‘ಭೀಕರ ಹಿಂಸಾಚಾರದಲ್ಲಿ ತೊಡಗಿಕೊಳ್ಳುವ ಗುಪ್ತ ಸಂಸ್ಥೆಗಳು!’

Date:

ದಿ ಕ್ಯಾರವಾನ್’ ನಡೆಸಿದ RSS ಕುರಿತ ವಿಶೇಷ ತನಿಖಾ ವರದಿಯ ಅನುವಾದ ಮಾಲಿಕೆ ಆರು ಕಂತುಗಳಲ್ಲಿ ‘ಈ ದಿನ’ ದಲ್ಲಿ ಪ್ರಕಟವಾಗಲಿದೆ. ಮೊದಲ ನಾಲ್ಕು ಕಂತುಗಳು ಈಗಾಗಲೇ ಪ್ರಕಟವಾಗಿವೆ. ಇಲ್ಲಿದೆ ಐದನೇ ಕಂತು.

ಇನ್ನು “ಅಭಿಯಾನ ಕೇಂದ್ರಿತ ಸಂಸ್ಥೆಗಳು”. ಇವು ಸಾಮಾನ್ಯವಾಗಿ ನಿರ್ದಿಷ್ಟ ಹೋರಾಟ, ನೀತಿ ಬದಲಾವಣೆ ಅಥವಾ ವಿಷಯಕ್ಕಾಗಿ ಮೀಸಲಾದ ‘ಏಕ-ಬಳಕೆಯ’ (single-use) ಸಂಘದ ಪ್ರಕಟಿತ ಸಾಹಿತ್ಯದ ಆಳವಾದ ಮತ್ತು ಸಮಗ್ರ ಅಧ್ಯಯನದ ಆಧಾರದ ಮೇಲೆ, ನಮ್ಮ ತಂಡವು ಆರ್‌ಎಸ್‌ಎಸ್ ಜಾಲದ ಸದಸ್ಯತ್ವವನ್ನು ಗುರುತಿಸಲು ನೆರವಾಗುವ ಸಾಮಾನ್ಯ ಮಾದರಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿತು. ಈ ಪಟ್ಟಿಯನ್ನು ಮತ್ತಷ್ಟು ಪರಿಷ್ಕರಿಸಲು, ಭಾರತದ ವಿದ್ವಾಂಸರು, ಪತ್ರಕರ್ತರು ಮತ್ತು ತಳಮಟ್ಟದ ಹೋರಾಟಗಾರರೊಂದಿಗೆ ಸುಮಾರು ಎರಡು ವರ್ಷಗಳ ಕಾಲ ಸಮಾಲೋಚನೆ ನಡೆಸಲಾಯಿತು. ಈ ತಜ್ಞರು ತಮ್ಮ ವೃತ್ತಿಜೀವನದಲ್ಲಿ ಗಮನಿಸಿದ, ಸಂಘದೊಂದಿಗೆ ಹಾಸುಹೊಕ್ಕಾಗಿರುವ ಸಂಬಂಧವನ್ನು ದೃಢಪಡಿಸುವ ವಿವಿಧ ಸಾಕ್ಷ್ಯಗಳ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಈ ಪ್ರಕ್ರಿಯೆಯ ಫಲವಾಗಿ, ಒಂದು ಸಮಗ್ರವಾದ ಮತ್ತು ನಿರ್ದಿಷ್ಟ ಮೌಲ್ಯವುಳ್ಳ ‘ಬಹುಮುಖಿ ಮ್ಯಾಟ್ರಿಕ್ಸ್’ (weighted multiplexity matrix) ಅಥವಾ ಅಳತೆಗೋಲು ರೂಪುಗೊಂಡಿತು. ಇದು 34 ವಿವಿಧ ಬಗೆಯ ದತ್ತಾಂಶಗಳನ್ನು ಒಳಗೊಂಡ ಪರಿಶೀಲನಾ ಪಟ್ಟಿಯಾಗಿದ್ದು, ಸಂಘದೊಂದಿಗಿನ ನಂಟು ಎಷ್ಟು ಪ್ರಬಲವಾಗಿದೆ ಎಂಬುದನ್ನು ಸೂಚಿಸುತ್ತದೆ. ಸಂಘಟನೆಯನ್ನು ಕಟ್ಟುವ ಸಂಘದ ವಿಧಾನವು ತನ್ನದೇ ಆದ ಸ್ಪಷ್ಟ ಛಾಪು, ಆಡಳಿತಾತ್ಮಕ ಭಾಷೆ ಮತ್ತು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಈ ನಿರ್ದಿಷ್ಟ ಮತ್ತು ಪುನರಾವರ್ತಿತ ಮಾದರಿಗಳನ್ನು ಒಗ್ಗೂಡಿಸಿ, ನಾವು ‘ಮೌಲ್ಯಮಾಪನದ ಪ್ರಕ್ರಿಯೆ’ಯೊಂದನ್ನು ರೂಪಿಸುವಲ್ಲಿ ಯಶಸ್ವಿಯಾದೆವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉದಾಹರಣೆಗೆ, ಸಂಸ್ಥೆಯೊಂದು ತಾನು ಆರ್‌ಎಸ್‌ಎಸ್ ಪ್ರಚಾರಕರಿಂದ ಸ್ಥಾಪಿಸಲ್ಪಟ್ಟಿರುವುದಾಗಿ ಘೋಷಿಸಿಕೊಂಡರೆ, ಆ ದತ್ತಾಂಶಕ್ಕೆ ‘1’ ಅಂಕವನ್ನು ನೀಡಲಾಗುತ್ತದೆ. ಅದೇ ರೀತಿ, ಆರ್‌ಎಸ್‌ಎಸ್ ಸಂಸ್ಥಾಪಕರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಪ್ರದರ್ಶಿಸುವ ಸಂಸ್ಥೆಗೆ ‘0.5’ ಅಂಕ ಮತ್ತು ಸಂಘದ ಸಂಸ್ಥೆಯೊಂದರ ಅಂಗಸಂಸ್ಥೆ ಎಂದು ಪಟ್ಟಿ ಮಾಡಲಾದ ಸಂಸ್ಥೆಗೆ ‘0.25’ ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಸಂಸ್ಥೆಯೊಂದರ ಕ್ರೋಢೀಕೃತ ಅಂಕವು (ಗರಿಷ್ಠ ಮಿತಿ 1 ಆಗಿರುತ್ತದೆ) ಸಂಘದೊಂದಿಗಿನ ಅದರ ಸಂಪರ್ಕದ ತೀವ್ರತೆಯನ್ನು ಪ್ರತಿನಿಧಿಸುತ್ತದೆ. ‘1’ ಅಂಕ ಪಡೆದರೆ ಆ ಸಂಸ್ಥೆಯು ಖಚಿತವಾಗಿಯೂ ಸಂಘದ ಅಂತರ್ಗತ ಭಾಗವಾಗಿದೆ ಎಂದರ್ಥ. ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಕೇವಲ ‘0.25’ ಅಂಕ ಪಡೆದರೆ, ಅಂತಹ ಸಂಸ್ಥೆಯು ಸಂಘದೊಂದಿಗೆ ದುರ್ಬಲ ನಂಟನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ.

