ಸೋನಮ್ ವಾಂಗ್‌ಚುಕ್ ಬಂಧನ: ಕೇಂದ್ರ ಸರ್ಕಾರ NSA ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ?

Date:

ಕೇಂದ್ರ ಸರ್ಕಾರ ತಮ್ಮನ್ನು ದೇಶದ್ರೋಹ ಪ್ರಕರಣದಡಿ ಸಿಲುಕಿಸುವ ಹುನ್ನಾರ ನಡೆಸುತ್ತಿದೆ ಎಂದು ಸೋನಮ್ ವಾಂಗ್‌ಚುಕ್ ಹೇಳಿದ್ದರು. ಅವರು ಹೇಳಿದಂತೆಯೇ ಕೇಂದ್ರ ಸರ್ಕಾರ ಇದೀಗ ಅವರ ಮೇಲೆ ಎನ್‌ಎಸ್‌ಎ ಕಾಯ್ದೆ ಪ್ರಯೋಗ ಮಾಡಿದೆ. ಪಾಕಿಸ್ತಾನದೊಂದಿಗೆ ನಂಟು ಕಲ್ಪಿಸಿ ಅವರನ್ನು ಜೈಲಿಗಟ್ಟಿದೆ... 

ಇಂಜಿನಿಯರ್, ಶೈಕ್ಷಣಿಕ ಸುಧಾರಕ, ಪರಿಸರವಾದಿ, ಲಡಾಖ್‌ಗೆ ರಾಜ್ಯತ್ವ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ. 2019ರಿಂದ ಲಡಾಖ್‌ನಲ್ಲಿ ನಡೆಯುತ್ತಿರುವ ಹೋರಾಟವು ಸೆಪ್ಟೆಂಬರ್ 24ರಂದು ಹಿಂಸಾಚಾರಕ್ಕೆ ತಿರುಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಸೋನಮ್ ಅವರೇ ಈ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವನ್ನು ಮಾಡಿರುವ ಕೇಂದ್ರ ಸರ್ಕಾರ ವಾಂಗ್‌ಚುಕ್ ಅವರನ್ನು ಜೈಲಿಗಟ್ಟಿದೆ.

ಲಡಾಖ್‌ಗೆ ರಾಜ್ಯತ್ವ ನೀಡಬೇಕು, ಹೆಚ್ಚಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ಇರುವ ಕಾರಣದಿಂದಾಗಿ ಆರನೇ ಪರಿಚ್ಛೇದಕ್ಕೆ ಲಡಾಖ್ ಅನ್ನು ಸೇರಿಸಬೇಕು, ಉದ್ಯೋಗ ರಕ್ಷಣೆಗಾಗಿ ಸಾರ್ವಜನಿಕ ಸೇವಾ ಆಯೋಗ(PSA) ರಚಿಸಬೇಕು ಮತ್ತು ಲೇಹ್, ಕಾರ್ಗಿಲ್‌ಗೆ ತಲಾ ಒಂದು ಲೋಕಸಭಾ ಸ್ಥಾನವನ್ನು ನೀಡಬೇಕು ಎಂಬುದು ಲಡಾಖಿಗರ ಆಗ್ರಹ. 370ರ ವಿಧಿ ರದ್ದಾದ ಬಳಿಕ ತಮ್ಮ ಸ್ಥಾನಮಾನವನ್ನು ಕಳೆದುಕೊಳ್ಳುತ್ತಿರುವ ಲಡಾಖಿಗರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆರು ವರ್ಷಗಳಿಂದ ನಿರಂತರ ಪ್ರತಿಭಟನೆ, ಸತ್ಯಾಗ್ರಹ ನಡೆಸುತ್ತಿದ್ದಾರೆ.

