ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಎಂಬ ‘ಅಭಿವೃದ್ಧಿ ಮಾಫಿಯಾ’

Date:

ಕಾಡಿನ ಮಧ್ಯದಲ್ಲಿ ದೊಡ್ಡ ಮಟ್ಟದ ಸುರಂಗ ಕೊರೆಯುವುದು ಸಾವಿರಾರು ಮರಗಳ ಅವನತಿಗೆ ಕಾರಣವಾಗುತ್ತದೆ. ಸುರಂಗ ಕೊರೆದು ಪೈಪ್ ಗಳನ್ನು ಅಳವಡಿಸಿದ ನಂತರ ಮತ್ತೆ ಮಣ್ಣು ಮುಚ್ಚಿ ಕಾಡನ್ನು ಯಾಥಾಸ್ಥಿತಿಗೆ ತರುತ್ತೇವೆ ಎಂದು ಸಚಿವರು ಸದನದಲ್ಲಿ ಹೇಳಿದ್ದಾರೆ. ಕೇವಲ 110 ರಿಂದ 120 ಎಕರೆ ಅರಣ್ಯ ಪ್ರದೇಶ ಬೇಕಾಗಬಹುದು ಎಂದು ಹೇಳಿದ್ದಾರೆ. ಆದರೆ ಇದು ವಾಸ್ತವವಾಗಿ ಎಷ್ಟು ಸರಿ ಎಂಬುದು ಯೋಚಿಸಬೇಕಿದೆ.

‘ಪಶ್ಚಿಮಘಟ್ಟ ಉಳಿಸಿ’ ಎಂಬ ಕೂಗಿ 1980ರ ದಶಕದಿಂದಲೂ ಇದೆ. ಪಶ್ಚಿಮ ಘಟ್ಟದ ಉಳಿವಿಗಾಗಿ ಶಿವರಾಮ ಕಾರಂತ, ಕುಸುಮಾ ಸೊರಬ, ನಾ ಡಿಸೋಜ ತರದ ಅನೇಕ ದಿಗ್ಗಜರು ಹೋರಾಟ ನಡೆಸಿದ್ದರು. ಗಣಿಗಾರಿಕೆ, ನಗರೀಕರಣದ ಹೆಸರಿನಲ್ಲಿ ಕಾಡನ್ನು ಕಡಿಯುತ್ತಿರುವುದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಪಶ್ಚಿಮಘಟ್ಟದಲ್ಲಿನ ಅರಣ್ಯವನ್ನು ರೆಸಾರ್ಟ್‌ಗಳಂತಹ ಕೆಲಸಕ್ಕೆ ಬಳಸಿಕೊಳ್ಳುವ ವಿರುದ್ಧ ದೊಡ್ಡ ಮಟ್ಟದ ಚಳವಳಿಗಳು, ಹೋರಾಟಗಳು ನಡೆದಿವೆ. ಈಗ ಅದೇ ಪರಿಸ್ಥಿತಿ ಪಶ್ಚಿಮಘಟ್ಟಕ್ಕೆ ಮತ್ತೆ ಒದಗಿ ಬಂದಿದೆ. ಪುರಾತನವಾದ ಪಶ್ಚಿಮಘಟ್ಟವನ್ನು ಅಭಿವೃದ್ಧಿ ಮಾಫಿಯಾ ನಾಶ ಮಾಡಿಯೇ ತೀರಲು ಟೊಂಕ ಕಟ್ಟಿ ನಿಂತಿದೆ. ಕಾಡಿನ ಒಡಲನ್ನೆ ಬಗೆಯುತ್ತಿರುವವರ ವಿರುದ್ಧ ಹೋರಾಟ ರೂಪಿಸುವ ಕಾಲ ಬಂದಿದೆ.

