‘ಸಿರೈ’ ಸಿನೆಮಾ|ನ್ಯಾಯವ್ಯವಸ್ಥೆಯ ಒಡಲ ಗಾಯಗಳ ತೋರುವ ಕೋರ್ಟ್ ರೂಮ್ ಸತ್ಯ!

Date:

ಕೋರ್ಟ್ ದೃಶ್ಯಗಳು ರೋಮಾಂಚನಕಾರಿ ಅಲ್ಲ, ಆದರೆ ತುಂಬಾನೇ ಭಾವನಾತ್ಮಕ. ಪ್ರತಿ ವಿಚಾರಣೆ ಒಂದು ತಿರುವು ಕೊಡುತ್ತದೆ. ಕೆಲವೊಮ್ಮೆ ಕೋಪ, ಕೆಲವೊಮ್ಮೆ ಕಣ್ಣೀರು, ಮತ್ತೊಮ್ಮೆ ಮೌನ. ಸಿರಾಯ್ ನಮ್ಮನ್ನು ಸುಮ್ಮನೆ ಬಿಡಲ್ಲ. ಈ ಸಿನಿಮಾ ಮುಗಿದ ಮೇಲೂ ಅದರ ಪ್ರಶ್ನೆಗಳು ನಮ್ಮೊಳಗೆ ಉಳಿದುಬಿಡುತ್ತವೆ. ತುಂಬಾನೇ ಕಾಡುತ್ತೆ.

ನೈಜ ಘಟನೆ ಆಧಾರಿತ ಸಿನಿಮಾಗಳಲ್ಲಿ ಒಂದು ವಿಶೇಷ ಶಕ್ತಿ ಇರುತ್ತದೆ. ಅವು ಮನರಂಜನೆಯಷ್ಟೇ ಅಲ್ಲ, ನಮ್ಮ ಅಂತರಾತ್ಮವನ್ನೇ ಪ್ರಶ್ನೆ ಮಾಡುವ ಶಕ್ತಿ ಹೊಂದಿರುತ್ತವೆ. ‘ಸಿರಾಯ್’ ಅಂತಹದೇ ಒಂದು ಸಿನಿಮಾ. ‘ಸಿರಾಯ್’ (Sirai) ಚಿತ್ರವನ್ನು ನೋಡಿ ಮುಗಿಸಿದ ನಂತರ, ಹಲವು ನಿಮಿಷಗಳ ಕಾಲ ಮೌನವಾಗಿ ಕುಳಿತುಬಿಟ್ಟಿದ್ದೆ. ಕಣ್ಣುಗಳಲ್ಲಿ ನೀರು ತುಂಬಿ, ಎದೆ ತುಂಬಾನೇ ಭಾರ ಅಂತ ಅನಿಸೋಕೆ ಶುರುವಾಗಿತ್ತು. ಇದು ಕೇವಲ ಒಂದು ಸಿನಿಮಾ ಅಲ್ಲ, ಇದು ನಮ್ಮ ಸಮಾಜದ ಕೆಲವು ಕಹಿ ಸತ್ಯಗಳನ್ನು, ಮನುಷ್ಯತ್ವದ ಆಳವನ್ನು ಮತ್ತು ನ್ಯಾಯ ವ್ಯವಸ್ಥೆಯ ಒಡಲ ಗಾಯಗಳನ್ನು ತೋರಿಸುವ ಒಂದು ಭಾವನಾತ್ಮಕ ಪ್ರಯಾಣ.

ಕೋರ್ಟ್ ರೂಂ ಡ್ರಾಮಾ ಅಂದರೆ ಕೇವಲ ವಾದ–ಪ್ರತಿವಾದಗಳು ಅನ್ನೋ ಭಾವನೆ ನಮ್ಮಲ್ಲಿ ಇರುತ್ತದೆ. ಆದರೆ ಸಿರಾಯ್ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತುಂಬಾ ಆಳಕ್ಕೆ ಹೋಗುತ್ತದೆ. ಇಲ್ಲಿ ಕಾನೂನು ಕೇವಲ ಪುಸ್ತಕದ ಸಾಲುಗಳಲ್ಲ ಅದು ಜೀವಗಳೊಂದಿಗೆ ಹೋರಾಡುವ ಒಂದು ಸಾಧನ. ಪ್ರತಿ ದೃಶ್ಯವೂ “ನ್ಯಾಯ ಅನ್ನೋದು ಕೇವಲ ತೀರ್ಪೇನಾ, ಅಥವಾ ನೋವಿಗೆ ಸಿಗುವ ಮಾನ್ಯತೆನಾ?” ಅನ್ನೋ ಪ್ರಶ್ನೆಯನ್ನ ಎತ್ತುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
8 13

