ಮನುಸ್ಮೃತಿಯ ವಿರೋಧಿಸಿದ ಜ್ಯೋತಿಬಾ ಫುಲೆ ಸ್ಮರಣೆ: ದಲಿತ ಚಿಂತನೆಗಳ ಮೆಲುಕು

Date:

ಆರ್‌ಎಸ್‌ಎಸ್‌ ಪಾಲಿಸುವ ಮನುಸ್ಮೃತಿಯಲ್ಲಿ ಮಹಿಳೆಯರು ಮತ್ತು ಶೂದ್ರರಿಗೆ ಶಿಕ್ಷಣ ನೀಡುವುದು ಗಂಭೀರ ಪಾಪವೆಂದು ಪರಿಗಣಿಸಲಾಗುತ್ತದೆ ಮತ್ತು ಶಿಕ್ಷಣವನ್ನು ನಿಷೇಧಿಸಲಾಗಿದೆ. ಆದರೆ ಇದರ ವಿರುದ್ಧ ನಿಂತು ಮಹಿಳೆಯರಿಗಾಗಿ ಶಾಲೆ ಆರಂಭಿಸಿದವರು ಜ್ಯೋತಿಬಾ ಫುಲೆ. ಮಾತ್ರವಲ್ಲದೆ, 1851ರಲ್ಲಿ, ಫುಲೆ ದಲಿತ ಸಮುದಾಯಗಳಿಗಾಗಿ ಒಂದು ಶಾಲೆಯನ್ನು ಸ್ಥಾಪಿಸಿದರು. 

ಸಮಾಜ ಸುಧಾರಕ, ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಫುಲೆಯವರ 135ನೇ ಪುಣ್ಯತಿಥಿ ಇಂದು (29 ನವೆಂಬರ್ 1890). ಈ ಸಂದರ್ಭದಲ್ಲಿ ಶಿಕ್ಷಣವನ್ನು ಉತ್ತೇಜಿಸುವ, ಸಾಮಾಜಿಕ ಹಕ್ಕುಗಳು, ನ್ಯಾಯ, ಮತ್ತು ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರವೇಶವನ್ನು ಹೆಚ್ಚಿಸುವ ಉದ್ದೇಶದಿಂದ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದ ಜ್ಯೋತಿಬಾ ಫುಲೆ ಚಿಂತನೆಗಳ ಮೆಲುಕು ಹಾಕೋಣ.

ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸಾಮಾಜಿಕ ಅನ್ಯಾಯದ ವಿರುದ್ಧ ದಂಗೆ ಎದ್ದು ಸಾಮಾಜಿಕ ಅನ್ಯಾಯವನ್ನು ವಿರೋಧಿಸಿದವರು ಜ್ಯೋತಿಬಾ. ಹಿಂದೂ ಧರ್ಮದ ನಾಲ್ಕು ವರ್ಣ ವ್ಯವಸ್ಥೆಯಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದವರು. ಹಲವು ಶತಮಾನಗಳಿಂದ ತುಳಿತಕ್ಕೆ ಒಳಗಾದ ಮಹಿಳೆಯರೂ ಶಿಕ್ಷಣ ಪಡೆಯಲು ಅರ್ಹರು ಎಂದು ಪ್ರತಿಪಾದಿಸಿದ ಫುಲೆ ತಮ್ಮ 21ನೇ ವಯಸ್ಸಿನಲ್ಲಿಯೇ ಪುಣೆಯಲ್ಲಿ ಭಾರತದ ಮೊದಲ ಬಾಲಕಿಯರ ಶಾಲೆಯನ್ನು ಪ್ರಾರಂಭಿಸಿದವರು. ಈ ಶಾಲೆಯನ್ನು ಮುನ್ನಡೆಸಲು ಅವರ ಜೀವನ ಸಂಗಾತಿ ಸಾವಿತ್ರಿಬಾಯಿ ಫುಲೆ ಮತ್ತು ಅವರ ಆಪ್ತ ಸ್ನೇಹಿತ ಉಸ್ಮಾನ್ ಶೇಖ್ ಅವರ ಸಹೋದರಿ ಫಾತಿಮಾ ಶೇಖ್ ಬೆಂಬಲವಾಗಿ ನಿಂತಿದ್ದರು.

