ರೂಪಾಯಿ ಮೌಲ್ಯ ಕುಸಿತ : ಅಂದು ಟೀಕಿಸಿದ ಸೆಲಬ್ರಿಟಿಗಳು ಈಗ ಎಲ್ಲಿದ್ದಾರೆ?

Date:

ಡಾಲರ್ ಎದುರು ರೂಪಾಯಿ ಬೆಲೆ 90 ರೂ.ಗೆ ಬಂದು ನಿಂತಿದೆ. ಆದರೆ, ಈಗ ರವಿಶಂಕರ್ ಗುರೂಜಿ ಅವರು ತಮ್ಮ ಉಲ್ಲಾಸ ಏನಾಯಿತು ಎಂದು ಮಾತನಾಡುತ್ತಿಲ್ಲ, ಜೂಹಿ ಚಾವ್ಲಾ ಅವರು ಅಂಡರ್ ವೇರ್ ಭದ್ರತೆಯ ವ್ಯಂಗ್ಯ ಮಾಡುತ್ತಿಲ್ಲ. ಕಿರಣ್ ಬೇಡಿ ಅವರು ರೂಪಾಯಿ ವೆಂಟಿಲೇಟರ್‌ನಲ್ಲಿ ಬದುಕಿದೆಯೇ ಇಲ್ಲವೇ ಎಂದು ಪರಿಶೀಲಿಸುತ್ತಿಲ್ಲ. ಅಗ್ನಿ ಹೋತ್ರಿ ಅವರಿಗೆ ದುಃಖವು ರೂಪಾಯಿಯಂತೆ ಕುಸಿಯುತ್ತಿಲ್ಲ. ಅವರಾರೂ ತುಟಿ ಬಿಚ್ಚುತ್ತಿಲ್ಲ.

2047ರ ಹೊತ್ತಿಗೆ ಭಾರತ ದೇಶವನ್ನು ಮುಂದುವರಿದ ರಾಷ್ಟ್ರವನ್ನಾಗಿ ಮಾಡುತ್ತೇವೆ. ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗಲಿದೆ. ಜಗತ್ತಿನ ಐದನೇ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮುವಂತೆ ಮಾಡುತ್ತೇವೆ. ಇದೇ ‘ಮೋದಿ ಗ್ಯಾರೆಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಆಗಾಗ್ಗೆ ಅಬ್ಬರ ಭಾಷಣ ಮಾಡಿ, ಬೊಬ್ಬಿರಿದಿದ್ದನ್ನು ನೋಡಿದ್ದೇವೆ. ಈಗ, ಭಾರತದ ಜಿಡಿಪಿ ಬರೋಬ್ಬರಿ 8.2%ಗೆ ಬೆಳೆದಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ವಾಸ್ತವದಲ್ಲಿ ಭಾರತದ ಜಿಡಿಪಿ ಈ ಪ್ರಮಾಣದಲ್ಲಿ ಬೆಳೆದಿಲ್ಲ. ಕೇಂದ್ರ ಸರ್ಕಾರವು ಜಿಡಿಪಿ ಲೆಕ್ಕಹಾಕುವ ವಿಧಾನವೇ ಸರಿಯಿಲ್ಲವೆಂದು ‘ಅಂತಾರಾಷ್ಟ್ರೀಯ ಹಣಕಾಸು ನಿಧಿ’ (ಐಎಂಎಫ್) ಹೇಳಿದೆ. ಭಾರತದ ಜಿಡಿಪಿ ಅಂದಾಜು 6% ಆಸುಪಾಸಿನಲ್ಲಿರಬಹುದು ಎಂದು ಆರ್ಥಿಕ ವಿಶ್ಲೇಷಕರು ಹೇಳುತ್ತಿದ್ದಾರೆ. ಇದೇ ಸಮಯದಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯವು 90 ರೂಪಾಯಿಗೆ ಕುಸಿದಿದೆ. ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದೆ. ಇದನ್ನು, ‘ಡಾಲರ್ ಎದುರು ರೂಪಾಯಿಗೆ ನೈಂಟಿ ಹೊಡೆಸಿದ ಮೋದಿ’ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಇದು ಟ್ರೋಲ್‌ಗಿಂತ ಹೆಚ್ಚಾಗಿ, ಗಂಭೀರವಾಗಿ ಆಲೋಚಿಸಬೇಕಾದ, ಚಿಂತನೆ ನಡೆಸಬೇಕಾದ ಹಾಗೂ ಪ್ರಶ್ನಿಸಬೇಕಾದ ವಿಚಾರ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವನ್ನೇ ಅಸ್ತ್ರವಾಗಿ ಬಳಸಿಕೊಂಡು 2013ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ, 2014ರ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ಪ್ರಧಾನಿ ನರೇಂದ್ರ ಮೋದಿ. ಆ ಸಮಯದಲ್ಲಿ, ಒಂದು ಡಾಲರ್‌ಗೆ ಒಂದು ರೂಪಾಯಿ ಮೌಲ್ಯ ಬರುವಂತೆ ಮಾಡುತ್ತೇವೆಂದು ಬಿಜೆಪಿಗರು ಬೊಬ್ಬೆ ಹೊಡೆಯುತ್ತಿದ್ದರು. ಅಮೆರಿಕವೇ ಡಾಲರ್ ಕೊಟ್ಟು ರೂಪಾಯಿ ಖರೀದಿ ಮಾಡಬೇಕಾದ ಸಂದರ್ಭ ಬರುತ್ತದೆ ಎಂದು ಮೋದಿ ಭಕ್ತ ಚಕ್ರವರ್ತಿ ಸೂಲಿಬೆಲೆ ಬೊಬ್ಬೆ ಹೊಡೆದಿದ್ದೂ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Dr Manmohan Singh