ಅದೊಂದು ದಟ್ಟವಾದ ಕಾಡು. ಅತಿ ಅಪರೂಪದ ಅಳಿವಿನಂಚಿನಲ್ಲಿರುವ ಸಿಂಗಳೀಕಗಳಿರುವ ಅಭಯಾರಣ್ಯ. ಮರಗಳನ್ನು ಕಡಿಯಬಾರದು ಎಂದು ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಅರಣ್ಯ ಇಲಾಖೆ ಹಾಕಿದೆ. ಈಗ ಅದೇ ಕಾಡಿನಲ್ಲಿ 16,000 ಕ್ಕೂ ಹೆಚ್ಚು ಮರಗಳನ್ನು ಕಡಿಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಳಕಳಲೆ ಜಲಾಶಯ ಮತ್ತು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಜಲಾಶಯದ ನಡುವಿನ ಅರಣ್ಯ ಮತ್ತು ಭೂಗರ್ಭದ ಮಾರ್ಗದಲ್ಲಿ “ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ”ಯನ್ನು ಜಾರಿಗೊಳಿಸಲು ಕರ್ನಾಟಕ ವಿದ್ಯುತ್ ನಿಗಮವು ಮುಂದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಏನಿದು ಪಂಪ್ಡ್ ಸ್ಟೋರೇಜ್ ಯೋಜನೆ?

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಶ್ವದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನ ಎಂದೇ ಪರಿಗಣಿಸಲಾಗಿದ್ದು, ಎರಡು ಜಲಾಶಯಗಳ ನಡುವೆ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ. ಹೆಚ್ಚುವರಿ ವಿದ್ಯುತ್ ಇದ್ದಾಗ ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತದೆ.

ಹೊಸ ಜಲಾಶಯ ನಿರ್ಮಾಣ ಮಾಡದೆ ಹೆಚ್ಚು ವಿದ್ಯುತ್‌ ಉತ್ಪಾದಿಸಲು ಅನುಕೂಲ ಆಗುವುದರಿಂದ ಇದು ಗ್ರಿಡ್‌ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌) ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಯನ್ನು ತಳಕಳಲೆ ಮತ್ತು ಗೇರುಸೊಪ್ಪ ನಡುವೆ ಮಾಡುತ್ತಿದ್ದು, 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ. ಹೈದರಾಬಾದ್‌ ಮೂಲದ ಮೇಘಾ ಎಂಜಿನಿಯರಿಂಗ್‌ ಮತ್ತು ಇನ್ಫಾಸ್ಟ್ರಕ್ಚರ್ಸ್‌ ಸಂಸ್ಥೆಗೆ ಕಳೆದ ಫೆಬ್ರವರಿಯಲ್ಲಿ 8005 ಕೋಟಿ ರೂ.ಗಳಿಗೆ ಯೋಜನೆಯ ಟೆಂಡರ್‌ ನೀಡಲಾಗಿದೆ. ಯೋಜನೆಯ ಒಟ್ಟು ಮೊತ್ತ 10,500 ಕೋಟಿ ರೂ. ಎನ್ನಲಾಗುತ್ತಿದೆ.

9911 11 2 2025 20 26 48 2 PROJEC

54.155 ಹೆಕ್ಟೇರ್‌ ಅರಣ್ಯ ಪ್ರದೇಶ, 24.31 ಹೆಕ್ಟೆರ್‌ ಖಾಸಗಿ ಭೂಮಿ ಬಳಕೆಯಾಗುತ್ತಿದೆ. ಯೋಜನೆಯ ಬಹುತೇಕ ರಚನೆಗಳು ಸುರಂಗದೊಳಗೆ ಇರುವುದರಿಂದ ಭೂಮಿಯ ಮೇಲ್ಮೈನಲ್ಲಿ ಕನಿಷ್ಠ ಪರಿಣಾಮ ಉಂಟಾಗುತ್ತದೆ. ಹೆಚ್ಚಿನ ವಿದ್ಯುತ್ತನ್ನು ಯಾಂತ್ರಿಕವಾಗಿ ಸಂಗ್ರಹಿಸಿ ಅಗತ್ಯಕ್ಕೆ ಅನುಗುಣವಾಗಿ ಉಪಯೋಗಿಸಲಾಗುತ್ತದೆ. ಹಾಲಿ ಇರುವ ತಳಕಳಲೆ ಮತ್ತು ಗೇರುಸೊಪ್ಪ ಜಲಾಶಯದ ನಡುವೆ ಸುರಂಗ ಮೂಲಕ ನೀರು ಹರಿಸಿ ವಿದ್ಯುತ್‌ ಶೇಖರಣೆ, ಮರು ಉಪಯೋಗದ ವಿನ್ಯಾಸ ಮಾಡಲಾಗುವುದು. ಸುರಂಗದ ಮಧ್ಯಭಾಗದ ಭೂಗರ್ಭದಲ್ಲೇ ವಿದ್ಯುತ್‌ ಘಟಕ ಸ್ಥಾಪಿಸಲಾಗುತ್ತದೆ.

