ಸರ್ವಜ್ಞ‌ ಕಾವ್ಯದಲ್ಲಿ ವೈಚಾರಿಕತೆ, ಸಾಮಾಜಿಕ ಪ್ರಜ್ಞೆ

Date:

ಕನ್ನಡದ ತ್ರಿಪದಿ ಕವಿ ಸರ್ವಜ್ಞನವರ ವೈಚಾರಿಕ ಅರಿವು, ಸಾಮಾಜಿಕ ಪ್ರಜ್ಞೆ ಅರ್ಥಪೂರ್ಣವಾಗಿದೆ. ಸಮ ಸಮಾಜ ಕಟ್ಟುವುದಕ್ಕಾಗಿ ಸರ್ವಜ್ಞ ಗ್ರಹಿಸಿದ ಸಾಮಾಜಿಕ ಕಳಕಳಿಯಿಂದಾಗಿ ಮಾರ್ಮಿಕವಾದ ತ್ರಿಪದಿ ರಚನೆ ಸಾಧ್ಯವಾಗಿದ್ದು, ಮೂರು ಸಾಲಿನ ಸುಂದರ ಸಾಲು ಸಾರ್ವಕಾಲಿಕ ಸತ್ಯ ಎನಿಸುತ್ತವೆ.‌ ಸಮಾಜದಲ್ಲಿ ಜಾತಿಯತೆ, ಮೌಢ್ಯ, ಕಂದಾಚಾರ, ಅಸಮಾನತೆ ಎಂಬ ಅನಿಷ್ಟ ಪದ್ದತಿ ಮನೆ ಮಾಡಿದ್ದವು. ಅಂತಹ ವಿಷಯ ಪರಿಸ್ಥಿತಿಯಲ್ಲಿ ಜನಿಸಿದ ಬಂದ ಸರ್ವಜ್ಞ ಸಮಾನತೆ ಸಮಾಜ ಕಟ್ಟಬಯಸಿ ಬಂಡಾಯದ ದನಿಯಾದ.

ಸರ್ವಜ್ಞ ಕಾಲ 17ನೇ ಶತಮಾನದ ಆದಿಭಾಗ ಎಂದು ಹೇಳಲಾಗುತ್ತದೆ. ಇಂದಿನ ಹಾವೇರಿ ಜಿಲ್ಲೆಯ ಹಿರೇಕೇರೂರ ತಾಲ್ಲೂಕಿನ (ಅಂಬಲೂರು) ಮಾಸೂರು ಸರ್ವಜ್ಞ ಕವಿಯ ‌ಹುಟ್ಟೂರು. ಸರ್ವಜ್ಞ ಕವಿ ತನ್ನ ಹುಟ್ಟಿನ ಬಗ್ಗೆ ಸಂಕ್ಷಿಪ್ತವಾಗಿ ಬರೆದಿರುವ ಈ ಒಂದು ತ್ರಿಪದಿ ವಚನದಲ್ಲಿ ನೋಡಬಹುದು.

‘ಅಂಬಲೂರೊಳಗೆಸೆವ ಕುಂಬಾರಸಾಲೆಯಲಿ, ಇಂದಿನ ಕಳೆಯ ಮಾಳಿಯೊಳು ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ’. ‘ಕೊಂಬು ಹೋರಿಗೆ ಲೇಸು ತುಂಬು ಕೇರಿಗೆ ಲೇಸು ಕುಂಬಾರ ಲೇಸು ಊರಿಂಗೆ ‘, ‘ತಂದೆ ಕುಂಬಾರಮಲ್ಲ ತಾಯಿ ಮಳಲಾದೇವಿ’ ಎಂಬ ತ್ರಿಪದಿಗಳು ಸರ್ವಜ್ಞ ಹುಟ್ಟಿನ ದಾಖಲೆಗಳೇ ಆಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕನ್ನಡ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲಿ ಸರ್ವಜ್ಞನವರಿಗೆ ಮಹೋನ್ನತ ಸ್ಥಾನವಿದೆ. ತ್ರಿಪದಿಗಳ ಮೂಲಕ ಕನ್ನಡದ ಅಸ್ಮಿತೆ ಅರ್ಥಮಾಡಿಸಿದ ಅಸಾಮಾನ್ಯ ವಚನಕಾರ. ಸರಳ ನಿರೂಪಣೆ,‌ ಜಾನಪದ ಸೊಗಡಿನ ಮಾಧುರ್ಯ ತುಂಬಿದ ಮೂರು ಸಾಲಿನ ವಚನಗಳಲ್ಲಿ ಮಾನವೀಯ ಮೌಲ್ಯಗಳ‌‌ನ್ನು ಬಿತ್ತಿದ್ದಾರೆ.

