SIR ಡೆಡ್‌ಲೈನ್‌ಗೆ ಶಿಕ್ಷಕರ ಜೀವ ಬಲಿ! ಚುನಾವಣಾ ಆಯೋಗದ ವೈಫಲ್ಯತೆಗೆ ಹಿಡಿದ ಕನ್ನಡಿ

Date:

ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆಯ ಒತ್ತಡವನ್ನು ತಾಳಲಾರದೇ ಬೂತ್ ಮಟ್ಟದ ಅಧಿಕಾರಿಗಳು (BLO), ವಿಶೇಷವಾಗಿ ಶಿಕ್ಷಕರು, ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಕೇರಳ, ರಾಜಸ್ಥಾನ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದೊಂದು ತಿಂಗಳಲ್ಲಿ ಇಂತಹ ಹಲವು ಘಟನೆಗಳು ವರದಿಯಾಗಿವೆ.

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗ (ECI) ಶುರು ಮಾಡಿರುವ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಕಾರ್ಯಕ್ರಮವು ಇಂದು ದೇಶಾದ್ಯಂತ ಆಘಾತಕಾರಿ ಸುದ್ದಿಗಳನ್ನು ತಂದಿದೆ. ಈ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ, ಬಿಎಲ್‌ಒಗಳು ಎಂದರೆ ಬೂತ್ ಲೆವೆಲ್ ಆಫೀಸರ್ಸ್, ಮತದಾರರ ಪಟ್ಟಿಯನ್ನು ತಯಾರಿಸುವ ಮತ್ತು ನವೀಕರಿಸುವ ಕೆಲಸದಲ್ಲಿ ತೊಡಗಿರುವ ಚುನಾವಣಾ ಆಯೋಗದ ಪ್ರತಿನಿಧಿಗಳು. ಇವರಿಗೆ ತಮ್ಮ ಬೂತ್ ವ್ಯಾಪ್ತಿಯಲ್ಲಿರುವ ಮತದಾರರ ಮಾಹಿತಿಯನ್ನು ಸಂಗ್ರಹಿಸಿ, ಪರಿಷ್ಕರಿಸಿ, ಚುನಾವಣಾ ಆಯೋಗಕ್ಕೆ ಸಲ್ಲಿಸುವ ಜವಾಬ್ದಾರಿ ಇರುತ್ತದೆ. ಆದರೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಈ ಬಿಎಲ್‌ಒಗಳ ಮೇಲೆ ಅತಿಯಾದ ಕೆಲಸದ ಒತ್ತಡ ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ. 

ಡೆಡ್‌ಲೈನ್ ಒತ್ತಡವನ್ನು ತಾಳಲಾರದೇ ಬೂತ್ ಮಟ್ಟದ ಅಧಿಕಾರಿಗಳು (BLOಗಳು), ವಿಶೇಷವಾಗಿ ಶಿಕ್ಷಕರು, ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಕೇರಳ, ರಾಜಸ್ಥಾನ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದೊಂದು ತಿಂಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಮೃತರ ಕುಟುಂಬಗಳು ಮತ್ತು ರಾಜಕೀಯ ನಾಯಕರು ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
photo 6129655404074568629 y