2014ರಲ್ಲಿ ಮನಮೋಹನ ಸಿಂಗ್ ಆಡಳಿತ ಕೊನೆಗೊಂಡು, ಮೋದಿ ಅಧಿಕಾರಕ್ಕೇರಿದಾಗ ಡಾಲರ್ ಎದುರು ರೂಪಾಯಿ ಮೌಲ್ಯ 62 ರೂಪಾಯಿ ಇತ್ತು. ಈಗ ಅದು 90 ರೂ.ಗೆ ತಲುಪಿದೆ. ರೂಪಾಯಿ ಮೌಲ್ಯ ಡಿಸೆಂಬರ್ 4ರಂದು ಸಾರ್ವಕಾಲಿಕ ಕುಸಿತ ಕಂಡಿದೆ. ಇದು ಸಹಜವಾಗಿಯೇ ಭಾರತೀಯ ಆರ್ಥಿಕತೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ.

ಯಾಕೆಂದರೆ, ಜಗತ್ತಿನ ಶೇ. 90ರಷ್ಟು ವಹಿವಾಟು ಡಾಲರ್ ಮೂಲಕವೇ ನಡೆಯುತ್ತಿದೆ. ಅಂತಾರಾಷ್ಟ್ರೀಯ ವಹಿವಾಟು, ವಿದೇಶಿ ವಿನಿಮಯಕ್ಕಾಗಿ ಭಾರತವು ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಡಾಲರ್ ಅನ್ನು ಅವಲಂಬಿಸಿವೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಪ್ರತಿದಿನವೂ ಡಾಲರ್ ಮೂಲಕವೇ ವಹಿವಾಟು ನಡೆಯುವುದರಿಂದ, ಡಾಲರ್ ಅನ್ನು ಖರೀದಿಸಲು ನಾವು ಎಷ್ಟು ರೂಪಾಯಿಯನ್ನು ವ್ಯಯ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ರೂಪಾಯಿಯ ಮೌಲ್ಯ ನಿರ್ಧಾರವಾಗುತ್ತದೆ.