ನಮ್ಮ ತನಿಖೆಯು ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿರುವ ಎರಡೂವರೆ ಸಾವಿರ ಸಂಸ್ಥೆಗಳನ್ನು ಬಹಿರಂಗಪಡಿಸಿದೆ. ಸಂಘವು ‘ಕೇಂದ್ರದಿಂದ ಪರಿಧಿಯೆಡೆಗೆ’ (centre-to-periphery) ವಿಸ್ತರಿಸುವ ಮಾದರಿಯಲ್ಲಿ ಸಂಘಟಿತವಾಗಿದೆ. ಇದು ಪರಸ್ಪರ ನಿಬಿಡವಾಗಿ ಬೆಸೆದುಕೊಂಡಿರುವ ಪ್ರಮುಖ ಸಂಸ್ಥೆಗಳ (core group) ಸಮೂಹ ಮತ್ತು ಅವುಗಳ ಸುತ್ತಲೂ ಹರಡಿಕೊಂಡಿರುವ, ಪರಸ್ಪರ ಅಷ್ಟೇನೂ ಸಂಪರ್ಕವಿಲ್ಲದ ಪರಿಧಿಯ ಸಂಸ್ಥೆಗಳ (peripheral organisations) ಹೊರವರ್ತುಲದ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಕಾಯ್ದುಕೊಂಡಿದೆ. ನಿರೀಕ್ಷೆಯಂತೆಯೇ, ಸಂಘದ ಈ ಕೇಂದ್ರ ಭಾಗದಲ್ಲಿ ವಿಎಚ್‌ಪಿ, ಬಿಜೆಪಿ, ವನವಾಸಿ ಕಲ್ಯಾಣ ಆಶ್ರಮ ಮತ್ತು ಸೇವಾ ಭಾರತಿಯಂತಹ ಉನ್ನತ ಸ್ತರದ ಸಂಸ್ಥೆಗಳ ಪ್ರಾಬಲ್ಯವಿದೆ. ಅಲ್ಲದೆ, ಏಕಕಾಲಕ್ಕೆ ನೂರಾರು ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಬಲ್ಲ ‘ಐಡಿಆರ್‌ಎಫ್’ (IDRF) ಮತ್ತು ‘ಸಪೋರ್ಟ್ ಎ ಚೈಲ್ಡ್ ಯುಎಸ್‌ಎ’ಯಂತಹ ಬೃಹತ್ ನಿಧಿ ಸಂಗ್ರಹಣಾ ಸಂಸ್ಥೆಗಳೂ ಇಲ್ಲಿವೆ.

ಸಂಘದ ನಾಯಕತ್ವ ಅಥವಾ ನಿರ್ವಾಹಕ ವರ್ಗವು (Sangh executive), ಕೇವಲ ಆರ್‌ಎಸ್‌ಎಸ್ ನಾಯಕತ್ವಕ್ಕಷ್ಟೇ ಸೀಮಿತವಾಗಿಲ್ಲ; ಅದು ಆರ್‌ಎಸ್‌ಎಸ್ ಆಚೆಗಿನ ಕೆಲವು ಸಂಸ್ಥೆಗಳ ಮೇಲೂ ವ್ಯಾಪಿಸಿದೆ.

