ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯ ಹಾಗೂ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟ ಉಂಟುಮಾಡುವುದು, ವಿಶ್ವವಿದ್ಯಾಲಯದ ಸಂಪನ್ಮೂಲಗಳು ಮತ್ತು ನಿಧಿಗಳ ದುರುಪಯೋಗ, ಅನಿಯಮಿತ ವೆಚ್ಚ ಹಾಗೂ ವಿಶ್ವವಿದ್ಯಾಲಯ ಮತ್ತು ಹಣಕಾಸು ಇಲಾಖೆಯ ನಿಯಮಗಳನ್ನು ಉಲ್ಲಂಘನೆಯ ಆರೋಪಗಳು ಪ್ರಾಥಮಿಕವಾಗಿ ಸಾಬೀತಾಗಿದೆ” ಎಂಬುದೇ ಆಗಿದೆ. ಈ ಎಲ್ಲರ ಅಮಾನತು ಆದೇಶ ಹೊರಬಿದ್ದಾಗ, ಎಬಿವಿಪಿ ಪಟಾಕಿ ಸಿಡಿಸಿ ಸಂಭ್ರಮಿಸಿತ್ತು.

ಡಾ. ಕುಮಾರ್ ಅವರ ಅಮಾನತನ್ನು ಸಂಭ್ರಮಿಸಿರುವ ಎಬಿವಿಪಿ ಪ್ರಾಂತ ಸಂಯೋಜಕ, ವಿಶ್ವವಿದ್ಯಾಲಯದ ವಿದ್ಯಾರ್ಥಿ ನವೀನ್ ಚೌಧರಿ, “ನಾವು ಮೂರು-ನಾಲ್ಕು ಬಾರಿ ರಾಜ್ಯಪಾಲರನ್ನು ಭೇಟಿಯಾಗಿ, ಕುಮಾರ್‌ ಅವರ ಅಕ್ರಮಗಳನ್ನು ಎತ್ತಿ ತೋರಿಸಿದ್ದೆವು. 2024ರ ನವೆಂಬರ್‌ನಲ್ಲಿ ಮೊದಲ ಸಭೆ ನಡೆಸಿದ್ದೆವು. ಬಳಿಕ, ಪತ್ರಿಕಾಗೋಷ್ಠಿಗಳನ್ನೂ ನಡೆಸಿ, ಮಾಹಿತಿ ಹಂಚಿಕೊಂಡಿದ್ದೆವು. 23 ದಿನಗಳ ಕಾಲ ಪ್ರತಿಭಟನೆಯನ್ನೂ ನಡೆಸಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.

ಜಾಬ್ನರ್‌ ವಿಶ್ವವಿದ್ಯಾಲಯದ ಡಾ. ಬಲರಾಜ್‌ ಸಿಂಗ್‌ ಸಿಂಗ್ ಅವರ ಅಧಿಕಾರಾವಧಿ ಅಕ್ಟೋಬರ್ 14ರಂದು ಕೊನೆಗೊಳ್ಳುತ್ತಿತ್ತು. ಅವರು ಅಂದು ನಿವೃತ್ತಿಗೊಳ್ಳುತ್ತಿದ್ದರು. ಆದರೂ, ಅವರನ್ನು ನಿವೃತ್ತಿಗೂ 7 ದಿನಗಳ ಮುಂಚೆ ಅಮಾನತು ಮಾಡಲಾಯಿತು. ಅದೂ, ಅವರ ವಿರುದ್ಧ ಎಬಿವಿಪಿ ದೀರ್ಘಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದ ಕಾರಣಕ್ಕೆ ಎಂದು ಹೇಳಲಾಗಿದೆ.

“ವಿಶ್ವವಿದ್ಯಾಲಯಗಳ ಉಪಕುಲಪತಿಗಳ ವಿಚಾರದಲ್ಲಿ ನಡೆಯುತ್ತಿರುವುದು ಪಿರೂತಿ ಮತ್ತು ಗೂಂಡಾಗಿರಿಯ ಪರಮಾವಧಿ. ನಾನು ಮೂರು ವರ್ಷಗಳಲ್ಲಿ ಮಾಡಿದ್ದನ್ನು ಮುಂದಿನ ಉಪಕುಲಪತಿಗಳು ಹತ್ತು ವರ್ಷಗಳಲ್ಲಿ ಮಾಡಲು ಸಾಧ್ಯವಿಲ್ಲ” ಎಂದು ಸಿಂಗ್ ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಎಬಿವಿಪಿ ಕುರಿತು ಮಾತನಾಡಿರುವ ಸಿಂಗ್, “ನಾನು ಅವರನ್ನು ಎಬಿವಿಪಿ ಎಂದು ಕರೆಯುವುದಿಲ್ಲ. ಅವರು ಗೂಂಡಾಗಳು, ಬ್ಯಾಡ್‌ಮ್ಯಾಶ್‌ಗಳು ಹಾಗೂ ಅಪರಾಧಿಗಳು” ಎಂದಿದ್ದಾರೆ.

