ಮಹಿಳೆಯರ ಸುರಕ್ಷತೆಗೆ ʼಸಖಿ ಆಟೋʼ ಸೇವೆ: ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆ

Date:

ಸಖಿ ಆಟೋ ಸೇವೆ ಪಡೆಯಲು ride.sakhiwomen.inಗೆ ಭೇಟಿ ನೀಡಿ ಬುಕ್‌ ಮಾಡಿಕೊಳ್ಳಬಹುದು ಅಥವಾ 63619 33364ಕ್ಕೆ WhatsApp ಮಾಡಬಹುದು. ಹೊರಡುವ 1 ಗಂಟೆ ಮೊದಲು ಬುಕ್‌ ಮಾಡಿದರೆ ಒಳಿತು

ಮಹಿಳೆಯರ ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾದ ಸಖಿ ಆಟೋ ಸೇವೆ ಫೆಬ್ರವರಿ 14 ರಂದು ಬೆಂಗಳೂರಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಿದೆ. ಸಖಿ ಎಂಬ ಈ ಪ್ಲಾಟ್‌ಫಾರ್ಮ್, ರೈಡ್-ಹೇಲಿಂಗ್ ಮಾದರಿಯನ್ನು ಅನುಸರಿಸುತ್ತದೆ. ಮಹಿಳೆಯರ ಸುರಕ್ಷತೆಯ ಜತೆಗೆ ಮಹಿಳಾ ಸಬಲೀಕರಣಕ್ಕೂ ಮೀಸಲಾದ ಒಂದು ಮಹತ್ವದ ಹೆಜ್ಜೆಯಾಗಿದೆ.

ಸಖಿ ಆಟೋ ಸೇವೆ ಮಹಿಳಾ ಚಾಲಕಿಯರಿಂದಲೇ ನಡೆಸಲ್ಪಡುವ ವಿಶೇಷ ಆಟೋ ರೈಡ್-ಹೈಲಿಂಗ್ ಸೇವೆಯಾಗಿದ್ದು, ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ, ಆರಾಮ ಮತ್ತು ವಿಶ್ವಾಸವನ್ನು ನೀಡುವ ಗುರಿಯನ್ನು ಹೊಂದಿದೆ. ಜನವರಿಯಲ್ಲಿ ಪ್ರಾಯೋಗಿಕವಾಗಿ ನಡೆದ ಚಾಲನೆಯಲ್ಲಿ ಈ ಸೇವೆಯು 1 ವಾರಕ್ಕೆ ಸುಮಾರು 17 ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ.

ಸಖಿ ಆಟೋದ ಹಿನ್ನೆಲೆ ಮತ್ತು ಅಗತ್ಯತೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆಂಗಳೂರು ನಗರದಲ್ಲಿ ಮಹಿಳೆಯರು ರಾತ್ರಿ ವೇಳೆ ಅಥವಾ ಒಂಟಿಯಾಗಿ ಪ್ರಯಾಣಿಸುವಾಗ ಎದುರಾಗುವ ಸುರಕ್ಷತಾ ಆತಂಕಗಳು ಹೆಚ್ಚಾಗಿವೆ. ಸಾಂಪ್ರದಾಯಿಕ ಆಟೋ ಅಥವಾ ರೈಡ್-ಶೇರಿಂಗ್ ಸೇವೆಗಳಲ್ಲಿ ಪುರುಷ ಚಾಲಕರೊಂದಿಗಿನ ಸಂವಹನ, ಅನಿರೀಕ್ಷಿತ ವರ್ತನೆ ಅಥವಾ ಅನಾನುಕೂಗಳು ಅನೇಕ ಮಹಿಳೆಯರನ್ನು ಹಿಂಜರಿಯುವಂತೆ ಮಾಡಿವೆ. ಇಂತಹ ಸಂದರ್ಭದಲ್ಲಿ ʼಸಖಿ ಆಟೋ ಸೇವೆʼ ಒಂದು ಪರ್ಯಾಯವಾಗಿ ಕಾರ್ಯಾಚರಿಸಲಿದೆ.‌ ಇದು ಬಹುತೇಕ ಓಲಾ, ಉಬರ್‌ ಟ್ಯಾಕ್ಸಿಗಳಂತೆ ಕೆಲಸ ನಿರ್ವಹಿಸುತ್ತದೆಯಾದರೂ ಇದರಲ್ಲಿ ಮಹಿಳೆಯರೇ ಚಾಲನೆ ಮಾಡುವುದು ವಿಶೇಷ. ಇಲ್ಲಿ ಚಾಲಕಿಯರೂ ಮಹಿಳೆಯರೇ ಆಗಿರುವುದರಿಂದ ಪ್ರಯಾಣಿಕರಿಗೆ ಸಹಜವಾದ ಸೌಹಾರ್ದತೆ, ಸಹಾನುಭೂತಿ ಮತ್ತು ಭದ್ರತಾ ಭಾವನೆ ಸಿಗುತ್ತದೆ.