ಭಜರಂಗದಳ

ಈ “ನಿರ್ವಾಹಕ ಆರ್‌ಎಸ್‌ಎಸ್”ನ (Managerial RSS) ಕೇಂದ್ರಬಿಂದುವೇ ‘ಪ್ರಚಾರಕ’. ಸಂಘದ ಜಾಲವನ್ನು ಸಂಘಟಿಸುವಲ್ಲಿ ಪ್ರಚಾರಕರು ವಹಿಸುವ ನಿರ್ಣಾಯಕ ಪಾತ್ರದ ಬಗ್ಗೆ ಬಹಳ ಹಿಂದಿನಿಂದಲೇ ಎಲ್ಲರಿಗೂ ತಿಳಿದಿದೆ. ಈ ಪ್ರಚಾರಕರಿಗೆ ಆರ್‌ಎಸ್‌ಎಸ್‌ನ ಪ್ರಮುಖ ಧ್ಯೇಯೋದ್ದೇಶಗಳ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ. ಅರ್ಹತೆ ಪಡೆದ ನಂತರ, ಜಾಲದ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ಮತ್ತು ಅದನ್ನು ಬಲಪಡಿಸಲು ಅವರನ್ನು ಸಂಘದ ಅಂಗಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ಸಾಮಾನ್ಯವಾಗಿ ‘ಸಂಘಟನಾ ಮಂತ್ರಿ’ಗಳಾಗಿ (ಸಾಂಸ್ಥಿಕ ಕಾರ್ಯದರ್ಶಿಗಳು) ಕಾರ್ಯನಿರ್ವಹಿಸುತ್ತಾರೆ. ವ್ಯಾಪಕ ತರಬೇತಿ, ಸೈದ್ಧಾಂತಿಕ ಬದ್ಧತೆ ಮತ್ತು ಮಾನಸಿಕ ಸಿದ್ಧತೆಯ ಮೂಲಕ ಈ ಪದಾಧಿಕಾರಿಗಳು ವಿಶೇಷ ಅಧಿಕಾರವನ್ನು ಪಡೆದಿರುತ್ತಾರೆ. ತಾನು ನಿಯೋಜನೆಗೊಂಡ ಸಂಸ್ಥೆಯಲ್ಲಿ ಕುಳಿತು, ಕೇಂದ್ರ ಆರ್‌ಎಸ್‌ಎಸ್ ಪರವಾಗಿ ಮಹತ್ವದ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಇವರಿಗಿರುತ್ತದೆ. ಮುಖ್ಯವಾಗಿ, ಹೊಸ ಸಂಸ್ಥೆಗಳನ್ನು ಮತ್ತು ಸಾಂಸ್ಥಿಕ ವಿಭಾಗಗಳನ್ನು (streams) ಹುಟ್ಟುಹಾಕುವ ಅಧಿಕಾರವೂ ಇದರಲ್ಲಿ ಸೇರಿದೆ. ನಮ್ಮ ತನಿಖೆಯಲ್ಲಿ ಕಂಡುಬಂದಂತೆ, ಇದೇ ರೀತಿಯಲ್ಲಿ ಪ್ರಚಾರಕರು ನೂರಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

ಆದರೆ, ಈ ಕೇಂದ್ರ ಸ್ತರದ ಆಚೆಗಿರುವ ಸಂಘದ ವಿವಿಧ ಪದರಗಳು (layers) ಅತ್ಯಂತ ಕುತೂಹಲಕಾರಿ ಸಂಗತಿಗಳನ್ನು ತೆರೆದಿಡುತ್ತವೆ. ಆರ್‌ಎಸ್‌ಎಸ್‌ನ ಪಥಸಂಚಲನ ಮಾಡುವ ಕಾರ್ಯಕರ್ತರು ಮತ್ತು ಬಿಜೆಪಿ ಪಕ್ಷವು ಸಂಘದ ಅತ್ಯಂತ ಶಕ್ತಿಶಾಲಿ ಹಾಗೂ ಸಾರ್ವಜನಿಕವಾಗಿ ಗುರುತಿಸಲ್ಪಡುವ ಮುಖಗಳಾಗಿದ್ದರೂ; ಕೇವಲ ಆಡಳಿತ ನಡೆಸುವುದಷ್ಟೇ ಸಂಘದ ಏಕೈಕ ಅಥವಾ ಪ್ರಾಥಮಿಕ ಉದ್ದೇಶವಲ್ಲ. ನಿರುಪದ್ರವಿ ಎನಿಸುವ, ಅಷ್ಟೇನೂ ಪರಿಚಿತವಲ್ಲದ ಸಾವಿರಾರು ಸಂಸ್ಥೆಗಳ ಅಸ್ತಿತ್ವವು, ಸಂಘದ ವ್ಯಾಪಕ ಆದ್ಯತೆಯನ್ನು ಸಾರಿ ಹೇಳುತ್ತದೆ. ಅದೇನೆಂದರೆ, ಕೇವಲ ಆಡಳಿತಾತ್ಮಕ ನಿರ್ವಹಣೆಯಷ್ಟೇ ಅಲ್ಲ, ಭಾರತೀಯ ಸಮಾಜದ ಆಮೂಲಾಗ್ರ ಪರಿವರ್ತನೆಯೇ ಅದರ ಗುರಿ. ಈ ಸಂಸ್ಥೆಗಳು ಮೇಲ್ನೋಟಕ್ಕೆ ನಿರುಪದ್ರವಿಯಂತೆ ಕಾಣುವುದರಿಂದಲೇ, ಸಂಘವು ಸಮಾಜದ ವಿವಿಧ ಸ್ತರಗಳನ್ನು ಪ್ರವೇಶಿಸಲು ಸಾಧ್ಯವಾಗಿದೆ. ಇವು ಅನೇಕ ಬಾರಿ ಏಕಕಾಲದಲ್ಲಿ ವಿವಿಧ ವರ್ಗದ ಜನರನ್ನು ಉದ್ದೇಶಿಸಿ ಮಾತನಾಡುವಾಗ, ಪರಸ್ಪರ ವಿರುದ್ಧವಾದ ನಿಲುವುಗಳನ್ನೂ ತಳೆಯುತ್ತವೆ. ನಮ್ಮ ಸಂಶೋಧನೆಯು ಸಂಘದ ವ್ಯಾಪ್ತಿಯಲ್ಲಿರುವ ಸಂಸ್ಥೆಗಳನ್ನು ವಿಶಾಲವಾದ ಮಾದರಿಗಳನ್ನಾಗಿ (typology) ವರ್ಗೀಕರಿಸಿದೆ.