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್‌ಚುಕ್‌ ಮೇಲೆ ಕೇಂದ್ರದ ಕೆಂಗಣ್ಣೇಕೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2023ರಿಂದ ಈ ಹೋರಾಟದ ಭಾಗವಾಗಿರುವ ಸೋನಮ್ ವಾಂಗ್‌ಚುಕ್ ಅವರು ಈವರೆಗೂ ಶಾಂತ ರೀತಿಯಲ್ಲಿ ಉಪವಾಸ ಸತ್ಯಾಗ್ರಹ, ಪ್ರತಿಭಟನೆಯನ್ನು ನಡೆಸುತ್ತಾ ಬಂದಿದ್ದಾರೆ. ಬುಧವಾರ ಉಪವಾಸನಿರತ ಇಬ್ಬರು ಪ್ರತಿಭಟನಾಕಾರರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಯುವಕರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಹಿಂಸಾಚಾರ ನಡೆದಿದೆ. ಇದನ್ನೇ ತನ್ನ ಅನುಕೂಲಕ್ಕೆ ಬಳಸಿಕೊಂಡ ಕೇಂದ್ರ ಸರ್ಕಾರ ಸೋನಮ್ ಅವರನ್ನು ಸಿಲುಕಿಸುವ ಎಲ್ಲಾ ಯತ್ನವನ್ನು ಮಾಡುತ್ತಿದೆ. ಅದರ ಭಾಗವೇ ಎನ್‌ಎಸ್‌ಎ ಅಡಿಯಲ್ಲಿ ಬಂಧನ. ಸೋನಮ್ ಪತ್ನಿ, ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ ಲರ್ನಿಂಗ್(HIAL) ಸಂಸ್ಥಾಪಕಿ ಡಾ. ಗೀತಾಂಜಲಿ ಅವರು ಹೇಳುವಂತೆ ಸದ್ಯ ಸೋನಮ್ ಅವರನ್ನು ಜೋಧಪುರದ ಜೈಲಿಗೆ ಕರೆದೊಯ್ಯಲಾಗಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ಎನ್‌ಎಸ್‌ಎ ಕಾಯ್ದೆಯ ದುರ್ಬಳಕೆಯ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಈ ಹಿಂದೆಯೂ ಹಲವು ಬಾರಿ ಈ ಕಾಯ್ದೆ ದುರುಪಯೋಗದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ವಿಚಾರ ಸುಪ್ರೀಂ ಕೋರ್ಟ್‌ ಮೆಟ್ಟಿಲನ್ನೂ ಏರಿದೆ. ರಾಷ್ಟ್ರದ ಭದ್ರತೆಗೆ ಬೆದರಿಕೆ ಎಂಬ ನಿಟ್ಟಿನಲ್ಲಿ ಪ್ರತ್ಯೇಕತಾವಾದಿಗಳು, ದರೋಡೆಕೋರರು ಮತ್ತು ಮೂಲಭೂತವಾದಿಗಳ ವಿರುದ್ಧ ಬಳಸಲಾಗುವ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ತಮ್ಮ ವಿರುದ್ಧ ಮಾತನಾಡಿದವರ ಮೇಲೆ ಬಳಸುವುದಕ್ಕೆ ಸೋನಮ್ ಬಂಧನ ಒಂದು ಉದಾಹರಣೆಯಷ್ಟೇ.

ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂಬ ಆರೋಪದಲ್ಲಿ ಬಂಧನ

ಭಾರತದಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟಾಗುವುದನ್ನು ಮೊದಲೇ ತಡೆಗಟ್ಟುವ ನೆಪದಲ್ಲಿ ಸರ್ಕಾರದ ವಿರೋಧಿಗಳನ್ನು ಬಂಧಿಸುವುದು ಇದೇ ಮೊದಲೇನಲ್ಲ. ಇದಕ್ಕೆ ದೀರ್ಘವಾದ ಇತಿಹಾಸವಿದೆ. ವಸಾಹತುಶಾಹಿ ಕಾಲದಲ್ಲಿ ಯುದ್ಧಗಳ ಸಮಯದಲ್ಲಿ ಭಿನ್ನಾಭಿಪ್ರಾಯವನ್ನು ನಿಯಂತ್ರಿಸಲು ಬಳಸಲಾಗುತ್ತಿತ್ತು. ಸ್ವಾತಂತ್ರ್ಯದ ನಂತರ ಸಂಸತ್ತಿನಲ್ಲಿ Preventive Detention Act ಅನ್ನು ಅಂಗೀಕರಿಸಲಾಗಿದೆ. ಅದಾದ ಬಳಿಕ 1971ರಲ್ಲಿ ಆಂತರಿಕ ಭದ್ರತಾ ನಿರ್ವಹಣೆ ಕಾಯ್ದೆ(MISA) ಕಾಯ್ದೆಯನ್ನು ಅಂಗೀಕರಿಸಲಾಗಿದೆ. ಆದರೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಈ ಕಾಯ್ದೆಯ ದುರುಪಯೋಗ ನಡೆದಿದೆ. ಆದ್ದರಿಂದಾಗಿ 1978ರಲ್ಲಿ ಈ ಕಾಯ್ದೆಯನ್ನು ರದ್ದುಗೊಳಿಸಲಾಯಿತು. ಇದಾದ ಎರಡು ವರ್ಷಗಳ ನಂತರ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೆ ತರಲಾಯಿತು.

1980ರ ಈ ಎನ್‌ಎಸ್‌ಎ ಕಾಯ್ದೆಯು ಯಾವುದೇ ವ್ಯಕ್ತಿಯು ಭಾರತದ ರಕ್ಷಣೆಗೆ ಬೆದರಿಕೆಯೊಡ್ಡುವುದು, ರಾಷ್ಟ್ರದ ವಿರುದ್ಧವಾಗಿ ವಿದೇಶ ಸಂಘಟನೆಗಳ ಸಂಬಂಧ ಹೊಂದಿರುವುದು, ಭಾರತದ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಯಾಗುವ ರೀತಿಯಲ್ಲಿ ವರ್ತಿಸುವುದನ್ನು ತಡೆಯಲು ಆ ವ್ಯಕ್ತಿಯನ್ನು ಬಂಧಿಸಲು ಅಧಿಕಾರ ನೀಡುತ್ತದೆ. ಜಿಲ್ಲಾ ನ್ಯಾಯಾಧೀಶರು ಮತ್ತು ಪೊಲೀಸ್ ಆಯುಕ್ತರೂ ಈ ಅಧಿಕಾರವನ್ನು ಚಲಾಯಿಸಬಹುದು. ಕ್ರಿಮಿನಲ್ ಕಾನೂನಿನಡಿಯಲ್ಲಿ ಬಂಧನವಾಗುವುದಕ್ಕೂ ಎನ್‌ಎಸ್‌ಎ ಅಡಿಯಲ್ಲಿ ಬಂಧನವಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಕ್ರಿಮಿನಲ್ ಕಾನೂನಿನಡಿ ಕ್ರಿಮಿನಲ್ ಕೃತ್ಯ ನಡೆದ ಕಾರಣ ಬಂಧಿಸಲಾಗುತ್ತದೆ. ಆದರೆ NSA ಅಡಿಯಲ್ಲಿ ಅಪರಾಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಂಧಿಸಲಾಗುತ್ತದೆ. ರಾಷ್ಟ್ರದ ಭದ್ರತೆಯ ದೃಷ್ಟಿಯಲ್ಲಿ ಸರ್ಕಾರಕ್ಕೆ ಈ ಕಾಯ್ದೆ ಸಾಕಷ್ಟು ಅಧಿಕಾರವನ್ನು ನೀಡುತ್ತದೆ, ಆದರೆ ಪ್ರಸ್ತುತ ಅಧಿಕಾರದ ದುರ್ಬಳಕೆ ಹೆಚ್ಚಾಗುತ್ತಿದೆ.

sonam 1

ಎನ್‌ಎಸ್‌ಎ ಏನು ಹೇಳುತ್ತದೆ?