ಸಖಿ ಆಟೋ ಸೇವೆ ಆಲೋಚನೆ ಬಂದಿದ್ದು, ಹೇಗೆ?

ಬೆಂಗಳೂರು ನಗರದಲ್ಲಿ ಸಖಿ ಆಟೋ ಸೇವೆ ಆರಂಭಿಸುವ ಆಲೋಚನೆ ಕುರಿತು ಸಂಸ್ಥಾಪಕಿ ಕೃಷ್ಣ ವಿ ಪರೇಖ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮುಂಬೈನಲ್ಲಿ ನಾನು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮತ್ತು ನಂತರ ಅಲ್ಲಿ ಕೆಲಸ ಮಾಡಿ ಪ್ರಯಾಣಿಸುತ್ತಿದ್ದ ವೇಳೆ ಆಗಿರುವ ಸ್ವಂತ ಅನುಭವಗಳಿಂದ ಈ ಕಲ್ಪನೆ ಹುಟ್ಟಿಕೊಂಡಿತು. ದ್ವಿಚಕ್ರ ವಾಹನದಲ್ಲಿ ಪುರುಷನ ಹಿಂದೆ ಕುಳಿತುಕೊಳ್ಳುವುದು ನನಗೆ ಆರಾಮದಾಯಕ ಎನಿಸುತ್ತಿರಲಿಲ್ಲ. ತಡರಾತ್ರಿಯಲ್ಲಿ ಕ್ಯಾಬ್ ತೆಗೆದುಕೊಳ್ಳಬೇಕಾದಾಗ, ಕ್ಯಾಬ್ ಚಾಲಕರು ನಿಗದಿಪಡಿಸಿದ ಪಿಕ್-ಅಪ್ ಪಾಯಿಂಟ್ ಹೊರತುಪಡಿಸಿ ಬೇರೆ ಸ್ಥಳಗಳಿಗೆ ಬರಲು ಕೇಳಿದಾಗ ನನಗೆ ಅಸುರಕ್ಷಿತ ಭಾವನೆ ಮೂಡುತಿತ್ತು. ಅದರಂತಯೇ ಹಲವು ಮಹಿಳೆಯರು ಪ್ರಮುಖವಾಗಿ ರಾತ್ರಿಯ ಸಮಯಗಳಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಹಲವಾರು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿಗಳು ಬಂದೊದಗುತ್ತವೆ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಹೆಣ್ಣು ಮಕ್ಕಳಿಗಾಗಿ ಅವರೇ ನಡೆಸುವ ಸಾರಿಗೆ ವ್ಯವಸ್ಥೆಯಿದ್ದರೆ ಉತ್ತಮವೆಂದು ಇಂತಹ ಆಲೋಚನೆ ಬಂದಿತು. ಅಲ್ಲದೆ ಬೆಂಗಳೂರು ನಗರದಲ್ಲಿ ಚಾಲಕರಿಂದ ಪದೇ ಪದೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದದ್ದು ಗಮನಕ್ಕೆ ಬಂದ ಬಳಿಕ ಬೆಂಗಳೂರಿನಲ್ಲಿಯೇ ಸಖಿ ಆಟೋ ಸೇವೆ ಆರಂಭಿಸಬೇಕೆಂದುಕೊಂಡು ಈಗಾಗಲೇ ಪ್ರಾಯೋಗಿಕ ಕಾರ್ಯಾಚರಣೆ ನಡೆದಿದೆ” ಎಂದು ಮಾಹಿತಿ ಹಂಚಿಕೊಂಡರು.