ಸದನದಲ್ಲಿ ಚರ್ಚೆ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ನ ಚರ್ಚೆ ಬಿರುಸಾಗಿ ನಡೆದಿದೆ. ಬಿಜೆಪಿಯ ದಿನಕರ ಶೆಟ್ಟಿ ‘ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಯೋಜನೆ ಕೈಬಿಡಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಜನರನ್ನು ಸಾಯಿಸಿ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆ ಅನುಷ್ಠಾನಗೊಳಿಸುವ ಅಗತ್ಯ ನನಗಿಲ್ಲ. ಇದು ನನ್ನ ಮನೆಯ ಯೋಜನೆಯೂ ಅಲ್ಲ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆಗಾಗಿ ಈ ಯೋಜನೆ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಸದನಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ ಮಾತಿನ ವಾಗ್ವಾದವೇ ನಡೆದಿದೆ. ಬಿಜೆಪಿ ಶಾಸಕ ದಿನಕರ ಶೆಟ್ಟಿಯ ಮಾತಿಗೆ, ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ “ಶರಾವತಿ ಯೋಜನೆ ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿದೆ. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗಿದೆ. ಕೆಲವರು ಉದ್ದೇಶ ಪೂರ್ವಕವಾಗಿ ವಿರೋಧಿಸುತ್ತಿದ್ದಾರೆ” ಎಂದು ಹೇಳಿದರು.

ಯೋಜನೆಗೆ ಯಾಕಿಷ್ಟು ವಿರೋಧ ?

ಈಗಾಗಲೇ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಅನೇಕ ಹೋರಾಟಗಳು ಸ್ವಯಂ ಪ್ರೇರಿತವಾಗಿ ನಡೆದಿವೆ. ಶಿವಮೊಗ್ಗ, ಸಾಗರ, ಹೊನ್ನಾವರ, ಗೇರುಸೊಪ್ಪೆ ಭಾಗದಲ್ಲಿ ಮಠಾಧೀಶರ ನೇತೃತ್ವದಲ್ಲಿ ಅನೇಕ ಹೋರಾಟಗಳು ನಡೆದಿವೆ. ಪಕ್ಷಾತೀತವಾಗಿ ಈ ಹೋರಾಟಕ್ಕೆ ಸಾಮಾನ್ಯ ಜನರಿಂದ ಹಿಡಿದು, ಅನೇಕ ಪರಿಸರವಾದಿಗಳು ಭಾಗವಹಿಸಿದ್ದಾರೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಪರಿಸರದ ಮೇಲೆ ಬೀರುವ ಪರಿಣಾಮ ವಿವರಿಸಲು ಸಾಧ್ಯವಾಗದಷ್ಟು ಅಪಾಯವಾಗಿದೆ. ಆದರೆ ಸರ್ಕಾರವು ಪರಿಸರದ ಮೇಲಾಗುವ ಪರಿಣಾಮವನ್ನು ಜನರಿಂದ ಮರೆಮಾಚುತ್ತಿದೆ. ಈ ಯೋಜನೆಗಾಗಿ ನಿರ್ಮಿಸುವ ರಸ್ತೆಗಳು, ಕಾರ್ಮಿಕ ವಸತಿಗೃಹಗಳು, ಗುತ್ತಿಗೆದಾರರ ಕಚೇರಿ, ಅಣೆಕಟ್ಟು, ಸುರಂಗ ಮಾರ್ಗ, ವಿದ್ಯುದಾಗಾರ, ವಿದ್ಯುತ್ ಪರಿವರ್ತಕ ಸ್ಥಾಪಿಸುವ ಪ್ರದೇಶ, ತ್ಯಾಜ್ಯ ವಿಲೇವಾರಿ ಪ್ರದೇಶ ಹಾಗೂ ಮರಳು-ಜಲ್ಲಿ ಗಣಿಗಾರಿಕೆ ಇವೆಲ್ಲವೂ ಸಹ ಯೋಜನೆಗೆ ಬೇಕಿರುವವು. ಇದರಿಂದ ಪರಿಸರದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ.