ಎನ್‌ಎಸ್‌ಎ ಅಡಿಯಲ್ಲಿ ಬಂಧನ ಆದೇಶವನ್ನು ಅರೆಸ್ಟ್ ವಾರಂಟ್‌ನಂತೆಯೇ ಕಾರ್ಯಗತಗೊಳಿಸಬಹುದು. ಹಾಗೆಯೇ ಒಮ್ಮೆ ಬಂಧನವಾದ ಬಳಿಕ ಬಂಧಿತ ವ್ಯಕ್ತಿಯನ್ನು ನಿರ್ದಿಷ್ಟ ಸ್ಥಳಗಳಲ್ಲಿ ಇರಿಸಬಹುದು, ಇತರೆ ರಾಜ್ಯಗಳಿಗೆ ಸ್ಥಳಾಂತರಿಸಬಹುದು. ಆದರೆ ಕೆಲವು ಷರತ್ತುಗಳೂ ಇವೆ. ಯಾಕಾಗಿ ಬಂಧಿಸಲಾಗಿದೆ ಎಂಬುದನ್ನು ಐದು ದಿನಗಳಲ್ಲಿ ಮತ್ತು ಹೆಚ್ಚೆಂದರೆ 15 ದಿನಗಳಲ್ಲಿ ಬಂಧಿತ ವ್ಯಕ್ತಿಗೆ ತಿಳಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಬಂಧಿತನು ಸರ್ಕಾರವನ್ನು ಪ್ರಶ್ನಿಸುವ ಹಕ್ಕಿದೆ. ಹಾಗೆಯೇ ಹೈಕೋರ್ಟ್ ನ್ಯಾಯಾಧೀಶರ ಸಲಹಾ ಮಂಡಳಿಯು 3 ವಾರಗಳಲ್ಲಿ ಪ್ರಕರಣವನ್ನು ಪರಿಶೀಲಿಸಬೇಕು, ಬಂಧನಕ್ಕೆ ಸಾಕಷ್ಟು ಆಧಾರವಿಲ್ಲ ಎನಿಸಿದರೆ ಬಿಡುಗಡೆ ಮಾಡಬೇಕು. 12 ತಿಂಗಳು ಅಂದರೆ ಒಂದು ವರ್ಷಕ್ಕಿಂತ ಅಧಿಕ ಕಾಲ ಬಂಧನದಲ್ಲಿರಿಸಬಾರದು ಎಂದು ಕಾಯ್ದೆ ಹೇಳುತ್ತದೆ. ಆದರೆ ಈ ಕಾಯ್ದೆಯಲ್ಲಿ ಗಂಭೀರವಾದ ಮಿತಿಗಳಿವೆ. ಸಲಹಾ ಮಂಡಳಿಯ ಮುಂದೆ ಬಂಧಿತನಿಗೆ ಕಾನೂನು ಪ್ರಾತಿನಿಧ್ಯದ ಹಕ್ಕಿಲ್ಲ. ಹಾಗೆಯೇ ಕಾನೂನು ಹಿತಾಸಕ್ತಿಯ ನಿಟ್ಟಿನಲ್ಲಿ ಸರ್ಕಾರ ಸತ್ಯಗಳನ್ನು ಬಹಿರಂಗಪಡಿಸದೆ ತಡೆಹಿಡಿಯಬಹುದು. ಈ ಮಿತಿಯನ್ನೇ ಸದ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ.

