ಕಳೆದ ನೂರು ವರ್ಷಗಳಿಂದ ಪ್ರತಿ ವರ್ಷವೂ ಸಂಘ ಕೋಟ್ಯಂತರ ರೂಪಾಯಿಗಳನ್ನು ಗುರು ಕಾಣಿಕೆ ರೂಪದಲ್ಲಿ ಸಂಗ್ರಹ ಮಾಡಿದೆ. Rss ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಇಲ್ಲ. ಹಾಗಾದರೆ, ಈ ಕೋಟ್ಯಂತರ ಹಣ ಯಾರ ಹೆಸರಿನಲ್ಲಿ ಇದೆ? ಅದು ಬಿಜೆಪಿ ಚುನಾವಣೆಗೆ ಕೂಡಾ ಬಳಸಲ್ಪಡುತ್ತದೆ. ಆದ್ದರಿಂದ ಗುರುದಕ್ಷಿಣೆ ಲೆಕ್ಕ ಕೊಡದ ಸಂಘವೇ ಸ್ವಯಂ ಭ್ರಷ್ಟಗೊಂಡಿದೆ.
ಮೊದಲು ಹಿಂದೂ ಮಹಾಸಭಾ ಮಾತ್ರ ಇತ್ತು. ನಂತರ ಆರೆಸ್ಸೆಸ್ ತನ್ನ ರಾಜಕೀಯ ಶಕ್ತಿ ಬಲಪಡಿಸಲು
ಜನಸಂಘ ಮಾಡಿತು. ಆರೆಸ್ಸೆಸ್‌ನ ರಾಜಕೀಯ ಸಂಘಟನೆಯೇ ಜನಸಂಘ. ಆನಂತರ ಅದು ಬಿಜೆಪಿ ಆಯಿತು. ಇವರ ಪರಿವಾರದ ಪಟ್ಟಿಯಲ್ಲಿ ಬಿಜೆಪಿ ಹೆಸರೂ ಇದೆ.
Rss ನ ಸಂಕಲ್ಪ ʼಹಿಂದೂ ರಾಷ್ಟ್ರʼ ಮತ್ತು ʼಅಖಂಡ ಭಾರತʼ. ಇದು ದೇಶದ ಕುರಿತು ಒಂದು ರಾಜಕೀಯ ಸಿದ್ಧಾಂತವೇ ಆಗಿದೆ. ಅದನ್ನು ಜಾರಿಗೆ ತರಲು ಬಿಜೆಪಿಯನ್ನು ಸಾಕಿ ಸಲಹುವ ಆರೆಸ್ಸೆಸ್ ಚುನಾವಣೆ ಸಂದರ್ಭದಲ್ಲಿ ತನ್ನ ಹತ್ತಾರು ಸಂಘಟನೆಗಳನ್ನು ಬಿಜೆಪಿ ಪರ ಪ್ರಚಾರಕ್ಕೆ ಬಳಸುತ್ತದೆ. ಅಂದ ಮೇಲೆ ಅದು ಕೂಡ ಒಂದು ರಾಜಕೀಯ ಪಕ್ಷದ ಭಾಗವೇ ಆಗುತ್ತದೆ.
ಕಳೆದ ನೂರು ವರ್ಷಗಳಿಂದ ಪ್ರತಿ ವರ್ಷವೂ ಸಂಘ ಕೋಟ್ಯಂತರ ರೂಪಾಯಿಗಳನ್ನು ಗುರು ಕಾಣಿಕೆ ರೂಪದಲ್ಲಿ ಸಂಗ್ರಹ ಮಾಡಿದೆ. Rss ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಇಲ್ಲ. ಹಾಗಾದರೆ, ಈ ಕೋಟ್ಯಂತರ ಹಣ ಯಾರ ಹೆಸರಿನಲ್ಲಿ ಇದೆ? ಅದು ಬಿಜೆಪಿ ಚುನಾವಣೆಗೆ ಕೂಡಾ ಬಳಸಲ್ಪಡುತ್ತದೆ. ಆದ್ದರಿಂದ ಆರೆಸ್ಸೆಸ್ ಮಾಡುವುದು ಪಕ್ಷ ರಾಜಕೀಯವನ್ನೇ ಆಗಿದೆ.