ಡಾಲರ್ ಬೆಲೆ ಹೆಚ್ಚಾಗುವುದರಿಂದ ಭಾರತ ಆಮದು ಮಾಡಿಕೊಳ್ಳುವ ತೈಲ, ಬಂಗಾರ, ಸ್ಮಾರ್ಟ್‌ಫೋನ್, ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಬಿಡಿಭಾಗಗಳು, ಯಂತ್ರೋಪಕರಣಗಳು, ಆಟೊಮೊಬೈಲ್ ಬಿಡಿಭಾಗಗಳು, ರಾಸಾಯನಿಕ ವಸ್ತುಗಳು ದುಬಾರಿಯಾಗುತ್ತವೆ. ಇದೆಲ್ಲವು ಹಣದುಬ್ಬರ, ಜಿಡಿಪಿ ಮೇಲೆ ಪರೋಕ್ಷ ಪರಿಣಾಮ ಬೀರಿದರೆ ಎಲ್ಲ ವಸ್ತುಗಳು ಗಗನಕ್ಕೇರಿ ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ತಮ್ಮ ಆಡಳಿತದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳ ಸೇರಿದರೂ ಈ ಬಗ್ಗೆ ಮೋದಿ ತುಟಿಬಿಚ್ಚಿಲ್ಲ. ಅದೇ, 2012-13ರ ಅವಧಿಯಲ್ಲಿ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಮೋದಿ, “ಡಾಲರ್ ಮೌಲ್ಯ ಹೆಚ್ಚುತ್ತಾ ಹೋಗುತ್ತಿದೆ. ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ವಿಶ್ವ ವ್ಯಾಪಾರದಲ್ಲಿ ಭಾರತ ಬಲಗೊಳುತ್ತಿಲ್ಲ. ಆರ್ಥಿಕತೆಯಲ್ಲಿ ಕುಂಠಿತ ಉಂಟಾಗುತ್ತಿದೆ. ಆದರೆ, ಇದಕ್ಕೆ ಯುಪಿಎ ಸರ್ಕಾರ ಉತ್ತರ ನೀಡುತ್ತಿಲ್ಲ. ನೇಪಾಳ ರೂಪಾಯಿದಲ್ಲಿ ಯಾವುದೇ ಸಮಸ್ಯೆಯಿಲ್ಲ. ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ಕರೆನ್ಸಿಗಳಲ್ಲಿಯೂ ಯಾವುದೇ ಸಮಸ್ಯೆಯಿಲ್ಲ. ಚಿಕ್ಕ ಚಿಕ್ಕ ದೇಶಗಳು ಡಾಲರ್ ಮುಂದೆ ತಮ್ಮ ಕರೆನ್ಸಿ ಗಟ್ಟಿಯಾಗಿ ಬಲಗೊಳ್ಳುವಂತೆ ಮಾಡುತ್ತಿವೆ. ಅದರೆ, ಭಾರತದ ರೂಪಾಯಿ ಕುಸಿಯುತ್ತಿದೆ. ದೇಶದ ಜನ ಈ ಬಗ್ಗೆ ತಿಳಿದುಕೊಳ್ಳಬೇಕು. ಡಾಲರ್ ಮುಂದೆ ಹಿಂದುಸ್ತಾನ್ ರೂಪಾಯಿ ಮೌಲ್ಯ ಬೀಳುತ್ತಲೇ ಹೋಗುತ್ತಿದೆ. ಇದು ಆರ್ಥಿಕ ಕಾರಣದಿಂದ ಅಲ್ಲ, ನಿಮ್ಮ ಭ್ರಷ್ಟ ರಾಜನೀತಿಗಳ ಕಾರಣದಿಂದ” ಎಂದು ಆರೋಪಿಸಿದ್ದರು.

2013ರಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ₹56.57 ಇತ್ತು. ಮೋದಿ ಅವರು ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ, ಅಂದರೆ, 2014ರಲ್ಲಿ ರೂಪಾಯಿ ಮೌಲ್ಯ 62.33ಕ್ಕೆ ಕುಸಿಯಿತು. ಒಂದೇ ವರ್ಷದಲ್ಲಿ ಬರೋಬ್ಬರಿ 6 ರೂಪಾಯಿಯಷ್ಟು ಕುಸಿತ ಕಂಡಿತು. ಅಲ್ಲದೆ, 2022ರ ಜುಲೈ 19 ರವೇಳೆಗೆ ಡಾಲರ್ ಎದುರು ರೂಪಾಯಿ ₹80ಗೆ ಕುಸಿದಿತ್ತು. 2023ರಲ್ಲಿ ₹81.94 ಇದ್ದ ರೂಪಾಯಿ ಮೌಲ್ಯವು 2024ರ ಜೂನ್ 20ರಂದು ಸಾರ್ವಕಾಲಿಕವಾಗಿ ₹83.66ಕ್ಕೆ ಕುಸಿಯಿತು. ಅಕ್ಟೋಬರ್ನಲ್ಲಿ ₹84 ದಾಟಿತು. ಈಗ 90 ರೂ. ಗಡಿ ಮುಟ್ಟಿದೆ.