ಈ ಹಿಂದೆಯೂ ಎನ್‌ಎಸ್‌ಎ ದುರ್ಬಳಕೆ

NSA ಕಾಯ್ದೆಯನ್ನು ಬಳಸಲಾದ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ಪ್ರಕರಣಗಳ ಪಟ್ಟಿಯಲ್ಲಿ ವಾಂಗ್‌ಚುಕ್ ಅವರ ಬಂಧನವೂ ಈಗ ಸೇರುತ್ತಿದೆ. ಇತ್ತೀಚೆಗೆ ಹಲವು ಮಂದಿಯ ವಿರುದ್ದ ಎನ್‌ಎಸ್‌ಎ ಬಳಕೆ ಮಾಡಲಾಗಿದೆ. 2023ರಲ್ಲಿ, ‘ವಾರಿಸ್ ಪಂಜಾಬ್ ದೇ’ ನಾಯಕ ಮೂಲಭೂತವಾದಿ ಸಿಖ್ ಧರ್ಮೋಪದೇಶಕ ಅಮೃತ್‌ಪಾಲ್ ಸಿಂಗ್ ಅವರನ್ನು ಬಂಧಿಸಿ ಅಸ್ಸಾಂನ ದಿಬ್ರುಗಢ ಜೈಲಿಗೆ ವರ್ಗಾಯಿಸಲಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಜೈಲಿನಲ್ಲಿದ್ದೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಪಂಜಾಬ್‌ನ ಖಾದೂರ್ ಸಾಹಿಬ್ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದಿದ್ದಾರೆ. ಆದರೆ ಇಂದಿಗೂ ಜೈಲಿನಲ್ಲಿಯೇ ಇದ್ದಾರೆ.

2017ರಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಅವರನ್ನು ಉತ್ತರ ಪ್ರದೇಶದಲ್ಲಿ ಎನ್‌ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಈ ಆದೇಶವನ್ನು ರದ್ದುಗೊಳಿಸಿದ್ದು ಆಝಾದ್ 2018ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಂಡರು. ಅದಾದ ಬಳಿಕ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಹಲವು ಪ್ರತಿಭಟನಾಕಾರರ ಮೇಲೆ ಎನ್‌ಎಸ್‌ಎ ಪ್ರಕರಣ ದಾಖಲಿಸಲಾಗಿದೆ.

ಇವೆಲ್ಲವುದರ ನಡುವೆ ಹಲವು ಸಂಘಟನೆಗಳು, ನ್ಯಾಯಾಲಯಗಳೂ ಎನ್‌ಎಸ್‌ಎ ದುರುಪಯೋಗದ ಬಗ್ಗೆ ಪದೇ ಪದೇ ಪ್ರಶ್ನೆ ಎತ್ತಿವೆ. 2020ರಲ್ಲಿ, ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರನ್ನು ಪ್ರಚೋದನಕಾರಿ ಭಾಷಣದ ಆರೋಪದಲ್ಲಿ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರ ಬಂಧಿಸಿದೆ. ಆದರೆ ಅಲಹಾಬಾದ್ ಹೈಕೋರ್ಟ್ ಈ ಬಂಧನಕ್ಕೆ ಕಾರಣವನ್ನು ಪ್ರಶ್ನಿಸಿ ಕಫೀಲ್ ಖಾನ್ ಬಿಡುಗಡೆಗೆ ಆದೇಶಿಸಿದೆ.

ಅಷ್ಟು ಮಾತ್ರವಲ್ಲದೆ ಮಧ್ಯಪ್ರದೇಶದಲ್ಲಿ ಲವ್‌ ಜಿಹಾದ್ ಎಂಬ ಕಪೋಲಕಲ್ಪಿತ ಆರೋಪದ ಮೇಲೆ ಬಂಧಿಸುವಾಗಲೂ, ಕೋಮು ಹಿಂಸಾಚಾರದ ವೇಳೆ ಇದೇ ಕಾಯ್ದೆಯನ್ನ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಗೋಹತ್ಯೆ ಆರೋಪದ ಮೇಲೆಯೂ ಎನ್‌ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಪರಸ್ಪರ ಒಪ್ಪಿ, ಧರ್ಮ ಮೀರಿ ವಿವಾಹವಾದರೆ ಅದು ದೇಶದ ಭದ್ರತೆಗೆ ಅಪಾಯ ಹೇಗಾಗುತ್ತದೆ ಎಂಬ ಪ್ರಶ್ನೆಯನ್ನು ಹಲವು ಬಾರಿ ಎತ್ತಲಾಗಿದೆ.