‘ಅಂದಿನಾ ಪುಷ್ಪದತ್ತ ಬಂದ ವರರುಚಿಯಾಗಿ ಮುಂದೆ ದೇವಸಾಲೆ ಸರ್ವಜ್ಞ – ನೆಂದೆನಿಸಿ ನಿಂದವನು ತಾನೇ ಸರ್ವಜ್ಞʼ ಎಂಬ ವಚನವು ಸರ್ವಜ್ಞ ಕವಿಯ ಮೂಲ ಹೆಸರಿನ ಬಗ್ಗೆ ಸ್ಪಷ್ಟಪಡಿಸುತ್ತದೆ. ಸರ್ವಜ್ಞನ ತಾಯಿ ಮಳಲಾದೇವಿಯು ಮಗನಿಗೆ ‘ಪುಷ್ಪದತ್ತ’ ಎಂದು ನಾಮಕರಣ ಮಾಡಿದಳು. ಹೀಗಾಗಿ ಅಂದಿನ ‘ಪುಷ್ಪದತ್ತ’ ಮುಂದೆ ‘ಸರ್ವಜ್ಞ’ ಕಾವ್ಯನಾಮದಿಂದ ಪ್ರಖ್ಯಾತಿ ಪಡೆದಿರಬಹುದು ಎಂದು ಸಂಶೋಧಕರು ಹೇಳುತ್ತಾರೆ.

‘ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ’ ಎಂದು ಹೇಳುವುದು ʼನಾನು ಎಲ್ಲವೂ ತಿಳಿದವನುʼ ಎಂಬ ಅಹಂಕಾರದ ಅರ್ಥವಲ್ಲ. ಎಲ್ಲರೊಳು ಒಂದಾಗಿ, ಎಲ್ಲರನ್ನೂ ಗುರುವಾಗಿ ಕಂಡು, ಎಲ್ಲರಲ್ಲೂ ಇರುವ ವಿದ್ಯೆಯನ್ನು ಗ್ರಹಿಸಿದಾಗಲೇ ಸಕಲ ಜ್ಞಾನ ಪಡೆಯಲು ಸಾಧ್ಯ ಎಂಬುದು ತಿಳಿಸುತ್ತಾರೆ.

ಜಾತಿ ವ್ಯವಸ್ಥೆ, ಅಂಧಶ್ರದ್ಧೆ, ಜಾತಿಯತೆ, ದೌರ್ಜನ್ಯ, ಕಂದಾಚಾರ, ದಬ್ಬಾಳಿಕೆ , ಶೋಷಣೆ, ಮೌಢ್ಯತೆಗಳೆಂಬ ಅನಿಷ್ಟತೆ ಪದ್ಧತಿಯನ್ನು ಧಿಕ್ಕರಿಸಿ ಸಮ ಸಮಾಜದ ಪರಿಕಲ್ಪನೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ಸರ್ವಜ್ಞ ಮಾಡಿದರು. ಬಲಾಢ್ಯರ ಶೋಷಣೆಗೆ ಒಳಪಟ್ಟ ತಳವರ್ಗ ಸಮುದಾಯದವರ ಬದುಕು ದುರ್ಬರವಾಗಿತು. ಅಂತಹ ಕತ್ತಲೆಯ ದಿನಗಳಲ್ಲಿ ‘ತ್ರಿಪದಿ ವಚನ’ಗಳ ಮುಖಾಂತರ ಬಂದ ಸರ್ವಜ್ಞ ಸಮಾಜದ ಅರಿವನ್ನು ವಿಸ್ತರಿಸಿದರು. ಜಾತಿ,‌ ಕುಲ, ಮತ, ಲಿಂಗ ಭೇದಗಳ ತಾರತಮ್ಯ ಅಳಿಸಿ ಸಾಮರಸ್ಯದ ಸಮಾಜ ಕಟ್ಟಲು ಪ್ರಯತ್ನಿಸಿದರು.