ಸಂಘದ ಸದಸ್ಯತ್ವ ಆಧಾರಿತ “ಕಾರ್ಯಕರ್ತ ಪಡೆ (Cadre) ಆಧರಿತ ಸಂಸ್ಥೆಗಳು” ಅತ್ಯಂತ ದೊಡ್ಡ ಮಟ್ಟದಲ್ಲಿ ಜನರನ್ನು ಸಂಘಡಿಸುವ ಸಾಮರ್ಥ್ಯವನ್ನು ಹೊಂದಿವೆ. ಸಾಂಪ್ರದಾಯಿಕ ಕೇಡರ್ ಆಧಾರಿತ ಸಂಸ್ಥೆಗಳ ಪ್ರಮುಖ ಲಕ್ಷಣಗಳೆಲ್ಲವೂ ಇವುಗಳಲ್ಲಿ ಕಂಡುಬರುತ್ತವೆ: ಶಾಖೆಗಳ ಮೂಲಕ ಸಂಘಟನೆ, ಔಪಚಾರಿಕ ಆಡಳಿತಾತ್ಮಕ ಶ್ರೇಣಿ ವ್ಯವಸ್ಥೆ, ಕಾರ್ಯಕರ್ತರಲ್ಲಿ ಸಾಪೇಕ್ಷ ಸೈದ್ಧಾಂತಿಕ ಬದ್ಧತೆ, ತರಬೇತಿ ಪ್ರಕ್ರಿಯೆಗಳು ಮತ್ತು ನಿರ್ದಿಷ್ಟ ಸದಸ್ಯತ್ವ. ಸಂಘದ ಇತರ ಸಂಸ್ಥೆಗಳಲ್ಲಿ ಕೇವಲ ಸಿಬ್ಬಂದಿ ಮತ್ತು ಫಲಾನುಭವಿಗಳಿದ್ದರೆ, ಈ ಸಂಸ್ಥೆಗಳಲ್ಲಿ ಅಂದುಕೊಂಡಿದ್ದನ್ನು “ಸಾಧಿಸಿ ತೋರಿಸಲು” ಸಂಘಟಿತರಾಗುವ ಸದಸ್ಯರಿದ್ದಾರೆ. ಇದು ಸಾರ್ವಜನಿಕವಾಗಿ ಸಂಘದ ವರ್ಚಸ್ಸನ್ನು ಹೆಚ್ಚಿಸುವ ಆರ್‌ಎಸ್‌ಎಸ್‌ನ ಪಥಸಂಚಲನಗಳಿರಬಹುದು; ರ್ಯಾಲಿಗಳಿಗಾಗಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಎಬಿವಿಪಿ ಇರಬಹುದು; ಚುನಾವಣೆಗಳಲ್ಲಿ ಜನಬೆಂಬಲ ಗಿಟ್ಟಿಸಲು ಸದಸ್ಯರನ್ನು ಸಂಘಟಿಸುವ ಬಿಜೆಪಿ ಇರಬಹುದು; ಆದಿವಾಸಿಗಳನ್ನು ‘ಸಂಘಿ’ಗಳನ್ನಾಗಿ ಪರಿವರ್ತಿಸಲು ನಿಷ್ಠಾವಂತ ಕಾರ್ಯಕರ್ತರನ್ನು ಕಳುಹಿಸುವ ವನವಾಸಿ ಕಲ್ಯಾಣ ಆಶ್ರಮವಿರಬಹುದು; ಅಥವಾ ಕೆರಳಿದ ಯುವಕರನ್ನು ಗಲಭೆಗಳೆಡೆಗೆ ಪ್ರಚೋದಿಸುವಂತೆ ಸಂಘಟಿಸುವ ಭಜರಂಗ ದಳವಿರಬಹುದು. ಸಂಘದ ಈ ಕೇಡರ್ ಆಧಾರಿತ ಸಂಸ್ಥೆಗಳು ಸಾಮಾನ್ಯವಾಗಿ ಆರ್‌ಎಸ್‌ಎಸ್‌ನ ನೇರ ಕುಡಿಗಳಾಗಿರುತ್ತವೆ. ಇವುಗಳ ನಡುವೆ ಯಾವುದೇ ಮಧ್ಯವರ್ತಿ ಸಂಸ್ಥೆಗಳಿರುವುದಿಲ್ಲ. ಇವು ಪ್ರಚಾರಕರ ಬಲವಾದ ನಿಯಂತ್ರಣವನ್ನು ಹೊಂದಿರುತ್ತವೆ ಮತ್ತು ಸಂಘದ ವಿಸ್ತರಣೆಯ ಆರಂಭಿಕ ಹಂತಗಳಲ್ಲಿಯೇ ಇವು ಸ್ಥಾಪನೆಗೊಂಡಿವೆ. ಈ ಸಂಸ್ಥೆಗಳು ತಮ್ಮನ್ನು ತಾವು ಸಂಘದ ತಿರುಳು ಅಥವಾ ಪ್ರಮುಖ ಭಾಗವೆಂದು ಪರಿಗಣಿಸುತ್ತವೆ ಹಾಗೂ ಹಾಗೆಂದೇ ವ್ಯಾಪಕವಾಗಿ ಪರಿಗಣಿಸಲ್ಪಡುತ್ತವೆ. ಸಂಘದ ರಾಜಕಾರಣಕ್ಕೆ ಇರುವ ಬೃಹತ್ ಸಾರ್ವಜನಿಕ ಬೆಂಬಲವನ್ನು ಜಗತ್ತಿಗೆ ತೋರಿಸುವಲ್ಲಿ ಇವು ನಿರ್ಣಾಯಕ ಪಾತ್ರ ವಹಿಸುತ್ತವೆ.