ಇದು 2012ರಲ್ಲಿ ಮನಮೋಹನ್ ಸಿಂಗ್ ಸರಕಾರದ ಅವಧಿ ಮುಗಿಯುವ ವೇಳೆಗೆ ABPS ಅಖಿಲ ಭಾರತೀಯ ಪ್ರತಿನಿಧಿ ಸಭಾ ತೆಗೆದುಕೊಂಡ ನಿರ್ಣಯ ಹೀಗಿದೆ…
“ಕಳೆದ ವರ್ಷ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಲು ಮತ್ತು ವಿದೇಶದಲ್ಲಿರುವ ಬ್ಯಾಂಕುಗಳಿಂದ ಭಾರತೀಯ ಕಪ್ಪು ಹಣವನ್ನು ಮರಳಿ ತರಲು ಬೃಹತ್ ಜನಪ್ರಿಯ ಅಭಿಯಾನಗಳನ್ನು ಪ್ರಾರಂಭಿಸಲಾಯಿತು. ಪ್ರಜ್ಞಾಪೂರ್ವಕ ನಾಗರಿಕರಾಗಿ ಸಂಘದ ಸ್ವಯಂಸೇವಕರು ಸಹ ಈ ಆಂದೋಲನದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದರು. ಈ ಅಭಿಯಾನಗಳಿಗೆ ಭಾರೀ ಜನಪ್ರಿಯ ಬೆಂಬಲ ದೊರೆಯಿತು. ಈ ಅಭಿಯಾನಗಳಲ್ಲಿ ಸಂಘದ ಪಾಲ್ಗೊಳ್ಳುವಿಕೆಯ ಬಗ್ಗೆ ಸಂಕುಚಿತ ರಾಜಕೀಯ ಉದ್ದೇಶಗಳಿಗಾಗಿ ಅನಗತ್ಯ ವಿವಾದವನ್ನು ಸೃಷ್ಟಿಸಲು ಪ್ರಯತ್ನಿಸಲಾಯಿತು. ಈ ಅಭಿಯಾನಗಳ ಕಳವಳಗಳನ್ನು ಪರಿಹರಿಸುವ ಬದಲು ಸಾರ್ವಜನಿಕ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಲಾಯಿತು”.
***
ಆ ನಂತರ ನೀವು ಮಾಡಿದ್ದು ಏನು? ಆರೆಸ್ಸೆಸ್ ಮತ್ತು ಬಿಜೆಪಿ ಒಂದೇ ಅಲ್ಲಾ ಅಂತಾದರೆ ಬಿಜೆಪಿ ಪಕ್ಷದ ಭ್ರಷ್ಟಚಾರದ ಬಗ್ಗೆಯೂ ಮಾತನಾಡಬೇಕಿತ್ತು? ನೀವು ತೆಗೆದುಕೊಂಡ ಆ ನಿರ್ಣಯ ಕಳೆದ 14 ವರ್ಷಗಳಲ್ಲಿ ಜಾರಿ ಆಗಿಲ್ಲವಲ್ಲ. ಈಗ ನಿಮ್ಮ ಸ್ವಯಂ ಸೇವಕರು ಯಾಕೆ ಹೋರಾಟ ಮಾಡುವುದಿಲ್ಲ.
ಆರೆಸ್ಸೆಸ್ ನವರು ಭಾವಿಸಿದಂತೆ ಪ್ರಬಲ ಲೋಕಪಾಲ್ ಆಗಿದೆಯಾ? ವಿದೇಶದಲ್ಲಿನ ಕಪ್ಪು ಹಣ ಭಾರತಕ್ಕೆ ಬಂತೋ? ಇಷ್ಟೊಂದು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವಾಗ ಆರೆಸ್ಸೆಸ್ ಯಾಕೆ ಧ್ವನಿ ಎತ್ತುತ್ತಿಲ್ಲ?
ಯಾಕೆಂದರೆ, ಈಗ ಇರುವುದು ಆರೆಸ್ಸೆಸ್ ಕೃಪಾಪೋಷಿತ ಬಿಜೆಪಿ ಅಲ್ಲವೇ? ಮಾತ್ರವಲ್ಲ ಕೋಟ್ಯಂತರ ರೂಪಾಯಿ ಗುರುದಕ್ಷಿಣೆ ಲೆಕ್ಕ ಕೊಡದ ಸಂಘವೇ ಸ್ವಯಂ ಭ್ರಷ್ಟವಾಗಿದೆ.

ಪಕ್ಷ ರಾಜಕೀಯ ಅಲ್ಲ ಎಂದು ಹೇಳುವ ಆರೆಸ್ಸೆಸ್, ತನ್ನ ಸಂಘಟನಾ ಕಾರ್ಯದರ್ಶಿಗಳನ್ನು ಬಿಜೆಪಿಗೆ ನೇಮಕ ಮಾಡುವುದು ಯಾಕೆ? ತನ್ನ ಸಂಯೋಜನೆಗೆ ಸೇರಿದ ಸಂಸ್ಥೆಗಳ ಪಟ್ಟಿಯಲ್ಲಿ ಬಿಜೆಪಿಯನ್ನು ಸೇರಿಸಿದ್ದು ಯಾಕೆ?
