ಷೇರು ಮಾರುಕಟ್ಟೆ | ಸಣ್ಣ ವ್ಯಾಪಾರಿಗಳ ಸದೆಬಡಿದ ಸೆಬಿ ಮತ್ತು ಕೇಂದ್ರ ಸರ್ಕಾರ!

Date:

ದಿಢೀರನೆ ಹಣ ಮಾಡವ ಮನಃಸ್ಥಿತಿಯನ್ನು ಸಣ್ಣವ್ಯಾಪಾರಿಗಳ ಮನಸ್ಸಲ್ಲಿ ಮೂಡಿಸುವುದು ಒಂದು ರೀತಿಯಲ್ಲಿ ಅಪರಾಧವೇ. ವಿಪರ್ಯಾಸವೆಂದರೆ ಈ ಕೆಲಸವನ್ನು ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಆರ್ಥಿಕ ಸಚಿವರು ಮಾಡುತ್ತಾ ಬಂದಿದ್ದಾರೆ.

ಸೆಬಿ (SEBI-Securities exchange board of India) ಮಾಹಿತಿಯ ಪ್ರಕಾರ, ಭಾರತದಲ್ಲಿ 2021ರಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಂಪನಿಗಳು ಷೇರು ಮಾರುಕಟ್ಟೆಯನ್ನು ಪ್ರವೇಶ ಮಾಡಿವೆ. ಮುಂದುವರೆದು ಪ್ರತೀ ವರ್ಷವೂ ನೂರಾರು ಕಂಪನಿಗಳು ನೋಂದಣಿಯಾಗುತ್ತಿವೆ. ಜೊತೆಗೆ ತಮ್ಮ ಸಾಮ್ರಾಜ್ಯ ವಿಸ್ತರಿಸಲು, ಟ್ರಸ್ಟ್‌ಗಳು, ಹೂಡಿಕೆ ಕಂಪನಿಗಳು ಹಾಗೂ ಹೂಡಿಕೆ ಮಾಡಲು ಇಚ್ಛಿಸುವ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಲು ಮುಂದಾಗುತ್ತಿವೆ.

ಹೀಗೆ ಸಂಗ್ರಹಣೆ ಮಾಡಿದ ಹಣದಿಂದ ಕಂಪನಿಗಳು ತಮ್ಮ ಮೂಲ ಉದ್ದೇಶದ ಈಡೇರಿಕೆಗಾಗಿ, ನವ ತಂತ್ರಜ್ಞಾನ ಅಳವಡಿಕೆ, ಆಸ್ತಿ ವಿಸ್ತರಣೆ ಹಾಗೂ ಹೆಚ್ಚು ಉತ್ಪಾದಕತೆಯಲ್ಲಿ ತೊಡಗುತ್ತವೆ. ಆ ಮೂಲಕ ಹೆಚ್ಚು ಲಾಭ ಗಳಿಸಿಕೊಳ್ಳುತ್ತವೆ. ತಮ್ಮ ಷೇರುದಾರರಿಗೂ ಅದರ ಪಾಲನ್ನು ಹಂಚುತ್ತವೆ. ಒಂದು ವೇಳೆ ನಷ್ಟವಾದರೆ ಷೇರುದಾರರೂ ಅದರ ಹೊರೆ ಹೊರಬೇಕು. ಹೊರುತ್ತಾರೆ ಕೂಡ.