ಇದರ ಜೊತೆಗೆ 14 ಕಿ.ಮೀ. ಉದ್ದದ ಹಾಗೂ 30 ಅಡಿ ವ್ಯಾಸದ ಸುರಂಗ ಕೊರೆಯಲಾಗುತ್ತದೆ. ಇದಕ್ಕೆ 18,000 ಟನ್ ಅಪಾಯಕಾರಿ ಕೈಗಾರಿಕಾ ಸ್ಫೋಟಕಗಳನ್ನು ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಇಷ್ಟು ಪ್ರಮಾಣದ ಸ್ಫೋಟಕಗಳನ್ನು ಬಳಸುವುದರಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚೆಯೆ ನಡೆದಿಲ್ಲ. ಇದು ನೇರವಾಗಿ ‘ಅಪಾಯಕಾರಿ ಮತ್ತು ಇತರೆ ತ್ಯಾಜ್ಯ’ಗಳ ನಿಯಮ 2016ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇಷ್ಟು ಪ್ರಮಾಣದ ಅಪಾಯಕಾರಿಗಳಿಂದ ಭೂಕುಸಿತ ಸಂಭವಿಸಬಹುದಾಗಿದೆ. ಇದರಿಂದ 12 ದಶಲಕ್ಷ ಟನ್ ಗಳಷ್ಟು ತ್ಯಾಜ್ಯ ಸೃಷ್ಟಿಯಾಗಲಿದೆ. ತ್ಯಾಜ್ಯ ನಿರ್ವಹಣೆ ಮಾಡುವ ವಿಧಾನ, ವಿಲೇವಾರಿ ವಿಧಾನ ಹೇಗೆ ಎಂಬುದೂ ಸಹ ಜನರಲ್ಲಿ ಗೊಂದಲ ಉಂಟುಮಾಡಿದೆ.

9911 16 9 2025 18 48 30 2 MEETIN 2
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಸಿದ ಸಭೆ

ಯೋಜನೆ ಅಗತ್ಯವಾದ ಮರಳನ್ನು ಶರಾವತಿ ನದಿಯಿಂದ ಎತ್ತಲಾಗುತ್ತದೆ. ಅವರ ಉದ್ದೇಶಿತ ಮರಳು ತೆಗೆಯುವ ಪ್ರದೇಶವು ಸಿಂಗಳೀಕ ಅಭಯಾರಣ್ಯದ ಪ್ರದೇಶದಲ್ಲಿ ಬರುತ್ತದೆ. ಪ್ರಪಂಚದಲ್ಲಿರುವ 2500 ಸಿಂಗಳೀಕಗಳಲ್ಲಿ 1/3 ರಷ್ಟು ಅಂದರೆ ಸುಮಾರು 730 ಸಿಂಗಳೀಕಳು ಇದೇ ಅರಣ್ಯದಲ್ಲಿ ಕಂಡುಬರುತ್ತವೆ. ಈ ಪ್ರದೇಶವನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಪರಿಸರ ಸೂಕ್ಷ್ಮ ಪ್ರದೇಶದ ನಿಯಮ 2023ರಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೂ ಸರ್ಕಾರ ಇದೆಲ್ಲವನ್ನು ಧಿಕ್ಕರಿಸಿ ಮಾಡುವಂತಿದೆ.