ದೇಶಾದ್ಯಂತ ಸುಮಾರು 10-15 ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಪ್ರತಿ ಬೂತ್‌ಗೆ ಸಂಬಂಧಿಸಿದ ಮತದಾರರ ವಿವರಗಳನ್ನು ದೃಢೀಕರಿಸುವುದು, ಹೊಸ ಹೆಸರುಗಳನ್ನು ಸೇರಿಸುವುದು, ಸತ್ತವರ ಹೆಸರುಗಳನ್ನು ತೆಗೆಯುವುದು ಮತ್ತು ಡೇಟಾ ಎಂಟ್ರಿ ಮಾಡುವುದು ಸೇರಿದಂತೆ ವಿವಿಧ ಕೆಲಸಗಳು ಇದ್ದವು. ಆದರೆ, ಈ ಪ್ರಕ್ರಿಯೆ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದೆ. ಯಾಕಂದ್ರೆ ದೇಶಾದ್ಯಂತ 99% BLOಗಳು ಪ್ರಾಥಮಿಕ ಶಾಲಾ ಶಿಕ್ಷಕರೇ ಆಗಿದ್ದು, ಅವರು ತಮ್ಮ ನಿತ್ಯದ ಕೆಲಸದ ಜೊತೆಗೆ SIR ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಡೆಡ್‌ಲೈನ್‌ಗಳು, ನಿಧಾನಗತಿಯ ಆನ್‌ಲೈನ್ ಪೋರ್ಟಲ್‌ಗಳು ಮತ್ತು ರಾಜಕೀಯ ಒತ್ತಡ ಈ ಸಮಸ್ಯೆಯನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಇದರಿಂದ ಶಾಲಾ ಶಿಕ್ಷಣ ಖಂಡಿತವಾಗಿ ನಿರ್ವಹಣೆಯಾಗುತ್ತಿಲ್ಲ ಎಂದು ಶಿಕ್ಷಕ ಸಂಘಟನೆಗಳು ಈಗಾಗಲೇ ಆಕ್ಷೇಪಿಸಿವೆ.

ಕಳೆದೊಂದು ತಿಂಗಳಲ್ಲಿ SIR ಸಂಬಂಧಿತ ಕೆಲಸದ ಒತ್ತಡದಿಂದ ಕನಿಷ್ಠ 5-7 ಶಿಕ್ಷಕರು ಮತ್ತು BLOಗಳು ಮರಣಹೊಂದಿದ್ದಾರೆ.

ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆ: 40 ವರ್ಷದ ಶಿಕ್ಷಕ ಅರವಿಂದ್ ಮುಲ್ಜಿ ವಾಧೇರ್ ಅವರು ತಮ್ಮ ಸ್ವಂತ ಗ್ರಾಮ ದೇವ್ಲಿಯಲ್ಲಿ ಶುಕ್ರವಾರ (ನವೆಂಬರ್ 21) ಆತ್ಮಹತ್ಯೆ ಮಾಡಿಕೊಂಡರು. ಅವರು ಶಾಲಾ ಉಪನ್ಯಾಸದ ಜೊತೆಗೆ SIR ಕೆಲಸವನ್ನು ನಿರ್ವಹಿಸುತ್ತಿದ್ದರು. ತಮ್ಮ (suicide note “SIR ಕೆಲಸದ ಒತ್ತಡದಿಂದ ಎಷ್ಟೋ ದಿನಗಳಿಂದ ನಿದ್ರೆಯಿಲ್ಲ, ಮನಸು ಖಿನ್ನತೆಗೆ ಒಳಗಾಗಿದೆ, ಇನ್ನೂ ಮುಂದುವರಿಸಲು ಶಕ್ತಿ ಇಲ್ಲ” ಎಂದು ಬರೆದಿದ್ದಾರೆ.

ಅರವಿಂದ ಮುಲ್ಜಿ ವಾಧೇರ್

 ಇನ್ನೂ ಇದೇ ರಾಜ್ಯದ ಖೇಡಾ ಜಿಲ್ಲೆಯಲ್ಲಿ ಇನ್ನೊಬ್ಬ ಶಿಕ್ಷಕ ರಾಮೇಶ್‌ಭಾಯ್ ಪರ್ಮಾರ್ (50) ನವೆಂಬರ್ 19 ರ ರಾತ್ರಿ ಹೃದಯಾಘಾತದಿಂದ ಮರಣಹೊಂದಿದ್ದಾರೆ. ಕುಟುಂಬವು SIR ಒತ್ತಡವನ್ನೇ ಕಾರಣವೆಂದು ಆರೋಪಿಸಿದೆ.