ಆಟೋ ಸಖಿ ಸಿಬ್ಬಂದಿ ಸಪ್ತಮಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಹಿಳೆಯರೇ ಚಾಲಕಿಯರಾಗಿರುವ ಆಟೋ ಮತ್ತು ಸ್ಕೂಟರ್(ಬೈಕ್ ಟ್ಯಾಕ್ಸಿ) ಸೇವೆ ಇರುತ್ತದೆ. ಫೆಬ್ರವರಿ 14ರಿಂದ ಅಧಿಕೃತವಾಗಿ ಆರಂಭಗೊಳ್ಳುತ್ತಿದ್ದು, ಪ್ರಾಯೋಗಿಕವಾಗಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಆಟೋ ಸೇವೆ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ 24/7 ಆಗುವ ಸಾಧ್ಯತೆ ಇದೆ. ರಾತ್ರಿ 10ರ ನಂತರ ಸರ್ಜ್ ಪ್ರೈಸಿಂಗ್ ಹೆಚ್ಚಾಗುತ್ತದೆ. ಆದರೆ ಮೊದಲ ರೈಡಿಂಗ್‌ಗೆ ಶೇ.50ರಷ್ಟು ರಿಯಾಯಿತಿ ಇರಲಿದೆ” ಎಂದು ತಿಳಿಸಿದರು.

“ಮೊದಲ ಎರಡು ಕಿಲೋಮೀಟರ್‌ಗಳಿಗೆ ಕನಿಷ್ಠ ದರ 50 ರೂ. ಇರುತ್ತದೆ. ನಂತರ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 20 ರೂ. ಹೆಚ್ಚಾಗುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ ಬಹುತೇಕ ಮಹಿಳೆಯರು ಅನುಭವಿಸುವ ಆತಂಕವನ್ನು ಪರಿಹರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಜತೆಗೆ ಮಹಿಳಾ ಸಬಲೀಕರಣದ ಎರಡು ಉದ್ದೇಶಗಳನ್ನು ಹೊಂದಿದ್ದು, ಒಂದೆಡೆ ಪ್ರಯಾಣಿಕರ ಸುರಕ್ಷತೆ, ಮತ್ತೊಂದೆಡೆ ಮಹಿಳೆಯರಿಗೆ ಉದ್ಯೋಗಾವಕಾಶ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಖಾತರಿಪಡಿಸುತ್ತದೆ” ಎಂದು ಹೇಳಿದರು.

“ಇದೀಗ 50 ಮಂದಿ ಮಹಿಳೆಯರು ತರಬೇತಿ ಪಡೆದಿದ್ದು, ಆಟೋ ಚಾಲಕಿಯರಾಗಿದ್ದಾರೆ. ಅವರ ಸುರಕ್ಷತೆಗೆ ಆದ್ಯತೆ ನೀಡುವ ಸಲುವಾಗಿ ಅವರಿಗೂ ಒಂದು ಭದ್ರತೆಯ ವಸ್ತುಗಳಿರುವಂತಹ ಒಂದು ಕಿಟ್‌ ನೀಡಲಾಗುತ್ತದೆ. GPS ಟ್ರ್ಯಾಕಿಂಗ್ ಕೂಡ ಇರುತ್ತದೆ” ಎಂದರು.

“ಸಖಿ ಆಟೋ ಸಂಸ್ಥಾಪಕರಾದ ಕೃಷ್ಣವಿ ಪರೇಖ್ ಅವರು ತಮ್ಮ 24ರ ವಯಸ್ಸಿಗೇ ಮಹಿಳೆಯರ ಸುರಕ್ಷತೆಗಾಗಿ ಇಂತಹ ಒಂದು ನಿರ್ಧಾರವನ್ನು ಕೈಗೊಂಡಿದ್ದು, ಒಬ್ಬರೇ ಶೇ. 100ರಷ್ಟು ಬಂಡವಾಳವನ್ನು ಹೂಡಿ, ಸಖಿ ಆಟೋ ಸೇವೆ ಆರಂಭಿಸಿದ್ದಾರೆ. 50 ಮಂದಿ ಚಾಲಕಿಯರಿದ್ದು, ಇವರೆಲ್ಲರೂ ಹಿಂದಿನ ಚಾಲನಾ ಅನುಭವ ಹೊಂದಿದ್ದಾರೆ. ಅಲ್ಲದೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ” ಎಂದು ಹೇಳಿದರು.