ಇನ್ನು ಕಾಡಿನ ಮಧ್ಯದಲ್ಲಿ ದೊಡ್ಡ ಮಟ್ಟದ ಸುರಂಗ ಕೊರೆಯುವುದು ಸಾವಿರಾರು ಮರಗಳ ಅವನತಿಗೆ ಕಾರಣವಾಗುತ್ತದೆ. ಸುರಂಗ ಕೊರೆದು ಪೈಪ್ ಗಳನ್ನು ಅಳವಡಿಸಿದ ನಂತರ ಮತ್ತೆ ಮಣ್ಣು ಮುಚ್ಚಿ ಕಾಡನ್ನು ಯಾಥಾಸ್ಥಿತಿಗೆ ತರುತ್ತೇವೆ ಎಂದು ಸಚಿವರು ಸದನದಲ್ಲಿ ಹೇಳಿದ್ದಾರೆ. ಕೇವಲ 110 ರಿಂದ 120 ಎಕರೆ ಅರಣ್ಯ ಪ್ರದೇಶ ಬೇಕಾಗಬಹುದು ಎಂದು ಹೇಳಿದ್ದಾರೆ. ಆದರೆ ಇದು ವಾಸ್ತವವಾಗಿ ಎಷ್ಟು ಸರಿ ಎಂಬುದು ಯೋಚಿಸಬೇಕಿದೆ.

2021 ರಲ್ಲಿ ಈ ಯೋಜನೆ ಜಾರಿಗಾಗಿ ಅಂದಿನ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿತ್ತು. ಅದರ ಆಧಾರದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈಗಾಗಲೇ 13 ಅನುಮೋದನೆಗಳು ದೊರೆತಿದ್ದು, ಇನ್ನೂ ಹಲವು ಅನುಮೋದನೆಗಳು ದೊರೆಯಬೇಕಿದೆ ಎಂದು ಸಚಿವರ ಮಾತು ತೇಪೆ ಸಾರಿಸುವ ಕೆಲಸದಂತಿದೆ. ಬಿಜೆಪಿ ಮಾಡಿದರೇನು, ಕಾಂಗ್ರೆಸ್ ಮಾಡಿದರೇನು, ನಾಶವಾಗುತ್ತಿರುವುದು ಕಾಡು, ಅಲ್ಲಿನ ಸಂಸ್ಕೃತಿ, ಪ್ರಾಣಿ ಸಂಕುಲ, ಜೀವ ಸಂಕುಲ. ಕುವೆಂಪು ಅವರ ಮಾತನ್ನು ನೆನಪು ಮಾಡಿಕೊಳ್ಳಬಹುದು. “ಕತ್ತಿ ಪರದೇಶಿಯಾದರೆ ಮಾತ್ರ ನೋವೆ, ನಮ್ಮವರೆ ಹದಹಾಕಿ ತಿವಿದರದು ಹೂವೆ?”. ಪರಿಸರ ಕಗ್ಗೊಲೆ ಯಾರೇ ಮಾಡಿದರೂ ತಡೆಯಬೇಕಾಗಿರುವುದು ನಾಗರಿಕ ಸಮಾಜದ ಕರ್ತವ್ಯ.

ಈ ಯೋಜನೆಯಿಂದ ಆಗುವ ದೊಡ್ಡ ಮಟ್ಟದ ಪರಿಣಾಮವೆಂದರೆ, ಶರಾವತಿ ನದಿಯನ್ನು ನಂಬಿಕೊಂಡು ಬದುಕು ನಡೆಸುತ್ತಿರುವ ಅನೇಕ ಜನರು, ಹಾಗು ನದಿಯಲ್ಲಿನ ಜಲಚರಗಳು ಅಪಾಯಕ್ಕೆ ಸಿಲುಕಲಿವೆ. ಈ ಯೋಜನೆಯಿಂದ ನದಿ ಹರಿವಿನ ಪಥ ಬದಲಾಗಲಿದೆ. ಕೈಗಾರಿಕಾ ಸ್ಪೋಟಕಗಳನ್ನು ಬಳಸುವುದರಿಂದ ಇಡೀ ನದಿ ವಿಷದ ಮಡುವಾಗಲಿದೆ. ಒಟ್ಟಾರೆಯಾಗಿ ಈ ಚಟುವಟಿಕೆಗಳು ನದಿಯೊಂದರ ಸಾವಿನ ಸಂಕೇತವಾಗಿದೆ.