ಈ ಕುರಿತಾದ ಎಲ್ಲ ಮಾಹಿತಿಗಳನ್ನು, ಆಯವ್ಯಯ ಪಟ್ಟಿಯನ್ನು ತಮ್ಮ ಷೇರುದಾರರಿಗೆ ಮತ್ತು ಸೆಬಿಗೆ ಕಾಲಕಾಲಕ್ಕೆ ಕಂಪನಿಗಳು ನೀಡಬೇಕು. ಅವು ಸಾರ್ವಜನಿಕರಿಗೆ ಮಾಹಿತಿಯ ಕಾರಣಕ್ಕಾಗಿಯಾದರೂ ಸಿಗುತ್ತಿರಬೇಕು. ಆದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಅದರ ಸ್ವರೂಪವೇ ಬದಲಾಗಿದೆ. ಕಾವಲು ಕಾಯಬೇಕಿದ್ದ ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಸೆಬಿಯೂ, ಕೆಲ ಅನುಮಾನಾಸ್ಪದ ಕಂಪನಿಗಳ ಲೆಕ್ಕಾಚಾರಗಳನ್ನು, ಮಾಹಿತಿಗಳನ್ನು ತನಿಖೆ ನಡೆಸದೆ ಬಿಟ್ಟಿದೆ. ತನ್ನ ವೆಬ್‌ಸೈಟ್‌ನಲ್ಲಿ ಆಗಾಗ ತಪ್ಪು ಮಾಹಿತಿಗಳನ್ನು ಪ್ರಕಟಿಸಿದೆ. ಜೊತೆಗೆ ಕಂಪನಿಗಳನ್ನು ಮುನ್ನಡೆಸಲು ಮೌನ ಸಮ್ಮತಿ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೊಸ ಐಪಿಒ (IPO- Initial Public Offering)ಗಳ ಮುಖ ಹೊತ್ತು ಲಿಸ್ಟ್‌ ಆಗುವ ಕಂಪನಿಗಳಲ್ಲಿ ಬಹುತೇಕ ಕಂಪನಿಗಳು ಸುಳ್ಳು ಲಾಭದ ಏರಿಕೆಗಳನ್ನು ಸಾರ್ವಜನಿಕರ ಮುಂದಿರಿಸಿ ಹಣ ಮಾಡುತ್ತಿವೆ. ಇಂತಹ ಕಂಪನಿಗಳೊಂದಿಗೆ ಹೂಡಿಕೆ ಮಾಡಬಹುದಾದ ದೊಡ್ಡ ಕಂಪನಿಗಳೂ ಹಾಗೂ ಸರ್ಕಾರವೂ ಕೈಜೋಡಿಸಿದೆ. ಇದು ಗೌಪ್ಯವಾಗೇನೂ ಉಳಿದಿಲ್ಲ. ಸೆಬಿಯ ಮಾಜಿ ಮುಖ್ಯಸ್ಥರಾದ ಮಧಾಬಿ ಪುರಿ ಬುಚ್‌ ಅವರು ಉಚಿತ ಶೇರುಗಳನ್ನು ಜೊತೆಗೆ ಹಣವನ್ನು ಪಡೆದಿದ್ದಾರೆ ಎಂಬ ಆರೋಪವಿತ್ತು. ಅದಕ್ಕೆ ಪೂರಕವಾಗಿ ಅದಾನಿ ಒಡೆತನದ ಕಂಪನಿಗಳು ವಿದೇಶದಲ್ಲಿದ್ದುಕೊಂಡು ತಮ್ಮ ಕಂಪನಿಗಳ ಷೇರುಗಳು ಏರುವಂತೆ ಮಾಡಿದ್ದರ ಕುರಿತು ಹಿಂಡೆನ್‌ ಬರ್ಗ್‌ ವರದಿಗಳನ್ನು ನಾವು ಕಂಡಿದ್ದೇವೆ.

ಅರ್ಬನ್‌ ಕಂಪನಿಯು ಲಿಸ್ಟ್‌ ಆಗುವ ವೇಳೆ 240 ಕೋಟಿ ಲಾಭ ಗಳಿಸಿದೆ ಎಂಬ ಮಾಹಿತಿ ಪ್ರಕಟಿಸಿತ್ತು. ಆದರೆ ವಾಸ್ತವದಲ್ಲಿ 93 ಕೋಟಿ ನಷ್ಟದಲ್ಲಿತ್ತು. ಮುಂದಿನ ತ್ರೈಮಾಸಿಕದಲ್ಲಿ 59 ಕೋಟಿ ರೂ. ನಷ್ಟವನ್ನು ಪ್ರಕಟಿಸಿದಾಗ ಅದರ ಷೇರು ಮೌಲ್ಯವು 27% ಕುಸಿತ ಕಂಡು, ಹೂಡಿಕೆದಾರರಿಗೆ ನೂರಾರು ಕೋಟಿ ರೂ. ನಷ್ಟವಾಗುವಂತೆ ಮಾಡಿತ್ತು. ಮಾಮಾ ಅರ್ಥ್‌, ಆಚಾರ್ಯ ಕಂಪನಿ ಮತ್ತು ಅದಾನಿ ಕಂಪನಿಗಳು ಇದೇ ರೀತಿಯ ಪ್ರಕಟಣೆ ಹೊರಡಿಸಿದ್ದವು.