“ಬಿಕಾನೇರ್ ಅಥವಾ ಉದಯಪುರದಲ್ಲಿ ‘ಹೊರಗಿನಿಂದ’ ಬಂದ ಉಪಕುಲಪತಿಗಳನ್ನು ಬಲವಂತವಾಗಿ ಹೊರಹೋಗುವಂತೆ ಮಾಡಲಾಗುತ್ತಿದೆ. ನಾನು ಹರಿಯಾಣದವನು. ಆದರೆ, ನಾನು ರಾಜಸ್ಥಾನದಲ್ಲಿ 20 ವರ್ಷ ಮತ್ತು ದೆಹಲಿಯಲ್ಲಿ 16 ವರ್ಷ ಬದುಕಿದ್ದೇನೆ. ಆದರೆ, ಅವರು ಇನ್ನೂ ನನ್ನನ್ನು ಹೊರಗಿನವನೆಂದು ನೋಡುತ್ತಿದ್ದಾರೆ. ಹಿಂದಿನ ರಾಜ್ಯಪಾಲರು (ಕಲ್ರಾಜ್ ಮಿಶ್ರಾ) ನೇಮಿಸಿದವರನ್ನು ಈಗ ತೆಗೆದುಹಾಕಲಾಗುತ್ತಿದೆ” ಎಂದು ಸಿಂಗ್‌ ಆರೋಪಿಸಿದ್ದಾರೆ.

ತಮ್ಮ ಅಮಾನತು ವಿರುದ್ಧ ಸಿಂಗ್ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿ ಅಶೋಕ್ ಕುಮಾರ್ ಜೈನ್ ಅವರು ತಮ್ಮ ನಿವೃತ್ತಿಯ ದಿನದಂದು ಅವರ ಅಮಾನತನ್ನು ರದ್ದುಗೊಳಿಸಿದರು. “ಪ್ರಸ್ತುತ ಅರ್ಜಿದಾರರನ್ನು ಅಮಾನತಿಗೆ ತೀರ್ಮಾನ ತೆಗೆದುಕೊಳ್ಳುವಲ್ಲಿ ರಾಜ್ಯಪಾಲರು ಆತುರದಿಂದ ವರ್ತಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪ್ರಸ್ತುತ ಅರ್ಜಿದಾರರನ್ನು ಅಮಾನತುಗೊಳಿಸಲು ಯಾವುದೇ ದಾಖಲೆಗಳಿಲ್ಲ” ಎಂದು ಹೇಳಿ, ಅಮಾನತು ಆದೇಶವನ್ನು ರದ್ದುಗೊಳಿಸಿದರು.

ಸಿಂಗ್‌ ಅವರ ಅಮಾನತಿಗೂ ಮುನ್ನ, 2025ರ ಫೆಬ್ರವರಿ 10 ರಂದು ಜೋಧಪುರದ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಕೆ.ಎಲ್ ಶ್ರೀವಾಸ್ತವ ಅವರನ್ನು ನಿವೃತ್ತಿಗೆ ನಾಲ್ಕು ದಿನಗಳ ಮೊದಲು ರಾಜ್ಯಪಾಲರು ಅಮಾನತುಗೊಳಿಸಿದ್ದರು. “ನನ್ನನ್ನು ಫೆಬ್ರವರಿ 10 ರಂದು ಅಮಾನತುಗೊಳಿಸಲಾಯಿತು. ನನ್ನ ಅಧಿಕಾರಾವಧಿ ಫೆಬ್ರವರಿ 14 ರಂದು ಕೊನೆಗೊಳ್ಳುತ್ತಿತ್ತು. ನನ್ನ ವಿರುದ್ಧದ ಯಾವುದೇ ಆರೋಪಗಳು ನಿಜವಲ್ಲ. ನಾನು ಹೇಳಲು ಬಯಸುವುದು ಇಷ್ಟು ಮಾತ್ರವೇ” ಎಂದು ಶ್ರೀವಾಸ್ತವ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಎಸ್‌ಐಆರ್ | ‘ಗಡಿಪಾರು’ ಭೀತಿಯಲ್ಲಿದ್ದಾರೆ ಬಂಗಾಳದ ಲೈಂಗಿಕ ಕಾರ್ಯಕರ್ತೆಯರು!