123474947

“ಈ ಯೋಜನೆಯ ಬದಲಿಗೆ ಬೇರೆ ಬೇರೆ ಆಯ್ಕೆಗಳಿವೆ. ಗ್ರೀನ್ ಎನರ್ಜಿ, ರಿನಿವಬಲ್ ಎನರ್ಜಿ ಇವೆಲ್ಲವೂ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಇವೆಲ್ಲ ಇರಬೇಕಾದರೆ, ಸರ್ಕಾರದವರು ಯಾಕೆ ಇಷ್ಟೊಂದು ಒತ್ತಡದಿಂದ ಈ ಯೋಜನೆಯನ್ನು ಮಾಡ್ತಿದ್ದಾರೆ ಗೊತ್ತಿಲ್ಲ. ದುಡ್ಡಿಗೋಸ್ಕರ ಈ ಯೋಜನೆಯನ್ನು ಮಾಡ್ತಿದ್ರೆ, ಈ ಯೋಜನೆಯ ಅಷ್ಟು ದುಡ್ಡನ್ನು ನೀವೇ(ಸರ್ಕಾರ) ಇಟ್ಟುಕೊಳ್ಳಿ. ಇಲ್ಲ ಅಂದ್ರೆ, ನಾವು ಭಿಕ್ಷೆ ಬೇಡಿ ಆದರೂ ನಿಮಗೆ ಹಣ ಕೊಡುತ್ತೇವೆ. ಶರಾವತಿ ಪಂಪ್ಡ್ ಸ್ಟೋರೇಜ್ ಅವಶ್ಯಕತೆ ಇಲ್ಲ. ನಮ್ಮ ಪಶ್ಚಿಮಘಟ್ಟವನ್ನು ನೀವು ಮುಟ್ಟಲೇಬೇಡಿ. ಅದೇ ರೀತಿ, ಕೊಡಚಾದ್ರಿಯಲ್ಲಿ ಮಾಡುತ್ತಿರುವ ರೋಪ್ ವೇ ಮತ್ತು ಆಗುಂಬೆಯಲ್ಲಿ ಮಾಡುತ್ತಿರುವ ಸುರಂಗವನ್ನು ಮಾಡಿ ಕಾಡನ್ನು ನಾಶ ಮಾಡುವ ಯಾವ ಯೋಜನೆಯೂ ಮಾಡಬೇಡಿ” ಎಂದು ಪರಿಸರವಾದಿ ಜೋಸೆಫ್ ಹೂವರ್ ಅಭಿಪ್ರಾಯಪಟ್ಟರು.

ನಮ್ಮ ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿದ ಪರಿಸರವಾದಿ ಮತ್ತು ಜನಸಂಗ್ರಾಮ ಪರಿಷತ್ ನ ಮುಖ್ಯಸ್ಥರಾದ ಅಖಿಲೇಶ್ ಚಿಪ್ಪಳಿ “ಈ ಯೋಜನೆಯ ಅವಶ್ಯಕತೆಯೇ ಇಲ್ಲ. ಇದರ ಬದಲಾಗಿ ಪಶ್ಚಿಮಘಟ್ಟದ ಒಂದು ಗಿಡವನ್ನು, ಒಂದು ಎಲೆಯನ್ನು ನಾಶ ಮಾಡದೆ, ಇದಕ್ಕಿಂತ ಉತ್ತಮವಾದ ಮತ್ತು ಪರ್ಯಾಯ ಮಾರ್ಗಗಳು ಇವೆ. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಮಾಡ್ತಿದ್ದಾರೆ. ಹಣಕ್ಕಾಗಿ ಈ ಯೋಜನೆ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಸರ್ಕಾರದವರು ಬಂದಿದ್ದಾರೆ. ಲಕ್ಷಾಂತರ ವರ್ಷಗಳಿಂದ ಬೆಳೆದ ಮರಗಳಿವೆ. ಇದರಿಂದ ಟಿಂಬರ್ ಮಾಫಿಯಾ ಮಾಡುವ ಉದ್ದೇಶ ಹೊಂದಿದ್ದಾರೆ. ಈಗಾಗಲೇ ಎಲ್ಲರೂ ದುಡ್ಡು ತಿಂದಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.