ಸೋನಮ್ 2023ರಿಂದ ಲಡಾಖಿಗರ ಬೇಡಿಕೆಗಳನ್ನು ಮುಂದಿಟ್ಟು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಈವರೆಗೆ ಯಾವುದೇ ಹಿಂಸಾತ್ಮಕ ಕೃತ್ಯ ನಡೆಸಿಲ್ಲ. ಕಳೆದ ಎರಡು ವರ್ಷಗಳ ಅವಧಿಯಲ್ಲಿಯೇ ಸೋನಮ್ ಒಟ್ಟು ಐದು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. 2019ರಲ್ಲಿ ಬಿಜೆಪಿಯೇ ನೀಡಿರುವ ಭರವಸೆಯನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ. ಆದರೆ ಇದೀಗ ಸೋನಮ್ ವಾಂಗ್‌ಚುಕ್ ವಿರುದ್ಧವೂ ಎನ್‌ಎಸ್‌ಎ ದುರ್ಬಳಕೆ ಮಾಡಿರುವುದು ಸ್ಪಷ್ಟ. ಪ್ರಜಾಪ್ರಭುತ್ವ ಕಳೆದುಕೊಂಡ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ಕೇಳುವುದರಲ್ಲಿ, ಪ್ರಕೃತಿಯ ರಕ್ಷಣೆಗಾಗಿ ಹೋರಾಡುವುದರ ಹಿಂದೆ ದೇಶದ ಭದ್ರತೆಗೆ ಅಪಾಯ ಉಂಟು ಮಾಡುವ ಯಾವ ಅಂಶವಿದೆ ಎಂದು ಸರ್ಕಾರವನ್ನು ಪ್ರಶ್ನಿಸಬೇಕಾದ ಸಮಯವಿದು.

ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಪ್ರತ್ಯಕ್ಷ-ಪರೋಕ್ಷವಾಗಿ ಬೆಂಬಲ ನೀಡುತ್ತಾ ಬಂದಿದ್ದ ಸೋನಮ್ ಲಡಾಖಿಗರ ಸ್ಥಾನಮಾನದ ವಿಚಾರ ಬಂದಾಗ ಬಿಜೆಪಿ ಮತ್ತು ಕೇಂದ್ರದ ವಿರುದ್ದವಾಗಿ ಶಾಂತ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ಅವರ ಮೇಲೆ ಇಡಿ, ಸಿಬಿಐ ಅಸ್ತ್ರಗಳನ್ನು ಪ್ರಯೋಗಿಸಿರುವ ಕೇಂದ್ರ ಸರ್ಕಾರ ದೇಶದ್ರೋಹ ಪ್ರಕರಣದಡಿ ಸಿಲುಕಿಸುವ ಹುನ್ನಾರ ನಡೆಸುತ್ತಿದೆ ಎಂದು ಸೋನಮ್ ಅವರು ಈ ಹಿಂದೆಯೇ ಆರೋಪಿಸಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಸರ್ಕಾರದ ನಡೆಯಿದೆ. ಸೋನಮ್ ಅವರನ್ನು ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಲೇಬೇಕು ಎಂದು ಹೊಂಚುಹಾಕಿ ಕುಳಿತಿದ್ದ ಕೇಂದ್ರವು ಇದೀಗ ಎನ್‌ಎಸ್‌ಎ ಕಾಯ್ದೆ ಪ್ರಯೋಗ ಮಾಡಿದೆ. ಪಾಕಿಸ್ತಾನದೊಂದಿಗೆ ನಂಟು ಕಲ್ಪಿಸಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...