ಇದನ್ನು ಓದಿದ್ದೀರಾ? ಸ್ತ್ರೀ ಶಿಕ್ಷಣದ ಹರಿಕಾರ, ಬ್ರಾಹ್ಮಣ್ಯ ಶೋಷಣೆಯ ವಿರೋಧಿ ಜ್ಯೋತಿಬಾ ಫುಲೆ ಜನ್ಮದಿನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆರ್‌ಎಸ್‌ಎಸ್‌ ಪಾಲಿಸುವ ಮನುಸ್ಮೃತಿಯಲ್ಲಿ ಮಹಿಳೆಯರು ಮತ್ತು ಶೂದ್ರರಿಗೆ ಶಿಕ್ಷಣ ನೀಡುವುದು ಗಂಭೀರ ಪಾಪವೆಂದು ಪರಿಗಣಿಸಲಾಗುತ್ತದೆ ಮತ್ತು ಶಿಕ್ಷಣವನ್ನು ನಿಷೇಧಿಸಲಾಗಿದೆ. ಆದರೆ ಇದರ ವಿರುದ್ಧ ನಿಂತು ಮಹಿಳೆಯರಿಗಾಗಿ ಶಾಲೆ ಆರಂಭಿಸಿದ್ದು ಮಾತ್ರವಲ್ಲದೆ, 1851ರಲ್ಲಿ, ಫುಲೆ ದಲಿತ ಸಮುದಾಯಗಳಿಗಾಗಿ ಒಂದು ಶಾಲೆಯನ್ನು ಸ್ಥಾಪಿಸಿದರು. ವಿರೋಧಗಳ ನಡುವೆಯೂ ಆರಕ್ಕೂ ಅಧಿಕ ಶಾಲೆಗಳನ್ನು ತೆರೆದರು.

ಫುಲೆ ಬಾಲ್ಯ, ಶಿಕ್ಷಣ

1827ರ ಏಪ್ರಿಲ್ 11ರಂದು ಮಹಾರಾಷ್ಟ್ರದ ಕಟಗುಣ ಎಂಬ ಹಳ್ಳಿಯಲ್ಲಿ ಜ್ಯೋತಿರಾವ್ ಫುಲೆ ಅವರು ಜನಿಸಿದರು. ಅವರ ತಂದೆ ಗೋವಿಂದರಾವ್, ತಾಯಿ ಚಿಮಣಾಬಾಯಿ. ಹುಟ್ಟಿದ ಕೆಲವೇ ದಿನಗಳಲ್ಲಿ ಜ್ಯೋತಿಬಾ ಅವರ ತಾಯಿ ನಿಧನರಾಗಿದ್ದು, ಚಿಕ್ಕಮ್ಮ ಸುಗುಣಾಬಾಯಿ ಲಾಲನೆ ಪಾಲನೆಯಲ್ಲಿ ಬೆಳೆದರು. ಸ್ಕಾಟಿಷ್ ಮಿಶನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಜ್ಯೋತಿಬಾ ಫುಲೆ ಮುಂದೆ ಅಲ್ಲೇ ಅಧ್ಯಾಪಕರಾದರು. ಇಂಗ್ಲೀಷ್ ಶಿಕ್ಷಣದ ವಿದ್ಯಾಭ್ಯಾಸ ಮಾಡಿದವರು. 13ನೇ ವಯಸ್ಸಿನಲ್ಲೇ ಸಾವಿತ್ರಿಬಾಯಿಯೊಂದಿಗೆ ಬಾಲ್ಯ ವಿವಾಹವಾಗಿದ್ದು, ಆರಂಭದಲ್ಲಿ ತನ್ನ ಪತ್ನಿಗೆ ಶಿಕ್ಷಣ ನೀಡುವ ಮೂಲಕ ಸ್ತ್ರೀ ಶಿಕ್ಷಣಕ್ಕೆ ಉತ್ತೇಜನ ನೀಡಲು ಆರಂಭಿಸಿದರು. ದಂಪತಿ ಒಬ್ಬ ಬ್ರಾಹ್ಮಣ ವಿಧವೆಗೆ ವಿವಾಹೇತರ ಸಂಬಂಧದಿಂದ ಹುಟ್ಟಿದ ಒಬ್ಬ ಅನಾಥ ಬಾಲಕನನ್ನು ದತ್ತು ಪಡೆದಿದ್ದರು. ಅವರ ಸೇವೆಗೆ ಮುಂಬೈ ಸರ್ಕಾರವೇ ‘ಮಹಾತ್ಮಾ’ ಎಂಬ ಬಿರುದನ್ನು 1880ರಲ್ಲಿ ನೀಡಿದೆ.