ಶರಾವತಿ ನದಿ ಹಾಗೂ ಅದನ್ನು ನಂಬಿಕೊಂಡವರ ಮೇಲೆ ಆಗುವ ಪರಿಣಾಮಗಳೇನು?

ಶರಾವತಿ ನದಿಗೆ ಲಿಂಗನಮಕ್ಕಿ ಆಣೆಕಟ್ಟು ಕಟ್ಟಿದಾಗಲೇ, ಅದರಲ್ಲಿನ ಹರಿವು ಕಡಿಮೆಯಾಗಿತ್ತು. ಈಗ ನದಿಯಲ್ಲಿ ನೀರಿನ ಹರಿವು ಕಡಿಮೆಯಾದಾಗ, ಸಮುದ್ರದಲ್ಲಿ ಉಂಟಾದ ಭರತದಿಂದಾಗಿ ಉಪ್ಪು ನೀರು ಶರಾವತಿ ನದಿಯಲ್ಲಿ ಹಿಮ್ಮುಖವಾಗಿ ಸುಮಾರು 20 ಕಿ.ಮೀ. ದೂರದವರೆಗೂ ಬರುತ್ತಿದೆ. ಇದರಿಂದಾಗಿ, ಗೇರುಸೊಪ್ಪ, ಹೊನ್ನಾವರ ಭಾಗದ ನದಿ ಪಾತ್ರದ ಜನರಿಗೆ ಸಿಹಿನೀರು ಲಭ್ಯವಾಗುತ್ತಿಲ್ಲ. ಕೆಲವೇ ಗುಂಟೆಗಳಲ್ಲಿ ತರಕಾರಿ, ಅಡಕೆ, ವೀಳ್ಯೆದೆಲೆ ಇತ್ಯಾದಿಗಳನ್ನು ನಂಬಿಕೊಂಡು ಬದುಕು ಕಟ್ಟಿಕೊಂಡ ಜನರ ಬದುಕು ನಾಶವಾಗುತ್ತದೆ. ಶರಾವತಿ ನದಿ ಅಳಿವೆಯಲ್ಲಿ (Estuary- ಸಿಹಿನೀರು ಮತ್ತು ಉಪ್ಪುನೀರು ಸೇರುವ ಭಾಗ) ಸಂತಾನೋತ್ಪತ್ತಿ ಮಾಡುವ ಜಲಚರಗಳ ಬದುಕು ನಾಶವಾಗಲಿದೆ. ಇದರ ಜೊತೆಗೆ ಪಾರಂಪಾರಿಕ ಮೀನುಗಾರರ ಬದುಕು ಮುಗಿಯಲಿದೆ.

ಸರ್ಕಾರಕ್ಕೆ ಪರ್ಯಾಯ ಮಾರ್ಗಗಳಿಲ್ಲವೇ?