ಜಾತಿ, ಮತ, ಕುಲ-ಗೋತ್ರದ ಬಗ್ಗೆ ಸರ್ವಜ್ಞನ ವ್ಯಾಖ್ಯಾನ ಹೀಗಿದೆ- ʼನಡೆವುದೊಂದೆ ಭೂಮಿ ಕುಡಿಯುದೊಂದೆ ನೀರು ಸುಡುವಗ್ನಿಯೊಂದೆ ಇರುತ್ತಿರಲು ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞʼ. ಇನ್ನೊಂದು ವಚನ; ‘ಎಲುವಿನ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞʼ ಎಂದು ಚರ್ಮದ ದೇಹಕ್ಕೆ ಯಾವ ಕುಲವೆಂದು ಪ್ರಶ್ನಿಸುತ್ತಾನೆ. ‘ಯಾತರ ಹೂವೇನು ನಾತವಿದ್ದರೆ ಸಾಕು, ಶಿವನೊಲಿದಾತನೇ ಜಾತವೆಂದು ಅರಿತುಕೋ ಮರುಳ ಮಾನವ’ ಎಂದು ಜಾತಿಯತೆ ವಿರುದ್ಧ ಕಠೋರ ನಿಲುವು ವ್ಯಕ್ತಪಡಿಸುತ್ತಾರೆ.

ಇನ್ನೊಂದು ತ್ರಿಪದಿಯಲ್ಲಿ ‘ನಿಷ್ಠೆಯಿಲ್ಲದ ಪೂಜೆ ಹಾಳೂರ ಕೊಟ್ಟಿಗುರಿದಂತೆ ‘ ಚಿತ್ತವಿಲ್ಲದೆ ಗುಡಿ ಸುತ್ತಿದೆಡೆ ಫಲವೇನು ಎತ್ತು ಗಾಣವನು ಹೊತ್ತು ತಾ ಸತ್ತಿಬಂದಂತೆ’ ಎಂದು ಡಾಂಭಿಕಭಕ್ತಿ ನಿರಾಕರಿಸುತ್ತಾ ಶೋಷಣೆ ಸಮಾಜದ ವಿರುದ್ಧ ಸಿಡಿದೇಳುತ್ತಾರೆ. ‘ಬಂಧುಗಳು ಆದವರು ಬಂದುಂಡು ಹೋಗುವರು ಬಂಧನವ ಕಳೆಯಲಿಯರಾ ಗುರುವಿಗಿಂತ ಬಂಧಗಳುಂಟೆ ಸರ್ವಜ್ಞ’ ಎಂದು ಗುರುವಿನ ಮಹತ್ವ ಎತ್ತಿ ಹಿಡಿದಿದ್ದಾನೆ.

ಸಾಮಾಜಿಕ ಬದುಕಿನಲ್ಲಿ ಒಳಿತುಮಾಡುವ ಜನರಿಗೆ ಟೀಕೆ ಮಾಡುವರ ಒಂದು ಗುಂಪು ಇದ್ದೆ ಇರುತ್ತದೆ. ಅಂತಹ ಅತೃಪ್ತರನ್ನು ಕಂಡು ಹೇಳಿದ ಸರ್ವಜ್ಞನ ಕಿವಿಮಾತೊಂದು ಹೀಗಿದೆ ‘ಆನೆ ಬೀದಿಲಿ ಬರಲು ಶ್ವಾನ ತಾ ಬೊಗಳಿತು ಶ್ವಾನನಂತಾನೆ ಬೊಗಳಿದರೆ ಆನೆಯ ಮಾನವೇ ಹಾನಿ ಸರ್ವಜ್ಞ’. ‘ಕಣ್ಣು ನಾಲಿಗೆ ಮತ್ತು ಮನವು ತನ್ನ ಹಿಡಿತದಲ್ಲದ್ದಿದ್ದರೆ ತನ್ನನ್ನೇ ಕೊಲ್ಲುವವು’ ಎಂದು ಮುಂದಿನ ಅನಾಹುತಗಳಿಗೆ ನಾವೇ ಹೊಣೆಗಾರರು ಎಂಬ ಉಪಮೆಗಳ ವಚನಗಳು ಹೃದಯವನ್ನು ತಟ್ಟುತ್ತವೆ.