ರಾಜಸ್ಥಾನದ ಕರೌಲಿ ಜಿಲ್ಲೆ: ನವೆಂಬರ್ 19 ರ ತಡರಾತ್ರಿ, ಉಪನ್ಯಾಸಕ ಸಂತ್ರಾಂ ಸೈನಿ (45) ಅವರಿಗೆ ತೀವ್ರ ಎದೆನೋವು ಕಂಡುಬಂದು, ನಂತರ ನಿಧನರಾದರು. ಅವರು SIRಗೆ ಮೇಲ್ವಿಚಾರಕರಾಗಿ ನೇಮಿಸಲ್ಪಟ್ಟಿದ್ದರು. ಕುಟುಂಬಸ್ಥರು “ಕೆಲಸದ ತೀವ್ರ ಒತ್ತಡದಿಂದ ಇದು ಸಂಭವಿಸಿದೆ” ಎಂದು ಆರೋಪಿಸಿದ್ದಾರೆ. ಇದೇ ರಾಜ್ಯದ ಸಾವೈ ಮಧೋಪುರ್‌ನಲ್ಲಿ ಹರಿರಾಂ ಬೈರ್ವಾ ಅವರು ತಹಶೀಲ್ದಾರ್‌ನ ಕರೆಯ ನಂತರ ಹೃದಯಾಘಾತದಿಂದ ಮರಣಹೊಂದಿದ್ದಾರೆ. ಕುಟುಂಬವು ಕಳೆದ 6 ದಿನಗಳ SIR ಒತ್ತಡವನ್ನು ಕಾರಣ ಅಂತ ಹೇಳಿದೆ.

ಜೈಪುರ: ನವೆಂಬರ್ 16 ರಂದು ಶಿಕ್ಷಕ ಮುಖೇಶ್‌ ಜಂಗಿದ್ (45) ಅವರು ರೈಲು ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡರು. ಡೆತ್‌ನೋಟ್‌ನಲ್ಲಿ “ಮೇಲಾಧಿಕಾರಿಯಿಂದ ಚುನಾವಣಾ ಕೆಲಸ ಪೂರ್ಣಗೊಳಿಸಲು ಒತ್ತಡ, ಸಸ್ಪೆನ್ಷನ್ ಬೆದರಿಕೆ” ಎಂದು ಬರೆದಿದ್ದಾರೆ. ಅವರ ಸಹೋದರ ಗಜಾನಂದ್ ಅವರು ಹೇಳೋ ಪ್ರಕಾರ  ಮುಖೇಶ್ ಒತ್ತಡಕ್ಕೆ ಒಳಗಾಗಿದ್ದರು. 

ಶಿಕ್ಷಕ ಮುಕೇಶ್ ಜಂಗಿದ್

ಕೇರಳದ ಕನ್ನೂರ್: ನವೆಂಬರ್ 20 ರಂದು ಪಯ್ಯನೂರ್‌ನ 18ನೇ ಬೂತ್ BLO ಆಗಿದ್ದ ಶಾಲಾ ಕಚೇರಿ ಸಹಾಯಕ ಅನೀಶ್ ಜಾರ್ಜ್ (38) ಅವರು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ಮತ್ತು ನೆರೆಯವರು SIR ಡೆಡ್‌ಲೈನ್ ಒತ್ತಡವನ್ನು ಕಾರಣವೇ ಅವರ ಆತ್ಮಹತ್ಯೆಗೆ ಕಾರಣ ಅಂತ ಹೇಳಿದ್ದಾರೆ. ಈ ಘಟನೆಗಳು ದೇಶಾದ್ಯಂತ ಆಘಾತವನ್ನು ಉಂಟುಮಾಡಿವೆ. ಶಿಕ್ಷಕ ಸಂಘಟನೆಗಳು “ಶಿಕ್ಷಣವನ್ನು ನಾಶಪಡಿಸುತ್ತಿದ್ದಾರೆ” ಎಂದು ಆರೋಪಿಸಿವೆ. ರಾಜಸ್ಥಾನದ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆದಿವೆ. 