ಈ ಸುದ್ದಿ ಓದಿದ್ದೀರಾ? ಕೆಐಎಡಿಬಿ ಹೊಸ ಬಹುಮಹಡಿ ಕಟ್ಟಡ ಉದ್ಘಾಟನೆ, ₹2 ಕೋಟಿ ಲಾಭಾಂಶ ಸಿಎಂಗೆ ಹಸ್ತಾಂತರ

ಆದರೂ, ರೂಪಾಯಿ ಮೌಲ್ಯ ಕುಸಿತವನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಾರೆ. 2022ರಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ₹82.38ಕ್ಕೆ ಕುಸಿದಾಗ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, “ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ” ಎಂದು ಹೇಳಿದ್ದರು. ಅವರ ಈ ಹೇಳಿಕೆ ಸಾಕಷ್ಟು ಟ್ರೋಲ್‌ಗೆ ತುತ್ತಾಗಿತ್ತು.

ಇನ್ನು, 2018ರಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು, “ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದಕ್ಕೆ ವಿತ್ತ ನೀತಿಯಾಗಲಿ, ಕೇಂದ್ರದ ಸಮಸ್ಯೆಯಾಗಲಿ ಕಾರಣವಲ್ಲ. ರೂಪಾಯಿ ಮೌಲ್ಯ ಉತ್ತಮವಾಗಿದೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೇ, ನಮ್ಮ ದೇಶದಲ್ಲಿ ಡಾಲರ್ ಮೌಲ್ಯ ಉತ್ತಮವಾಗಿದೆ. ಹಾಗೇ ನೋಡಿದರೇ ರೂಪಾಯಿ ಮೌಲ್ಯ ಉತ್ತಮಗೊಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವುದು ಸಾಮಾನ್ಯ” ಎಂದು ಹೇಳಿದ್ದರು. ಮೋದಿ, ನಿರ್ಮಲಾ ಸೀತಾರಾಮನ್ ಹಾಗೂ ಅರುಣ್ ಜೇಟ್ಲಿ ಈ ಮೂವರ ಮಾತುಗಳಲ್ಲಿಯೇ ನಾವು ವಾಸ್ತವವನ್ನ ಅರ್ಥಮಾಡಿಕೊಳ್ಳಬಹುದು.

2013ರಲ್ಲಿ ಮನಹೋಹನ್ ಸಿಂಗ್ ಆಡಳಿತದಲ್ಲಿ ರೂಪಾಯಿ ಮೌಲ್ಯ ಕುಸಿತವನ್ನು ಲೇಖಕ ಚೇತನ್ ಭಗತ್, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಸೇರಿದಂತೆ ಹಲವರು ಟೀಕಿಸಿದ್ದರು. ಆದರೆ, ಈಗ 90ರ ಗಡಿದಾಟಿದ್ದರೂ ಮೌನವಾಗಿದ್ದಾರೆ. ಹೀಗಾಗಿ, ಅವರ ಹಳೆ ಟ್ವೀಟ್‌ಗಳನ್ನು ಹುಡುಕಿರುವ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. “ಡಾಲರ್ ಎದುರು ರುಪಾಯಿ 60 ರೂಗೆ ತಲುಪಿದೆ. ಇದು ಆರ್ಥಿಕ ಕುಸಿತದ ಸಂಕೇತ. ಆದರೂ ಏನೂ ಆಗಿಲ್ಲವೆನ್ನುವಂತೆ ಸರ್ಕಾರ ಸುಮ್ಮನೆ ಕುಳಿತಿದೆ” ಎಂದು ಲೇಖಕ ಚೇತನ್ ಭಗತ್ 2013ರ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಟ್ವೀಟ್ ಮಾಡಿ ಟೀಕಿಸಿದ್ದರು.