ಮಾರುಕಟ್ಟೆಗೆ ಲಿಸ್ಟ್‌ ಆಗುವ ಪ್ರಾಥಮಿಕ ಹಂತದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಮತ್ತು ಪ್ರಮೋಟರ್ಸ್‌ಗಳು ಹೂಡಿಕೆ ಮಾಡಿ, ನಂತರ ಅದರ ಮೌಲ್ಯವನ್ನು ಕೃತಕವಾಗಿ ಬಲೂನಿನಂತೆ ಉಬ್ಬಿಸುವ ಕೆಲಸಕ್ಕೆ ಮುಂದಾಗುತ್ತವೆ. ಇದರಿಂದ ಆಕರ್ಷಕವಾಗಿ ಕಾಣುವ ಕೆಲವು ಟೆಕ್ನಿಕಲ್‌ ಗ್ರಾಫ್‌ಗಳನ್ನು ಸಣ್ಣ ವ್ಯಾಪಾರಿಗಳು ಅರೆಬರೆ ಅಧ್ಯಯನ ಮಾಡಿ ಮತ್ತು ಅತಿ ವೇಗದ ಬೆಳವಣಿಗೆಯ ಲಾಭದಾಸೆಗೆ ಬಿದ್ದು ಖರೀದಿಸುತ್ತಾ ಹೋಗುತ್ತಾರೆ. ನಂತರ ನಡೆಯುವುದೇ ಪವಾಡ. ತಕ್ಷಣ ತಮ್ಮ ಷೇರುಗಳನ್ನು ಇಂತಹ ಸಣ್ಣ ವ್ಯಾಪಾರಿಗಳಿಗೆ ಗರಿಷ್ಠ ಬೆಲೆಗೆ ಮಾರಿ ಅತ್ಯಧಿಕ ಲಾಭ ಗಳಿಸುತ್ತಾರೆ. ನಂತರ ಬೇಡಿಕೆ ಕುಸಿದು ಷೇರುಗಳ ಬೆಲೆಯೂ ಕುಸಿಯುತ್ತದೆ.

ಹೀಗಾಗಿ, ಸಣ್ಣ ವ್ಯಾಪಾರಿಗಳು ಅನುಭವಿಸುವ ನಷ್ಟ ಮಾತ್ರ ಹೇಳತೀರದು. ಕಂಪನಿಗಳ ಮೇಲೆ ಹೂಡಿಕೆ ಮಾಡುವ ಪ್ರಾಥಮಿಕ ಹಂತದಲ್ಲಿಯೇ ಅನೇಕ ಸವಾಲುಗಳು ಎದುರಾಗುವಂತೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡುವ ವ್ಯವಸ್ಥೆಯು ನಮ್ಮಲ್ಲಿ ಈಗಾಗಲೇ ಆಳವಾಗಿ ಬೇರೂರಿದೆ ಎಂಬುದೂ ಸತ್ಯ.

ಒಂದು ವರದಿಯ ಪ್ರಕಾರ 2025ರಲ್ಲಿ ಹೂಡಿಕೆಯ ಅಂಶವಾಗಿ ಹರಿದು ಬಂದ ಹಣದಲ್ಲಿ ಶೇ.35ರಷ್ಟು ಹೂಡಿಕೆ ಸಂಪತ್ತನ್ನು ಮಾತ್ರ ಕಂಪನಿಗಳು ಬಳಸಿಕೊಂಡಿವೆ. ಇನ್ನುಳಿದ ಶೇ.65ರಷ್ಟು ಹಣವು ಷೇರುಮಾರುಕಟ್ಟೆಯಲ್ಲಿ ನಿರ್ವಹಣೆಯಾಗುತ್ತಿದೆ. ಇದರ ಪೈಕಿ ಶೇರುಗಳ ಖರೀದಿಯಲ್ಲಿ ಸಣ್ಣ ಹೂಡಿಕೆದಾರರ ಪ್ರಾಬಲ್ಯ ಮೂರನೇ ಸ್ಥಾನದಲ್ಲಿದ್ದರೂ, ಕಂಪನಿಗಳ ಷೇರು ಮೌಲ್ಯಗಳನ್ನು ಹೆಚ್ಚಿಸುವಲ್ಲಿ, ವಹಿವಾಟು ನಡೆಸುವುದರಲ್ಲಿ ಇವರೇ ಮೊದಲ ಸ್ಥಾನದಲ್ಲಿದ್ದಾರೆ.