ನವೆಂಬರ್ 11 ರಂದು, ಅಮಾನತುಕೊಂಡ ಭರತ್‌ಪುರದ ಮಹಾರಾಜ ಸೂರಜ್‌ಮಲ್ ಬ್ರಿಜ್ ವಿಶ್ವವಿದ್ಯಾಲಯದ ಉಪಕುಲಪತಿ ರಮೇಶ್ ಚಂದ್ರ ಅವರು, “ನಮ್ಮ ವಿರುದ್ಧದ ಒಂದೇ ಒಂದು ಆರೋಪವೂ ಸಾಬೀತಾಗಿಲ್ಲ. ಎಬಿವಿಪಿ ಮತ್ತು ಆರ್‌ಎಸ್‌ಎಸ್‌ನ ಪ್ರಾಂತ ಪ್ರಚಾರಕರು ಆರೋಪಗಳನ್ನು ಸೃಷ್ಟಿಸುತ್ತಿದ್ದಾರೆ. ಎಬಿವಿಪಿ/ಆರ್‌ಎಸ್‌ಎಸ್‌ನವರು ಹಿಂದಿನ ರಾಜ್ಯಪಾಲ ಕಲ್‌ರಾಜ್ ಮಿಶ್ರಾ ಅವರು ನೇಮಕ ಮಾಡಿದ ಎಲ್ಲ ಉಪಕುಲಪತಿಗಳ ವಿರುದ್ಧವಿದ್ದಾರೆ. ನಾವೆಲ್ಲರೂ ಅಪ್ರಾಮಾಣಿಕರೇ? ಹಾಕಿದ್ದರೆ, ನಮ್ಮನ್ನು ಯಾಕೆ ನೇಮಿಸಲಾಗಿತ್ತು” ಎಂದು ಪ್ರಶ್ನಿಸಿದ್ದಾರೆ.

“ರಾಜಸ್ಥಾನದಲ್ಲಿ ಶಿಕ್ಷಣ ವ್ಯವಸ್ಥೆ ನಾಶವಾಗಿದೆ. ಎಬಿವಿಪಿ ಅದರಲ್ಲಿ ಪ್ರಮುಖ ಪಾತ್ರ ಹೊಂದಿದೆ. ಅವರಿಗೆ ಹಣ ಬೇಕು” ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ, ಉದಯಪುರದ ಮೋಹನ್ ಲಾಲ್ ಸುಖಾಡಿಯಾ ವಿಶ್ವವಿದ್ಯಾಲಯದ ಉಪಕುಲಪತಿ ಔರಂಗಜೇಬ್ ಅವರನ್ನು ರಾಜ್ಯಪಾಲರು ಸೆಪ್ಟೆಂಬರ್ 12 ರಂದು ನಡೆದ ಸಮ್ಮೇಳನದಲ್ಲಿ ‘ಸಮರ್ಥ ಆಡಳಿತಗಾರ’ ಎಂದು ಬಣ್ಣಿಸಿದರು. ಬಳಿಕ, ಕ್ಯಾಂಪಸ್‌ನಲ್ಲಿ ಎಬಿವಿಪಿ ಭಾರೀ ಪ್ರತಿಭಟನೆಗಳನ್ನು ನಡೆಸಿತು. ಉಪಕುಲಪತಿಗಳ ಕಚೇರಿಗೆ ಬೀಗ ಹಾಕಿ, ಪ್ರತಿಕೃತಿ ದಹಿಸಿ, ಪೋಟೋಗಳಿಗೆ ಕಪ್ಪು ಬಣ್ಣ ಬಳಿದು ದಾಂಧಲೆ ನಡೆಸಿತು. ಬಳಿಕ, ಔರಂಗಜೇಬ್ ಅವರು ರಜೆ ಮೇಲೆ ಹೋದರು, ಆನಂತರ ರಾಜೀನಾಮೆ ನೀಡಿದರು. ಅವರ ವಿರುದ್ಧದ ಹಲವು ದೂರುಗಳ ಆಧಾರದ ಮೇಲೆ ಅವರ ರಾಜೀನಾಮೆಯನ್ನು ಅಂಗೀಕರಿಸಲಾಯಿತು.

ರಾಜ್ಯಪಾಲರು ಎಬಿವಿಪಿಯ ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಜೋಧಪುರ ಪ್ರದೇಶದ ವಿಶ್ವವಿದ್ಯಾಲಯದ ಎಬಿವಿಪಿ ಸಂಚಾಲಕ ಅರವಿಂದ್ ಭಾಟಿ, “ರಾಜ್ಯಪಾಲರು ತಮ್ಮ ದೀರ್ಘ ಅನುಭವದಿಂದ ವಿಷಯಗಳನ್ನು ಕಲಿಯುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ಆ ಅನುಭವದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...