KiranBedi1600

ಅದೇ ರೀತಿ, ಬಿಜೆಪಿಯಲ್ಲಿರುವ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯವರು ಸಹ 2013ರಲ್ಲಿಯೇ ಡಾಲರ್ ಎದುರು ರೂಪಾಯಿ ಕುಸಿತವನ್ನು ಒಂದು ಪದ್ಯದ ಮೂಲಕ ವ್ಯಂಗ್ಯ ಮಾಡಿದ್ದರು. “ಡಾಲರ್ ಎಸ್ಕಲೇಟರ್ ನಲ್ಲಿದೆ, ರುಪಾಯಿ ವೆಂಟಿಲೇಟರ್ ನಲ್ಲಿದೆ. ಫೈಲುಗಳು ಲಾಕರ್ ನಲ್ಲಿವೆ, ಮಾಧ್ಯಮಗಳು ಶಾಕ್ ಆಗಿವೆ, ಕೆಲವು ವ್ಯವಹಾರಕ್ಕೆ ಹೋಗವು ಬಂಕರ್ ಗಳು ಹೊಂದಿಕೊಂಡಿವೆ” ಎನ್ನುವ ಅರ್ಥದಲ್ಲಿ ಬರೆದಿದ್ದರು.

“ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, “ನಿಮ್ಮ ಸಂತೋಷವು ಪೆಟ್ರೋಲ್ ಬೆಲೆಯಂತೆ ಹೆಚ್ಚಾಗಲಿ, ನಿಮ್ಮ ದುಃಖವು ಭಾರತೀಯ ರೂಪಾಯಿಯಂತೆ ಕುಸಿಯಲಿ ಹಾಗೂ ನಿಮ್ಮ ಸಂತೋಷವು ಭಾರತದಲ್ಲಿ ಭ್ರಷ್ಟಾಚಾರದಂತೆ ನಿಮ್ಮ ಹೃದಯವನ್ನು ತುಂಬಲಿ” ಎಂದು ಮನಮೋಹನ್ ಸಿಂಗ್ ಸರ್ಕಾರವನ್ನು ಟೀಕಿಸಿದ್ದರು.

ಸ್ವಯಂ ಘೋಷಿತ ಆಧ್ಯಾತ್ಮಿಕಗುರು ರವಿಶಂಕರ್ ಗುರೂಜಿ ಕೂಡ ಸಿಂಗ್ ಸರ್ಕಾರವನ್ನು ಟೀಕಿಸಿದ್ದರು. ಮಾತ್ರವಲ್ಲ, ಮೋದಿ ಆಡಳಿತದ ಮೇಲೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದ ಅವರು, “ಮೋದಿ ಅಧಿಕಾರಕ್ಕೆ ಬಂದರೆ ರೂಪಾಯಿ ಪ್ರತಿ ಡಾಲರ್ ಎದುರು ರೂಪಾಯಿಯು 40 ರೂ.ಗಳಂತೆ ಬಲಗೊಳ್ಳುತ್ತದೆ ಎಂಬುದನ್ನು ಕೇಳಲು ಉಲ್ಲಾಸಕರವಾಗಿರುತ್ತದೆ” ಎಂದಿದ್ದರು.

ಅಂತೆಯೇ, ನಟಿ ಜೂಹಿ ಚಾವ್ಲಾ ಅವರು, “ಓಹ್ ಗಾಡ್, ನಮ್ಮ ಒಳ ಉಡುಪುಗಳ ಹೆಸರು ‘ಡಾಲರ್’ ಆಗಿದೆ. ಆ ಕಾರಣಕ್ಕೆ ಅದು ಭದ್ರವಾಗಿ ಕುಳಿತಿದೆ. ಅದೇನಾದರೂ, ರೂಪಾಯಿ ಎಂದಿದ್ದರೆ, ಅದು ಮತ್ತೆ-ಮತ್ತೆ ಬೀಳುತ್ತಲೇ ಇರುತ್ತಿತ್ತು!” ಎಂದು ರೂಪಾಯಿ ಬೆಲೆ ಕುಸಿತವನ್ನು ಅಂಡರ್ ವೇರ್‌ ಗೆ ಹೋಲಿಸಿ ಸಿಂಗ್ ಸರ್ಕಾರವನ್ನು ಟೀಕಿಸಿದ್ದರು.