ದಿನದ ವಹಿವಾಟು (Intraday-ಇಂಟ್ರಾ ಡೇ), ಸ್ವಿಂಗ್ ಟ್ರೇಡ್‌ (swing trade) ಆಪ್ಷನ್‌ ಟ್ರೇಡ್‌(option trade) ತರಹದ ಇನ್ನೂ ಅನೇಕ ವಿಧಾನಗಳಲ್ಲಿ ಹೆಚ್ಚು ತೊಡಗಿಸಿಕೊಂಡವರಲ್ಲಿ ಸಣ್ಣ ಹೂಡಿಕೆದಾರರ ಪ್ರಮಾಣವೇ ಅಧಿಕ. ಈ ವಿಧಾನಗಳು ಒಂದು ರೀತಿಯಲ್ಲಿ ಜೂಜಿನಂತಿದ್ದರೂ, ನಿರಂತರ ಹೂಡಿಕೆ ಮಾಡಲಿಚ್ಛಿಸುವ ಹೋಲ್ಡಿಂಗ್ಸ್‌ ಗೆ ಇದೊಂದೇ ಬಾಗಿಲು.

ಸೆಬಿಯ ವರದಿ ಪ್ರಕಾರವೇ ದಿನದ ವಹಿವಾಟು(intraday/option trading) ನಡೆಸುವವರಲ್ಲಿ ಶೇ. 96.05ರಷ್ಟು ಮಂದಿ ಹಣ ಕಳೆದುಕೊಂಡಿದ್ದಾರೆ. ಆದರೂ ಅತಿ ಹೆಚ್ಚು ಲಾಭ ತರುವ ವ್ಯವಹಾರವಿದ್ದರೆ ಅದು ಷೇರು ಮಾರುಕಟ್ಟೆಯೇ ಆಗಿದೆ. ಮ್ಯೂಚುವಲ್‌ ಫಂಡ್‌ಗಳು ಮತ್ತು ಇಟಿಫ್‌ ಗಳ ರಿಟರ್ನ್ಸ್‌ ಗಳು ಕಡಿಮೆ ಎಂದರೂ ಶೇ. 9ರಿಂದ 15ರ ತನಕವೂ ಆದಾಯ ತಂದು ಕೊಟ್ಟಿವೆ. ಆದರದು ದೀರ್ಘಾವಧಿಯಲ್ಲಿ ಹೂಡಿಕೆ ಮಾಡುತ್ತಾ ಹೋದರೆ ಮಾತ್ರ.

ದಿಢೀರನೆ ಹಣ ಮಾಡವ ಮನಃಸ್ಥಿತಿಯನ್ನು ಸಣ್ಣವ್ಯಾಪಾರಿಗಳ ಮನಸ್ಸಲ್ಲಿ ಮೂಡಿಸುವುದು ಒಂದು ರೀತಿಯಲ್ಲಿ ಅಪರಾಧವೇ. ವಿಪರ್ಯಾಸವೆಂದರೆ ಈ ಕೆಲಸವನ್ನು ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಆರ್ಥಿಕ ಸಚಿವರು ಮಾಡುತ್ತಾ ಬಂದಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಅಮಿತ್‌ ಶಾ ತಮ್ಮ ಭಾಷಣಗಳಲ್ಲಿ ನೇರಾನೇರ ಶೇರು ಮಾರುಕಟ್ಟೆ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಈ ಬಗ್ಗೆ ಮಾತನಾಡಿ ‘ಮುಂದಿನ ದಿನಗಳಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಾಣಲಿದೆ’ ಎಂದು ಹೇಳಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಮಾಧ್ಯಮಗಳು ತಯಾರಿಸಿದ ಚುನಾವಣಾ ಪೂರ್ವ ಎಕ್ಸಿಟ್‌ ಪೋಲ್‌ ಗಳೇ ಸಾಕಿತ್ತು ಎಲ್ಲರಲ್ಲೂ ಗೊಂದಲ ಮೂಡಿಸಿ ಮಾರುಕಟ್ಟೆಯನ್ನು ಮೇಲೇಳುವಂತೆ ಮಾಡಲು. ಕೊನೆಗೆ ಫಲಿತಾಂಶ ಹೊರ ಬಿದ್ದನಂತರ ಎಲ್ಲಾ ಷೇರುಗಳು ಕನಿಷ್ಠ 40% ಬಿದ್ದವು. ನಿಫ್ಟಿ ಮತ್ತು ಸೆನ್ಸೆಕ್ಸ್‌ ತಲಾ 10% ನಷ್ಟು ಕುಸಿದಿದ್ದವು. ಇದರಿಂದಾಗಿ ಸಣ್ಣ ವ್ಯಾಪಾರಿಗಳು ಅಂದು ಕೋಟ್ಯಂತರ ರೂ.ಗಳನ್ನು ಕಳೆದುಕೊಂಡರು.