ಖಂಡಿತಾ ಇದೆ. ವಿಕೇಂದ್ರಿಕೃತ ಸೌರಶಕ್ತಿಯನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ ಸಾಗರ ನಗರದ ಮನೆಗಳ ಮೇಲೆ ಸರ್ಕಾರವೇ 8000 ಕೋಟಿ ರೂ.ನಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಂಡರೆ, ಯಾವುದೇ ಕಾಡು ಹಾಗೂ ವನ್ಯಜೀವಿ ನೆಲೆಗಳನ್ನು ನಾಶ ಮಾಡದೇ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ಮಾಡಬಹುದು. ಬೇಡಿಕೆ ಕಡಿಮೆ ಇರುವ ಹೊತ್ತಿನಲ್ಲಿ ಸೌರ ವಿದ್ಯುತ್ ಉತ್ಪಾದನೆಯನ್ನು ಬ್ಯಾಟರಿ ಎನರ್ಜಿ ಸೇವಿಂಗ್ ಸಿಸ್ಟಮ್ (BESS) ಮೂಲಕ ಶೇಖರಣೆ ಮಾಡಿಟ್ಟುಕೊಂಡು, ಹೆಚ್ಚು ಬೇಡಿಕೆ ಇರುವ (ಬೆಳಗ್ಗೆ 6-8 ಮತ್ತು ಸಂಜೆ 6-9) ವಿದ್ಯುತ್ ಪೂರೈಕೆ ಮಾಡಬಹುದು. BESS ತಂತ್ರಜ್ಞಾನವನ್ನು ಬೆಂಗಳೂರಿನಲ್ಲೇ ಅಳವಡಿಸಿಕೊಳ್ಳಬಹುದು. ಈ ತಂತ್ರಜ್ಞಾನವನ್ನು ಪಕ್ಕದ ತಮಿಳುನಾಡಿನಲ್ಲಿ ಅಳವಡಿಸಲಾಗುತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ಈ ಮಾದರಿಯನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ಸಧ್ಯದಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ಬ್ಯಾಟರಿ ವಿದ್ಯುತ್ ಸಂಗ್ರಹಣಾ ವ್ಯವಸ್ಥೆ (ಬಿಇಎಸ್ಎಸ್) ಯ ವೆಚ್ಚ ಒಂದು ಸಾವಿರ ಮೆಗಾವ್ಯಾಟ್ ಎರಡು ಗಂಟೆ ಹಿಡಿದಿಡುವ ಸಾಮರ್ಥ್ಯಕ್ಕೆ 5000 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ದ್ವೇಷಭಾಷಣ ನಿಷೇಧ ಕಾನೂನು: ಟೀಕೆ-ವಿಮರ್ಶೆಗಳ ಬಾಯಿ ಬಡಿಯುವ ದುಷ್ಟ ಅಸ್ತ್ರವಾಗದಿರಲಿ

ಈ ರೀತಿಯ ಯೋಜನೆಗಳಿಗೆ COW (contractors oriented work) ಯೋಜನೆಗಳೆಂದು ಕರೆಯಲಾಗುತ್ತದೆ. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳನ್ನು ಗುತ್ತಿಗೆ ಮಾಫಿಯಾಗಳೇ ಮುನ್ನೆಲೆಗೆ ತರುತ್ತವೆ ಎಂದು ಪರಿಸರವಾದಿಗಳು ಅಭಿಪ್ರಾಯಪಡುತ್ತಾರೆ. ನಾಗರಿಕ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲದ, ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಹೊಡೆಯುವ, ಪರಿಸರ ಮತ್ತು ವನ್ಯಜೀವಿ ನೆಲೆಗಳನ್ನು ನಾಶ ಮಾಡುವ, ಶರಾವತಿ ನದಿಯನ್ನು ಕೊಲ್ಲುವ, ಹೊನ್ನಾವರದ ಜನರನ್ನು ಸಂಪೂರ್ಣ ನಾಶ ಮಾಡುವ ಈ ಯೋಜನೆಯನ್ನು ನಿಲ್ಲಿಸಲೇಬೇಕಾಗಿದೆ ಎಂದು ಅನೇಕ ಪರಿಸರವಾದಿಗಳು ಮತ್ತು ಶರಾವತಿ ನದಿಯ ಸುತ್ತಮುತ್ತ ಗ್ರಾಮದ ಜನರು ಹೇಳಿದ್ದಾರೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...