“ಸಮನ್ವಯ ಸಂಸ್ಥೆಗಳು” (Co-ordinating organisations) ಆಡಳಿತಾತ್ಮಕ ಶ್ರಮ ವಿಭಜನೆಯ ಮೂಲಕ, ಸಂಘದ ಪ್ರಮುಖ ಸಂಸ್ಥೆಗಳು (core) ಮತ್ತು ಪರಿಧಿಯಲ್ಲಿರುವ ಸಂಸ್ಥೆಗಳ ನಡುವೆ ಮಾಹಿತಿ ಮತ್ತು ಹಣಕಾಸಿನ ಹರಿವನ್ನು ಮಧ್ಯವರ್ತಿಗಳಾಗಿ ನಿರ್ವಹಿಸುತ್ತವೆ. ಈ ಸಂಸ್ಥೆಗಳು ಅಸಂಖ್ಯಾತ ಸದಸ್ಯ ಬಲವನ್ನೇನೂ ಹೊಂದಿರುವುದಿಲ್ಲ. ಬದಲಾಗಿ, ‘ವೇದ್ ಮಂದಿರ ಸಮಿತಿ’ಯಂತೆ, ಅಚ್ಚರಿ ಎನಿಸುವಷ್ಟು ಕಡಿಮೆ ಸಂಖ್ಯೆಯ ವೃತ್ತಿಪರ ಸಿಬ್ಬಂದಿಯನ್ನು ಇವು ಹೊಂದಿರುತ್ತವೆ. ಈ ಸಮನ್ವಯ ಸಂಸ್ಥೆಗಳ ಬಹುತೇಕ “ನೈಜ ಕೆಲಸ”ವನ್ನು ಸಾಮಾನ್ಯವಾಗಿ ಅವುಗಳ ಉಪಸಂಸ್ಥೆಗಳೇ ನಿರ್ವಹಿಸುತ್ತವೆ.

ಉದಾಹರಣೆಗೆ, ‘ವಿದ್ಯಾ ಭಾರತಿ’ಯು 12,000ಕ್ಕೂ ಹೆಚ್ಚು ಶಾಲೆಗಳನ್ನೊಳಗೊಂಡ ಬೃಹತ್ ಶೈಕ್ಷಣಿಕ ಸೇವಾ ಜಾಲವನ್ನು ಹೊಂದಿರುವುದಾಗಿ ಹೇಳಿಕೊಳ್ಳುತ್ತದೆ. (ನಾವು ಈ ಶಾಲೆಗಳನ್ನು ನಕ್ಷೆಯಲ್ಲಿ ಗುರುತಿಸಿದ್ದೇವೆಯಾದರೂ, ಇತರ ಸಂಸ್ಥೆಗಳನ್ನು ಮರೆಮಾಚುವ ಗೊಂದಲವನ್ನು ತಪ್ಪಿಸಲು ಈ ದತ್ತಾಂಶ ಪಟ್ಟಿಯಿಂದ ಹೊರಗಿಟ್ಟಿದ್ದೇವೆ). ಆದರೆ ಈ ಸೇವೆಗಳನ್ನು ತಲುಪಿಸುವ ಜವಾಬ್ದಾರಿಯನ್ನು ಮಧ್ಯಪ್ರದೇಶದ ‘ಸರಸ್ವತಿ ಶಿಕ್ಷಾ ಪರಿಷತ್’, ಜಮ್ಮುವಿನ ‘ಭಾರತೀಯ ಶಿಕ್ಷಾ ಸಮಿತಿ’ ಅಥವಾ ಉತ್ತರ ಪ್ರದೇಶದ ‘ಭಾರತೀಯ ಶ್ರೀವಿದ್ಯಾ ಪರಿಷತ್’ನಂತಹ ರಾಜ್ಯ ಮಟ್ಟದ ಸಂಸ್ಥೆಗಳಿಗೆ ವಹಿಸಲಾಗಿದೆ.

ದೊಡ್ಡ ಸಂಖ್ಯೆಯ ಉಪಸಂಸ್ಥೆಗಳನ್ನು ಸ್ಥಾಪಿಸಲು ಅಥವಾ ನಿರ್ವಹಿಸಲು ಅಗತ್ಯವಿರುವ ಸಾಂಸ್ಥೀಕರಣದ (institutionalisation) ಕಾರಣದಿಂದಾಗಿ, ಈ ಸಮನ್ವಯ ಸಂಸ್ಥೆಗಳು ಸಾಮಾನ್ಯವಾಗಿ ಸಂಘದ ಅತ್ಯಂತ ಹಳೆಯ ಸಂಸ್ಥೆಗಳಾಗಿವೆ. ಇದೇ ಕಾರಣಕ್ಕಾಗಿ, ಇವುಗಳನ್ನು ‘ಪ್ರತಿಷ್ಠಿತ ಸಂಸ್ಥೆಗಳು’ ಎಂದೂ ಪರಿಗಣಿಸಲಾಗುತ್ತದೆ. ಈ ಪ್ರತಿಷ್ಠೆ ಹಾಗೂ ಕೇಂದ್ರ ಮತ್ತು ಪರಿಧಿಯ ನಡುವಿನ ಸೇತುವೆಯ ದ್ವಾರಪಾಲಕರಾಗಿ (gatekeepers) ಇವು ನಿರ್ವಹಿಸುವ ಪ್ರಮುಖ ಪಾತ್ರದಿಂದಾಗಿ, ಇತರ ಸಂಸ್ಥೆಗಳಿಗಿಂತ ಇಲ್ಲಿ ಕೇಂದ್ರ ನಾಯಕತ್ವದ ಉಪಸ್ಥಿತಿಯು ಬಲವಾಗಿ ಕಂಡುಬರುತ್ತದೆ.