ಅನೀಶ್ ಜಾರ್ಜ್

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರೋಲ್‌ಗಳ ವಿಶೇಷ ತೀವ್ರ ಪರಿಷ್ಕರಣೆ ವಿಚಾರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರಕ್ರಿಯೆಯನ್ನು ರಾಜ್ಯದ ಜನರ ಮೇಲೆ ಹೇರಲಾಗುತ್ತಿದೆ ಮತ್ತು ಅದನ್ನು ನಡೆಸಲಾಗುತ್ತಿರುವ ರೀತಿಯ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಮಾಲ್, ಜಲಪೈಗುರಿಯಲ್ಲಿ ಎಸ್‌ಐಆರ್‌ ಸಂಬಂಧಿತ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಸಾವು ಪ್ರಕರಣವೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ, ಮಮತಾ ಬ್ಯಾನರ್ಜಿ ಅವರು ತಮ್ಮ ಪತ್ರದಲ್ಲಿ, “ನಾನು ಪದೇ ಪದೇ ಈ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಬಗ್ಗೆ ಮತ್ತು ಅದನ್ನು ಜನರ ಮೇಲೆ ಹೇರುತ್ತಿರುವ ರೀತಿಯ ಬಗ್ಗೆ ನನ್ನ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ್ದೇನೆ. ಈ ಪ್ರಕ್ರಿಯೆಯನ್ನು ಅಧಿಕಾರಿಗಳು ಮತ್ತು ನಾಗರಿಕರ ಮೇಲೆ ಹೇರುತ್ತಿರುವ ರೀತಿ ಯೋಜಿತವಲ್ಲ, ಅಪಾಯಕಾರಿಯಾಗಿದೆ. ಮೂಲಭೂತ ಸಿದ್ಧತೆ, ಸೂಕ್ತ ಯೋಜನೆ ಅಥವಾ ಸ್ಪಷ್ಟ ಸಂವಹನದ ಕೊರತೆಯು ಮೊದಲ ದಿನದಿಂದಲೇ ಪ್ರಕ್ರಿಯೆಯನ್ನು ಕುಗ್ಗಿಸಿದೆ” ಎಂದು ತಿಳಿಸಿದ್ದಾರೆ.

photo 6129655404074568630 y

ಈ ಘಟನೆಗಳು ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳುತ್ತವೆ. ಶಿಕ್ಷಕರನ್ನು BLO ಆಗಿ ನೇಮಿಸುವುದು ಅನಿವಾರ್ಯವಾಗಿದ್ದರೂ, ಒತ್ತಡವನ್ನು ಕಡಿಮೆ ಮಾಡುವಂತೆ ಹೆಚ್ಚಿನ ಸಿಬ್ಬಂದಿ, ತರಬೇತಿ ಮತ್ತು ಸಮಯ ಮಿತಿಗಳನ್ನು ವಿಸ್ತರಿಸುವುದು ಅಗತ್ಯ. ಚುನಾವಣಾ ಆಯೋಗ ಎಸ್‌ಐಆರ್‌ ಪ್ರಕ್ರಿಯೆಯನ್ನ ಇಷ್ಟೊಂದು ಗಡಿಬಿಡಿಯಲ್ಲಿ ಮಾಡ್ತಾ ಇರೋದಕ್ಕೆ ಕಾರಣ ಏನು? ರಾಜಕೀಯ ಒತ್ತಡವೇ. ಎಸ್‌ಐಆರ್‌ ಒತ್ತಡದಿಂದ ಸಾಯುತ್ತಿರುವುದನ್ನ ನೋಡಿದ್ರೆ ಇದು ವ್ಯವಸ್ಥೆಯ ವಿಫಲತೆಗೆ ಹಿಡಿತ ಕೈಗನ್ನಡಿ ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...