“ಪ್ರಸ್ತುತ ಮೊಬೈಲ್ ಅಪ್ ಅಭಿವೃದ್ಧಿಯ ಹಂತದಲ್ಲಿದ್ದು, ಈಗ ವೆಬ್ ಅಪ್ಲಿಕೇಶನ್ ಮತ್ತು ವಾಟ್ಸ್ಯಾಪ್ ಮೂಲಕ ಬುಕಿಂಗ್ ಮಾಡಬಹುದು. ಭವಿಷ್ಯದಲ್ಲಿ ಸಂಪೂರ್ಣ ಅಪ್ ಬಿಡುಗಡೆಯಾಗಲಿದೆ. ಈ ಯೋಜನೆಯು ಕೇವಲ ಆಟೋ ಸೇವೆ ಒದಗಿಸುವುದಲ್ಲ, ಮಹಿಳೆಯರ ಸಬಲೀಕರಣಕ್ಕೆ ಅವಕಾಶ ಕಲ್ಪಿಸುವ ಮತ್ತು ಸಮಾಜದಲ್ಲಿ ಸಮಾನತೆಯನ್ನು ಬಲಪಡಿಸುವ ಒಂದು ಸಣ್ಣ, ಪರಿಣಾಮಕಾರಿ ಯೋಜನೆಯಾಗಿದೆ” ಎಂದರು.

ಲಿಂಗತ್ವ ಅಲ್ಪಸಂಖ್ಯಾತರಿಗೂ ಉದ್ಯೋಗಾವಕಾಶ ಕಲ್ಪಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ನನ್ನ ಗಮನಕ್ಕೆ ಇಲ್ಲ. ಆದರೆ ನಮ್ಮ ಸಂಸ್ಥಾಪಕರೊಂದಿಗೆ ಮಾತುಕತೆ ನಡೆಸಲಾಗುವುದು. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಅವಕಾಶ ಸದುಪಯೋಗಪಡಿಸಿಕೊಳ್ಳಲು ಸಿದ್ಧರಿದ್ದರೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಉದ್ಯೋಗ ಕಲ್ಪಿಸಲಾಗುವುದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಖಿ ಆಟೋ ಸೇವೆ ಪಡೆಯಲು ride.sakhiwomen.inಗೆ ಭೇಟಿ ನೀಡಿ ಬುಕ್‌ ಮಾಡಿಕೊಳ್ಳಬಹುದು ಅಥವಾ 63619 33364ಕ್ಕೆ WhatsApp ಮಾಡಬಹುದು. ಹೊರಡುವ 1 ಗಂಟೆ ಮೊದಲು ಬುಕ್‌ ಮಾಡಿದರೆ ಒಳಿತು ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿದ್ದೀರಾ? ಹಾಸನ ಮಣ್ಣಿನ ಹೆಣ್ಣು ಬೇರುಗಳು | ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಇಂದು Taxshe, GoPink Cabsನಂತಹ ಹಲವು ಆಯ್ಕೆಗಳಿವೆ. ಈ ಯೋಜನೆಗಳು ಹಳೆಯದಾಗಿದ್ದರೂ ಇನ್ನೂ ಬಲವಾಗಿ ಕಾರ್ಯನಿರ್ವಹಿಸುತ್ತಿವೆ. Mahi Cabs ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತಿದ್ದು, ಇದೀಗ ಸಖಿ ಆಟೋ ಮತ್ತು ಸ್ಕೂಟರ್ ಸೇವೆಗಳು ದೈನಂದಿನ ಪ್ರಯಾಣಕ್ಕೆ ಅತ್ಯಂತ ಸೂಕ್ತವಾಗಿವೆ.

ಮಹಿಳೆಯರೇ ಮಹಿಳೆಯರನ್ನು ಕಾಪಾಡಿಕೊಳ್ಳುವ ಸಖಿ ಆಟೋದಂತಹ ಸಾರಿಗೆ ಯೋಜನೆಗಳು ಕೆಲವು ಬದಲಾವಣೆಗಳನ್ನು ತರುವುದಾದರೆ ಇವುಗಳನ್ನು ಬೆಂಬಲಿಸೋಣ….. ಮಹಿಳೆಯ ಸುರಕ್ಷತೆ ಕಾಪಾಡಿಕೊಳ್ಳೋಣ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...