ಅಂತಿಮವಾಗಿ, ಎಲ್ಲಾ ಸಂವಹನ ಮತ್ತು ಸಂಪನ್ಮೂಲಗಳು ಈ ಮಧ್ಯವರ್ತಿ ಸಂಸ್ಥೆಗಳ ಮೂಲಕವೇ ಹಾದು ಹೋಗಬೇಕಾಗುತ್ತದೆ. ಈ ಜಾಲದಲ್ಲಿ, ಯಾವುದೇ ನಿರ್ದಿಷ್ಟ ಸಂಸ್ಥೆ ಮತ್ತು ಆರ್‌ಎಸ್‌ಎಸ್ ನಡುವೆ ಸರಾಸರಿ ಕನಿಷ್ಠ ಪಕ್ಷ ಒಂದು ಸಂಸ್ಥೆಯಾದರೂ ಇದ್ದೇ ಇರುತ್ತದೆ. ಸಂಘದ ಅರ್ಧದಷ್ಟು ಸಂಸ್ಥೆಗಳು ಕೇವಲ ಒಂದೇ ಒಂದು ಕೊಂಡಿಯ ಮೂಲಕ ಸಂಪರ್ಕ ಹೊಂದಿವೆ ಎಂಬ ವಾಸ್ತವದೊಂದಿಗೆ ಇದನ್ನು ಹೋಲಿಸಿ ನೋಡಿದಾಗ, ಈ ಮಧ್ಯವರ್ತಿ ಸಂಸ್ಥೆಗಳ ಮಹತ್ವ ಸ್ಪಷ್ಟವಾಗುತ್ತದೆ. ಒಂದು ವೇಳೆ ಸೇವಾ ಭಾರತಿ, ಐಡಿಆರ್‌ಎಫ್, ವಿಎಚ್‌ಪಿ, ಹಿಂದೂ ಸೇವಾ ಪ್ರತಿಷ್ಠಾನ ಮುಂತಾದ ಈ ಮಧ್ಯವರ್ತಿ ಸಂಸ್ಥೆಗಳು ಅಸ್ತಿತ್ವದಲ್ಲಿಲ್ಲದಿದ್ದರೆ, ಸಂಘದ ಅರ್ಧಕ್ಕಿಂತ ಹೆಚ್ಚು ಸಂಸ್ಥೆಗಳು ಈ ಜಾಲದಿಂದ ಸಂಪೂರ್ಣವಾಗಿ ಕಡಿದುಹೋಗುತ್ತಿದ್ದವು.

ಅದೇ ಸಮಯದಲ್ಲಿ, ಈ ಸಂಸ್ಥೆಗಳು ಮೂಲ ಸಂಘ (Core Sangh) ಮತ್ತು ಪರಿಧಿಯ ಸಂಸ್ಥೆಗಳ ನಡುವೆ ಸಾರ್ವಜನಿಕವಾಗಿ ಗುರುತಿಸಲ್ಪಟ್ಟ ಸಂಬಂಧದ ಸ್ವರೂಪವನ್ನು ನಿರ್ಧರಿಸುತ್ತವೆ. ಆರ್‌ಎಸ್‌ಎಸ್‌ನೊಂದಿಗಿನ ಸಂಬಂಧವನ್ನು ವ್ಯೂಹಾತ್ಮಕವಾಗಿ ಒಪ್ಪಿಕೊಳ್ಳಲು ಅಥವಾ ನಿರಾಕರಿಸಲು ಅಗತ್ಯವಿರುವ ‘ಅಸ್ಪಷ್ಟತೆ’ಯನ್ನು, ಈ ಸಂಸ್ಥೆಗಳು ಒದಗಿಸುವ ಸಾಂಸ್ಥಿಕ ಸಮನ್ವಯತೆಯು ಸೃಷ್ಟಿಸುತ್ತದೆ. ಬೆಂಗಳೂರಿನ ‘ಭಾರತಮಾತಾ ಗುರುಕುಲ ಆಶ್ರಮ ಟ್ರಸ್ಟ್’, ಮಧ್ಯಪ್ರದೇಶದ ‘ಪದ್ಮ ಕೇಶವ್ ಟ್ರಸ್ಟ್’ ಮತ್ತು ದೆಹಲಿಯ ‘ಡಾ. ಮುಖರ್ಜಿ ಸ್ಮೃತಿ ನ್ಯಾಸ್’ ಈ ಮಾದರಿಯ ಇತರ ಸಂಸ್ಥೆಗಳಿಗೆ ಉದಾಹರಣೆಗಳಾಗಿವೆ.

ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸ್ಥಾಪಿತವಾಗುವ ಇವುಗಳನ್ನು, ಕೆಲಸ ಮುಗಿದ ನಂತರ ಕೈಬಿಡಲಾಗುತ್ತದೆ. ದೇಶ ವಿಭಜನೆಯ ನಂತರ ನಿರಾಶ್ರಿತರ ನೆರವಿಗಾಗಿ ಸ್ಥಾಪಿಸಲಾದ ‘ಪಂಜಾಬ್ ರಿಲೀಫ್ ಕಮಿಟಿ’ ಮತ್ತು ‘ವಾಸ್ತುಹರಾ ಸಹಾಯತಾ ಸಮಿತಿ’; ‘ಮೋರ್ವಿ ರಿಲೀಫ್ ಕಮಿಟಿ’ಯಂತಹ ವಿಪತ್ತು ಪರಿಹಾರ ಸಂಸ್ಥೆಗಳು; ‘ರಾಮಜನ್ಮಭೂಮಿ ನ್ಯಾಸ್’ನಂತಹ ದೇವಾಲಯ ಹೋರಾಟದ ವೇದಿಕೆಗಳು; ಅಥವಾ ಆದಿವಾಸಿಗಳ ನಡುವೆ ಕ್ರೈಸ್ತ ವಿರೋಧಿ ಹೋರಾಟಗಳನ್ನು ನಡೆಸುವ ‘ಜನಜಾತಿ ಸುರಕ್ಷಾ ಮಂಚ್’ – ಇವೆಲ್ಲವೂ ಇದಕ್ಕೆ ಉದಾಹರಣೆಗಳು. ಇತ್ತೀಚೆಗೆ, ಕ್ಯಾಲಿಫೋರ್ನಿಯಾದಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟುವ ಶಾಸಕಾಂಗ ಕ್ರಮಗಳನ್ನು ವಿರೋಧಿಸುವ ಏಕೈಕ ಉದ್ದೇಶಕ್ಕಾಗಿ, ಅಮೆರಿಕದಲ್ಲಿರುವ ಸಂಘವು ‘ಅಂಬೇಡ್ಕರ್-ಫುಲೆ ನೆಟ್‌ವರ್ಕ್ ಆಫ್ ಅಮೆರಿಕನ್ ದಲಿತ್ಸ್ ಅಂಡ್ ಬಹುಜನ್ಸ್’ ಅನ್ನು ಸೃಷ್ಟಿಸಿತ್ತು.

ಅದೇ ಸಮಯದಲ್ಲಿ, ಆರ್‌ಎಸ್‌ಎಸ್‌ನೊಳಗಿನ ‘ಹೋರಾಟದ ಕಥನ’ಗಳನ್ನು (mythos of struggle) ರೂಪಿಸುವಲ್ಲಿ ಈ ಸಂಸ್ಥೆಗಳು ಅತ್ಯಗತ್ಯವಾಗಿವೆ. ಜಗತ್ತಿನ ಐದನೇ ಒಂದರಷ್ಟು ಜನಸಂಖ್ಯೆಯನ್ನು ಆಳುವ ಸರ್ಕಾರವನ್ನು ನಿಯಂತ್ರಿಸುತ್ತಿದ್ದರೂ, ಹಿಂದೂಗಳ ಮೇಲಿನ ದಬ್ಬಾಳಿಕೆ ಮತ್ತು ಸರ್ಕಾರದ ಕಿರುಕುಳದ ಕಥನಗಳಿಂದ ಸಂಘವು ದೊಡ್ಡ ಮಟ್ಟದ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ, ತಾವು ನಡೆಸುವ ನ್ಯಾಯಯುತ ಹೋರಾಟದ ಚಿತ್ರಣಗಳು ಅಥವಾ ಬೇರೆ ಯಾರೂ ಇಲ್ಲದಿದ್ದಾಗ ಒದಗಿಸಿದ ಸೇವೆಯು, ಸಂಘಕ್ಕೆ ಪ್ರಮುಖ ನೈತಿಕ ಸಂಪನ್ಮೂಲಗಳಾಗಿ  ಕಾರ್ಯನಿರ್ವಹಿಸುತ್ತವೆ.

ಇನ್ನು “ಮುಂಚೂಣಿ ಸಂಸ್ಥೆಗಳು” ಅಥವಾ “ಮುಖವಾಡ ಸಂಸ್ಥೆಗಳು” (Front organisations). ಈ ಪದವನ್ನು ನಾವು ಅದರ ಸಾಮಾನ್ಯ ಬಳಕೆಯ ಅರ್ಥಕ್ಕಿಂತ ಹೆಚ್ಚು ನಿರ್ದಿಷ್ಟವಾಗಿ ಬಳಸುತ್ತಿದ್ದೇವೆ. ಇಲ್ಲಿ, ಇದರ ಅರ್ಥವೇನೆಂದರೆ; ಮೂಲ ಸಂಸ್ಥೆಯಿಂದ ಭೌತಿಕವಾಗಿ ಬೇರ್ಪಡಿಸಲಾಗದಂತಹ ಸಂಸ್ಥೆಗಳು. ಇವು ಒಂದೇ ರೀತಿಯ ಅನುದಾನ, ಒಂದೇ ಚಟುವಟಿಕೆಗಳು, ಒಂದೇ ಸಾಂಸ್ಥಿಕ ರಚನೆ ಮತ್ತು ಒಂದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತವೆ. ಆದರೆ, ನಕಲು ಮಾಡುವ ಮತ್ತು ವಿಷಯವನ್ನು ಮರೆಮಾಚುವ ಉದ್ದೇಶಪೂರ್ವಕ ತಂತ್ರದ ಭಾಗವಾಗಿ, ಇವು ಬೇರೊಂದು ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ವ್ಯಾಖ್ಯಾನವು ಸಂಘದ ಕೆಲವು ಸಂಸ್ಥೆಗಳಿಗೆ ಅನ್ವಯಿಸುತ್ತದೆಯೇ ಹೊರತು ಎಲ್ಲವಕ್ಕೂ ಅಲ್ಲ.

ಅಲ್ಪಸಂಖ್ಯಾತರನ್ನು ಹೊರಹಾಕುವುದೇ ಸೂಕ್ತ ಎಂದು ಪ್ರತಿಪಾದಿಸುತ್ತದೆ ಆರೆಸ್ಸೆಸ್ ಸಿದ್ಧಾಂತ

ಉದಾಹರಣೆಗೆ, ‘ಸೇವಾ ಭಾರತಿ’ಯು ಭಾರತದಾದ್ಯಂತ ಸಕ್ರಿಯವಾಗಿದ್ದರೂ, ಅದರ ರಾಜ್ಯ ಘಟಕಗಳು ಸಾಮಾನ್ಯವಾಗಿ ಪ್ರತ್ಯೇಕ ಹೆಸರುಗಳು ಮತ್ತು ಕಾನೂನುಬದ್ಧ ಅಸ್ತಿತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಒರಿಸ್ಸಾದಲ್ಲಿ ‘ಉತ್ಕಲ್ ವಿಪನ್ನ ಸಹಾಯತಾ ಸಮಿತಿ’, ಮಹಾರಾಷ್ಟ್ರದಲ್ಲಿ ‘ಜನಕಲ್ಯಾಣ ಸಮಿತಿ’, ತ್ರಿಪುರಾದಲ್ಲಿ ‘ವಿವೇಕಾನಂದ ಸೇವಾ ನ್ಯಾಸ್’ ಮತ್ತು ಉತ್ತರಾಖಂಡದಲ್ಲಿ ‘ಉತ್ತರಾಂಚಲ್ ಉತ್ಥಾನ ಪರಿಷತ್’ ಮೂಲಕ ಇದು ಕಾರ್ಯಾಚರಿಸುತ್ತದೆ. ಅದೇ ರೀತಿ, ‘ವಿದ್ಯಾ ಭಾರತಿ’ಯು ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಜಾರ್ಖಂಡ್‌ನಲ್ಲಿ ‘ವನಾಂಚಲ ಶಿಕ್ಷಾ ಸಮಿತಿ’, ತಮಿಳುನಾಡಿನಲ್ಲಿ ‘ವಿವೇಕಾನಂದ ಕೇಂದ್ರ’, ದೆಹಲಿಯಲ್ಲಿ ‘ಸಮರ್ಥ್ ಶಿಕ್ಷಾ ಸಮಿತಿ’ ಮತ್ತು ಪಂಜಾಬ್‌ನಲ್ಲಿ ‘ಸರ್ವಹಿತಕಾರಿ ಶಿಕ್ಷಾ ಸಮಿತಿ’ ಎಂಬ ಹೆಸರುಗಳಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಸಂಘದ ಆಂತರಿಕ ಪ್ರಕಟಣೆಗಳು ಮತ್ತು ಸಂಭಾಷಣೆಗಳಲ್ಲಿ, ಈ ಮೂಲ ಸಂಸ್ಥೆ ಮತ್ತು ಅದರ ಮುಖವಾಡ ಸಂಸ್ಥೆಗಳ ನಡುವಿನ ಭಿನ್ನತೆಗಳು ಸಂಪೂರ್ಣವಾಗಿ ಅಳಿಸಿಹೋಗಿರುತ್ತವೆ.

ಇದಲ್ಲದೆ, ನಾವು “ಗುಪ್ತ ಸಂಸ್ಥೆಗಳು” ಎಂದು ಕರೆಯಬಹುದಾದ ಹಲವಾರು ಸಂಸ್ಥೆಗಳನ್ನೂ ಪತ್ತೆಹಚ್ಚಿದ್ದೇವೆ. ಸಾಮಾನ್ಯ ಜನರು ಸಂಘದ ಬಗ್ಗೆ ಯೋಚಿಸಿದಾಗ ತಕ್ಷಣ ನೆನಪಾಗುವುದು ಇಂತಹ ಸಂಸ್ಥೆಗಳೇ. ಏಕೆಂದರೆ, ಸಂಘದೊಂದಿಗೆ ತಳುಕುಹಾಕಿಕೊಂಡಿರುವ ಭೀಕರ ಹಿಂಸಾಚಾರದ ಕೃತ್ಯಗಳಲ್ಲಿ ಈ ಸಂಸ್ಥೆಗಳ ಪಾತ್ರ ಅಥವಾ ಕೈವಾಡವೇ ಹೆಚ್ಚಾಗಿರುತ್ತದೆ. ಈ ಗುಪ್ತ ಸಂಸ್ಥೆಗಳು ಕೇವಲ ಸಂಘದೊಂದಿಗಿನ ತಮ್ಮ ನಂಟನ್ನು ಮಾತ್ರ ಮುಚ್ಚಿಡುವುದಿಲ್ಲ; ಬದಲಾಗಿ ತಮ್ಮ ಅಸ್ತಿತ್ವವನ್ನೇ ಅಥವಾ ಕನಿಷ್ಠಪಕ್ಷ ತಮ್ಮ ಚಟುವಟಿಕೆಗಳನ್ನಾದರೂ ಗೌಪ್ಯವಾಗಿ ಇಡುತ್ತವೆ. ವಿಶಾಲವಾದ ಸಂಘ ಪರಿವಾರದ ವರ್ಚಸ್ಸಿಗೆ ಧಕ್ಕೆ ತರುವಂತಹ ಕಾನೂನುಬಾಹಿರ ಅಥವಾ ಹಾನಿಕಾರಕ ಚಟುವಟಿಕೆಗಳಲ್ಲಿ ಇವು ತೊಡಗಿಸಿಕೊಂಡಿರುವುದೇ, ಈ ಮಟ್ಟದ ಗೌಪ್ಯತೆಯನ್ನು ಕಾಯ್ದುಕೊಳ್ಳಲು ಪ್ರಮುಖ ಕಾರಣವಾಗಿದೆ.

ಅನುವಾದ : ಚೇತನಾ ತೀರ್ಥಹಳ್ಳಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...