ಸಿನಿಮಾದ ಹೃದಯವೇ ಅದರ ಕಥೆ. ನಿಜ ಘಟನೆ ಆಧಾರಿತ ಅನ್ನೋದರಿಂದಲೇ ಪ್ರತಿಯೊಂದು ಕ್ಷಣವೂ ಹೆಚ್ಚು ನೋವುಂಟು ಮಾಡುತ್ತದೆ. ಅನ್ಯಾಯದ ಮುಂದೆ ನಿಂತಿರುವ ಸಾಮಾನ್ಯ ಮನುಷ್ಯರ ಅಸಹಾಯಕತೆ, ಅವರ ಕಣ್ಣುಗಳಲ್ಲಿ ಕಾಣುವ ಭಯ, ಮತ್ತು ಅದೇ ಭಯದ ನಡುವೆ ಹುಟ್ಟುವ ಧೈರ್ಯ ಇದನ್ನೆಲ್ಲಾ ಸಿನಿಮಾ ತುಂಬಾ ಅದ್ಭುತವಾಗಿ ತೋರಿಸುತ್ತದೆ. ಇಲ್ಲಿ ದೊಡ್ಡ ಡೈಲಾಗ್‌ಗಳಿಗಿಂತ ಮೌನವೇ ಹೆಚ್ಚು ಮಾತನಾಡುತ್ತದೆ.

ನಟನೆಯ ವಿಷಯಕ್ಕೆ ಬಂದರೆ, ಪಾತ್ರಗಳು ಪಾತ್ರಗಳಂತೆ ಕಾಣಲ್ಲ ನಮ್ಮ ಸುತ್ತಮುತ್ತಲೇ ಇರುವ ಜನರಂತೆ ಕಾಣಿಸುತ್ತವೆ. ವಕೀಲನ ಹೋರಾಟ ಕೇವಲ ಕೇಸಿಗಲ್ಲ, ತನ್ನೊಳಗಿನ ನಂಬಿಕೆಗಾಗಿ. ಆರೋಪಿಗಳ ನೋವು ಕೇವಲ ಕಾನೂನು ಸಮಸ್ಯೆಯಲ್ಲ, ಬದುಕಿನ ಪ್ರಶ್ನೆಯಾಗಿ ಪರಿಣಮಿಸುತ್ತದೆ. ಈ ಎಲ್ಲ ಭಾವನೆಗಳು ಪ್ರೇಕ್ಷಕರ ಹೃದಯವನ್ನ ನೇರವಾಗಿ ತಲುಪುತ್ತವೆ.