ತನ್ನ ಬೈಠಕ್‌ಗಳಿಗೆ ಅವರನ್ನು ಆಮಂತ್ರಣ ಮಾಡುವುದು ಯಾಕೆ? ಚುನಾವಣೆ ಸಂದರ್ಭದಲ್ಲಿ ತನ್ನ ಕಾರ್ಯಕರ್ತರನ್ನು ಪ್ರಚಾರಕ್ಕೆ ಕಳಿಸುವುದು ಯಾಕೆ?
ಮಾತ್ರವಲ್ಲ, ಈ ದೇಶದ ಪ್ರಧಾನಿ, ರಾಷ್ಟ್ರಪತಿಯಿಂದ ಪ್ರಾರಂಭವಾಗಿ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂದು ಸಂಘದ ನೇತೃತ್ವದಲ್ಲಿ ನಿರ್ಣಯ ಆಗುವುದು ರಹಸ್ಯವಾಗಿ ಉಳಿದಿಲ್ಲ.
ಇನ್ನೂ ನೀವು ಪಕ್ಷ ರಾಜಕಾರಣ ಮಾಡುವುದಿಲ್ಲ ಎಂಬುದು ನಿಜವಾದರೆ Rss ಬಹಿರಂಗವಾಗಿ, ತನಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲವೆಂದು ಘೋಷಣೆ ಮಾಡಲಿ. ಪರಿವಾರದ ಪಟ್ಟಿಯಿಂದ ಕೈ ಬಿಡಲಿ. ಚುನಾವಣೆ ವೇಳೆಯಲ್ಲಿ ತಟಸ್ಥ ಧೋರಣೆ ತಾಳಲಿ. ಅದು ಕಾಂಗ್ರೆಸ್ ಮತ್ತು ಇನ್ನಿತರ ಬಿಜೆಪಿ ಪಕ್ಷದ ವಿರೋಧಿ ಪಕ್ಷಗಳನ್ನು ಟೀಕೆ ಮಾಡಿದಂತೆ ಬಿಜೆಪಿಯನ್ನೂ ಟೀಕೆ ಮಾಡಲಿ.
ಇದನ್ನೂ ಓದಿ RSS ಬಗ್ಗೆ ಸಿಎಂಗೆ ಪತ್ರ: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ
ಆರೆಸ್ಸೆಸ್ ಬಿಜೆಪಿಯ ಹೈಕಮಾಂಡ್
ಆರೆಸ್ಸೆಸ್ ನಮ್ಮ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಸಂಗತಿಗಳ ಮೇಲೆ ತನ್ನ ಅಭಿಪ್ರಾಯಗಳನ್ನು ಜಾರಿಗೆ ತರುತ್ತಿದೆ. ಆದ್ದರಿಂದ ಸಂಸ್ಥೆ ಮತ್ತು ಅದರ ಕಾರ್ಯಕ್ರಮಗಳು ಸಹಜವಾಗಿ ವಿಮರ್ಶೆಗೆ ಒಳಪಡುತ್ತದೆ. ಹಾಗೂ ಉಳಿದ ರಾಜಕೀಯ ಪಕ್ಷಗಳಿಗೆ ಅನ್ವಯ ಆಗುವ ಕಾನೂನು ಆರೆಸ್ಸೆಸ್‌ಗೆ ಕೂಡಾ ಅನ್ವಯ ಆಗುತ್ತದೆ.
ಎಲ್ಲಿಯವರೆಗೆ ಆರೆಸ್ಸೆಸ್ ಹಿಂಬಾಗಿಲಿನ ಮೂಲಕ ರಾಜಕೀಯ ಮಾಡುತ್ತದೋ ಅಲ್ಲಿಯವರೆಗೆ ಎಲ್ಲಾ ರಾಜಕೀಯ ಪಕ್ಷಗಳ ನಿಯಮವು ಆರೆಸ್ಸೆಸ್‌ಗೂ ಅನ್ವಯ ಆಗುತ್ತದೆ.
ಸರಕಾರಿ ಶಾಲೆ, ಸ್ಥಳ, ದೇವಸ್ಥಾನದಲ್ಲಿ ಸಂಘದ ಚಟುವಟಿಕೆ ಮಾಡುವುದು ಸರಿ ಅಂತಾದರೆ, ಅಲ್ಲಿ ಎಲ್ಲಾ ಪಕ್ಷಗಳಿಗೂ ಅವಕಾಶ ಸಿಗಬೇಕು.

ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ




