ಸಂವಿಧಾನದ ಪ್ರಕಾರ ಹಂಚಿಕೆಯಾಗಬೇಕಾದ ಮೂಲ ತೆರಿಗೆಯನ್ನು ಇಳಿಸಿ, ಹಂಚಿಕೆಯಾಗದ ಸೆಸ್‌ಗಳನ್ನು ಹೆಚ್ಚಿಸುವ ಮೂಲಕ ಮೋದಿ ಸರ್ಕಾರವು ರಾಜ್ಯಗಳಿಗೆ ಮಹಾ ಮೋಸ ಮಾಡುತ್ತಿದೆ. ಎಷ್ಟೋ ಬಾರಿ ಘೋಷಣೆಯಾದ ಹಣ ಕೈಸೇರುವುದೇ ಇಲ್ಲ. ಕೇಂದ್ರದ ಈ ಧೋರಣೆಯು ಕೇವಲ ಹಣಕಾಸಿನ ವಿಷಯಕ್ಕೆ ಸೀಮಿತವಾಗಿಲ್ಲ. ಯೋಜನೆಗಳಿಗೆ ‘ಪ್ರಧಾನ ಮಂತ್ರಿ’ ಎಂಬ ಹೆಸರಿರಲೇಬೇಕು, ಕೇಂದ್ರದ ಲೋಗೋಗಳೇ ರಾರಾಜಿಸಬೇಕು ಎಂಬ ಅಲಿಖಿತ ನಿಯಮಗಳನ್ನು ಹೇರಲಾಗಿದೆ.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸಹಕಾರ ತತ್ವದಡಿ ನಡೆಯಬೇಕಾದ ಆರ್ಥಿಕ ಹಂಚಿಕೆಯು ಇಂದು ರಾಜ್ಯಗಳ ಪಾಲಿಗೆ ಉರುಳಾಗಿ ಪರಿಣಮಿಸಿದೆ. ‘ಡಬಲ್ ಇಂಜಿನ್’ ಸರ್ಕಾರದ ಬಗ್ಗೆ ಬೊಬ್ಬಿರಿಯುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ವಾಸ್ತವದಲ್ಲಿ ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿವೆ. ಈ ತಾರತಮ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಂತಿದೆ ‘’ವಿಬಿಜಿ ರಾಮ್‌ಜಿ’ ಕಾಯ್ದೆ. ಇದು ಕೇವಲ ಒಂದು ಉದಾಹರಣೆಯಲ್ಲ, ಬದಲಾಗಿ ಕೇಂದ್ರದ ಮಲತಾಯಿ ಧೋರಣೆಗೆ ಹಿಡಿದ ಕನ್ನಡಿಯಾಗಿದೆ.
ಒಂದು ಕಾಲದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ (Centrally Sponsored Schemes) ಕೇಂದ್ರ ಸರ್ಕಾರವು ಶೇ. 90 ಅಥವಾ ಶೇ. 80ರಷ್ಟು ಅನುದಾನವನ್ನು ಭರಿಸುತ್ತಿತ್ತು. ರಾಜ್ಯಗಳು ಕೇವಲ ಶೇ.10 ಅಥವಾ 20 ರಷ್ಟು ಪಾಲನ್ನು ನೀಡಿದರೆ ಸಾಕಾಗುತ್ತಿತ್ತು. ಇದು ರಾಜ್ಯಗಳಿಗೆ ತಮ್ಮದೇ ಆದ ಸ್ಥಳೀಯ ಆದ್ಯತೆಗಳಿಗೆ ತಕ್ಕಂತೆ ಬಜೆಟ್ ರೂಪಿಸಲು ಅವಕಾಶ ನೀಡುತ್ತಿತ್ತು. ಆದರೆ. ‘ವಿಬಿಜಿ ರಾಮ್‌ಜಿ’ ಕಾಯ್ದೆ ಕೇವಲ ಒಂದು ಉದಾಹರಣೆಯಲ್ಲ, ಬದಲಾಗಿ ಕೇಂದ್ರದ ಮಲತಾಯಿ ಧೋರಣೆಗೆ ಹಿಡಿದ ಕನ್ನಡಿಯಾಗಿದೆ. ಹಿಂದೆ ನಾಮಕಾವಸ್ತೆಗೆ ಇದ್ದ ರಾಜ್ಯದ ಪಾಲನ್ನು ಈಗ ಏಕಾಏಕಿ ಶೇ. 40ಕ್ಕೆ (ಕೆಲವೊಮ್ಮೆ ಶೇ. 50ಕ್ಕೆ) ಏರಿಸಲಾಗಿದೆ. ಕೇಂದ್ರವು ಯೋಜನೆಯನ್ನು ಘೋಷಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ, ಆದರೆ ಅದರ ಅನುಷ್ಠಾನದ ಅರ್ಧದಷ್ಟು ಹೊರೆಯನ್ನು ರಾಜ್ಯದ ತಲೆಗೆ ಕಟ್ಟುತ್ತದೆ.
ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, ರಾಜ್ಯಗಳ ಆರ್ಥಿಕ ಬೆನ್ನಮೂಳೆ ಮುರಿಯುವಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಇದೆ. ಹಿಂದೆ ನಾಮಕಾವಸ್ಥೆಗೆ ಇದ್ದ ರಾಜ್ಯದ ಪಾಲನ್ನು ಈಗ ಏಕಾಏಕಿ ಶೇ.40ಕ್ಕೆ(ಕೆಲವೊಮ್ಮೆ ಶೇ.50ಕ್ಕೆ) ಏರಿಸಲಾಗಿದೆ. ಕೇಂದ್ರವು ಯೋಜನೆಯನ್ನು ಘೋಷಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ, ಆದರೆ ಅದರ ಅನುಷ್ಠಾನದ ಅರ್ಧದಷ್ಟು ಹೊರೆಯನ್ನು ರಾಜ್ಯದ ತಲೆಗೆ ಕಟ್ಟುತ್ತದೆ. ವಿಬಿಜಿ ರಾಮ್‌ಜಿ ಕಾಯ್ದೆಯ ಹಂಚಿಕೆಯ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಕೇಂದ್ರದ ‘ನಿಯಮಗಳ ಕುಣಿಕೆ’ಎಷ್ಟೊಂದು ಬಿಗಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಕೇಂದ್ರವು ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಲು ವಿಧಿಸುವ ಕಠಿಣ ಷರತ್ತುಗಳು, ರಾಜ್ಯ ಸರ್ಕಾರಗಳು ಉಸಿರುಗಟ್ಟುವಂತೆ ಮಾಡಿವೆ. ರಾಜ್ಯವು ತನ್ನ ಪಾಲಿನ ಶೇ. 40ರಷ್ಟು ಹಣವನ್ನು ಮುಂಚಿತವಾಗಿಯೇ ಮೀಸಲಿಡದಿದ್ದರೆ ಅಥವಾ ಕೇಂದ್ರದ ಪೋರ್ಟಲ್‌ಗಳಲ್ಲಿ ನಿಗದಿತ ಸಮಯಕ್ಕೆ ಮಾಹಿತಿ ತುಂಬದಿದ್ದರೆ, ಕೇಂದ್ರದ ಅನುದಾನ ಬರುವುದೇ ಇಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ |ಮುಂಬಯಿ TISS ವಿದ್ಯಾರ್ಥಿಗಳ ‘ಕ್ಯಾಂಪಸ್ ರಾಜಕೀಯ’ ದಮನ ಸಲ್ಲದು!
ರಾಜ್ಯಗಳ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿರುವುದು ‘ಸೆಸ್’ ಮತ್ತು ‘ಸರ್ಚಾರ್ಜ್’ಗಳ ಹಾವಳಿ. ಸಂವಿಧಾನದ ಪ್ರಕಾರ ಹಂಚಿಕೆಯಾಗಬೇಕಾದ ಮೂಲ ತೆರಿಗೆಯನ್ನು ಇಳಿಸಿ, ಹಂಚಿಕೆಯಾಗದ ಸೆಸ್‌ಗಳನ್ನು ಹೆಚ್ಚಿಸುವ ಮೂಲಕ ಮೋದಿ ಸರ್ಕಾರವು ರಾಜ್ಯಗಳಿಗೆ ಮಹಾ ಮೋಸ ಮಾಡುತ್ತಿದೆ. ಎಷ್ಟೋ ಬಾರಿ ಘೋಷಣೆಯಾದ ಹಣ ಕೈಸೇರುವುದೇ ಇಲ್ಲ. ಕೇಂದ್ರದ ಈ ಧೋರಣೆಯು ಕೇವಲ ಹಣಕಾಸಿನ ವಿಷಯಕ್ಕೆ ಸೀಮಿತವಾಗಿಲ್ಲ. ಯೋಜನೆಗಳಿಗೆ ‘ಪ್ರಧಾನ ಮಂತ್ರಿ’ ಎಂಬ ಹೆಸರಿರಲೇಬೇಕು, ಕೇಂದ್ರದ ಲೋಗೋಗಳೇ ರಾರಾಜಿಸಬೇಕು ಎಂಬ ಅಲಿಖಿತ ನಿಯಮಗಳನ್ನು ಹೇರಲಾಗಿದೆ. ರಾಜ್ಯದ ಜನರ ತೆರಿಗೆ ಹಣ, ರಾಜ್ಯದ ನೌಕರರ ಶ್ರಮ ಮತ್ತು ರಾಜ್ಯದ ಶೇ. 40ರಷ್ಟು ಅನುದಾನವಿದ್ದರೂ, ಪ್ರಚಾರ ಮಾತ್ರ ನವದೆಹಲಿಯ ಪಾಲಾಗುತ್ತಿದೆ. ವಿಬಿಜಿ ರಾಮ್‌ಜಿ ಹಂಚಿಕೆಯಂತಹ ವಿಷಯಗಳಲ್ಲೂ ಇದೇ ಪ್ರಚಾರದ ಹಪಾಹಪಿ ಎದ್ದು ಕಾಣುತ್ತದೆಯೇ ಹೊರತು, ನೈಜ ಕಾಳಜಿ ಅಲ್ಲ.
ಕರ್ನಾಟಕದಂತಹ ರಾಜ್ಯಗಳು ಒಂದು ರೂಪಾಯಿ ತೆರಿಗೆ ಕಟ್ಟಿದರೆ, ವಾಪಸ್ ಪಡೆಯುತ್ತಿರುವುದು ಕೇವಲ 13-15 ಪೈಸೆ. ಇಂತಹ ಅನ್ಯಾಯದ ನಡುವೆಯೂ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಶೇ. 40 ರಷ್ಟು ಪಾಲನ್ನು ಭರಿಸುವುದು ರಾಜ್ಯದ ಬಜೆಟ್‌ಗೆ ಕಷ್ಟಸಾಧ್ಯವಾಗುತ್ತದೆ. ಇದರಿಂದಾಗಿ ರಾಜ್ಯ ಸರ್ಕಾರಗಳು ತಮ್ಮದೇ ಆದ ಸ್ವಂತ ಯೋಜನೆಗಳನ್ನು (ಉದಾಹರಣೆಗೆ ಸ್ಥಳೀಯ ನೀರಾವರಿ ಅಥವಾ ವಸತಿ ಯೋಜನೆಗಳು) ಬಲಿಕೊಟ್ಟು, ಕೇಂದ್ರದ ಯೋಜನೆಗಳಿಗೆ ಹಣ ಹೊಂದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ವಿಬಿಜಿ ರಾಮ್‌ಜಿ ಕಾಯ್ದೆಯು ಏನನ್ನು ಸೂಚಿಸುತ್ತದೆ ಎಂದರೆ, ಕೇಂದ್ರವು ಕಡತಗಳಲ್ಲಿ ಮಾತ್ರ ಅದ್ಭುತ ಅಂಕಿಅಂಶಗಳನ್ನು ತೋರಿಸುತ್ತದೆ. ಆದರೆ ವಾಸ್ತವದಲ್ಲಿ, ‘ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಿರುಚಿ, ರಾಜ್ಯಗಳ ಪಾಲನ್ನು ಕಡಿತಗೊಳಿಸಿದೆ. ವಿಶೇಷ ಅನುದಾನಗಳನ್ನು ತಡೆಹಿಡಿಯುವುದು, ಜಿಎಸ್‌ಟಿ ಪರಿಹಾರವನ್ನು ವಿಳಂಬ ಮಾಡುವುದು, ಇವೆಲ್ಲವೂ ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ವ್ಯವಸ್ಥಿತ ಸಂಚಿನ ಭಾಗವಾಗಿದೆ.