7 17

ಕೋರ್ಟ್ ದೃಶ್ಯಗಳು ರೋಮಾಂಚನಕಾರಿ ಅಲ್ಲ, ಆದರೆ ತುಂಬಾನೇ ಭಾವನಾತ್ಮಕ. ಪ್ರತಿ ವಿಚಾರಣೆ ಒಂದು ತಿರುವು ಕೊಡುತ್ತದೆ. ಕೆಲವೊಮ್ಮೆ ಕೋಪ, ಕೆಲವೊಮ್ಮೆ ಕಣ್ಣೀರು, ಮತ್ತೊಮ್ಮೆ ಮೌನ. ಸಿರಾಯ್ ನಮ್ಮನ್ನು ಸುಮ್ಮನೆ ಬಿಡಲ್ಲ. ಈ ಸಿನಿಮಾ ಮುಗಿದ ಮೇಲೂ ಅದರ ಪ್ರಶ್ನೆಗಳು ನಮ್ಮೊಳಗೆ ಉಳಿದುಕೊಳ್ಳುತ್ತವೆ. ಈ ಸಿನಿಮಾ ನಮ್ಮನ್ನ ತುಂಬಾನೇ ಕಾಡತ್ತೆ. “ನ್ಯಾಯ ಎಲ್ಲರಿಗೂ ಸಮಾನವಾಗಿದೆಯಾ?” “ನಿಜಕ್ಕೂ ಗೆಲ್ಲೋದು ಯಾರು?” ಅನ್ನೋ ಪ್ರಶ್ನೆಗಳು ತಲೆಕೆಡಿಸುತ್ತವೆ. ಅದಕ್ಕೇ ಸಿರಾಯ್ ಕೇವಲ ಒಂದು ಸಿನಿಮಾ ಅಲ್ಲ ಅದು ಒಂದು ಅನುಭವ. ಜೀ5ನಲ್ಲಿ ಬಿಡುಗಡೆಯಾಗಿರುವ ಸಿರಾಯ್ ನೋಡಬೇಕಾದ ಸಿನಿಮಾ. ಮನರಂಜನೆಗಾಗಿ ಅಲ್ಲ, ಮನಸ್ಸನ್ನು ಕದಡುವ ಕಥೆಗಾಗಿ. ನೋಡುವವರು ಕೇವಲ ಪ್ರೇಕ್ಷಕರಾಗಿ ಉಳಿಯಲ್ಲ ಸಾಕ್ಷಿಗಳಾಗುತ್ತಾರೆ.

ಒಬ್ಬ ವ್ಯಕ್ತಿಯನ್ನು “ಮುಸ್ಲಿಂ” ಅನ್ನೋ ಒಂದೇ ಕಾರಣಕ್ಕೆ ಅವಮಾನಿಸುವುದು ಈ ದೇಶದಲ್ಲಿ ಇನ್ನೂ ಸಹಜವಾಗಿ ಬಿಟ್ಟಿದೆಯೇನೋ ಅನ್ನೋ ಭಯ ಸಿರಾಯ್ ಸಿನಿಮಾವನ್ನು ನೋಡಿದ ಮೇಲೆ ಕಾಡುತ್ತದೆ. ಆದರೆ ಅದೇ ಸಮಯದಲ್ಲಿ ಈ ಸಿನಿಮಾ ಒಂದು ಮರೆತ ಸತ್ಯವನ್ನು ನಮ್ಮ ಮುಂದಿಡುತ್ತದೆ. ಈ ದೇಶದ ಇತಿಹಾಸ, ಭದ್ರತೆ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಯಾವ ಮಟ್ಟಿಗೆ ಆಳವಾಗಿದೆಯೆಂಬ ಸತ್ಯವನ್ನು ನಮಗೆ ತೋರಿಸುತ್ತೆ.

ಸಿರಾಯ್ ಸಿನಿಮಾದಲ್ಲಿ ದೊಡ್ಡ ಡೈಲಾಗ್‌ಗಳಿಲ್ಲ, ದೊಡ್ಡ ದೊಡ್ಡ ಭಾಷಣಗಳಿಲ್ಲ. ಆದರೆ ತುಂಬಾ ಮೌನವಾಗಿ, ತುಂಬಾ ತೀಕ್ಷ್ಣವಾಗಿ ಒಂದು ಪ್ರಶ್ನೆಯನ್ನು ನಮ್ಮ ಮನಸ್ಸಿನೊಳಗೆ ಎಸೆದುಬಿಡುತ್ತದೆ. “ಒಬ್ಬನ ಧರ್ಮವೇ ಆತ ತಪ್ಪು ಮಾಡಿದ್ದಾನೋ ಇಲ್ಲವೋ ಅಂತ ಅಳೆಯುವ ಮಾನದಂಡವಾಗಿಬಿಟ್ಟಿದೆಯಾ?” ಅಂತ. ಸ್ವಾತಂತ್ರ್ಯ ಹೋರಾಟದ ಪುಟಗಳನ್ನು ತೆರೆದು ನೋಡಿದರೆ, ಅಲ್ಲೂ ಮುಸ್ಲಿಂ ಹೋರಾಟಗಾರರ ಹೆಸರುಗಳಿವೆ. ಗಡಿಯಲ್ಲಿ ನಿಂತು ದೇಶ ಕಾಯುವ ಸೈನಿಕರಲ್ಲಿ ಅವರಿದ್ದಾರೆ. ದೇಶದ ಒಳಗೆ ಕಾನೂನು ಕಾಪಾಡುವ ಪೊಲೀಸರಾಗಿ, ನ್ಯಾಯಾಲಯಗಳಲ್ಲಿ ವಕೀಲರಾಗಿ, ನ್ಯಾಯಾಧೀಶರಾಗಿ — ಅವರು ಪ್ರತಿದಿನವೂ ದೇಶಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

head constable vikram

ಆದರೂ, ಒಂದು ಘಟನೆಯಲ್ಲಿ, ಒಂದು ಕ್ಷಣದಲ್ಲಿ, ಒಂದು ಹೆಸರಿನಲ್ಲೇ, ಅವರು ಅನುಮಾನಿತರಾಗುತ್ತಾರೆ. ಈ ಸಿನಿಮಾದ ದೊಡ್ಡ ಶಕ್ತಿ ಅಲ್ಲಿ ಇದೆ. “ನೋಡಿ, ಅವರು ಕೂಡ ನಮ್ಮವರೇ” ಅನ್ನೋದನ್ನ ಈ ಸಿನಿಮಾ ಬಲವಂತವಾಗಿ ಹೇಳುವುದಿಲ್ಲ. ಬದಲಾಗಿ, “ನಾವು ಅವರನ್ನು ಎಷ್ಟು ಸುಲಭವಾಗಿ ಬೇರೆ ಮಾಡಿಬಿಡುತ್ತೇವೆ” ಅನ್ನೋದನ್ನ ತೋರಿಸಿಕೊಡುತ್ತದೆ.

ಸಿರಾಯ್ನಲ್ಲಿ ಕಾಣುವ ಅವಮಾನ, ಅನುಮಾನ, ಮತ್ತು ಮೌನ — ಇವು ಎಲ್ಲವೂ ಕಲ್ಪಿತವಲ್ಲ ಅನ್ನೋ ಭಾವನೆ ನಮಗೆ ಬರುತ್ತದೆ. ಯಾಕಂದ್ರೆ ಇವುಗಳನ್ನು ನಾವು ದಿನನಿತ್ಯದ ಸುದ್ದಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಮಾತುಗಳಲ್ಲಿ ನೋಡುತ್ತಲೇ ಇದ್ದೇವೆ. ಆದರೆ ಸಿನಿಮಾದಲ್ಲಿ ಅದು ಮಾನವೀಯ ಮುಖ ಪಡೆದುಕೊಳ್ಳುತ್ತದೆ. ಒಂದು ಕುಟುಂಬದ ನೋವಾಗಿ, ಒಬ್ಬ ಮಗನ ಭಯವಾಗಿ, ಒಬ್ಬ ತಾಯಿಯ ಮೌನವಾಗಿ ನಮ್ಮ ಹೃದಯಕ್ಕೆ ತಲುಪುತ್ತದೆ.

ಈ ಸಿನಿಮಾ ನಮಗೆ ಹೇಳುವುದು ಒಂದೇ ವಿಷಯ. ಒಬ್ಬ ವ್ಯಕ್ತಿಯನ್ನು ಅವನು ಮಾಡುವ ಕೆಲಸ, ಅವನ ಮೌಲ್ಯಗಳು, ಅವನ ಮಾನವೀಯತೆಯಿಂದ ಅಳೆಯಬೇಕೇ ಹೊರತು ಅವನ ಹೆಸರಿನಿಂದಲ್ಲ, ಅವನ ಧರ್ಮದಿಂದಲ್ಲ. ಸಿರಾಯ್ ಎಲ್ಲರೊಳಗಿರುವ ಒಂದು ಮರೆತುಹೋಗಿದ್ದ ಸಂವೇದನೆಯನ್ನು ಬಡಿದೆಬ್ಬಿಸುತ್ತದೆ. “ಅವರು” ಮತ್ತು “ನಾವು” ಅನ್ನೋ ಬೇಧ ರೇಖೆ ಎಷ್ಟು ಅಪಾಯಕಾರಿ ಅನ್ನೋದನ್ನ ನೆನಪಿಸುತ್ತದೆ. ಇದು ಕೇವಲ ಒಂದು ಸಿನಿಮಾ ಅಲ್ಲ ಇದು ಒಂದು ಕನ್ನಡಿಯಂತಿದೆ. ಆ ಕನ್ನಡಿಯಲ್ಲಿ ನಾವು ಸಮಾಜವಾಗಿ ಹೇಗಿದ್ದೇವೆ ಅನ್ನೋದನ್ನ ನೋಡಿಕೊಳ್ಳಬೇಕಾದ ಹೊಣೆ ನಮ್ಮದು.

head constable and abdul and heroin

ಇನ್ನೂ ಸಿರಾಯ್ ಸಿನಿಮಾದ ಶಕ್ತಿ ಅದರ ಕಥೆಯಲ್ಲಿ ಮಾತ್ರವಲ್ಲ, ಆ ಕಥೆಯನ್ನು ಜೀವಂತವಾಗಿ ನಮ್ಮ ಮುಂದೆ ನಿಲ್ಲಿಸಿದ ಕ್ಯಾಸ್ಟ್‌ನಲ್ಲಿ ಇದೆ. ಇಲ್ಲಿ ನಟರು “ನಟಿಸುತ್ತಿಲ್ಲ” ಅನ್ನೋ ಭಾವನೆ ಬರುತ್ತದೆ. ಅವರು ತಮ್ಮ ಪಾತ್ರಗಳೊಳಗೆ ಲೀನರಾಗಿದ್ದಾರೆ. ಅದಕ್ಕೇ ಸಿನಿಮಾ ಮುಗಿದ ಮೇಲೂ ಪಾತ್ರಗಳು ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ. ವಿಕ್ರಮ್ ಪ್ರಭು, ಎಲ್ ಕೆ ಅಕ್ಷಯ್ ಕುಮಾರ್, ಅನಿಶ್ಮಾ ಅನಿಲ್ ಕುಮಾರ್ ಇದ್ದಾರೆ.

ವಿಕ್ರಮ್ ಪ್ರಭು ಅವರ ಪಾತ್ರದಲ್ಲಿ ಬರುವ ಹೆಡ್ ಕಾನ್ಸ್‌ಟೇಬಲ್ ಕಥಿರವನ್ ನಿಷ್ಠುರವಾದ, ಆದರೆ ಮೃದುತ್ವವನ್ನ ನೋಡಿ ಹೃದಯಯ ಬಡಿತ ಹೆಚ್ಚಾಗದೇ ಇರಲು ಸಾಧ್ಯವೇ ಇಲ್ಲ. ಒಬ್ಬ ಹೆಡ್ ಕಾನ್ಸ್‌ಟೇಬಲ್, ತನ್ನ ಕರ್ತವ್ಯದ ನಡುವೆಯೇ ಮನುಷ್ಯನಾಗಿ ಉಳಿಯಲು ಹೆಣಗಾಡುವ ಆತನ ಹೋರಾಟ… ಅದು ನಮ್ಮೆಲ್ಲರೊಳಗಿನ ಒಂದು ಭಾಗವೇ ಆಗಿಬಿಡುತ್ತದೆ. ಎಲ್.ಕೆ. ಅಕ್ಷಯ್ ಕುಮಾರ್ ಅವರು ಅಬ್ದುಲ್ ರೌಫ್ ಪಾತ್ರದಲ್ಲಿ ತುಂಬಿರುವ ನೋವು, ನಿರಾಶೆ, ಕೊನೆಗೊಂದು ನಂಬಿಕೆ. ಅಕ್ಷಯ್‌ ಕುಮಾರ್‌ ಅವರ ಮೊದಲ ಸಿನಿಮಾ ಇದಾಗಿದ್ದು, ಸಿನಿಮಾ ಇಂಡಸ್ಟ್ರಿಗೆ ಒಳ್ಳೆಯ ರೋಲ್‌ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

hero heroin

ಚಿತ್ರದ ಎರಡನೇ ಅರ್ಧದಲ್ಲಿ ಬರುವ ಭಾವನಾತ್ಮಕ ತಿರುವುಗಳು, ಪ್ರತಿಯೊಂದೂ ಸೀನ್‌ಗಳೂ ಒಂದು ಸಾಬೂನಿನ ಚೂರು, ಒಂದು ನೋಟ, ಒಂದು ಮಾತು ಇವೆಲ್ಲವೂ ಕಣ್ಣೀರನ್ನು ತರಿಸತ್ತೆ. ನ್ಯಾಯ ವ್ಯವಸ್ಥೆಯ ದೊಡ್ಡ ಗೋಡೆಗಳ ಹಿಂದೆ ಎಷ್ಟೋ ಅಪರಾಧಿಗಳಲ್ಲದವರು, ವರ್ಷಗಳ ಕಾಲ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎಂಬ ಸತ್ಯವನ್ನು ಇಷ್ಟೊಂದು ಸೂಕ್ಷ್ಮವಾಗಿ, ಆದರೆ ಶಕ್ತಿಯುತವಾಗಿ ತೋರಿಸುವುದು ಚಿತ್ರದ ದೊಡ್ಡ ಗೆಲುವು. ಸಿರಾಯ್ನ ವಿಶೇಷತೆ ಅಂದ್ರೆ, ಇಲ್ಲಿ ಪಾತ್ರಗಳ ನಡುವೆ “ಹೀರೋ–ವಿಲನ್” ಎಂಬ ವಿಭಜನೆ ಇಲ್ಲ. ಎಲ್ಲರೂ ತಮ್ಮ ತಮ್ಮ ನಿಲುವುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಮಾನವರು.

ಮತಾಂಧತೆ, ಪೂರ್ವಗ್ರಹಗಳು, ಅಧಿಕಾರದ ದುರುಪಯೋಗ – ಇವೆಲ್ಲವನ್ನೂ ಒಂದು ಸಣ್ಣ ಕಥೆಯೊಳಗೆ ಅಡಕ ಮಾಡಿ, ನಮ್ಮನ್ನು ಪ್ರಶ್ನಿಸುವಂತೆ ಮಾಡುತ್ತದೆ. ಆದರೆ ಅದು ಕೇವಲ ಆರೋಪ ಮಾಡುವುದಿಲ್ಲ, ಮನುಷ್ಯತ್ವ ಅಂದರೆ ಏನು ಅನ್ನೋದನ್ನ ತೋರಿಸುತ್ತದೆ.

ಸುರೇಶ್ ರಾಜಕುಮಾರಿ ಅವರ ನಿರ್ದೇಶನದಲ್ಲಿ ಈ ಕಥೆಯನ್ನು ಇಷ್ಟೊಂದು ಸರಳವಾಗಿ, ಆದರೆ ಡೆಪ್ತ್‌ ಆಗಿ ಹೇಳಲಾಗಿದೆ. ಯಾವುದೇ ಓವರ್ ಡ್ರಾಮಾ ಇಲ್ಲದೆ, ನಿಜ ಜೀವನದಂತೆಯೇ ನಡೆಯುವ ಈ ಕಥೆಯು ಪ್ರೇಕ್ಷಕರನ್ನ ಹಿಡಿದುಕೊಳ್ಳುತ್ತದೆ. ಸಂಗೀತ, ಛಾಯಾಗ್ರಹಣ ಎಲ್ಲವೂ ನಮ್ಮ ಭಾವನೆಗಳಿಗೆ ಬಣ್ಣ ಹಚ್ಚುತ್ತದೆ.

‘ಸಿರಾಯ್’ ನೋಡಿ ಮುಗಿಸಿದ ಮೇಲೆ ಒಂದು ಅರ್ಥ ಆಗತ್ತೆ. ನಾವು ಎಷ್ಟು ಸುಲಭವಾಗಿ ಜನರನ್ನು ಲೇಬಲ್ ಮಾಡುತ್ತೇವೆ, ಅವರ ನೋವನ್ನು ಅರ್ಥಮಾಡಿಕೊಳ್ಳದೆ ದೂರ ಮಾಡುತ್ತೇವೆ. ಆದರೆ ಒಂದು ಸಣ್ಣ ಪ್ರಯಾಣದಲ್ಲಿ, ಒಬ್ಬ ಮನುಷ್ಯನೊಳಗಿನ ಮನುಷ್ಯನನ್ನು ನೋಡಿದರೆ…ಬದಲಾವಣೆ ಸಾಧ್ಯ ಎಂಬ ಆಶಯವನ್ನು ಈ ಸಿನಿಮಾ ನೀಡುತ್ತದೆ.