ನೇರ, ಸರಳ, ವೈಚಾರಿಕತೆ ಹಾಗೂ ವೈಜ್ಞಾನಿಕ ನಿಲುವು ಅಡಗಿರುವ ತ್ರಿಪದಿಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ.‌ ಇಂತಹ ಅನನ್ಯವಾಗಿ ಲಭಿಸಿದ ಸಾಹಿತ್ಯ ಸಂಪತ್ತು ಕನ್ನಡಕ್ಕಷ್ಪೇ ಅಲ್ಲದೇ ಜಾಗತಿಕ ಪಿಡುಗು ನಿವಾರಣೆಗೂ ಮದ್ದಾಗಬಲ್ಲವು.

‘ಆಡು ಮುಟ್ಚದ ಸೊಪ್ಪಿಲ್ಲ’‌ ಎನ್ನುವ ಹಾಗೇ ಸರ್ವಜ್ಞ ಕವಿ ಹೇಳದ ವಿಷಯವೇ ಇಲ್ಲ. ಸಾಮಾಜಿಕ ಬದುಕಿನ ಎಲ್ಲ ಓರೆಕೋರೆಗಳನ್ನು ತಿದ್ದಿದನು. ಸರ್ವಜ್ಞನ ಮೇಲೆ ಬಸವಾದಿ ಶರಣರ ವಚನ ಸಾಹಿತ್ಯಕ್ಕೆ ಗಾಢವಾದ ಸೌಮ್ಯತೆವಿರುವುದು ತ್ರಿಪದಿಗಳಲ್ಲಿ ಕಾಣಬಹುದು. ಶರಣರ ವೈಚಾರಿಕ, ವೈಚಾರಿಕ ಹಾಗೂ ಸಾಮಾಜಿಕ ಚಿಂತನೆ ಸಾರ ಸರ್ವಜ್ಞ ರಚಿಸಿದ ತ್ರಿಪದಿಗಳಲ್ಲಿಯೂ ಹಿಡಿದಿಟ್ಟಿರುವುದು ಕಾಣುತ್ತೇವೆ.

ಇದನ್ನೂ ಓದಿ : ಬೀದರ್‌ | ಅಕ್ರಮ ಮಾದಕ ವಸ್ತು ಸಾಗಾಟ : ₹3 ಲಕ್ಷ ಮೌಲ್ಯದ ವಸ್ತು ಜಪ್ತಿ; ನಾಲ್ವರ ಬಂಧನ

ಸರ್ವಜ್ಞ ಅವರು ಒಂದಲ್ಲ, ಎರಡಲ್ಲ, ಸಾವಿರಾರು ತ್ರಿಪದಿ ರಚಿಸಿದ್ದಾನೆ.‌ ʼಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ ಏಳು ಸಾವಿರದ ಎಪ್ಪತ್ತು ವಚನಗಳ ಹೇಳಿದನು ಕೇಳ ಸರ್ವಜ್ಞ’ ಎನ್ನುವ ಸಾಲು ತ್ರಿಪದಿ ರಚನೆಯ ದಾಖಲೆ ನೀಡುತ್ತದೆ. ಸರ್ವಜ್ಞ ಬಗ್ಗೆ ಸಂಶೋಧಿಸಿ ಸಂಗ್ರಹಿಸಿದ ಉತ್ತಂಗಿ ಚನ್ನಪ್ಪನವರ ಕಾರ್ಯಕ್ಕೆ ನಾವೆಲ್ಲರೂ ತಲೆಬಾಗಲೇಬೇಕು.‌ ಆದರೆ ಸಂಶೋಧನೆಯ ಮಾಹಿತಿ ಪ್ರಕಾರ ಕೇವಲ ಒಂದು ಸಾವಿರ ತ್ರಿಪದಿಗಳು ಲಭ್ಯವಾಗಿವೆ ಎಂದು ತಿಳಿದು ಬರುತ್ತದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...