ಸರಳ ಭಾಷೆಯಲ್ಲಿ ಬರೆದು ಜನರಿಗೆ ಹತ್ತಿರವಾದ ಫುಲೆ

ಹೆಚ್ಚಿನ ಬ್ರಾಹ್ಮಣ ಬರಹಗಾರರು ತಮ್ಮ ಬರವಣಿಗೆಯನ್ನು ಶಾಸ್ತ್ರೀಯ ಮರಾಠಿ ಮತ್ತು ಸಂಸ್ಕೃತಕ್ಕೆ ಸೀಮಿತಿಗೊಳಿಸಿದ್ದ ಆ ಕಾಲಘಟ್ಟದಲ್ಲಿ ಫುಲೆ ಸಾಮಾನ್ಯ ಜನರ ಭಾಷೆಯಲ್ಲಿ ಬರೆದರು. ಬರವಣಿಗೆಯಲ್ಲಿ ಜನರು ಮಾತನಾಡುವ ಸರಳ ಭಾಷೆಯ ಬಳಕೆಯು ಕಾರ್ಮಿಕರು, ರೈತರು, ಮಹಿಳೆಯರು ಮತ್ತು ದಮನಿತ ಜಾತಿಗಳ ಜನರಿಗೆ ಮೂಲಭೂತ ವಿಚಾರಗಳನ್ನು ತಿಳಿಯಲು ಸಹಕಾರಿಯಾಯಿತು.

ಸತ್ಸರ್, ಗುಲಾಮಗಿರಿ, ಶೇತ್ಕಾರ್ಯಚ ಅಸುದ್ (ರೈತರ ಚಾಟಿ), ಬ್ರಹ್ಮನಂಚೆ ಕಸಬ್ (ಬ್ರಾಹ್ಮಣರ ಕುತಂತ್ರ), ಸಾರ್ವಜನಿಕ ಸತ್ಯಧರ್ಮ, ಶಿವಾಜಿ ಮಹಾರಾಜರ ಕುರಿತಾದ ಪ್ರಬಲ ಪೋವಾಡ (ಜಾನಪದ ಗೀತೆ) ಮೊದಲಾದ ಕೃತಿಗಳನ್ನು ಬರೆದರು. ಈ ಮೂಲಕ ಶತಮಾನಗಳಷ್ಟು ಹಳೆಯದಾದ ಮಹಿಳೆಯರು ಮತ್ತು ಶೂದ್ರರ ಮೇಲಿನ ದೌರ್ಜನ್ಯವನ್ನು ಬರವಣಿಗೆ ಮೂಲಕ ಪ್ರಶ್ನಿಸಿದ ಮೊದಲ ಆಧುನಿಕ ಭಾರತೀಯ ಕ್ರಾಂತಿಕಾರಿ ಬರಹಗಾರ ಎನಿಸಿಕೊಂಡರು. ಫುಲೆಯವರ ಬರಹಗಳನ್ನು ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ.

1848ರಲ್ಲಿ ಪುಣೆಯಲ್ಲಿ ಫುಲೆಯವರು ಮಾಡಿದ ಕ್ರಾಂತಿ ವಿಶ್ವದಾದ್ಯಂತ ಸದ್ದು ಮಾಡಿದೆ. ಅದೇ ವರ್ಷ ಅವರು ಭಿಡೇವಾಡದಲ್ಲಿ ಮಹಿಳೆಯರು ಮತ್ತು ದಲಿತರಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲೇ ಯುರೋಪಿನಲ್ಲಿ, ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ನ್ಯೂಯಾರ್ಕ್‌ನಲ್ಲಿ ಮೊದಲ ಸಂಘಟಿತ ಮಹಿಳಾ ಹಕ್ಕುಗಳ ಸಮಾವೇಶ ನಡೆಯಿತು. ಇದು ಪಶ್ಚಿಮದಲ್ಲಿ ಮಹಿಳಾ ವಿಮೋಚನಾ ಚಳವಳಿಗೆ ನಾಂದಿ ಹಾಡಿತು.

ಅಮೆರಿಕದ ಮಹಿಳೆಯರು ಗುಲಾಮಗಿರಿ ಮತ್ತು ಪಿತೃಪ್ರಭುತ್ವದ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಭಾರತೀಯ ಮಹಿಳೆಯರು ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯ ಕಟ್ಟಳೆಯಲ್ಲಿ ಸಿಲುಕಿದ್ದರು. ಈ ಮಹಿಳಾ ವಿರೋಧಿ ನೀತಿ-ನಿಯಮಗಳನ್ನು ಮುರಿದು ಜಾತಿ ವ್ಯವಸ್ಥೆ ಮತ್ತು ಮಹಿಳೆಯರ ಶಿಕ್ಷಣಕ್ಕಾಗಿ ಫುಲೆ ಹೋರಾಡಿದರು. ಈ ಹೋರಾಡದಲ್ಲಿ ಫುಲೆ ಜತೆಯಾದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾ ಫುಲೆ ಅವರನ್ನು ಸ್ಮರಿಸಲೇಬೇಕು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...