ಈ ಪ್ರಕರಣದಲ್ಲಿ ಸತ್ಯ ಏನು ಅನ್ನೋದಕ್ಕಿಂತ, ಯಾರು ಸತ್ಯವನ್ನು ಹೇಳಲು ಅವಕಾಶ ಪಡೆಯುತ್ತಾರೆ? ಅನ್ನೋದೇ ದೊಡ್ಡ ಪ್ರಶ್ನೆ. ಆರೋಪಿಗಳ ಮಾತು ಕೇಳಿಸಿಕೊಳ್ಳುವವರೇ ಇಲ್ಲ. ವ್ಯವಸ್ಥೆ ಅವರ ವಿರುದ್ಧವೇ ನಿಂತಿರುತ್ತದೆ. ಅಂಥ ಸಮಯದಲ್ಲಿ ಒಬ್ಬ ಹೆಡ್‌ ಕಾನ್ಸ್‌ಟೇಬಲ್‌ ಮುಂದಕ್ಕೆ ಬರುತ್ತಾನೆ. ಅವನಿಗೆ ಇದು ಕೇವಲ ಒಂದು ಪ್ರಕರಣವಾಗಿರುವುದಿಲ್ಲ ಇದು ನ್ಯಾಯದ ಮೇಲಿನ ನಂಬಿಕೆಯ ಪರೀಕ್ಷೆಯಾಗಿತ್ತು.

ಕೋರ್ಟ್ ಒಳಗೆ ನಡೆಯುವ ವಿಚಾರಣೆಗಳು ನಿಧಾನವಾಗಿ ಹಲವು ಮರೆಮಾಚಿದ ಸತ್ಯಗಳನ್ನು ಹೊರಗೆ ತರುತ್ತವೆ. ಸಾಕ್ಷಿಗಳು, ದಾಖಲೆಗಳು, ಹೇಳಿಕೆಗಳು — ಇವೆಲ್ಲದರ ನಡುವೆ ಸತ್ಯ ಮಸುಕಾಗಿಸಲು ಆಗುವ ಪ್ರಯತ್ನಗಳು ಸ್ಪಷ್ಟವಾಗುತ್ತವೆ. ಜೊತೆಗೆ, ಆರೋಪಿಗಳ ವೈಯಕ್ತಿಕ ಬದುಕು, ಅವರ ಕುಟುಂಬಗಳ ನೋವು ಮತ್ತು ಅವರಿಗಾಗುವ ಅನ್ಯಾಯವನ್ನ ಸಿನಿಮಾದ ಮೂಲಕ ನಿರ್ದೇಶಕ ಬಿಚ್ಚಿಟ್ಟಿದ್ದಾರೆ.

ಸಿರಾಯ್ ಕಥೆ ಕೊನೆಗೆ ಒಂದು ಪ್ರಶ್ನೆಯ ಬಳಿ ನಮ್ಮನ್ನ ತಂದು ನಿಲ್ಲಿಸುತ್ತದೆ. ನ್ಯಾಯ ಅನ್ನೋದು ತೀರ್ಪಿನ ಕಾಗದಕ್ಕೆ ಮಾತ್ರ ಸೀಮಿತವೇ? ಅಥವಾ ಸತ್ಯಕ್ಕೆ ಸಿಗುವ ಗೌರವವೇ ನಿಜವಾದ ನ್ಯಾಯವೇ? ಅದಕ್ಕೇ ಈ ಸಿನಿಮಾ ಕಥೆಯಾಗಿ ಮಾತ್ರವಲ್ಲ, ಸಮಾಜದ ಪ್ರತಿಬಿಂಬವಾಗಿ ಕೆಲಸ ಮಾಡುತ್ತದೆ. ಖಂಡಿತಾ ಮಿಸ್ ಮಾಡಬೇಡಿ – ಇದು ಕೇವಲ ಸಿನಿಮಾ ಅಲ್ಲ, ಒಂದು ಮನುಷ್ಯತ್ವದ ಸಂದೇಶ..

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...