ಈ ಶೇ. 40ರ ಹೊರೆಯಿಂದಾಗಿ ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯದಂತಹ ನಿರ್ಣಾಯಕ ವಲಯಗಳು ರಾಜ್ಯಗಳಲ್ಲಿ ಸೊರಗುತ್ತಿವೆ. ವಿಬಿಜಿ ರಾಮ್‌ಜಿ ಕಾಯ್ದೆಯಲ್ಲಿ ಆಗುವ ವಿಳಂಬಕ್ಕೆ ರಾಜ್ಯ ಸರ್ಕಾರಗಳನ್ನು ದೂಷಿಸುವುದು ಸುಲಭ, ಆದರೆ ಅದರ ಮೂಲ ಕಾರಣ ದೆಹಲಿಯಲ್ಲಿ ಕುಳಿತು ರಾಜ್ಯಗಳ ಖಜಾನೆಯ ಕೀಲಿ ಕೈಯನ್ನು ನಿಯಂತ್ರಿಸುತ್ತಿರುವ ಕೇಂದ್ರದ ನೀತಿಗಳಲ್ಲಿದೆ ಎಂಬುದು ಕಾಯ್ದೆಯನ್ನು ತಿಳಿದ ಎಲ್ಲರಿಗೂ ಅರ್ಥವಾಗುತ್ತದೆ.
ಅಂತಿಮವಾಗಿ ಹೇಳುವುದಾದರೆ, ಒಕ್ಕೂಟ ವ್ಯವಸ್ಥೆಯ ಅರ್ಥಪೂರ್ಣ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ರಾಜ್ಯಗಳನ್ನು ಕೇಂದ್ರದ ಎದುರು ಕೈಯೊಡ್ಡಿ ನಿಲ್ಲುವಂತೆ ಮಾಡುವ, ಶೇ. 10ರಲ್ಲಿದ್ದ ಹೊರೆಯನ್ನು ಶೇ. 40ಕ್ಕೆ ಏರಿಸುವ ಮತ್ತು ವಿಬಿಜಿ ರಾಮ್‌ಜಿ ಕಾಯ್ದೆಯ ಹಂಚಿಕೆಗಳನ್ನು ಸಂಕೀರ್ಣಗೊಳಿಸುವ ಮೋದಿ ಸರ್ಕಾರದ ಈ ‘ಕೇಂದ್ರೀಕೃತ ದರ್ಪ’ದ ವಿರುದ್ಧ ರಾಜ್ಯಗಳು ಒಗ್ಗೂಡಿ ದನಿ ಎತ್ತಬೇಕಿದೆ. ಇಲ್ಲದಿದ್ದರೆ, ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯಗಳ ಹಕ್ಕುಗಳ ಹರಣ ಅವ್ಯಾಹತವಾಗಿ ಮುಂದುವರಿಯಲಿದೆ.