ಈ ಎಲ್ಲ ಟೀಕೆಗಳು ಬಂದಿದ್ದದ್ದು 2013ರಲ್ಲಿ, ರೂಪಾಯಿ ಮೌಲ್ಯವು 50 ರೂ. ಆಸುಪಾಸಿನಲ್ಲಿದ್ದಾಗ. ಆದರೆ, ಈಗ ಮೋದಿ ಆಡಳಿತದ 11 ವರ್ಷಗಳಲ್ಲಿ ರೂಪಾಯಿ ಮೌಲ್ಯವು ಬರೋಬ್ಬರಿ 40 ರೂ.ಗಳಷ್ಟು ಅಧಿಕವಾಗಿ ಕುಸಿದಿದ್ದು, ಡಾಲರ್ ಎದುರು ರೂಪಾಯಿ ಬೆಲೆ 90 ರೂ.ಗೆ ಬಂದು ನಿಂತಿದೆ. ಆದರೆ, ಈಗ ರವಿಶಂಕರ್ ಗುರೂಜಿ ಅವರು ತಮ್ಮ ಉಲ್ಲಾಸ ಏನಾಯಿತು ಎಂದು ಮಾತನಾಡುತ್ತಿಲ್ಲ, ಜೂಹಿ ಚಾವ್ಲಾ ಅವರು ಅಂಡರ್ ವೇರ್ ಭದ್ರತೆಯ ವ್ಯಂಗ್ಯ ಮಾಡುತ್ತಿಲ್ಲ. ಕಿರಣ್ ಬೇಡಿ ಅವರು ರೂಪಾಯಿ ವೆಂಟಿಲೇಟರ್‌ನಲ್ಲಿ ಬದುಕಿದೆಯೇ ಇಲ್ಲವೇ ಎಂದು ಪರಿಶೀಲಿಸುತ್ತಿಲ್ಲ. ಅಗ್ನಿ ಹೋತ್ರಿ ಅವರಿಗೆ ದುಃಖವು ರೂಪಾಯಿಯಂತೆ ಕುಸಿಯುತ್ತಿಲ್ಲ. ಅವರಾರೂ ತುಟಿ ಬಿಚ್ಚುತ್ತಿಲ್ಲ.

juhi chavla

ಇನ್ನು, ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ಪ್ರಮುಖ ಆರ್ಥಿಕ ನಿರ್ಧಾರಗಳ ಮೂಲಕ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ಬದಲು ಮತ್ತಷ್ಟು ಹದಗೆಡಿಸಿದೆ. ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆಯ ಕಾರ್ಯವೈಖರಿಯಲ್ಲಿನ ಗೊಂದಲಗಳು, 2020ರ ದೇಶವ್ಯಾಪಿ ‘ಲಾಕ್ ಡೌನ್’ ಮತ್ತು 70 ವರ್ಷಗಳಲ್ಲಿ ಆರ್ಥಿಕ ಪ್ರಗತಿಗೆ ಕಾರಣೀಭೂತವಾಗಿದ್ದ ಬೃಹತ್ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ನಿರ್ಧಾರಗಳು ದೇಶದ ಪರಿಸ್ಥಿತಿಯನ್ನು ಆಧೋಗತಿಗೆ ದೂಡುತ್ತಿವೆ.

ಆದರೆ, ಆರ್ಥಿಕವಾಗಿ ಸಮರ್ಥ ಸರ್ಕಾರವನ್ನ ನಡೆಸದ ಮೋದಿ ಮತ್ತು ಬಿಜೆಪಿ ಸುಳ್ಳು ಪ್ರಚಾರವನ್ನೇ ಮೈಗೂಡಿಸಿಕೊಂಡಿದೆ. ದೇಶದ ಜನರನ್ನು ಹಾದಿ ತಪ್ಪಿಸುತ್ತಿದೆ. ಮೋದಿ ಅವರು ‘ಅಚ್ಚೇ ದಿನ್’ ಬಗ್ಗೆ ಭಾರೀ ಮಾತನಾಡಿದ್ದರು. ಹಲವು ಭರವಸೆಗಳನ್ನು ನೀಡಿದ್ದರು. ಆ ಎಲ್ಲ ಭರವಸೆಗಳೂ ಸಂಪೂರ್ಣ ಹುಸಿಯಾಗಿವೆ. ಮೋದಿ ಅವರ ಆಡಳಿತದಲ್ಲಿ ಅದಾನಿ–ಅಂಬಾನಿ ಸೇರಿದಂತೆ ಬಂಡವಾಳಶಾಹಿಗಳು ಶ್ರೀಮಂತರಾಗಿದ್ದು ಬಿಟ್ಟರೇ, ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...