ಈ ಲೇಖನ ಓದಿದ್ದೀರಾ?: ಮುರ್ಶಿದಾಬಾದ್‌ನಲ್ಲಿ ‘ಬಾಬರಿ ಮಸೀದಿ’: ಕಬೀರ್ ನಡೆ ಬಿಜೆಪಿ ಚುನಾವಣಾ ತಂತ್ರ!

ಭಾರತೀಯ ಕಂಪನಿಗಳು ಷೇರುದಾರರಿಗೆ ವಂಚಿಸುವಂತಹ ಕೆಲಸ ಮಾಡಿದಾಗ, ಸೆಬಿಯು ಸಾಮಾನ್ಯ ಷೇರುದಾರರ ಪರ ನಿಲ್ಲಬೇಕು. ತನಿಖೆ ನಡೆಸಿ ಶೇರುಮಾರುಕಟ್ಟೆಯನ್ನು ನಿಯಂತ್ರಣದಲ್ಲಿಡಬೇಕು. ಆದರೆ, ಇಲ್ಲಿನ ಮಾರುಕಟ್ಟೆಯ ಬಗ್ಗೆ ವಿದೇಶಿ ಪತ್ರಿಕೆಗಳು ಮತ್ತು ಸ್ವತಂತ್ರ ಸಂಸ್ಥೆಗಳು ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದವು. ಸೆಬಿ ಕೈ ಕಟ್ಟಿ ಕೂತಿತ್ತು.

ಜಾಗತಿಕವಾಗಿ ಏನೇ ಅಹಿತಕರ ಘಟನಾವಳಿಗಳು ನಡೆದರೂ ಪಕ್ಕದ ಚೀನಾ ದೇಶವು ತನ್ನ ಹೂಡಿಕೆದಾರರಿಗೆ ತೊಂದರೆಯಾಗದಂತೆ ಇನ್ನಷ್ಟು ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸಿತು. ಈ ಮಾರ್ಗವನ್ನು ಅನೇಕ ದೇಶಗಳು ಅನುಸರಿಸಿದವು. ಆ ಕಾರಣಕ್ಕಾಗಿಯೇ ಭಾರತದಲ್ಲಿ ಹೂಡಿಕೆ ಮಾಡಿದ್ದ ವಿದೇಶಿ ಕಂಪನಿಗಳು ಲಕ್ಷ ಕೋಟಿಗಳಷ್ಟು ಹಣವನ್ನು ಹಿಂತೆಗೆದುಕೊಂಡು ಚೀನಾದತ್ತ ಮುಖ ಮಾಡಿದವು. ಇದು ಈಗಲೂ ಮುಂದುವರೆಯುತ್ತಿದೆ.

ಒಂದರ್ಥದಲ್ಲಿ ಮಾರುಕಟ್ಟೆಯ ವ್ಯವಸ್ಥೆಯನ್ನು ಸ್ಥಿರವಾಗಿ ಕಾಪಾಡುತ್ತಿರುವ ಸಣ್ಣ ಹೂಡಿಕೆದಾರರನ್ನು ಕಡೆಗಣಿಸಿ, ಭಾರತವನ್ನು ವಿಶ್ವಗುರು ಮಾಡುವ ಭ್ರಮಾಧೀನತೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಈ ಬೆಳವಣಿಗೆ ಹೀಗೆ ಮುಂದುವರೆದರೆ ದಿವಾಳಿ ಮಾರುಕಟ್ಟೆ ಸಮೀಪಿಸುವುದು ದೂರವಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ರಜನಿಕಾಂತ ಚಟ್ಟೇನಹಳ್ಳಿ
ರಜನಿಕಾಂತ ಚಟ್ಟೇನಹಳ್ಳಿ
ಮಂಡ್ಯ ಜಿಲ್ಲೆಯ ಚಟ್ಟೇನಹಳ್ಳಿಯವರಾದ ರಜನಿಕಾಂತ ಅವರು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...